ಮರೆತ ಕರನಿರಾಕರಣೆಯ ವೀರ- ಉಳುವರೆ ರಾಮದಾಸ ಗೌಡ

“ನಾನು ಕರಮರಕರ್‍ರವರಿಗೆ ಭಾಷೆ ಕೊಟ್ಟಿದ್ದೇನೆ. ನಾನು ಸತ್ತು ಹೋದೆ ಅಂತಾ ಅವರಿಗೆ ಕೊಟ್ಟ ಭಾಷೆ ತಪ್ಪಿಸಬೇಡಿ. ಹಾಗೇನಾದ್ರೂ ನಾನು ಸತ್ರೂ ಮೇಲೆ ನರಳೂದು ತಪ್ಪೂದಿಲ್ಲ. ಮಾತು ತಪ್ಪಿಸಬೇಡಿ.” ಇನ್ನೇನು ಕೊನೆಯ ಮಾತೆಂಬಂತೆ ಅಪ್ಪ ತನ್ನ ಮಕ್ಕಳಿಗೆ ಹೇಳುತ್ತಿದ್ದ. ಪಕ್ಕದಲ್ಲೇ ಇದ್ದ ಹೆಂಡತಿಯು ಅದಕ್ಕೆ ಅನುಮೋದನೆ ಎಂಬಂತೆ ಕುಳಿತಿದ್ದಳು.
ಮಕ್ಕಳಂತೂ ಅಪ್ಪನ ಮಾತಿಗೆ ಎದುರಾಡುವವರೇ ಅಲ್ಲ. ಅಪ್ಪ ಹೇಳುವುದಕ್ಕೂ ಮೊದಲೇ ಅಪ್ಪನ ಕೊನೆಯ ಆಸೆ ಇಡೇರಿಸುವುದು ತಮ್ಮ ಕೆಲಸ ಎಂಬಕರ್ತವ್ಯ ಪ್ರಜ್ಞೆ ಅವರಲ್ಲಿ ತುಂಬಿತ್ತು. ಆದರೆ ಆ ಅಪ್ಪ ಈಡೇರಿಸುವಂತೆ ಕೇಳಿದ್ದು ಅಂತಿಂತಹ ಆಸೆಯಲ್ಲ. ಅಪ್ಪನ ಆಸೆಯನ್ನು ಈಡೇರಿಸುವುದಾದಲ್ಲಿ ಆ ಮಕ್ಕಳು ತಮ್ಮ ಆಸ್ತಿ ಪಾಸ್ತಿಯನ್ನೆಲ್ಲ ಬಿಟ್ಟು ಕೊಡಬೇಕಾಗುತ್ತಿತ್ತು.
ಕೊನೆಗೆ ಆ ಮಕ್ಕಳಿಗೆ ವಾಸವಾಗಿರಲೊಂದು ಮನೆಯೂ ಉಳಿಯುತ್ತಿರಲಿಲ್ಲ. ಆದರೆ ಆ ಮಗ ಹೆಸರಿಗೆ ತಕ್ಕಂತೆ ಪಿತೃಭಕ್ತಿಯುಳ್ಳವನು. ತಂದೆಯ ಮಾತನ್ನು ಈಡೇರಿಸಲು Àಆ ರಾಮ ರಾಜ್ಯವನ್ನೆಲ್ಲ ಬಿಟ್ಟು ಕಾಡಿಗೆ ಹೋದಂತೆ ಈ ರಾಮದಾಸ ಅಪ್ಪನ ಒಂದೇ ಒಂದು ಕೊನೆಯ ಮಾತಿಗೆ ಬದ್ಧನಾಗಿÀ ತನ್ನೆಲ್ಲ ಆಸ್ತಿಯನ್ನು ಬಿಟ್ಟುಕೊಡಲು ಸಿದ್ಧನಾದ.
ಅಪ್ಪ ನಿಕ್ಷರಕುಕ್ಷಿ. ಓದು ಬರೆಹ ಬರದ ಹಳ್ಳಿ ಗಮಾರ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿಗೂ ಹೊರ ಪ್ರಪಂಚಕ್ಕೆ ತೆರೆದು ಕೊಳ್ಳುವುದಕ್ಕೆ ಹಿಂದೆ ಮುಂದೆ ನೋಡುತ್ತಿರುವ ಜನಾಂಗವೆಂದರೆ ಅದು ಹಾಲಕ್ಕಿ ಒಕ್ಕಲು. ಇಂದಿಗೂ ಪ್ರಪಂಚದ ಮೋಸ ವಂಚನೆಯನ್ನರಿಯದೇ ಮುಗ್ಧವಾಗಿ ವಾಸಿಸುತ್ತಿರುವ ಇವರು ಆ ಕಾಲದಲ್ಲಿ ಅದೆಷ್ಟು ಮುಗ್ಧರಾಗಿದ್ದರೋ ಯೋಚಿಸಲೂ ಸಾಧ್ಯವಿಲ್ಲ.
