೧೯೯೫ ರ ನಂತರ ಪ್ರಾರಂಭವಾದ ಶಾಲೆಗಳಿಗೆ ಅನುದಾನ ನೀಡಬೇಕು. ಹಳೆ ಪಿಂಚಣಿ ಯೋಜನೆ ಪ್ರಾರಂಭಿಸಬೇಕು ಎನ್ನುವ ಬೇಡಿಕೆಗಳೊಂದಿಗೆ ಕೆಲವು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕರೆಯ ಮೇರೆಗೆ ಈ ಸಂಘದ ಸಿದ್ಧಾಪುರ ತಾಲೂಕಾ ಶಾಖೆಯ ಪದಾಧಿಕಾರಿಗಳು,ಸದಸ್ಯರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಿಗೆ ಸ್ಥಳಿಯ ತಹಸಿಲ್ದಾರ ಕಛೇರಿಯ ಮೂಲಕ ಮನವಿ ನೀಡಿದರು.
ನೆಲಮೂಲದ ವಿಸ್ಮೃತಿಗೆ ವಿಶಾದ
ಬೇಡ್ಕಣಿಯಲ್ಲಿ ಮಾರುತಿ ಯಕ್ಷಗಾನ ಮಂಡಳಿಯವರಿAದ ಸೇವೆ ಆಟ
ಸಿದ್ದಾಪುರ. ತಾಲೂಕಿನ ಬೇಡ್ಕಣಿಯಲ್ಲಿ ದೀಪಾವಳಿಯ ವರ್ಷತೊಡಕಿನ ನಿಮಿತ್ತ ಶ್ರೀ ಹನುಮಂತ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ಪ್ರತಿವರ್ಷದಂತೆ ಭಕ್ತರು ದೇವರ ಸೇವೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು. ಅಂದು ಸಂಜೆ ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಬೇಡ್ಕಣಿ ಇದರ ಇಪ್ಪತ್ಮೂರನೆ ವರ್ಷದ ತಿರುಗಾಟದ ಪ್ರಾರಂಭದ ಸೇವೆ ಆಟ ಪ್ರದರ್ಶಿತವಾಯಿತು. ಸಮಾಜಮುಖಿ ಪತ್ರಿಕೆಯ ಸಂಪಾದಕ ಕನ್ನೇಶ ಕೋಲಶಿರ್ಸಿ ಚಂಡೆ ನುಡಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.
ಅವರು ಮಾತನಾಡಿ ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರಬಳಕೆಯ ಭರಾಟೆಯಲ್ಲಿ ನಮ್ಮ ನೆಲಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಎಲ್ಲಿಗೇ ಹೋದರು ಮತ್ತೆ ಈ ಮಣ್ಣಿನ ಸೆಳೆತಕ್ಕೆ ಸಿಗಲೇಬೇಕು. ಯಕ್ಷಗಾನ ನಮ್ಮ ಸಂಸ್ಕೃತಿಯನ್ನು ಹಸಿಯಾಗಿ ಇಡಬಲ್ಲುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಲಕ್ಷö್ಮಣ ಜಿ ನಾಯ್ಕ ಬೇಡ್ಕಣಿ ತಮ್ಮ ಮಂಡಳಿಯು ನಿರಂತರ ೨೨ ವರ್ಷಗಳ ತಿರುಗಾಟ ಯಶಸ್ವಿಯಾಗಿ ಪೂರೈಸಿದ್ದು ಇಪ್ಪತ್ಮೂರನೆ ವರ್ಷದ ತಿರುಗಾಟಕ್ಕೆ ಸಿದ್ಧವಾಗಿದೆ ಎಂದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಭೋಜನ ಶಾಲೆಗೆ ಊಟಬಡಿಸಲು ಅನುಕೂಲವಾಗುವ ಎರಡು ಸ್ಟೀಲಿನ ಕೈಗಾಡಿಗಳನ್ನು ದೇಣಿಗೆಯಾಗಿ ದೇವಸ್ಥಾನದ ಅಧ್ಯಕ್ಷರಾದ ವಿ.ಎನ್.ನಾಯ್ಕ ಬೇಡ್ಕಣಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿ.ಎನ್.ನಾಯ್ಕ ಬೇಡ್ಕಣಿ ಕೋಟೆ ಹನುಮಂತ ದೇವಾಲಯ ಎಲ್ಲಾ ಕಲೆಗಳಿಗೂ ಅದರಲ್ಲೂ ವಿಶೇಷವಾಗಿ ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀÃಡುತ್ತಾ ಬಂದಿದೆ. ಯಕ್ಷಗಾನ ಕರ್ನಾಟಕದ ಶ್ರೇಷ್ಠಕಲೆ. ಕನ್ನಡದ ಉತ್ತಮ ಬಳಕೆ, ಬೆಳವಣಿಗೆ ಯಕ್ಷಗಾನದಿಂದ ಆಗುತ್ತಿದೆ ಎಂದರು.
ಎಂ.ಕೆ.ನಾಯ್ಕ ಹೊಸಳ್ಳಿ ಅಧ್ಯಕ್ಷತೆವಹಿಸಿದ್ದರು. ಅವರು ಮಾತನಾಡಿ ದೇವಸ್ಥಾನಗಳು ಯಕ್ಷಗಾನ ಕಲಾವಿದರಿಗೆ ಹಾಗೂ ಮಂಡಳಿಗಳಿಗೆ ಆಶ್ರಯನೀಡಿ ಈ ಕಲೆಯ ಅಭಿÀವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿವೆ. ಅಂತಹ ಪ್ರಯತ್ನ ಬೇಡ್ಕಣಿಯಲ್ಲೂ ಆಗಲಿ ಎಂದರು.
ಚಂದ್ರಶೇಖರ ಕುಂಬ್ರಿಗದ್ದೆ ನಿರೂಪಿಸಿದರು. ನಂತರ ವೀರ ಮಾಂಧಾತ ಚರಿತ್ರೆ ಮತ್ತು ಶರಸೇತು ಬಂಧನ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಭಾಗವತರಾಗಿ ಗಣಪತಿ ಭಟ್ಟ ಭರತೋಟ, ಕೃಷ್ಣ ಮರಾಠಿ, ಮದ್ದಳೆಯಲ್ಲಿ ವಿಠ್ಠಲ ಪೂಜಾರಿ, ನಾರಾಯಣ ಗೌಡ, ಚಂಡೆಯಲ್ಲಿ ಮಂಜಯ್ಯ ಜೈನ್ ಉತ್ತಮ ಹಿಮ್ಮೇಳ ಒದಗಿಸಿದರು.
ಮಾಂಧಾತ ಚರಿತ್ರೆಯಲ್ಲಿ ಪಾತ್ರಧಾರಿಗಳಾಗಿ ವಿನಾಯಕ ನಾಯ್ಕ ಹಳ್ಳಿಬೈಲ (ಈಶ್ವರ), ಎಂ.ಟಿ.ನಾಯ್ಕ ಹಳ್ಳಿಕಾನ(ನಾರದ), ಶ್ರೀಕಾಂತ ಹೆಗಡೆ ಹೆಗ್ಗೋಡು (ಮಾಂಧಾತ)ಮಾದೇವ ನಾಯ್ಕ ಅರಲಗೋಡು(ಶನಿ), ಲಕ್ಷö್ಮಣ ಬೇಡ್ಕಣಿ( ಸವಾರ) ಜೈಕುಮಾರ ನಾಯ್ಕ (ಶಿವಯೋಗಿ)ಸದಾನಂದ ಪಟಗಾರ ಕುಮಟಾ(ಪದ್ಮ) ಕನ್ನಪ್ಪ ಮಾಸ್ತರ (ಚಂದ್ರವದನೆ) ರಾಮಕೃಷ್ಣ ಕಲಕೈ ( ದಾನವ), ಜಯರಾಮ ಹೊಸಳ್ಳಿ (ಭದ್ರ),) ಮಾರ್ಷಲ್ ಕುಮಟಾ (ಮಂತ್ರಿ), ಶರಸೇತು ಬಂಧನದಲ್ಲಿ ಕೃಷ್ಣಾ ಜಿ ಬೇಡ್ಕಣಿ (ಅರ್ಜುನ), ಸಂತೋಷ ಕೆ ನಾಯ್ಕ (ಹನುಮಂತ), ಗಿರಿಧರ ಕೆ ನಾಯ್ಕ(ವಿಷ್ಣುರೂಪ) ಪಾತ್ರ ನಿರ್ವಹಿಸಿದರು.