for weekend reading- ದೈತ್ಯ ದೆಹಲಿಗೊಬ್ಬ ಅಪರೂಪದ ರಾಜಕಾರಣಿ

ಅರವಿಂದ ಕೇಜ್ರಿವಾಲ್: ದೈತ್ಯ ದೆಹಲಿಗೊಬ್ಬ ಅಪರೂಪದ ರಾಜಕಾರಣಿ
– ಡಿ. ರಾಮಪ್ಪ ಸಿರಿವಂತೆ
ಡೆಲ್ಹಿ ಎಂದೂ ಕರೆಯಲ್ಪಡುವ ದೆಹಲಿ ಅಥವಾ ದಿಲ್ಲಿಯನ್ನು, ಅತ್ಯಂತ ಮೋಹಕಳೂ, ಅತ್ಯಂತ ಬ್ರಷ್ಟಳೂ ಆದ ನಾಯಕಸಾನಿ ಎಂದು ಡಾ. ರಾಮಮನೋಹರ್ ಲೋಹಿಯಾ ಕರೆಯುತ್ತಿದ್ದರು. ಸಾಮಾಜಿಕ ಕಳಕಳಿಯ, ತೀವ್ರ ತುಡಿತದ ಮತ್ತು, ಸಮೃದ್ಧ ಮನಸ್ಸಿನ ಪ್ರಜ್ಞಾವಂತರು ಆಳಿ ಬೆಳೆಸಿದ್ದಾರೆ. ಹಾಗೆಯೇ ಕ್ರೂರಿಗಳು, ಅನಾಗರಿಕರು ಮತ್ತು ಬ್ರಷ್ಟರಿಂದ ಆಳಲ್ಪಟ್ಟು ಡೆಲ್ಹಿ ಧಮನಕ್ಕೊಳಗಾಗಿದ್ದಾಳೆ. ಅವರನ್ನು ತಿದ್ದಿ-ತೀಡಿ ಸರಿಮಾಡಲು ಯಾವಾಗಲೂ ಪ್ರಯತ್ನಿಸಿದ್ದಾಳೆ.

ರಾಜ-ಮಹಾರಾಜರು ಆಳಿದ ಡೆಲ್ಹಿಯನ್ನು ಸ್ವತಂತ್ರ್ಯಾನಂತರ ನಮ್ಮ ರಾಜಕೀಯ ಪಕ್ಷಗಳು ಆಳಿವೆ. ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಇದನ್ನು ಮೊದಲ ಬಾರಿಗೆ ಅಂದರೆ, 1990ರ ದಶಕದಲ್ಲಿ ಬಿಜೆಪಿಯ ಮದನಲಾಲ್ ಖುರಾನ ಆಳಿದರು. ಕಾಂಗ್ರೆಸ್‍ನ ತೆಕ್ಕೆಗೆ ಮತ್ತೆ ಬಂದ ಅದನ್ನು ಹೊಸದಾಗಿ ರೂಪುಗೊಂಡ ಆಮ್ ಆದ್ಮಿ ಪಕ್ಷ 2013ರಲ್ಲಿ ಭಾಗಶಃ ಮತ್ತು 2015ರಲ್ಲಿ ಪೂರ್ತಿಯಾಗಿ ಕಸಿದುಕೊಂಡು 2020 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ. ಆಮ್ ಆದ್ಮಿ (ಸಾಮಾನ್ಯ ಜನರ) ಪಕ್ಷದ ದೈತ್ಯ ಬಲವೇ ಈ ಅರವಿಂದ ಗೋಬಿಂದ್‍ರಾಮ್ ಕೇಜ್ರಿವಾಲ್!
ಡೆಲ್ಹಿ ಚರಿತ್ರೆ ತೀರ ಹಳೆಯದು. ಮಹಾಭಾರತದ ಇಂದ್ರಪ್ರಸ್ಥವೇ ಡೆಲ್ಹಿ ಎಂಬುದು ಒಂದು ನಂಬಿಕೆ. ಮೌರ್ಯರು ಮತ್ತು ತೋಮರರ ನಂತರ, ಸರಿಸುಮಾರು 1200 ರಿಂದ 1800 ರ ವರೆಗೆ ಅಫ್ಘಾನ್‍ನ ಘೋರಿ ಮತ್ತು ಲೋಧಿಗಳು, ಟರ್ಕಿಯ ತುರ್ಕರು, ಗುಲಾಮಿ ಸಂತತಿಯ ಅರಸರು ಮೊಘಲರು ಮುಂತಾದವರು – ಇಂಗ್ಲೀಷರು ಆಡಳಿತದ ಚುಕ್ಕಾಣಿ ಹಿಡಿಯುವವರೆಗೆ – ಡೆಲ್ಹಿಯನ್ನು ಆಳಿದರು. 1911 ರಲ್ಲಿ ಬ್ರಿಟಿಷ್ ಇಂಡಿಯಾದ ರಾಜಧಾನಿಯಾದ ಡೆಲ್ಹಿ, 1947ರ ಸ್ವಾತಂತ್ರ್ಯದ ನಂತರವೂ ಸ್ವತಂತ್ರ ಭಾರತದ ರಾಜಧಾನಿಯಾಗಿಯೇ ಉಳಿದು 1956ರಲ್ಲಿ ಕೇಂದ್ರಾಡಳಿತ ಪ್ರದೇಶವಾಯಿತು.
1992 ರಲ್ಲಿ ಡೆಲ್ಹಿಯನ್ನು ರಾಷ್ಟ್ರಿಯ ರಾಜಧಾನಿ ಪ್ರದೇಶ ಎಂದು ಘೋಷಿಸಲಾಯಿತು. ಅತ್ತ ಕೇಂದ್ರಾಡಳಿತ ಮತ್ತು ಇತ್ತ ರಾಜ್ಯಸರ್ಕಾರದ ಆಡಳಿತ ಇರುವ ಸಂಕೀರ್ಣ ಮತ್ತು ತ್ರಿಶಂಕು ಸ್ಥಿತಿ ಡೆಲ್ಹಿಯದು! ನಾಗರೀಕ ಸೌಲಭ್ಯಗಳು ಮತ್ತು ಸಾರ್ವಜನಿಕ ಸೇವೆಗಳ ಜವಾಬ್ದಾರಿ ಡೆಲ್ಹಿ ಸರ್ಕಾರದ್ದಾದರೆ, ಪೊಲೀಸ್-ಕಾನೂನು ಸುವ್ಯವಸ್ಥೆ ಕೇಂದ್ರ ಸರ್ಕಾರದ್ದು! ಸ್ವಾಯತ್ತ ರಾಜ್ಯವೊಂದರ ಸ್ಥಾನಮಾನ ಕೊಡಲು ನಿರ್ಧರಿಸಿದ್ದ ವಾಜಪೇಯಿಯವರು ಸಂಸತ್ತಿನ ಸ್ಥಾಯಿ ಸಮಿತಿಯ ಪರಾಮರ್ಶೆಗೆ ಒಪ್ಪಿಸಿದ ಮಸೂದೆ ಇನ್ನೂ ನೆನೆಗುದಿಗೆ ಬಿದ್ದಿದೆ. 1484 ಚದರ ಕಿ. ಮೀ. ವಿಸ್ತಿರ್ಣವಿರುವ ಡೆಲ್ಹಿಯಲ್ಲಿ 2016ರ ಅಂದಾಜಿನ ಪ್ರಕಾರ 2.60 ಕೋಟಿ ಜನಸಂಖ್ಯೆಯಿದೆ. ಡೆಲ್ಹಿಯ 11 ಜಿಲ್ಲೆಗಳನ್ನು 7 ಲೋಕಸಭೆ ಸದಸ್ಯರು ಮತ್ತು 70 ವಿಧಾನಸಭೆ ಸದಸ್ಯರು ಪ್ರತಿನಿಧಿಸುತ್ತಾರೆ. ಅದಲ್ಲದೆ, ಡೆಲ್ಹಿ ಮಹಾನಗರಕ್ಕೆ ಮೂರು ಪಾಲಿಕೆಗಳಿವೆ. ಆದರೆ, ನವದೆಹಲಿ(ಲ್ಯೂಟಿಯೆನ್ಸ್ ಡೆಲ್ಹಿ)ಯ ಮತ್ತು ಸೇನಾ ಪಡೆಗಳ ಕಛೇರಿಗಳು ಹಾಗು ಸೇನಾಪಡೆ ವಸತಿ ಇರುವ ಪ್ರದೇಶದ ಆಡಳಿತ ಚುನಾಯಿತ ಪಾಲಿಕೆಗಳಿಗೆ ಇಲ್ಲ!

ಸಂಕೀರ್ಣ ಆಡಳಿತ ವ್ಯವಸ್ಥೆಗೆ ಒಳಪಟ್ಟಿರುವ ದೆಹಲಿಯನ್ನು ಈಗ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷ ಆಳುತ್ತಿದೆ. ಖಾಸಗಿ ಕಂಪನಿ ಮತ್ತು ಸರ್ಕಾರಿ ಕೆಲಸಗಳಲ್ಲಿ ಇದ್ದ ಕೇಜ್ರಿವಾಲ್ ಸಾರ್ವಜನಿಕ ಕಾಳಜಿಯಿರುವ ವ್ಯಕ್ತಿ. ಸಾಮಾನ್ಯ ಜನರ ಜೀವನ ಹಸನಾಗಿರಬೇಕು ಎಂಬ ತೀವ್ರ ತುಡಿತದ ಬಂಡುಕೋರ ಮನಸ್ಸು ಅವರನ್ನು, ಅತ್ಯುತ್ತಮ ಕೆಲಸ ಬಿಟ್ಟು ಬೀದಿಗಿಳಿಯುವಂತೆ ಮಾಡಿತು. ಹರ್ಯಾಣದ ಭಿವಾನಿ ಜಿಲ್ಲೆಯ ಸಿವನಿಯವರಾದ ಅರವಿಂದ್ ಕೇಜ್ರಿವಾಲ್ ಹುಟ್ಟಿದ್ದು 1968ರಲ್ಲಿ. ಖರಗ್‍ಪುರದ ಪ್ರತಿಷ್ಟಿತ ಭಾರತೀಯ ವಿಜ್ಞಾನ ಸಂಸ್ಥೆಯ ಮೆಕ್ಯಾನಿಕಲ್ ಇಂಜಿನಿಯರ್ ಆದ ಕೇಜ್ರಿವಾಲ್ ಟಾಟಾ ಸ್ಟೀಲ್‍ನಲ್ಲಿ ಕೆಲಸದಲ್ಲಿದ್ದರು. ನಂತರ, ಭಾರತೀಯ ಆಡಳಿತ ಸೇವೆ ಪರೀಕ್ಷೆ ಮುಖಾಂತರ ಕಂದಾಯ ಇಲಾಖೆಯ ಸಹಾಯಕ ಕಮಿಷನರ್ ಆಗಿ ಕೆಲಸಕ್ಕೆ ಸೇರಿದ್ದರು. 2006ರ ಹೊತ್ತಿಗೆ ಜಂಟಿ ಕಮಿಷನರ್ ಆಗಿದ್ದ ಅವರು ಆ ವರ್ಷವೇ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಮಾಜ ಸೇವೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು.

1999 ರಲ್ಲಿ ಅಂದರೆ, ಸರ್ಕಾರಿ ಕೆಲಸದಲ್ಲಿದ್ದಾಗಲೇ, ಕಛೇರಿಗಳಲ್ಲಿನ ಅವ್ಯವಹಾರ ಮತ್ತು ರಾಜಕಾರಣಿಗಳ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಡೆಲ್ಹಿಯ ನಾಗರೀಕರನ್ನೊಳಗೊಂಡ’”ಪರಿವರ್ತನ”’ಸಂಘಟನೆಯನ್ನು ಹುಟ್ಟುಹಾಕಿದರು. ಆಹಾರ ವಿತರಣೆ, ಆದಾಯ ತೆರಿಗೆ, ಲೋಕೋಪಯೋಗಿ ಕೆಲಸಗಳು, ವಿದ್ಯುತ್ ಮುಂತಾದ ಸರ್ಕಾರದ ಕೆಲಸಗಳಲ್ಲಿ ಸಾರ್ವಜನಿಕರಿಗಾಗುತ್ತಿದ್ದ ತೊಂದರೆಗಳನ್ನು ಅಹವಾಲುಗಳಾಗಿ ಸ್ವೀಕರಿಸಿ ಸರಿಪಡಿಸುವ ಕೆಲಸವನ್ನು ಸಂಘಟನೆ ಮಾಡಿತು. ಮಾಹಿತಿ ಹಕ್ಕಿಗೆ ಸಂಬಂಧಿಸಿದ ಕೆಲಸ ಮಾಡಲು “ಕಬಿರ್” ಎಂಬ ಎನ್‍ಜಿಓ ಅನ್ನು 2005ರಲ್ಲಿ ಹುಟ್ಟುಹಾಕಿದರು. ಪರಿವರ್ತನ ಮತ್ತು ಕಬೀರ್ ಸಂಘಟನೆಗಳ ಹೋರಾಟಗಳು, ಸತ್ಯಾಗ್ರಹಗಳು ಮತ್ತು ಜನಾಂದೋಲನಗಳು ಎಷ್ಟು ಪರಿಣಾಮ ಬೀರಿತೆಂದರೆ, 2001ರಲ್ಲಿ ಡೆಲ್ಲಿ ಸರ್ಕಾರ ಮಾಹಿತಿ ಹಕ್ಕಿಗೆ ಸಂಬಂಧಿಸಿದ ಕಾನೂನು ರೂಪಿಸುವಂತೆ ಮಾಡಿತು.
ಮಾಹಿತಿ ಹಕ್ಕನ್ನು ಉಪಯೋಗಿಸಕೊಂಡು, 2002ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ನಡೆದ 68 ಸಾರ್ವಜನಿಕ ಕೆಲಸಗಳ ಪೈಕಿ 64ರಲ್ಲಿ ಲಕ್ಷಾಂತರ ರೂಪಾಯಿಗಳ ದುರುಪಯೋಗ ಆಗಿದೆ ಎಂದು ಇವರು ತೋರಿಸಿದರು. ಪಡಿತರ ವಿತರಣೆಯಲ್ಲಿ ರೇಷನ್ ಅಂಗಡಿಯವರು ಮತ್ತು ಸರ್ಕಾರಿ ಅಧಿಕಾರಿಗಳು ಶಾಮೀಲಾಗಿ ಲೂಟಿ ಮಾಡುತ್ತಿರುವುದನ್ನು ಸಾಕ್ಷಿ ಸಮೇತ ತೋರಿಸಿದರು. ನಾಗರೀಕ ನೀರು ಪೂರೈಕೆಯನ್ನು ಪ್ರೈವೇಟ್ ಸಂಸ್ಥೆಗಳಿಗೆ ಕೊಡಲು ಡೆಲ್ಹಿ ಸರ್ಕಾರ ತೋರುತ್ತಿದ್ದ ಆಸಕ್ತಿಯನ್ನು ಗಮನಿಸಿ (- ಹಾಗಾಗಿದ್ದರೆ, ನೀರಿನ ದರ ಈಗಿನ 10 ಪಟ್ಟು ಹೆಚ್ಚುತ್ತಿತ್ತು ಮತ್ತು ನಗರದ ಬಡವರಿಗೆ ನೀರು ಇಲ್ಲವಾಗುತ್ತಿತ್ತು )- ಜನಾಂದೋಲನ ಪ್ರಾರಂಭಿಸಿ, ಸರ್ಕಾರ ಅದನ್ನು ಕೈಬಿಡುವಂತೆ ಮಾಡಿದರು. ಸರ್ಕಾರದ ಅನುಮೋದನೆ ಮುಖಾಂತರ ಕಡಿಮೆ ದರದಲ್ಲಿ ಜಮೀನು ಪಡೆದು ಶಾಲೆ ನಡೆಸುತ್ತಿರುವ ಸಂಸ್ಥೆಗಳು, ಕಾನೂನು ಪ್ರಕಾರ ಬಡಮಕ್ಕಳಿಗೆ ಫೀಸ್ ಇಲ್ಲದೆ ಸೀಟು ಕೊಡಬೇಕು ಎಂದು ಕೋರ್ಟ್ ಆದೇಶ ಪಡೆದು 700 ಬಡ ಮಕ್ಕಳಿಗೆ ಶಾಲೆ ಕಲಿಯುವಂತೆ ಮಾಡಿದರು. ಈ ಮಧ್ಯೆ, ಅವರು, ದೇಶದಾದ್ಯಂತ ತಿರುಗಾಡಿ ಆರ್ಟಿಐನ ಮಹತ್ವವನ್ನು ಜನರಿಗೆ ತಿಳಿಸತೊಡಗಿದರು. ಇದರ ಪರಿಣಾಮವಾಗಿ ಕಾಮನ್ವೆಲ್ತ್ ಗೇಮ್ಸ್‍ನಲ್ಲಿ ನಡೆದ ಹಣ ದುರುಪಯೋಗ, ಅಧಿಕಾರಿಗಳ ಮತ್ತು ರಾಜಕಾರಣಿಗಳ ಬ್ರಷ್ಟಾಚಾರ ಹಗರಣಗಳು ಬೆಳಕಿಗೆ ಬಂದವು. ಆರ್ಟಿಐ ಕಾಯಿದೆಯ ಸಾರ್ವಜನಿಕ ಉಪಯೋಗ, ಬಡವರ ಬಗೆಗಿನ ಕಾಳಜಿ ಮುಂತಾದುವನ್ನು ಗಮನಿಸಿ, 2006 ರಲ್ಲಿ ಅವರಿಗೆ ಫಿಲಿಪೈನ್ಸ್ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಘೋಷಿಸಿತು.

ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿ ಮಾಡುವ ಸಾಕಷ್ಟು ಸಮಾಜವಿರೋಧಿ ಮತ್ತು ಬ್ರಷ್ಟಾಚಾರದ ಕೆಲಸಗಳು ಬೆಳಕಿಗೆ ಬಂದರೂ, ಅವರೆಲ್ಲಾ ಪ್ರಭಾವಿ ವ್ಯಕ್ತಿಗಳಾದುದರಿಂದ ಸುಲಭದಲ್ಲಿ ತಪ್ಪಿಸಿಕೊಳ್ಳುತ್ತಾರೆ. ತನಿಖೆ ಮತ್ತು ಶಿಕ್ಷೆಗೆ ಸಂಬಂಧಪಟ್ಟ ಕಾನೂನಾತ್ಮಕ ವ್ಯವಸ್ಥೆ ಎಂದರೆ, ಕೇಂದ್ರೀಯ ತನಿಕಾ ಆಯೋಗ ಕ್ರಿಯಾಶೀಲವಾಗಿ ಹದ್ದಿನ ಕಣ್ಣಿಟ್ಟು ಕೆಲಸ ಮಾಡುವುದು. ಆದರೆ ಅದು ಹಲ್ಲಿಲ್ಲದ ಹಾವು. ಮಂತ್ರಿಗಳ ಮೇಲಿನ ತನಿಖೆ ಮತ್ತು ಮೊಕದ್ದಮೆ ಹಾಕಲು ಅದಕ್ಕೆ ಅಧಿಕಾರದಲ್ಲಿರುವವರ ಪರವಾನಗಿ ಬೇಕು. ಇದನ್ನರಿತು, ಕೇಜ್ರಿವಾಲ್, ದಿಲ್ಲಿಯ ಪ್ರತಿಷ್ಟಿತ ವ್ಯಕ್ತಿಗಳನ್ನು ಸೇರಿಸಿ “ಬ್ರಷ್ಟಾಚಾರ ವಿರುದ್ಧ ಭಾರತ” ಎಂಬ ಸಂಘಟನೆ ಸ್ಥಾಪಿಸಿ, ಆ ಮೂಲಕ ರಾಜಕೀಯ ನಾಯಕರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳನ್ನೇ ಶಿಕ್ಷಿಸಬಲ್ಲ ಜನಲೋಕಪಾಲ್ ಮಸೂದೆಯನ್ನು ತರುವಂತೆ ಒತ್ತಾಯಿಸತೊಡಗಿದರು. ಸರ್ಕಾರ ಮಣಿಯದಿದ್ದಾಗ, 2011ರ ಎಪ್ರಿಲ್ ನಲ್ಲಿ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ, ಜನಾಂದೋಲನ ಪ್ರಾರಂಭಿಸಿದರು. ಸರ್ಕಾರ ಆಗಲೂ ಎಚ್ಚೆತ್ತುಕೊಳ್ಲದಿದ್ದಾಗ, ಸತ್ಯಾಗ್ರಹ ಮತ್ತು ಉಪವಾಸ ಸತ್ಯಾಗ್ರಹಕ್ಕೆ ಕುಳಿತರು. ಇದಕ್ಕೆ ಸರ್ಕಾರ ಮಣಿಯಲೇಬೇಕಾಯ್ತು. ಆದರೆ ಸರ್ಕಾರ ಮಂಡಿಸಿದ ಲೋಕಪಾಲ್ ಮಸೂದೆ ದುರ್ಬಲವಾಗಿತ್ತು. ಕೇಂದ್ರೀಯ ತನಿಖಾ ಆಯೋಗದಂತೆ ಇದು ಕೂಡ ಹಲ್ಲಿಲ್ಲದ ಹಾವು ಎಂದರಿತ ಕೇಜ್ರಿವಾಲ್ ಸ್ನೇಹಿತರೊಡಗೂಡಿ 2012 ರಲ್ಲಿ, ಆಮ್ ಆದ್ಮಿ ಪಕ್ಷ ರಚಿಸಿ ರಾಜಕೀಯಕ್ಕೆ ಧುಮುಕಿದರು.

ಸಾಮಾಜಿಕ ಬದ್ಧತೆ, ಜವಾಬ್ದಾರಿ ಮತ್ತು ಪಾರದರ್ಶಕತೆಯಿರುವ ಜನನಾಯಕರನ್ನು ಆರಿಸುವಂತೆ ಕರೆಕೊಟ್ಟು, 2013ರಲ್ಲಿ ನಡೆದ ಡೆಲ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಿತು. ಪೂರ್ಣ ಬಹುಮತ ಇಲ್ಲದ್ದರಿಂದ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿತು. ಆದರೆ, ವಿಧಾನಸಭೆಯಲ್ಲಿ ಜನಲೋಕಪಾಲ್ ಮಸೂದೆ ತರುವಲ್ಲಿ ಕಾಂಗ್ರೆಸ್ ಸಹಕರಿಸದ ಕಾರಣ, ಸರ್ಕಾರ ರಚಿಸಿದ ಕೆಲವೇ ದಿನಗಳಲ್ಲಿ ರಾಜಿನಾಮೆ ಕೊಟ್ಟುಬಿಟ್ಟರು. ಇದೊಂದು ಜಾಣ ಮತ್ತು ಲೆಕ್ಕಾಚಾರದ ನಡೆಯಾಗಿತ್ತು. ಆದ್ದರಿಂದಲೇ, 2015 ರಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಚಂಡ ಬಹುಮತ ಪಡೆದು ಅಧಿಕಾರಕ್ಕೆ ಬಂತು. ಇದು ಆಗಿನ ಕೇಂದ್ರ ಸರ್ಕಾರದ ನಿದ್ದೆ ಕೆಡಿಸಿತು. ಕೇಂದ್ರದ ಕೈಗೊಂಬೆಯಾದ ಲೆಫ್ಟಿನೆಂಟ್ ಗವರ್ನರ್ ಮುಖಾಂತರ ಶೀತಲ ಸಮರ ಸಾರಿತು.ಧೃತಿಗೆಡದ ಕೇಜ್ರಿವಾಲ್, ಜನಲೋಕಪಾಲ್ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಪಾಸ್ ಆಗುವಂತೆ ನೋಡಿಕೊಂಡರು. ಎರಡನೆಯದಾಗಿ, ಡೆಲ್ಹಿ ಅಭಿವೃದ್ಧಿ ಕುರಿತ ನೀಲನಕ್ಷೆ ತಯಾರಿಸಿ, ಅದರಂತೆ ಜನಹಿತದ ಕಾರ್ಯಕ್ರಮಗಳಲ್ಲಿ ತಮ್ಮ ಸರ್ಕಾರವನ್ನು ತೊಡಗಿಸಿದರು. ಮೊದಲಿಗೆ, ಸರ್ಕಾರಿ ವೈದ್ಯರುಗಳು ಮೊಹಲ್ಲಾಗಳಿಗೆ ಹೋಗಿ ಉಚಿತ ಔಷಧಿಯೊಂದಿಗೆ ಚಿಕಿತ್ಸೆ ಕೊಡುವ ಮೊಹಲ್ಲಾ ಕ್ಲಿ£ಕ್ ಪ್ರಾರಂಭಿಸಲಾಯ್ತು. ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತವಾಯ್ತು. ಡೆಲ್ಹಿಗರಿಗೆ ಉಚಿತ ನೀರು ಮತ್ತು ವಿದ್ಯುತ್ ಪೂರೈಕೆ ಪ್ರಾರಂಭಿಸಲಾಯ್ತು. ಸರ್ಕಾರಿ ಶಾಲೆಗಳ ಗುಣಮಟ್ಟವು, ಅತ್ಯುನ್ನತ ಖಾಸಗೀ ಶಾಲೆಗಳನ್ನು ಮೀರಿ ಏರಿತು. ಡೆಲ್ಹಿಯ ಬಜೆಟ್ಟಿನಲ್ಲಿ, ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟ ಹಣ ಒಟ್ಟು ಖರ್ಚಿನ 27.8% (ಎಲ್ಲಾ ರಾಜ್ಯಗಳ ಸರಾಸರಿ ಮೀಸಲು – 15.9%). ಆರೋಗ್ಯಕ್ಕಾಗಿ ಮೀಸಲಿಟ್ಟ ಹಣ ಒಟ್ಟು ಖರ್ಚಿನ 13.8% (ಎಲ್ಲಾ ರಾಜ್ಯಗಳ ಸರಾಸರಿ ಮೀಸಲು – 5.2%).

ಹಣಕಾಸಿನ ವಿಷಯದಲ್ಲಿ, ಡೆಲ್ಹಿಯನ್ನು ಬೇರೆ ರಾಜ್ಯಗಳಿಗೆ ಹೋಲಿಸಲಾಗದು. ದೇಶದಲ್ಲಿಯೇ ಅತ್ಯಂತ ಫಲಭರಿತ ಪ್ರದೇಶ ಡೆಲ್ಹಿ. ಆದರೆ ಸಾರ್ವಜ£ಕ ಹಣವನ್ನು ಮುಖ್ಯವೆನಿಸುವ ಜನೋಪಯೋಗಿ ಕೆಲಸದಲ್ಲಿ ಬಳಸಲು ಮನಸ್ಸು, ಎಚ್ಚರ ಮತ್ತು ಕಾಳಜಿ ಬೇಕು. ಹಾಗೆಯೇ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ಇದರಲ್ಲಿ ತೊಡಗಿಕೊಳ್ಳುವಂತೆ ಮಾಡಲು ಇಚ್ಚಾಶಕ್ತಿ ಮತ್ತು ನಂಬಿಕೆ ನಾಯಕನಿಗಿರಬೇಕು. ಇದು, ಡೆಲ್ಹಿ ಸರ್ಕಾರದ ಚುಕ್ಕಾಣಿ ಹಿಡಿದ ಅರವಿಂದ ಕೇಜ್ರಿವಾಲ್‍ರಲ್ಲಿ ಧಾರಾಳವಾಗಿ ಕಾಣುತ್ತದೆ.
ಬಂಡುಕೋರನಾಗಿ ಸಾರ್ವಜನಿಕ ಜೀವನ ಆರಂಭಿಸಿದ ಕೇಜ್ರಿವಾಲ್ ಡೆಲ್ಹಿಯ ಸಮರ್ಥ ಜನನಾಯಕನಾಗಿ ಹೊರಹೊಮ್ಮಿದ್ದು ಅಭ್ಯಾಸಕ್ಕೆ ಯೋಗ್ಯ. ಕೇವಲ ಬಂಡುಕೋರತನ, ಗುಂಪೊತ್ತಡ (ಗ್ರೂಪ್ ಪ್ರೆಷರ್) ಅಥವ ಕೇವಲ ರಾಜಕೀಯ ಒತ್ತಡ ಮಾತ್ರವೇ ಸರ್ಕಾರಗಳು ವಿವೇಚನೆಯಿಂದ ವರ್ತಿಸುವಂತೆ ಮಾಡಲಾರವು ಎಂದರಿತ ಅವರು ಅದಕ್ಕೆ ಆಡಳಿತದ ಚುಕ್ಕಾಣಿ ಹಿಡಿಯುವುದು ಅವಶ್ಯ ಎಂಬ ತೀರ್ಮಾನಕ್ಕೆ ಬೇಗ ಬಂದರು. ಚುನಾವಣಾಪೂರ್ವ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿಯೇ ನಾಯಕರ ಮತ್ತು ಪಕ್ಷಗಳ ಭವಿಷ್ಯ ಅಡಗಿದೆ ಎಂಬುದನ್ನು ಜನರೊಟ್ಟಿಗಿನ ಒಡನಾಟ ತಿಳಿಸಿತು. ಸರ್ಕಾರದ ಕೆಲಸದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಮುಖ್ಯ; ನಾಯಕನಾದವನು ಮುಂದೆ ನಿಂತು ಮಾದರಿಯಾದರೆ ಸಹೋದ್ಯೋಗಿಗಳು ಮತ್ತು ಸಹಾಯಕರು ಜವಾಬ್ಧಾರಿಯಿಂದಲೂ, ನಿಷ್ಟೆಯಿಂದಲೂ ಸಹಕರಿಸುತ್ತಾರೆ; ಸುತ್ತಲೂ ಹದ್ದಿನಂತೆ ಎರಗಲು ನಿಂತಿರುವ ರಾಜಕೀಯ ವಿರೋಧಿಗಳನ್ನು ವಸ್ತುನಿಷ್ಠವಾಗಲ್ಲದೆ ವ್ಯಕ್ತಿನಿಷ್ಠವಾಗಿ ಟೀಕಿಸಬಾರದು ಎಂಬುದನ್ನು ಡೆಲ್ಹಿಯ ವಾತಾವರಣದಿಂದ ಮನನಮಾಡಿಕೊಂಡರು. ಆದ್ದರಿಂದಲೇ, ಸಿಎಎ ವಿರುದ್ಧ ಮಾತಾಡಿದರೂ, ರಾಷ್ಟ್ರೀಯತೆಯ ವಿಷಯದಲ್ಲಿ ಎಚ್ಚರವಹಿಸಿದರು. ಧರ್ಮಾಧಾರಿತ ಚರ್ಚೆ-ಕುಚರ್ಚೆಯಿಂದ ದೂರವುಳಿದರು. ಶಹೀನ್‍ಬಾಗ್ ಚಳವಳಿಯ ವಿಷಯವನ್ನು ಕಾಮೆಂಟ್ ಮಾಡದೆ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊಂದಿರುವ ಕೇಂದ್ರ ಸರ್ಕಾರಕ್ಕೆ ಬಿಟ್ಟುಬಿಟ್ಟರು. ರಾಜಕೀಯವಾಗಿ ಎಚ್ಚರದ ಹೆಜ್ಜೆಯಿಡುವ ಧಾವಂತದಲ್ಲಿ, ಅವರ ಈ ನಡೆ ಒಂದು ಕಪ್ಪು ಚುಕ್ಕೆಯಾಗಿದೆ.

ಆದರೂ ಒಟ್ಟಾರೆಯಾಗಿ, ಸಾರ್ವಜನಿಕ ಜೀವನವನ್ನು ಗಂಭೀರವಾಗಿ ತೆಗೆದುಕೊಂಡವನಲ್ಲಿ ಇರಬೇಕಾದ ಸಂವೇದನೆ ಮತ್ತು ತಾರತಮ್ಯ ಜ್ಞಾನವನ್ನು, ಇವರನ್ನು ನೋಡಿ ಕಲಿಯಬೇಕಾಗಿದೆ.

ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಿಸಲು ಮುಖ್ಯಮಂತ್ರಿಗಳಿಗೆ ಕೋಟಾ ಮನವಿ
ರಾಜ್ಯದ 210 ಸ್ಥಳಿಯ ಸಂಸ್ಥೆಗಳಲ್ಲಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ನಡೆಯದೆ ಸಾವಿರಾರು ಚುನಾಯಿತಮುಖಂಡರಿಗೆ ಅಧಿಕಾರವಿಲ್ಲದಂತಾಗಿದ್ದು ಕಾನೂನು ಸಚಿವಾಲಯದ ನೆರವಿನೊಂದಿಗೆ ಈ ಗೊಂದಲ ಬಗೆಹರಿಸಲು ಮುಖ್ಯಮಂತ್ರಿಗಳಿಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸಪೂಜಾರಿ ಮನವಿ ಮಾಡಿದ್ದಾರೆ.
ಹೈಕೋರ್ಟ್ ವಿಭಾಗೀಯ ಪೀಠಗಳಲ್ಲಿ ಈ ಬಗ್ಗೆ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಿಂದಿನ ಸರ್ಕಾರ ಚುನಾವಣಾಪೂರ್ವ ಅಧ್ಯಕ್ಷ,ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿದ್ದು ಅದಕ್ಕೆ ಸಲ್ಲಿಕೆಯಾದ ತಕರಾರುಗಳನ್ನು ಸರಿಪಡಿಸಿ ಗೊಂದಲ ನಿವಾರಿಸುವ ಪೂಜಾರಿಯವರ ಮನವಿಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಕಾರ್ಯದರ್ಶಿಗಳಿಗೆ ಈ ಬಗ್ಗೆಶೀಘ್ರ ನಿರ್ಧಾರಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇನ್ನಿಲ್ಲ ಕಸ್ತೂರಿ ರಂಗನ್‌ ಕಿರಿಕಿರಿ……

ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ...

ಉತ್ತರ ಕನ್ನಡದ 4 ಜನ ಉತ್ತಮ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿರಸಿ ಮತ್ತು ಸಿದ್ದಾಪುರ...

ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ...

ಬ್ರಷ್ಟಾಚಾರ ಸಾಬೀತು…. ಬಿಜೆಪಿ ಮುಖಂಡೆಗೆ ಶಿಕ್ಷೆ, ದಂಡ

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ...

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮನವಿ, ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್‌ ಸೀಡ್‌,ಲ್ಯಾಂಡ್‌ ಬೀಟ್‌, ಬಗುರ್‌ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *