

https://m.youtube.com/watch?v=ekOvYlSkDGg https://m.youtube.com/watch?v=ekOvYlSkDGg ತಾ.ಪಂ. ಕೆ.ಡಿ.ಪಿ. ಸಭೆ-
ನಿರಂತರ ವಿದ್ಯುತ್ ನಿಲುಗಡೆಗೆ ತಾಂತ್ರಿಕ ತೊಂದರೆ ಕಾರಣ,
ಪಿ.ಡಬ್ಲೂ.ಡಿ. ಕೆಲಸಗಳಿಗೆ ಟೆಂಡರ್ ಪ್ರಕ್ರೀಯೆ ಪೂರ್ಣ ಶೀಘ್ರದಲ್ಲಿ ರಿಪೇರಿ ಕೆಲಸ.
ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ, ಸಿದ್ಧಾಪುರದ 26 ಗ್ರಾಮಗಳು ಶರಾವತಿ ಅಭಯಾರಣ್ಯ ವ್ಯಾಪ್ತಿಗೆ.
ಸರ್ಕಾರಿ ಆಸ್ಫತ್ರೆ ಆರೋಗ್ಯ ಸಮೀತಿಗೆ ಅನುದಾನದ ಕೊರತೆ, https://m.youtube.com/watch?v=ekOvYlSkDGg
ಮಾಣಿಹೊಳೆ ಸೇತುವೆ ಮೇಲೆ ಬಸ್ ಸಂಚಾರಕ್ಕೆ ಬೇಡಿಕೆ, ಶಾಲೆಗಳಲ್ಲಿ ನಾಲ್ಕು ಶಿಕ್ಷಕರ ಕೊರತೆ,
ಸಣ್ಣ ನೀರಾವರಿ ಇಲಾಖೆಯ ದೊಡ್ಡ ಕಾಮಗಾರಿಗಳ ಕ್ರೀಯಾಯೋಜನೆ ಮಾಡಿದವರ್ಯಾರು?
ಸಣ್ಣ ನೀರಾವರಿ ಇಲಾಖೆಯಿಂದ ಸಿದ್ಧಾಪುರ ತಾಲೂಕಿನಲ್ಲಿ 2018-19 ರ ಆರ್ಥಿಕ ವರ್ಷಗಳಲ್ಲಿ ಇಳ್ಳಿಮನೆ, ತಾರಖಂಡ ಗಳ 2ಚೆಕ್ ಡ್ಯಾಮ್ ನಿರ್ಮಾಣಗಳಿಗೆ ತಲಾ 2ಕೋಟಿ, ಹೊಸೂರು ಪುಟ್ಟಪ್ಪನ ಕೆರೆ ಕಾಮಗಾರಿಗೆ ಒಂದುಕೋಟಿ 10 ಲಕ್ಷ, ಮುಗುದೂರು ನೀರಾವರಿ ಕೆಲಸಕ್ಕೆ 75 ಲಕ್ಷದ ಒಂದು ಕಾಮಗಾರಿಯೊಂದಿಗೆ ಮತ್ತೊಂದು ಹೆಚ್ಚುವರಿ ಅನುದಾನ ಸೇರಿ ಒಟ್ಟೂ ಒಂದುಕಾಲುಕೋಟಿ,
ದೊಡ್ಮನೆ ಉಕ್ಕಳಗದ್ದೆ 60 ಲಕ್ಷ,ಕಾನಗೋಡು ಜಕ್ರಿಗುಂಡಿ 48 ಲಕ್ಷ ರೂಪಾಯಿ ಸೇರಿ ಒಟ್ಟೂ 12ಕೋಟಿಗಳಿಗೂ ಅಧಿಕ ಕಾಮಗಾರಿ ನಡೆಸಿದ್ದರೂ ತಾ.ಪಂ. ಆಡಳಿತ ಮತ್ತು ಸ್ಥಳಿಯ ಜನಪ್ರತಿನಿಧಿಗಳ ಗಮನಕ್ಕೆ ತರದ ಬಗ್ಗೆ ತಾ.ಪಂ. ಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಈ ಅವಧಿಯ ತಾಲೂಕು ಪಂಚಾಯತ್ ಕೆ.ಡಿ.ಪಿ.ಮಾಸಿಕ ಸಭೆಗೆ ಸದಸ್ಯರ ಬೇಡಿಕೆ ಮೇರೆಗೆ ಮೊಟ್ಟ ಮೊದಲಿಗೆ ಬಂದಿದ್ದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಟಿ.ಎಸ್. ಗೌಡ ಸಿದ್ಧಾಪುರದಲ್ಲಿ ತಮ್ಮ ಇಲಾಖೆ ನಿರ್ವಹಿಸಿದ ಕಾಮಗಾರಿಗಳ ವಿವರ ನೀಡಿದರು.
ಇದಕ್ಕೆ ಆಕ್ಷೇಪಿಸಿದ ಸದಸ್ಯರಾದ ನಾಶಿರ್‍ಖಾನ್, ವಿವೇಕ ಭಟ್, ಸ್ಥಾಯಿ ಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಇಷ್ಟೆಲ್ಲಾ ದೊಡ್ಡ ಮಟ್ಟದ ಕಾಮಗಾರಿಗಳು ತಾಲೂಕಿನಲ್ಲಿ ನಡೆದಿವೆ. ಅವಕ್ಕೆಲ್ಲಾ ಕ್ರೀಯಾ ಯೋಜನೆ ತಯಾರಿಸಿದ್ದು ಯಾವಾಗ?
ಯಾರನ್ನು ಕೇಳಿ ಈ ಕಾಮಗಾರಿಗಳ ಕ್ರೀಯಾ ಯೋಜನೆ ತಯಾರಿಸಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ನಿರುತ್ತರರಾದ ಅಧಿಕಾರಿ ಮುಜುಗರದಿಂದಲೇ ವಿವರಣೆ ನೀಡುತ್ತಾ ನೀವೆಲ್ಲಾ ತಾ.ಪಂ. ಸದಸ್ಯರು, ಜನಪ್ರತಿನಿಧಿಗಳೆಂದೇ ಗೊತ್ತಿಲ್ಲ ಎಂದುಬಿಟ್ಟರು.
ಅದಕ್ಕೆ ಖಾರವಾಗೇ ಪ್ರತಿಕ್ರೀಯಿಸಿದ ಮಹಾಬಲೇಶ್ವರ ಹೆಗಡೆ ಜನಪ್ರತಿನಿಧಿಗಳು, ಸ್ಥಳಿಯ ಆಡಳಿತ ಗೊತ್ತಿಲ್ಲ ಅಂದರೆ ಹ್ಯಾಗ್ರೀ, ನಾವೆಲ್ಲಾ ಇಲ್ಲೇನು ತಮಾಸೆಗೆ ಬಂದಿದ್ದೀವಾ? ಇಂದೇ ಸಂಜೆ ಒಳಗೆ ಸಿದ್ದಾಪುರ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ನಿರ್ವಹಿಸಿದ ಕಾಮಗಾರಿಗಳ ಕ್ರೀಯಾ ಯೋಜನೆ ನೀಡಿ, ಕ್ರೀಯಾ ಯೋಜನೆಗೆ ಯಾರು? ಯಾವಾಗ ಅನುಮತಿ,ಅನುಮೋದನೆ ನೀಡಿದ್ದಾರೆ ಎಂದು ಮಾಹಿತಿ ನೀಡಿ ಎಂದು ಗಡುವು ನೀಡಿದರು.
ಅದಕ್ಕೆ ಪ್ರತಿಕ್ರೀಯಿಸದ ಅಧಿಕಾರಿ ತಲೆಗುಂಡಾಕುವ ಮೂಲಕ ಒಪ್ಪಿಗೆ ಸೂಚಿಸಿದರು.
ವಿದ್ಯುತ್ ನಿಲುಗಡೆಗೆ ತಾಂತ್ರಿಕ ತೊಂದರೆ ಕಾರಣ-
ತಾ.ಪಂ. ಕೆ.ಡಿ.ಪಿ. ಸಭೆಗೆ ಮಾಹಿತಿ ನೀಡಿದ ಹೆಸ್ಕಾಂ ಉಪವಿಭಾಗೀಯ ಕಚೇರಿಯ ಅಭಿಯಂತರ ಹೆಗಡೆ ತಾಲೂಕಿನಲ್ಲಿ ನಿರ್ಧಿಷ್ಟ ಪಡಿಸಿದ ಗುರಿಯ ಕೆಲಸಗಳು ನಡೆಯುತಿದ್ದು ತಾಲೂಕಿನಾದ್ಯಂತ ಕಳೆದ ವಾರ ತಾಂತ್ರಿಕ ತೊಂದರೆಯಿಂದ ನಿರಂತರವಾಗಿ ವಿದ್ಯುತ್ ನಿಲುಗಡೆಯಾಗುತಿತ್ತು ಎಂದು ಒಪ್ಪಿಕೊಂಡರು.
ಅದಕ್ಕೆ ಪ್ರತಿಕ್ರೀಯಿಸಿ ಪ್ರಶ್ನಿಸಿದ ನಾಶಿರ್ ಖಾನ್ ಬೇಸಿಗೆಯಲ್ಲಿ ಆರಾಂ ಕಾಲ ಕಳೆದು ಮಳೆಗಾಲದಲ್ಲಿ ತಾಂತ್ರಿಕ ತೊಂದರೆಯ ನೆಪ ಹೇಳುತ್ತೀರಿ ಎಂದು ದೂರಿದರು.
ಅದಕ್ಕೆ ಧ್ವನಿ ಸೇರಿಸಿದ ಅಧಿಕಾರಿ ಹೆಗಡೆಯವರನ್ನು ಸಮರ್ಥಿಸಿಕೊಂಡ ಸ್ಥಾಯಿ ಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಹೆಸ್ಕಾಂ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಆದರೆ ಅವರಿಂದ ತಾಲೂಕಿನ ವಿದ್ಯುತ್ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಪಿ.ಡಬ್ಲೂಡಿ ಕೆಲಸಗಳು ಶೀಘ್ರದಲ್ಲಿ ಪ್ರಾರಂಭ-
ತಾಲೂಕಿನ ಕುಮಟಾ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳ ದುರಸ್ತಿಗೆ ಟೆಂಡರ್ ಆಗಿದೆ. ಶೀಘ್ರದಲ್ಲಿ ಆ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಲೋಕೋಪಯೋಗಿ ಇಲಾಖೆ ಅಭಿಯಂತರ ಅನಿಲ ಮಾಹಿತಿ ನೀಡಿದರು. ಹುಲಿಮನೆ,ಅತ್ತಿಮರಡು ಹೊಸಗದ್ದೆ ರಸ್ತೆ ರಿಪೇರಿಗೆ ಸದಸ್ಯ ರಘುಪತಿ ಹೆಗಡೆ ಮನವಿ ಮಾಡಿದರು.
ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ-
ಸಭೆಗೆ ಮಾಹಿತಿ ನೀಡಿದ ಕೃಷಿ ಅಧಿಕಾರಿ ಪ್ರಶಾಂತ ಬಿತ್ತನೆ ಬೀಜ, ರಸಗೊಬ್ಬರ ನೀಡುತಿದ್ದೇವೆ. ಬೆಳೆ ಸಮೀಕ್ಷೆ ಮುಂದಿನ ವಾರದಿಂದಲೇ ಪ್ರಾರಂಭವಾಗಲಿದೆ ಎಂದರು.
