ಆಸಕ್ತರಿಗಾಗಿ ಸಾಧಕರ ಸಂದರ್ಶನ-ನೆನಪಿಡಿ,ಈಗ ಆಯ್.ಎ.ಎಸ್. ಕಷ್ಟಸಾಧ್ಯವಲ್ಲ.

ಸ್ಫರ್ಧಾತ್ಮಕ ಅಭ್ಯರ್ಥಿಗಳಿಗೆ ಇಲ್ಲಿ ಟಿಪ್ಸ್ ಗಳಿವೆ
ಕಳೆದ ವಾರ ಸಿದ್ಧಾಪುರಕ್ಕೆ ಬಂದಿದ್ದ ಅಮೇರಿಕಾ ರಾಯಭಾರಿ ಕಛೇರಿಯ ಅಧಿಕಾರಿ ರಾಜೇಶ್ ನಾಯ್ಕ ಮತ್ತು ಅವರೊಂದಿಗೆ ಬಂದಿದ್ದ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮುಖ್ಯಸ್ಥ ಅರುಣ್ ಚಕ್ರವರ್ತಿ ಸಮಾಜಮುಖಿಯೊಂದಿಗೆ ಮಾತಿಗೆ ಸಿಕ್ಕಿದ್ದರು. ಅವರೊಂದಿಗಿನ ಖಾಸಗಿ, ಸಾರ್ವಜನಿಕ ಚರ್ಚೆಗಳ ಸಂಕ್ಷಿಪ್ಪ ರೂಪ ಇಲ್ಲಿದೆ.


ಅಂದಹಾಗೆ, ಅವರು ಆಯ್.ಎ.ಎಸ್. ಅಧಿಕಾರಿಗಳು. ದೇಶದ ನಾನಾ ಪ್ರಾಂತ್ಯಗಳ ಆಸಕ್ತರು ಭಾರತೀಯ ಸೇವೆಗೆ ಬರಲಿ ಎನ್ನುವುದು ಅವರ ಆಸೆ, ಹಾರೈಕೆ. ಗ್ರಾಮೀಣ ಹಿನ್ನೆಲೆಯ ಈ ಅಧಿಕಾರಿಗಳು ಆಯ್.ಎ.ಎಸ್. ಕಬ್ಬಿಣದ ಕಡಲೆಯಲ್ಲ ಎನ್ನುತ್ತಲೇ ವಿದ್ಯಾರ್ಥಿಗಳನ್ನು ಇಲ್ಲಿ ಉತ್ತೇಜಿಸಿದ್ದಾರೆ.
ಸ- ಆಯ್.ಎ.ಎಸ್. ಅಧ್ಯಯನದ ನಿಮ್ಮ ಅನುಭವ
ಅರುಣ್ ಚ.- ನಮ್ಮ ಕಾಲದಲ್ಲಿ ಇಷ್ಟು ಅನುಕೂಲ, ಸೌಲಭ್ಯ, ಅಧ್ಯಯನಮೂಲಗಳಿರಲಿಲ್ಲ. ಭಾರತೀಯ ಆಡಳಿತ ಸೇವೆ, ಪೊಲೀಸ್ ಸೇವೆ ಸೇರಬೇಕೆಂಬ ನಮ್ಮ ಹೆಬ್ಬಯಕೆ ನಮಗೆ ನೆರವಾಗಿದ್ದು, ಈಗಿನಷ್ಟು ಅನುಕೂಲ, ಅವಕಾಶಗಳಿಲ್ಲದ ಕಾಲದಲ್ಲಿ ನಮ್ಮದು ಪ್ರಯತ್ನಪೂರ್ವಕ ಯಶಸ್ಸು.
