

ಮಲೆನಾಡು ಭಾಗದ ಕಾಡ ಬೆಳೆ ಕಾಡ ಹಾಗಲ ಅಥವಾ ಮಾಡಹಾಗಲ ಈಗ ಲಾಭದಾಯಕ ಬೆಳೆಯಾಗಿ ನಾಡಿಗೆ ಬರುತ್ತಿದೆ. ಕೆಲವೇ ವರ್ಷಗಳ ಹಿಂದೆ ಹೆಚ್ಚಿನ ಔಷಧಿಗುಣ, ಪೌಷ್ಠಿಕಾಂಶಗಳ ಆಗರ ಎನ್ನಲಾಗುತ್ತಿದ್ದ ಮಾಡ ಹಾಗಲವನ್ನು ಕಾಡಿಂದ ಕೊಯ್ದು ತರಕಾರಿ, ಆಹಾರವಾಗಿ ಬಳಸುತಿದ್ದರು. ಆದರೆ ಇದೇ ಕಾಡ ಹಾಗಲ ಈಗ ರೈತನ ಕೃಷಿಭೂಮಿಯ ಬೆಳೆ, ಮಾರುಕಟ್ಟೆಯ ದುಬಾರಿ ತರಕಾರಿಯಾಗಿ ಗಮನ ಸೆಳೆಯುತ್ತಿದೆ.
ಕೆಲವೇ ವರ್ಷಗಳ ಹಿಂದೆ ಮಾರುಕಟ್ಟೆಮೌಲ್ಯವಿಲ್ಲದ ಈ ಮಾಡ ಹಾಗಲವನ್ನು ಕಾಡಿನಲ್ಲಿ ಹುಡುಕಿ ತಂದು ಬಳಸಿ ಖುಷಿಪಡುತ್ತಿದ್ದ ಮಲೆನಾಡಿನ ಜನತೆ ಈಗ ಈ ತರಕಾರಿಗೆ 200-300 ಬೆಲೆ ನೀಡಬೇಕಾಗಿ ಬಂದಿರುವುದು ಅದಕ್ಕೆ ಬಂದಿರುವ ಮಾರುಕಟ್ಟೆ ಮೌಲ್ಯಕ್ಕೆ ಸಾಕ್ಷಿ. ಅಡಿಗೆಯಲ್ಲಿ ಚಟ್ನಿ, ಪಲ್ಲೆ,ಗೊಜ್ಜಾಗಿ ಬಳಕೆಯಾಗುತಿದ್ದ ಈ ಕಾಡ ಹಾಗಲ ಈಗ ಇನ್ನಷ್ಟು ವಿಭಿನ್ನ ಖಾದ್ಯವಾಗಿ ಗಮನ ಸೆಳೆಯುತ್ತಿದೆ.
ಮನೆಯಂಗಳ, ಬಯಲುಪ್ರದೇಶ, ತಾರಸಿಗಳಲ್ಲಿ ನೆಟ್ಟು ಬೆಳೆಸಬಹುದಾದ ಈ ಬಹುಉಪಯೋಗಿ ತರಕಾರಿ60 ರಿಂದ 70 ದಿವಸಗಳ ಬೆಳೆಯಾಗಿದ್ದು ವರ್ಷಕ್ಕೆ ಮೂರ್ನಾಲ್ಕಕ್ಕೂ ಹೆಚ್ಚುಬಾರಿ ನಿರಂತರವಾಗಿ 5-6 ವರ್ಷಗಳ ವರೆಗೆ ಒಂದೇ ಬಳ್ಳಿಯಲ್ಲಿ ಕಾಯಿಕೊಡುವ ಕಾಮಧೇನು. ಈ ಮಾಡ ಹಾಗಲ ಈಗ ರೈತರಿಗೆ ಲಾಭದಾಯಕ ಬೆಳೆಯಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಕೃಷಿ ತಜ್ಞರು.
ಟೀಸಲ್ಗೌಡ್ ವೈಜ್ಞಾನಿಕ ಹೆಸರಿನ ಮಾಡಹಾಗಲ ಮೂಲತ: ಬರ್ಮಾ ದೇಶದ್ದು, ಮಲೆನಾಡಿನ ಬಯಲಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಂಡು ಹೂ,ಕಾಯಿ ಬಿಟ್ಟು ಮರೆಯಾಗುವ ಸಸ್ಯ ಪಶ್ಚಿಮಬಂಗಾಲ, ಓರಿಸ್ಸಾ, ತ್ರಿಪುರಾ, ಅಂಡಮಾನ್‍ಗಳ ವಾಣಿಜ್ಯ ಬೆಳೆ.
ಆರೋಗ್ಯಕಾರಿ ಪೌಷ್ಠಿಕಾಂಶ ಗಳ ವಿಶೇಶತೆಯ ಈ ಕಾಡಹಾಗಲದ ಬಗ್ಗೆ ಮಡಿಕೇರಿಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲೂ ಅಧ್ಯಯನ, ಪ್ರಾಯೋಗಿಕತೆ ನಡೆದಿದೆ. ಮಾಡಹಾಗಲದ ವಿಶೇಶ, ಮಾರುಕಟ್ಟೆ, ಬೆಳೆಯುವ ರೀತಿಗಳ ಮಾಹಿತಿಗಾಗಿ 7483282402,9449636569 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಪ್ರಾಯೋಗಿಕ ಮಾಧ್ಯಮ ನಿರ್ಬಂಧ ಬಿ.ಜೆ.ಪಿ.ಪ್ಯಾಸಿಸ್ಟ್ ನೀತಿ ಮತ್ತು ಬಹುಸಂಖ್ಯಾತ ವಿರೋಧಿ ನೀತಿಪ್ರತಿಬಿಂಬ
ರಾಜ್ಯ ವಿಧಾನಸಭೆಯ ಕಲಾಪಕ್ಕೆ ಖಾಸಗಿ ದೃಶ್ಯಮಾಧ್ಯಮಗಳ ನಿಷೇಧ ಮತ್ತು ಪ್ರವಾಹ ಪರಿಹಾರದ ಬಗ್ಗೆ ಚರ್ಚೆಗೆ ಅವಕಾಶ ನೀಡದ ರಾಜ್ಯ ವಿಧಾನಸಭಾ ಅಧ್ಯಕ್ಷ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆಯವರ ಪಕ್ಷಪಾತದ ನಡೆ ಬಗ್ಗೆ ಸಾರ್ವಜನಿಕ ವಲಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ. ಶಾಸನ ಸಭೆಯಲ್ಲಿ ಜನಪ್ರತಿನಿಧಿಗಳು ಏನು? ಮಾಡುತ್ತಾರೆ. ಹ್ಯಾಗೆ ವರ್ತಿಸುತ್ತಾರೆ ಎಂದು ತಿಳಿಯುವ ಹಕ್ಕು ಮತದಾರ ಸಾರ್ವಜನಿಕರು ಅಥವಾ ಜನಸಾಮಾನ್ಯರಿಗಿದೆ. ಹಿಂದೆಲ್ಲಾ ಮಾಧ್ಯಮಸ್ವಾತಂತ್ರ್ಯ, ಶಾಸಕರ ಹಕ್ಕು, ಹಕ್ಕುಚ್ಯುತಿ,ಜನಪ್ರತಿನಿಧಿಗಳ ತೇಜೋವಧೆ, ಮಾಧ್ಯಮಗಳ ಮಿತಿಗಳ ಬಗ್ಗೆ ಅನೇಕ ಬಾರಿ ವಿಧಾನಸಭೆಯಲ್ಲಿ ಚರ್ಚೆಯಾಗಿದೆ.