ಅದಕ್ಕೆ ಪ್ರತಿಕ್ರೀಯಿಸಿದ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ಹಿಂದಿನ ವರ್ಷಗಳಲ್ಲಿ ಬೆಳೆ ಸಮೀಕ್ಷೆ, ದಾಖಲಾತಿ ಸಮರ್ಪಕವಾಗಿ ಆಗದೆ ರೈತರಿಗೆ ತೊಂದರೆಯಾಗಿದೆ. ಈ ವರ್ಷ ಅಂಥ ತೊಂದರೆಗಳಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ಸಿದ್ದಾಪುರದ 26 ಗ್ರಾಮಗಳು ಶರಾವತಿ ಅಭಯಾರಣ್ಯ ವ್ಯಾಪ್ತಿಗೆ
ಅಘನಾಶಿನಿ ಕೊಳ್ಳದ ವ್ಯಾಪ್ತಿಯ ಸಿದ್ಧಾಪುರ ತಾಲೂಕಿನ ಒಟ್ಟೂ 26 ಗ್ರಾಮಗಳನ್ನು ಶಿವಮೊಗ್ಗ ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಸೇರ್ಪಡೆ ಮಾಡುವ ಪ್ರಸ್ತಾಪದ ಪ್ರಕ್ರೀಯೆ ನಡೆಯುತ್ತಿದೆ ಎಂದು ಕ್ಯಾದಗಿ ವಲಯ ಅರಣ್ಯಾಧಿಕಾರಿ ಹರೀಶ್ ತಿಳಿಸಿದ್ದಾರೆ.
ಇಂದು ಇಲ್ಲಿಯ ತಾ.ಪಂ. ಸಭಾಭವನದಲ್ಲಿ ನಡೆದ ಮಾಸಿಕ ಕೆ.ಡಿ.ಪಿ. ಸಭೆಗೆ ಮಾಹಿತಿ ನೀಡಿದ ಅವರು ಈ ವಿಷಯ ತಿಳಿಸಿದರು.
ಸಭೆಗೆ ಅರಣ್ಯ ಇಲಾಖೆಯ ಮಾಹಿತಿ ನೀಡಿದ ಅವರು ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ಗೆ 400 ಗಿಡಗಳಂತೆ ವಿತರಿಸಿದ್ದೇವೆ. ಈಗಲೂ ರೈತರಿಗೆ ಒಂದು ರೂಪಾಯಿ ಮತ್ತು 3 ರೂಪಾಯಿ ಬೆಲೆಯ ಗಿಡಗಳನ್ನು ಸಸ್ಯ ಉದ್ಯಾನಗಳಿಂದ ನೀಡುತಿದ್ದೇವೆ.
ಕಾಡುಪ್ರಾಣಿ ಹಾವಳಿಯ ಹಾನಿಗೆ ಪರಿಹಾರ ವಿತರಿಸಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರೀಯಿಸಿದ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ವನ್ಯಮೃಗ ಹಾವಳಿಗೆ ಇಲಾಖೆ ನೀಡುವ ಪರಿಹಾರ ಅಲ್ಪ, ಅಕೇಶಿಯಾ ಮರಗಳಿಂದಾಗಿ ಕಾಡು ನಾಶವಾಗಿ ವನ್ಯಪ್ರಾಣಿಗಳ ಹಾವಳಿ ವಿಪರೀತವಾಗಿದೆ ಎಂದರು.
ಮಂಗಗಳಿಂದ ಅಡಿಕೆ, ಬಾಳೆ ಬೆಳೆಗಳಿಗೆ ಆಗುತ್ತಿರುವ ಹಾನಿ, ತೊಂದರೆ ತಪ್ಪಿಸಲು ಇಲಾಖೆ ಕ್ರಮ ಜರುಗಿಸಬೇಕು ಎಂದು ವಿವೇಕ ಭಟ್ ಕೋರಿದರು.
ಮಂಗನ ಹಾವಳಿ ತಡೆ, ಪರಿಹಾರ ಕಷ್ಟ, ಆದರೆ ಕಾಡುಕೋಣಗಳ ಹಾವಳಿ ತಡೆಯಲು ಮನವಿ ನೀಡಿದರೆ ಐಬಿಎಕ್ಸ್ ಹಾಕುವ ಮೂಲಕ ಕಾಡುಕೋಣಗಳ ತೊಂದರೆ ತಪ್ಪಿಸಬಹುದು ಎಂದು ವಿವರಿಸಿದರು.
