ದಿನೇಶ್ ಅಮೀನ್‍ಮಟ್ಟು : ಕರ್ನಾಟಕದ ರಾಜಕೀಯ ವಿವೇಕ

ಇತ್ತೀಚೆಗೆ ದಿನೇಶ್ ಅಮೀನ್ ಮಟ್ಟು ತುಂಬ ಬ್ಯುಸಿಯಾಗಿದ್ದಾರೆ. ಇದು ಅಮೀನಮಟ್ಟು ಮಾಡಿಕೊಂಡ ಸ್ವಂಕೃತ ಅಪರಾಧ ಅಂತ ನನಗನಿಸುತ್ತದೆ ! ಕಾರಣ ಇಷ್ಟೇ. ಈಗ ಅವರೊಬ್ಬ ಜನಪ್ರಿಯ ಅಂಕಣಕಾರನಾಗಿ ಮಾತ್ರ ಉಳಿದಿಲ್ಲ. ಜನಪ್ರಿಯತೆಯ ಅಪಾಯದಿಂದ ಅವರೀಗ ಕರ್ನಾಟಕದ ಉದ್ದಗಲಕ್ಕೂ ಭಾಷಣ ಮಾಡಲು ದಿನಂಪ್ರತಿ ಸುತ್ತಬೇಕಾಗಿದೆ. ನಿನ್ನೆ ಮೈಸೂರಿನಲ್ಲಿ ವಿವೇಕಾನಂದರ ಕುರಿತು ಮಾತನಾಡಿದರು. ನಾಳೆ ಕುಪ್ಪಳ್ಳಿಯಲ್ಲಿ ಚಳವಳಿಗಳ ಕುರಿತು ಭಾಷಣ ಮಾಡÀಬೇಕಾಗಿದೆ. ಇಂದು ಕರ್ನಾಟಕ ಸಂಘದಲ್ಲಿ ನಮ್ಮ ಮುಂದೆ ‘ಸಾಹಿತ್ಯ ಮತ್ತು ಸಮಾಜ’ ಎಂಬ ವಿಚಾರ ಕುರಿತು ಮಾತನಾಡಬೇಕಾಗಿದೆ.
ಶಿವಮೊಗ್ಗಕ್ಕೆ ಬರುವ ಪ್ರಯಾಣದ ಕುರಿತು ವಿಚಾರಿಸಲು ದಿನೇಶ್ ಅವರಿಗೆ ನಾನು ಮೊನ್ನೆ ಫೋನ್ ಮಾಡಿದಾಗ ‘ಎಂತ ಮಾತಡೋದು ಮಾರಾಯ್ರೆ’ ಎಂದು ಟೆನ್ಸ್ ಆದವರಂತೆ ಮಾತನಾಡಿದರು. ಲಂಕೇಶ್ ತಾವು ಕಥೆ ಬರೆದಾಗ ಅಥವಾ ಕವಿತೆ ಬರೆದಾಗ ಅವನ್ನು ಮೊದಲ ಬಾರಿಗೆ ಬರೆದಂತೆ ಇದು ಕಥೆಯಾಗಿದೆಯೇ,ಇದು ಕವಿತೆಯಾಗಿದೆಯೇ ಎಂದು ತಮ್ಮಷ್ಟಕ್ಕೆ ಅನುಮಾನಿಸುತ್ತಿದ್ದರು. ಆದ್ದರಿಂದಲೇ ಅವರಿಗೆ ಕನ್ನಡ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ಕಥೆ-ನಾಟಕ-ಕವಿತೆಗಳನ್ನು ಬರೆಯಲು ಸಾಧ್ಯವಾಯಿತು. ‘ಎಂತ ಮಾತಾಡೋದು,ಎಂತ ಬರಿಯೋದು’ ಎಂದು ಟೆನ್ಸ್ ಆಗುವ ಅಮೀನಮಟ್ಟು ಎಂತಹ ಬರಹಗಾರ ಎನ್ನುವುದು ನಮಗೆಲ್ಲ ತಿಳಿದಿದೆ. ಮತ್ತು ಅವರೆಂತಹ ಭಾಷಣಕಾರ ಎನ್ನುವುದು ಇಂದು ನಮಗೆ ಮತ್ತೊಮ್ಮೆ ಸಾಬೀತಾಗಲಿದೆ.
ಅಮೀನ್ ಮಟ್ಟು ಅವರ ಉಪನ್ಯಾಸದ ಆಹ್ವಾನ ಪತ್ರಿಕೆಯನ್ನು ರೂಪಿಸಲು ನಿಮ್ಮದೊಂದು ಕಿರುಪರಿಚಯವನ್ನು ಕಳಿಸಿಕೊಡಿ ಎಂದು ಕೇಳಿದೆವು. ‘ನಿಮಗೆ ಗೊತ್ತಿಲ್ಲದಿದ್ದು ಏನಿದೆ’ ಎಂದು ನಕ್ಕ ಅವರು ಕೊನೆಗೂ ಅದನ್ನು ಕಳಿಸಿಕೊಡಲಿಲ್ಲ. ನಾನು ಕರ್ನಾಟಕ ಸಂಘವೂ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸುವಾಗ ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಕಿರುಪರಿಚಯ ಕೇಳುವುದಿದೆ. ನಮ್ಮ ನಿರೀಕ್ಷೆ ಆ ಬರಹಗಾರನ ಊರು ಕೇರಿ ,ರಚಿಸಿದ ಕೃತಿಗಳು, ಬಂದಿರುವ ಪ್ರಶಸ್ತಿ ಬಹುಮಾನಗಳು ಇದರ ವಿವರವಾಗಿರುತ್ತದೆ.
ಯಾಕೆಂದರೆ ಈ ಮಾಹಿತಿ ಪೂರ್ಣವಾಗಿ ನಮಗೆ ತಿಳಿದಿರುವುದಿಲ್ಲ. ಆದರೆ ಬಹುಪಾಲು ಮಂದಿ ಕಳಿಸುವ ವಿವರ ನೋಡಿ ಕಳವಳಗೊಂಡಿದ್ದೇನೆ. ಉದಾಹರಣೆಗೆ ವಿವರ ಹೀಗಿರುತ್ತದೆ ‘ ಇವರು ಸಮಕಾಲೀನ ಕನ್ನಡ ಸಾಹಿತ್ಯದ ದೊಡ್ಡ ಕವಯತ್ರಿ’ ‘ ಇವರು ಕನ್ನಡದ ಸಂವೇದನಾಶೀಲ ಲೇಖಕರು’ ನಿಜಕ್ಕೂ ಇವರೆಲ್ಲ ದೊಡ್ಡ ಕವಿಗಳು ಅಥವಾ ಸಂವೇದನಾಶೀಲ ಲೇಖಕರೇ ಇರಬಹುದು. ನನಗೆ ಕಳವಳ ಆಗುವುದು ಯಾಕೆಂದರೆ, ಇದು ಅವರ ಹಸ್ತಾಕ್ಷರದಲ್ಲೆ ಇರುತ್ತದೆ. ವಿನಯದ ಪ್ರಶ್ನೆಯಾಗಿ ಇದನ್ನು ನಾನು ನೋಡುತ್ತಿಲ್ಲ. ಕನಿಷ್ಟಮಟ್ಟದ ಸೂಕ್ಷ್ಮತೆಯೂ ಈ ಲೇಖಕರಲ್ಲಿ ಕಾಣೆಯಾಗಿದೆಯಲ್ಲ ಎಂಬುದಕ್ಕೆ ನನಗೆ ಕಳವಳವಾಗುತ್ತದೆ.
ಈ ಸಣ್ಣ ಘಟನೆಯನ್ನು ನಾನು ಏಕೆ ಇಲ್ಲಿ ಪ್ರಸ್ತಾಪಿಸಿದೆನೆಂದರೆ ಪತ್ರಿಕಾ ಬರಹವನ್ನು ಅವಸರದ ಸಾಹಿತ್ಯ ಎಂದು ಕರೆಯಲಾಗುತ್ತದೆ. ಪತ್ರಕರ್ತರು ಸಮಯದೊಂದಿಗೆ ಗುದ್ದಾಡಬೇಕಾಗುತ್ತದೆ. ತೀವ್ರ ಪೈಪೋಟಿ ಇರುವ ಪತ್ರಿಕೋದÀ್ಯಮದಲ್ಲಿ ಸುದ್ದಿಯ ವಿಶ್ವಾಸಾರ್ಹತೆಯನ್ನು ಪರೀಕ್ಷೀಸುವಷ್ಟು ಸಮಯವೂ ಕೆಲವೊಮ್ಮೆ ಇರುವುದಿಲ್ಲ. ಹೀಗಿರುವಾಗಲೂ ಪತ್ರಕರ್ತರು ಸಾಹಿತಿಗಳಿಗಿಂತಲೂ ಸೂಕ್ಷ್ಮವಾಗಿ ಚಿಂತಿಸುತ್ತಾರೆ ಎಂಬುದನ್ನು ಈ ಘಟನೆ ಹೇಳುತ್ತದೆ.
ಕನ್ನಡ ಪತ್ರಿಕೋದ್ಯಮದಲ್ಲಿ ಪಿ.ಲಂಕೇಶ್ ಮಾರ್ಗಪ್ರವರ್ತಕ ಪತ್ರಕರ್ತ. ಸರ್ವಾಧಿಕಾರಿಗಳಂತೆ ರಾಜ್ಯಭಾರ ನಡೆಸುತ್ತಿದ್ದ ರಾಜಕಾರಣಿಗಳಿಗೆ ಪ್ರಜಾಪ್ರಭುತ್ವದ ಮೂಲಪಾಠವನ್ನು ಕೈಯಲ್ಲಿ ಬೆತ್ತ ಹಿಡಿದಂತೆ ಗದರಿಕೆಯ ದನಿಯಲ್ಲಿ ಬೋಧಿಸಿದವರು ಲಂಕೇಶ್.
ಜನಸಾಮಾನ್ಯರು ರಾಜಕಾರಣಿಗಳನ್ನು ಅಧಿಕಾರಿಗಳನ್ನು ಪ್ರಶ್ನಿಸಲು ದೈರ್ಯ ತುಂಬಿದ್ದೇ ಲಂಕೇಶ್ ಪತ್ರಿಕೆ. ಹಾಗೆಂದು ಲಂಕೇಶ್ ರಾಜಕಾರಣಿಗಳನ್ನಾಗಲೀ, ಅಧಿಕಾರಿಗಳನ್ನಾಗಲೀ ದ್ವೇಷಿಸಲಿಲ್ಲ. ಹಾಗಾಗಿಯೇ ಖದೀಮ ಮಂತ್ರಿಗಳು ಕೂಡ ಲಂಕೇಶ್ ಪತ್ರಿಕೆಯನ್ನು ಕದ್ದು ಗಂಭೀರವಾಗಿ ಓದುತ್ತಿದ್ದರು. ಒಂದು ಸಂದರ್ಭದಲ್ಲಿ ಮುಖ್ಯಮಂತ್ರಿ ಆಯ್ಕೆಯಂತಹ ಬಹಳ ದೊಡ್ಡ ಜವಾಬ್ದಾರಿಯನ್ನು ಲಂಕೇಶ್ ಮತ್ತು ಖಾದ್ರಿ ಶಾಮಣ್ಣನವರಿಗೆ ವಹಿಸಲಾಯಿತು. ಲಂಕೇಶರದೇ ಒಂದು ಅಮೂಲ್ಯವಾದ ಮಾತಿದೆ. ಒಬ್ಬ ವ್ಯಕ್ತಿ ಒಳ್ಳೆಯವನಿರಲಿ ಅಥವಾ ಕೆಟ್ಟವನಿರಲಿ, ಪ್ರತಿಯೊಬ್ಬನಲ್ಲಿಯೂ ಸತ್ಯದ ಹಸಿವಿರುತ್ತದೆ. ಒಬ್ಬ ಭ್ರಷ್ಟನನ್ನು ಹೊಗಳಿದರೆ ಆಳದಲ್ಲಿ ಹೊಗಳಿದವನ ಬಗ್ಗೆ ಆ ಭ್ರಷ್ಟನಿಗೇ ವಿಶ್ವಾಸ ಮೂಡುವುದಿಲ್ಲ. ಹಾಗಾಗಿ ಪತ್ರಕರ್ತ ಸತ್ಯವನ್ನೇ ಬರೆಯಬೇಕು ಎಂದು ಅವರು ಹೇಳುತ್ತಿದ್ದರು.
ಅಮೀನಮಟ್ಟು ಅವರ ಅಂಕಣಗಳನ್ನು ಓದುವಾಗ ನನಗೆ ಲಂಕೇಶರ ಈ ಮಾತುಗಳು ನೆನಪಾಗುತ್ತವೆ.
ಕಾಂಗ್ರೇಸ್ಸಿನ ಸೋಲಿನ ಕಾರಣಗಳನ್ನು ವಿಶ್ಲೇಷಿಸಿ ಕಾಂಗ್ರೇಸ್ ನಾಯಕರನ್ನು ಟೀಕಿಸಿದರೆ ಮುಂಜಾನೆ ಪ್ರಜಾವಾಣಿಯ ಈ ಅಂಕಣವನ್ನು ಓದಿ ಮಲ್ಲಿಕಾರ್ಜುನ ಖರ್ಗೆ, ಜನಾರ್ಧನ ಪೂಜಾರಿ, ಸುದರ್ಶನ್, ದಿನೇಶ್ ಅವರಿಗೆ ದೂರವಾಣಿ ಮಾಡಿ ತಮ್ಮ ಸಹಮತ ಸೂಚಿಸುತ್ತಾರೆ. ಬಿ.ಜೆ.ಪಿ ಬಗ್ಗೆ ಬರೆದರೆ ಸುರೇಶ್ ಕುಮಾರ್ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಆರೆಸ್ಸಿಸ್ಸಿನ ವೈರುಧ್ಯಗಳ ಬಗ್ಗೆ ಬರೆದರೆ ಧನಂಜಯ ಕುಮಾರ್ ದೆಹಲಿಯಿಂದ ಫೋನ್ ಮಾಡುತ್ತಾರೆ. ಜನತಾzಳ ತನ್ನ ಚುನಾವಣಾ ಜಾಹಿರಾತಿನಲ್ಲಿ ದಿನೇಶ್ ಅವರ ಅಂಕಣಗಳನ್ನು ಬಳಸಿಕೊಳ್ಳುತ್ತದೆ. (ಆದರೆ ತನ್ನ ಬಗೆಗಿನ ಟೀಕೆಗಳನ್ನು ಬಿಟ್ಟು ಕೇವಲ ತನಗೆ ಸಹಕಾರಿಯಾದುದನ್ನು ಮಾತ್ರ ಬಳಸಿಕೊಳ್ಳುತ್ತದೆ ಎನ್ನುವುದೂ ಸತ್ಯ!.)
ಪಕ್ಷ ಅಥವಾ ಸಂಘ ಸಂಸ್ಥೆಗಳ ನಾಯಕರಿಗೇ ದಿನೇಶ್ ಬರೆದದ್ದು ಒಪ್ಪಿತವೆನಿಸುವಾಗ ಈ ಅಂಕಣ ಓದುವ ಈ ಪಕ್ಷಗಳ ಲಕ್ಷಾಂತರ ಕಾರ್ಯಕರ್ತರು ಆರೋಗ್ಯಕರ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾರೆ ಎನ್ನುವುದನ್ನು ಸುಲಭವಾಗಿ ಊಹಿಸಬಹುದು. ನಾನಂತೂ ಲಂಕೇಶರ ನಂತರ ಕರ್ನಾಟಕದಲ್ಲಿ ರಾಜಕೀಯ ಪ್ರಜ್ಷೆಯನ್ನು ಬೆಳೆಸಿದ ಪತ್ರಕರ್ತನನ್ನಾಗಿ ದಿನೇಶ್ ಅಮೀನ್ ಮಟ್ಟು ಅವರನ್ನು ಗುರುತಿಸುತ್ತೇನೆ. ಡಾ.ರಹಮತ್ ತರೀಕೆರೆ ಅವರು ಅಮೀನ್ ಮಟ್ಟು ಅವರನ್ನು ರಾಜಕೀಯ ಚಿಂತಕ ಎಂದು ಕರೆದಿದ್ದು ಸರಿಯಾಗಿಯೇ ಇದೆ. ಇದನ್ನು ಕೊಂಚ ಮುಂದುವರೆಸಿ ದಿನೇಶ್ ಅಮೀನ ಮಟ್ಟು ಅವರನ್ನು ಕರ್ನಾಟಕದ ರಾಜಕೀಯ ವಿವೇಕ ಎಂದೂ ಗುರುತಿಸಬಹುದು ಎನಿಸುತ್ತದೆ.
ಪಶ್ಚಿಮ ಬಂಗಾಳÀ,ಉತ್ತರ ಪ್ರದೇಶದ ರಾಜಕೀಯದ ಬಗ್ಗೆ ಬರೆಯುವಾಗ ಕೆಲವೊಮ್ಮೆ ಒಂದಷ್ಟು ವಿಷಯಗಳು ದಿನೇಶ್ ಅವರ ಅಂಕಣಗಳಲ್ಲಿ ಪುನರಾವರ್ತನೆ ಎನಿಸುವುದಿದೆ. ಉಳಿದಂತೆ ಪ್ರತಿ ವಾರವೂ ಓದುಗರ ನಿರೀಕ್ಷೆಯನ್ನು ಹುಸಿ ಮಾಡದ ಬರಹಗಳವು.
ಈ ದೇಶದ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಮತ್ತು ಈ ನಾಡಿನ ಅಭಿವೃಧ್ಧಿಗೆ ಯೋಜನೆಗಳನ್ನು ರೂಪಿಸಬೇಕಾದ ಬಹಳ ಜವಾಬ್ದಾರಿಯುತವಾದ ರಾಜ್ಯಸಭಾ ಸ್ಥಾನವನ್ನು ಸಚಿನ್ ತೆಂಡೂಲ್ಕರ್À ಅವರಂತಹ ಕ್ರೀಡಾಪಟುಗಳಿಗೆ ರೇಖಾಳಂತಹ ಸಿನಿಮಾನಟಿಯರಿಗೆ ನೀಡುವ ಅಸಂಬದ್ದತೆಯನ್ನು ದಿನೇಶ್ ಪ್ರಶ್ನಿಸುತ್ತಾರೆ.
ಅಣ್ಣಾ ಹಜಾರೆಯವರ ಹೋರಾಟದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತಲೇ, ಈ ಹೋರಾಟಕ್ಕೆ ಒಮ್ಮೆ ಪ್ರವಾಹದಂತೆ ಹರಿದುಬಂದ ಹೋರಾಟವನ್ನೂ ಫ್ಯಾಷನ್ ಮಾಡಿಕೊಂಡ ನಗರವಾಸೀ ಮಧ್ಯಮವರ್ಗದ ಯುವಜನಾಂಗದ ಬೆಂಬಲ, ಅಣ್ಣಾ ಹಜಾರೆ ತಂಡದ ಸದಸ್ಯರ ಇತಿಮಿತಿಗಳನ್ನು ಗುರುತಿಸುತ್ತಾರೆ.
ಪಶ್ಚಿಮ ಬಂಗಾಳದಲ್ಲಿ ಗೂಂಡಾಗಳಂತೆ ವರ್ತಿಸುತ್ತಿದ್ದ ಕಮ್ಯುನಿಸ್ಟ ಪಕ್ಷದ ಕಾರ್ಯಕರ್ತರ ನಡವಳಿಕೆಯ ಮೂಲಕವೇ ಅದು ಅಧಿಕಾರವಂಚಿತವಾಗುವುದನ್ನು ಮೊದಲೇ ಗುರುತಿಸಿದ್ದ ಅಮೀನಮಟ್ಟು ಅವರು ಇನ್ನೊಂದೆಡೆ ಯು.ಪಿ.ಎ ಮೈತ್ರಿಕೂಟದಲ್ಲಿ ಕಮ್ಯುನಿಸ್ಟ ಪಕ್ಷವಿಲ್ಲದೇ ಹೋಗಿದ್ದರೆ ಅವರು ಬ್ಯಾಂಕುಗಳ ಖಾಸಗೀಕರಣವನ್ನು ತಡೆಯದೇ ಹೋಗಿದ್ದರೆ ವಿಶ್ವದ ಬಹುತೇಕ ರಾಷ್ಟ್ರ್ತಗಳಲ್ಲಿ ಬ್ಯಾಂಕುಗಳು ದಿವಾಳಿಯಾದಂತೆ ಭಾರತದಲ್ಲಿಯೂ ಆಗಿ ದೇಶದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗುತ್ತಿತ್ತು ಎಂದು ಹೇಳುವುದನ್ನು ಮರೆಯುವುದಿಲ್ಲ.
ನಾರಾಯಣ ಗುರು, ಜ್ಯೋತಿ ಬಾ ಪುಲೆ, ಬಗ್ಗೆ ಅಮೀನಮಟ್ಟು ಮತ್ತೆ ಮತ್ತೆ ಬರೆದಿದ್ದಾರೆ. ದೇವರಾಜ ಅರಸು ಅವರನ್ನು ತುಂಬ ಕ್ರಿಟಿಕಲ್ ಆಗಿ ನೋಡಿದ್ದಾರೆ. ಅಧಿಕಾರದಲ್ಲಿ ಉಳಿಯಲು ಅಂದೂ ಇಂದೂ ಅಗತ್ಯವೆನಿಸಿರುವ ಜಾತಿಯ ಬೆಂಬಲವಿಲ್ಲದಿದ್ದರೂ ತುರ್ತುಪರಿಸ್ಥಿತಿಯ ಸಂದರ್ಭವನ್ನೇ ಜಾಣ್ಮೆಯಿಂದ ಬಳಸಿಕೊಂಡು ಉಳುವವನೇ ಹೊಲದೊಡೆಯ ಎಂಬ ಕಾನೂನು ತಂದು ಈ ನಾಡಿನ ಚರಿತ್ರೆಯನ್ನೇ ಬದಲಾಯಿಸಿದ ಅರಸು ಬಗ್ಗೆ ದಿನೇಶ್ ಅವರಿಗಿರುವ ವಿಶೇಷ ಗೌರವ ವೈಯಕ್ತಿಕವಾದದ್ದಲ್ಲ. ಅಪರೂಪಕ್ಕೆ ಸರ್ಕಾರ ಅರ್ಹವಾದವರನ್ನು ತಾನು ನೀಡುವ ಪ್ರಶಸ್ತಿಗಳಿಗೆ ಆಯ್ಕೆ ಮಾಡುತ್ತದೆ. ಸರ್ಕಾರ ದಿನೇಶ್ ಅಮೀನ್ ಮಟ್ಟು ಅವರಿಗೆ ದೇವರಾಜ ಅರಸು ಪ್ರಶಸ್ತಿಯನ್ನು ನೀಡುವ ಮೂಲಕ ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ.
ದಿನೇಶ್ ಅವರು ತಮ್ಮ ಅಂಕಣಗಳಲ್ಲಿ ಕೊಡುವ ಲೋಕಸಭೆಯ ಯವುದಾವುದೋ ಸಂದರ್ಭದ ಸಣ್ಣ ಸಣ್ಣ ಮಾಹಿತಿ , ಅಗಾಧ ಅಂಕಿಸಂಖ್ಯೆಗಳು ಅಚ್ಚರಿ ಮೂಡಿಸುತ್ತವೆ.
ಮಾರ್ನಿಂಗ್ ಮಿಸ್ಟ ಸ್ಟೇ ಹೋಮ್‍ನಲ್ಲಿ ಹುಟ್ಟು ಹಬ್ಬದ ಮೇಲಾದ ದಾಳಿ ಪ್ರಕರಣವನ್ನು , ಮೊನ್ನೆ ಬೆಂಗಳೂರಿನಲ್ಲಿ ಸುಳ್ಳುವದಂತಿಯಿಂದ ಆತಂಕಗೊಂಡು ಈಶಾನ್ಯ ರಾಜ್ಯಗಳ ಜನರ ಸಾಮೂಹಿಕ ವಲಸೆ ಪ್ರಕರಣವನ್ನೋ ಅಮೀನ್ ಮಟ್ಟು ವಿಶ್ಲೇಷಿಸಿದ ರೀತಿ ಅನನ್ಯವಾದುದು.
ಅಂಕಣಕ್ಕೆ ಆಯ್ದುಕೊಳ್ಳುವ ಸಮಕಾಲೀನ ವಸ್ತು, ಸರಳವಾದ ಭಾಷೆ, ಯಾವುದರ ಬಗ್ಗೆಯೂ ಸಿನಿಕತೆಯಿಲ್ಲದ ,ಪೂರ್ವಾಗ್ರಹವಿಲ್ಲದ ಜೀವನಪ್ರೀತಿ, ಯಾವುದೇ ಸ್ಥಾಪಿತ ಸಿದ್ಧಾಂತಗಳಿಗೆ ತೆತ್ತುಕೊಳ್ಳದ ಮುಕ್ತಮನಸ್ಸು, ರಾಜಕೀಯ,ಸಾಮಾಜಿಕ, ಆರ್ಥಿಕ ನೆಲೆಯಿಂದ ನೋಡುವ ಬಹುಮುಖಿ ವಿಧಾನ, ಮತ್ತು ಇದರಲ್ಲಿ ಅಂತರ್ಗತವಾಗಿರುವ ಜನಹಿತ.. ಇವು ದಿನೇಶ್ ಅವರ ಪ್ರತಿಯೊಂದು ಅಂಕಣದಲ್ಲೂ ಎದ್ದುಕಾಣುವ ಗುಣಗಳು.
ಜಾಗತೀಕರಣಕ್ಕೆ ತೆರೆದುಕೊಂಡ ನಂತರದಲ್ಲಿ ಈ ನಾಡಿನ ಪ್ರತಿಯೊಂದು ಕ್ಷೇತ್ರವೂ ಭ್ರಷ್ಟಗೊಂಡಿದೆ.ರಾಜಕೀಯ ಕ್ಷೇತ್ರ ಮಾತ್ರವಲ್ಲ, ರಾಜಕಾರಣಿಗಳು ಭ್ರಷ್ಟಗೊಂಡಿದ್ದಾರೆ ಎಂದು ಕೂಗುವ ಹೋರಾಟಗಾರರೂ ಭ್ರಷ್ಟಗೊಂಡಿದ್ದಾರೆ. ಸಹಜವಾಗಿಯೇ ಪತ್ರಿಕೋಧ್ಯಮವೂ ಇದಕ್ಕೆ ಹೊರತಾಗಿಲ್ಲ. ಇದನ್ನು ಸಹಜವಾಗಿ ತಮ್ಮ ಅಂಕಣವೊಂದರಲ್ಲಿ ಅಮೀನ್ ಮಟ್ಟು ಅವರು ಬರೆದಿದ್ದಾರೆ. ಹೀಗಿರುವಾಗಲೂ ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿರುವ ಅನೇಕ ಪತ್ರಕರ್ತರಿದ್ದಾರೆ. ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು ಹೀಗೆ ಒಮ್ಮೆ ಪತ್ರಕರ್ತರ ಬಗ್ಗೆ ಮಾತನಾಡುತ್ತಾ ಈಗಲೂ ಬಿ.ಟಿ.ಎಸ್ ಬಸ್ ನಲ್ಲಿ ಓಡಾಡುವ ಪತ್ರಕರ್ತರೆಂದರೆ ಅಮೀನಮಟ್ಟು ಎಂದಿದ್ದರು. ಬರವಣಿಗೆ, ಅಧ್ಯಯನ, ಚಿಂತನೆ,ಜನಪರ ಕಾಳಜಿ, ನಿಷ್ಪಕ್ಷಪಾತತನ, ಎಲ್ಲವೂ ಅಮೀನಮಟ್ಟು ಅವರ ಅಂಕಣಗಳ ಶಕ್ತಿ. ಆದರೆ ಈ ಎಲ್ಲಾ ಶಕ್ತಿಗಳಿಗಿಂತ ದೊಡ್ಡ ಶಕ್ತಿ ಅವರ ಪ್ರಾಮಾಣಿಕತೆ ಮತ್ತು ನೈತಿಕತೆ.
ನಾನು ಅಮೀನ್ ಮಟ್ಟು ಅವರ ಅಂಕಣಗಳನ್ನು ಓದಿ ಫೋನ್ ಮಾಡಿ ಕೆಲವು ತಕರಾರುಗಳನ್ನು ಎತ್ತುತ್ತಿರುತ್ತೇನೆ. ‘ಗುಜರಾತಿನಲ್ಲಿ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಬಿ.ಜೆ.ಪಿ ಸೋಲಲು ಈ ಬಾರಿ ಹಿಂದಿನಂತೆ ಕೋಮುಗಲಭೆಗಳು ಇಲ್ಲದೆ ಶಾಂತ ಸ್ಥಿತಿ ಇದ್ದುದೂ ಕಾರಣ ಎಂದು ಬರೆದಿದ್ದೀರಿ, ಇದರರ್ಥ ಚುನಾವಣೆಗಳಲ್ಲಿ ಗೆಲ್ಲಲು ಕೋಮುಗಲಭೆ ನಡೆಸುವುದನ್ನು ಒಪ್ಪಿತ ಎಂಬ ಸಂದೇಶ ನೀಡಿದಂತಾಗುವುದಿಲ್ಲವೇ’ ಎಂದು ಕೇಳಿದರೆ, ‘ನಾನು ಪತ್ರಕರ್ತ, ನಿಮ್ಮ ಹಾಗೆ ಆ್ಯಕ್ಟಿವಿಸ್ಟ್ ಅಲ್ಲ’ ಎಂದು ನಕ್ಕರು. ಹಾಗೆ ನೋಡಿದರೆ ಕುವೆಂಪು ಸಾಹಿತಿ, ಲಂಕೇಶ್ ಪತ್ರಕರ್ತ, ಇವರಾರೂ ಆಕ್ಟಿವಿಸ್ಟ್‍ಗಳಲ್ಲ. ಆದರೆ ಕರ್ನಾಟಕದ ಬದುಕಿನಲ್ಲಿ ಇವರು ಮೂಡಿಸಿದ ವೈಚಾರಿಕ ಕ್ರಾಂತಿ ಮತ್ತು ರಾಜಕೀಯ ಪ್ರಜ್ಞೆ ಯಾವುದೇ ದೊಡ್ಡ ಆಕ್ಟಿವಿಸ್ಟ್ ಸಾಧನೆಯಷ್ಟೇ ದೊಡ್ಡದು ಅಥವಾ ಅದಕ್ಕಿಂತ ಮಿಗಿಲು. ಈ ಪರಂಪರೆಗೆ ಸೇರಬೇಕಾದ ಮತ್ತೊಂದು ಹೆಸರು ದಿನೇಶ್ ಅಮೀನ್ ಮಟ್ಟು ಅವರದು ಎಂದು ನಾನಂತೂ ಭಾವಿಸುತ್ತೇನೆ.

  • ಸರ್ಜಾಶಂಕರ್ ಹರಳಿಮಠ
    (ಹಳೆಲೇಖನ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *