ಕ್ರೂರ ವ್ಯವಸ್ಥೆಯಲ್ಲಿ ನಿಷ್ಠುರ ಪ್ರತಿಭಟನೆ ಮತ್ತು ಕರಿಯರ ಗಾಂಧಿಯ ಕಿವಿಮಾತು

for weekend reading-
ಕ್ರೂರ ವ್ಯವಸ್ಥೆಯಲ್ಲಿ ನಿಷ್ಠುರ ಪ್ರತಿಭಟನೆ ಮತ್ತು ಕರಿಯರ ಗಾಂಧಿಯ ಕಿವಿಮಾತು
( – ಡಿ. ರಾಮಪ್ಪ ಸಿರಿವಂತೆ, ಅಂಕೋಲಾ)
ಅಮೇರಿಕೆಯ ಗಾಂಧೀ ಎಂದೇ ಹೆಸರಾದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, 1963ರ ಆಗಷ್ಟ್ 28 ರಂದು ಅಮೇರಿಕಾದ ವಾಷಿಂಗ್ಟನ್ ಡಿ. ಸಿ. ಯ ಲಿಂಕನ್ ಮೆಮೋರಿಯಲ್ ಕಟ್ಟೆಯ ಮೇಲೆ ನಿಂತು, ಜನರನ್ನುದ್ದೇಶಿಸಿ, ಮಾಡಿದ, “”ನನ್ನದೊಂದು ಕನಸಿದೆ” ಎಂಬ ಭಾಷಣ, ಸ್ವಾತಂತ್ರ್ಯ ಮತ್ತು ಜನಾಂಗ ತಾರತಮ್ಯ ಕುರಿತು ಮಾಡಿದ ಪ್ರಸಿದ್ಧ ಭಾಷಣವಾಗಿ ಚರಿತ್ರೆಯಲ್ಲಿ ಉಳಿದಿದೆ.
1776ರ ಜುಲೈ 4ರಂದು ಬ್ರಿಟೀಷರಿಂದ ಸ್ವತಂತ್ರವಾದ ಅಮೇರಿಕೆಯಲ್ಲಿ ಕರಿಯರು, ಗುಲಾಮಗಿರಿಯಿಂದ ಹೊರಬರಲು 1864ರವರೆಗೆ ಕಾಯಬೇಕಾಯ್ತು. ಆದರೆ ಸಮಾನತೆಯ ನಾಗರೀಕ ಹಕ್ಕನ್ನು ಅವರು 1965ರಲ್ಲಿ – ಅಂದರೆ, ನೂರು ವರ್ಷಗಳ ಹೋರಾಟದ ನಂತರ ಪಡೆದರು.
ಕ್ರಿಶ್ಚಿಯನ್ ಧರ್ಮದ ನಂಬಿಕೆಗಳು ಮತ್ತು ಗಾಂಧೀಜೀಯವರ ಅಹಿಂಸಾತ್ಮಕ ಕ್ರಿಯಾಶೀಲತೆಯನ್ನು ಅಳವಡಿಸಿಕೊಂಡಿದ್ದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಅಂದು ಕರಿಯರನ್ನುದ್ದೇಶಿಸಿ ಆಡಿದ – ಸಮಾನತೆಯ ರಾಷ್ಟ್ರ ಕಟ್ಟುವ – ಮಾತುಗಳು ನಮಗೆ ಇಂದೂ ಪ್ರಸ್ತುತ ಮತ್ತು ಅದರಿಂದ ಕಲಿಯಬೇಕಾದ್ದು ಸಾಕಷ್ಟಿದೆ ಎಂಬ ಕಾರಣಕ್ಕಾಗಿ ಇಲ್ಲಿ ಸಂಕ್ಷಿಪ್ತವಾಗಿ ಕೊಟ್ಟಿದ್ದೇನೆ.
ನನ್ನದೊಂದು ಕನಸಿದೆ

  • ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್
    “ದೇಶದ ಚರಿತ್ರೆಯಲ್ಲಿ ಶ್ರೇಷ್ಠವೆಂದು ನಿರ್ಣಯಿಸಬಹುದಾದ ಸ್ವಾತಂತ್ರ್ಯಕ್ಕಾಗಿನ ಇಂದಿನ ಪ್ರದರ್ಶನದಲ್ಲಿ ನಿಮ್ಮೊಂದಿಗಿರಲು ನನಗೆ ಸಂತೋಷವಾಗುತ್ತಿದೆ. ನಾವು ಒಬ್ಬ ಮಹಾನ್ ವ್ಯಕ್ತಿಯ ನೆರಳಿನಲ್ಲಿ ನಿಂತಿದ್ದೇವೆ. ನೂರು ವರ್ಷಗಳ ಹಿಂದೆ ಆತ ಅಮೇರಿಕಾದ ವಿಮೋಚನಾ ಘೋಷಣೆಗೆ ಸಹಿ ಹಾಕಿದ್ದ. ಈ ಮಹತ್ವದ ಘೋಷಣೆ, ಅನ್ಯಾಯದ ಬೆಂಕಿಯಲ್ಲಿ ತಿರಸ್ಕೃತಗೊಂಡ ಲಕ್ಷಾಂತರ ನಿಗ್ರೋ ಗುಲಾಮರಿಗೆ ಭರವಸೆಯ ದಾರಿದೀಪವಾಗಿ ಮತ್ತು, ಸೆರೆವಾಸದ ಕತ್ತಲೆಯನ್ನು ಕೊನೆಗೊಳಿಸಿದ ಬೆಳಕಾಗಿ ಬಂದಿದೆ. ಆದರೆ, ಇಂದಿಗೂ ಕೂಡ ನಿಗ್ರೋಗಳು ವಿಮೋಚಿತರಾಗಿಲ್ಲ. ಪ್ರತ್ಯೇಕತೆಯ ಬೇಡಿ ಮತ್ತೂ ತಾರತಮ್ಯದ ಕಟ್ಟುಪಾಡುಗಳಿಂದ ಅವರ ಬದುಕು, ಜರ್ಜರಿತಗೊಂಡೇ ಇದೆ. ಸಮೃದ್ಧಿಯ ಸಾಗರದ ಮಧ್ಯೆ ಬಡತನ ತುಂಬಿದ ಒಂಟಿ ದ್ವೀಪದಲ್ಲಿ ಆತ ಬದುಕುತ್ತಿದ್ದಾನೆ. ಇಂದೂ, ಸಮಾಜದ ಮೂಲೆಗಳಲ್ಲಿ ಬಳಲುತ್ತಾ ತನ್ನ ಸ್ವಂತ ನಾಡಿನಲ್ಲೇ ದೇಶಬ್ರಷ್ಟನಂತಿದ್ದಾನೆ.
    ಒಂದರ್ಥದಲ್ಲಿ, ನಮ್ಮ ಗಣರಾಜ್ಯವನ್ನು ಕಟ್ಟಿದವರು, ಸಂವಿಧಾನದ ಭಾಷ್ಯ ಮತ್ತು ಸ್ವಾತಂತ್ರ್ಯ ಘೋಷಣೆಯನ್ನು ಬರೆದಾಗ, ಪ್ರತಿಯೊಬ್ಬ ಅಮೇರಿಕೆಯ ನಾಗರೀಕನಿಗೂ ಹಕ್ಕುಗಳನ್ನು ಕೊಟ್ಟ ಪ್ರಾಮಿಸರಿ ನೋಟಿಗೆ ಸಹಿ ಹಾಕಿದಂತೆನಿಸಿತ್ತು. ಅದು, ಯಾರೂ ಪರಭಾರೆ ಮಾಡಲಾಗದ ರೀತಿಯಲ್ಲಿ, ಎಲ್ಲಾ ಬಿಳಿ ಮತ್ತು ಕರಿಯ ಜನರಿಗೆ, ಕೊಟ್ಟ, – ಜೀವನದ, ಸಾತಂತ್ರ್ಯದ ಹಾಗೂ ಸಂತೋಷದ ಅನ್ವೇಷಣೆಯ – ಭರವಸೆಯಾಗಿತ್ತು.
    ಕಪ್ಪು ಜನರಿಗೆ ಸಂಬಂಧಿಸಿದಂತೆ, ಅಮೇರಿಕಾ ಈ ಭರವಸೆಯನ್ನು ಹುಸಿಗೊಳಿಸಿದೆ. ಬಾಧ್ಯತೆಯನ್ನು ಗೌರವಿಸುವ ಬದಲು, “ಸಾಕಷ್ಟು ಹಣ ಇಲ್ಲ” ಎಂಬ ಟಿಪ್ಪಣಿಯೊಂದಿಗೆ ಪ್ರಾಮಿಸರಿ ನೋಟನ್ನು ನಿಗ್ರೋ ಜನರಿಗೆ ವಾಪಾಸ್ಸು ಕೊಟ್ಟಿದೆ. ಆದರೆ, ಬ್ಯಾಂಕ್ ದಿವಾಳಿಯಾಗಿದೆ ಮತ್ತು ಖಜಾನೆ ಖಾಲಿಯಾಗಿದೆಯೆಂದು ನಾವು ನಂಬುವುದಿಲ್ಲ. ಆದ್ದರಿಂದ, ಸ್ವಾತಂತ್ರ್ಯದ ಸಂಪತ್ತು ಮತ್ತು ನ್ಯಾಯದ ಸುರಕ್ಷತೆ ನೀಡಬಲ್ಲ ಪ್ರಾಮಿಸರಿ ನೋಟನ್ನು ನಗದೀಕರಿಸಲು ಮತ್ತು ಇಂದಿನ ತುರ್ತನ್ನು ಅಮೇರಿಕಾಗೆ ನೆನಪಿಸಲು ನಾವಿಲ್ಲಿಗೆ ಬಂದಿದ್ದೇವೆ. ಆರಾಮಾಗಿ ತಣ್ಣಗಿರುವ ಅಥವಾ ನೋವು ನಿವಾರಕ ಔಷಧಿ ತೆಗೆದುಕೊಂಡು ಸುಮ್ಮನಿರುವ ಸಮಯ ಇದಲ್ಲ. ಪ್ರಜಾಪ್ರಭುತ್ವದ ಭರವಸೆಗಳನ್ನು ಈಡೇರಿಸುವ ಸಮಯ ಇದು. ಪ್ರತ್ಯೇಕತೆಯ ಕತ್ತಲೆ ಮತ್ತು ನಿರ್ಜನ ಕಣಿವೆಯಿಂದ ಬೆಳಕಿನ ಹಾದಿಗೆ ಹೋಗಬೇಕಾದ, ಜನಾಂಗೀಯ ಅನ್ಯಾಯದ ಜೌಗು ನೆಲದಿಂದ ಬ್ರಾತೃತ್ವದ ಗಟ್ಟಿ ನೆಲೆಗೆ ಹತ್ತಬೇಕಾದ ಮತ್ತೂ, ದೇವರ ಎಲ್ಲಾ ಮಕ್ಕಳಿಗೂ ನ್ಯಾಯವನ್ನು ಕೊಡಬೇಕಾದ ಸಮಯ ಇದು. ಈ ಕ್ಷಣದ ತುರ್ತನ್ನು ಕಡೆಗಣಿಸುವುದು ದೇಶಕ್ಕೆ ಮಾರಕವಾಗಬಹುದು. ಸ್ವಾತಂತ್ರ್ಯ ಮತ್ತು ಸಮಾನತೆಗೆ ಶರತ್ಕಾಲ ಇರುವವರೆಗೆ ನಮ್ಮ ನ್ಯಾಯಸಮ್ಮತ ಅಸಮಾಧಾನದ ಜ್ವಾಲೆ ಆರುವುದಿಲ್ಲ. ಇಂದಿನ ಪ್ರತಿಭಟನೆ ಕೊನಯಲ್ಲ, ಆರಂಭ ಅಷ್ಟೇ. ನಿಗ್ರೊ ತನ್ನ ಆಕ್ರೋಶವನ್ನು ಹೊರಹಾಕಿ ಸಮಾಧಾನಕ್ಕೆ ಬರುತ್ತಾನೆ ಹಾಗು ದೇಶ ಸಹಜಸ್ಥಿತಿಗೆ ಬರುತ್ತದೆ ಎಂದು ಆಶಿಸುವವರು ಆಘಾತಕ್ಕೆ ಒಳಗಾಗುತ್ತಾರೆ. ನಿಗ್ರೊಗೆ ತನ್ನ ಪೌರತ್ವದ ಹಕ್ಕುಗಳನ್ನು ನೀಡುವವರೆಗೂ ಅಮೇರಿಕಾದಲ್ಲಿ ವಿಶ್ರಾಂತಿ ಇರುವುದಿಲ್ಲ, ಶಾಂತಿಯೂ ನೆಲೆಗೊಳ್ಳುವುದಿಲ್ಲ. ನ್ಯಾಯದ ಬೆಳಕು ಬರುವವರೆಗೂ ದಂಗೆಯ ಸುಂಟರಗಾಳಿ ನಮ್ಮ ರಾಷ್ಟ್ರದ ಅಡಿಪಾಯವನ್ನು ಅಲ್ಲಾಡಿಸುತ್ತಲೇ ಇರುತ್ತದೆ.
    ನ್ಯಾಯವಾದ ಹಕ್ಕಿಗಾಗಿ ಹೋರಾಟಕ್ಕಿಳಿದ ನನ್ನ ಜನರಿಗೆ ನಾನು ಹೇಳಲೇಬೇಕಾದ ಸಮಗತಿಗಳಿವೆ:
    ಹಕ್ಕನ್ನು ಪಡೆಯುವ ಹೋರಾಟದಲ್ಲಿ ತಪ್ಪು ಮಾಡಿ ನಾವು ಅಪರಾಧಿಗಳಾಗಬಾರದು. ಕೆಡುಕು ಮತ್ತು ದ್ವೇಶದಿಂದ ನಮ್ಮ ಸ್ವಾತಂತ್ರ್ಯಕ್ಕಾಗಿನ ಬಾಯಾರಿಕೆಯನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಬಾರದು. ಘನತೆ ಮತ್ತು ಶಿಸ್ತಿನಿಂದ ನಾವು ಹೋರಾಟವನ್ನು ನಡೆಸಬೇಕು. ನಮ್ಮ ಪ್ರತಿಭಟನೆ ದೈಹಿಕ ಹಿಂಸಾಚಾರಕ್ಕೆ ಇಳಿಯಬಾರದು. ದೈಹಿಕ ದೌರ್ಜನ್ಯವನ್ನು ಆತ್ಮಶಕ್ತಿಯಿಂದ ಎದುರಿಸಬೇಕು. ನೀಗ್ರೋ ಸಮುದಾಯವನ್ನು ಹೊಸದಾಗಿ ಆವರಿಸಿರುವ ಉಗ್ರಗಾಮಿತನ ಎಲ್ಲಾ ಬಿಳಿ ಜನರ ಅಪನಂಬಿಕೆಗೆ ಕಾರಣವಾಗಬಾರದು. ಏಕೆಂದರೆ, ಅವರ ಹಣೆಬರಹ ನಮ್ಮ ಹಣೆಬರಹದೊಂದಿಗೆ ಮತ್ತು ಅವರ ಸ್ವಾತಂತ್ರ್ಯ ನಮ್ಮ ಸ್ವಾತಂತ್ರ್ಯದೊಟ್ಟಿಗೆ ಬೇರ್ಪಡಿಸಲಾಗದಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಇಂದು ಅವರೂ ಇಲ್ಲಿ ನೆರೆದಿರುವುದೇ ಸಾಕ್ಷಿ.
    ನಿಗ್ರೋಗಳು ಪೋಲಿಸ್ ದೌರ್ಜನ್ಯದ ಭೀಕರತೆಗೆ ಬಲಿಯಾಗುತ್ತಿರುವವರೆಗೆ ನಾವು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಹೋಟೆಲ್‍ಗಳಲ್ಲಿ ವಸತಿ ಪಡೆಯಲು ಅನರ್ಹರಾಗಿರುವಷ್ಟೂ ಕಾಲ ನಾವು ಸುಮ್ಮನಿರುವುದಿಲ್ಲ. ಘೆಟ್ಟೋಗಳಲ್ಲಷ್ಟೇ ಬದುಕುತ್ತಿರುವ ನಿಗ್ರೋಗಳು, ಎಲ್ಲಾ ಜನಾಂಗದವರೂ ಒಟ್ಟಿಗಿರುವ ವಿಶಾಲ ಸ್ಥಳಗಳಲ್ಲಿ ನೆಲಸುವವರೆಗೆ ನಾವು ತೃಪ್ತರಾಗುವುದಿಲ್ಲ. ಬಿಳಿಯರಿಗೆ ಮಾತ್ರ ಎಂಬ ಸೂಚನಾಫಲಕಗಳ ಮೂಲಕ ನಮ್ಮ ಮಕ್ಕಳ ಆತ್ಮಗೌರವವನ್ನು ದೋಚುತ್ತಿರುವವರೆಗೆ ನಾವು ಶಾಂತರಾಗಿರುವುದಿಲ್ಲ. ಮತ ಚಲಾಯಿಸಲು ಆಗದಿರುವವರೆಗೆ ಮತ್ತು ಚಲಾಯಿಸಲು ತನ್ನಲ್ಲಿ ಏನೂ ಇಲ್ಲ ಎಂದು, ನಿಗ್ರೋ ಹತಾಶನಾಗಿರುವವರೆಗೆ ನಾವು ನಿರ್ಲಿಪ್ತರಾಗಿರಲು ಸಾಧ್ಯವಿಲ್ಲ.
    ನಿಮ್ಮಲ್ಲಿ ಕೆಲವರು ಕಡುಕಷ್ಟದಲ್ಲಿ ಬಂದಿದ್ದೀರೆಂಬುದು ನನಗೆ ತಿಳಿದಿದೆ. ಕೆಲವರು ಗೂಡಿನಂತಹ ಜೈಲಿನಿಂದ ನೇರವಾಗಿ ಬಂದಿದ್ದೀರಿ. ಹೋರಾಟಕ್ಕಿಳಿದು, ಶೋಷಣೆಯಲ್ಲಿ ಜರ್ಜರಿತವಾದ ಪ್ರದೇಶಗಳಿಂದ ಕೆಲವರು ಬಂದಿದ್ದೀರಿ. ಕಿರುಕುಳದಿಂದ ಮತ್ತು ಪೊಲೀಸ್ ದೌರ್ಜನ್ಯದಲ್ಲಿ ದಿಗ್ಬ್ರಮೆಗೊಂಡ ಪ್ರದೇಶಗಳಿಂದ ಬಂದಿದ್ದೀರಿ. ಈ ನೋವು ಮತ್ತು ಸಂಕಟದಿಂದ ಬಿಡುಗಡೆ ಪಡೆಯುವಿರೆಂದು ನಂಬಿ ನಡೆಯಿರಿ. ಹತಾಶೆಯಲ್ಲಿ ಬಂಧಿಗಳಾಗದೆ, ಈ ಪರಿಸ್ಥಿತಿಯನ್ನು ಬದಲಾಯಿಸಬಹುದು ಎಂದು ತಿಳಿದು ನಡೆಯಿರಿ.

ಎಷ್ಟೇ ಕಷ್ಟಗಳನ್ನು ನಾವು ಎದುರಿಸುತ್ತಿದ್ದರೂ, ನನಗೆ ಇನ್ನೂ ಕನಸಿದೆ. ಅದು ಅಮೇರಿಕೆಯ ಕನಸಿನಲ್ಲಿ ಲೀನವಾಗಿದೆ. ಒಂದು ದಿನ, ಈ ದೇಶ ತನ್ನ ಅಸ್ತಿತ್ವದ ನಿಜವಾದ ಅರ್ಥವನ್ನು – ಎಲ್ಲಾ ಜನರನ್ನೂ ಸಮಾನವಾಗಿ ಸೃಷ್ಟಿಸಲಾಗಿದೆ ಎಂಬ ಸ್ವಯಂ ಸ್ಪಷ್ಟ ಸತ್ಯವನ್ನು – ಕಾಣುತ್ತದೆ ಎಂಬ ಕನಸಿದೆ.
ಒಂದು ದಿನ, ಗುಲಾಮರ ಮಕ್ಕಳು ಮತ್ತು ಅವರ ಮಾಲಿಕರ ಮಕ್ಕಳು, ಸಹೋದರತ್ವದ ಮೇಜಿನ ಬಳಿ ಒಟ್ಟಿಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ ಎಂಬ ಕನಸಿದೆ. ಅನ್ಯಾಯ ಮತ್ತು ದಬ್ಬಾಳಿಕೆಯಲ್ಲಿ ಕುದಿಯುತ್ತಿರುವ ರಾಜ್ಯ ಕೂಡ ಒಂದು ದಿನ, ಸ್ವಾತಂತ್ರ್ಯ ಮತ್ತು ನ್ಯಾಯ ಪಡೆಯುತ್ತದೆ ಎಂಬ ಕನಸಿದೆ. ನನ್ನ ಮಕ್ಕಳು ಒಂದು ದಿನ, ಮೈಚರ್ಮದ ಬಣ್ಣದ ಬದಲು ತಮ್ಮ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವದ ಮೂಲಕ ಗುರುತಿಸಲ್ಪಡುವ ನಾಡಿನಲ್ಲಿ ವಾಸಿಸುತ್ತಾರೆ ಎಂಬ ಕನಸಿದೆ. ಕರಿಯರ ಮಕ್ಕಳು, ಬಿಳಿಯ ಹುಡುಗ-ಹುಡುಗಿಯರೊಂದಿಗೆ ಸಹೋದರ ಸಹೋದರಿಯರಂತೆ ಒಟ್ಟಿಗೆ ನಡೆಯಲು ಸಾಧ್ಯವಾಗುತ್ತದೆ ಎಂಬ ಕನಸಿದೆ. ಹತಾಶೆಯ ಶಿಲಾಪರ್ವತದೊಳಗಿಂದ ಭರವಸೆಯ ಶಿಲ್ಪ ರೂಪಿಸಬಲ್ಲೆ ಎಂಬ ನಂಬಿಕೆಯಿದೆ. ಇದರಿಂದ, ಅಪಶೃತಿಯನ್ನು ಬ್ರಾತೃತ್ವದ ಸ್ವರಮೇಳವಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ.
ಅಮೇರಿಕಾ ಶ್ರೇಷ್ಠ ದೇಶವಾಗಬೇಕೆಂದರೆ, ಇದು ನಿಜವಾಗಬೇಕು. ಆದ್ದರಿಂದ, ಎಲ್ಲಾ ಕಡೆಯಿಂದ ಸ್ವಾತಂತ್ರ್ಯ ರಿಂಗಣಿಸಲಿ. ಅದು ಘೋಷವಾಗಿ ಬಂದಾಗ, ಎಲ್ಲಾ ದೇವರ ಮಕ್ಕಳು – ಕರಿಯರು ಮತ್ತು ಬಿಳಿಯರು, ಯಹೂದಿಗಳು ಮತ್ತು ಇತರರು, ಪ್ರೊಟೆಸ್ಟೆಂಟರು ಮತ್ತು ಕ್ಯಾಥೊಲಿಕರು – ಪರಸ್ಪರ ಕೈಹಿಡೆದು ಹಾಡುವ ದಿನ ಬೇಗ ಬರುತ್ತದೆ”.

  • ಮಾರ್ಟಿನ್
    ಲ್ಯೂತರ್ ಕಿಂಗ್ ಜೂನಿಯರ್

ಅಸಾಧಾರಣ ಪ್ರತಿಭಾ ಪುರಸ್ಕಾರ ಪಡೆದ ಭರತ್ ಹೆಗಡೆ
ಸಿದ್ಧಾಪುರ ತಾಲೂಕಿನ ದೊಡ್ಮನೆಯ ಭರತ್ ರಾಮನಾಥ ಹೆಗಡೆ ಈ ವರ್ಷದ ಉತ್ತರ ಕನ್ನಡ ಜಿಲ್ಲೆಯ ಅಸಾಧಾರಣ ಪ್ರತಿಭಾ ಪುರಸ್ಕಾರ ಪಡೆದಿದ್ದಾನೆ. ಈತ ಸಿದ್ಧಾಪುರ ಎಸ್.ವಿ. ಗಂಡುಮಕ್ಕಳ ಶಾಲೆಯ ವಿಶೇಶ ಪ್ರತಿಭೆಯ ವ್ಯಕ್ತಿಯಾಗಿದ್ದು ವಿಶೇಶಚೇತನನಾಗಿದ್ದರೂ ಹಲವಾರು ಸ್ಫರ್ಧೆ, ಪಂದ್ಯಾಟಗಳಲ್ಲಿ ಮೊದಲಿಗನಾಗುವ ಮೂಲಕ ಗಮನ ಸೆಳೆದಿದ್ದಾನೆ. ಚೆಸ್ ಮತ್ತು ಇತರ
ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿರುವ ಈ ವಿದ್ಯಾರ್ಥಿಯ ವಿಶಿಷ್ಟ ಕೌಶಲ್ಯ ಪರಿಗಣಿಸಿ ಉತ್ತರಕನ್ನಡ ಜಿಲ್ಲೆಯ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಈ ಪುರಸ್ಕಾರ ನೀಡಿದೆ. ಈ ವಿದ್ಯಾರ್ಥಿಯ ಅಸಾಧಾರಣ ಪ್ರತಿಭೆ ಮತ್ತು ಸಾಧನೆಗೆ ಅನೇಕರು ಅಭಿನಂದಿಸಿದ್ದಾರೆ.

ವಿಡಂಬಾರಿ ಕೋಟಿಗೊಂದು ಬಂಡಾಯದ ಬೆಳಕು
ಒಂದು ಚಿಟಿಕೆಯಷ್ಟು ಚಳಿ ಇದ್ದ ಮಧ್ಯಾಹ್ನ, ಬಹುಶ: ಎಂದಿನಂತೆ ಅಂದೂ ಆಕಾಶಕ್ಕೆ ಏಣಿ ಹಾಕುವ ಬಗ್ಗೆ ಯೋಚಿಸುತಿದ್ದೆ.
ಫಳ್ ಎಂದು ಗ್ಲಾಸ್ ಒಡೆದಂತೆ ಒಂಥರಾ ಸೌಂಡುಮಾಡುತ್ತಾ ನನ್ನ ಆಕಾಲದ ಐದುಸಾವಿರ ರೂಪಾಯಿಯ ಸೋವಿ ಮೊಬೈಲ್ ರಿಂಗಣಿಸಿತು. ಆ ಕಡೆಯಿಂದ ಬಂದ ಧ್ವನಿ ಕನ್ನೇಶ್ ಎಂದು ಗಡುಸಾಗಿಯೇ ಇತ್ತು ಎಂದಿನಂತೆ,
ಸಂಶಯವಿಲ್ಲ, ಜಿ.ಎನ್.ಮೋಹನ್ ಸರ್ ಧ್ವನಿಯದು,ಆಗ ಜಿ.ಎನ್.ಮೋ.ಈ ಟಿ.ವಿ.ಗೆ ಮುಖ್ಯಸ್ಥರಾಗಿ ಬಂದು ಕೆಲವು ತಿಂಗಳುಗಳೂ ಕಳೆದಿರಲಿಲ್ಲ. ಶಿರಸಿಯಲ್ಲಿ ಬಸ್ ನಿಲ್ಧಾಣದಲ್ಲಿ ಒಬ್ಬರು ಪುಸ್ತಕ ಮಾರುತ್ತಾರೆ ಗೊತ್ತಾ ಎಂದರು. ಇಲ್ಲ ಎಂದೆ, ಸರಿ ನೋಡಿ ಒಂದು ಒಳ್ಳೆಯ ಸುದ್ದಿಯಾಗುತ್ತೆ ಎಂದವರೆ, ಹೆಚ್ಚು ಮಾತನಾಡದೆ ಕಾಲ್ ಕಟ್ ಮಾಡಿದರು.
ಶಿರಸಿಯಲ್ಲಿ ಪುಸ್ತಕಮಾರುವ ವ್ಯಕ್ತಿಗಳನ್ನು ನೋಡಿದ ನೆನಪುಕೂಡಾ ಬರಲಿಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *