

ಕೃಷಿ-ಋಷಿ ತಿಮ್ಮಜ್ಜರ ಯಶಸ್ಸಿನಿಂದ ಪ್ರೇರಿತರಾಗಿ ತರಕಾರಿ ಬೆಳೆದು ಮಾರಿದವರೆಲ್ಲಾ ಯಶ ಕಂಡರು!

ಸಿದ್ಧಾಪುರ ತಾಲೂಕಿನಲ್ಲಿ ಕೃಷಿಯಲ್ಲಿ ಖುಷಿಕಂಡ ಅಸಂಖ್ಯ ಕೃಷಿಕರಿದ್ದಾರೆ.ಅವರಲ್ಲಿ ಕೃಷಿಯೊಂದಿಗೆ ಸಂತೆಯ ವ್ಯಾಪಾರದ ಮೂಲಕ ಸಾಧಕ ಎನಿಸಿಕೊಂಡವರು ಗೋಳಗೋಡಿನ ತಿಮ್ಮಜ್ಜ.
ತಿಮ್ಮಪ್ಪ ನಾಯ್ಕ ಯುವಕರಾಗಿದ್ದಾಗ ಊರಿನಲ್ಲಿ ನೀರಿನ ವ್ಯವಸ್ಥೆಯೂ ಇರಲಿಲ್ಲ. ಕೃಷಿಯೆಂದರೆ ಭತ್ತ, ಅಡಿಕೆ, ಬಾಳೆ, ಏಲಕ್ಕಿ ಬಿಟ್ಟರೆ ಉಳಿದ ಬೆಳೆಗಳೇ ತಿಳಿದಿರಲಿಲ್ಲ. ಆದರೆ 80 ರ ದಶಕದಲ್ಲಿ ಹುಸೂರಿನ ಜಲಾಗಾರ ನಿರ್ಮಿಸಿ ಅಲ್ಲಿಂದ ಸಿದ್ದಾಪುರಕ್ಕೆ ಕುಡಿಯುವ ನೀರು ಪೂರೈಸತೊಡಗಿದರು ನೋಡಿ ತಿಮ್ಮಪ್ಪರಂಥ ಕೆಲವರು ಈ ನೀರು ಬಳಸಿ ತರಕಾರಿ ಬೆಳೆಯತೊಡಗಿದ್ದೇ ಪ್ರಾರಂಭ ನಂತರ ಸುತ್ತಮುತ್ತಲಿನ ಊರಿನ ನೂರಾರು ಜನರು
ತರಕಾರಿ ಬೆಳೆಯತೊಡಗಿದರು.
ತಿಮ್ಮಪ್ಪ ಸಹೋದರರನ್ನೂ ಬಳಸಿಕೊಂಡು ವ್ಯವಸಾಯ ಮಾಡುತ್ತಾ ಸುತ್ತಮುತ್ತಲಿನ ವಾರದ ಸಂತೆಗಳಲ್ಲಿ ತಾವು ಬೆಳೆದ ತರಕಾರಿ ವ್ಯಾಪಾರ ಮಾಡತೊಡಗಿದರು. ತರಕಾರಿ ತಿಮ್ಮಪ್ಪರಿಂದ ಬೆಳೆದಂತೆ ಅವರನ್ನೂ ಬೆಳೆಸತೊಡಗಿತು. ಇದರ ಅನುಕೂಲದಿಂದ ತಿಮ್ಮಪ್ಪ ತರಕಾರಿ ತಿಮ್ಮ ಎಂದೇ ಖ್ಯಾತರಾದರು.
70 ರ ಹರೆಯದ ತಿಮ್ಮಪ್ಪ ಈಗಲೂ ತಾಳಗುಪ್ಪ, ಸಾಗರ, ಸಿದ್ಧಾಪುರ, ಸೊರಬ ಸಂತೆಗಳಲ್ಲಿ ತರಕಾರಿ ಮಾರುತ್ತಾರೆ. ಕಳೆದ 40 ವರ್ಷಗಳಿಂದ ತರಕಾರಿ ಬೆಳೆಯುತ್ತಾ, ತರಕಾರಿ ವ್ಯಾಪಾರಿಯಾಗಿಯೂ ಗುರುತಿಸಿಕೊಂಡವರು ಮಕ್ಕಳು-ಮೊಮ್ಮಕ್ಕಳನ್ನು ಓದಿಸಿ ಸರಕಾರಿ ನೌಕರರನ್ನಾಗಿಸಿದ್ದಾರೆ.
ವಾರಕ್ಕೆ ಸಾವಿರ ಲೆಕ್ಕದಲ್ಲಿ ತಿಂಗಳಿಗೆ ಲಕ್ಷಾಂತರ ದುಡಿಯುವ ಇವರಿಗೆ ಉಳಿದ ಸಾಂಪ್ರದಾಯಿಕ ಕೃಷಿ ಆದಾಯಕ್ಕಿಂತ ಹೆಚ್ಚು ಆದಾಯ ತರಕಾರಿಯಿಂದ ಸಿಗುತ್ತದೆ. ಕೃಷಿಮೂಲದ ಕುಟುಂಬ,ಗ್ರಾಮದ ಹಿನ್ನೆಲೆಯ ತಿಮ್ಮಜ್ಜ ತರಕಾರಿ ಬೆಳೆ,ವ್ಯಾಪಾರದಿಂದ ಶ್ರೀಮಂತರಾದರೂ ಈಗಲೂ ಅವರ ಸರಳ ಬದುಕು ಬಿಟ್ಟಿಲ್ಲ. ಕೃಷಿಯಲ್ಲಿ ಖುಷಿ ಕಾಣುತ್ತಾ ಕ್ರóಷಿ ಉತ್ಫನ್ನಗಳ ವ್ಯಾಪಾರದಿಂದ ತರಕಾರಿ ತಿಮ್ಮಜ್ಜನಾಗಿ ಹೆಸರು ಮಾಡಿರುವ ಇವರ ಏಕಲವ್ಯ ಸಾಧನೆಗೆ ಸ್ಥಳಿಯ ತರಳಿ ಮಠ, ಕೃಷಿ ಇಲಾಖೆಗಳು ಸನ್ಮಾನಿಸಿ ಗೌರವಿಸಿವೆ.
ಅವಿಭಕ್ತ ಕುಟುಂಬದ ಹಿರಿಯನಾಗಿ ಕೃಷಿ,ವ್ಯಾಪಾರ, ಶಿಕ್ಷಣ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿರುವ ಇವರ ಕುಟುಂಬದ ಪ್ರೇರಣಾಶಕ್ತಿ ಮತ್ತು ಸರಳ ವ್ಯಕ್ತಿತ್ವ ಇವರ ಯಶಸ್ಸಿನ ಗುಟ್ಟು. ಪ್ರತಿ ಬುಧವಾರ ಸಿದ್ಧಾಪುರದಲ್ಲಿ ತಾನು ಬೆಳೆದ ತರಕಾರಿಗಳೊಂದಿಗೆ ಅನ್ಯರಿಂದ ತರಕಾರಿ ಖರೀದಿಸಿ ಮಾರುತ್ತಲೇ ಸಂಬಂಧ,ಸಹಬಾಳ್ವೆ, ಸಹಕಾರದ ಬಗ್ಗೆ ಮಾತನಾಡುತ್ತಾರೆ. ಶ್ರಮ, ಕೃಷಿ, ಖುಷಿಯ ಗುಟ್ಟುಬಲ್ಲ ತಿಮ್ಮಜ್ಜ ಕಾಯಕವೇ ಕೈಲಾಸ ಎಂದು ಯಶಸ್ಸಿನ ಮೆಟ್ಟಿಲೇರಿದ ಸಾಧಕ ಅವರ ಸರಳತೆ, ಸಾಧನೆ, ವಿನಯವಂತಿಕೆ ಹೊಸಪೀಳಿಗೆಗೆ ಮಾದರಿ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
