

ತೋಟದ ವಾತಾವರಣ ಸೃಷ್ಟಿಸಿ ಕಾನಗೋಡಿನ ಪ್ರಗತಿಪರ ಕೃಷಿಕರಾದ ಪ್ರಭಾಕರ
ಕೃಷಿಯೇ ಖುಷಿ ಎನ್ನುವ ಡೋಂಗ್ರೆ
ಸಿದ್ಧಾಪುರ ತಾಲೂಕಿನ ಚಂದ್ರಗುತ್ತಿ ಸಮೀಪದ ಕಾನಗೋಡು ಭತ್ತ ಬೆಳೆಯುವ ಪ್ರದೇಶ.ಈಭಾಗದಲ್ಲಿ ಕೃಷಿ ಕೂಲಿ, ಕಾರ್ಮಿಕರ ಕೊರತೆ ಅಷ್ಟಾಗಿಲ್ಲ.ಆದರೆ ಪ್ರಭಾಕರ ಡೋಂಗ್ರೆ ಕಡಿಮೆ ಕೂಲಿ ಬಳಕೆಯಲ್ಲಿ ಆಧುನಿಕ ಲಘು ಕೃಷಿ ಯಂತ್ರಗಳನ್ನೇ ಬಳಸಿ ಕೃಷಿಯನ್ನು ಸುಲಭವಾಗಿಸಿಕೊಂಡಿದ್ದಾರೆ. ರಾಸಾಯನಿಕಗೊಬ್ಬರ,ಕ್ರಿಮಿನಾಶಕಗಳನ್ನು ನೀರಿನೊಂದಿಗೆ ಬೆರೆಸಿ ಕಡಿಮೆ ದುಷ್ಫರಿಣಾಮದಿಂದ ಲಾಭದಾಯಕ ಕೃಷಿಯ ಒಗಟನ್ನು ಬಿಡಿಸಿಕೊಂಡಿದ್ದಾರೆ.
ಸಿದ್ದಾಪುರದ ಕಾನಗೋಡಿನ ಕೃಷಿಕ ಪ್ರಭಾಕರ ಡೊಂಗ್ರೆ ಕೆಲವು ವರ್ಷಗಳ ಕೆಳಗೆ ಬರಡುಭೂಮಿಯಲ್ಲಿ ಅಡಿಕೆ,ಬಾಳೆ,ಕಾಫಿ ಬೆಳೆಯುತ್ತೇನೆಂದು ಪ್ರಯೋಗಕ್ಕೆ ಹೊರಟಾಗ ಅವರಿಗೆದುರಾದವರು ಅನುಮಾನ ವ್ಯಕ್ತಪಡಿಸಿದರೆ,ಹಿಂದಿನಿAದ ಇದೆಂಥ ಹುಚ್ಚು ಎಂದು ಜರಿದರು.
ಈ ಅನುಭವ ಆಗಿ ಒಂದು ದಶಕ ಕಳೆದಿಲ್ಲ, ಹೀಗೆಲ್ಲಾ ಆಡಿಕೊಂಡವರು ಬಾಯಿಮುಚ್ಚಿ ಮೂಗಿನ ಮೇಲೆ ಕೈ ಇಡುವಂತೆ ಮಾಡಿದವರು ಪ್ರಭಾಕರ. ಈಗಿನ ಪೀಳಿಗೆಯಂತೆ ಮನೆಯ ಆಸ್ತಿಯನ್ನು ಬಿಟ್ಟು ಮಹಾನಗರ ಸೇರಿಕೊಳ್ಳುವ ಎಲ್ಲಾ ಅನುಕೂಲ ಪ್ರಭಾಕರ ಡೋಂಗ್ರೆಯವರಿಗಿದ್ದವು. ಆದರೆ ಅವರು ಆಯ್ಕೆ ಮಾಡಿಕೊಂಡಿದ್ದು ಖುಷಿ ಕೊಡುವ ಕೃಷಿ ಬದುಕನ್ನು. ತಮ್ಮದೇ ಸ್ವಂತ: ಜಮೀನಿನಲ್ಲಿ ಕೃಷಿಹೊಂಡದ ಮಾದರಿಯ ಕೆರೆ ತೆಗೆದವರೇ ಒಂದೊAದೇ ಬೆಳೆ ಹಿಂದೆ ಬಿದ್ದರು. ಮೊದಮೊದಲು ಅನಾನಸ್, ಕೋಕೋ ಕಾಫಿ ಪ್ರಯೋಗ ಮಾಡಿದರು. ಒಂದೆಕರೆಯಲ್ಲಿ ಕಾಫಿ ಉಳಿಸಿಕೊಂಡು ಬಾಳೆ,ಅಡಿಕೆ ಬೆಳೆದರು. ಅಡಿಕೆ ನಾಲ್ಕೆöÊದು ವರ್ಷ ಕಾಯಿಸಿ ಫಲ ಕೊಟ್ಟರೆ ಬಾಳೆಬದುಕಿಗೆ ನೆರವಾಯಿತು. ೮-೧೦ ಎಕರೆ ಜಮೀನಿನಲ್ಲಿ ರಬ್ಬರ್, ಬಾಳೆ,ಅಡಿಕೆ, ಕಾಫಿ,ಲಿಂಬು ಹೀಗೆ ಈ ವಾತಾವರಣದಲ್ಲಿ ಬೆಳೆಯುವ ಎಲ್ಲಾ ಬೆಳೆಯನ್ನು ಬೆಳೆದ ಪ್ರಭಾಕರ ಒಂದು ದಶಕದ ಹಿಂದೆ ಉತ್ತಮ ಭತ್ತದ ಫಸಲಿಗಾಗಿ ತಾಲೂಕಾಮಟ್ಟದ ಶ್ರೇಷ್ಠ ಕೃಷಿಕ ಗೌರವಕ್ಕೆ ಪಾತ್ರರಾಗಿದ್ದಾರೆ.
ಭತ್ತ ಬೆಳೆಯುವುದೆಂದರೆ ಖುಷಿ ಎನ್ನುವ ಡೋಂಗ್ರೆ ಈಗ ಭತ್ತ ಬೆಳೆಯುತ್ತಿಲ್ಲ.ಭತ್ತದಜಾಗ, ಬಯಲಿನಲ್ಲೆಲ್ಲಾ ಬಾಳೆ, ಅಡಿಕೆ ತುಂಬಿರುವ ಇವರಿಗೆ ಬದುಕಿಗಾಗುವಷ್ಟು ಅನುಕೂಲ ಈ ಜಮೀನಿನಿಂದ ಬಂದಿದೆ. ಕೃಷಿಯಲ್ಲೇ ಖುಷಿ ಕಂಡುಕೊAಡ ಇವರ ಕೌಟುಂಬಿಕ ಹಿನ್ನೆಲೆ ಅರಿಯದಿದ್ದರೆ ಇವರ ಕೃಷಿ ಸಾಧನೆ ಅರ್ಥವಾಗುವುದು ಕಷ್ಟ.
ಪೇಟೆಯ ಡೋಂಗ್ರೆ ಕುಟುಂಬದ ಈ ಪ್ರಭಾಕರರ ಕುಟುಂಬ ಬಹಳ ವರ್ಷಗಳಿಂದ ಕಾನಗೋಡಿನಲ್ಲಿದೆ. ಪೇಟೆಯಲ್ಲಿರುವ ದಾಯಾದಿಗಳು ಗ್ರಾಮೀಣ ಕುಟುಂಬ, ಸಾಂಪ್ರದಾಯಿಕ ಬ್ರಾಹ್ಮಣ ಕೌಟುಂಬಿಕ ಹಿನ್ನೆಲೆಯ ಇವರಿಗೆ ನಗರದ ಅನೇಕ ವೃತ್ತಿಗಳು ಕೈ ಬೀಸಿ ಕರೆಯುತಿದ್ದವು. ಆದರೆ ಕುಟುಂಬದ ಮೂಲ ಆಸ್ತಿಯನ್ನೇ ಬದುಕಿನ ಆಸ್ತಿ ಮಾಡಿಕೊಳ್ಳಬೇಕೆಂದು ಯೋಚಿಸಿದಾಗ ಭತ್ತ ಬೆಳೆಯುವ ಕ್ಷೇತ್ರ, ಬೇಣ ಇವರ ಪಾಲಿಗಿತ್ತು. ಗುತ್ತಿಸೀಮೆಯ ಇಲ್ಲೆಲ್ಲಿ ತೋಟ ಎನ್ನುವ ಕಾಲದಲ್ಲೇ ಪ್ರಭಾಕರ ಅಸಾಂಪ್ರದಾಯಿಕ ತೋಟಗಾರಿಕಾ ಬೆಳೆಗಳ ಜಾಗದಲ್ಲಿ ಭಗೀರಥ ಪ್ರಯತ್ನದಿಂದ ತೋಟ ಎಬ್ಬಿಸಿದರು. ನಿರಂತರ ಶ್ರಮ, ಭೂಮಿ,ಹವಾಮಾನದ ಮೇಲಿನ ನಂಬಿಕೆ ಹಿಂದೂ ಮುಂದೆ ಕೂಡಾ ನಮ್ಮ ಕೈ ಹಿಡಿಯುತ್ತೇ ಎನ್ನುವ ವೈಜ್ಞಾನಿಕ ಮನೋಭಾವದ ಈಕೃಷಿಕನಿಗೆ ಕೃಷಿ ಕುಷಿ ಕೊಟ್ಟಿದೆ.
ನಗರದಲ್ಲೇ ಮನೆ ಮಾಡಿ ಶಬ್ಧ, ಗಲಾಟೆ, ವಾಹನಗಳ ಟ್ರಾಫಿಕ್ ತೊಂದರೆಗೆ ಅಂಜಿದರೆ ಹೇಗಯ್ಯಾ ಎನ್ನುವ ತತ್ವಜ್ಞಾನಕ್ಕೆ ಇಂಬುಕೊಡದೆ ಬಯಲು ಜಾಗವನ್ನು ತೋಟದಿಂದ ತುಂಬಿ ತೋಟದ ಮಧ್ಯೆ ಮನೆ ಮಾಡಿ ಐಗೋಡಿನಲ್ಲಿ ವಾಸವಾಗಿರುವ ಪ್ರಭಾಕರ ಕಾನಗೋಡಿನ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.
ಮಳೆ ರಗಳೆ ಕಾವಂಚೂರು ತಾ.ಪಂ. ಕ್ಷೇತ್ರದಲ್ಲಿ ಭತ್ತಕ್ಕೆ ಕುತ್ತು
ಸಿದ್ಧಾಪುರ ತಾಲೂಕಿನ ಪೂರ್ವಭಾಗದ ಕಾವಂಚೂರು ತಾ.ಪಂ. ಕ್ಷೇತ್ರದಲ್ಲಿ ಭತ್ತದ ಬೆಳೆಗಾರರು ಮಳೆಯಿಂದ ಕಂಗಾಲಾದ ಪರಿಸ್ಥಿತಿ ಎದುರಾಗಿದೆ.
ಕಾವಂಚೂರು ತಾ.ಪಂ. ಕ್ಷೇತ್ರವಾದ ಶಿರಳಗಿ,ಮನ್ಮನೆ,ಕಾವಂಚೂರು ಸೇರಿದ ಬಹುತೇಕ ಕಡೆ ಭತ್ತದ ಬೆಳೆ ಕಟಾವಿಗೆ ಬಂದಿದ್ದು ಭತ್ತ ಕೊಯ್ಯದವರು ಕೊಯ್ದರೆ ಮಳೆಯಿಂದ ರಕ್ಷಣೆ ಹೇಗೆ ಎಂದು ಚಿಂತಿತರಾದರೆ, ಈಗಾಗಲೇ ಭತ್ತ ಕಟಾವು ಮಾಡಿದವರು ನಿರಂತರ ಮಳೆಗೆ ಸಿಕ್ಕ ಭತ್ತ ಮೊಳಕೆ ಬರುವ ಹಾನಿ ಎದುರಿಸುವಂತಾಗಿದೆ.
ಮಂಗಳವಾರ ಈಭಾಗಕ್ಕೆ ಭೇಟಿ ನೀಡಿದ ಪತ್ರಕರ್ತರಿಗೆ ಮಾಹಿತಿ ನೀಡಿದ ತಾ.ಪಂ.ಸದಸ್ಯ ನಾಶಿರ್ ಖಾನ್ ವಲ್ಲೀಖಾನ್ ಈ ವರ್ಷದ ಪ್ರಾರಂಭದ ಮಳೆಯಿಂದ ಬಿತ್ತಿದ ಭತ್ತ ಸಂಪೂರ್ಣ ಹಾಳಾಗಿತ್ತು ನಂತರ ಒಂದೆರಡು ಬಾರಿ ನಾಟಿ ಮಾಡಿ ಭತ್ತ ಬೆಳೆದರೆ ಈಗ ಮಳೆಯಿಂದ ತೊಂದರೆ, ಹಾನಿ ಆಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರ ಭತ್ತದ ಬೆಳೆಗಾರರಿಗೆ ಪರಿಹಾರ ನೀಡದಿದ್ದರೆ ಬದುಕುವುದೇ ಕಷ್ಟ ಎಂದರು.
ಇದೇ ಸಮಯದಲ್ಲಿ ಸ್ಥಳದಲ್ಲಿದ್ದ ಅಯೂಬ್ ಖಾನ್, ರಮೇಶ್ ಗೊಂಡ ಐಗಳಕೊಪ್ಪ, ಕೆರಿಯಾ ಭೋವಿ, ಪರಶುರಾಮ ಬಡಗಿ ತಮ್ಮ ಭತ್ತದ ಬೆಳೆಯ ವ್ಯಥೆಯ ಕತೆ ಹೇಳಿದರು.
ಸಿದ್ದಾಪುರದ ಕಾವಂಚೂರು ಪಂಚಾಯತ್ ನ ನೆಜ್ಜೂರು ಬಯಲು ತಾಲೂಕಿನ ಭತ್ತ ಬೆಳೆಯುವ ದೊಡ್ಡ ಕ್ಷೇತ್ರ. ಈ ಭಾಗದಲ್ಲಿ ಮೂರು ಹಂತಗಳಲ್ಲಿ ಭತ್ತದ ಬೆಳೆ ಬಿತ್ತನೆ ಮತ್ತು ಕಟಾವು ಮಾಡಲಾಗುತ್ತದೆ.ಈ ವರ್ಷ ಮಳೆ ಈ ರೈತರ ಸಂಯಮ ಪರೀಕ್ಷಿಸುವಂತೆ ತೊಂದರೆ ನೀಡಿದೆ. ಹೀಗೇ ಆದರೆ ಭತ್ತ ಬೆಳೆಯುವುದನ್ನೇ ಬಿಡಬೇಕಾಗುತ್ತದೆ ಎಂದು ಈ ರೈತರು ಅಲವತ್ತುಕೊಂಡರೆ ಇವರಿಗೆ ಪರಿಹಾರ ಕೊಡಿಸುವ ವಿಚಾರದಲ್ಲಿ ತಾನೂ ಅಸಹಾಯಕ ಎನ್ನುತ್ತಾರೆ ನಾಶಿರ್‌ಖಾನ್.
ಭೆಳೆವಿಮೆ, ಸರ್ಕಾರದ ಸೌಲಭ್ಯ, ಪರಿಹಾರ ಇವೆಲ್ಲವೂ ಅಂಬಾರಿಯ ಆನೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಕೃಷಿ ಇಲಾಖೆ ಕೂಡಾ ಬೆಳೆವಿಮೆ ಮಾಡಿಸಿದವರನ್ನು ಬಿಟ್ಟು ಉಳಿದವರಿಗೆ ಯಾವ ಅನುಕೂಲವನ್ನೂ ಮಾಡುವ ಅವಕಾಶವಿಲ್ಲ ಎಂದಿದ್ದಾರೆ.
ನೆಜ್ಜೂರು ಭಾಗದಲ್ಲಿ ಭತ್ತದ ಬೆಳೆಗೆ ಮಳೆತೊಂದರೆ ವಿಷಯ ಗಮನಕ್ಕೆ ಬಂದಿದೆ. ನಮ್ಮ ಸಿಬ್ಬಂದಿಗಳು ಕ್ಷೇತ್ರಕ್ಕೆ ತೆರಳಿ ಮಾಹಿತಿ ಕಲೆಹಾಕುತಿದ್ದಾರೆ. ಬೆಳೆವಿಮೆ ಮಾಡಿಸಿದ ರೈತರಿಗೆ ಆ ಅನುಕೂಲ ಸಿಗಲಿದೆ. ಬೆಳೆವಿಮೆ ಪಡೆಯದವರಿಗೆ ಯಾವ ಅನುಕೂಲವೂ ದೊರೆಯುವುದಿಲ್ಲ. -ಪ್ರಶಾಂತ್ -ಕೃಷಿ ಅಧಿಕಾರಿ


