ಸಾಗರಮಾಲಾ ರಾಜಕಾರಣಿಗಳ ಗೋಲ್‍ಮಾಲ್ ಶಂಕೆ ಕಾರವಾರ ಬಂದರು:- ಸತ್ಯ-ಮಿಥ್ಯಗಳು

ಸಾಗರಮಾಲಾ ಯೋಜನೆಯಡಿಯಲ್ಲಿ, ಎರಡನೇ ಹಂತದ ಅಭಿವೃದ್ಧಿಗಾಗಿ ಕಾರವಾರ ಬಂದರನ್ನು ಕರ್ನಾಟಕ ಸರ್ಕಾರ ಆಯ್ಕೆ ಮಾಡಿ ಕೆಲಸ ಪ್ರಾರಂಭಿಸಿದೆ. ಇದನ್ನು ಕಾರವಾರದ ಜನ ವಿರೋಧಿಸುತ್ತಿದ್ದಾರೆ. ಬಂದರಿನ ಎರಡನೇ ಹಂತದ ಅಭಿವೃದ್ಧಿ ಏನನ್ನು ಒಳಗೊಂಡಿದೆ, ಅದರ ಸಾಧಕ – ಬಾಧಕಗಳೇನು ಮತ್ತು, ಕಾರವಾರದ ಜನಜೀವನದ ಮೇಲೆ ಅದು ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದು ಈ ಲೇಖನದ ಉದ್ಧೇಶ.
ಸುಮಾರು 28 ವರ್ಷ ಹಳೆಯದಾದ ಕಾರವಾರ ಬಂದರು ಸಣ್ಣ ಪ್ರಮಾಣದ ಸರಕು ಸಾಗಣೆ ಬಂದರು. ಇದು ನೈಸರ್ಗಿಕ ಸರ್ವಋತು ಬಂದರು. ಹಡಗುಗಳು ನಿಲ್ಲುವ ಜಟ್ಟಿಯ (ಬಂದರು ಕಟ್ಟೆ) ಉದ್ದ 355 ಮೀ ಮತ್ತು ಇಲ್ಲಿ, 8.5 ಮೀ ಆಳದವರೆಗೆ ಡ್ರ್ಯಾಫ್ಟ್ ಇರುವ ಎರಡು ಹಡಗುಗಳು ಏಕಕಾಲದಲ್ಲಿ ನಿಲ್ಲಬಹುದು.
ಸದ್ಯ ಈ ಹಡಗುಕಟ್ಟೆ ವಾರ್ಷಿಕ 3 ಮಿಲಿಯನ್ ಮೆಟ್ರಿಕ್ ಟನ್ ಸರಕು ಸಾಗಿಸಲು ಶಕ್ತವಾಗಿದೆ.
ಬಂದರಿನ ಎರಡನೇ ಹಂತದ ಅಭಿವೃದ್ಧಿಯಲ್ಲಿ, 7 ಹಡಗುಗಳು ನಿಲ್ಲುವಂತೆ ಜಟ್ಟಿಯ ಉದ್ದವನ್ನು 1990 ಮೀ ಗೆ ಹೆಚ್ಚಿಸುವುದು; ಸರಕು ಸಾಗಣೆ ಕಟ್ಟೆಯನ್ನು ಉದ್ದ ಮತ್ತು ಆಳ ಮಾಡಿ ದೊಡ್ಡ ಹಡಗುಗಳು ನಿಲ್ಲಲು ವ್ಯವಸ್ಥೆ ಕಲ್ಪಿಸುವುದು; ಈಗಿರುವ ಸಮುದ್ರ ತಡೆಗೊಡೆಯ ಉದ್ದ ಹೆಚ್ಚಿಸುವುದು ಮತ್ತು, 1200 ಮೀ ಉದ್ದದ ಇನ್ನೊಂದು ಹೊಸದಾದ ತಡೆಗೋಡೆ ನಿರ್ಮಿಸುವುದು; ಹಡಗುತಾಣದ ಹಿಂದಿನ ಸಮುದ್ರಜಾಗವನ್ನು ಎತ್ತರಿಸಿ ಸ್ಟಾಕ್ ಯಾರ್ಡ್ ಕಟ್ಟುವುದು: ಹಡಗುಗಳಿಗೆ ಸರಕನ್ನು ತುಂಬಲು ಮತ್ತು ಅವುಗಳಿಂದ ಸರಕನ್ನು ಲೋಡ್ ಮಾಡಲು ಅವಶ್ಯವಾದ ಯಂತ್ರೋಪಕರಣ ಅಳವಡಿಸುವುದು, ಮುಂತಾದುವು ಸೇರಿವೆ.
ಈ ಅಭಿವೃದ್ಧಿಯ 2017ರ ಒಟ್ಟು ಅಂದಾಜು ವೆಚ್ಚ ರೂ.1993.54 ಕೋಟಿ! 2003ರಲ್ಲಿ ಮೊದಲಬಾರಿಗೆ ಮಾಡಿದ ಅಂದಾಜು ವೆಚ್ಚ
ರೂ.200.55 ಕೋಟಿ ಮತ್ತು 2008ರ ಅಂದಾಜು ವೆಚ್ಚ ರೂ.788.00 ಕೋಟಿ ಇದ್ದಿತ್ತು. ಎರಡನೇ ಹಂತದ ಈ ಅಭಿವೃದ್ಧಿಯಿಂದ ಕಾರವಾರ ಬಂದರಿನ ವಾರ್ಷಿಕ ಸರಕು ಸಾಗಣೆ ಶಕ್ತತೆ ಈಗಿರುವ 3.00 ಮಿಲಿಯನ್ ಮೆಟ್ರಿಕ್ ಟನ್‍ಗಳಿಂದ 4.50 ಮಿಲಿಯನ್ ಟನ್‍ಗೆ ಏರುತ್ತದೆ ಎಂದು ಯೋಜನೆ ತಿಳಿಸುತ್ತದೆÉ!
ಈ ಯೋಜನೆÀ, ಟ್ಯಾಗೋರ್ ಪಾರ್ಕಿನ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಆಕ್ರಮಿಸುತ್ತದೆ.
ಕಾರವಾರ ಬಂದರಿನ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಯಿಂದ ಬಂದರಿನ ಸುತ್ತಲ ಪರಿಸರದ ಮೇಲೆ ಆಗುವ ಪರಿಣಾಮಗಳನ್ನು ಅಭ್ಯಸಿಸಿ, ಪರಿಸರ ಪ್ರಭಾವದ ಮೌಲ್ಯಮಾಪನ ವರದಿಯನ್ನು ಕರ್ನಾಟಕ ಸರ್ಕಾರದ ಬಂದರು ಮತ್ತು ಒಳನಾಡು ಜಲಸಾರಿಗೆ ನಿರ್ದೇಶನಾಲಯ ಕೊಟ್ಟಿದೆ. ಈ ಮೌಲ್ಯಮಾಪನದ ಉದ್ದೇಶಗಳಲ್ಲಿ, ಸೂಕ್ಷ್ಮ ಹವಾಮಾನ ಮಾಹಿತಿ, ಸುತ್ತಲಿನ ಗಾಳಿಯ ಗುಣಮಟ್ಟ, ಭೂ-ಜಲಗಳ ವೈಜ್ಞಾನಿಕ ಸ್ಥಿತಿ, ಕಾಮಗಾರಿ ಸ್ಥಳದ ಸುತ್ತಲಿನ ಮಣ್ಣಿನ ಗುಣವಿಶೇಷಗಳು, ಸಸ್ಯ ಮತ್ತು ಪ್ರಾಣಿವರ್ಗದ ಮೇಲೆ ಆಗುವ ಪರಿಸರ ಮತ್ತು ಜೈವಿಕ ಪರಿಣಾಮಗಳು ಮುಖ್ಯವಾಗಿ ಸೇರಿವೆ. ಅದಲ್ಲದೆ, ಬಂದರು ಅಭಿವೃದ್ಧಿ ಕಾಮಗಾರಿಯ ಪ್ರಭಾವಲಯಕ್ಕೆ – ಮೂಲ ಪ್ರಭಾವಕ್ಕೆ ಸುತ್ತಲಿನ 1 ಕಿಮೀ ಒಳಗಿರುವ ಹಾಗೂ, ಸಾಮಾನ್ಯ ಪ್ರಭಾವಕ್ಕೆ ಸುತ್ತಲಿನ 10 ಕಿಮೀ ಒಳಗಿರುವ – ಸೇರಿದ ಪ್ರದೇಶದಲ್ಲಿ ಇರುವ ಜನರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಅಧ್ಯಯನ ಕೂಡ ಸೇರಿದೆ.
ಈ ಯೋಜನೆಯಿಂದ ಯಾವುದೇ ರೀತಿಯ ಋಣಾತ್ಮಕ ಪರಿಣಾಮ ಇಲ್ಲವೆಂದೂ ಮತ್ತೂ, ಅನೇಕ ಧನಾತ್ಮಕ ಪರಿಣಾಮಗಳಿವೆಯೆಂದೂ ನಿರ್ದೇಶನಾಲಯದ ವರದಿ ತಿಳಿಸುತ್ತದೆ. ಯೋಜನೆಯ ಸ್ಥಳದಲ್ಲಿ ವಸತಿ ಇಲ್ಲದಿರುವುದರಿಂದ, ಪುನರ್ವಸತಿಗೆ ಸಂಬಂಧಿಸಿ ವಿಸ್ತ್ರತವಾದ ಅಧ್ಯಯನ ಮಾಡಲಿಲ್ಲ ಎಂದು ನಿರ್ದೇಶನಾಲಯ ಹೇಳುತ್ತದೆ. ಆದರೆ ವ್ಯತಿರಿಕ್ತವಾಗಿ, ಯೋಜನಾವೆಚ್ಚದಲ್ಲಿ ರೂ.65.00 ಕೋಟಿ ಹಣವನ್ನು ಪುನರ್ವಸತಿಗಾಗಿ ಏಕೆ ತೆಗೆದಿಡಲಾಗಿದೆ ಎಂಬುದಕ್ಕೆ ಕಾರಣ ಸಿಗುವುದಿಲ್ಲ.
ಈ ಕಾಮಗಾರಿಯು, ಕಾರವಾರದ ಬೆಳ್ಳಿಚುಕ್ಕೆ ಮತ್ತು, ಪ್ರವಾಸಿಗರ ಆಕರ್ಷಣೆಯಾದ ಟ್ಯಾಗೋರ್ ಪಾರ್ಕಿನ ಬಹುಷಃ ಅಧರ್Àಕ್ಕಿಂತ ಹೆಚ್ಚಿನ ಭಾಗವನ್ನು ಆಕ್ರಮಿಸುತ್ತದೆ. ಟ್ಯಾಗೋರ್ ಪಾರ್ಕಿನ ಅಕ್ಕಪಕ್ಕದ ಸ್ಥಳ ಪೂರ್ತಿ – ಅಂದರೆ, ಲಂಡನ್ ಬ್ರಿಡ್ಜ್ ನಿಂದ ಕಾಳೀ ನದಿಯ ವರೆಗಿನ ಸಮುದ್ರ ಕಿನಾರೆಯ ಜಾಗವನ್ನು, ನಾಡದೋಣಿಗಳನ್ನು ನಿಲ್ಲಿಸಲು ಮತ್ತು ಸಮುದ್ರಕ್ಕೆ ಇಳಿಸಲು ಮೀನುಗಾರರು ಅನುಗಾಲದಿಂದ ಉಪಯೋಗಿಸುತಿದ್ದಾರೆ.
ಸಮುದ್ರ ಕಿನಾರೆಯÀ ಮರಳುಜಾಗವನ್ನು ಮಳೆಗಾಲದಲ್ಲಿ ನಾಡದೋಣಿಗಳನ್ನು ನಿಲ್ಲಿಸಲು, ರಿಪೇರಿ ಮಾಡಲು, ಬಲೆ ಹೆಣೆಯುವುದು ಮುಂತಾದ ಕೆಲಸಗಳಿಗೆ ಉಪಯೋಗಿಸುತ್ತಾರೆ. ಹೀಗಾಗಿ, ಬಂದರು ಅಭಿವೃದ್ಧಿಗೆ ಒಳಗಾಗಿರುವ ಸಮುದ್ರ ಕಿನಾರೆಯು ವಾಸ್ತವದಲ್ಲಿ ಮೀನುಗಾರರ ದುಡಿಮೆಯ ಅಂಗಳವಾಗಿದೆ. ಇದರ ಉಲ್ಲೇಖ, ಪರಿಸರ ಪ್ರಭಾವದ ಮೌಲ್ಯಮಾಪನ ವರದಿಯಲ್ಲಿ ಎಲ್ಲೂ ಇಲ್ಲ. ಟ್ಯಾಗೊರ್ ಪಾರ್ಕಿನ ಅರ್ದಕ್ಕಿಂತ ಹೆಚ್ಚು ಜಾಗವನ್ನು ಬಂದರು ಇಲಾಖೆ ತನ್ನ ಸುಪರ್ದಿಗೆ ಪಡೆದು ಕಾಂಪೌಂಡ್ ಹಾಕಿ ಅತಿಕ್ರಮ ಪ್ರವೇಶ ನಿಷೇಧಿಸುವುದಿಲ್ಲವೇ?
ಅಲ್ಲದೆ, ಹಡಗುಗಳು ಬಂದುಹೊಗುವ ದಾರಿಯನ್ನೂ ತನ್ನ ನಿಯಂತ್ರಣಕ್ಕೆ ಪಡೆಯುತ್ತದೆಯಲ್ಲವೇ? ಇದು, ಮೀನುಗಾರರು ತಮ್ಮ ನಾಡದೋಣಿ ಅಥವಾ ಯಾಂತ್ರೀಕೃತ ಬೋಟ್ ಬಳಸಿ ಸಮುದ್ರಕ್ಕೆ ಹೊಗಿ-ಬರುವುದನ್ನು ನಿಯಂತ್ರಿಸುವುದಿಲ್ಲವೇ? ಮತ್ತೂ, ಈ ಕಾಮಗಾರಿಯು ಕಾರವಾರದÀ ಜನರ ಹಾಗೂ ಕಾರವಾರಕ್ಕೆ ಬಂದು-ಹೋಗುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಾದ ಟ್ಯಾಗೋರ್ ಪಾರ್ಕಿನ ಆವರಣವನ್ನು ಕ್ಷೀಣಗೊಳಿಸಿ ಒಟ್ಟು ಸೌಂದರ್ಯವನ್ನು ನಾಶಪಡಿಸುತ್ತದೆ ಎಂಬುದು ಸರ್ವವಿಧಿತ! ಏಕೆಂದರೆ, ಅಭಿವೃದ್ಧಿ ನಾಡಿನ ಸಮಸ್ಥ ಜನಸಮುದಾಯಗಳಿಗೂ ಬೇಕು. ಆದರೆ ಅದಕ್ಕೆ ಸ್ಥಳೀಯರು ತೆರಬೇಕಾದ ಬೆಲೆ ಎಷ್ಟು? ಅರ್ಗಾ ನೌಕಾನೆಲೆ ಬರುವ ಮೊದಲು ಇದ್ದ, ರಾಷ್ಟ್ರೀಯ ಹೆದ್ದಾರಿ ಗುಂಟಾ ಕಾಣಬಹುದಾಗಿದ್ದ ಕಾರವಾರದ ಸಮುದ್ರ ಕಿನಾರೆಯ ನಯನಮನೋಹರ ದೃಶ್ಯ ಈಗ ಕಾಣದಾಗಿದೆ. ನೌಕಾನೆಲೆ ಸುತ್ತಮುತ್ತ ಇದ್ದ ಗದ್ದೆ-ಹೊಲಗಳು ನಾಶವಾಗಿ, ದನಕರುಗಳಿಗೆ ಮೇವು, ವಿಶ್ರಮಿಸಲು ಸ್ಥಳ ಇಲ್ಲವಾಗಿದೆ. ನೌಕಾನೆಲೆಯ ಮುಖಾಂತರ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಿಗೂ ಬೇಲಿ ಹಾಕಿರುವುದರಿಂದ, ಹೆದ್ದಾರಿ ತೀರಾ ಕಿರಿದೆನಿಸುತ್ತದೆ. ಈ ಭಾಗದಲ್ಲಿ ಓಡಾಡುವ ಸಾವಿರಾರು ದನಕರುಗಳು ರಸ್ತೆ ಅಪಘಾತಗಳಿಗೆ ಮತ್ತು ಸಾವುನೋವಿಗೆ-ಅವುಗಳೂ ಸೇರಿ- ಕಾರಣವಾಗಿವೆ. ಒಂದುಕಡೆ ಕೈಗಾ ಅಣುಸ್ಥಾವರ, ಇನ್ನೊಂದು ಕಡೆ ನೌಕಾನೆಲೆ – ಹೀಗೆ ಖಾಸಗೀ ಎನ್ನುವ ತಮ್ಮ ಸ್ಥಳಗಳೆಲ್ಲಾ ಕಳೆದುಹೋಗುತ್ತಿವೆ ಎಂದು ಸ್ಥಳೀಯರಿಗೆ ಎನ್ನಿಸಿದರೆ ಆಶ್ಚರ್ಯವಲ್ಲ.

ಬಂದರಿಗೆ ಬಂದುಹೋಗುವ ಸಾಗಣೆ ವಸ್ತುಗಳನ್ನು ಇಡಲು ಬಂದರಿಗೆ ತಾಗಿ ವಿಶಾಲವಾದ ಬಯಲು – ಸ್ಟಾಕ್ ಯಾರ್ಡ್ ನಿರ್ಮಿಸಲು ಬೇಕಾಗುತ್ತದೆ. ಅಂತಹ ಜಾಗೆ ಅಲ್ಲಿ ಇಲ್ಲ. ಈಗಿನ ಯೋಜನೆಯ ಪ್ರಕಾರ ಇದಕ್ಕಾಗಿ ಸಮುದ್ರ ಕಿನಾರೆಯ ಜಾಗವನ್ನು ಮಣ್ಣು ತುಂಬಿ ಕಟ್ಟಬೇಕಾಗುತ್ತದೆ. ಈಗಿನ ರಾಷ್ಟ್ರಿಯ ಹೆದ್ದಾರಿಯನ್ನು ಬೇರೆಕಡೆಗೆ ತಿರುಗಿಸಬೇಕಾಗುತ್ತದೆÉ.
ಯೋಜನೆ, ಊಹಿಸಿದಂತೆ ಅತ್ಯುತ್ತಮ ರೀತಿಯಲ್ಲಿ ನಡೆದರೆ, ಹಡಗುತಾಣದ ಶೇಕಡಾ 100 ರ ಸಾಮಥ್ರ್ಯವನ್ನು ಎರಡನೆ ಹಂತದ ಅಭಿವೃದ್ಧಿ ಕಾಮಗಾರಿ ಮುಗಿದ 21ನೇ ವರ್ಷದಲ್ಲಿ ಪಡೆಯಬಹುದು ಎಂದು ಯೋಜನಾ ವರದಿ ಹೇಳುತ್ತದೆ! ಅಂದರೆ, ಒಮ್ಮೆಲೇ ಸಾವಿರಾರು ಕೋಟಿ ಹಣ ಖರ್ಚುಮಾಡಿ ಯೋಜನೆ ಪೂರ್ಣಗೊಳಿಸಿದರೆ ಅಂತಹ ಲಾಭವೇನೂ ಬರುವುದಿಲ್ಲ!
ಈ ಯೋಜನೆಯ ಸಾಲ ಸೇವಾ ವ್ಯಾಪ್ತಿಯು ( ಡಿಎಸ್‍ಸಿಆರ್) 1.31 ಮತ್ತು, ಆಂತರಿಕ ಲಾಭದ ದರ (ಐಆರ್‍ಆರ್) 13.12%. ಹಡಗುತಾಣದ ಈಗಿರುವ ವಾರ್ಷಿಕ 3.00 ಮಿಲಿಯನ್ ಮೆಟ್ರಿಕ್ ಟನ್ ಸಾಗಣೆ ಸಾಮಥ್ರ್ಯವನ್ನು ವಾರ್ಷಿಕ 4.50 ಮಿಲಿಯನ್ ಮೆಟ್ರಿಕ್ ಟನ್‍ಗೆ – ಮತ್ತೆ ಕೇವಲ 1.50 ಮಿಲಿಯನ್ ಮೆಟ್ರಿಕ್ ಟನ್‍ಗಳÀಷ್ಟು – ಹೆಚ್ಚಿಸಲು ಸರ್ಕಾರ ಖರ್ಚು ಮಾಡುವ ಹಣ 2017 ರ ಅಂದಾಜಿನ ಪ್ರಕಾರ ರೂ1994 ಕೋಟಿ! ಈ ಎರಡು ವರ್ಷದಲ್ಲಿ ಹಣದುಬ್ಬರ 8% ಎಂದು ಹಿಡಿದರೂ ಇಂದಿನ ಅಂದಾಜು ವೆಚ್ಚ ರೂ.2326 ಕೋಟಿ ಆಗುತ್ತದೆ.
ಕಾರವಾರ ಬಂದರಿನ ಬಗ್ಗೆ ಸರ್ಕಾರಗಳು 2000ನೇ ಇಸವಿಯಿಂದ ಯೋಚಿಸುತ್ತಿವೆ, ಏನೂ ಈವರೆಗೆ ಆಗಿಲ್ಲ. ಸರ್ಕಾರಕ್ಕೆ 20 ವರ್ಷಗಳ ಕಾಲ ಕಾಣದ ತುರ್ತು ಮತ್ತು ಅನಿವಾರ್ಯತೆ ಈಗೇಕೆ? ಅಲ್ಲದೆ, ಈ ಬಂದರು ನೈಸರ್ಗಿಕವಾದುದಾದರೂ ಸ್ಥಳದ ಕೊರತೆ ಇದೆ ಮತ್ತೂ ಒಂದು ಮೂಲೆಯಲ್ಲಿದೆ. ಆದ್ದರಿಂದ, ಇದು ಸರ್ವಜನಿಕರು ಮತ್ತು ಸರ್ಕಾರ ಸಮಾಲೋಚಿಸಿ ತೀರ್ಮಾನಿಸಬೇಕಾದ ಕೆಲಸ.
(ಡಿ. ರಾಮಪ್ಪ ಸಿರಿವಂತೆ, ಅಂಕೋಲಾ)

ಹಸಿರುಕಣಿವೆಯ ಗ್ರೀನ್‍ವ್ಯಾಲಿ ಆರ್ಗ್ಯಾನಿಕ್ ಸ್ಫೈಸಿಸ್‍ನ ಸಾಗರೋತ್ತರ ಸಾಧನೆಯ ಕತೆ
ಸಿದ್ಧಾಪುರದ ಗ್ರೀನ್‍ವ್ಯಾಲಿ ಆರ್‍ಗ್ಯಾನಿಕ್ ಸ್ಫೈಸಿಸ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ.
ಕಳೆದ ದಶಕದಲ್ಲಿ ಸಣ್ಣ ಉದ್ದಿಮೆಯಾಗಿ ಪ್ರಾರಂಭವಾದ ಈ ಸಂಸ್ಥೆ ಒಂದು ದಶಕದ ಅವಧಿಯಲ್ಲಿ ನೂರಾರು ಜನರಿಗೆ ಉದ್ಯೋಗ ನೀಡುವ ಮೂಲಕ ರಾಜ್ಯಮಟ್ಟದ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ.
ಸಿದ್ಧಾಪುರದಂಥ ಹಿಂದುಳಿದ ತಾಲೂಕು, ಉತ್ತರ ಕನ್ನಡ ಜಿಲ್ಲೆಯಂಥ
ಹಿಂದುಳಿದ ಜಿಲ್ಲೆಯಲ್ಲಿ ಹುಟ್ಟಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂಥ ಅನುಕೂಲ ಈ ಪ್ರದೇಶದವರಿಗಿಲ್ಲ ಆದರೆ ಸಿದ್ಧಾಪುರದ ಗ್ರೀನ್‍ವ್ಯಾಲಿ ಸ್ಫೈಸಿಸ್ ಹಸಿರು ಕಣಿವೆಯಲ್ಲಿ ಕುಳಿತು ಅಂತರಾಷ್ಟ್ರೀಯ ನಕ್ಷೆಯಲ್ಲಿ ಮಿನುಗುತ್ತಿದೆ.
ಒಂದು ಕಾಲದಲ್ಲಿ ಕಾಳುಮೆಣಸಿನ ನಾಡು ಎನ್ನಲಾಗುತಿದ್ದ ಉತ್ತರ ಕನ್ನಡ ಕ್ರಮೇಣ ಆ ವಿಶೇಷಣಕ್ಕೆ ಅಪವಾದದಂತಿತ್ತು.
ಇಂಥ ಪ್ರತಿಕೂಲ ಸ್ಥಿತಿಯಲ್ಲಿ ಸಿದ್ಧಾಪುರದ ಕೆಲವು ಯುವಕರ ಪ್ರಯತ್ನ, ಕನಸಿನ ಸಂಸ್ಥೆಯಾಗಿ ಕಾರ್ಯಾರಂಭ ಮಾಡಿತು ಗ್ರೀನ್‍ವ್ಯಾಲಿ ಆರ್ಗ್ಯಾನಿಕ್ ಸ್ಫೈಸಿಸ್. ಅನ್ಯರಿಗಿರಲಿ ಸ್ವಯಂ ಈ ಸಂಸ್ಥೆಯ ಪ್ರಮುಖರಿಗೆ ಗ್ರೀನ್ ವ್ಯಾಲಿ ಸೃಷ್ಟಿಸಲಿರುವ ಜಾದು ಬಗ್ಗೆ ನಂಬಿಕೆ ಇರಲಿಲ್ಲ. ಆದರೆ ಶ್ರಮ, ಬದ್ಧತೆ, ಕನಸುಗಳೆಲ್ಲಾ ಮೇಳೈಸಿದ ಯುವಕರ ತಂಡ ಪ್ರಯೋಗ ಮಾಡುತ್ತಾ ಹೊರಟದ್ದೇ ಆರಂಭ ಒಂದೊಂದು ಪ್ರಯೋಗಗಳೂ ಫಲ ಕೊಟ್ಟು ಈಗ ಸಂಸ್ಥಾಪಕರ ನಿರೀಕ್ಷೆ ಮೀರಿ ಬೆಳೆದಿರುವ ಗ್ರೀನ್‍ವ್ಯಾಲಿ ಸ್ಫೈಸಿಸ್ ನೂರಾರು ಜನರಿಗೆ ಉದ್ಯೋಗ ನೀಡಿದ ಕೀರ್ತಿಗೆ ಪಾತ್ರವಾಗಿದೆ.
ಸಿದ್ಧಾಪುರದಲ್ಲಿ ಪ್ರಧಾನಕಛೇರಿ ಹೊಂದಿರುವ ಈ ಸಂಸ್ಥೆಯ ಕಛೇರಿಗಳು, ಪಾಲುದಾರ ಸಂಸ್ಥೆಗಳು ಉತ್ತರಕನ್ನಡದಿಂದ ಜಗತ್ತಿನಾದ್ಯಂತ ವಿಸ್ತರಿಸಿವೆ. ಈ ಪ್ರಗತಿ-ವಿಸ್ತಾರ ಗಮನಿಸಿದ ರಾಜ್ಯ ಸರ್ಕಾರ ಕೈಗಾರಿಕಾ ಇಲಾಖೆಯ ಮೂಲಕ 2014-15 ಮತ್ತು 17-18 ರಲ್ಲಿ ಎರಡುಬಾರಿ ರಾಜ್ಯಶ್ರೇಷ್ಠ ರಫ್ತು ಪ್ರಶಸ್ತಿ ನೀಡಿ ಗೌರವಿಸಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *