ಬಿಳಗಿ ಸೀಮೆಯ ಮಾರಿಕಾಂಬಾ ಜಾತ್ರೆ & ಬಿಳಗಿಯ ವೈಶಿಷ್ಟ್ಯ

ಬಿಳಗಿಯಲ್ಲಿ ಮಾರಿಕಾಂಬಾ ಜಾತ್ರೆ ಮುಕ್ತಾಯವಾಗಿದೆ. ಈ ಬಿಳಗಿ ಸುಮಾರು 200-300 ವರ್ಷಗಳ ಹಿಂದೆ ರಾಜಧಾನಿಯಾಗಿ ಮೆರೆದಿದ್ದ ಪ್ರದೇಶ.
ಅಘನಾಶಿನಿ ನದಿಯ ತೊಪ್ಪಲಿನ ಈ ಪ್ರದೇಶದ ಪಾಕೃತಿಕ ವೈಶಿಷ್ಟ್ಯ, ಜನಜೀವನ, ವಿಭಿನ್ನವಾಗಿದೆ.ರಾಜರ ಕಾಲದ ಜೈನಬಸದಿ ಇಲ್ಲಿದ್ದು 22,23,24 ನೇ ತೀರ್ಥಂಕರರ ಮೂರ್ತಿಗಳು ಇಲ್ಲಿವೆ. ಇದೇ ಪ್ರದೇಶದಲ್ಲಿ ಗೋಲ್‍ಭಾವಿ, ವಿರೂಪಾಕ್ಷ ದೇವಾಲಯಗಳೆಲ್ಲಾ ಇವೆ.

200 ವರ್ಷಗಳಿಗೂ ಹಿಂದೆ ಬಿಳಗಿಯಲ್ಲಿ ಸಾಮಂತರಾಗಿದ್ದ
ಅರಸರು ಕಟ್ಟಿದ ನಿರ್ಮಾಣಗಳು, ಸ್ವತಂತ್ರ ಭಾರತದಲ್ಲಿ ಇಲ್ಲಿ ಸ್ಥಾಪನೆಯಾದ ವಿದ್ಯಾಸಂಸ್ಥೆಗಳು, ಸಹಕಾರಿ ಸಂಘಗಳು,ಜೇನು ಸೊಸೈಟಿ ಹೀಗೆ ಇತ್ತೀಚಿನ 200-300 ವರ್ಷಗಳಿಂದ ಪ್ರಮುಖ ಕೇಂದ್ರವಾಗಿದ್ದ ಬಿಳಗಿ ಈಗಲೂ ವಿಭಿನ್ನ ಜಾತಿ-ಸಮೂದಾಯ, ಧಾರ್ಮಿಕ ಮತಾವಲಂಬಿಗಳು ಇರುವ ಪ್ರದೇಶ.
ಬಿಳಗಿ ಕೇಂದ್ರವನ್ನಾಗಿಟ್ಟುಕೊಂಡು ನೋಡಬಹುದಾದ ರಾಜಕಾರಣಿಗಳು,ಸಾಧಕರು, ಬೆಳೆಗಳು,ಉದ್ಯಮಿಗಳು ಹೀಗೆ ಎಲ್ಲಾ ಕ್ಷೇತ್ರದಲ್ಲಿ ಕಾಣುವ ಬಿಳಗಿಕೇಂದ್ರದ ಸೀಮೆಗಳು ಈಗಿನ 10 ಗ್ರಾಮ ಪಂಚಾಯತ್ ಗಳಲ್ಲಿ ವಿಸ್ತರಿಸಿವೆ.
ಇಲ್ಲಿಯ ದುರ್ಗಾಂಬಾ ಮತ್ತು ಮಾರಿಕಾಂಬಾ ದೇವಾಲಯಗಳು ಈ ಭಾಗದ ಜನರ ಭಕ್ತಿಯ ಕೇಂದ್ರಗಳು.
ದುರ್ಗಾಂಬಾ ಮತ್ತು ಮಾರಿಕಾಂಬಾ ದೇವಾಲಯಗಳಿಗೆ ಒಂದೇ ಆಡಳಿತ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿರುವ ಪುರಾತನ ದೇವಾಲಯಗಳು ಇಲ್ಲಿಯ ಪ್ರಾಚೀನ ಪಳಯುಳಿಕೆಗಳ ನಿರ್ವಹಣೆಯನ್ನು ಕೇಂದ್ರದ ಪ್ರಾಚ್ಯವಸ್ತು ಇಲಾಖೆ ಮಾಡುತ್ತಿದೆ. ಐತಿಹಾಸಿಕ ಮಹತ್ವದಿಂದ ಬಿಳಗಿ ಪ್ರಸಿದ್ಧವಾಗಿದ್ದರೆ ಈ ಐತಿಹಾಸಿಕ ಪ್ರಾಮುಖ್ಯತೆ ಇಲ್ಲಿಯ ಜನಜೀವನಕ್ಕೂ ತೊಂದರೆಮಾಡಿದೆ. ಇಲ್ಲಿಯ ಕೆಲವು ವಾಸದ ಮನೆಗಳ ದುರಸ್ಥಿ, ಹೊಸನಿರ್ಮಾಣಕ್ಕೆ ಅನುಕೂಲ ಕಲ್ಫಿಸದ ಪ್ರಾಚ್ಯವಸ್ತು ಇಲಾಖೆ ನೀತಿ-ನಿಯಮಗಳು ಜನರಿಗೆ ಅನಾನುಕೂಲ ಮಾಡಿವೆ.
ಸರ್ಕಾರ ಮತ್ತು ಗ್ರಾಮ ಪಂಚಾಯತ್ ನಿರ್ವಹಿಸುತ್ತಿರುವ ಇಲ್ಲಿಯ ಐತಿಹಾಸಿಕ ಪಳಯುಳಿಕೆಗಳನ್ನು ನೋಡುವವರೂ ಕಡಿಮೆ. ಪ್ರಚಾರದ ಕೊರತೆ, ಸ್ಥಳಿಯರ ಅರಿವಿನ ಕೊರತೆ ಹೀಗೆ ಐತಿಹಾಸಿಕ ಹಿನ್ನೆಲೆಯ ಈ ಕೇಂದ್ರ ಅಭಿವೃದ್ಧಿಯ ಹಿನ್ನೆಲೆಯಲ್ಲೂ ಹಿಂದಿದೆ.ದೇವರು, ಧರ್ಮ, ನಂಬಿಕೆ ಆಧಾರದಲ್ಲೇ ಬದುಕುತ್ತಿರುವ ಈ ಪ್ರದೇಶದ ಜನ ವೆಚ್ಚದಾಯಕ ಜಾತ್ರೆ-ಹಬ್ಬಗಳನ್ನೂ ರೂಢಿ-ಸಂಪ್ರದಾಯದಂತೆ ನಡೆಸುತ್ತಾರೆ. ಲಕ್ಷಾಂತರ ಜನರು ಪಾಲ್ಗೊಳ್ಳುವ ಬಿಳಗಿ ಜಾತ್ರೆಯಲ್ಲಿ ಜಾತ್ರಾ ಆಕರ್ಷಣೆಗಳಾಗಿ ಮನೋರಂಜನಾ ಸಾಧನಗಳು, ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಶಿಸ್ತು-ಪರಿಸರ ಪೂರಕ ಉತ್ಸವದ ಹಿನ್ನೆಲೆಯಲ್ಲಿ ಜಾತ್ರಾ ಸಮೀತಿ ಪ್ಲಾಸ್ಟಿಕ್ ನಿರ್ಬಂಧ ಹೇರಿರುವುದು, ವಾಹನ ನಿಲುಗಡೆ, ಸಂಚಾರಿ ವ್ಯವಸ್ಥೆಗಳನ್ನು ಬಿಗಿಮಾಡಿರುವುದು ಈ ಜಾತ್ರೆಯ ವಿಶೇಶವಾಗಿತ್ತು.
ಬಿಳಗಿ ಮಾರಿಕಾಂಬಾ ದೇವಾಲಯಕ್ಕೂ ಇಲ್ಲಿಯ ರಾಜರ ಆಡಳಿತಕ್ಕೂ ಸರಿಸುಮಾರು ಸಮಾನ ಚರಿತ್ರೆಯಿದೆ. ಬಿಳಗಿ ಮಾಂಡಳೀಕರ ಕಾಲದಲ್ಲಿ ಪೂಜಿಸಲ್ಪಡುತಿದ್ದ ಮಾರಿಕಾಂಬೆಗೆ ಆ ನಂತರ ಸೀಮೆಯ ವ್ಯಾಪ್ತಿ ದೊರೆತು ಈ ಜಾತ್ರೆಯೂ ಪ್ರಸಿದ್ಧವಾಯಿತು ಎನ್ನಲಾಗುತ್ತಿದೆ. ದೇವಾಲಯದ ಆಡಳಿತಮಂಡಳಿ. ಜಾತ್ರಾಮಹೋತ್ಸವದ ಅಧ್ಯಕ್ಷತೆಗಳ ವಿಚಾರದಲ್ಲಿ ಇತ್ತೀಚಿನ 40-50 ವರ್ಷಗಳಿಂದಲೂ ವೈದಿಕರು, ವೈದಿಕೇತರ ಹಿಂದುಳಿದ ವರ್ಗಗಳ ನಡುವೆ ಸಂಘರ್ಷದ್ದೂ ಲಾಗಾಯ್ತಿನ ಇತಿಹಾಸವೇ ಇದೆ.

ಇಂದು ವಿದ್ಯುಕ್ತವಾಗಿ ಮುಗಿದ ಬಿಳಗಿ ಮಾರಿಕಾಂಬಾ ಜಾತ್ರೆ
ಕಳೆದ ಒಂದು ವಾರದಿಂದ ನಡೆದ ತಾಲೂಕಿನ ಬಿಳಗಿ ಶ್ರೀಮಾರಿಕಾಂಬಾ ಜಾತ್ರಾ ಮಹೋತ್ಸವ ಇಂದು ವಿದ್ಯುಕ್ತವಾಗಿ ಮುಕ್ತಾಯವಾಯಿತು.
ವಾಹನ ನಿಲುಗಡೆ ವ್ಯವಸ್ಥೆ,ಪ್ಲಾಸ್ಟಿಕ್ ಮುಕ್ತ ಉತ್ಸವಗಳಿಂದಾಗಿ ಸಾರ್ವಜನಿಕರಿಗೆ ತುಸು ಕಿರಿಕಿರಿಯಾದರೂ ಸ್ವಚ್ಛತೆ,ನಿರ್ವಹಣೆಗಳ ಹಿನ್ನೆಲೆಯಲ್ಲಿ ಜಾತ್ರೆಯ ಯಶಸ್ಸು ಅಭೂತಪೂರ್ವ ಎನ್ನುವಂತಿತ್ತು.
ಶನಿವಾರ,ರವಿವಾರಗಳಂದು ಹೆಚ್ಚಿನ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ವ್ಯಾಪಾರ,ವ್ಯವಹಾರ, ಗಳಿಕೆ ಹಿನ್ನೆಲೆಯಲ್ಲಿ ಜಾತ್ರೆ ಯಶಸ್ವಿ ಎನ್ನಲಾಗಿದೆ. ಸ್ಥಳಿಯರು,ಪೊಲೀಸರು ಮತ್ತು ಸಂಘಟಕರ ಪ್ರಯತ್ನಗಳಿಂದಾಗಿ ಜಾತ್ರೆಯಲ್ಲಿ ಅಹಿತಕರ ಘಟನೆಗಳಾಗಿಲ್ಲ ಎನ್ನುವ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ಮಂಗಳವಾರದ ಮಧ್ಯರಾತ್ರಿ ಆಚರಣೆಗಳ ನಂತರ ಹಿಂದಿನ ಬುಧವಾರ ಬೆಳಿಗ್ಗೆ ಜಾತ್ರೆಯ ಗದ್ದುಗೆಗೆ ಬಂದಿದ್ದ ಮಾರಿಕಾಂಬೆ ಈ ಬುಧವಾರದ ಮುಂಜಾನೆವೇಳೆಗೆ ವಿಸರ್ಜನೆಯಾಗಿದ್ದಾಳೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *