ಸೈದೂರಿನ ವಿದ್ಯಾ ಸಾರ್ಥಕ್ಯದ ಕತೆ ಸ್ಮರಿಸಿ…..

ಸುಳ್ಳೂರು,ಸೈದೂರು,ತಡಗಳಲೆ,
ಪಡವಗೋಡು,ಕಣಸೆ, ಕಾಗೋಡುಗಳೆಂದರೆ….
ಅಧಿಕಾರಿಗಳು ಬೆವರುತಿದ್ದರು.
ಈ ಧೀರ ಬಂಡುಕೋರ ಸೇನಾಪಡೆಯಂತಿದ್ದ ಈ ಗ್ರಾಮಗಳ ಮುಗ್ಧಜನರ ಎದೆಯಲ್ಲಿ
ಅಕ್ಷರ ಬಿತ್ತಲು ಹೋದವರು ಎಚ್.ಗಣಪತಿಯಪ್ಪ.
ಹೊಸೂರು ಗಣಪತಿಯಪ್ಪ ಗಾಂವಟಿಶಾಲೆ ಮಾಸ್ತರಿಕೆ ಮಾಡುತ್ತಾ ಬಿತ್ತಿದ ಅಕ್ಷರಗಳು ಫಲಕೊಡತೊಡಗಿದ್ದು ಕಾಗೋಡು ರೈತ ಹೋರಾಟದಿಂದ.
ಈ ಸಮಯದಲ್ಲಿ ಸಮಾಜವಾದವನ್ನು ಉಸಿರಾಡುತ್ತಾ ಅದಕ್ಕೆ ಹೋರಾಟದ ಹುರುಪು ಕೊಟ್ಟವರು ಶಾಂತವೇರಿ ಗೋಪಾಲಗೌಡ. ಗಣಪತಿಯಪ್ಪ,ಗೋಪಾಲಗೌಡ, ಲೋಹಿಯಾ ಇವರೊಂದಿಗೆ ಒಂದು ದೊಡ್ಡಸಮೂಹ ಈ ಭಾಗದ ಜನರಲ್ಲಿ ಆತ್ಮವಿಶ್ವಾಸ,ವಿವೇಕ,ಜಾಗೃತಿಗೆ ಕಾರಣರಾದದ್ದು ಒಂದು ರೋಚಕ ಇತಿಹಾಸ.
ಈ ಹೋರಾಟದ ಮೂಸೆಯಲ್ಲಿ ಒಡಮೂಡಿದ ನಾಯಕರು ಈ ಭಾಗದ ಸಾರ್ವಜನಿಕ ನೇತೃತ್ವ ವಹಿಸಿ ಶಿಕ್ಷಣ,ಆರೋಗ್ಯ, ಆಡಳಿತ ಸುಧಾರಿಸುವ ಹೋರಾಟದಲ್ಲಿ ಗೆದ್ದದ್ದು ಇನ್ನೊಂದು ವಿಶಿಷ್ಟ ಚರಿತ್ರೆ.
ಈ ಎರಡು ಹೋರಾಟಗಳ ಜ್ವಾಲೆ ಉರಿಯುತಿದ್ದಾಗಲೇ ಶಿಕ್ಷಣದ ತಂಗಾಳಿ ಪಸರಿಸುವ ಕೆಲಸವೂ ಸದ್ದಿಲ್ಲದೆ ನಡೆಯಿತು.
ಅದರ ಪರಿಣಾಮವೇ ಕಾಗೋಡು ತಿಮ್ಮಪ್ಪ ಮತ್ತು ಬಂಗಾರಪ್ಪ, ಶ್ರೀನಿವಾಸ ಸೇರಿದ ಅನೇಕರು ಪ್ರಾರಂಭಿಸಿದ ಅಕ್ಷರ ಬಿತ್ತುವ ಕೆಲಸ. ಈ ಮುಖ್ಯವಾಹಿನಿಯ ಉತ್ಕರ್ಷವನ್ನು ನೋಡುತ್ತಾ ತೆರೆಮರೆಯಲ್ಲಿದ್ದವರು ನಿಧಾನವಾಗಿ ಶಿಕ್ಷಣಸಂಸ್ಥೆಗಳನ್ನು ತೆರೆಯುವ ಮನಸ್ಸು ಮಾಡಿದ್ದು ಈ ಕಾಗೋಡು ಹೋರಾಟ ಮತ್ತು ಅದರ ಉತ್ಫನ್ನಗಳಾದ ನಾಯಕತ್ವದ ಸ್ಫೂರ್ತಿಯಿಂದ ಎಂದರೆ ಅತಿಶಯೋಕ್ತಿಯಲ್ಲ.
ಇಂಥ ತಣ್ಣನೆಯ ಕ್ರಾಂತಿಯ ಭಾಗವಾಗಿ ಸೈದೂರಿನಲ್ಲಿ 1993 ರಲ್ಲಿ ಪರಿಶಿಷ್ಟರ ನಿರ್ವಹಣೆಯಲ್ಲಿ ಪ್ರಾರಂಭವಾದದ್ದೇ ಶಾಂತವೇರಿ ಗೋಪಾಲಗೌಡ ಪ್ರೌಢಶಾಲೆ.
ಸಮಾಜವಾದದ ಮನಸ್ಸು ಹೋರಾಟ,ಸಂಘಟನೆಯ ಮೂಲಕ ಜನಜಾಗೃತಿಮಾಡುತ್ತಾ ಅದಕ್ಕೆ ಅವಶ್ಯ ಶಿಕ್ಷಣಒದಗಿಸುವ ದೂರದೃಷ್ಟಿಯ ಫಲವಾಗಿ ಪ್ರಾರಂಭವಾದ ಈ ಪ್ರೌಢಶಾಲೆ 27 ವಸಂತಗಳನ್ನು ಕಳೆಯುವ ಸಮಯದಲ್ಲಿ ಎದುರಿಸಿದ್ದು ಅನೇಕ ಏಳುಬೀಳುಗಳನ್ನು.
ಸಂಸ್ಥಾಪಕ ಸದಸ್ಯರಾದ ಎಂ.ಆರ್.ಅಣ್ಣಪ್ಪ,ಬಿ.ಚೌಡಪ್ಪ, ದಿವಾಕರ ಸೇರಿದಂತೆ ಅನೇಕ ಒಳಹೊರಗಿನ ವ್ಯಕ್ತಿಗಳು ಈ ವಿದ್ಯಾಮಂದಿರದ ಪ್ರಗತಿ,ಬೆಳವಣಿಗೆಗೆ ಶ್ರಮಿಸಿದ್ದಿದೆ. ಇಲ್ಲಿಯ ಶಿಕ್ಷಕ ವೃಂದ ಕೂಡಾ ಬರೀ ಶಿಕ್ಷಕರಾಗದೆ ಈ ಶಾಲೆಯ ಸ್ಥಂಬಗಳಾಗಿ ಕೆಲಸ ಮಾಡಿ ದಣಿದದ್ದೂ ಕೂಡಾ ಈ ಶಾಲೆಯ ಚರಿತ್ರೆಯ ಭಾಗವೇ.
ಈಗ ಈ ಶಾಲೆಗೆ ಬೆಳ್ಳಿಹಬ್ಬದ ಸಂಬ್ರಮ. ಇಲ್ಲಿ ಕಲಿತವರು ರಾಜ್ಯ ರಾಷ್ಟ್ರಮಟ್ಟದವರೆಗೆ ವಿಸ್ತರಿಸಿದ ಸಾಧನೆಯ ಜೊತೆಗೆ 27 ವರ್ಷಗಳ ದುರ್ಗಮ ಪಯಣದ ಶಿಕ್ಷಣ ಕ್ರಾಂತಿಯ ಪಕ್ಷಿನೋಟಕ್ಕೂ ಇದೇ ಸುಸಮಯ.
ಇಂಥ ಅನೇಕ ಹಿನ್ನೆಲೆ, ಸಾಧನೆ,ಸಾರ್ಥಕತೆಗಳ ಮೆಲುಕಿಗಾಗಿ ತಿರುಮಲ ಬಸವತತ್ವದ ಮೌಲ್ಯಗಳ ಪ್ರಸ್ತುತತೆಯನ್ನು ಬರೆದಿದ್ದಾರೆ. ಇಂಗ್ಲೀಷ್ ಕಲಿಕೆ,ವಿಜ್ಞಾನ ಕಲಿಕೆ, ಮೆಟ್ರಿಕ್ ಫಲಿತಾಂಶಗಳ ಬಗ್ಗೆ. ಈ ಭಾಗದಲ್ಲಿ ಪರಿಶಿಷ್ಟರು,ಹಿಂದುಳಿದವರ ಶೈಕ್ಷಣಿಕ ಜಾಗೃತಿ, ಪ್ರಗತಿ ಬಗ್ಗೆ ದುಡಿದುಡಿದು ಮಡಿದ ಜಾನಪದ ತಜ್ಞ ಹುಚ್ಚಪ್ಪ ಮಾಸ್ತರ್ ರನ್ನು ಸ್ಮರಿಸಲಾಗಿದೆ.
ಸ್ಮರಣೆ, ಸ್ಮರಣೆಯ ಸಂಚಿಕೆಗಳೆಂದರೆ ಭೂತ,(ಇತಿಹಾಸ) ವರ್ತಮಾನ,ಭವಿಷ್ಯವನ್ನು ಅಂಗೈಯಲ್ಲಿಟ್ಟು ಆತ್ಮಾವಲೋಕನದೊಂದಿಗೆ ಹೊಸತನ್ನು ಕಟ್ಟುವ,ತಟ್ಟುವ ಸಂಧಿಕಾಲ, ಸಮ್ಮಿಲನ,ಸಂಸ್ಮರಣ.
ಭವಿಷ್ಯದ ಕನಸು ಕಟ್ಟಿ ಸಾಧನೆಗೆ ಕಟಿಬದ್ಧರಾಗಲು ನಿರ್ಣಯಿಸುವ ಸಮಯ. ಈ ಸುಸಮಯದಲ್ಲಿ ಮೈಸೂರು ಸಾಂಮ್ರಾಜ್ಯದ ಗಡಿಪ್ರದೇಶ ಶೈಕ್ಷಣಿಕ, ಸಾಮಾಜಿಕ,ಆರ್ಥಿಕ,ಸಾಂಸ್ಕøತಿಕವಾಗಿ ಬೆಳೆದು ಬೆಳಗುತಿದ್ದರೆ ಅದಕ್ಕೆ ಕಾರಣರಾದ ಎಚ್.ಗಣಪತಿಯಪ್ಪ, ಶಾಂತವೇರಿ ಗೋಪಾಲಗೌಡ ರುಗಳಿಂದ ಪ್ರಾರಂಭವಾಗಿ ಇಂದಿನ ಶಿಕ್ಷಣಪ್ರೇಮಿಗಳು, ಅಧಿಕಾರಿವರ್ಗ, ದಾನಿಗಳು ಎಲ್ಲರಶ್ರಮ,ಯೋಜನೆ,ಯೋಚನೆ, ಚಿಂತನೆಗಳ ಅಡಿಪಾಯವಿದೆ.
ಈ ಕಾಲದ ಆಪತ್ತು,ಅನುಚಿತತೆಗಳಿಗೆ ಕೂಡಾ ಈ ಚರಿತ್ರೆಯ ಪುಟಗಳಲ್ಲೇ ಪರಿಹಾರಗಳು ಅಡಗಿಕೂತಿವೆ ಎಂದರೆ ಅದು ಬಿಂದುವಿನಿಂದ ಸಿಂಧುವಿನವರೆಗೆ ಕಾಯಾ,ವಾಚಾ,ಮನಸಾ ದುಡಿದವರ ಪ್ರಯತ್ನ, ತೊಡಗಿಸಿಕೊಳ್ಳುವಿಕೆಗಳ ಫಲಶೃತಿ.
ಈ ಫಲ,ಶೃತಿಯಾಗಿ ಅನುರಣಿಸಲಿ, ಕಾಲ ಎಲ್ಲರನ್ನೂ ಉದ್ಧರಿಸಲಿ. ಎನ್ನುವ ಶುಭ ಹಾರೈಕೆಗಳೊಂದಿಗೆಪೂರ್ವಸೂರಿಗಳ ನೆನೆನೆನೆದು ತಲೆಬಾಗುವುದು ನಮ್ಮೆಲ್ಲರ ಕರ್ತವ್ಯ ಕೂಡಾ.
-ಪ್ರೀತಿಯಿಂದ ಕನ್ನೇಶ್ ಕೋಲಶಿರ್ಸಿ,ಸಿದ್ಧಾಪುರ.
https://samajamukhi.net (ಇದುಸೈದೂರು ಪ್ರೌಢಶಾಲೆಯ ಬೆಳ್ಳಿಹಬ್ಬದ ಸ್ಮರಣ ಸಂಚಿಕೆಯ ಮುನ್ನುಡಿ)

ಉಪದೇಶ ಅನುಷ್ಠಾನವನ್ನೂ ವಿದೇಶಿಯರಿಂದಲೇ ಕಲಿಯಬೇಕು -ಶಾಸ್ರ್ತೀ
ಭಾರತೀಯರು ಉಪದೇಶಿಸುತ್ತಾರೆ.ಪಾಶ್ಚಾತ್ಯರು ಅನುಷ್ಠಾನ ಮಾಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದಿರುವ ಹಿರಿಯ ಇತಿಹಾಸ ತಜ್ಞ ಎ.ಕೆ.ಶಾಸ್ತ್ರಿ ಭಾರತದಲ್ಲಿ ರಾಜಕಾರಣದಿಂದ ಮೊದಲ್ಗೊಂಡು ಎಲ್ಲಾ ಕ್ಷೇತ್ರಗಳೂ ವಿಶ್ವಾಸಾರ್ಹವಾಗಿ ಉಳಿದಿಲ್ಲ. ವಿದೇಶಿಯರಿಂದ ಉತ್ತಮದ್ದನ್ನು ಕಲಿಯುವ ಮೂಲಕ ನಾವು ಇತರರಿಗೆ ಮಾದರಿಯಾಗಬೇಕು ಎಂದು ಕರೆನೀಡಿದರು.
ಇಲ್ಲಿಯ ಎಸ್.ವಿ. ಹೈಸ್ಕೂಲು ಮೈದಾನದಲ್ಲಿ ಪ್ರಾರಂಭವಾದ ಶಿಕ್ಷಣ ಪ್ರಸಾರಕ ಸಮೀತಿಯ ಅಕ್ಷರ ಜಾತ್ರೆ ಉದ್ಘಾಟಿಸಿ ಮಾತನಾಡಿದ ಅವರು ಸಿದ್ಧಾಪುರದಂಥ ಸಣ್ಣ ನಗರದಲ್ಲಿ ಎಲ್ಲಾ ಸೌಕರ್ಯಗಳ ವಿದ್ಯಾಸಂಸ್ಥೆ ನಡೆಸುವುದು ಕಷ್ಟ ಆದರೆ ಗಣೇಶ್‍ಹೆಗಡೆಯವರ ದೊಡ್ಮನೆ ಕುಟುಂಬ ಈ ಊರಲ್ಲಿ ಜನರ ಅಗತ್ಯ ಪೂರೈಸಿದ್ದಾರೆ ಎಂದು ಶ್ಲಾಘಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *