ದೀವರ ಹಸೆ ಚಿತ್ತಾರ ಜಗದಗಲ,ಮುಗಿಲಗಲ!

ಮಲೆನಾಡಿನ ದೀವರ ಮನೆಯ ಗೋಡೆಯಲ್ಲಿ ಕಂಗೊಳಿಸುತ್ತಿದ್ದ ಹಸೆ ಚಿತ್ತಾರವನ್ನು ವಿದೇಶಿ ನೆಲದಲ್ಲಿ ಪರಿಚಯಿಸಿದ ಕೀರ್ತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶಿರವಂತೆ ಗ್ರಾಮದ ಚಂದ್ರಶೇಖರ್‍ರಿಗೆ ಸಲ್ಲುತ್ತದೆ.
ಸುಮಾರು 14 ವರ್ಷಗಳಿಂದ ಹಸೆ ಚಿತ್ತಾರ ಮತ್ತು ಭತ್ತದ ತೆನೆಯ ತೋರಣ, ಮತ್ತಿತರ ಕರಕುಶಲ ಕಲೆಯಲ್ಲಿ
ತಮ್ಮನ್ನು ತೊಡಗಿಸಿಕೊಂಡು ಅದನ್ನು ಉಳಿಸಿ ಬೆಳೆಸುವ ವಿಶೇಷ ಪ್ರಯತ್ನವನ್ನು
ಇವರು ನಡೆಸುತ್ತಾ ಬಂದಿದ್ದಾರೆ.
ಚಿತ್ರಸಿರಿ ಎಂಬ ಸ್ವಯಂ ಸಂಘಟನೆಯ ಮೂಲಕ ಈಗಾಗಲೇ ಸಮಾಜದ ವಿವಿಧ ಸಂಘಟನೆಯ ಮೂಲಕ ಸಾಮಾಜಿಕ ಕಾರ್ಯಗಳಲ್ಲಿಯೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹಸೆ ಚಿತ್ತಾರ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ, ಉಸಿರಿರುವವರೆಗೂ ಈ ಕಲೆಯನ್ನು ಬೆಳೆಸುವ ಜವಾಬ್ಧಾರಿ ನನ್ನದಾಗಿದೆ ಎನ್ನುತ್ತಾರೆ, ಚಂದ್ರಶೇಖರ್.
ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು, ಹಳ್ಳಿ ಮನೆಗಳಲ್ಲಿ ಬಿಡಿಸುತ್ತಿದ್ದ ಹಸೆಚಿತ್ತಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಸುಮಾರು 14 ವರ್ಷಗಳ ಹಿಂದೆ ನಾ. ಡಿಸೋಜಾರವರು ದೀಪಾವಳಿ ವಿಶೇಷಾಂಕದಲ್ಲಿ ನಶಿಸಿ ಹೋಗುತ್ತಿದ್ದ ಹಸೆ ಚಿತ್ತಾರದ ಬಗ್ಗೆ ಲೇಖನ ಬರೆದಿದ್ದರು.
ಆ ಲೇಖನ ಹಸೆಯನ್ನು ಕಲಿಯಲು ಪ್ರೇರಣೆ ನೀಡಿತು. ಅಲ್ಲಿಂದ ಶುರುವಾಯ್ತು ನೋಡಿ ಹಸೆ ಚಿತ್ತಾರದ ಪಯಣ. ಹಸೆ ಚಿತ್ತಾರ ಮತ್ತು ಭತ್ತದ ತೆನೆಯ ತೋರಣಗಳು ಇವೆರಡು ಪ್ರಕೃತಿ ಪ್ರೇರಿತ ಕಲೆಗಳು ದೀಪಾವಳಿಯ ದಿನದಂದು ಗದ್ದೆಯಿಂದ ಭತ್ತದ ತೆನೆಯನ್ನು ತಂದು ಮನೆಯ ಬಾಗಿಲುಗಳಿಗೆ ತೋರಣವಾಗಿ ಅಲಂಕರಿಸಲಾಗುತಿತ್ತು. ತೋರಣದ ಹಣಿಕೆ ಅದರ ಮಾದರಿ ಹಾಗೂ ಸೂಕ್ಷ್ಮತೆ ಇವರನ್ನು ಆಕರ್ಷಿಸಿತು. ಆಧುನಿಕರಣದ ಕಾರಣಕ್ಕಾಗಿ ಗ್ರಾಮೀಣ ಹೆಣ್ಣುಮಕ್ಕಳು ಈ ಕಲೆಯನ್ನು ಮರೆಯಲಾರಂಭಿಸಿದರು. ಇದು ಚಂದ್ರಣ್ಣನವರನ್ನು ಆತಂಕಗೊಳಿಸಿತು.
ಈ ಕಾರಣಕ್ಕಾಗಿ ಭತ್ತದ ತೆನೆಯ ತೋರಣ ಮತ್ತು ವಿವಿಧ ಮಾದರಿಯ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭತ್ತದ ಈ ಕಲೆಗೆ ಕೈ ಹಾಕಿದರು. ನಿರ್ಲಕ್ಷಿತ ಹಾಗೂ ಸ್ತ್ರೀ ಪ್ರಧಾನಿತ ಈ ಕುಶಲಕಲೆಗೆ ಚಂದ್ರಣ್ಣ ಯಾವಾಗ ಅಂಟಿಕೊಂಡರೊ ಜನ ಅವರನ್ನು ಜರಿದರು. ಆದರೆ ಚಂದ್ರಣ್ಣ ಬಗ್ಗಲಿಲ್ಲ. ಬಾತುಕೋಳಿ, ಗುಬ್ಬಿಗಳ ಮನೆಯ ಚಿತ್ತಾರ ತೋರಣ ಮುಂತಾದವುಗಳು ಇಲ್ಲಿ ಮೂಡಿದವು.
ಟೀಕಿಸಿದ ಜನರೇ ಬೆರಗಾದರು. ಭಲೆ ಭಲೆ ಎಂದರು. ದೇಶದಾದ್ಯಂತ ಈ ಚಿತ್ತಾರಗಳು ಗೋಡೆಯನ್ನು ಅಲಂಕರಿಸಿದವು. ಚಂದ್ರಣ್ಣ ಬೆಳೆದರು, ಅಷ್ಟೇ ಅಲ್ಲ ಕಲೆಯನ್ನು ಬೆಳೆಸಿದರು. ಒಂದು ಕಾಲದಲ್ಲಿ ಅತ್ಯಂತ ಸಾಂಪ್ರದಾಯಿಕ ಕಲೆಯಾಗಿದ್ದ ಹಸೆ ಚಿತ್ತಾರವು ಆಧುನಿಕ ಸಂದರ್ಭದಲ್ಲಿ ನಶಿಸುವ ಆತಂಕವನ್ನು ಎದುರಿಸತೊಡಗಿತು.
ಮಲೆನಾಡಿನ ದಟ್ಟ ಸಾಮೂದಾಯಿಕ ಈ ಕಲಾಪರಂಪರೆಗೆ ಒದಗಿದ ಈ ಆತಂಕ ಆ ಸಮುದಾಯದ ಎಲ್ಲರನ್ನು ಬೆಚ್ಚಿ ಬೀಳಿಸಿತು. ಇದೇ ಸಂದರ್ಭದಲ್ಲಿ ಹಸೆ ಚಿತ್ತಾರಕ್ಕೆ ಕಾಲಿಟ್ಟ ಚಂದ್ರಣ್ಣ ಅದರ ಮೂಲಾಂಶಗಳನ್ನು ಉಳಿಸಿಕೊಂಡು ಆಧುನಿಕ ಸಂದರ್ಭದಲ್ಲಿ ಹೊಸಬಗೆಯ ವಿನ್ಯಾಸದ ಮೂಲಕ ಉಳಿಸಿ ಬೆಳೆಸುವ ವಿಶೇಷ ಪ್ರಯತ್ನವನ್ನು ಮಾಡಿದರು. ಗೋಡೆಯ ಮೇಲೆ
ಬರೆಯುತ್ತಿದ್ದ ಹಸೆ ಚಿತ್ತಾರವನ್ನು ಮೊದಲ ಬಾರಿಗೆ ಬಟ್ಟೆಯ ಮೇಲೆ ತರಲಾಯಿತು. ಪ್ರಾಕೃತಿಕ ಬಣ್ಣ ಹಾಗೂ ರಾಸಾಯನಿಕ ಬಣ್ಣಗಳನ್ನು ಉಪಯೋಗಿಸಿ ಹಸೆ ಚಿತ್ತಾರವನ್ನು ಬಟ್ಟೆ, ಗಾಜು, ಬಿದಿರಿನ ತಡಿಕೆ, ಈಚಲು ಚಾಪೆಯ ಮೇಲೆ ಚಿತ್ರಿಸಿದರು. ಹೊಸಹೊಸ ಬಗೆಯ ಪ್ರಯತ್ನವನ್ನು ಮಾಡಿದರು.ವಿದ್ವಾಂಸರನ್ನು, ಕಲಾವಿದರನ್ನು ಕರೆದು ಚರ್ಚಿಸಿ ತಮ್ಮ ಪ್ರಯೋಗಗಳನ್ನು ಪ್ರದರ್ಶಿಸಿದರು. ತಪ್ಪಾದಲ್ಲಿ ತಿದ್ದಿಕೊಂಡರು.
ವಿರೋಧವನ್ನು ತಾಳಿಕೊಂಡರು. ಸೃಜನಶೀಲತೆಯ ಬೆರಗಿನಲ್ಲಿ ಹಸೆ ಚಿತ್ತಾರದ ಹೊಸ ಸಾಧ್ಯತೆಗಳತ್ತ ಮುಖ ಮಾಡಿದರು. ಈ ಚಿತ್ತಾರಗಳು ನನ್ನ ಆವಿಷ್ಕಾರವಲ್ಲ. ನಮ್ಮ ಅವ್ವ -ಮುದೆವ್ವರಂತಹವರ ಸಾವಿರಾರು ತಾಯಂದಿರ ಸತತ ಕೂತೂಹಲ ಮತ್ತು ತಾಳ್ಮೆಯ ಪ್ರತೀಕ. ಅವುಗಳನ್ನು ನಾನು ಮುಂದುವರೆಸಿಕೊಂಡು ಹೋಗುತ್ತೇನೆ ಅಷ್ಟೆ ಎಂದು ವಿನಮ್ರವಾಗಿ ಹೇಳುತ್ತಾರೆ.
ಈ ಸೃಜನಶೀಲತೆಯ ರೂಪವೇ 416 ಮೂಲೆಯ ಆರತಿ ಚಿತ್ತಾರದ ಆವಿಷ್ಕಾರ. ಇತ್ತೀಚೆಗೆ ಹೊಸ ಪ್ರಯೋಗವಾಗಿ ಮರದ ತುಂಡುಗಳನ್ನು ಕತ್ತರಿಸಿ ಹಸೆಯ ರೀತಿಯಲ್ಲಿ ರಚಿಸಿರುವುದು. ಸಾಮಾನ್ಯವಾಗಿ 4 ಅಡಿ ಉದ್ದ ಮಾತ್ರ ನೇಯುತ್ತಿದ್ದ ಭತ್ತದ ತೆನೆಯ ತೋರಣವನ್ನು 1111 ಅಡಿ ರಚಿಸಿ ಸೈ ಅನ್ನಿಸಿಕೊಂಡರು. ಇದರಲ್ಲಿ ಅರಳೀ ಎಲೆ, ವಿಸ್ತರಿಸಿದ ಬಾಳೆ ಎಲೆ ಮತ್ತು ವಿವಿಧ ಆಕಾರ ನೀಡಿ ಹೊಸ ಬಗೆಯಲ್ಲಿ ವಿನ್ಯಾಸಗೊಳಿಸಿದರು.
ಈ ಮೂಲಕ ಜನರಲ್ಲಿ ಕಲೆಯ ಬಗ್ಗೆ ಗೌರವ ಹಾಗೂ ಕುತೂಹಲ ಬರುವಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದರು. ಇವರ ಸಾಹಸ ಇಷ್ಟಕ್ಕೆ ಮುಗಿಯಲಿಲ್ಲ. ಈ ಸಾಂಪ್ರದಾಯಿಕ ಕಲೆಗಳನ್ನು ಜನರಿಗೆ ತಲುಪಿಸಲು ಹೊರ ರಾಜ್ಯಗಳಾದ ಕಲ್ಕತ್ತಾ, ಮಧುರೈ ಅಷ್ಟೇ ಅಲ್ಲದೆ ಹೊರ ದೇಶಗಳಾದ ಜಪಾನ್ ದುಬೈಗಳಲ್ಲಿ ಪ್ರದರ್ಶನ ನೀಡಲಾಯಿತು. ಇದಕ್ಕೆಲ್ಲಾ ಕೆಲವು ಹಿರಿಯರ ಪ್ರೋತ್ಸಾಹ ಮತ್ತು ಸಹಕಾರ ನೀಡಿದ್ದನ್ನು ಚಂದ್ರಣ್ಣ ನೆನೆಪುಮಾಡಿಕೊಳ್ಳುತ್ತಾರೆ.
ಆರ್ಥಿಕವಾಗಿ ಅಷ್ಟೇನೂ ಬಲವಿಲ್ಲದ ಚಂದ್ರಣ್ಣ ಅವರ ಕಣ್ಣುಗಳಲ್ಲಿ ಹಸೆ ಚಿತ್ತಾರದ ಬಗ್ಗೆ ಸಾವಿರ ಕನಸುಗಳಿವೆ. ಜಾಗತಿಕ ಮಟ್ಟದಲ್ಲಿ ಗುರುತು ಮೂಡಿಸುವಂತಹ ‘ಹಸೆ ಹಳ್ಳಿ’ ಎಂಬ ಅದ್ಭುತ ಯೋಜನೆಯನ್ನು ರೂಪಿಸಲಾಗಿದೆ. ಸುಮಾರು 12 ಎಕರೆ ಪ್ರದೇಶದಲ್ಲಿ ಹಸೆ ಚಿತ್ತಾರದ ಮನೆಗಳು, ಕೃತಕ ಗುಡ್ಡದ ಮನೆ, ಗಿಡಮೂಲಿಕೆಗಳ ತೋಟ, ಸಾವಯವ ಕೃಷಿ ಮುಂತಾದ ಹಳ್ಳಿಯ ವಾತಾವರಣವನ್ನು ಸೃಷ್ಠಿಸಲಾಗುವುದು. ಅಂದಾಜು 8 ರಿಂದ 10 ಕೋಟಿ ರೂ. ಯೋಜನೆ ಇದಾಗಿದೆ. ಕನಸುಗಳಂತೂ ಇದೆ. ಚಂದ್ರಣ್ಣ ಇದನ್ನು ಸಾಧಿಸಬಹುದೆಂದು ನಮಗೂ ಅನ್ನಿಸುತ್ತದೆ. ದೀವರ ಜನಾಂಗದ ಕಲೆ ಎಂದೆ ಕರೆಸಿಕೊಳ್ಳುವ ಹಸೆ ಚಿತ್ತಾರ ಹಿಂದಿನಿಂದಲೂ ಅವಜ್ಞೆಗೊಳಗಾಗುತ್ತಾ ಬಂದಿದೆ. ವಿಶಾಲ ಉದ್ಯೋಗವಾಗಿ ಬೆಳೆಯುವ ಸಾಧ್ಯತೆಯನ್ನು ಹೊಂದಿರುವ ಹಸೆ ಚಿತ್ತಾರಕ್ಕೆ ಸರ್ಕಾರದ ನೆರವಿನ ಅಗತ್ಯವಿದೆ. ಸರ್ಕಾರ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಈಗಾಗಲೇ ಚಂದ್ರಣ್ಣ ಚಿತ್ರಸಿರಿ ಸಂಘಟನೆಯಿಂದ ಸಾಕಷ್ಟು ಜನರಿಗೆ ತರಬೇತಿ ನೀಡಿ ಉದ್ಯೋಗ ಸೃಷ್ಠಿಸಿದ್ದಾರೆ. ಕಲೆಯ ಜೊತೆಗೆ ಸಂಸ್ಕøತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. (ಮೋ.ಚ.ಶಿವಮೊಗ್ಗ) ಚಿತ್ರಸಿರಿ ಬಂದ್ರಶೇಖರ್ ರ ಸಂಪರ್ಕ ಸಂಖ್ಯೆ-9449698979

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *