ಕೆ.ಡಿ.ಪಿ. ಸಭೆಯಲ್ಲಿ ಜನಪ್ರತಿನಿಧಿಗಳ ವಾಗ್ವಾದ

ಕೆಲವು ಇಲಾಖೆಗಳು ತಮ್ಮ ಕಾರ್ಯಕ್ರಮಗಳಿಗೆ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದ ಪ್ರಮಾದದಿಂದಾಗಿ ಇದೇ ವಿಷಯ ಜನಪ್ರತಿನಿಧಿಗಳ ನಡುವಿನ ಚರ್ಚೆ,ವಾಗ್ವಾದಕ್ಕೆ ಕಾರಣವಾದ ಪ್ರಸಂಗಕ್ಕೆ ಇಂದಿನ ಮಾಸಿಕ ಕೆ.ಡಿ.ಪಿ. ಸಭೆ ಸಾಕ್ಷಿಯಾಯಿತು.
ತಾ.ಪಂ. ಸಭಾಭವನದಲ್ಲಿ ನಡೆದ ಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ತೋಟಗಾರಿಕೆ, ಕೃಷಿ ಇಲಾಖೆಗಳು ಸೇರಿದಂತೆ ಕೆಲವು ಇಲಾಖೆಗಳು ಜನಪ್ರತಿನಿಧಿಗಳಿಗೆ ಆಹ್ವಾನಿಸುವುದಿಲ್ಲ ಎಂದು ತಾ.ಪಂ. ಸದಸ್ಯ ನಾಶಿರ್‍ಖಾನ್ ಆಕ್ಷೇಪ ಎತ್ತಿದರು.
ಇದಕ್ಕೆ ಧ್ವನಿ ಸೇರಿಸಿದ ಜಿ.ಪಂ. ಸದಸ್ಯೆ ಸುಮಂಗಲಾ ವಸಂತ ನಾಯ್ಕ ತನಗೆ ಈ ಸಭೆಗೂ ಆಹ್ವಾನ ಬಂದಿಲ್ಲ. ತೋಟಗಾರಿಕೆ ಇಲಾಖೆ ಹೇರೂರಿನಲ್ಲಿ ನಡೆಸಿದ ಕಾರ್ಯಕ್ರಮಕ್ಕೂ ಆಹ್ವಾನ ಇರಲಿಲ್ಲ. ಜನಸಾಮಾನ್ಯರ ಸಮಸ್ಯೆಗಳು, ಬೇಡಿಕೆಗಳನ್ನು ನಾವು ಇಲಾಖೆಗೆ ಸಲ್ಲಿಸುತ್ತೇವೆ ಆದರೆ ಇಲಾಖೆಗಳು ನಮ್ಮ ಗಮನಕ್ಕೂ ತರದೆ ಕೆಲಸ ಮಾಡುತ್ತಾರೆ. ಜನಸಾಮಾನ್ಯರು, ಕೃಷಿಕರು ತಾವು ಹೋದ ಕಾರ್ಯಕ್ರಮಗಳಿಗೆ ನೀವೇಕೆ ಬಂದಿಲ್ಲ ಎಂದು ನಮ್ಮನ್ನು ಪ್ರಶ್ನಿಸುತ್ತಾರೆ ಎಂದು ದೂರಿದರು.
ಅದಕ್ಕೆ ಉತ್ತರಿಸಿದ ಸ್ಥಾಯಿ ಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಕಡೆಗಣಿಸಬಾರದು, ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸುವುದೇ ಕಷ್ಟವಾದರೆ ಯಾರಿಗಾಗಿ, ಯಾಕಾಗಿ ಕಾರ್ಯಕ್ರಮ ನಡೆಸುತ್ತೀರಿ ಎಂದು ಪ್ರಶ್ನಿಸಿ ಜಿ.ಪಂ. ಸದಸ್ಯರಿಗೆ ನಿಮ್ಮ ಅಹವಾಲು ಹೇಳಲು ಅಲ್ಲಿ ಅವಕಾಶವಿದೆ. ಇಲ್ಲಿ ನಿಮ್ಮನ್ನು ಆಹ್ವಾನಿಸಬೇಕೆಂದೇನಿಲ್ಲ ಎಂದರು.
ಅದಕ್ಕೆ ಪ್ರತಿಕ್ರೀಯಿಸಿದ ಸುಮಂಗಲಾ ನಾಯ್ಕ ಜಿ.ಪಂ. ಸದಸ್ಯರು ಈ ಸಭೆಗೆ ಬರಬಾರದೆಂದೇನಿಲ್ಲ, ಆದರೆ ಕಾರ್ಯಕ್ರಮ, ಸಭೆಗಳಿಗೆ ನಮಗೆ ಕರೆಯದೆ, ಗೌರವಿಸದೆ ಇದ್ದರೆ ನಾವು ಬರುವುದನ್ನೇ ನಿಲ್ಲಿಸಬೇಕಷ್ಟೆ ಎಂದರು. ಅಧಿಕಾರಿಗಳ ವಿವರಣೆ ಕೇಳಬೇಕಿದ್ದ ಸಭೆ ಜನಪ್ರತಿನಿಧಿಗಳ ವಾಗ್ವಾದದ ಕಣವಾದಾಗ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ಸಭೆಯನ್ನು ತಹಬಂದಿಗೆ ತಂದರು.

ವಿಶ್ವ ಮಾನ್ಯತೆ ಗಳಿಸಿದ ಮಾಜಿ ಜವಾನ
ವಿಶ್ವನಾಥ ಶೇಟ್
ವಾಲ್ಮಿಕಿಯಾದ ಕತೆ
ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ 1964 ರಲ್ಲಿ ಅಶೋಕ ಪ್ರೌಢ ಶಾಲೆ ಪ್ರಾರಂಭವಾಯಿತು. ಮೊದಲ ಎಸ್.ಎಸ್.ಎಲ್.ಸಿ. ಬ್ಯಾಚ್ ಮುಗಿದಿತ್ತಷ್ಟೆ. 1967 ರಲ್ಲಿ ವಿದ್ಯಾರ್ಥಿಯಾಗಿದ್ದ ಮೆಣಸಿನಮನೆಯ ವಿಶ್ವನಾಥ ಶೇಟ್ ಆ ವರ್ಷ ನಿವೃತ್ತರಾದ ಜವಾನರೊಬ್ಬರ ಜಾಗಕ್ಕೆ ಬಂದರು.
ಅಂಥ ಅನಿವಾರ್ಯತೆಯ ಬಡತನದಲ್ಲಿ ಬೆಳೆದ ಶೇಟ್ ಓದಿದ್ದರೆ ದೊಡ್ಡ ನೌಕರರಾಗುತ್ತಿದ್ದರೇನೋ ಆದರೆ, ಮೆಟ್ರಿಕ್ ಓದಿ ಜವಾನರಾದ ವಿಶ್ವನಾಥ ಶೇಟ್ ವಿದ್ವಾಂಸರಾದರು. ಹೀಗೆ ಸಣ್ಣ ಕತೆಯಂತೆ ಮುಗಿಸಬಹುದಾದ ವಿಶ್ವನಾಥ ಶೇಟ್ ರ ಚರಿತ್ರೆ ಎಂಥವರಿಗೂ ಮಾದರಿ.
ತಾಯಿಯ ಮನೆಯಲ್ಲಿ ಮಾವಂದಿರು ಕಲಾವಿದರಾಗಿದ್ದರು.ಅವರೊಂದಿಗೆ ಆಟ ನೋಡುವ ,ಕುಣಿಯುವ ಚುರುಕಿನ ವಿಶ್ವನಾಥ್ ಶೇಟ್ ಮನೆಯ ಬಡತನದ ಕಾರಣಕ್ಕೆ ಸಣ್ಣ ವಯಸ್ಸಿನಲ್ಲಿ ದುಡಿಮೆ ಪ್ರಾರಂಭಿಸಿದ್ದರು.
ಹೀಗೆ ಸಮೀಪದ ಸಣ್ಣ ನೌಕರಿ ಮಾಡದಿದ್ದರೆ ಅನಿವಾರ್ಯತೆಯಲ್ಲಿ ಕೂಲಿಗೆ ಹೋಗಬೇಕಿತ್ತು. ಕೂಲಿಮಾಡಿ ನೋಯುವುದಕ್ಕಿಂತ ಇಲ್ಲಿ ಜವಾನನಾಗುವುದೇ ಲೇಸು ಎಂದು ಬಗೆದ ಮೆಣಸಿಮನೆಯ ವಿಶ್ವನಾಥ ಅಶೋಕ ಪ್ರೌಢ ಶಾಲೆಯ ಜವಾನನಾಗಿ ನಿವೃತ್ತರಾಗಿದ್ದರೆ ಅವರ ಪ್ರತಿಭೆ,ಸಾಮಥ್ರ್ಯ ಬೆಳಕಿಗೆ ಬರುತ್ತಿರಲಿಲ್ಲ. ಆದರೆ ಅಶೋಕಪ್ರೌಢ ಶಾಲೆಯ ಸಿಬ್ಬಂದಿಯಾಗಿ ಪ್ರಭಾರಿ ಗೃಂಥಪಾಲಕರಾಗಿ ಕೆಲಸ ಮಾಡಿದ ವಿಶ್ವನಾಥ ಶೇಟ್ ರನ್ನು ಪುಸ್ತಕಗಳು ಬೆಳಸಿದವು. ಅವರು ಓದಿದ ಪುಸ್ತಕಗಳು ಅಸಂಖ್ಯ ಆದರೆ ಅವರು ಬರೆದ 7-8 ಪುಸ್ತಕಗಳಲ್ಲಿ ಬಹುತೇಕ ಎಲ್ಲವೂ ಕೊಂಕಣಿ ಭಾಷೆಯಲ್ಲಿರುವುದು ವಿಶೇಶ.
1995 ರಲ್ಲಿ ಮೊದಲು ಕೊಂಕಣಿ ಯಕ್ಷಗಾನ ಬರೆದ ನಂತರ 1997 ರಿಂದ ಸಾಹಿತ್ಯ ಕೃಷಿ ಮುಂದುವರಿಸಿದ ಇವರು ಯಕ್ಷಗಾನ ಆಭರಣಗಳಿಗೆ ಸಂಬಂಧಿಸಿದ ಆಹಾರ್ಯ ಕಮ್ಮಟ ಬರೆದ ನಂತರ ಕೊಂಕಣಿ ರಾಮಾಯಣ ಶ್ರೀರಾಮ ಚರಿತ ಬರೆದು ವಿಶ್ವ ಕೊಂಕಣಿ ಸಮ್ಮೇಳದಲ್ಲಿ ಸನ್ಮಾನಿತರಾದರು.
ಯಕ್ಷಗಾನ ಆಭರಣ ತಯಾರಕರು,ಯಕ್ಷಗಾನ ಕಲಾವಿದರು. ಕೊಂಕಣಿ ಗಮಕ ಹಾಡುತ್ತಾ,ಅರ್ಥಧಾರಿಯಾಗಿ ಸಾಹಿತಿ,ಯಾಗಿ ಬಹುಮುಖಿಯಾಗಿ ಪ್ರಕಟವಾದ ವಿಶ್ವನಾಥ ಶೇಟ್ ರಾಜ್ಯೋತ್ಸವ ಪ್ರಶಸ್ತಿ ಪಡೆದರು.
ವಿಶ್ವಕೊಂಕಣಿ ಸಮ್ಮೇಳನದಲ್ಲಿ ವಸ್ತು ಪ್ರದರ್ಶನಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ ಗೌರವ ಪಡೆದರು. ಮೂಲತ: ಕೃಷಿ ಕೂಲಿ,ಬಂಗಾರದ ಕೆಲಸ ಮಾಡುವ ಕುಟುಂಬದ ವಿಶ್ವನಾಥ ಶೇಟ್ ಕುಸುರಿ ಕೆಲಸ, ಮರದ ಕೆತ್ತನೆ ಕೆಲಸಗಳಲ್ಲೂ ಸಿದ್ಧಹಸ್ತರು. ಅನಿವಾರ್ಯತೆ, ಹಸಿವು ಎಲ್ಲವನ್ನೂ ಕಲಿಸುತ್ತದೆ ಎನ್ನುವ ಶೇಟ್ ಜವಾನನಾಗಿ ನಂತರ ಜಗದೆತ್ತರಕ್ಕೆ ಪ್ರಸಿದ್ಧರಾದ ಬಹುಮುಖಿ 7 ದಶಕದ ಹಿರಿಯ ಜೀವವಾಗಿರುವ ವಿಶ್ವನಾಥ ಶೇಟ್ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪ್ರತಿಭಾವಂತ.
ಮಕ್ಕಳು ಹೊರ ಊರುಗಳಲ್ಲಿದ್ದರೂ ಇಲ್ಲೇ ನೆಲೆಸಿ,ಹಾರ್ಸಿಕಟ್ಟಾ ವೇ ತಮ್ಮ ಜನ್ಮಭೂಮಿ,ಕರ್ಮಭೂಮಿ ಎನ್ನುವ ಶೇಟ್ ರನ್ನು ಹುಡುಕಿ ಬಂದ ಗೌರವ, ಪ್ರಶಸ್ತಿ, ಪುರಸ್ಕಾರಗಳೂ ಅನೇಕ. ಭಾರತೀಯ ತತ್ವಶಾಸ್ತ್ರ,ಶಿಲ್ಫಶಾಸ್ತ್ರ, ಆಭರಣ ಶಾಸ್ತ್ರಗಳ ಮೇಲೆ ಮಾತನಾಡುವ ವಿರಳ ವಿದ್ವತ್ತಿನ ವಿಶ್ವನಾಥ ಶೇಟ್ ಕುಗ್ರಾಮದಲ್ಲಿ ಹುಟ್ಟಿ ಹಾರ್ಸಿಕಟ್ಟಾದ ಜೊತೆಗೇ ತಾಲೂಕು, ಉತ್ತರಕನ್ನಡವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ ಪ್ರತೀಭಾವಂತ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *