ಜಲಪ್ರಳಯ ಕೆರೆಕಟ್ಟೆಒಡೆದುಬೆಳೆಹಾನಿ.ರಸ್ತೆ,ಸಂವಹನ,ಸಂಪರ್ಕಸ್ಥಗಿತ, ಜಿಲ್ಲಾಡಳಿತದ ಸಮರೋಪಾದಿಯ ಕ್ರಮ

ನಿರಂತರ ಗಾಳಿ ಮಳೆ ಪರಿಣಾಮ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದ್ದು ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಾಗಾಟ ಸ್ಥಗಿತಗೊಂಡಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಪ್ರಮುಖ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳಿಂದ ನೀರು ಹೊರಬಿಡುತಿದ್ದು ನಿರಾಶ್ರಿತರ ಸಂಖ್ಯೆ ವೃದ್ಧಿಯಾಗುತ್ತಿದೆ. ಶಿರಸಿ ಬನವಾಸಿ ಬಳಿಯ ಮೊಗಳ್ಳಿಯಲ್ಲಿ ವರದಾ ಪ್ರವಾಹದಿಂದಾಗಿ ಇಡೀ ಗ್ರಾಮವೇ ಸ್ಥಳಾಂತರವಾಗಿದೆ. ಶಿವಮೊಗ್ಗ ಜಿಲ್ಲೆಯ ಜೋಳದಗುಡ್ಡೆ, ಕತವಾಯಿ ನಡುವಿನ ಗದ್ದೆ ಬಯಲು ವರದಾ ನೀರಿನಿಂದ ತುಂಬಿದ್ದು ಬೆಳೆ ನಾಶವಾಗುವ ಸಾಧ್ಯತೆ ಹೆಚ್ಚಿದೆ.
ಸಿದ್ಧಾಪುರದಲ್ಲಿ ಅಘನಾಶಿನಿ ನದಿ, ಉಪನದಿಗಳೆಲ್ಲಾ ತುಂಬಿ ಹರಿಯುತಿದ್ದು ಹೆಮ್ಮನಬೈಲಿನ ಆರು ಕುಟುಂಬಗಳಿಗೆ ಸೋವಿನಕೊಪ್ಪ ಶಾಲೆಯಲ್ಲಿ ಪುನರ್ ವಸತಿ ಕಲ್ಫಸಲಾಗಿದೆ. ಸಿದ್ಧಾಪುರ ಕಲ್ಯಾಣಪುರದಲ್ಲೂ ನೆರೆ ಇಳಿಯದ ಪರಿಣಾಮ ಗಂಜಿಕೇಂದ್ರ ಮುಂದುವರಿದಿದೆ.
ರಸ್ತೆ ಸಂಪರ್ಕ, ದೂರವಾಣಿ, ಮೊಬೈಲ್ ಸಂಪರ್ಕಗಳೆಲ್ಲಾ ಸ್ಥಗಿತಗೊಂಡಿದ್ದು ಸಂವಹನ, ಸಂಪರ್ಕ ಕಷ್ಟಸಾಧ್ಯವಾಗಿದೆ. ಕರಾವಳಿ,ಮಲೆನಾಡು ಬೆಸೆಯುವ ಪ್ರಮುಖ ರಸ್ತೆಗಳ ಮೇಲೆಲ್ಲಾ ನೀರು ಹರಿದು, ಮರಬಿದ್ದು ಸಂಪರ್ಕ ಅಸ್ಯವ್ಯಸ್ತವಾಗಿದೆ. ಈ ತೊಂದರೆಗಳ ಹಿನ್ನೆಲೆಯಲ್ಲಿ ಗುರುವಾರ ಕೂಡಾ ಉತ್ತರ ಕನ್ನಡ ಜಿಲ್ಲೆಯ ಶಾಲಾ, ಕಾಲೇಜು ಅಂಗನವಾಡಿಗಳಿಗೆ ರಜೆ ಮುಂದುವರಿಸಲಾಗಿದೆ.
ಸಿದ್ಧಾಪುರದ ಸುದ್ದಿ- ಕಳೆದ 48 ಗಂಟೆಗಳಲ್ಲಿ ಸಿದ್ಧಾಪುರ ತಾಲೂಕಿನಲ್ಲಿ ರಾಜ್ಯದಲ್ಲೇ ಗರಿಷ್ಟ 300 ಮಿ.ಮೀ. ಮಳೆ ಸುರಿದಿದೆ. ಈ ಮಹಾಮಳೆಯ ಪರಿಣಾಮ ಕಾನಗೋಡಿನ ಕೆರೆಯ ಕೋಡಿ ಮುರಿದು ನೀರು ಗದ್ದೆ, ತೋಟಗಳ ಮೇಲೆ ಹರಿಯುತ್ತಿದೆ.
ನಿನ್ನೆ ರಾತ್ರಿಯ ವಿಪರೀತ ಮಳೆಗೆ ಅವರಗುಪ್ಪಾ ಕೆರೆಯ ಕೋಡಿಯ ಕೆಳಗಿನ ಜಾಗ ಕುಸಿದಿದ್ದು, ಇದರಲ್ಲಿ ನೀರು ನುಗ್ಗಿದರೆ ನೂರಾರು ಎಕರೆ ಅಡಿಕೆ, ಭತ್ತದಗದ್ದೆ ಬೆಳೆ ನಾಶವಾಗುವ ಅಪಾಯ ಎದುರಾಗಿದೆ. ತಾಲೂಕಿನಾದ್ಯಂತ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು ಪುನರ್‍ರ್ವಸತಿ,ತುರ್ತು ಕೆಲಸ ಭರದಿಂದ ನಡೆಯುತ್ತಿದೆ. ಈ ಮಳೆಯ ಪರಿಣಾಮ ತಾಲೂಕಿನ ಹಣಜಿಬೈಲ್ ನಲ್ಲಿ ಒಂದು ಜೀವಹಾನಿ ಮತ್ತು ಇನ್ನೊಂದು ಕಡೆ ಜಾನುವಾರು ತೇಲಿಹೋದ ವರದಿಯಾಗಿದೆ. ಐಸೂರು,ಚಪ್ಪರಮನೆ,ಹಳದೋಟ ಸೇರಿದಂತೆ ಅನೇಕ ಕಡೆ ಜರಿ ಕುಸಿದಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ತಾಲೂಕಿನಲ್ಲಿ 344 ಎಕರೆ ಬೆಳೆಗೆ ಹಾನಿಯಾಗಿದೆ. 67 ಜನರನ್ನು ಸಂತ್ರಸ್ತರೆಂದು ಗುರುತಿಸಿದ್ದು ಅವರಿಗೆ ಎರಡು ಕಡೆ ಪುನರ್ ವಸತಿ ಕಲ್ಫಿಸಲಾಗಿದೆ. ಕೆರೆ ಹಾನಿ ಮತ್ತು ಬೆಳೆ ಹಾನಿ ಸಂಭವನೀಯತೆ ಹಿನ್ನೆಲೆಯಲ್ಲಿ ಅವರಗುಪ್ಪಾ ಮತ್ತು ಕಾನಗೋಡಿನ ಜನರು ಸೂಕ್ತ ವ್ಯವಸ್ಥೆಗಾಗಿ ತಹಸಿಲ್ಧಾರರಿಗೆ ಮನವಿ ಮಾಡಿದ್ದಾರೆ. ತಾಲೂಕಿನ ಸೋವಿನಕೊಪ್ಪಾ ಹೆಮ್ಮನಬೈಲಿನ ಪುನರ್ವಸತಿ ಕೇಂದ್ರಕ್ಕೆ ಇಂದು ಭೇಟಿ ನೀಡಿದ ತಾಲೂಕಾ ಪಂಚಾತ್ ಅಧ್ಯಕ್ಷರು ಸದಸ್ಯರು ವ್ಯವಸ್ಥೆ ಪರಿಶೀಲಿಸಿದರು. ಜನಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂತೃಸ್ತರು ತಮಗೆ ಅಪಾಯವಿಲ್ಲದ ಪ್ರದೇಶದಲ್ಲಿ ಶಾಶ್ವತ ವಸತಿ ವ್ಯವಸ್ಥೆಗೆ ಆಗ್ರಹಿಸಿದರು. ಪುನರರ್ವಸತಿ ಕೇಂದ್ರದಲ್ಲಿ ಆರೋಗ್ಯ, ಆಹಾರ, ರಕ್ಷಣೆ, ಭದ್ರತೆ ವ್ಯವಸ್ಥೆಗಳು ಸಮರ್ಪಕವಾಗಿರುವುದು ಕಂಡು ಬಂತು.ಸರ್ಕಾರಿವ್ಯವಸ್ಥೆಯೊಂದಿಗೆ ಸ್ಥಳಿಯರು ಅಲ್ಲಲ್ಲಿ ಸಂತ್ರಸ್ತರ ನೆರವಿಗೆ ಬಂದಿದ್ದು ಗಮನಕ್ಕೆ ಬಂತು. ಹೆಮ್ಮನಬೈಲಿನಲ್ಲಿ ಪ್ರವಾಹ ಪರಿಸ್ಥಿತಿ ಕುಗ್ಗಿದ ಪರಿಣಾಮ ಹಾನಿಗೊಳಗಾದ ಪ್ರದೇಶ, ಮನೆಗಳ ಪರಿಸ್ಥಿತಿ ಅವಲೋಕನಕ್ಕೆ ಅವಕಾಶವಾಯಿತು. ನೂರಾರು ವರ್ಷಗಳಿಂದ ವಾಸ್ತವ್ಯ ಹೂಡಿದ್ದ ಜನತೆ ಜನಜಾನುವಾರುಗಳೊಂದಿಗೆ ಸ್ಥಳಾಂತರವಾಗಿದ್ದು ವಸ್ತು, ಪರಿಸ್ಥಿತಿ ವಸ್ತುಸ್ಥಿತಿ ಅವಲೋಕಿಸಲು ಅವಕಾಶವಾಯಿತು. ಸಂಪೂರ್ಣ ಹಾನಿ ಸಮೀಕ್ಷೆ ಈವರೆಗೆ ಸಾಧ್ಯವಾಗಿಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *