

ಜಿಲ್ಲಾಧಿಕಾರಿಗಳಿಂದ ಪ್ರಗತಿ ಪರಿಶೀಲನೆ

ಕೇವಲ ಕೆರೆಗಳ ಅಭಿವೃದ್ಧಿ ಮಾಡುವುದು ಮಾತ್ರವಲ್ಲ. ನೀರಿನ ಮೂಲದ ಸಂರಕ್ಷಣೆ, ಪುನರುಜ್ಜೀವನ, ಜಲ ರಕ್ಷಣೆ ಜನಜಾಗೃತಿ, ಹಸಿರೀಕರಣ ಮುಂತಾದವು ಇದರ ಹಿಂದಿನ ಉದ್ದೇಶ. ಇದರ ಜೊತೆಗೆ ನದಿಮೂಲದ ಸಂರಕ್ಷಣೆಗೂ ಗಮನ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ|ಹರೀಶಕುಮಾರ ಹೇಳಿದರು.
ಅವರು ಸೋಮವಾರ ಸಂಜೆ ತಾಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಬಳಿ ಕೆರೆಗಳ ಅಭಿವೃದ್ಧಿ ಕುರಿತಂತೆ ಪ್ರಶ್ನಿಸಿದಾಗ ಅವರ ಉತ್ತರಕ್ಕೆ ಪ್ರತಿಕ್ರಿಯಿಸಿ ಈಗಾಗಲೇ ರೇಲ್ವೆ, ವಿದ್ಯುತ್ ತಂತಿ ಮಾರ್ಗ, ರಸ್ತೆ ಮುಂತಾಗಿ ಹಲವು ಕಾರಣಗಳಿಂದ ಅರಣ್ಯ ಕಡಿಮೆಯಾಗುತ್ತಿದೆ. ಮರಗಿಡಗಳನ್ನು ಹೆಚ್ಚಿಸುವ ಕೆಲಸವಾಗಬೇಕು. ರೆವಿನ್ಯೂ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕಿದೆ. ಪದೇ ಪದೇ ಬೋರ್‍ವೆಲ್ ತೆಗೆಸುವ ಬದಲು ಇರುವ ಬೋರ್ ಗಳಿಗೆ ನೀರಿಂಗಿಸುವಂತಾಗಬೇಕು. ಸ್ಥಳೀಯವಾಗಿ ವಯಸ್ಸಾದವರಿಂದ ಅವರ ತಿಳುವಳಿಕೆ ಬಳಸಿಕೊಂಡು ಜಲಮೂಲ ಉಳಿಸುವ ಕೆಲಸಮಾಡಿ. ಬೆಂಗಳೂರಿನಲ್ಲಿ ಕೂತವರು ಇವನ್ನ ರೂಪಿಸಬೇಕೆಂದಿಲ್ಲ. ಯಾವುದು ಇಲ್ಲಿ ಉಪಯೋಗವಾಗುತ್ತದೋ ಅದನ್ನು ಮಾಡಿ. ಸರಕಾರಿ ಕಚೇರಿಗಳ ಬಾವಿಗಳಲ್ಲೂ ನೀರಿಂಗಿಸುವ ವ್ಯವಸ್ಥೆ ಮಾಡಿ ಎಂದರು.
ತಾಲೂಕಿನಲ್ಲಿ ಮಂಗನ ಕಾಯಿಲೆ ಸಂಪೂರ್ಣವಾಗಿ ಕಡಿಮೆಯಾಗಿದೆ ಎಂದು ತಾಲೂಕ ಆರೋಗ್ಯಾಧಿಕಾರಿಯಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಮಂಗನ ಕಾಯಿಲೆಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವದು ಅಗತ್ಯ. ರೋಗ ಬಂದನಂತರದ ಕ್ರಮಕ್ಕಿಂತ ಮುಂಚಿತವಾಗಿ ಅದನ್ನು ನಿಯಂತ್ರಿಸಲು ಮುಂದಾಗಬೇಕು. ಸಪ್ಟೆಂಬರ ತಿಂಗಳಿಂದ ಸಮರೋಪಾದಿಯಲ್ಲಿ ರೋಗ ತಡೆಗಟ್ಟುವ ಚುಚ್ಚುಮದ್ದು ನೀಡಲು ಸಿದ್ಧತೆ ಮಾಡಿ. ಅದಕ್ಕೆ ಅಗತ್ಯವಾದ ಔಷಧಗಳ ಬಗ್ಗೆ ಮಾಹಿತಿ ನೀಡಿದರೆ ಪೂರೈಕೆ ವ್ಯವಸ್ಥೆಗೆ ಅನುಕೂಲವಾಗುತ್ತದೆ ಎಂದರು.
ಅಡಕೆ, ಭತ್ತ ಇನ್ನಿತರ ಬೆಳೆಗಳ ಹಾನಿ ಬಗ್ಗೆ ಸಮೀಕ್ಷೆ ಮಾಡಿ. ಅಡಕೆ ಕೊಳೆ ರೋಗದ ಬಗ್ಗೆ ಅದು ಕಂಡುಬಂದಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಿದ್ಧಪಡಿಸಿಟ್ಟುಕೊಳ್ಳಿ ಎಂದು ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಲೋಕೋಪಯೋಗಿ, ಅರಣ್ಯ,ಪಟ್ಟಣ ಪಂಚಾಯತ ಮುಂತಾಗಿ ಹಲವು ಇಲಾಖೆಗಳ ಪ್ರಗತಿಯ ವಿವರ ಪಡೆದರು.
ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ತಹಸೀಲದಾರ ಗೀತಾ ಸಿ.ಜಿ.ಉಪಸ್ಥಿತರಿದ್ದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