ರಾಜೇಶ್ ನಾ.- ಹಿಂದೆ ಆಯ್.ಎ.ಎಸ್. ಮಾಡುವುದು ಅಥವಾ ಯಾವುದೇ ಅಧ್ಯಯನ ಸಾಮಗ್ರಗಳಿಗಾಗಿ ದೂರದ ಊರುಗಳಿಗೆ ಹೋಗಬೇಕಿತ್ತು. ನಮಗೆ ಆಗ ಕಾಣುತಿದ್ದುದು ದೆಹಲಿ, ಹೈದ್ರಾಬಾದ್, ಚಿನ್ನೈ. ಈಗ ಎಲ್ಲವೂ ಬದಲಾಗಿವೆ. ಅಂತರ್ಜಾಲದಲ್ಲಿ ಮಾಹಿತಿಯ ಮಹಾಪೂರವೇ ದೊರೆಯುತ್ತಿದೆ. ಆಸಕ್ತರಿಗೆ ಆಯ್.ಎ.ಎಸ್. ಈಗ ಹಿಂದಿನಷ್ಟು ಕಷ್ಟಸಾಧ್ಯವಲ್ಲ.


ಸ- ಆಸಕ್ತರ ಆಯ್ಕೆ, ಆಸಕ್ತಿ ಹೇಗಿರಬೇಕು?
ಅರುಣ್ ಚ.-ಯುವಕ, ಯುವತಿಯರು ಭಾರತೀಯ ಆಡಳಿತ ಸೇವೆ ಪರೀಕ್ಷೆ ಆಯ್ಕೆಮಾಡುವವರು ವಿಸ್ತ್ರತ ಅಧ್ಯಯನ ನಡೆಸಬೇಕು. ಬಹುತೇಕ ಪ್ರಕರಣಗಳಲ್ಲಿ ಆಯ್.ಎ.ಎಸ್. ಮಾಡುವ ಯುವಕ-ಯುವತಿಯರಿಗಿಂತ ಅವರ ಪಾಲಕರ ಕನಸೆ ಕೆಲಸಮಾಡುತ್ತಿರುತ್ತದೆ. ಆಸಕ್ತರು ಅಧ್ಯಯನ ಮಾಡಿ ಗುರಿ ತಲುಪಲು ಸಾಧ್ಯ. ಪಾಲಕರ ಆಯ್ಕೆಗಿಂತ ವಿದ್ಯಾರ್ಥಿಗಳ ಆಯ್ಕೆ ಆಯ್.ಎ.ಎಸ್. ಆದರೆ ಫಲ ನಿಶ್ಚಿತ.
ರಾ.ನಾ.-ಆಸಕ್ತಿ, ಅಧ್ಯಯನವಿಲ್ಲದೆ ಏನೂ ಸಾಧ್ಯವಿಲ್ಲ. ಬಹಳಷ್ಟು ವಿಚಾರ, ವಿಷಯಗಳು ಬದಲಾಗುತ್ತಿರುತ್ತವೆ. ಈಗ ಹಿಂದಿನಂತಿಲ್ಲ. ಗುರಿ, ಉದ್ಧೇಶ, ಪರಿಶ್ರಮದ ದಾರಿ ಅರಿತವರು ಮನೆಯಲ್ಲಿ ಕುಳಿತೇ ಅಧ್ಯಯನ ಮಾಡಿ ಯಶಸ್ಸುಗಳಿಸುವ ಅವಕಾಶವಿದೆ. ನಾವು ನಮ್ಮದೇ ಮಿತಿಹಾಕಿಕೊಳ್ಳಬಾರದು. ಸಾಧ್ಯತೆ, ಅವಕಾಶಗಳ ಹೆಬ್ಬಾಗಿಲು ನಮ್ಮ ಮುಂದೇ ನಿಂತಿದೆ. ನೋಡಿ, ಕಷ್ಟದಿಂದ ಗುರಿ ಸಾಧಿಸುವುದು ನಮ್ಮ ಧ್ಯೇಯವಾಗಬೇಕು.


ಸ- ನಿಮ್ಮ ಕಾರ್ಯಕ್ಷೇತ್ರಗಳ ಬಗ್ಗೆ
ಅ.ಚ.- ಪರಿಶ್ರಮದಿಂದ ಆಯ್.ಎ.ಎಸ್. ಆಯಿತು. ಮಲೆನಾಡು, ಕರಾವಳಿಯಲ್ಲೇ ಹೆಚ್ಚು ಅವಧಿ ಕೆಲಸಮಾಡಲು ಅವಕಾಶವಾಯಿತು. ಮಲೆನಾಡು, ಕರಾವಳಿ ನನ್ನ ಪ್ರೀತಿಯ ಜಾಗಗಳು, ಈ ಭಾಗದಲ್ಲಿ ಕೆಲಸ, ಸೇವೆ ಮಾಡಿದ ಖುಷಿ, ಸಮಧಾನವಿದೆ. ಸೇವೆ, ಸಾಧನೆಗೆ ಸ್ವಾತಂತ್ರ್ಯ ಇರಬೇಕು. ಆಯ್ಕೆಯ ವಿಚಾರ ಬಂದರೆ ನನ್ನ ಮಕ್ಕಳು ಅವರ ಮುದುವೆಗೆ ನನಗೆ ಕರೆದರೆ ನಾನು ಹೋಗುವವನು.
ರಾ.ನಾ.-ಆಯ್.ಎ.ಎಸ್. ನಂತರ ಭಾರತೀಯ ವಿದೇಶಿ ಸೇವೆ ನನ್ನ ಆಯ್ಕೆ. ಜಪಾನ್ ಒಳ್ಳೆಯ ದೇಶ, ಅಲ್ಲಿ ಕಳೆದ ದಿನಗಳು, ಕಲಿತದ್ದು, ಸೇವೆ ಬಗ್ಗೆ ಖುಷಿ ಇದೆ. ಅಲ್ಲೇ ಇರಬಹುದಿತ್ತು. ಅಲ್ಲೇ ಇದ್ದರೆ ಅದಕ್ಕೇ ಬ್ರಾಂಡ್ ಆಗುವ ಅಪಾಯವಿರುತ್ತದೆ. ಎರಡು ವರ್ಷ ಬೆಂಗಳೂರಿಗೆ ಬರಲು ಅವಕಾಶವಾಯಿತು. ಈಗ ಅಮೇರಿಕಾಕ್ಕೆ ತೆರಳುತಿದ್ದೇನೆ. ಜಪಾನ್‍ನಲ್ಲಿ ರಾಜಕೀಯ ವ್ಯವಹಾರದ ಜವಾಬ್ಧಾರಿ ಇತ್ತು. ಅಮೇರಿಕಾದಲ್ಲಿ ಇನ್‍ಕ್ಲೂಜನ್, ಹೂಡಿಕೆ ಜವಾಬ್ಧಾರಿ. ಭಾರತದ ಪ್ರತಿನಿಧಿಯಾಗಿ ಭಾರತಕ್ಕೆ, ಭಾರತೀಯರಿಗೆ ಅನುಕೂಲ, ಒಳ್ಳೆಯದನ್ನು ಮಾಡುವ ಅವಕಾಶ.
ಬೆಂಗಳೂರಿನಲ್ಲಿ ಕೆಲವು ಸಮಯ ಸೇವೆ ಸಲ್ಲಿಸಿದ ಖುಷಿಯಿದೆ. ನೂರು ಕಿ.ಮೀ. ಒಳಗೆ ಪಾಸ್ಪೋರ್ಟ್ ಕೆಂದ್ರ ಇರಬೇಕೆಂಬ ಚಿಂತನೆ, ಯೋಜನೆ ಜಾರಿಮಾಡುವ ತಂಡದಲ್ಲಿ ನಾನಿದ್ದ ಖುಷಿ ಇದೆ. ಉಪ ಪಾಸ್ ಪೋರ್ಟ್ ಅಧಿಕಾರಿಯಾಗಿ ನಾನು ಕಾನೂನು ವಿಭಾಗ ನೋಡಿಕೊಳ್ಳುತಿದ್ದೆ. ಒಳ್ಳೆಯ ಅವಕಾಶ, ನಮ್ಮೂರಲ್ಲೇ ಇದ್ದು ನಮ್ಮ ರಾಜ್ಯ, ನೆಲಕ್ಕೆ ಪ್ರಾಮಾಣಿಕ ಸೇವೆ ಒದಿಸಿದ ಸಂತೃಪ್ತಿ ನನಗಿದೆ.


ಸ- ಆಯ್.ಎ.ಎಸ್ ಗೆ ವಿಜ್ಞಾನ ವಿಷಯ ಅಧ್ಯಯನ ಅವಶ್ಯವೆ? ಅನಿವಾರ್ಯವೆ?
ಅ.ಚ.- ವಿಜ್ಞಾನ ಅವಶ್ಯ, ಅನಿವಾರ್ಯವಲ್ಲ. ಜ್ಞಾನಕ್ಕೆ ಎಲ್ಲವೂ ಅವಶ್ಯ. ನಾವೆಲ್ಲಾ ಕಲಾ ವಿಭಾಗದಲ್ಲಿ ಓದಿದವರು. ಈಗ ಮೆಡಿಕಲ್, ಇಂಜಿನಿಯರಿಂಗ್ ಮಾಡುವವರೂ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಕಲೆ, ಸಾಹಿತ್ಯ, ಭಾಷಾ ವಿಷಯಗಳ ಮೇಲೆ ಪರೀಕ್ಷೆ ಬರೆಯುವುದು. ಯಾವುದೇ ಪದವಿ, ಸ್ನಾತಕೋತ್ತರ ಓದಿರಲಿ, ಅವರಲ್ಲಿ ಬಹುತೇಕರು ಭಾಷಾ ವಿಜ್ಞಾನ, ಸಮಾಜಶಾಸ್ತ್ರ, ಇತಿಹಾಸ, ಮಾನವಶಾಸ್ತ್ರ, ಮನಶಾಸ್ತ್ರಗಳ ಆಯ್ಕೆಯ ವಿಷಯಗಳಿಂದಲೇ ಪರೀಕ್ಷೆ ಎದುರಿಸುವುದು. ಹಾಗಾಗಿ 7-8 ವರ್ಷ ನಿರಂತರ ಕಲೆ, ಸಾಹಿತ್ಯ, ಮಾನವೀಯ ಶಾಸ್ತ್ರಗಳ ಅಧ್ಯಯನ ಮಾಡಿದವರಿಗೆ ಕಡಿಮೆ ಅವಧಿಯಲ್ಲಿ ಅದನ್ನು ಓದಿ, ಬರೆಯುವವರ ಜೊತೆ ಸ್ಫರ್ಧಿಸುವುದು ಸುಲಭ ಅಲ್ಲವೆ?
ರಾ.ನಾ.- ಗುರಿ, ಅಧ್ಯಯನ, ಪರಿಶ್ರಮ ಮುಖ್ಯ. ಆರ್ಟ್, ಸೈನ್ಸ್, ಕಾಮರ್ಸ್ ಓದಿ ಆಯ್.ಎ.ಎಸ್. ಮಾಡುವುದು ಕಷ್ಟವಲ್ಲ. ವಿಜ್ಞಾನ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಇತಿಹಾಸ ಓದಬೇಕು. ಕಲಾ ವಿಬಾಗದವರು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರಗಳ ಬಗ್ಗೆ ಓದಿ ತಿಳಿಯಬೇಕು.
ಸ- ವಿಜ್ಞಾನ,ತಂತ್ರಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರಗಳ ಆಸಕ್ತರು ನಾಗರಿಕ ಸೇವಾ ಕ್ಷೇತ್ರಗಳ ಕಡೆ ಬರುವ ಹಿಂದಿನ ಕಾರಣ?
ಅ.ಚ.- ಎಲ್ಲಾ ಅಧ್ಯಯನ ವಿಭಾಗಗಳಿಂದಲೂ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳುವವರಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರದವರಿಗೂ ಈ ಸೇವಾ ಕ್ಷೇತ್ರದಲ್ಲಿದ್ದು ಮಾಡಬಹುದಾದ ಉತ್ತಮ ಕೆಲಸಗಳ ಅರಿವು, ತಿಳುವಳಿಕೆ ಬಂದಿದೆ. ಹಾಗಾಗಿ ಆ ಕ್ಷೇತ್ರದವರು ಇತ್ತ ಮುಖ ಮಾಡುತಿದ್ದಾರೆ. ಬಹುತೇಕ ಅಭ್ಯರ್ಥಿಗಳಿಗೆ, ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜನಿಯರಿಂಗ್ ಅವರ ಆಯ್ಕೆಯಲ್ಲ, ಬದಲಾಗಿ ಅವರ ಪಾಲಕರದ್ದು. ಮಕ್ಕಳಿಗೆ ಆಯ್ಕೆಗೆ ಅವಕಾಶ ಕೊಡಬೇಕು. ಎಳೆಯರು ಏನು ಮಾಡಬಲ್ಲರು, ಏನು ಮಾಡಬೇಕು ಎಂಬುದನ್ನು ಹಿರಿಯರಿಗಿಂತ ಚೆನ್ನಾಗಿ ಆಯ್ಕೆ ಮಾಡಬಲ್ಲರು. ಹಾಗಾಗಿ ಮಕ್ಕಳಿಗೆ ಆಯ್ಕೆ ಬಿಡಬೇಕು. ಬೆಂಬಲ, ಪ್ರೋತ್ಸಾಹ ನೀಡುವುದು ಪಾಲಕರ ಜವಾಬ್ಧಾರಿ, ಕರ್ತವ್ಯ.
ರಾ.ನಾ.- ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಪಾಸು ಮಾಡುವುದು ಒಂದು ಪ್ರತಿಷ್ಠೆ, ಬಹಳಷ್ಟು ಜನರಿಗೆ ಈ ಪರೀಕ್ಷೆ ಬರೆದ ಮೇಲೆ, ಈ ಕ್ಷೇತ್ರಕ್ಕೆ ಬಂದ ಮೇಲೆ ಇಲ್ಲಿಯ ಮಹತ್ವ, ವಿಶೇಶ ಗಮನಕ್ಕೆ ಬರುತ್ತದೆ. ಬದ್ಧತೆಯಿಂದ ಕೆಲಸ ಮಾಡುವವರಿಗೆ ಯಾವ ಕ್ಷೇತ್ರ, ವಿಭಾಗವಾದರೇನು? ಆದರೆ ಆಯ್.ಎ.ಎಸ್. ಕೆಲಸಮಾಡಬಲ್ಲವರಿಗೆ ಉತ್ತಮ ಅವಕಾಶ, ವೇದಿಕೆ. ಬಹಳಷ್ಟು ವೈದ್ಯಕೀಯ, ಎಂಜನಿಯರಿಂಗ್ ವಿದ್ಯಾರ್ಥಿಗಳು ಭಾರತೀಯ ನಾಗರಿಕ ಸೇವೆಯಲ್ಲಿ ಇಷ್ಟೆಲ್ಲಾ ಕೆಲಸ ಮಾಡುವ ಸಾಧ್ಯತೆ ಇದೆ ಎಂದು ಮೊದಲೇ ತಿಳಿದಿದ್ದರೆ ನಮ್ಮ ಆಯ್ಕೆ ಆಯ್.ಎ.ಎಸ್. ಆಗಿರುತಿತ್ತು ಎಂದು ಹೇಳುತ್ತಾರೆ.
ಸ- ಗ್ರಾಮೀಣ ಪರಿಸರ ಸ್ಫರ್ಧಾತ್ಮಕ ಪರಿಕ್ಷೆಗಳಿಗೆ ಪೂರಕವೆ?
ಅ.ಚ.- ನಾವೆಲ್ಲಾ ಗ್ರಾಮೀಣ ಪರಿಸರ, ಹಿಂದುಳಿದ ಪ್ರದೇಶಗಳಿಂದಲೇ ಬಂದವರು. ಅದು ನಮಗೆ ನೆರವಾಗಿದೆ.
ರಾ.ನಾ.- ಬಹುತೇಕ ಅಯ್.ಎ.ಎಸ್. ಸಾಧಕರು ಗ್ರಾಮೀಣ ಪರಿಸರ, ಸೆಮಿ ಅರ್ಬನ್ ಏರಿಯಾದವರು. ಅವರಿಗೆ ತಿಳಿದುಕೊಳ್ಳುವ ಮನಸ್ಸಿರುತ್ತದೆ. ಆಯ್.ಎ.ಎಸ್. ನಲ್ಲಿ ವಿಶ್ಲೇಷಣಾತ್ಮಕವಾಗಿ ಬರೆಯಬೇಕು. ದೊಡ್ಡ ನಗರದವರಿಗೆ ಕೆಲವು ಅನುಕೂಲಗಳಿದ್ದರೆ ಗ್ರಾಮೀಣ,ಸಣ್ಣನಗರಗಳ ವಿದ್ಯಾರ್ಥಿಗಳಿಗೂ ಕೆಲವು ಅನುಕೂಲಗಳಿರುತ್ತವೆ. ಗ್ರಾಮೀಣ ನಗರ ಪ್ರದೇಶ ಯಾವುದೇ ಹಿನ್ನೆಲೆ ಇರಲಿ ಪ್ರಯತ್ನ ಮುಖ್ಯ.
ಸ- ಪರೀಕ್ಷೆ, ವ್ಯವಸ್ಥೆಯಲ್ಲಿ ವಸ್ತುನಿಷ್ಟತೆ,ಪ್ರಾಮಾಣಿಕತೆ ಬಗ್ಗೆ-
ಅ.ಚ- ಬಹಳ ಸಂದರ್ಭಗಳಲ್ಲಿ ಹಣ,ರುಷವತ್ತುಗಳ ಪ್ರಸ್ಥಾಪ ಬರುತ್ತದೆ. ನಮ್ಮಲ್ಲಿ ಪಿ.ಎಸ್.ಆಯ್. ಆಯ್ಕೆಗೂ ಹಣ, ಇನ್‍ಪ್ಲೂಯೆನ್ಸ್ ಇತ್ಯಾದಿ ಗಾಳಿ ಸುದ್ದಿ ಹರಡುವುದಿದೆ. ಅದೆಲ್ಲಾ ಸುಳ್ಳು, ಪ್ರಾಮಾಣಿಕ ಪ್ರಯತ್ನ, ಪರಿಶ್ರಮದಿಂದ ಗುರಿಮುಟ್ಟಬಹುದು. ಇಂದಿನ ಯುವಕರು ಹಿಂದಿನವರ ಎಲ್ಲಾ ದಾಖಲೆಗಳನ್ನು ಮುರಿಯುತಿದ್ದಾರೆ. ಒಳ್ಳೆಯದು ಸಾಧನೆಯಲ್ಲಿ ಯುವಕರು ಎಷ್ಟು ಪ್ರಬಲರಿದ್ದಾರೋ, ಅಷ್ಟೇ ಅಪರಾಧ ಚಟುವಟಿಕೆ, ಚಟ, ಹವ್ಯಾಸಗಳಲ್ಲಿ ಈಗಿನ ಯುವಕರು ಮುಂದಿದ್ದಾರೆ. ನಾನೊಬ್ಬ ಪಾಲಕ, ಅಧಿಕಾರಿಯಾಗಿ ಎಳೆಯರ ಅಪರಾಧ
ಪ್ರವೃತ್ತಿ ನನ್ನನ್ನು ಬಾಧಿಸುತ್ತದೆ. ಸಾಧಕ, ಉತ್ತಮ ಅಭಿರುಚಿಯ ಯುವಶಕ್ತಿಗೆ ಪಾಲಕರು ಸ್ವಾತಂತ್ರ್ಯ ನೀಡಬೇಕು. ಮಕ್ಕಳ ಪರವಾಗಿ ನಾವು ನಿರ್ಧಾರ ಮಾಡುವುದು, ನಿರ್ಣಯ ಮಾಡುವುದಲ್ಲ.
ರಾ.ನಾ.- ಭಾರತ ಬಹುವಿಶಿಷ್ಟ ದೇಶ, ವಿಭಿನ್ನ ಭೌಗೋಲಿಕತೆ, ಜಾತಿ-ಧರ್ಮ, ಪ್ರಾಂತ್ಯಗಳ ಜನರೆಲ್ಲಾ ಎಷ್ಟು ಸೌಹಾರ್ದದಿಂದ ಬದುಕುತಿದ್ದೇವೆ. ಶೋಷಣೆ, ಅನುಮಾನ, ಅವಮಾನ ಎಲ್ಲೆಡೆ ಇದೆ. ಆದರೆ ಭಾರತ ಎಲ್ಲರನ್ನೂ ಒಳಗೊಳ್ಳುವ ಸಂವಿಧಾನ,ಪ್ರಜಾಪ್ರಭುತ್ವವನ್ನು ಹೊಂದಿದೆ.ನಾಗರಿಕ ಪ್ರಪಂಚದಿಂದ ಬಹುದೂರ ಇರುವ ಬುಡಕಟ್ಟು, ವನವಾಸಿಗಳು ತಮ್ಮ ಪರಂಪರೆ, ಹಿನ್ನೆಲೆ ಇಟ್ಟುಕೊಂಡೆ ಎಲ್ಲರೊಂದಿಗೆ ಸ್ಫರ್ಧಿಸುತ್ತಾರೆ.
ಅದೇ ಭಾರತದ ಸೌಂದರ್ಯ, ಮೀಸಲಾತಿ ವಿಚಾರದಲ್ಲಿ ಯುವಕರು ಪ್ರಶ್ನೆ ಮಾಡುತ್ತಾರೆ. ದೊಡ್ಡಸಮೂಹ 50% ಸ್ಫರ್ಧಿಸುತ್ತಿದೆ. ಅಷ್ಟೇ ಜನರು ಇನ್ನುಳಿದ 50% ಗೆ ಪ್ರಯತ್ನಿಸುತ್ತಾರೆ. 50% ಮೀಸಲಾತಿ ವಿಭಾಗ ಕೂಡಾ ಸಾಮಾನ್ಯ ವಿಭಾಗದಷ್ಟೇ ಕಟ್ ಆಫ್ ಗೆ ನಿಂತಿರುತ್ತದೆ. ಗ್ರಾಮೀಣ ಪೃಪಾಂಕ, ಭೌಗೋಲಿಕ ಮೀಸಲಾತಿ, ಮಹಿಳಾ ಕೋಟಾ, ವಿಶೇಶಚೇತನರು, ದುರ್ಬಲವರ್ಗಗಳು, ಲೈಂಗಿಕ, ಸಾಂಕಿಕ ಅಲ್ಪಸಂಖ್ಯಾತರು, ಯೋಜನಾ ನಿರಾಶ್ರಿತರು ಇತ್ಯಾದಿ ಎಲ್ಲಾ ಸೇರಿ 50% ಮೀಸಲಾತಿ, ಇನ್ನುಳಿದ 50% ರಲ್ಲಿ ನಾವೊಬ್ಬರಾಗುವ ಪ್ರಯತ್ನ ಮಾಡಿದರಾಯಿತು. ಎಲ್ಲಾ ಕೋನಗಳಿಂದ ಭಾರತೀಯ ವ್ಯವಸ್ಥೆ ಉತ್ತಮ ವ್ಯವಸ್ಥೆ. ನಮಗೆ ವ್ಯವಸ್ಥೆ, ಸಾಂತಿ-ಸುವ್ಯವಸ್ಥೆ, ಸೌಹಾರ್ದತೆಗಳೆಲ್ಲಾ ಅಪಾಯದಲ್ಲಿದ್ದಾಗ ಅದರ ಮಹತ್ವ ಅರ್ಥವಾಗುತ್ತದೆ. ಭಾರತದ ಸೌಹಾರ್ದತೆ, ಸಾಮರಸ್ಯ, ಅಭಿವೃದ್ಧಿಯಲ್ಲಿ ನಮ್ಮ ಪೂರ್ವಜರ ಸೇವೆ, ತ್ಯಾಗ, ಪ್ರಯತ್ನ, ಪ್ರಾಮಾಣಿಕತೆಗಳ ಮಹತ್ವದ ಹಿನ್ನೆಲೆ ಇದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *