ಎತ್ತ ಸಾಗುತ್ತಿದೆ ಭಾರತ?

ನಿನ್ನೆ ಮಂಗಳವಾರ ಸಿದ್ಧಾಪುರ ತಾಲೂಕಿನ ವಾಹನ ಚಾಲಕ ಮತ್ತು ಮಾಲಕರ ಸಂಘದ ಸದಸ್ಯರು ಸಿದ್ಧಾಪುರ-ಕುಮಟಾ ರಸ್ತೆಯನ್ನು ದುರಸ್ಥಿ ಮಾಡುವ ಮೂಲಕ ಪ್ರತಿಭಟನೆ ಮಾಡಿದರು.
ಇವರ ಪ್ರತಿಭಟನೆಗೆ ಕಾರಣ ಕಳೆದ ಒಂದು ವರ್ಷದಿಂದ ಈ ರಸ್ತೆ ದುರಸ್ಥಿ ಬಗ್ಗೆ ಹೇಳಿ, ದೂರು ನೀಡಿದರೂ ಅಧಿಕಾರಿಗಳು ದುರಸ್ಥಿ ಮಾಡಿಲ್ಲ, ಜನಪ್ರತಿನಿಧಿಗಳು ಯಾಕೆ ಎಂದು ಕೇಳಿಲ್ಲ. ಇಂಥ ಅವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ಸೋಗಲಾಡಿತನ,ಅವಿವೇಕಕ್ಕೆ ಒದೆಯುವಂತೆ ಈ ಸಂಘದ ಸದಸ್ಯರು ರಸ್ತೆ ರಿಪೇರಿಗೆ ಪ್ರತಿಭಟನೆ ಎಂದು ಕರೆದು ತಮ್ಮ ಕರ್ತವ್ಯ ಮಾಡಿದರು.
ಇಂಥ ಸ್ಥಿತಿಗೆ ತಲುಪಿದ ವ್ಯವಸ್ಥೆಯನ್ನು ಸಮರ್ಥಿಸುವ ಮತಾಂಧ ಮೂಲಭೂತವಾದಿಗಳು ತಮ್ಮ ಜನಪ್ರತಿನಿಧಿಯ ಕಾಲರ್ ಹಿಡಿದು ಪ್ರತಿಭಟಿಸಿದಾಗ ಸುಮ್ಮನಿರುವರೆ?
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಶಾಸಕ ಸೇರಿ ರಾಜ್ಯದ 17 ಶಾಸಕರು ಆಡಳಿತಪಕ್ಷದ ಲಂಚ,ರುಷವತ್ತು,ಬ್ರಷ್ಟಾಚಾರದ ಕಾರಣಕ್ಕೆ ರಾಜೀನಾಮೆ ನೀಡಿ ಅನರ್ಹರಾದವರು.ಅವರೆಲ್ಲಾ ಮಾಡಿರುವ ಕೆಲಸವನ್ನು ಒಪ್ಪಲು ಸಾಧ್ಯವಿಲ್ಲ ಎನ್ನುವ ನ್ಯಾಯಾಲಯ ಮತ್ತೆ ಅವರು ಚುನಾವಣೆ ಎದುರಿಸುವುದಕ್ಕೆ ಆಕ್ಷೇಪವಿಲ್ಲ ಎಂದರೆ…. ಇಂದಿನ ಮತಿಗೆಟ್ಟ ಮತಾಂಧರ ಆಡಳಿತದಲ್ಲಿ ನಾವೂ ಸತ್ಯ ಹೇಳಲು ಸಾಧ್ಯವಿಲ್ಲ ಅದನ್ನು ಮತದಾರರು ಮಾಡಿ ನ್ಯಾಯ ಎತ್ತಿಹಿಡಿಯಿರಿ ಎಂದು ಹೇಳಿದಂತಲ್ಲವೆ?
ಹಾಗೆಯೇ ಈ ತೀರ್ಪಿನ ಹಿಂದಿನ ಅಯೋಧ್ಯೆಯ ರಾಮಮಂದಿರ ಪ್ರದೇಶದ ವ್ಯಾಜ್ಯದಲ್ಲಿ ಮಂದಿರ ಅಲ್ಲೇ ಆಗಲಿ ಆದರೆ ಮಸೀದಿಗೆ ಅನ್ಯ ಜಾಗ ನೀಡಿ ಎಂದು ತೀರ್ಪು ನೀಡುವುದು ಉಭಯ ಪಕ್ಷಗಳನ್ನು ಸಮಾಧಾನಿಸಲು ಹೆಣಗಾಡುವ ಪ್ರಯತ್ನವೋ ಅಥವಾ ಈ ವ್ಯವಸ್ಥೆಯಲ್ಲಿ ಒಬ್ಬರು ಅನ್ಯಾಯವಾದರೂ ಸಮಾಧಾನ ಮಾಡಿಕೊಳ್ಳಬೇಕು ಎನ್ನುವ ಜಾಣ್ಮೆಯ ತೀರ್ಮಾನವೋ? ಹೀಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂಥ ತೀರ್ಪಿನ ಹಿನ್ನೆಲೆಯಲ್ಲಿ ಭಾರತದ ರಾಜಕೀಯ, ಸಾಂವಿಧಾನಿಕ ಸ್ವಾಯಿತ್ತ ಸಂಸ್ಥೆಗಳ ಸ್ವಾತಂತ್ರ್ಯ,ನ್ಯಾಯದ ಒಲವು ಪ್ರಶ್ನಾರ್ಹವಲ್ಲವೆ?
ತಮಿಳುನಾಡು,ಕೇರಳಗಳಲ್ಲಿ ಸುಪ್ರೀಂ ತೀರ್ಪಿನ ಹಿನ್ನೆಲೆಗಳಲ್ಲೇ ಪ್ರತಿಭಟನೆಗಳಾಗಿವೆ.ವಿವೇಚನೆ ಇರುವ ಕೆಲವು ಪ್ರಜೆಗಳಾದರೂ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಈ ಹೊಸ ನಡೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಆದರೆ ಬಹುತೇಕ ಮಾಧ್ಯಮಗಳು,ರಾಜಕೀಯ ಪುಢಾರಿಗಳು
ಅನರ್ಹ ಶಾಸಕರು,ಅಯೋಧ್ಯೆಯ ರಾಮಜನ್ಮಭೂಮಿಯ ಪರವಾಗಿ ಈಗ, ಹಿಂದೆ ಕೂಡಾ ವಕಾಲತ್ತು ವಹಿಸುತ್ತಿರುವ ಬಗ್ಗೆ ಜನತೆ, ಮತದಾರರು ಯೋಚಿಸಬೇಕಲ್ಲವೆ?
ಒಂದು ಶತಮಾನದ ಹಿಂದೆ ಒಬ್ಬ ಅಧ್ಯಕ್ಷನಿದ್ದ ಆತ ಮೊದಲು ಮಾಧ್ಯಮ, ನಂತರ ನ್ಯಾಯಾಲಯಗಳನ್ನು ಕೊಂಡುಕೊಂಡ ನಂತರ ಎಲ್ಲರಿಗೂ ತನ್ನ ಹೀನತನ, ಮತಾಂಧ ದುಷ್ಟ ಸಿದ್ಧಾಂತವನ್ನು ಒಪ್ಪಬೇಕೆಂದು ಫರ್ಮಾನು ಹೊರಡಿಸಿದ ನಂತರ ಆತನ ಅವಿವೇಕ, ಅನಾಹುತ, ಅತಿರೇಕಗಳೆಲ್ಲಾ ಅರ್ಥವಾಗಿ ಆತನನ್ನು ಗಲ್ಲಿಗೇರಿಸಿ ಕೊಲ್ಲಲಾಯಿತು. ಸ್ವತಂತ್ರಭಾರತದಲ್ಲಿ ಮೊಟ್ಟ ಮೊದಲಿಗೆ ಅವಿವೇಕ, ಅತಿರೇಕ,ಅನಾಹುತಗಳನ್ನು ಸಮರ್ಥಿಸುವ ಜನವಿರೋಧಿ ಸಿದ್ಧಾಂತ, ಆಡಳಿತವನ್ನು ಪೋಶಿಸುತ್ತಿರುವ ನಾಯಕತ್ವವೊಂದು ತೀರಾ ಆ ಶತಮಾನದ ಹಿಂದಿನ ಅಧ್ಯಕ್ಷನ ನಡೆ, ತಣ್ಣನೆಯ ಕ್ರೌರ್ಯ, ಅವಿವೇಕ, ಅನಾಹುತವನ್ನು ನೆನಪಿಸುವಂತಿದೆ.
ಹಾಗಾಗಿ ಬಲಿಗಂಬಕ್ಕೆ ಒಯ್ಯುತ್ತಿರುವ ನಾಯಕ, ವ್ಯವಸ್ಥೆಯನ್ನು ನೇರವಾಗಿ, ಪರೋಕ್ಷವಾಗಿ ಬೆಂಬಲಿಸುತ್ತಿರುವ ಅವಿವೇಕಿಗಳು ಈ ಅವಾಸ್ತವ,ಅವಿವೇಕ, ಅನಾಹುತಗಳಿಗೆ ಕಾರಣರು.
ಕುರಿಗಳೇ ತಾವೇ ಕಟುಕನ ಮನೆಗೆ ಸರದಿಯ ಸಾಲಿನಲ್ಲಿ ನಿಂತಿರುವಾಗ ವಿವೇಕ ರಜೆ ಮಾಡಿ ಮೌನ ಧರಿಸುವುದೇ ಲೇಸು ಎನ್ನುವ ಉಪಾಯದ ಜನರೆ ಈಗ ಲೇಸು. ಯಾಕೆಂದರೆ ಪ್ರವಾಹ ಅಧಿಕಾರ, ಧರ್ಮ,ದೇವಾಲಯ ಎನ್ನುತ್ತಾ ಸಾಗುತ್ತಿದೆ.ಸುಪ್ರೀಂಕೊರ್ಟ್ ಸುಮ್ಮನಿದ್ದಾಗಪ್ರವಾಹ ಕೆಟ್ಟದರೊಂದಿಗೆ ಒಳ್ಳೆಯದನ್ನೂ ಕೊಚ್ಚಿಕೊಂಡು ಹೋದರೆ ದೂಷಿಸುವುದು ಯಾರನ್ನ?

(related)

ಮತ್ತೆ ಕಾಡಿದ ಬ್ರೆಕ್ಟ್
ಪುಸ್ತಕ ಬಿಡುಗಡೆ, ಸಾಹಿತ್ಯ ಸಂವಾದ, ವಿಶೇಷವಾಗಿ ಕಾವ್ಯ ಗಾಯನ, ಕವನ ಪಠಣ, ಕಾವ್ಯ ಗ್ರಹಿಕೆಯ ಸಂದರ್ಭದಲ್ಲಿ ತಪ್ಪದೆ ನೆನಪಾಗುವ ಕವಿಗಳೆಂದರೆ….
ಕುವೆಂಪು, ಬೇಂದ್ರೆ ಇವರಿಗಿಂತ ವಿಶಿಷ್ಟವಾಗಿ ನನ್ನನ್ನು ಮತ್ತೆ ಮತ್ತೆ ಉದ್ದೀಪಿಸುವ ವ್ಯಕ್ತಿ ಬ್ರೆಕ್ಟ್.
ಒಂದೆಡೆ ಬ್ರೆಕ್ಟ್ ಹೀಗೆಲ್ಲಾ ಗೀಚುತ್ತಾನೆ.
‘ಸೇಬಿನ ಮರದ ಹೂಗಳನ್ನು ಕಂಡು ಪುಳಕಿತನಾಗುತ್ತೇನೆ’
ಕೆಡವಿ ಕಟ್ಟಬೇಕಾದ ಶಿಥಿಲಗೊಂಡ ಹಳೆಮನೆಗಳಿಗೆ ಹೊಸ ಬಣ್ಣ ಹಚ್ಚಿ ಮರುಳುಗೊಳಿಸುವ ದುರುಳನ ಭಾಷಣ ಕೇಳಿ ದಿಗಿಲು ಬೀಳುತ್ತೇನಿ.
ಆದರೆ…… ಎರಡನೆಯ ಸಂಗತಿ ಮಾತ್ರ ನನ್ನನ್ನು ಬರೆಯುವ ಮೇಜಿಗೆ ತರುತ್ತೆ.’
1930 ರಲ್ಲಿ ಮಯಕೋವಸ್ಕಿ ಎಂಬ ಸೋವಿಯತ್ ಕವಿ ಸರ್ಕಾರದ (ಸ್ಟಾಲಿನ್ ಸರ್ಕಾರ) ಬೇಹುಗಾರಿಕೆಗೆ ಬೇಸತ್ತು ಆತ್ಮ ಹತ್ಯೆ ಮಾಡಿಕೊಳ್ಳುತ್ತಾನೆ. ಹೀಗೆ ಆತ್ಮಹತ್ಯೆ ಮಾಡಿಕೊಂಡ, ‘ಮಯಕೋವಸ್ಕಿ ನೆನಪಿಗೆ’ ಎಂದು ಚುಟುಕು ಕವಿತೆಯೊಂದನ್ನು ಬರೆಯುತ್ತಾನೆ. ನಮ್ಮ ಬ್ರೆಕ್ಟ್.
‘ಕೋರೆಹಲ್ಲಿನ ಶಾರ್ಕ್‍ಗಳಿಂದ ಪಾರಾದಿ
ಹುಲಿಗಳನ್ನು ಎದುರಿಸಿದಿ
ನಿನ್ನನ್ನೇ ತಿಂದುಬಿಟ್ಟಿದ್ದು ಮಾತ್ರ ತಿಗಣೆಗಳು
ಆಗ ಜರ್ಮನಿಯಲ್ಲಿ ಪ್ಯಾಸಿಸಂ….ಹರಡುತಿದ್ದಾಗ ಬಹುಶಃ ಸ್ವಗತದಂತೆ ಬರೆದ ಕವಿತೆ ಇರಬೇಕು,
ಈ ‘ಅನಾಮಧೇಯ’ ಕವಿತೆ,
ಈ ಕವಿತೆ ಸಾಗುವುದು ಹೀಗೆ…..
‘ತನ್ನ ಸಹಿಯನ್ನೇ ಹಾಕದವನನ್ನು
ತನ್ನ ಚಿತ್ರವೇ ಇಲ್ಲದವನನ್ನು
ಯಾರೂ ಅಲ್ಲದವನನ್ನು ಹೇಗೆ ಹಿಡಿದಾರು ಹೇಳು?
ನಿನ್ನ ಗುರುತುಗಳನ್ನೆಲ್ಲ ಒರೆಸಿ ಹಾಕು,
ನಿನ್ನ ಗೋರಿ ಮೇಲೆ ಸತ್ತ ತಾರೀಖು ಸತ್ತವನ ಹೆಸರು
ಅದಕ್ಕೊಂದು ಕಲ್ಲು
ಏನೂ ಬೇಡ, ಸತ್ತವನನ್ನೇ ಯಾರೆಂದು ಪತ್ತೆ ಮಾಡಿ ಪೀಡಿಸಿಯಾರು; ಜೋಕೆ
ಇರಲೇ ಇಲ್ಲ ಎನ್ನುವ ಹಾಗೆ ಇದ್ದುಬಿಡು.’
ಕವಿ, ಸಾಹಿತಿ ಅನಾಮಧೇಯನಂತೆ ಇರಬೇಕು. ಹಾಗಾಗಿ ಬಹಳಷ್ಟು ಕವಿಗಳು ಕಾವ್ಯನಾಮ, ಕೆಲವು ಕವಿ ಸಾಹಿತಿಗಳು ಗುಪ್ತನಾಮ ಬಳಸುತ್ತಾರೆ,
ಇದರ ರಹಸ್ಯ ಸಮಾಜ ಯಾವ ಕಾಲದಲ್ಲೂ ‘ಸತ್ಯ’ವನ್ನು ಆ ಕಾಲದಲ್ಲೇ ಸಹಿಸಿದ್ದಿಲ್ಲ.
ಇದರ ತಾತ್ಪರ್ಯ ಎಲ್ಲಾ ಕಾಲಗಳಲ್ಲೂ, ಯಾವೆಲ್ಲಾ ಪ್ರದೇಶಗಳಲ್ಲೂ ಸತ್ಯ ಅಸಹಿಷ್ಣುಗಳು ಇದ್ದರೆಂದರ್ಥವಲ್ಲವೆ?
ಈಗ ಭಾರತದ ಹುಸಿ ರಾಷ್ಟ್ರಿಯತಾವಾದದ ತಳಹದಿಯ ಮೇಲೆ ಮೋದಿ ಸರ್ಕಾರವನ್ನು ನಿಲ್ಲಿಸಿದಂತೆ ಅಂದು ಯುರೋಪ್‍ನಲ್ಲಿ ಹುಸಿ ರಾಷ್ಟ್ರೀಯತಾವಾದ ಮತ್ತು ಮೂಲಭೂತವಾದದ ಕರಿನೆರಳು ವ್ಯಾಪಕವಾಗಿತ್ತು. ಆಕಾಲದಲ್ಲಿ ಬರಹ, ನಾಟಕ, ಕಾವ್ಯಗಳ ಮೂಲಕ ಬ್ರೆಕ್ಟ್ ಅಂದಿನ ಸರ್ಕಾರಿ, ಬಂಡವಾಳಶಾಹಿ ಕ್ರೌರ್ಯಕ್ಕೆ ಮುಖಾಮುಖಿಯಾದ.
ಸಮಾಜವಾದದ ಕನಸನ್ನು ಎದೆಯಲ್ಲಿಟ್ಟುಕೊಂಡ ಬ್ರೆಕ್ಟ್ ಅದರ ವೈರುಧ್ಯಗಳಿಗೇ ಕುರುಡಾಗಿರಲಿಲ್ಲ. ಸಮಾಜಮುಖಿ ಬರಹಗಾರರಿಗೆ ಯಾವತ್ತೂ ಅಧಿಕಾರಸ್ಥರು, ಬಂಡವಾಳಶಾಹಿ ಪಟ್ಟಭದ್ರರು ವಿರೋಧಿಗಳಾಗಿರುತ್ತಾರೆ. ಇಂಥ ವಿರೋಧಿಗಳನ್ನು ‘ಡೋಂಟ್ ಕ್ಯಾರ್’ ಎಂದ ಬ್ರೆಕ್ಟ್ ತನ್ನ ಸಾಹಿತ್ಯಿಕ ಕ್ರಿಟಿಕಾಲಿಟಿ ಬಗ್ಗೆ ಹೀಗೆ ಸಮರ್ಥಿಸುತ್ತಾನೆ.
‘ಒಂದು ನದಿಯ ದಿಕ್ಕು ಬದಲಿಸೋದು ಒಂದು ಹಣ್ಣಿನ ಗಿಡವನ್ನು ಕಸಿ ಮಾಡೋದು,
ಮನುಷ್ಯನ್ನ ವಿದ್ಯಾವಂತ ಮಾಡೋದು. ರಾಜ್ಯ ವ್ಯವಸ್ಥೆಯನ್ನು ಬದಲಿಸೋದು ಇವೆಲ್ಲ ಅರ್ಥಪೂರ್ಣ ಕ್ರಿಟಿಕಲ್ ಧೋರಣೆಯ ಉದಾಹರಣೆಗಳಷ್ಟೇ ಅಲ್ಲ ಕಲಾತ್ಮಕ ಕ್ರಿಯೆ ಕೂಡಾ.’
ಬ್ರೆಕ್ಟ್,
ಹಿಟ್ಲರನ ಕಾಲಕ್ಕೂ ಈಗಿನ ಬಲಪಂಥೀಯ ಬಂಡವಾಳಶಾಹಿ ರಾಜಕಾರಣಕ್ಕೂ ಇರುವ ಸಾಮ್ಯತೆ ಗಮನಿಸಿ, ಜರ್ಮನ್ ನಾಜಿಗಳು ತಮ್ಮ ಅಭಿಪ್ರಾಯ ವಿರೋಧದ ಸಾಹಿತಿಗಳ ಪುಸ್ತಕಗಳನ್ನು ಸುಟ್ಟರು. (ಈಗ ಬಿಜೆಪಿಗಳು ಅನಂತ್ ಮೂರ್ತಿಯಂಥವರ ಅಭಿಪ್ರಾಯಕ್ಕೆ ಪ್ರತಿರೋಧ ಒಡ್ಡಿದಂತೆ) ಆಗ ಆಸ್ಕರ್ ಮೇರಿಯಾ ಗ್ರಾಫ್ ಎಂಬ ಲೇಖಕ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಬ್ರೆಕ್ಟ್ ಹೀಗೆ ಬರೆಯುತ್ತಾರೆ.
‘ನಾನೇನು ನಿಮ್ಮ ಕಣ್ಣಿಗೆ ಹಿತಕರವಾದ ಸುಳ್ಳು ಹೇಳುವವನಾಗಿಬಿಟ್ಟೆನೆ?
ಇದನ್ನು ನಾನು ಸಹಿಸಲಾರೆ, ನನ್ನ ಆದೇಶ ಇದು ನಿಮಗೆ; ನನ್ನನ್ನೂ ಸುಟ್ಟುಬಿಡಿ’.ಇಂಥ ಬ್ರೆಕ್ಟ್ ತನ್ನ ಚರಿತ್ರೆ ವರ್ತಮಾನವನ್ನು ಬಿಚ್ಚಿಡುವುದು
ಮತ್ತೆ ಕಾವ್ಯದ ಮೂಲಕವೇ.
(ಮುಂದಿನ ಜನಾಂಗಕ್ಕೆ )
‘ಬರಗಾಲದಲ್ಲಿ ನಾನು ಸಿಟಿ ಸೇರಿದ್ದು ಬಂಡೆದ್ದವರ ಜೊತೆ ನಾನೂ ಸೇರಿಕೊಂಡು
ಪ್ರೀತಿ ಮಾಡಿದ್ದು ಅವಸರದ ನಿರ್ಲಕ್ಷ್ಯದಲ್ಲಿ, ನಿಸರ್ಗವನ್ನು ಕಂಡದ್ದು ಬೇಸರದ ಅಸಮಾಧಾನದಲ್ಲಿ.
ಈ ನೆಲದ ಮೇಲೆ ನನಗೆ ಸಿಕ್ಕ ಕಾಲದಲ್ಲಿ ಕೆಲವು ಕಾಲಕಳೆದದ್ದುಹೀಗೆ …
‘ನನ್ನ ಕಾಲದಲ್ಲಿ ರಸ್ತೆ ಒಯ್ದಿದ್ದು ಕೆಸರಿಗೆ.
ಮಾತಾಡಿದ್ದರ ಫಲ ಕೊಲೆಗಡುಕ ವೈರಿಯ ಹುನ್ನಾರಕ್ಕೆ ಸಿಕ್ಕಿಬಿದ್ದಿದು
ನಾನು ಸಾಧಿಸಿದ್ದು ಅಷ್ಟಕ್ಕಷ್ಟೇ.
ಆದರೂ ನಾನಿಲ್ಲದೆ ಇದ್ದಿದ್ದರೆ
ಆಳುವ ಧುರುಳರು ಇನ್ನಷ್ಟು ಹಾಯಾಗಿ
ಇರುತ್ತ ಇದ್ದರು ಎಂಬುದಷ್ಟೇ ಸಮಾಧಾನ.
ಈ ನೆಲದ ಮೇಲೆ ನನಗೆ ಸಿಕ್ಕ ಕಾಲದಲ್ಲಿ ಕೆಲವು ಕಾಲ ಕಳೆದದ್ದು ಹೀಗೆ….
ಹಳ್ಳಿಗಾಡಿನಿಂದ ಬಂದ ಬ್ರೆಕ್ಟ್ ನಗರ, ಪಟ್ಟಣ, ಶ್ರೀಮಂತ ಪಟ್ಟಭದ್ರರು ಆಳುವ ಧುರುಳ(!)ರು ಎಲ್ಲರನ್ನೂ ನೋಡಿದ, ಎಲ್ಲರ ಬಗ್ಗೆ ಬರೆದ.
ಹೊರೆಯಾಗಗೊಡದಂತೆ ನೀಡಿಕೊಂಡಿತು.
ಇಷ್ಟು ಹಗುರವಾಗಲು ಅವಳು ಎಷ್ಟು ನವೆದು ನೋಯಬೇಕಾಯಿತು.
ಕವಿ, ಪ್ರೇಮಿ. ಪ್ರೇಮಿ ಕವಿ. ಪ್ರೇಮಿಯಾಗಲಾರದವನು ಶ್ರೇಷ್ಠ ಕವಿಯಾಗಲು ಸಾಧ್ಯವಿಲ್ಲ. ಶ್ರೇಷ್ಟ ಕವಿ ಪ್ರೇಮಿಯಾಗೇ ಇರುತ್ತಾನೆ. ಬ್ರೆಕ್ಟ್ ಕಡು ಪ್ರೇಮಿ ಹಾಗಾಗೇ ಶ್ರೇಷ್ಟ ಕವಿ. ಆತನದೊಂದು ಕವಿತೆ ಓದಿ
(ಪ್ರೇಯಸಿಯ ಹಾಡು)
‘ನಿನ್ನಿಂದ ಸುಖ ಪಡೆಯುವಾಗ ಒಮ್ಮೊಮ್ಮೆ ಅನ್ನಿಸತ್ತೆ
ಈಗ ನಾನು ಸತ್ತು ಬಿಟ್ಟರೆ ಸಾಯುವ ತನಕ ಸುಖಿಯಾಗಿ ಇದ್ದಂತೆ ಆಮೇಲೆ ನೀನು ಮುದುಕನಾದಾಗ ನನ್ನನ್ನು ನೆನೆದೆ, ಎಂದುಕೋ,
ಆಗ ನಿನಗೆ ಇನ್ನೂ ಹದಿಹರೆಯದ ಪ್ರೇಯಸಿ ಇರುತ್ತಾಳೆ.
ಹೀಗೆ ರೋಮ್ಯಾಟಿಕ್ ಆಗಿ ಪ್ಯಾಂಟಸಿಯ ನೈಜ ಅನುಭವ ದಾಖಲಿಸುವ ಬ್ರೆಕ್ಟ್ ಕಾವ್ಯ ಸ್ಫೂರ್ತಿಯನ್ನು ಒಸರುವುದು ಇಂಥ ರೋಚಕ ಭಾಷಾ ಸೊಗಡಿನಲ್ಲಿ
‘ಇದ್ದಕ್ಕಿದ್ದಂತೆ ಖಾಲಿಯಾಗಿಬಿಡುತ್ತೇನೆ.
ಅಷ್ಟೇ ಬೇಗ ತುಂಬಿಕೊಳ್ಳುತ್ತೇನೆ ಏನೇನೂ ತೋಚದಂತೆ ಇದ್ದುಬಿಟ್ಟ ನಂತರ ತಾನೇ ಏನೋ ತೋಚುತ್ತದೆ
ಪ್ರೀತಿಸುತ್ತೆನೆ, ಅದೇ ಕರಕರೆಯಾಗಿ ತೆಪ್ಪಗಾಗುತ್ತೇನೆ
ತೆಪ್ಪಗೆ ತನ್ನಷ್ಟಕ್ಕಿದ್ದು ತಣ್ಣಗಾದವನು ಮತ್ತೆ ಬಿಸಿಯಾಗುತ್ತೇನೆ.’ (ಶೂನ್ಯ)
ಬ್ರೆಕ್ಟ್ ಬಗ್ಗೆ ಸಾಹಿತಿ ಅನಂತ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ.
……ಜನವೈರಿಗಳು ಎಲ್ಲೆಲ್ಲೋ ಇದ್ದಾರು.
ಅಧಿಕಾರ ಹಿಡಿದ ಹಿರಿಯರಲ್ಲಿ ಇದ್ದಾರು,
ಪ್ರಯೋಗನಿರತರಾದ ವಿಜ್ಞಾನಿಗಳಲ್ಲಿ ಇದ್ದಾರು,
ಜಗತ್ತಿನ ಒಳಿತಿಗಾಗಿ ಕೆರೆ ಕಟ್ಟೆಗಳನ್ನು
ಕಟ್ಟುವವರಲ್ಲಿ
ಬೃಹತ್ತಾದ ಅಣೆಕಟ್ಟುಗಳನ್ನು ನಿರ್ಮಿಸುವವರಲ್ಲಿ ಯಾರು ಯಾರೋ
ಎಲ್ಲೆಲ್ಲೋ ಇದ್ದಾರು.
ಅವರು ತೋಡಿಸಿದ ಅಣೆಕಟ್ಟು ಬತ್ತಿದರೆ
ಅಥವಾ ಬಿರುಕು ಬಿಟ್ಟರೆ,
ನಿಷ್ಠುರವಾಗಿ, ತಪ್ಪುಗಳಾಗುವುದು ಸಹಜವೆಂಬ ಸಬೂಬಿಗೆ
ಕಿವಿಗೊಡದೆ ಜನಹಿತ ದೃಷ್ಟಿಯಿಂದ
ತೋಡಿಸಿದವರನ್ನೆ ಗುಮಾನಿಸಿ ಕೊಲ್ಲಬೇಕು.
ಆದರೆ ಅವರು ನಿರ್ದೊಷಿಗಳಾಗಿದ್ದರೆ?-ಆಗ? ಹೀಗೆಯೆ ಯುರೋಪಿನಲ್ಲಿ ತಮ್ಮ ಮಾತೆಲ್ಲ ಸೋತಿದೆಅನ್ನಿಸಿದಾಗ, ಹಾಗೆ ಅನ್ನಿಸಿ, ಸೋತು,ಗೆದ್ದು, ಇಂತಹ ಕೆಟ್ಟ ಕಾಲದಲ್ಲೂ ಗೆದ್ದೆನೆಂದು ತನ್ನ ಜಾಣತನಕ್ಕೇ ಹೇಸಿ,ಕೊನೆಗೂ ಜೀವನ ಪ್ರೀತಿಯನ್ನೂ, ಮನುಷ್ಯರಲ್ಲಿ ಭರವಸೆಯನ್ನೂ ಕಳೆದುಕೊಳ್ಳದ ಬ್ರೆಕ್ಟ್‍ನಂಥವನು ನನಗೆ
ಬಹಳಮುಖ್ಯಎನಿಸಿತು…(ಅನಂತಮೂರ್ತಿ)
…ಬ್ರೆಕ್ಟ್ ಬಗ್ಗೆ ನನ್ನದೊಂದು ಕವನ ಹೀಗಿದೆ…
ನಾನು ಬ್ರೆಕ್ಟ್‍ನ ಶಿಷ್ಯ
ನಾನು ಬ್ರೆಕ್ಟ್‍ನ ಶಿಷ್ಯ ಎಂದುಕೊಳ್ಳೋಕೆ ನನಗೆ ಹೆಮ್ಮೆ ಖುಷಿ, ಸಂಭ್ರಮ ಅಹಂಕಾರ ಯಾಕೆಂದರೆ…..
ಬ್ರೆಕ್ಟ್ ಭಗವಾನ್ ಬುದ್ಧನನ್ನು ಸಂಧಿಸುತ್ತಾನೆ.
‘ಹಪ ಹಪಿಸುವ ಆಸೆಯಿಂದ ಮುಕ್ತರಾದರೆ ನಾವು ನಿರ್ಮೋಹದಲ್ಲಿ,
ನಿರಪೇಕ್ಷೆಯಲ್ಲಿ ತಲುಪಬಹುದಾದ ಸ್ಥಿತಿ
ನಿರ್ವಾಣ ಎಂದು ಪುನರುಚ್ಛರಿಸುತ್ತಾನೆ.
ಬುದ್ಧನ ವಿವೇಕವನ್ನ ಹೀಗೆಲ್ಲಾ ಚಿತ್ರಿಸು
ತ್ತಾನೆ.
ಬಾಂಬರುಗಳು ಹಾರಾಡಿ ಸುಡುತ್ತ ಇರುವಾಗ ನಾವೇನು ಮಾಡಬೇಕು?
ಏನು ಸರಿ? ಯಾವುದು ತಪ್ಪು?
ಕ್ರಾಂತಿಯ ನಂತರ ನಮ್ಮ
ಡಿಪಾಸಿಟ್ಟುಗಳ ಗತಿ ಏನು?
ಭಾನುವಾರ ತೊಡುವ ಸ್ಪೆಶಲ್ ಶರಾಯಿಗಳು ಉಳಿದಿರುತ್ತವಾ?ಎಂದೆಲ್ಲಾ ಕೇಳುವವರಿಗೆ ನಾವೇನು ಹೇಳಿಯೂ
ಪ್ರಯೋಜನವಿಲ್ಲ.’
ನಾನು ಬ್ರೆಕ್ಟ್‍ನ ಶಿಷ್ಯ ಯಾಕೆಂದರೆ…….
ಆತ ರೈತನ ಬಗ್ಗೆ ಮಾತಾಡುತ್ತಾನೆ
ಪೇಟೆ ಜನ ಮಣ್ಣಿನ ಮಗನ ಮಾತೃಪ್ರೇಮ, ಕೃಷಿ ಸಂಸ್ಕøತಿಯ ದೃಢ ನೆಲೆಗಟ್ಟು, ಅವನು ತನ್ನ ಸಂತಾನವನ್ನು

ಸಲಹುವ ಬಗೆ, ಹೇಗವನು? ದೇಶದ ಬೆನ್ನೆಲುಬು ಇತ್ಯಾದಿ ಕೊಂಡಾಡಿದರೆ…
ರೈತನ ಆಸಕ್ತಿ ಅವನ ಗದ್ದೆಯಲ್ಲಿ ಎತ್ತು ದನ, ಎಮ್ಮೆ ಕೋಣಗಳ ಕೊಟ್ಟಿಗೆಯಲ್ಲಿ, ಗಂಜಲದಲ್ಲಿ
ಸಾಯದೇ ಉಳಿದ ಮಕ್ಕಳನ್ನ ಸಲಹುವುದರಲ್ಲಿ ಹೇಗೂ ಕೊಡಬೇಕಾದ ಕೂಲಿ ಕಡಿಮೆ ಮಾಡುವ
ಚೌಕಾಸಿಯಲ್ಲಿ ಬಡ್ಡಿ ಸಂದಾಯಕ್ಕೆ ಅಗತ್ಯವಾದ ಹಾಲಿಗೆ ಸಿಗುವ ಬೆಲೆಯಲ್ಲಿ ಎನ್ನುತ್ತಾನೆ.
ಬ್ರೆಕ್ಟ್ ನನಗೆ ಕಾವ್ಯ ಗುರು ಯಾಕೆಂದರೆ……
ಕೆಡುಕರು ನಿನ್ನ ಉಗುರಿಗೆ ಭೀತರಾದರೆ ಒಳ್ಳೆಯ ಜನ ನಿನ್ನ ದಿಟ್ಟ ಚಲನೆಯ ಲಾವಣ್ಯಕ್ಕೆ ಮನಸೋಲುತ್ತಾರೆ,
ನನ್ನ ಕಾವ್ಯವೂ ಹೀಗೇ ತೋರಬೇಕೆಂದು ನನ್ನ ಆಸೆ. ಹೀಗೆಂದು ನಿರ್ಧೇಶಿಸುತ್ತಾನೆ.
-ಕೋಲ್‍ಶಿರ್ಸಿ ಕನ್ನೇಶ್(ಸಂ.)
ಹೀಗೆ ಬರೆಯುತ್ತಲೇ ಸಾಹಿತ್ಯ, ಕಾವ್ಯ ಭಾಷೆಗಳ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದು ಹೀಗೆ.
…..ಯಾಕೆ ಅಂದರೆ ಹಲವರು ಅಲ್ಪವೆಂದು ತಿಳಿದರೂ ಉಪಯುಕ್ತವಾದದನ್ನು ನಾನು ಎತ್ತಿ ಹಿಡಿದೆ.
ಯಾಕೆ ಅಂದರೆ….. ದಮನಕಾರಿಯಾದ ಮತಧರ್ಮಗಳನ್ನು ನಾನು ಧ್ವೇಶಿಸಿದೆ
ಯಾಕೆ ಅಂದರೆ ಇನ್ನೂ ಯಾಕಾದರೂ…….
ಯಾಕೆ ಅಂದರೆ…. ನಾನು ಜನರ ಹಿತೈಷಿಯಾಗಿದ್ದೆ.
ಅವರಿಂದ ಪಡೆದದ್ದನ್ನು ಬಳಸಿ, ಬೆಳೆಸಿ, ಹಿಂದಕ್ಕೆ ಅವರಿಗೇ ಕೊಟ್ಟೆ.
ಯಾಕೆ ಅಂದರೆ….. ನಾನು ಕವಿಯಾಗಿ ಜನರ ಭಾಷೆ ಬೆಳೆಸಿದೆ
ಇಹದ ಬದುಕಿಗೆ ದಾರಿ ಹುಡುಕಿದೆ
ಯಾಕೆ ಅಂದರೆ…. ಇನ್ನೂ ಯಾಕಾದರೂ
ಆದ್ದರಿಂದ ನಾನು ಮರೆತು ಹೋಗಲಾರೆ, ಒಂದು ಕಲ್ಲಿನ ಮೇಲೆ ನನ್ನ ಹೆಸರು ಕೆತ್ತಿರುತ್ತದೆ
ನನ್ನ ಪುಸ್ತಕಗಳು ಮರು ಮುದ್ರಣಗೊಳ್ಳುತ್ತಲೇ ಇರುತ್ತವೆ.’
ಕಠೋರ ಚಿಪ್ಪಿನೊಳಗೆ ಮೃದುತ್ವ ಅವಿತುಕೊಂಡಂತೆ ವ್ಯವಸ್ಥೆ, ಅನಾಚಾರ, ಅನೈತಿಕತೆಗಳ ಬಗ್ಗೆ ಕಟುನಿಷ್ಠೂರನಾಗಿದ್ದ ಬ್ರೆಕ್ಟ್, ತಾಯಿ, ತಾಯ್ನಾಡಿನ ಬಗ್ಗೆ ಮೃದುವಾಗುತ್ತಾನೆ ಅದಕ್ಕೆ ಸಾಕ್ಷಿ ಅವರ ‘ಅಮ್ಮ’ ಕವನ
‘ಹೋಗಿಬಿಟ್ಟವಳನ್ನು ಮಣ್ಣಿನಲ್ಲಿ ಮಲಗಿಸಿದರು
ಹೂಗಳು ಅರಳಿದವು; ಚಿಟ್ಟೆಗಳು ಚೆಲ್ಲಾಡಿದವು
ಅಮ್ಮ ಎಷ್ಟು ಹಗುರಾಗಿದ್ದಳೆಂದರೆ …………

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *