ಬದುಕಿನಲ್ಲಿ ಹಸಿವಿರಲಿ ಮತ್ತು, ಮೂರ್ಖತನವಿರಲಿ! . . . . ಸ್ಟೀವ್ ಜಾಬ್ಸ್

ಈ ಸಂಡೆ ಓದಿಗೆ ಸರಕು ಕೊಟ್ಟವರು ಡಿ.ರಾಮಪ್ಪ
“ಬದುಕಿನಲ್ಲಿ ಹಸಿವಿರಲಿ ಮತ್ತು, ಮೂರ್ಖತನವಿರಲಿ!”
. . . . ಸ್ಟೀವ್ ಜಾಬ್ಸ್

(ಸ್ಟೀವ್ ಜಾಬ್ಸ್ (1955-2011)

ನಮ್ಮ ಕಾಲಮಾನ ಕಂಡ ಅತ್ಯದ್ಭುತ ವ್ಯಕ್ತಿ ಮಾನವ!
ಆಪಲ್ ಕಂಪನಿಯ ಸಂಸ್ಥಾಪಕನಾಗಿದ್ದ ಈತ 1970-80ರ ದಶಕ ಕಂಡ ಪರ್ಸನಲ್ ಕಂಪ್ಯೂಟರ್ ಕ್ರಾಂತಿಯ ಕಾರಣಕರ್ತ ಮತ್ತು ಜಗತ್ತಿನ ಶ್ರೀಮಂತರಲ್ಲಿ ಒಬ್ಬ. ಅದಲ್ಲದೆ, ನೆಕ್ಷ್ಟ್ ಕಂಪನಿಯ ಸಂಸ್ಥಾಪಕ, ಪಿಕ್ಷರ್ ನ ಅತೀ ಹೆಚ್ಚು ಶೇರುದಾರ ಹಾಗೂ, ವಾಲ್ಟ್ ಡಿಸ್ನಿ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ಸ್ ನ ಸದಸ್ಯ. ಎಳವೆಯಲ್ಲಿ ಆಸಕ್ತಿಯಿಲ್ಲದ ವಿದ್ಯಾಭಾಸ ತೊರೆದು ವಿಚಿತ್ರವೆನಿಸುವ ಬದುಕು ಕಂಡ ಈತ, ಹರಯದ 20ನೇ ವಯಸ್ಸಿನಲ್ಲಿಯೇ ಆಪಲ್ ಕಂಪನಿಯನ್ನು ಸ್ಥಾಪಿಸಿ, ಉದ್ಯಮ ಲೋಕ ಬೆರಗುಗೊಳ್ಳುವಂತೆ ಮಾಡಿದ್ದ.

ಪದವಿ ಪ್ರಧಾನ ಸಮಾರಂಭಗಳಲ್ಲಿ ನಾಡಿನ ಸಾಧಕರೊಬ್ಬರನ್ನು ಕರೆಸಿ ಮಾತನಾಡಿಸುವುದು ನಮ್ಮ ವಿಶ್ವವಿದ್ಯಾಲಯಗಳ ವಿಶಿಷ್ಟ ಸಂಪ್ರದಾಯ. 2005ರ ಜೂನ್ 12ರಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಆಚರಿಸಿದ ಘಟಿತೋತ್ಸವ ಸಮಾರಂಭಕ್ಕೆ ಸ್ಟೀವ್ ಜಾಬ್ಸ್ ಆಮಂತ್ರಿತನಾಗಿದ್ದ. ಜಾಬ್ಸ್ ಅಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಭಾಷಣ, ನಮ್ಮೆಲ್ಲರನ್ನೂ ತಲ್ಲಣಗೊಳಿಸುವ, ಜಗತ್ತಿನ ಹೃದಯಸ್ಪರ್ಶಿ ಭಾಷಣಗಳಲ್ಲಿ ಒಂದಾಗಿದೆ. ಅದರ ಭಾವಾನುವಾದ ಇಲ್ಲಿದೆ.)

“ಪ್ರಪಂಚದ ಅತ್ಯುತ್ತಮ ವಿಶ್ವವಿದ್ಯಾಲಯವೊಂದರ ಘಟಿತೋತ್ಸವ ಸಂದರ್ಭದಲ್ಲಿ ನಿಮ್ಮೊಂದಿಗಿರುವ ಗೌರವ ನನ್ನದು. ನಾನು ಯಾವ ಕಾಲೇಜಿನಿಂದಲೂ ಪದವಿ ಪಡೆದವನಲ್ಲ. ನಿಮ್ಮೊಂದಿಗಿರುವ ಈ ಸಂದರ್ಭವೇ ಅಂತಹ ಪದವಿಗೆ ಸಮಾನವೆನಿಸಿದೆ. ಪದವಿ ಪಡೆದು ಹೊರಹೋಗುತ್ತಿರುವ ನಿಮ್ಮನ್ನುದ್ದೇಶಿಸಿ ಮಾತನಾಡಲು ಇಂದು, ನನ್ನ ಜೀವನದ ಮೂರು ಘಟನೆಗಳನ್ನು ಆರಿಸಿಕೊಂಡಿದ್ದೇನೆ.

ಒಂದನೆಯದು: ಚುಕ್ಕಿಗಳ ಜೋಡಣೆ:-
ನಾನು ಕಾಲೇಜಿನಿಂದ ಪದವಿ ಪಡೆದವನಲ್ಲ ಎಂದು ಆಗಲೇ ಹೇಳಿದ್ದೇನೆ. ಕಾಲೇಜು ಸೇರಿದ 6 ತಿಂಗಳಲ್ಲಿಯೇ ನಾನು ತರಗತಿಗಳಿಗೆ ಹೋಗುವುದನ್ನು ಬಿಟ್ಟುಬಿಟ್ಟೆ! ಆದರೆ ಕಾಲೇಜು ಬಿಡುವ ಪೂರ್ವದಲ್ಲಿ 18 ತಿಂಗಳುಗಳ ಕಾಲ ಅಲ್ಲೇ ಸುಮ್ಮನೆ ಅಲೆದಾಡಿದೆ. ಈ ಬಿಡುವ ಕ್ರಿಯೆ ನಾನು ಹುಟ್ಟುವ ಮೊದಲೇ ಪ್ರಾರಂಭವಾಗಿತ್ತು. ನಾನು ಹುಟ್ಟಿದಾಗ ನನ್ನ ಹೆತ್ತ ತಾಯಿ, ಮದುವೆಯಾಗದ, ಪದವಿ ಓದುತ್ತಿದ್ದ ಹುಡುಗಿಯಾಗಿದ್ದಳು!
ಹೊಟ್ಟೆಯಲ್ಲಿದ್ದಾಗಲೇ ನನ್ನನ್ನು ದತ್ತಕ ಕೊಟ್ಟು “ಬಿಡಲು” ನಿರ್ಧರಿಸಿದ್ದಳು. ದತ್ತಕ ಪಡೆಯುವ ಪಾಲಕರು, ಕಾಲೇಜು – ಪದವಿ ಪಡೆದವರಾಗಿರಬೇಕೆಂಬುದು ಆಕೆಯ ಆಶೆಯಾಗಿತ್ತು. ಅಂತೆಯೇ ಲಾಯರ್ ದಂಪತಿಯೊಬ್ಬರಿಗೆ ನನ್ನನ್ನು ದತ್ತಕ ಕೊಡುವ ಮಾತುಕತೆ ಮುಗಿಸಿದ್ದಳು. ಆದರೆ, ನಾನು ಈ ಲೋಕದಲ್ಲಿ ಕಣ್ಬಿಟ್ಟ ಗಳಿಗೆಯಲ್ಲಿ, ಆ ಲಾಯರ್ ದಂಪತಿಗಳಿಗೆ ಜ್ಞಾನೋದಯವಾಗಿ,”ಹೇಣ್ಣುಮಗು ಬೇಕೆಂಬ ಆಶೆಯಾಯ್ತಂತೆ! ಆದ್ದರಿಂದ, ಈಗಿನ ತಂದೆತಾಯಿ ನನ್ನನ್ನು ದತ್ತಕ ಪಡೆದರು. ಆದರೆ ಅವರು ಪದವಿ ಪಡೆದವರಾಗಿರಲಿಲ್ಲ. ನನ್ನನ್ನು ಪದವೀಧÀರನಾಗಿ ಮಾಡುವುದಾಗಿ ಅವರು ಕೊಟ್ಟ ಭರವಸೆಯ ಮೇಲೆ ದತ್ತಕ ಕೊಟ್ಟುಬಿಟ್ಟಳು.

ನೋಡಿ, ನಾನು ಹುಟ್ಟಿದ 17 ವರ್ಷಗಳ ನಂತರ ಕಾಲೇಜಿಗೆ ಹೋದೆ. ಆದರೆ, ಕಾರ್ಮಿಕರಾಗಿದ್ದ ನನ್ನ ಪಾಲಕರು ಕೂಲಿಮಾಡಿ ಉಳಿಸಿದ್ದÀಸ್ಟೂ ಹಣ, ಟ್ಯೂಷನ್‍ಗೆ ಕೂಡ ಸಾಲದಂತ ದುಬಾರಿ ಕಾಲೇಜನ್ನು – ನನಗೆ ಗೊತ್ತಿಲ್ಲದಂತೆ – ಸೇರಿದ್ದೆ. ಈ ಮಧ್ಯೆ – ಅಂದರೆ ಆರು ತಿಂಗಳಲ್ಲೇ – ಕಾಲೇಜಿನ ತರಗತಿಗಳಲ್ಲಿ ನಾನು ಆಸಕ್ತಿ ಕಳೆದುಕೊಂಡಿದ್ದೆ. ಯಾಕೆಂದರೆ, ಜೀವನದಲ್ಲಿ ನಾನೇನು ಮಾಡಬೇಕು ಎಂಬ ಗೊಂದಲ ಮತ್ತು, ಅದನ್ನು ನಿರ್ಧರಿಸಲು ಕಾಲೇಜಿನ ಪದವಿ ಹೇಗೆ ಸಹಕರಿಸುತ್ತದೆ ಎಂಬ ಅನುಮಾನ ಕಾಡತೊಡಗಿತು. ನನ್ನ ಪಾಲಕರು ಜೀವಮಾನ ಪೂರ್ತಿ ದುಡಿದು ಕಷ್ಟಪಟ್ಟು ಉಳಿಸಿದ ಅಲ್ಪ ಹಣವನ್ನೂ ನಾನಿಲ್ಲಿ ಪೋಲು ಮಾಡುತ್ತಿದ್ದೇನೆ ಅನ್ನಿಸತೊಡಗಿತು. ಆದ್ದರಿಂದ ಪದವಿ ಪಡೆಯುವ ಪ್ರಯತ್ನವನ್ನು “ಬಿಡು”ವುದೇ ಸೂಕ್ತ ಎನಿಸಿತು. ಆ ಸಮಯದಲ್ಲದು ದಿಗಿಲು ಹುಟ್ಟಿಸುವ ನಿರ್ಧಾರ. ಆದರೆ, ಹಿಂತಿರುಗಿ ನೋಡಿದಾಗ, ಜೀವನದಲ್ಲಿ ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಇದೊಂದು ಎನ್ನಿಸಿದೆ!

ಆ ಗಳಿಗೆಯಿಂದ, ನನಗಿಷ್ಟವಿಲ್ಲದ ತರಗತಿಗಳಿಗೆ ಹೋಗುವುದನ್ನು ನಿಲ್ಲಿಸಿದೆ. ಕೇವಲ ಆಸಕ್ತಿ ಹುಟ್ಟಿಸುತಿದ್ದ ತರಗತಿಗಳಿಗೆ ಮಾತ್ರ ಹಾಜರಾಗಲು ಪ್ರಾರಂಭಿಸಿದೆ. ಉಳಿದುಕೊಳ್ಳಲು ಕೊಠಡಿಯಿರಲಿಲ್ಲ; ಆದ್ದರಿಂದ ಸ್ನೇಹಿತರ ರೂಮುಗಳಲ್ಲಿ ನೆಲದ ಮೇಲೆ ಮಲಗುತ್ತಿದ್ದೆ. ಊÀಟದ ಖರ್ಚಿಗಾಗಿ, ಸ್ನೇಹಿತರು ಕುಡಿದೆಸೆಯುತ್ತಿದ್ದ ಕೋಲ್ಡ್ರಿಂಕ್ಸ್ ನ ಕಾಲೀ ಬಾಟಲಿಗಳನ್ನು ಮಾರುತ್ತಿದ್ದೆ. ಹರೇಕೃಷ್ಣ ದೇವಾಲಯದಲ್ಲಿ ಪ್ರತೀ ಭಾನುವಾರ ಒಂದು ಒಳ್ಳೆಯ ಊಟ ಪುಕ್ಕಟೆ ಕೊಡುತ್ತಿದ್ದರು. ಅದಕ್ಕಾಗಿ 7 ಮೈಲು ದೂರ ನಡೆಯುತ್ತಿದ್ದೆ. ಅವೆಲ್ಲವನ್ನೂ ನಾನು ಇಷ್ಟಪಟ್ಟು ಮಾಡುತ್ತಿದ್ದೆ!

ಅಂತಃಪ್ರಜ್ಞೆ ಮತ್ತು ಕುತೂಹಲಗಳಿಂದ ನಾನು ಪಡೆದ ಹೆಚ್ಚಿನವು ನಂತರ ನನಗೆ ಅತ್ಯಮೂಲ್ಯ ಎನ್ನಿಸಿಬಿಟ್ಟವು. ಉದಾಹರಣೆಗೆ, ರೀಡ್ ಕಾಲೇಜ್ ಆಗ ಕ್ಯಾಲಿಗ್ರಫಿಗೆ ಸಂಬಂಧಿಸಿ ಅತ್ಯುತ್ತಮ ತರಬÉೀತಿ ಕೊಡುತ್ತಿತ್ತು. ವಿಜ್ಞಾನ-ತಂತ್ರಜ್ಞಾನಗಳು ಸೆರೆಹಿಡಿಯಲು ಸಾಧ್ಯವಿಲ್ಲದ ಸೂಕ್ಷ್ಮ ಮತ್ತು ಕಲಾತ್ಮಕ ಅಕ್ಷರ ವಿನ್ಯಾಸದ ಕ್ಯಾಲಿಗ್ರಫಿ ನನಗೆ ಆಕರ್ಷಕವೆನಿಸಿತು. ಇವುಗಳಲ್ಲಿ ಯಾವೊಂದೂ ಭವಿಷ್ಯದಲ್ಲಿ ಉಪಯೋಗಕ್ಕೆ ಬರುವುದೆÉಂದು ನಾನು ಕಲ್ಪಿಸಿರಲಿಲ್ಲ. ಆದರೆ, 10 ವರ್ಷಗಳ ನಂತರ, ನಾವು ಮ್ಯಾಕಿಂತೋಷ್ ಕಂಪ್ಯೂಟರ್ ವಿನ್ಯಾಸ ಮಾಡುವಾಗ ಕ್ಯಾಲಿಗ್ರಫಿಯ ಕಲಿಕೆ ಉಪಯೋಗಕ್ಕೆ ಬಂತು. ನಾನು ಇಷ್ಟಪಟ್ಟ ಕ್ಯಾಲಿಗ್ರಫಿಯನ್ನು ಅಂದು ಕಲಿಯದಿದ್ದಿದ್ದರೆ, ಈ ಅದ್ಭುತ ಅಕ್ಷರವಿನ್ಯಾಸವನ್ನು ನಾವು ಅಭಿವೃದ್ಧಿಪಡಿಸಿದ ಮ್ಯಾಕಿಂತೋಷ್ ಕಂಪ್ಯೂಟರ್ ಪಡೆದಿರುತ್ತಿರಲಿಲ್ಲ.
ಅಂದಿನ ಕಲಿಕೆಯೊಂದು ಕಾಲಾಂತರದಲ್ಲಿ ಹೀಗೆ ಉಪಯೊಗಕ್ಕೆ ಬರುತ್ತದೆಂದು ಗ್ರಹಿಸಿರಲಿಲ್ಲ. ಹಿಂತಿರುಗಿ ನೋಡಿದಾಗ, ಕಲಿತ ಚುಕ್ಕಿಯೊಂದು ಉಪಯೋಗವೆಂಬ ಇನ್ನೊಂದು ಚುಕ್ಕಿಯನ್ನು ಸಂಧಿಸಿರುವುದು ಕಾಣಿಸಿತು. ಆದ್ದರಿಂದ, ಕಲಿಕೆ-ಕ್ರಿಯೆ-ಉಪಯೋಗಗಳಂತಹ ಚುಕ್ಕಿಗಳು, ಮುಂದೊಂದು ದಿನ ಹೇಗೋ ಪರಸ್ಪರ ಸಂಧಿಸುತ್ತವೆ! ಅದನ್ನು ನೀವು ಕರ್ಮ, ಹಣೆಬರಹ, ಕುತೂಹಲ, ಏನೆಂದು ಬೇಕಾದರೂ ಕರೆಯಿರಿ. ಹೀಗೆ, ಆಂತಃಪ್ರಜ್ಞೆ ಮತ್ತು ಕುತೂಹಲಗಳನ್ನು ನಂಬಿ ನಾನು ಮುಂದುವರಿದೆ. ಈ ವಿಧಾನ ನನ್ನ ಜೀವನದ ಎಲ್ಲಾ ಏರಿಳಿತಗಳಿಗೆ ಕಾರಣವಾಗಿದೆಯಾದರೂ, ಯಾವತ್ತೂ ಪಶ್ಚಾತ್ತಾಪ ಪಡುವಂತೆ ಮಾಡಲಿಲ್ಲ!
ಎರಡನೆಯದು: ಪ್ರೀತಿ ಮತ್ತು ಅವಹೇಳನ:-
ನಾನು ಜೀವನದ ಎಳೆವೆಯಲ್ಲಿಯೇ ನನ್ನಿಷ್ಟದ ಕೆಲಸ ಯಾವುದು ಎಂದರಿತ ಅದೃಷ್ಟವಂತನಾಗಿದ್ದೆ. ಸ್ಟೀವ್ ವಾಜ್ಞಿಕ್ ಜೊತೆಗುಡಿ ನನ್ನ ತಂದೆಯ ಗ್ಯಾರೇಜಿನಲ್ಲಿ ಆಪಲ್ ಕಂಪನಿ ಪ್ರಾರಂಭಿಸಿದಾಗ ನನಗೆ 20 ವರ್ಷ ವಯಸ್ಸು. ಮುಂದಿನ 10 ವರ್ಷಗಳಲ್ಲಿ ಆಪಲ್ ಕಂಪನಿ, 4000 ನೌಕರರು ಕೆಲಸಮಾಡುತ್ತಿದ್ದ 2 ಬಿಲಿಯನ್ ಡಾಲರ್ ಮೌಲ್ಯದ ಸಂಸ್ಥೆಯಾಗಿ ಬೆಳೆದಿತ್ತು! ಹಾಗೆ ಬೆಳೆಯಲು ನಾವು ತುಂಬಾ ಕಷ್ಟಪಟ್ಟಿದ್ದೆವು. ನಾವು ಅತ್ಯಾಧುನಿಕ ಮ್ಯಾಕಿಂತೋಷ್ ಕಂಪ್ಯೂಟರ್ ಬಿಡುಗಡೆ ಮಾಡಿದಾಗ, ನಾನು 30 ರ ಹರಯದ ಹುಮ್ಮಸ್ಸಿನಲ್ಲಿದ್ದೆ. ಆದರೆ, ಅದಾದ ಸ್ವಲ್ಪ ದಿನಗಳಲ್ಲೆ ನಾನು ಬೆಳೆಸಿದ ಕಂಪನಿಯಿಂದ ನಾನೇ ಹೊರದೂಡಲ್ಪಟ್ಟಿದ್ದೆ! ಅಂದು ನನ್ನ ಬದುಕಿನ ಕೇಂದ್ರ ಆಕಾಂಕ್ಷೆಯೇ ನುಚ್ಚುನೂರಾಗಿತ್ತು. ಯಶಸ್ಸಿನ ತುತ್ತತುದಿಯಲ್ಲಿದ್ದ ನಾನು ನಿರ್ಗತಿಕನಂತಾಗಿದ್ದೆ!

ಮುಂದೇನು ಮಾಡಬೇಕೆಂದೇ ನನಗೆ ತಿಳಿಯಲಿಲ್ಲ. ರಿಲೇ ಓಟದಲ್ಲಿ ನಾನು ಪಡೆದ ಬ್ಯಾಟನ್ನನ್ನೇ ಕೆಳಗೆ ಬೀಳಿಸಿ ಒಂದು ತಲೆಮಾರಿನ ಉದ್ಯಮಿಗಳಿಗೆ ಮೋಸಮಾಡಿಬಿಟ್ಟೆ ಎಂಬ ಪಶ್ಚಾತ್ತಾಪ ನನಗಾಯ್ತು. ಕಂಪನಿಯ ನಿರ್ದೇಶಕರನ್ನು ಭೇೀಟಿಮಾಡಿ ನನಗೆ ಕೊಟ್ಟ ಕೆಟ್ಟ ಶಿಕ್ಷೆಯ ಬಗ್ಗೆ ಪುನರ್ಚಿಂತಿಸುವಂತೆ ಕ್ಷಮೆ ಯಾಚಿಸಿದೆ; ಪ್ರಯೋಜನವಾಗಲಿಲ್ಲ. ಅಂದು ನಾನು ಜೀವನದಲ್ಲಿ ಸೋತುಬಿಟ್ಟೆÉನೆಂದೆನಿಸಿ ಈ ಬದುಕನ್ನು ಕೊನೆಗೊಳಿಸಿಕೊಳ್ಳÀಲು ಯೋಚಿಸಿದ್ದೆ.
ಆದರೆ ನಿಧಾನವಾಗಿ ಏನೋ ಗೋಚರಿಸಲಾರಂಭಿಸಿತು. ಆಪಲ್ ನಲ್ಲಿ ನಾನು ಮಾಡಿದ್ದ ಕೆಲಸವನ್ನು ಇನ್ನೂ ಪ್ರೀತಿಸುತ್ತಿದ್ದೆ. ನಾನು ಅನುಭವಿಸಿದ ಅವಮಾನ ಇದಕ್ಕೆ ಅಡ್ಡಿಬರಲಿಲ್ಲ. ಹಾಗಾಗಿ, ಮತ್ತೆ ನಾನು ನನ್ನಿಷ್ಟದ ಕೆಲಸದಲ್ಲಿ ತೊಡಗಿಕೊಂಡೆ. ಆಪಲ್‍ನಿಂದ ಹೊರದೂಡಲ್ಪಟ್ಟಿದ್ದು ನನ್ನ ಜೀವನದಲ್ಲಾದ ಅತ್ಯುತ್ತಮ ತಿರುವೆಂದು ಆಗ ಗೋಚರಿಸಿರÀಲಿಲ್ಲ. ಸಾರ್ವಜನಿಕರು ಯಶಸ್ವೀ ಎಂದುಕೊಂಡ ಮನುಷ್ಯ ಅನುಭವಿಸುವ ಭಾರ ಕಳಚಿ, ಹವ್ಯಾಸಿಯೊಬ್ಬನ ನಿರಾಳತೆ ನನಗಂದು ದಕ್ಕಿತು. ಜೀವನದ ಅತ್ಯಂತ ಸೃಜನಶೀಲ ಅವಧಿಯೊಂದನ್ನು ಪ್ರವೇಶಿಸಲು ನನ್ನನ್ನು ಅದು ಅಣಿಗೊಳಿಸಿತು.
ಮುಂದಿನ 5 ವರ್ಷಗಳ ಆವಧಿಯಲ್ಲಿ ನೆಕ್ಷ್ಟ್ ಮತ್ತು ಪಿಕ್ಷರ್ ಕಂಪನಿಗಳನ್ನು ಪ್ರಾರಂಭಿಸಿ ಯಶಸ್ವಿಯಾದೆ. ಘಟನೆಗಳ ಗಮನಾರ್ಹ ತಿರುವಿನಲ್ಲಿ ಆಪಲ್, ನೆಕ್ಷ್ಟ್ ಅನ್ನು ಖರೀದಿಸಿತು. ನಾನು ಆಪಲ್ ಗೆ ಹಿಂದಿರುಗಿದೆ. ವಿಶೇಷವೆಂದರೆ, ನೆಕ್ಷ್ಟನಲ್ಲಿ ನಾವು ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಆಪಲ್ ನ ನಂತರದ ಪುನರುಜ್ಜೀವನಕ್ಕೆ ಕಾರಣವಾಯ್ತು!

ಆಪಲ್‍ನಿಂದ ಕಿತ್ತೆಸೆಯಲ್ಪಡದೇ ಇದ್ದಿದ್ದರೆ, ಇದಾವುದೂ ನಡೆಯುತ್ತಿರಲಿಲ್ಲವೆಂಬ ವಿಶ್ವಾಸ ನನಗಿದೆ. ಕೆಟ್ಟರುಚಿಯ ಔಷಧಿಯಾದರೂ, ರೋಗಿಗೆ ಅದರ ಅವಶ್ಯಕತೆಯಿರುತ್ತದೆ. ನಂಬಿಕೆ ಕಳೆದುಕೊಳ್ಳದೆ ನಾನು ಮುನ್ನಡೆಯುತ್ತಿರುವಂತೆ ಮಾಡಿದ್ದೇ ಕೆಲಸದ ಮೇಲಿನ ಪ್ರೀತಿ. ಕೆಲಸದ ಆಯ್ಕೆಯಲ್ಲಿ ನಾವು ಇಷ್ಟಪಡುವುದನ್ನೇ ಹುಡುಕಬೇಕು. ಜೀವನದ ಹೆಚ್ಚಿನ ಭಾಗವನ್ನು ಕೆಲಸ ಆವರಿಸುವುದರಿಂದ, ನಮ್ಮಿಷ್ಟದ ಕೆಲಸ ಮಾಡುವುದೇ ಹೆಚ್ಚಿನ ನೆಮ್ಮದಿಗೆ ದಾರಿ. ಅತ್ಯುತ್ತಮ ಕೆಲಸ ಮಾಡುವ ಒಂದೇ ಒಂದು ಮಾರ್ಗವೆಂದರೆ, ಮಾಡುವ ಕೆಲಸವನ್ನು ಇಷ್ಟಪಡುವುದು. ಇಲ್ಲಿಯವರೆಗೆ ನಮಗದು ಸಿಗದಿದ್ದರೆ ಹುಡುಕುತ್ತಿರಬೇಕು – ಸಿಗುವವರೆಗೆ!
ಮೂರನೆಯದು: ಸಾವು:-
“ಪ್ರತಿದಿನವನ್ನೂ, ಇದು ನನ್ನ ಕೊನೆಯ ದಿನ ಎಂದು ಬದುಕಿದರೆ, ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ” ಎಂಬ ಉಲ್ಲೇಖವೊಂದನ್ನು ನಾನು 17 ವರ್ಷದವನಿದ್ದಾಗ ಓದಿದ್ದೆ. ಪ್ರತಿದಿನ ಬೆಳಿಗ್ಗೆ ಎದ್ದು, “ಇದು ನನ್ನ ಕೊನೆಯ ದಿನವಾಗುವುದಾದರೆ, ಇಂದು ನಾನು ಯೋಚಿಸಿರುವ ಕೆಲಸ ಮಾಡುವೆನೆ?” ಎಂದು ಕನ್ನಡಿಯ ಮುಂದೆ ನಿಂತು, ಕಳೆದ 33 ವರ್ಷಗಳಿಂದ ಕೇಳಿಕೊಳ್ಳುತ್ತಿದ್ದೇನೆ. ಹಲವಾರು ದಿನಗಳ ಕಾಲ ಸತತವಾಗಿ ಇದಕ್ಕೆ “ಇಲ್ಲ” ಎಂಬ ಉತ್ತರ ಬಂದರೆ, ಜಿವನದ ನಡಿಗೆಯಲ್ಲಿ ಏನೋ ಬದಲಾವಣೆ ಬೇಕು ಎಂದು ನನಗನ್ನಿಸಿಬಿಡುತ್ತದೆ.
ಜೀವನದಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು, “ಶೀಘ್ರದಲ್ಲೇ ಸಾಯುತ್ತೇನೆ” ಎಂದು ಆಗಾಗ ನೆನಪು ಮಾಡಿಕೊಳ್ಳುವುದೇ ನನ್ನ ಮುಖ್ಯ ಅಸ್ತ್ರವಾಗಿದೆ. ಪ್ರಮುಖ ವಿಷಯಗಳನ್ನು ಬಿಟ್ಟು, ಉಳಿದೆಲ್ಲವೂ – ಎಲ್ಲಾ ಬಾಹ್ಯ ನಿರೀಕ್ಷೆಗಳು, ಹೆಮ್ಮೆಯ ಸಂಗತಿಗಳು, ಮುಜುಗರ ಮತ್ತು ಸೋಲಿನ ಭಯ – ಸಾವಿನ ನೆನಪಿನ ಎದುರು ಬಿದ್ದುಹೋಗುತ್ತವೆ. ಏನನ್ನೋ ಕಳೆದುಕೊಳ್ಳುವೆನೆಂಬ ಭಯದ ಬಲೆಯಿಂದ ತಪ್ಪಿಸಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ, ಸಾವಿನ ನೆನಪು ಮಾಡಿಕೊಳ್ಳುವುದು! ಸಾವಿನ ಎದುರು ಬೆತ್ತಲಾಗುವ ನಾವು ಹೃದಯ ಹೇಳಿದಂತೆ ಕೇಳುತ್ತೇವೆ ಮತ್ತು ಕೇಳಬೇಕು.
ಒಂದು ವರ್ಷದ ಹಿಂದೆ, ನನ್ನ ಮೇದೋಜ್ಜೀರಕ ಗ್ರಂಥಿಗೆ ಕ್ಯಾನ್ಸರ್ ತಗುಲಿದೆ ಎಂದು ತಿಳಿಯಿತು. ಎಂತಹ ತಮಾಷೆ ನೊಡಿ: ಇದೊಂದು ವಿಚಿತ್ರ ಪ್ರಕಾರದ ಕ್ಯಾನ್ಸರ್ ಎಂದೂ, ತಗುಲಿದವರು ಬದುಕುಳಿಯುವುದು ಕಷ್ಟsÀವೆಂದೂ, ಹೆಚ್ಚೆಂದರೆ 3 ರಿಂದ 6 ತಿಂಗಳಷ್ಟೇ ಬದುಕುಳಿಯಬಹುದೆಂದೂ, ನಾನು ಮನೆಗೆ ಹೋಗಿ ನನ್ನೆಲ್ಲಾ ವ್ಯವಹಾರಗಳನ್ನೂ ಸರಿಯಾಗಿ ನೋಡಿ ಉತ್ತರಾಧಿಕಾರಿಗೆ ವರ್ಗಾಯಿಸಿ ಸಾಯಲು ತಯಾರಾಗಬೇಕೆಂದೂ ಡಾಕ್ಟರ್ ಸೂಚಿಸಿದರು! ಆದರೆ ನಂತರ ಬಂದ ಬಯಾಪ್ಸಿ ರಿಪೋರ್ಟ್ ನೊಡಿದ ಅವರು ನನಗೆ ತಗುಲಿರುವ ಕ್ಯಾನ್ಸರ್ ತುಂಬಾ ಅಪರೂಪದ್ದೆಂದೂ, ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸಬಹುದೆಂದೂ ಸಂಬ್ರಮಿಸಿದರು. ಸಾವನ್ನು ಅತ್ಯಂತ ಹತ್ತಿರದಿಂದ ನೋಡಿದ ಸಂದರ್ಭ ಇದಾಗಿತ್ತು.

ಕೇವಲ ಬೌದ್ಧಿಕ ಪರಿಕಲ್ಪನೆಯಾದಾಗ ಮಾತ,್ರ ಸಾವು ಉಪಯುಕ್ತವಾದದ್ದು. ಅದಲ್ಲದಿದ್ದರೆ ಯಾರೂ – ಸ್ವರ್ಗದ ಆಸೆ ಇರುವವರೂ ಕೂಡ – ಸಾಯಲು ಇಷ್ಟಪಡುವುದಿಲ್ಲ. ಆದರೆ, ಸಾವು ಮಾತ್ರ ನಾವೆಲ್ಲಾ ಸೇರುವ ಕೊನೆಯ ತಾಣವಾಗಿದೆ. ಅದನ್ನು ತಪ್ಪಿಸಿಕೊಂಡವರಿಲ್ಲ. ಬಹುಷಃ, ಪ್ರಕೃತಿಯ ಅತ್ಯುನ್ನತ ಆವಿಷ್ಕಾರ ಅದು. ಜೀವನಕ್ಕೆ ಬದಲಾವಣೆ ತರುವ ದೂತನಂತೆ ಅದು, ಹಳೆಬೇರನ್ನು ತೆಗೆದು ಹೊಸ ಚಿಗುರಿಗೆ ದಾರಿ ಮಾಡುತ್ತದೆ. ಈಗ ನೀವು ಹೊಸ ಚಿಗುರು. ಆದರೆ ಕೆಲ ಸಮಯದಲ್ಲಿ ನೀವು ನಿಧಾನವಾಗಿ ಹಳಬರೆನಿಸಿಕೊಳ್ಳುವಿರಿ. ನಾಟಕೀಯ ಅನ್ನಿಸಿದರೂ ಇದು ನಿಜ. ಅಂದರೆ, ನಮ್ಮ ಇಲ್ಲಿನ ಸಮಯ ಸೀಮಿತ. ಆದ್ದರಿಂದ, ಬೇರೆಯವರಿಗಿಟ್ಟ ಸಮಯ ಅಂದರೆ, ಜೀವನ ಜೀವಿಸಿ ಸಮಯ ವ್ಯರ್ಥ ಮಾಡಬಾರದು. ಬೇರೆಯವರ ಚಿಂತನೆಯ ಫಲಿತಾಂಶದಲ್ಲಿ ಅಂದರೆ, ತತ್ವಗಳಲ್ಲಿ ಬದುಕಬಾರದು. ಬೇರೆಯವರ ಕೂಗಾಟದಲ್ಲಿ ನಮ್ಮ ಒಳದನಿಯನ್ನು ಅಡÀಗಿಸಲು ಅವಕಾಶ ಕೊಡಬಾರದು. ನಮ್ಮ ಹೃದಯ ಮತ್ತು ಅಂತಃಪ್ರಜ್ಞೆ ಹೇಳಿದ್ದನ್ನು ಅನುಸರಿಸುವ ಧೈರ್ಯ ಮಾಡಬೇಕು. ಯಾಕೆಂದರೆ ನಮಗೇನು ಬೇಕು ಎಂದು ಅವುಗಳಿಗೆ ಗೊತ್ತಿದೆ. ಉಳಿದುದೇನೂ ಮುಖ್ಯವಲ್ಲ.

ನಾನು ಚಿಕ್ಕವನಿದ್ದಾಗ,

ಈ ಸಂಡೆ ಓದಿಗೆ ಸರಕು ಕೊಟ್ಟವರು ಡಿ.ರಾಮಪ್ಪ
“ಬದುಕಿನಲ್ಲಿ ಹಸಿವಿರಲಿ ಮತ್ತು, ಮೂರ್ಖತನವಿರಲಿ!”
. . . . ಸ್ಟೀವ್ ಜಾಬ್ಸ್

(ಸ್ಟೀವ್ ಜಾಬ್ಸ್ (1955-2011) ನಮ್ಮ ಕಾಲಮಾನ ಕಂಡ ಅತ್ಯತ್ಭುತ ವÀ್ಯಕ್ತಿ-ಮಾನವ!
ಆಪಲ್ ಕಂಪನಿಯ ಸಂಸ್ಥಾಪಕನಾಗಿದ್ದ ಈತ 1970-80ರ ದಶಕ ಕಂಡ ಪರ್ಸನಲ್ ಕಂಪ್ಯೂಟರ್ ಕ್ರಾಂತಿಯ ಕಾರಣಕರ್ತ ಮತ್ತು ಜಗತ್ತಿನ ಶ್ರೀಮಂತರಲ್ಲಿ ಒಬ್ಬ. ಅದಲ್ಲದೆ, ನೆಕ್ಷ್ಟ್ ಕಂಪನಿಯ ಸಂಸ್ಥಾಪಕ, ಪಿಕ್ಷರ್ ನ ಅತೀ ಹೆಚ್ಚು ಶೇರುದಾರ ಹಾಗೂ, ವಾಲ್ಟ್ ಡಿಸ್ನಿ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ಸ್ ನ ಸದಸ್ಯ. ಎಳವೆಯಲ್ಲಿ ಆಸಕ್ತಿಯಿಲ್ಲದ ವಿದ್ಯಾಬ್ಯಾಸ ತೊರೆದು ವಿಚಿತ್ರವೆನಿಸುವ ಬದುಕು ಕಂಡ ಈತ, ಹರಯದ 20ನೇ ವಯಸ್ಸಿನಲ್ಲಿಯೇ ಆಪಲ್ ಕಂಪನಿಯನ್ನು ಸ್ಥಾಪಿಸಿ, ಉದ್ಯಮ ಲೋಕ ಬೆರಗುಗೊಳ್ಳುವಂತೆ ಮಾಡಿದ್ದÀ.

ಪದವಿ ಪ್ರಧಾನ ಸಮಾರಂಭಗಳಲ್ಲಿ ನಾಡಿನ ಸಾಧಕರೊಬ್ಬರನ್ನು ಕರೆಸಿ ಮಾತನಾಡಿಸುವುದು ನಮ್ಮ ವಿಶ್ವವಿದ್ಯಾಲಯಗಳ ವಿಶಿಷ್ಟ ಸಂಪ್ರದಾಯ. 2005ರ ಜೂನ್ 12ರಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಆಚರಿಸಿದ ಘಟಿತೋತ್ಸವ ಸಮಾರಂಭಕ್ಕೆ ಸ್ಟೀವ್ ಜಾಬ್ಸ್ ಆಮಂತ್ರಿತನಾಗಿದ್ದ. ಜಾಬ್ಸ್ ಅಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಬಾಷಣ, ನಮ್ಮೆಲ್ಲರನ್ನೂ ತಲ್ಲಣಗೊಳಿಸುವ, ಜಗತ್ತಿನ ಹೃದಯಸ್ಪರ್ಶಿ ಭಾಷಣಗಳಲ್ಲಿ ಒಂದಾಗಿದೆ. ಅದರ ಭಾವಾನುವಾದ ಇಲ್ಲಿದೆ.)

“ಪ್ರಪಂಚದ ಅತ್ಯುತ್ತಮ ವಿಶ್ವವಿದ್ಯಾಲಯವೊಂದರ ಘಟಿತೋತ್ಸವ ಸಂದರ್ಭದಲ್ಲಿ ನಿಮ್ಮೊಂದಿಗಿರುವ ಗೌರವ ನನ್ನದು. ನಾನು ಯಾವ ಕಾಲೇಜಿನಿಂದಲೂ ಪದವಿ ಪಡೆದವನಲ್ಲ. ನಿಮ್ಮೊಂದಿಗಿರುವ ಈ ಸಂದರ್ಭವೇ ಅಂತಹ ಪದವಿಗೆ ಸಮಾನವೆನಿಸಿದೆ. ಪದವಿ ಪಡೆದು ಹೊರಹೋಗುತ್ತಿರುವ ನಿಮ್ಮನ್ನುದ್ದೇಶಿಸಿ ಮಾತನಾಡಲು ಇಂದು, ನನ್ನ ಜೀವನದ ಮೂರು ಘಟನೆಗಳನ್ನು ಆರಿಸಿಕೊಂಡಿದ್ದೇನೆ.

ಒಂದನೆಯದು: ಚುಕ್ಕಿಗಳ ಜೋಡಣೆ:-
ನಾನು ಕಾಲೇಜಿನಿಂದ ಪದವಿ ಪಡೆದವನಲ್ಲ ಎಂದು ಆಗಲೇ ಹೇಳಿದ್ದೇನೆ. ಕಾಲೇಜು ಸೇರಿದ 6 ತಿಂಗಳಲ್ಲಿಯೇ ನಾನು ತರಗತಿಗಳಿಗೆ ಹೋಗುವುದನ್ನು ಬಿಟ್ಟುಬಿಟ್ಟೆ! ಆದರೆ ಕಾಲೇಜು ಬಿಡುವ ಪೂರ್ವದಲ್ಲಿ 18 ತಿಂಗಳುಗಳ ಕಾಲ ಅಲ್ಲೇ ಸುಮ್ಮನೆ ಅಲೆದಾಡಿದೆ. ಈ ಬಿಡುವ ಕ್ರಿಯೆ ನಾನು ಹುಟ್ಟುವ ಮೊದಲೇ ಪ್ರಾರಂಭವಾಗಿತ್ತು. ನಾನು ಹುಟ್ಟಿದಾಗ ನನ್ನ ಹೆತ್ತ ತಾಯಿ, ಮದುವೆಯಾಗದ, ಪದವಿ ಓದುತ್ತಿದ್ದ ಹುಡುಗಿಯಾಗಿದ್ದಳು!
ಹೊಟ್ಟೆಯಲ್ಲಿದ್ದಾಗಲೇ ನನ್ನನ್ನು ದತ್ತಕ ಕೊಟ್ಟು “ಬಿಡಲು” ನಿರ್ಧರಿಸಿದ್ದಳು. ದತ್ತಕ ಪಡೆಯುವ ಪಾಲಕರು, ಕಾಲೇಜು – ಪದವಿ ಪಡೆದವರಾಗಿರಬೇಕೆಂಬುದು ಆಕೆಯ ಆಶೆಯಾಗಿತ್ತು. ಅಂತೆಯೇ ಲಾಯರ್ ದಂಪತಿಯೊಬ್ಬರಿಗೆ ನನ್ನನ್ನು ದತ್ತಕ ಕೊಡುವ ಮಾತುಕತೆ ಮುಗಿಸಿದ್ದಳು. ಆದರೆ, ನಾನು ಈ ಲೋಕದಲ್ಲಿ ಕಣ್ಬಿಟ್ಟ ಗಳಿಗೆಯಲ್ಲಿ, ಆ ಲಾಯರ್ ದಂಪತಿಗಳಿಗೆ ಜ್ಞಾನೋದಯವಾಗಿ,”ಹೇಣ್ಣುಮಗು ಬೇಕೆಂಬ ಆಶೆಯಾಯ್ತಂತೆ! ಆದ್ದರಿಂದ, ಈಗಿನ ತಂದೆತಾಯಿ ನನ್ನನ್ನು ದತ್ತಕ ಪಡೆದರು. ಆದರೆ ಅವರು ಪದವಿ ಪಡೆದವರಾಗಿರಲಿಲ್ಲ. ನನ್ನನ್ನು ಪದವೀಧÀರನಾಗಿ ಮಾಡುವುದಾಗಿ ಅವರು ಕೊಟ್ಟ ಭರವಸೆಯ ಮೇಲೆ ದತ್ತಕ ಕೊಟ್ಟುಬಿಟ್ಟಳು.

ನೋಡಿ, ನಾನು ಹುಟ್ಟಿದ 17 ವರ್ಷಗಳ ನಂತರ ಕಾಲೇಜಿಗೆ ಹೋದೆ. ಆದರೆ, ಕಾರ್ಮಿಕರಾಗಿದ್ದ ನನ್ನ ಪಾಲಕರು ಕೂಲಿಮಾಡಿ ಉಳಿಸಿದ್ದÀಸ್ಟೂ ಹಣ, ಟ್ಯೂಷನ್‍ಗೆ ಕೂಡ ಸಾಲದಂತ ದುಬಾರಿ ಕಾಲೇಜನ್ನು – ನನಗೆ ಗೊತ್ತಿಲ್ಲದಂತೆ – ಸೇರಿದ್ದೆ. ಈ ಮಧ್ಯೆ – ಅಂದರೆ ಆರು ತಿಂಗಳಲ್ಲೇ – ಕಾಲೇಜಿನ ತರಗತಿಗಳಲ್ಲಿ ನಾನು ಆಸಕ್ತಿ ಕಳೆದುಕೊಂಡಿದ್ದೆ. ಯಾಕೆಂದರೆ, ಜೀವನದಲ್ಲಿ ನಾನೇನು ಮಾಡಬೇಕು ಎಂಬ ಗೊಂದಲ ಮತ್ತು, ಅದನ್ನು ನಿರ್ಧರಿಸಲು ಕಾಲೇಜಿನ ಪದವಿ ಹೇಗೆ ಸಹಕರಿಸುತ್ತದೆ ಎಂಬ ಅನುಮಾನ ಕಾಡತೊಡಗಿತು. ನನ್ನ ಪಾಲಕರು ಜೀವಮಾನ ಪೂರ್ತಿ ದುಡಿದು ಕಷ್ಟಪಟ್ಟು ಉಳಿಸಿದ ಅಲ್ಪ ಹಣವನ್ನೂ ನಾನಿಲ್ಲಿ ಪೋಲು ಮಾಡುತ್ತಿದ್ದೇನೆ ಅನ್ನಿಸತೊಡಗಿತು. ಆದ್ದರಿಂದ ಪದವಿ ಪಡೆಯುವ ಪ್ರಯತ್ನವನ್ನು “ಬಿಡು”ವುದೇ ಸೂಕ್ತ ಎನಿಸಿತು. ಆ ಸಮಯದಲ್ಲದು ದಿಗಿಲು ಹುಟ್ಟಿಸುವ ನಿರ್ಧಾರ. ಆದರೆ, ಹಿಂತಿರುಗಿ ನೋಡಿದಾಗ, ಜೀವನದಲ್ಲಿ ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಇದೊಂದು ಎನ್ನಿಸಿದೆ!

ಆ ಗಳಿಗೆಯಿಂದ, ನನಗಿಷ್ಟವಿಲ್ಲದ ತರಗತಿಗಳಿಗೆ ಹೋಗುವುದನ್ನು ನಿಲ್ಲಿಸಿದೆ. ಕೇವಲ ಆಸಕ್ತಿ ಹುಟ್ಟಿಸುತಿದ್ದ ತರಗತಿಗಳಿಗೆ ಮಾತ್ರ ಹಾಜರಾಗಲು ಪ್ರಾರಂಭಿಸಿದೆ. ಉಳಿದುಕೊಳ್ಳಲು ಕೊಠಡಿಯಿರಲಿಲ್ಲ; ಆದ್ದರಿಂದ ಸ್ನೇಹಿತರ ರೂಮುಗಳಲ್ಲಿ ನೆಲದ ಮೇಲೆ ಮಲಗುತ್ತಿದ್ದೆ. ಊÀಟದ ಖರ್ಚಿಗಾಗಿ, ಸ್ನೇಹಿತರು ಕುಡಿದೆಸೆಯುತ್ತಿದ್ದ ಕೋಲ್ಡ್ರಿಂಕ್ಸ್ ನ ಕಾಲೀ ಬಾಟಲಿಗಳನ್ನು ಮಾರುತ್ತಿದ್ದೆ. ಹರೇಕೃಷ್ಣ ದೇವಾಲಯದಲ್ಲಿ ಪ್ರತೀ ಭಾನುವಾರ ಒಂದು ಒಳ್ಳೆಯ ಊಟ ಪುಕ್ಕಟೆ ಕೊಡುತ್ತಿದ್ದರು. ಅದಕ್ಕಾಗಿ 7 ಮೈಲು ದೂರ ನಡೆಯುತ್ತಿದ್ದೆ. ಅವೆಲ್ಲವನ್ನೂ ನಾನು ಇಷ್ಟಪಟ್ಟು ಮಾಡುತ್ತಿದ್ದೆ!

ಅಂತಃಪ್ರಜ್ಞೆ ಮತ್ತು ಕುತೂಹಲಗಳಿಂದ ನಾನು ಪಡೆದ ಹೆಚ್ಚಿನವು ನಂತರ ನನಗೆ ಅತ್ಯಮೂಲ್ಯ ಎನ್ನಿಸಿಬಿಟ್ಟವು. ಉದಾಹರಣೆಗೆ, ರೀಡ್ ಕಾಲೇಜ್ ಆಗ ಕ್ಯಾಲಿಗ್ರಫಿಗೆ ಸಂಬಂಧಿಸಿ ಅತ್ಯುತ್ತಮ ತರಬÉೀತಿ ಕೊಡುತ್ತಿತ್ತು. ವಿಜ್ಞಾನ-ತಂತ್ರಜ್ಞಾನಗಳು ಸೆರೆಹಿಡಿಯಲು ಸಾಧ್ಯವಿಲ್ಲದ ಸೂಕ್ಷ್ಮ ಮತ್ತು ಕಲಾತ್ಮಕ ಅಕ್ಷರ ವಿನ್ಯಾಸದ ಕ್ಯಾಲಿಗ್ರಫಿ ನನಗೆ ಆಕರ್ಷಕವೆನಿಸಿತು. ಇವುಗಳಲ್ಲಿ ಯಾವೊಂದೂ ಭವಿಷ್ಯದಲ್ಲಿ ಉಪಯೋಗಕ್ಕೆ ಬರುವುದೆÉಂದು ನಾನು ಕಲ್ಪಿಸಿರಲಿಲ್ಲ. ಆದರೆ, 10 ವರ್ಷಗಳ ನಂತರ, ನಾವು ಮ್ಯಾಕಿಂತೋಷ್ ಕಂಪ್ಯೂಟರ್ ವಿನ್ಯಾಸ ಮಾಡುವಾಗ ಕ್ಯಾಲಿಗ್ರಫಿಯ ಕಲಿಕೆ ಉಪಯೋಗಕ್ಕೆ ಬಂತು. ನಾನು ಇಷ್ಟಪಟ್ಟ ಕ್ಯಾಲಿಗ್ರಫಿಯನ್ನು ಅಂದು ಕಲಿಯದಿದ್ದಿದ್ದರೆ, ಈ ಅದ್ಭುತ ಅಕ್ಷರವಿನ್ಯಾಸವನ್ನು ನಾವು ಅಭಿವೃದ್ಧಿಪಡಿಸಿದ ಮ್ಯಾಕಿಂತೋಷ್ ಕಂಪ್ಯೂಟರ್ ಪಡೆದಿರುತ್ತಿರಲಿಲ್ಲ.
ಅಂದಿನ ಕಲಿಕೆಯೊಂದು ಕಾಲಾಂತರದಲ್ಲಿ ಹೀಗೆ ಉಪಯೊಗಕ್ಕೆ ಬರುತ್ತದೆಂದು ಗ್ರಹಿಸಿರಲಿಲ್ಲ. ಹಿಂತಿರುಗಿ ನೋಡಿದಾಗ, ಕಲಿತ ಚುಕ್ಕಿಯೊಂದು ಉಪಯೋಗವೆಂಬ ಇನ್ನೊಂದು ಚುಕ್ಕಿಯನ್ನು ಸಂಧಿಸಿರುವುದು ಕಾಣಿಸಿತು. ಆದ್ದರಿಂದ, ಕಲಿಕೆ-ಕ್ರಿಯೆ-ಉಪಯೋಗಗಳಂತಹ ಚುಕ್ಕಿಗಳು, ಮುಂದೊಂದು ದಿನ ಹೇಗೋ ಪರಸ್ಪರ ಸಂಧಿಸುತ್ತವೆ! ಅದನ್ನು ನೀವು ಕರ್ಮ, ಹಣೆಬರಹ, ಕುತೂಹಲ, ಏನೆಂದು ಬೇಕಾದರೂ ಕರೆಯಿರಿ. ಹೀಗೆ, ಆಂತಃಪ್ರಜ್ಞೆ ಮತ್ತು ಕುತೂಹಲಗಳನ್ನು ನಂಬಿ ನಾನು ಮುಂದುವರಿದೆ. ಈ ವಿಧಾನ ನನ್ನ ಜೀವನದ ಎಲ್ಲಾ ಏರಿಳಿತಗಳಿಗೆ ಕಾರಣವಾಗಿದೆಯಾದರೂ, ಯಾವತ್ತೂ ಪಶ್ಚಾತ್ತಾಪ ಪಡುವಂತೆ ಮಾಡಲಿಲ್ಲ!
ಎರಡನೆಯದು: ಪ್ರೀತಿ ಮತ್ತು ಅವಹೇಳನ:-
ನಾನು ಜೀವನದ ಎಳೆವೆಯಲ್ಲಿಯೇ ನನ್ನಿಷ್ಟದ ಕೆಲಸ ಯಾವುದು ಎಂದರಿತ ಅದೃಷ್ಟವಂತನಾಗಿದ್ದೆ. ಸ್ಟೀವ್ ವಾಜ್ಞಿಕ್ ಜೊತೆಗುಡಿ ನನ್ನ ತಂದೆಯ ಗ್ಯಾರೇಜಿನಲ್ಲಿ ಆಪಲ್ ಕಂಪನಿ ಪ್ರಾರಂಭಿಸಿದಾಗ ನನಗೆ 20 ವರ್ಷ ವಯಸ್ಸು. ಮುಂದಿನ 10 ವರ್ಷಗಳಲ್ಲಿ ಆಪಲ್ ಕಂಪನಿ, 4000 ನೌಕರರು ಕೆಲಸಮಾಡುತ್ತಿದ್ದ 2 ಬಿಲಿಯನ್ ಡಾಲರ್ ಮೌಲ್ಯದ ಸಂಸ್ಥೆಯಾಗಿ ಬೆಳೆದಿತ್ತು! ಹಾಗೆ ಬೆಳೆಯಲು ನಾವು ತುಂಬಾ ಕಷ್ಟಪಟ್ಟಿದ್ದೆವು. ನಾವು ಅತ್ಯಾಧುನಿಕ ಮ್ಯಾಕಿಂತೋಷ್ ಕಂಪ್ಯೂಟರ್ ಬಿಡುಗಡೆ ಮಾಡಿದಾಗ, ನಾನು 30 ರ ಹರಯದ ಹುಮ್ಮಸ್ಸಿನಲ್ಲಿದ್ದೆ. ಆದರೆ, ಅದಾದ ಸ್ವಲ್ಪ ದಿನಗಳಲ್ಲೆ ನಾನು ಬೆಳೆಸಿದ ಕಂಪನಿಯಿಂದ ನಾನೇ ಹೊರದೂಡಲ್ಪಟ್ಟಿದ್ದೆ! ಅಂದು ನನ್ನ ಬದುಕಿನ ಕೇಂದ್ರ ಆಕಾಂಕ್ಷೆಯೇ ನುಚ್ಚುನೂರಾಗಿತ್ತು. ಯಶಸ್ಸಿನ ತುತ್ತತುದಿಯಲ್ಲಿದ್ದ ನಾನು ನಿರ್ಗತಿಕನಂತಾಗಿದ್ದೆ!

ಮುಂದೇನು ಮಾಡಬೇಕೆಂದೇ ನನಗೆ ತಿಳಿಯಲಿಲ್ಲ. ರಿಲೇ ಓಟದಲ್ಲಿ ನಾನು ಪಡೆದ ಬ್ಯಾಟನ್ನನ್ನೇ ಕೆಳಗೆ ಬೀಳಿಸಿ ಒಂದು ತಲೆಮಾರಿನ ಉದ್ಯಮಿಗಳಿಗೆ ಮೋಸಮಾಡಿಬಿಟ್ಟೆ ಎಂಬ ಪಶ್ಚಾತ್ತಾಪ ನನಗಾಯ್ತು. ಕಂಪನಿಯ ನಿರ್ದೇಶಕರನ್ನು ಭೇೀಟಿಮಾಡಿ ನನಗೆ ಕೊಟ್ಟ ಕೆಟ್ಟ ಶಿಕ್ಷೆಯ ಬಗ್ಗೆ ಪುನರ್ಚಿಂತಿಸುವಂತೆ ಕ್ಷಮೆ ಯಾಚಿಸಿದೆ; ಪ್ರಯೋಜನವಾಗಲಿಲ್ಲ. ಅಂದು ನಾನು ಜೀವನದಲ್ಲಿ ಸೋತುಬಿಟ್ಟೆÉನೆಂದೆನಿಸಿ ಈ ಬದುಕನ್ನು ಕೊನೆಗೊಳಿಸಿಕೊಳ್ಳÀಲು ಯೋಚಿಸಿದ್ದೆ.
ಆದರೆ ನಿಧಾನವಾಗಿ ಏನೋ ಗೋಚರಿಸಲಾರಂಭಿಸಿತು. ಆಪಲ್ ನಲ್ಲಿ ನಾನು ಮಾಡಿದ್ದ ಕೆಲಸವನ್ನು ಇನ್ನೂ ಪ್ರೀತಿಸುತ್ತಿದ್ದೆ. ನಾನು ಅನುಭವಿಸಿದ ಅವಮಾನ ಇದಕ್ಕೆ ಅಡ್ಡಿಬರಲಿಲ್ಲ. ಹಾಗಾಗಿ, ಮತ್ತೆ ನಾನು ನನ್ನಿಷ್ಟದ ಕೆಲಸದಲ್ಲಿ ತೊಡಗಿಕೊಂಡೆ. ಆಪಲ್‍ನಿಂದ ಹೊರದೂಡಲ್ಪಟ್ಟಿದ್ದು ನನ್ನ ಜೀವನದಲ್ಲಾದ ಅತ್ಯುತ್ತಮ ತಿರುವೆಂದು ಆಗ ಗೋಚರಿಸಿರÀಲಿಲ್ಲ. ಸಾರ್ವಜನಿಕರು ಯಶಸ್ವೀ ಎಂದುಕೊಂಡ ಮನುಷ್ಯ ಅನುಭವಿಸುವ ಭಾರ ಕಳಚಿ, ಹವ್ಯಾಸಿಯೊಬ್ಬನ ನಿರಾಳತೆ ನನಗಂದು ದಕ್ಕಿತು. ಜೀವನದ ಅತ್ಯಂತ ಸೃಜನಶೀಲ ಅವಧಿಯೊಂದನ್ನು ಪ್ರವೇಶಿಸಲು ನನ್ನನ್ನು ಅದು ಅಣಿಗೊಳಿಸಿತು.
ಮುಂದಿನ 5 ವರ್ಷಗಳ ಆವಧಿಯಲ್ಲಿ ನೆಕ್ಷ್ಟ್ ಮತ್ತು ಪಿಕ್ಷರ್ ಕಂಪನಿಗಳನ್ನು ಪ್ರಾರಂಭಿಸಿ ಯಶಸ್ವಿಯಾದೆ. ಘಟನೆಗಳ ಗಮನಾರ್ಹ ತಿರುವಿನಲ್ಲಿ ಆಪಲ್, ನೆಕ್ಷ್ಟ್ ಅನ್ನು ಖರೀದಿಸಿತು. ನಾನು ಆಪಲ್ ಗೆ ಹಿಂದಿರುಗಿದೆ. ವಿಶೇಷವೆಂದರೆ, ನೆಕ್ಷ್ಟನಲ್ಲಿ ನಾವು ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಆಪಲ್ ನ ನಂತರದ ಪುನರುಜ್ಜೀವನಕ್ಕೆ ಕಾರಣವಾಯ್ತು!

ಆಪಲ್‍ನಿಂದ ಕಿತ್ತೆಸೆಯಲ್ಪಡದೇ ಇದ್ದಿದ್ದರೆ, ಇದಾವುದೂ ನಡೆಯುತ್ತಿರಲಿಲ್ಲವೆಂಬ ವಿಶ್ವಾಸ ನನಗಿದೆ. ಕೆಟ್ಟರುಚಿಯ ಔಷಧಿಯಾದರೂ, ರೋಗಿಗೆ ಅದರ ಅವಶ್ಯಕತೆಯಿರುತ್ತದೆ. ನಂಬಿಕೆ ಕಳೆದುಕೊಳ್ಳದೆ ನಾನು ಮುನ್ನಡೆಯುತ್ತಿರುವಂತೆ ಮಾಡಿದ್ದೇ ಕೆಲಸದ ಮೇಲಿನ ಪ್ರೀತಿ. ಕೆಲಸದ ಆಯ್ಕೆಯಲ್ಲಿ ನಾವು ಇಷ್ಟಪಡುವುದನ್ನೇ ಹುಡುಕಬೇಕು. ಜೀವನದ ಹೆಚ್ಚಿನ ಭಾಗವನ್ನು ಕೆಲಸ ಆವರಿಸುವುದರಿಂದ, ನಮ್ಮಿಷ್ಟದ ಕೆಲಸ ಮಾಡುವುದೇ ಹೆಚ್ಚಿನ ನೆಮ್ಮದಿಗೆ ದಾರಿ. ಅತ್ಯುತ್ತಮ ಕೆಲಸ ಮಾಡುವ ಒಂದೇ ಒಂದು ಮಾರ್ಗವೆಂದರೆ, ಮಾಡುವ ಕೆಲಸವನ್ನು ಇಷ್ಟಪಡುವುದು. ಇಲ್ಲಿಯವರೆಗೆ ನಮಗದು ಸಿಗದಿದ್ದರೆ ಹುಡುಕುತ್ತಿರಬೇಕು – ಸಿಗುವವರೆಗೆ!
ಮೂರನೆಯದು: ಸಾವು:-
“ಪ್ರತಿದಿನವನ್ನೂ, ಇದು ನನ್ನ ಕೊನೆಯ ದಿನ ಎಂದು ಬದುಕಿದರೆ, ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ” ಎಂಬ ಉಲ್ಲೇಖವೊಂದನ್ನು ನಾನು 17 ವರ್ಷದವನಿದ್ದಾಗ ಓದಿದ್ದೆ. ಪ್ರತಿದಿನ ಬೆಳಿಗ್ಗೆ ಎದ್ದು, “ಇದು ನನ್ನ ಕೊನೆಯ ದಿನವಾಗುವುದಾದರೆ, ಇಂದು ನಾನು ಯೋಚಿಸಿರುವ ಕೆಲಸ ಮಾಡುವೆನೆ?” ಎಂದು ಕನ್ನಡಿಯ ಮುಂದೆ ನಿಂತು, ಕಳೆದ 33 ವರ್ಷಗಳಿಂದ ಕೇಳಿಕೊಳ್ಳುತ್ತಿದ್ದೇನೆ. ಹಲವಾರು ದಿನಗಳ ಕಾಲ ಸತತವಾಗಿ ಇದಕ್ಕೆ “ಇಲ್ಲ” ಎಂಬ ಉತ್ತರ ಬಂದರೆ, ಜಿವನದ ನಡಿಗೆಯಲ್ಲಿ ಏನೋ ಬದಲಾವಣೆ ಬೇಕು ಎಂದು ನನಗನ್ನಿಸಿಬಿಡುತ್ತದೆ.
ಜೀವನದಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು, “ಶೀಘ್ರದಲ್ಲೇ ಸಾಯುತ್ತೇನೆ” ಎಂದು ಆಗಾಗ ನೆನಪು ಮಾಡಿಕೊಳ್ಳುವುದೇ ನನ್ನ ಮುಖ್ಯ ಅಸ್ತ್ರವಾಗಿದೆ. ಪ್ರಮುಖ ವಿಷಯಗಳನ್ನು ಬಿಟ್ಟು, ಉಳಿದೆಲ್ಲವೂ – ಎಲ್ಲಾ ಬಾಹ್ಯ ನಿರೀಕ್ಷೆಗಳು, ಹೆಮ್ಮೆಯ ಸಂಗತಿಗಳು, ಮುಜುಗರ ಮತ್ತು ಸೋಲಿನ ಭಯ – ಸಾವಿನ ನೆನಪಿನ ಎದುರು ಬಿದ್ದುಹೋಗುತ್ತವೆ. ಏನನ್ನೋ ಕಳೆದುಕೊಳ್ಳುವೆನೆಂಬ ಭಯದ ಬಲೆಯಿಂದ ತಪ್ಪಿಸಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ, ಸಾವಿನ ನೆನಪು ಮಾಡಿಕೊಳ್ಳುವುದು! ಸಾವಿನ ಎದುರು ಬೆತ್ತಲಾಗುವ ನಾವು ಹೃದಯ ಹೇಳಿದಂತೆ ಕೇಳುತ್ತೇವೆ ಮತ್ತು ಕೇಳಬೇಕು.
ಒಂದು ವರ್ಷದ ಹಿಂದೆ, ನನ್ನ ಮೇದೋಜ್ಜೀರಕ ಗ್ರಂಥಿಗೆ ಕ್ಯಾನ್ಸರ್ ತಗುಲಿದೆ ಎಂದು ತಿಳಿಯಿತು. ಎಂತಹ ತಮಾಷೆ ನೊಡಿ: ಇದೊಂದು ವಿಚಿತ್ರ ಪ್ರಕಾರದ ಕ್ಯಾನ್ಸರ್ ಎಂದೂ, ತಗುಲಿದವರು ಬದುಕುಳಿಯುವುದು ಕಷ್ಟsÀವೆಂದೂ, ಹೆಚ್ಚೆಂದರೆ 3 ರಿಂದ 6 ತಿಂಗಳಷ್ಟೇ ಬದುಕುಳಿಯಬಹುದೆಂದೂ, ನಾನು ಮನೆಗೆ ಹೋಗಿ ನನ್ನೆಲ್ಲಾ ವ್ಯವಹಾರಗಳನ್ನೂ ಸರಿಯಾಗಿ ನೋಡಿ ಉತ್ತರಾಧಿಕಾರಿಗೆ ವರ್ಗಾಯಿಸಿ ಸಾಯಲು ತಯಾರಾಗಬೇಕೆಂದೂ ಡಾಕ್ಟರ್ ಸೂಚಿಸಿದರು! ಆದರೆ ನಂತರ ಬಂದ ಬಯಾಪ್ಸಿ ರಿಪೋರ್ಟ್ ನೊಡಿದ ಅವರು ನನಗೆ ತಗುಲಿರುವ ಕ್ಯಾನ್ಸರ್ ತುಂಬಾ ಅಪರೂಪದ್ದೆಂದೂ, ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸಬಹುದೆಂದೂ ಸಂಬ್ರಮಿಸಿದರು. ಸಾವನ್ನು ಅತ್ಯಂತ ಹತ್ತಿರದಿಂದ ನೋಡಿದ ಸಂದರ್ಭ ಇದಾಗಿತ್ತು.

ಕೇವಲ ಬೌದ್ಧಿಕ ಪರಿಕಲ್ಪನೆಯಾದಾಗ ಮಾತ,್ರ ಸಾವು ಉಪಯುಕ್ತವಾದದ್ದು. ಅದಲ್ಲದಿದ್ದರೆ ಯಾರೂ – ಸ್ವರ್ಗದ ಆಸೆ ಇರುವವರೂ ಕೂಡ – ಸಾಯಲು ಇಷ್ಟಪಡುವುದಿಲ್ಲ. ಆದರೆ, ಸಾವು ಮಾತ್ರ ನಾವೆಲ್ಲಾ ಸೇರುವ ಕೊನೆಯ ತಾಣವಾಗಿದೆ. ಅದನ್ನು ತಪ್ಪಿಸಿಕೊಂಡವರಿಲ್ಲ. ಬಹುಷಃ, ಪ್ರಕೃತಿಯ ಅತ್ಯುನ್ನತ ಆವಿಷ್ಕಾರ ಅದು. ಜೀವನಕ್ಕೆ ಬದಲಾವಣೆ ತರುವ ದೂತನಂತೆ ಅದು, ಹಳೆಬೇರನ್ನು ತೆಗೆದು ಹೊಸ ಚಿಗುರಿಗೆ ದಾರಿ ಮಾಡುತ್ತದೆ. ಈಗ ನೀವು ಹೊಸ ಚಿಗುರು. ಆದರೆ ಕೆಲ ಸಮಯದಲ್ಲಿ ನೀವು ನಿಧಾನವಾಗಿ ಹಳಬರೆನಿಸಿಕೊಳ್ಳುವಿರಿ. ನಾಟಕೀಯ ಅನ್ನಿಸಿದರೂ ಇದು ನಿಜ. ಅಂದರೆ, ನಮ್ಮ ಇಲ್ಲಿನ ಸಮಯ ಸೀಮಿತ. ಆದ್ದರಿಂದ, ಬೇರೆಯವರಿಗಿಟ್ಟ ಸಮಯ ಅಂದರೆ, ಜೀವನ ಜೀವಿಸಿ ಸಮಯ ವ್ಯರ್ಥ ಮಾಡಬಾರದು. ಬೇರೆಯವರ ಚಿಂತನೆಯ ಫಲಿತಾಂಶದಲ್ಲಿ ಅಂದರೆ, ತತ್ವಗಳಲ್ಲಿ ಬದುಕಬಾರದು. ಬೇರೆಯವರ ಕೂಗಾಟದಲ್ಲಿ ನಮ್ಮ ಒಳದನಿಯನ್ನು ಅಡÀಗಿಸಲು ಅವಕಾಶ ಕೊಡಬಾರದು. ನಮ್ಮ ಹೃದಯ ಮತ್ತು ಅಂತಃಪ್ರಜ್ಞೆ ಹೇಳಿದ್ದನ್ನು ಅನುಸರಿಸುವ ಧೈರ್ಯ ಮಾಡಬೇಕು. ಯಾಕೆಂದರೆ ನಮಗೇನು ಬೇಕು ಎಂದು ಅವುಗಳಿಗೆ ಗೊತ್ತಿದೆ. ಉಳಿದುದೇನೂ ಮುಖ್ಯವಲ್ಲ.

ನಾನು ಚಿಕ್ಕವನಿದ್ದಾಗ (ವೋಲ್ ಅರ್ಥ್ ಕ್ಯಾಟಲಾಗ್) ಎಂಬ, ಬೈಬಲ್ ತರಹದ ಅದ್ಭುತ ಪ್ರಕಟಣೆಯೊಂದಿತ್ತು. ಸ್ಟೀವರ್ಟ್ ಬ್ರ್ಯಾಂಡ್ ಎನ್ನುವವರು, ಕಾವ್ಯದ ಮೆರುಗಿನೊಂದಿಗೆ ಅದನ್ನು ಹುಟ್ಟುಹಾಕಿದ್ದರು. 1960ರ ದಶಕದಲ್ಲಿ ಅಂದರೆ, ಪರ್ಸನಲ್ ಕಂಪ್ಯೂಟರುಗಳು, ಡೆಸ್ಕ್ ಟಾಪ್ ಪಬ್ಲಿಶಿಂಗ್ ಮುಂತದುವು ಬರುವ ಮೊದಲೇ, ಟೈಪ್ ರೈಟರ್, ಕತ್ತರಿ, ಪೋಲರಾಯ್ಡ್ ಕ್ಯಾಮೆರಾ ಮುಂತಾದ ಉಪಕರಣಗಳನ್ನು ಬಳಸಿ, ಶ್ರೇಷ್ಟ ಭಾವನೆಗಳನ್ನು ಸೇರಿಸಿ, ಆದರ್ಶವಾದಿ ಗುಣಗಳೊಂದಿಗೆ ಅದನ್ನು ಪ್ರಕಟಿಸುತ್ತಿದ್ದರು. ಅದು ತನ್ನ ಆವಧಿ ಪೂರೈಸಿದೆ ಅನ್ನಿಸಿದಾಗ ಅಂದರೆ, 1970 ರ ಮಧ್ಯಭಾಗದಲ್ಲಿ ಅದರ ಕೊನೆಯ ಪ್ರಕಟಣೆ ಬಂತು. ಆ ಪುಸ್ತಕದ ಬ್ಯಾಕ್ ಕವರ್ ನ ಮೇಲೆ, ಮುಂಜಾನೆಯ ಹಳ್ಳಿ ರಸ್ತೆಯ ಸುಂದರ ಫೋಟೋ ಇತ್ತು. ಅದರ ಕೆಳಗಡೆ ಹೀಗೊಂದು ವಿದಾಯದ ಸಂದೇಶ ಇತ್ತು: “ಹಸಿವಿನಲ್ಲಿರಿ, ಮೂರ್ಖರಾಗಿರಿ!”

ನಾನು ಯಾವಾಗಲೂ ಹೀಗಿರಬೇಕೆಂದು ಬಯಸಿದ್ದೆ.
ಇಂದು, ನಿಮಗದನ್ನು ಹಾರೈಸುತ್ತೇನೆ: ಯಾವಾಗಲೂ ಹಸಿವಿನಲ್ಲಿರಿ, ಮೂರ್ಖರಾಗಿರಿ!’”

-ಡಿ.ರಾಮಪ್ಪ,ಸಿರವಂತೆ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *