
ಸೆಕ್ಷನ್ 194N: ತೆರಿಗೆ ಹೊರೆ, ನಗದು ಪ್ರವಾಹಕ್ಕೆ ಟಿಡಿಎಸ್ ಬರೆ! by lawchambersirsi |

ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಬರುವ ಟಿಡಿಎಸ್ ನಿಯಮಗಳು ಬಹುಷಃ ಎಲ್ಲರಿಗೂ ಪರಿಚಿತವಾಗಿವೆ. ಬಹಳಷ್ಟು ಹಣಕಾಸಿನ ವ್ಯವಹಾರಗಳನ್ನು ಟಿಡಿಎಸ್ ವ್ಯಾಪ್ತಿಯಲ್ಲಿ ತರುವ ಮೂಲಕ ತೆರಿಗೆ ಇಲಾಖೆ ತೆರಿಗೆಗಳ್ಳರ ಸುತ್ತ ಹದ್ದಿನ ಕಣ್ಣನ್ನು ನೆಟ್ಟಿದೆ. ಟಿಡಿಎಸ್ ವ್ಯಾಪ್ತಿಯು ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದ್ದು 5 ಜುಲೈ 2019 ರಂದು ಮಂಡನೆಗೊಂಡ ಕೇಂದ್ರ ಬಜೆಟ್ಟಿನಲ್ಲಿ ಕೇಂದ್ರ ಸರಕಾರ ತೆರಿಗೆ ಇಲಾಖೆಯ ಹದ್ದಿನ ಕಣ್ಣಿಗೆ ಮತ್ತೊಂದು ಲೆನ್ಸ್ ತೊಡಿಸಿದೆ, ಅದರ ಹೆಸರೇ ಸೆಕ್ಷನ್ 194N. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಮತ್ತು ನಗದು ರೂಪದಲ್ಲಿ ನಡೆಯುವ ವ್ಯವಹಾರಗಳನ್ನು ನಿರುತ್ಸಾಹಗೊಳಿಸುವ ಉದ್ದೇಶದಿಂದ ಕೇಂದ್ರ ಬಜೆಟ್ 2019, ಸೆಕ್ಷನ್ 194 N ನ್ನು ಜಾರಿಗೆ ತಂದಿದ್ದು ಈ ಪ್ರಕಾರ ಒಂದು ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವಿಕೆಯ ಮೇಲೆ ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲು (ಟಿಡಿಎಸ್) ನಿಯಮವನ್ನು ರೂಪಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಇತ್ತಿಚೆಗೆ ವರದಿ ಮಾಡಿದಂತೆ ಭಾರತದಲ್ಲಿ ನಗದು ವ್ಯವಹಾರದ ಪ್ರಮಾಣ
ಇದೇ ಮೊದಲ ಬಾರಿಗೆ 20 ಲಕ್ಷ ಕೋಟಿಯನ್ನು ದಾಟಿದೆ. ಮುಂದುವರಿದ ದೇಶದಲ್ಲಿ ನಗದು ಚಲಾವಣೆಯು ದಿನದಿನಕ್ಕೆ
ಕ್ಷೀಣಿಸುತ್ತಿದ್ದರೆ ಭಾರತದಲ್ಲಿ ಮಾತ್ರ ಇದು ಹೆಚ್ಚಾಗುತ್ತಿದೆ. ನೋಟು ರದ್ದತಿಯ ಪೂರ್ವದಲ್ಲಿ ನಗದು
ಚಲಾವಣೆಯ ಪ್ರಮಾಣ ಅಂದಾಜು 18 ಲಕ್ಷ ಕೋಟಿಗಳಷ್ಟಿದ್ದರೆ ಅದರ ಪ್ರಮಾಣ ಪ್ರಸ್ತುತ ಸುಮಾರು 12 ಪ್ರತಿಷತ
ಹೆಚ್ಚಾಗಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಸೆಕ್ಷನ್ 194 N ಮುಂದಿನ
ದಿನಗಳಲ್ಲಿ ಮಹತ್ವವನ್ನು ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ.
ಸೆಕ್ಷನ್ 194 N ಎಂದರೇನು?
ಒಂದು ಹಣಕಾಸು ವರ್ಷದಲ್ಲಿ (ಎಪ್ರಿಲ್ 1 ರಿಂದ ಆರಂಭವಾಗಿ 31ನೇ ಮಾರ್ಚ್ ವರೆಗೆ) ಒಂದು ಕೋಟಿ ರೂ.ಗಿಂತ ಹೆಚ್ಚಿನ ನಗದು ಹಣವನ್ನು ಹಿಂಪಡೆಯುವ (Cash Withdrawals) ವ್ಯವಹಾರಗಳಿಗೆ ಸೆಕ್ಷನ್ 194 N ಅನ್ವಯವಾಗುತ್ತದೆ. ಇಲ್ಲಿ ಒಂದು ಕೋಟಿಯ ಮಿತಿಯನ್ನು ನಿರ್ಧರಿಸುವಾಗ ಒಂದು ಹಣಕಾಸು ವರ್ಷದಲ್ಲಿ ಒಂದು ಖಾತೆಯಿಂದ ಹಿಂಪಡೆದ ಎಲ್ಲಾ ನಗದು ಹಣದ ಮೊತ್ತವನ್ನು ಪರಿಗಣಿಸಲಾಗುತ್ತದೆ. ಈ ನಿಯಮವು ಒಬ್ಬ ವ್ಯಕ್ತಿ, ಹಿಂದೂ ಅವಿಭಜಿತ ಕುಟುಂಬ (HUF), ಕಂಪನಿ, ಪಾಲುದಾರಿಕೆ ಸಂಸ್ಥೆ, ಸ್ಥಳೀಯ ಪ್ರಾಧಿಕಾರ, ಅಸೋಸಿಯೇಷನ್ ಆಫ್ ಪರ್ಸನ್,(AOP) ಮತ್ತು ಬಾಡಿ ಆಫ್ ಇಂಡಿವಿಜುವಲ್ಸ್ (BOI) ಇವರುಗಳಿಗೆಲ್ಲ ಅನ್ವಯವಾಗುತ್ತದೆ.
ಒಂದು ಹಣಕಾಸು ವರ್ಷದಲ್ಲಿ (ಎಪ್ರಿಲ್ 1 ರಿಂದ ಆರಂಭವಾಗಿ 31ನೇ ಮಾರ್ಚ್ ವರೆಗೆ) ಒಂದು ಕೋಟಿ ರೂ.ಗಿಂತ ಹೆಚ್ಚಿನ ನಗದು ಹಣವನ್ನು ಹಿಂಪಡೆಯುವ (Cash Withdrawals) ವ್ಯವಹಾರಗಳಿಗೆ ಸೆಕ್ಷನ್ 194 N ಅನ್ವಯವಾಗುತ್ತದೆ. ಇಲ್ಲಿ ಒಂದು ಕೋಟಿಯ ಮಿತಿಯನ್ನು ನಿರ್ಧರಿಸುವಾಗ ಒಂದು ಹಣಕಾಸು ವರ್ಷದಲ್ಲಿ ಒಂದು ಖಾತೆಯಿಂದ ಹಿಂಪಡೆದ ಎಲ್ಲಾ ನಗದು ಹಣದ ಮೊತ್ತವನ್ನು ಪರಿಗಣಿಸಲಾಗುತ್ತದೆ. ಈ ನಿಯಮವು ಒಬ್ಬ ವ್ಯಕ್ತಿ, ಹಿಂದೂ ಅವಿಭಜಿತ ಕುಟುಂಬ (HUF), ಕಂಪನಿ, ಪಾಲುದಾರಿಕೆ ಸಂಸ್ಥೆ, ಸ್ಥಳೀಯ ಪ್ರಾಧಿಕಾರ, ಅಸೋಸಿಯೇಷನ್ ಆಫ್ ಪರ್ಸನ್,(AOP) ಮತ್ತು ಬಾಡಿ ಆಫ್ ಇಂಡಿವಿಜುವಲ್ಸ್ (BOI) ಇವರುಗಳಿಗೆಲ್ಲ ಅನ್ವಯವಾಗುತ್ತದೆ.
ಈ ನಿಯಮದ ಅಡಿಯಲ್ಲಿ ಪಾವತಿದಾರ ವ್ಯಾಪ್ತಿಯಲ್ಲಿ (Payer) ಕೆಳಗಿನವರೆಲ್ಲ ಬರುತ್ತಾರೆ:
- ಯಾವುದೇ ಬ್ಯಾಂಕ್ (ಖಾಸಗಿ ಅಥವಾ ಸಾರ್ವಜನಿಕ ವಲಯ)
- ಸಹಕಾರಿ ಬ್ಯಾಂಕ್
- ಅಂಚೆ ಕಛೇರಿ
ಪಾವತಿದಾರರು ತೆರಿಗೆದಾರನಿಗೆ ಒಂದು ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸುವಾಗ ತೆರಿಗೆಯನ್ನು
ಕಡಿತಗೊಳಿಸಬೇಕಾಗುತ್ತದೆ.
ಸೆಕ್ಷನ್ 194 N ಅಡಿಯಲ್ಲಿ
ಈ ಕೆಳಗಿನ ಅಂಶಗಳನ್ನು ಗಮನಿಸಬೇಕು.
1. ಒಂದು ಹಣಕಾಸು ವರ್ಷದಲ್ಲಿ ಒಂದು ಕೋಟಿ ರೂ.ಗಳ ಮಿತಿಯು ಪ್ರತಿಯೊಂದು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಗೆ ಸಂಬಂಧಿಸಿರುತ್ತದೆಯೇ ಹೊರತು ತೆರಿಗೆದಾರನ ಎಲ್ಲಾ ವೈಯಕ್ತಿಕ ಖಾತೆಗಳ ವ್ಯವಹಾರಗಳನ್ನು ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ, ಮೂರು ಬೇರೆ ಬೇರೆ ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿರುವ ತೆರಿಗೆದಾರನೊಬ್ಬ ತನ್ನ ಮೂರು ಖಾತೆಗಳಿಂದ ತಲಾ ಒಂದು ಕೋಟಿಯವರೆಗೆ ನಗದನ್ನು ಯಾವುದೇ ಟಿಡಿಎಸ್ ಇಲ್ಲದೇ ಹಿಂಪಡೆಯಬಹುದು. ಅಂದರೆ ಒಂದೇ ಖಾತೆಯಿಂದ ಒಂದು ಕೋಟಿ ರೂಗಳಿಗಿಂತ ಹೆಚ್ಚಿನ ಮೊತ್ತವನ್ನು ಹಿಂಪಡೆದರೆ ಮಾತ್ರ ಟಿಡಿಎಸ್ ಅನ್ವಯಿಸುತ್ತದೆ.
2. ಬೇರರ್ ಚೆಕ್ ಮೂಲಕ ಮೂರನೇ ವ್ಯಕ್ತಿಗೆ ಹಣ ಪಾವತಿಸಿದರೆ ಅಂಥಹ
ವ್ಯವಹಾರವನ್ನು ತೆರಿಗೆದಾರನು ಹಿಂಪಡೆದ ಹಣವೆಂದು ಪರಿಗಣಿಸಲಾಗುತ್ತದೆಯೇ? ಈ ಬಗ್ಗೆ
ಗೊಂದಲಗಳಿದ್ದು, ಸ್ಪಷ್ಟತೆ ಇರುವುದಿಲ್ಲ.
3. ಸೆಕ್ಷನ್ 194 N ನ ನಿಯಮಾವಳಿಗಳು 1 ಸೆಪ್ಟೆಂಬರ್ 2019 ರಂದು ಅಥವಾ ನಂತರ ಮಾಡಿದ ಪಾವತಿಗಳಿಗೆ ಮಾತ್ರ ಅನ್ವಯವಾಗಿತ್ತದೆ.
4. ನಗದು ಪಾವತಿಸುವವರು ಕಡ್ಡಾಯವಾಗಿ ಸೆಕ್ಷನ್ 194 N ಅಡಿಯಲ್ಲಿ ಟಿಡಿಎಸ್ ಕಡಿತಗೊಳಿಸಬೇಕಾಗುತ್ತದೆ, ಅಂದರೆ
ಯಾವುದೇ ಬ್ಯಾಂಕ್ (ಖಾಸಗಿ ಅಥವಾ ಸಾರ್ವಜನಿಕ ವಲಯ), ಸಹಕಾರಿ ಬ್ಯಾಂಕ್, ಪೋಸ್ಟ್ ಆಫೀಸ್ ಟಿಡಿಎಸ್ ಕಡಿತಗೊಳಿಸಲು ಜವಾಬ್ದಾರರಾಗಿರುತ್ತಾರೆ.
5. ನಗದು ಹಿಂಪಡೆಯುವವರು
ಯಾವುದೇ ಸರ್ಕಾರಿ ಸಂಸ್ಥೆಯಾಗಿದ್ದಲ್ಲಿ ಅಥವಾ ಸಹಕಾರಿ ಬ್ಯಾಂಕುಗಳು ಸೇರಿದಂತೆ ಯಾವುದೇ ಬ್ಯಾಂಕ್, ಬ್ಯಾಂಕಿಂಗ್ ಕಂಪನಿಯ ಯಾವುದೇ ವ್ಯವಹಾರ ವರದಿಗಾರ, ಯಾವುದೇ ಬ್ಯಾಂಕಿನ ಯಾವುದೇ ವೈಟ್ ಲೇಬಲ್ ಎಟಿಎಂ ಆಪರೇಟರ್
ಅಥವಾ ಸರ್ಕಾರದಿಂದ ಸೂಚಿಸಲ್ಪಟ್ಟ ಯಾವುದೇ ವ್ಯಕ್ತಿಯಾಗಿದ್ದಲ್ಲಿ
ಅಂಥಹ ಸಂದರ್ಭದಲ್ಲಿ ಪಾವತಿದಾರ ಟಿಡಿಎಸ್ ಕಡಿತಗೊಳಿಸಲು ಭಾದ್ಯಸ್ಥನಾಗಿರುವುದಿಲ್ಲ.
6. ಒಂದು ಹಣಕಾಸು ವರ್ಷದಲ್ಲಿ ಒಂದು ಕೋಟಿ ರೂ.ಗಿಂತ ಹೆಚ್ಚಿನ
ಹಣವನ್ನು ಪಾವತಿಸುವಾಗ ಮಾತ್ರ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು
ಹಣಕಾಸಿನ ವರ್ಷದಲ್ಲಿ ಒಟ್ಟು 99 ಲಕ್ಷ ರೂಗಳನ್ನು ಹಿಂತೆಗೆದುಕೊಂಡು ಅದೇ ಹಣಕಾಸು ವರ್ಷದಲ್ಲಿ
ಮತ್ತೆ 2,00,000 ರೂ.ಗಳನ್ನು ಹಿಂಪಡೆದುಕೊಂಡಾಗ ಟಿಡಿಎಸ್ ಅನ್ವಯವಾಗುತ್ತದೆ ಮತ್ತು ಆಗ
ಹೆಚ್ಚುವರಿ ಒಂದು ಲಕ್ಷ ರೂಗಳ ಮೇಲೆ ಮಾತ್ರ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
6. ಸೆಕ್ಷನ್ 194 N ಅಡಿಯಲ್ಲಿ ಟಿಡಿಎಸ್ ದರ ಶೇ 2 ಆಗಿರುತ್ತದೆ.