ಅಂತಹ ಮುಗ್ಧ ಸಮುದಾಯಕ್ಕೆ ಸೇರಿದ ಹೊಲೆಯಪ್ಪ ಗೌಡರ ಹಾಗೂ ಮಗ ರಾಮದಾಸ ಗೌಡರ ಕಥೆ ಇದು. ಅದು ಸ್ವಾತಂತ್ರ್ಯ ಹೋರಾಟದ ಕಾಲ. ಅಪ್ಪಟ ದೇಶಾಭಿಮಾನಿಯಾಗಿದ್ದ ಹೊಲೆಯಪ್ಪ ಗೌಡರು ಆ ಭಾಗದ ಸುತ್ತ ಮುತ್ತಲ ಪ್ರಾಂತ್ಯದಲ್ಲಿ ಒಂದಿಷ್ಟು ಭೂಮಿ ಕಾಣಿ ಇದ್ದವರು. ಯಾಕೆಂದರೆ ಅಂದು ಹಾಲಕ್ಕಿ ಒಕ್ಕಲಿಗರಲ್ಲಿ ಸ್ವಂತ ಭೂಮಿ ಇದ್ದವರೇ ಕಡಿಮೆ. ಸುತ್ತಮುತ್ತಲಿನ ನಾಡವರ, ಕೊಂಕಣಿಗಳ ಜಮೀನಿನಲ್ಲಿ ಉಳುಮೆ ಮಾಡಿ ಗೇಣಿ ಭತ್ತ ಬೆಳೆದು ಜೀವನ ಸಾಗಿಸುವವರೇ ಅಧಿಕ. ಆದರೆ ಅಂಕೋಲಾದ ಉಳುವರೆ ಎಂಬ ಗಂಗಾನದಿಯ ತಟದಲ್ಲಿರುವ ಸುಂದರವಾದ ಊರಲ್ಲಿ ವಾಸವಾಗಿದ್ದ ಒಂದಿಷ್ಟು ಹಾಲಕ್ಕಿ ಒಕ್ಕಲು ಮನೆತನದವರಿಗೆ ಸ್ವಂತ ಭೂಮಿ ಇತ್ತು. ಅದರಲ್ಲೇ ಹೇಗೋ ಉತ್ತಿ ಬೆಳೆದು ಜೀವನ ಸಾಗಿಸುತ್ತಿದ್ದಾಗಲೇ ಸ್ವಾತಂತ್ರ್ಯದ ಹೋರಾಟ ಮುಗಿಲು ಮುಟ್ಟಿತ್ತು. ಸುತ್ತಲಿನ ನಾಡವರ ಜನಾಂಗದಲ್ಲಿ ಸ್ವಾತಂತ್ರ್ಯದ ಕಿಚ್ಚು ಪ್ರಜ್ವಲಿಸುತ್ತ ಸಮೀಪದ ಹಾಲಕ್ಕಿ ಒಕ್ಕಲು ಜನಾಂಗವನ್ನು ಆ ಕಿಚ್ಚಿನೊಳಗೆ ಪ್ರಜ್ವಲಿಸುವಂತೆ ಮಾಡಿತ್ತು. ಹೀಗಾಗಿ ಬಹಳಷ್ಟು ಹಾಲಕ್ಕಿ ಒಕ್ಕಲಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಅವರಲ್ಲಿ ರಾಮದಾಸ ಗೌಡರ ಅಪ್ಪ ಹೊಲಿಯಪ್ಪ ಗೌಡರೂ ಒಬ್ಬರು.
ಅದು ಕರ ನಿರಾಕರಣೆಯ ಸಮಯ. ಗಾಂಧಿಜಿಯವರು ದೇಶದ ರೈತರು ಯಾರೂ ಬ್ರಿಟೀಷರಿಗೆ ಕರ ನೀಡದಂತೆ ಕರೆ ನೀಡಿದ್ದರು. ಅದÀರಂತೆ ಕರ್ನಾಟಕದ ಬಾರ್ಡೋಲಿ ಎಂದೇ ಹೆಸರು ಪಡೆದ ಅಂಕೋಲೆಯವರು ಕರನಿರಾಕರಣೆಯ ಸಂಕಲ್ಪ ಕೈಗೊಂಡರು. ಹೆಚ್ಚಿನ ಭೂಮಿಯಿದ್ದ ನಾಡವರು ಗಾಂಧೀಜಿಯವರ ಮಾತಿಗೆ ಬದ್ಧರಾಗಿ ತೆರಿಗೆಯನ್ನು ಕಟ್ಟದೇ ಕರನಿರಾಕರಣೆ ಮಾಡಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಳೆದು ಕೊಂಡಾಗ ಅದರಿಂದ ಪ್ರೇರಿತರಾದ ಕೆಲವು ಚಿಕ್ಕ ಪುಟ್ಟ ರೈತರೂ ತಮ್ಮದೂ ಒಂದು ಅಳಿಲು ಸೇವೆ ಸಲ್ಲಿಸಿದರು.
ಅದು ಸುಮಾರು 1932ರ ಸಮಯ. ಅಂಕೋಲಾ ತಾಲೂಕಿನ ಫಲವತ್ತಾದ ಹಳ್ಳಿ ಎಂದೇ ಪರಿಗಣಿಸಲ್ಪಟ್ಟಿದ್ದ ಉಳುವರೆ ಎಂಬ ಗ್ರಾಮ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಸಿದ್ಧಿ ಪಡೆದಿತ್ತು. ಅಂಕೋಲಾ ತಾಲೂಕಿನಲ್ಲಿ ತೀರ್ವೆ ಕೊಡದ ಭೂಮಿಯನ್ನೆಲ್ಲ ಹರಾಜು ಮಾಡಿದಾಗ ಬಹದ್ದೂರ್‍ಖಾನ್ ಎಂಬಾತ ಈ ಭೂಮಿಗೆಲ್ಲ ತೀರ್ವೆ (ಕರ) ತುಂಬಿ ಅದನ್ನೆಲ್ಲ ತನ್ನ ಹೆಸರಿಗೆ ದಸ್ತಾವೇಜು ಮಾಡಿಸಿಕೊಂಡು ಬಿಟ್ಟಿದ್ದ. ಉತ್ತು ಬಿತ್ತಿದ್ದ ಹೊಲವೆಲ್ಲ ಆತನ ಪಾಲಾಗಿತ್ತು. ಆದರೆ ಆತನಿಗೆ ಬಲಾಢ್ಯರಾಗಿದ್ದ ನಾಡವರ ಗದ್ದೆಗಳನ್ನು ಕೊಯ್ಲ ಮಾಡಿಸಿಕೊಂಡು ಭತ್ತ ತುಂಬಿಸಿಕೊಂಡು ಹೋಗುವಷ್ಟು ಧೈರ್ಯವಿರಲಿಲ್ಲ. ಆದರೆ ಮುಗ್ಧರಾಗಿದ್ದ ಹಾಲಕ್ಕಿ ಒಕ್ಕಲಿಗರನ್ನು ಯಾಮಾರಿಸಿ ಅವರ ಗದ್ದೆಯ ಬೆಳೆಯನ್ನೆಲ್ಲ ತನ್ನ ತಾಬಾ ಮಾಡಿಕೊಳ್ಳಬಹುದೆಂಬ ಕನಸು ಕಂಡಿದ್ದ. ಅದರಲ್ಲಿ ರಾಮದಾಸ ಗೌಡರ ಹನ್ನೆರಡು ಕುಟುಂಬಗಳ ಗದ್ದೆಗಳೇ ಹೆಚ್ಚು.
ತಾರಿಯ ಲಕ್ಷ್ಮಣ ಶೆಟ್ಟಿ ಎಂಬಾತನನ್ನು ಕರೆದುಕೊಂಡು ರಾಮದಾಸ ಗೌಡರ ಮನೆಗೆ ಹೋಗಿ ಕರ ತುಂಬುವಂತೆ ಒತ್ತಾಯಿಸಿದ. ಅವರು ಒಪ್ಪದಿದ್ದಾಗ ಅವರ ಮನೆಯಲ್ಲಿ ಶೇಖರಿಸಿಟ್ಟಿದ್ದ ಅಕ್ಕಿ, ಸಾಂಬಾರು ಪದಾರ್ಥಗಳಿಂದ ಹಿಡಿದು ಉಪ್ಪಿನವರೆಗೂ ವಶಪಡಿಸಿಕೊಂಡು ಮನೆಯಿಂದ ಹೊರಹಾಕಲಾಯಿತು.
ಹಾಗೆ ಮಾಡಿದರೆ ಭಯ ಪಟ್ಟು ಸರಕಾರಕ್ಕೆ ತೀರ್ವೆ ತುಂಬಬಹುದೆಂಬ ದೂರಾಲೋಚನೆ. ಆದರೆ ರಾಮದಾಸ ಗೌಡರ ನೇತೃತ್ವದಲ್ಲಿ ಅಲ್ಲಿನ ಹಾಲಕ್ಕಿ ಗೌಡರು ಒಬ್ಬರೂ ತೆರಿಗೆ ತುಂಬಲು ಒಪ್ಪಲಿಲ್ಲ. ಹೀಗಾಗಿ ನಾಡವರ ವಿರುದ್ಧ ಅವರನ್ನು ಎತ್ತಿಕಟ್ಟಿ ಸಹಾಯ ಮಾಡುವ ಆಮಿಷ ಒಡ್ಡಲಾಯಿತು. ಆzರೆ ರಾಮದಾಸ ಗೌಡರ ಕುಟುಂಬದವರು ಅದ್ಯಾವ ಆಮಿಷಕ್ಕೂ ಒಳಗಾಗಲಿಲ್ಲ. ಹೀಗಾಗಿ ಅವರ ಗದ್ದೆಯನ್ನು ಕೊಯ್ಲ ಮಾಡಿಸಿಕೊಂಡು ಹೋಗಲೆಂದು ಬಹದ್ದೂರ್ ಖಾನನು ಒಂದಿಷ್ಟು ಆಳುಗಳೊಂದಿಗೆ ಪೋಲಿಸ್ ಕಾವಲಿನಲ್ಲಿ ಬಂದನು. ವಿಷಯ ತಿಳಿದ ಉಳುವರೆಯ ಸುತ್ತಮುತ್ತಲಿನ ಹಳ್ಳಿಗಳಾದ ಹಿರೇಗುತ್ತಿ, ಮಾದನಗೇರಿ, ಸಗಡಗೇರಿ, ತೊರ್ಕೆ, ಮೊಗಟಾ, ಮೊರಳ್ಳಿ, ಬರ್ಗಿ ಮೊರಬಾ ಮುಂತಾದ ಹಳ್ಳಿಗಳಿಂದ ಜನ ಗುಂಪುಗೂಡಿಕೊಂಡು ಆಸ್ಥಳಕ್ಕೆ ಆಗಮಿಸಿದರು. ತಾವು ಕಷ್ಟಪಟ್ಟು ಬೆಳೆದ ಭತ್ತ ಅವರ ಪಾಲಾಗುವುದನ್ನು ಸಹಿಸದ ಜನರು ಭತ್ತದ ಗದ್ದೆಗೆ ನಗ್ಗಿ ಬೆಳೆಯನ್ನು ನಾಶಪಡಿಸಿ ಭತ್ತವನ್ನು ಭೂಮಿಪಾಲು ಮಾಡಿದರು.
ನಂತರ ಕೆಲವು ದಿ£ಗಳುÀ ಕಳೆದ ಮೇಲೆ ಬೆಳೆದು ನಿಂತ ಕಬ್ಬಿನ ಬೆಳೆಯ ಮೇಲೆ ಕಣ್ಣಿಟ್ಟ ರಾವ್ ಬಹದ್ದೂರನು ಕಬ್ಬನ್ನು ಕಟಾವು ಮಾಡಿಸಿಕೊಳ್ಳಲೆಂದು ಕದ್ದು ಮುಚ್ಚಿ ಬಂದನು. ಆದರೆ ವಿಷಯ ತಿಳಿದ ರಾಮದಾಸ ಗೌಡರ ಮನೆಯವರು ತಾವೆ ನೀರುಣಿಸಿ ಬೆಳೆಸಿದ್ದ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿ ನಾಶಪಡಿಸಿ ಬ್ರಿಟೀಷರ ಪಾಲಾಗದಂತೆ ನೋಡಿಕೊಂಡು ತಮ್ಮ ದೇಶಭಕ್ತಿ ಮೆರೆದರು.
ಸುಮಾರು ಮುವತ್ತೆರಡು ಎಕರೆ ಭೂಮಿ ಹೊಂದಿ ಅನುಕೂಲಸ್ಥರಾಗಿದ್ದ ರಾಮದಾಸ ಗೌಡರ ಮನೆಯಲ್ಲಿ ತಿನ್ನುವುದಕ್ಕೆಂದು ಒಂದು ಕಾಳೂ ಇರಲಿಲ್ಲ. ಉಡಲು ಒಂದು ಹರಕು ಅಂಗಿಯೂ ಇರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸ್ಥಿತಿಯಲ್ಲಿಯೂ ‘ಬಹದ್ದೂರ್‍ಖಾನ ಟ್ಯಾಕ್ಸ್’ ಎಂದು ಪುಂಡುಗಂದಾಯವನ್ನು ಉಳುವರೆಯ ಮುಗ್ಧ ಹಾಲಕ್ಕಿಗಳ ಮೇಲೆ ಹೇರಿ ಮತ್ತಿಷ್ಟು ತೊಂದರೆ ಕೊಡಬೇಕೆಂದು ಬಹದ್ದೂರ್‍ಖಾನ ಯೋಚಿಸಿದ. ಆದರೆ ರಾಮದಾಸ ಗೌಡರು ಎದೆಗುಂದಲಿಲ್ಲ. ರಾಮದಾಸ ಗೌಡರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಕೂಡ ಘೋಷಿಸುವಷ್ಟು ಅವರು ಬ್ರಿಟೀಷರಿಗೆ ತಲೆನೋವಾದರು.
ಸ್ವಾತಂತ್ರ್ಯ ಹೋರಾಟದಲ್ಲಿ ಉಳುವರೆ ಎಂಬುದು ಎಂದಿಗೂ ಮರೆಯಬಾರದ ಹೆಸರು. ಗಂಗಾವಳಿ ನದಿಗುಂಟದ ಈ ಹಳ್ಳಿಯಲ್ಲಿ ಪೋಸ್ಟ ಆಫೀಸ್‍ಗೆ ಬೆಂಕಿ ಹಚ್ಚಿದ್ದು, ನದಿಯಲ್ಲಿ ಬ್ರಿಟಿಷ್ ಅಧಿಕಾರಿಗಳು ಕಳಿಸುತ್ತಿದ್ದ ದೊಡ್ಡ ಮರದ ನಾಟುಗಳನ್ನು ಹಿಡಿದು ಬೆಂಕಿ ಹಚ್ಚುವುದು, ತಾರು ಕಂಬಗಳನ್ನು ಸುಡುವುದು ಮುಂತಾದ ಕೆಲಸಕ್ಕೆ ಪ್ರಸಿದ್ಧಿ ಪಡೆದಿತ್ತು. ಅದಕ್ಕೆ ಮುಖ್ಯ ಕಾರಣ ಈ ರಾಮದಾಸ ಗೌಡರು.
ನಂತರ 1934ರಲ್ಲಿ ರಾಮದಾಸ ಗೌಡರನ್ನು ಬಂಧಿಸಿದಾಗ ಸಶಸ್ತ್ರ ದಳದ ಕಾವಲಿನೊಂದಿಗೆ ಅವರನ್ನು ಕೋರ್ಟಗೆ ಹಾಜರುಪಡಿಸಲಾಗಿತ್ತು. ಜೈಲು ಶಿಕ್ಷೆಗೆ ಒಳಪಟ್ಟ ರಾಮದಾಸ ಗೌಡರು 1937ರಲ್ಲಿ ಮುಂಬೈ ಪ್ರಾಂತ್ಯದ ಮುಖ್ಯ ಮಂತ್ರಿಯಾದ ಜಿ. ಬಿ. ಖೇರ್ ಇವರನ್ನು ಬಿಡುಗಡೆ ಮಾಡಿ ಇವರ ಫಲವತ್ತಾದ ಭೂಮಿಯನ್ನು ವಾಪಸ್ಸು ಕೊಡಿಸಿದರು.
1934 ಅಕ್ಟೋಬರ್ 23ರಂದು 48ನೇ ಕಾಂಗ್ರೆಸ್ ಅಧಿವೇಶನ ಮುಂಬೈನಲ್ಲಿ ಸೇರಿತ್ತು. ಈ ಅಧಿವೇಶನದ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದರನ್ನು ಭೇಟಿ ಮಾಡಿಸಲೆಂದು ಉತ್ತರಕನ್ನಡ ಜಿಲ್ಲೆಯ ಬಹಳಷ್ಟು ಸ್ವಾತಂತ್ರ್ಯ ಹೋರಾಟಗಾರರನ್ನು ಕರಮರಕರ್‍ರವರು ಕರೆದುಕೊಂಡು ಹೋಗಿದ್ದರು. ಅದರಲ್ಲಿ ರಾಮದಾಸ ಗೌಡರೂ ಒಬ್ಬರು.
ಡಾ. ರಾಜೇಂದ್ರಪ್ರಸಾದ ಮತ್ತು ಸರದಾರ್ ವಲ್ಲಭಬಾಯಿ ಪಟೇಲರಿಗೆ ರಾಮದಾಸ ಗೌಡರನ್ನು ಪರಿಚಯಿಸಿದ ಕರಮರಕರ್‍ರವರು ‘ಕರನಿರಾಕರಣೆಯಿಂದಾಗಿ ಮನೆ, ಭೂಮಿಯನ್ನೆಲ್ಲ ಕಳೆದುಕೊಂಡವರು.’ ಎಂದು ಪರಿಚಯಿಸಿದರು. ಸರದಾರ್ ಪಟೇಲರು ಇವರ ಮುಂದಿನ ಜೀವನ ಹೇಗೆ ಎಂಬುದರ ಕುರಿತು ಆತಂಕಿತರಾದರು.
ಆದರೆ ರಾಮದಾಸ ಗೌಡರು ‘ಸರಕಾರ ಫೋರ್‍ಫೀಟ್ ಮಾಡಿರುವುದು ನನ್ನ ಹೊಲಗದ್ದೆಗಳನ್ನೇ ಹೊರತೂ ನನ್ನ ರಟ್ಟೆಗಳನ್ನಲ್ಲ. ದುಡಿದು ತಿನ್ನುವುದು ತಮ್ಮ ಮನೆಯವರಿಗೇನು ಹೊಸದಲ್ಲ. ದುಡಿಯುವವರ ಹೊಟ್ಟೆಗೆ ಎಂದೂ ಭೂಮಿತಾಯಿ ಮೋಸ ಮಾಡುವುದಿಲ್ಲ’ ಎಂದು ದಿಟ್ಟವಾಗಿ ಉತ್ತರಿಸಿzರು.
‘ಹೊಲ ಮನೆಗದ್ದೆ ಹೋಗಿದ್ದರಿಂದ ಒಳ್ಳೆಯದೇ ಆಯಿತು. ಮತ್ತೆ ಗದ್ದೆ, ಜಮೀನು, ಮನೆಯನ್ನು ಸರಕಾರ ವಶಪಡಿಸಿಕೊಳ್ಳುತ್ತದೆ ಎಂಬ ಅಂಜಿಕೆ ಇಲ್ಲದೇ ತಾನು ಮುಕ್ತವಾಗಿ ಹೋರಾಟದಲ್ಲಿ ಭಾಗವಹಿಸಬಹುದು.’ ಎಂಬ ಕೆಚ್ಚೆದೆಯ ಮಾತನ್ನು ಕೇಳಿ ಹಿರಿಯ ನಾಯಕರ ಕಣ್ಣಲ್ಲಿ ನೀರಾಡಿತ್ತು.
ಇಂತಹ ಅಪರೂಪದ ಹೋರಾಟಗಾರ ಉಳುವರೆಯ ರಾಮದಾಸ ಗೌಡರು ಈಗ ನಿಧಾನವಾಗಿ ಸ್ವಾತಂತ್ರ್ಯ ಹೋರಾಟದ ನೆಲ ಅಂಕೋಲೆಯಿಂದ ಮಾಯವಾಗುತ್ತಿದೆ. ಹಾಲಕ್ಕಿ ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಉಳುವರೆಯಲ್ಲಿಯೂ ರಾಮದಾಸ ಗೌಡರು ಈಗ ಮರೆಯಾಗುತ್ತಿದ್ದಾರೆ. ಜಿಲ್ಲಾಡಳಿತವಾಗಲಿ, ತಾಲೂಕಾ ಆಡಳಿತವಾಗಲಿ ರಾಮದಾಸ ಗೌಡರ ಒಂದು ಸ್ಮಾರಕ ರಚಿಸುವ ಕುರಿತು ಇಂದಿಗೂ ಯೋಚಿಸುತ್ತಿಲ್ಲ.
ಸಾಮಾಜಿಕವಾಗಿ ಕೆಳಸ್ಥರದಲ್ಲಿದ್ದ ಒಬ್ಬ ಮುಗ್ಧ ಹಾಲಕ್ಕಿ ಒಕ್ಕಲಿಗನ ಹೋರಾಟಕ್ಕೆ ನಾವೀಗ ಯಾವ ಬೆಲೆಯನ್ನೂ ಕೊಡುತ್ತಿಲ್ಲ. ಮುಂದಿನ ಪೀಳಿಗೆ ಆತನನ್ನು ಸಂಪೂರ್ಣವಾಗಿ ಮರೆಯುವ ಮುನ್ನ ಉಳುವರೆಯಲ್ಲೊಂದು ಪುಟ್ಟ ಸ್ಮಾರಕವನ್ನು ರಚಿಸುವ ಕೆಲಸವಾದರೂ ಆಗಬೇಕಿದೆ. ಕೊನೆಯಪಕ್ಷ ಆತನ ಒಂದು ಪ್ರತಿಮೆಯನ್ನು ತಾಲೂಕಾ ಕೇಂದ್ರದಲ್ಲಿ ನಿಲ್ಲಿಸಿ ಆತನ ಹೆಸರು ಮುಂದಿನ ಜನಾಂಗಕ್ಕೂ ನೆನಪಿಡುವಂತೆ ಮಾಡಬೇಕಿದೆ.
(55 ಸಂಯುಕ್ತ ಕರ್ನಾಟಕ 20/2/17) -ಶ್ರೀದೇವಿ ಕೆರೆಮನೆ

Éಳಕಿಗೆ ಬರದ ಸಂಸ್ಥೆ ಹೊರತಂದಿದ್ದು ಸಾವಿರಾರು ಪ್ರತಿಭಾವಂತರನ್ನು
ಸಿದ್ಧಾಪುರದ ನೆಲ-ಮಣ್ಣಿನ ಮಹಿಮೆಯೋ ಅಥವಾ ಇಲ್ಲಿಯ ಚಾರಿತ್ರಿಕ ಹಿನ್ನೆಲೆಯ ಮಹಿಮೆಯೋ ಇಲ್ಲಿ ಸಂಭವಿಸುವ ಪ್ರತಿ ಘಟನೆ,ವಿದ್ಯಮಾನಗಳೂ ವಿಶೇಶ.
ತೀರಾ ಹಳ್ಳಿಯಂಥ ಪಟ್ಟಣದ ಸಿದ್ಧಾಪುರದಲ್ಲಿ ಬಹಳ ವರ್ಷಗಳ ಹಿಂದಿನಿಂದ ತೋಟಗಾರಿಕಾ ತರಬೇತಿ ಸಂಸ್ಥೆಯೊಂದು ನಡೆಯುತ್ತಿದೆ. ಈ ಸಂಸ್ಥೆಯ ವ್ಯಾಪ್ತಿ ಉತ್ತರಕನ್ನಡ ಶಿವಮೊಗ್ಗ ಜಿಲ್ಲೆಗಳಿಗೆ ಸೀಮಿತವಾಗಿದೆಯಾದರೂ ಇಲ್ಲಿ ರಾಜ್ಯ ಹೊರರಾಜ್ಯಗಳ ವಿದ್ಯಾರ್ಥಿಗಳು ಕಲಿತು ಹೆಸರು ಮಾಡಿದ್ದಾರೆ.
ರಾಜ್ಯಸರ್ಕಾರದ ತೋಟಗಾರಿಕೆ ಇಲಾಖೆಯ ಜವಾಬ್ಧಾರಿಯ ಈ ಸಂಸ್ಥೆ ಪ್ರತಿವರ್ಷ 35 ರಂತೆ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಿ ತರಬೇತಿ ನೀಡುತ್ತಿದೆ.
ಕನಿಷ್ಟ ಮೆಟ್ರಿಕ್ ಓದಿರುವ ಯಾವುದೇ ಭಾರತೀಯ ಪ್ರಜೆ ಇಲ್ಲಿ ಅರ್ಜಿ ಹಾಕಿ ಪ್ರವೇಶ ಪಡೆಯಬಹುದು ಆದರೆ ವಯೋಮಿತಿ 18 ರಿಂದ ಮೂವತ್ತು ವರ್ಷ ದಾಟುವಂತಿಲ್ಲ.
ಪ್ರತಿವರ್ಷ ಏಫ್ರಿಲ್ ನಲ್ಲಿ ಕರೆಯುವ ಪ್ರವೇಶ ಆಮಂತ್ರಣದ ಮೇರೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 11ತಿಂಗಳ ವರೆಗೆ ಸ್ಟೈಪಂಡ್ ಪಡೆದು ತರಬೇತಿ ಪಡೆಯುತ್ತಾರೆ. ಹೊಸೂರಿನ ತೋಟಗಾರಿಕಾ ತರಬೇತಿ ಕೇಂದ್ರದಲ್ಲಿ 11 ತಿಂಗಳ ಡಿಪ್ಲೋಮಾ ತರಬೇತಿ ಪಡೆಯುವ ನಂತರ ಅವರು ಸ್ವಯಂ ಉದ್ಯೋಗ, ಸರ್ಕಾರಿ, ಅರೆಸರ್ಕಾರಿ ಕೆಲಸಗಳಿಗೆ ನೇಮಕವಾಗಬಹುದು.
ಇಲ್ಲಿಯ67 ಎಕರೆಯ ವಿಶಾಲ ಪ್ರದೇಶದಲ್ಲಿ ತರಬೇತಿ, ಪ್ರಾಯೋಗಿಕ ಅನುಭವ ಪಡೆದು ಹೊರನಡೆದವರಲ್ಲಿ ಬಹುತೇಕರು ಸಾಧಕರು, ಪ್ರಸಿದ್ಧರು ಆಗಿರುವುದು ಈ ತರಬೇತಿ ಕೇಂದ್ರದ ಹೆಗ್ಗಳಿಕೆ.
ಈ ತರಬೇತಿ ಪಡೆಯಲಿಚ್ಛಿಸುವವರು ರೈತ ಕುಟುಂಬದವರಾಗಿರಬೇಕು, ಕನಿಷ್ಟ ಮೆಟ್ರಿಕ್ ಓದಿರಬೇಕು ಎನ್ನುವ ಕಡ್ಡಾಯ ನಿಯಮ ಬಿಟ್ಟರೆ ರಾಜ್ಯದ ಯಾವುದೇ ವ್ಯಕ್ತಿ ಇಲ್ಲಿ ವಿದ್ಯಾರ್ಥಿಯಾಗಬಹುದು. ವಿಶೇಶವೆಂದರೆ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಿಗಾಗಿಯೇ ಇರುವ ಈ ತರಬೇತಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಅತಿ ಕಡಮೆ ಆಕಾಂಕ್ಷಿಗಳೆಂದರೆ ಉತ್ತರಕನ್ನಡ ಜಿಲ್ಲೆಯವರು.
ವಿಶಾಲ ಕ್ಯಾಂಪಸ್,ವಿಶೇಶ ವ್ಯವಸ್ಥೆ, ಎಲ್ಲಾ ಅನುಕೂಲಗಳ ನಡುವೆ ಕೂಡಾ ಸ್ಥಳಿಯರು ಕಡಿಮೆ ಆಸಕ್ತರಾಗಲು ಕಾರಣ ಈ ಸಂಸ್ಥೆ ತೆರೆಮರೆಯಲ್ಲಿರುವುದು. ರೈತರ ಮಕ್ಕಳು, ಆಸಕ್ತ ವಿದ್ಯಾರ್ಥಿಗಳು ಈ ತರಬೇತಿ ಪಡೆದರೆ ಅದು ತೋಟಗಾರಿಕೆ ಕ್ಷೇತ್ರದ ಹೆಬ್ಬಾಗಿಲು ಪ್ರವೇಶಿಸಿದಂತೆ ಪ್ರತಿವರ್ಷಕ್ಕೊಂದರಂತೆ ಡಿಪ್ಲೊಮಾ ಪಡೆದು ಇಲ್ಲಿಂದ ಹೊರಹೋದವರು ಮತ್ತೆ ಮರಳುವಾಗ ಸಾಧಕರು, ನೌಕರರು ಆಗಿ ಮರಳಿ ಬರುವ ಈ ತರಬೇತಿ ಕೇಂದ್ರ ಸ್ಥಳಿಯರಿಗೇ ದೂರವಾಗಿರುವುದು ಅಚ್ಚರಿಯ ವಿಷಯ.
ಈ ಸಂಸ್ಥೆಯ ಮಾಹಿತಿಗಾಗಿ 08389298032 ಸಂಖ್ಯೆಯನ್ನು ಸಂಪರ್ಕಿಸಬಹುದು. ತೋಟಗಾರಿಕಾ ಬೆಳೆಗಳು,ಮಾರುಕಟ್ಟೆ ಕೇಂದ್ರಗಳು, ಪೂರಕ ಪರಿಸರ ಇರುವ ಸಿದ್ದಾಪುರದ ಹೊಸೂರು ತೋಟಗಾರಿಕಾ ತರಬೇತಿ ಕೇಂದ್ರ ರಾಜ್ಯದ ಅನೇಕ ತರಬೇತಿ ಕೇಂದ್ರಗಳಿಗಿಂತ ಭಿನ್ನ ಎನ್ನುವ ಹೆಗ್ಗಳಿಕೆಯ ಸ್ಥಾನ-ಮಾನ ರಾಜ್ಯಮಟ್ಟದಲ್ಲಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *