

ಏಪ್ರಿಲ್ ಫೂಲ್’ ಕಥೆ ಓದುವಾಗ ತಡೆದುಕೊಳ್ಳಲಾಗದಷ್ಟು ಒತ್ತರಿಸಿಕೊಂಡು ಹೊರಬರುವ ನಗು ಒಂದ್ಕಡೆಯಾದರೆ, ಇನ್ನೊಂದ್ಕಡೆ ಇದು ಕಾಲ್ಪನಿಕ ಅನ್ನಿಸಿದರೂ, ದಿಟವಾಗುವ ದಿನಗಳು ದೂರವಿಲ್ಲ ಅನ್ನೊ ಆತಂಕ ಒಳಗೊಳಗೇ ತಣ್ಣಗೆ ಇರಿಯುತ್ತದೆ.
ಹನುಮಂತ ಹಾಲಿಗೇರಿಯವರ ಕಥೆ ಕಟ್ಟುವ ಕೌಶಲ್ಯಕ್ಕೆ ನಿಜಕ್ಕೂ ನಾನು ಬೆರಗಾಗಿ ಶರಣಾಗಿಬಿಟ್ಟೆ. ಕಥೆ ಓದುವಾಗ ಅತೀ ಹೆಚ್ಚು ನಕ್ಕಿದ್ದು ಪ್ರಾಯಶಃ ಇದೇ ಮೊದಲು.
ಸುಡುವ ನೆಲದವರ (ಬಯಲು ಸೀಮೆಯವರ) ಒಲವು, ನಿಲುವು, ಮುಗ್ಧತೆಯನ್ನು ಅರ್ಥೈಸಿಕೊಂಡು, ಅಲ್ಲಿಯೇ ನೆಲಸಿರುವ ಕೆಲ ದುಷ್ಟಶಕ್ತಿಗಳು ರಾಷ್ಟ್ರಪ್ರೇಮ, ರಾಷ್ಟ್ರ ರಕ್ಷಣೆ, ಧರ್ಮದ ನೆಪದಲ್ಲಿ ಇಡೀ ಊರಿನ ಸಾಮರಸ್ಯವನ್ನೇ ಕುಲಗೆಡಿಸುವ ಕುತಂತ್ರದ ಚಿತ್ರಣವನ್ನು ‘ಅಲೈದೇವ್ರು’ ಕಥೆ ತುಂಬಾ ಅರ್ಥಪೂರ್ಣವಾಗಿ ತೆರೆದಿಟ್ಟಿದೆ.
ಸ್ಮಶಾನದಲ್ಲಿ ಹೂತಿರೊ ಹೆಣಗಳನ್ನೇ ದೇವರೆಂದು ನಂಬಿ, ಕುಣಿತೋಡಿ ಬದುಕು ಕಟ್ಟಿಕೊಂಡವರ ತಲ್ಲಣಗಳು, ಸಮಾಜ ಅವರನ್ನು ನಡೆಸಿಕೊಳ್ಳುವ ರೀತಿ, ಪೊಲೀಸರ ಅಮಾನವೀಯತೆ, ಮುಳುವಾಗುವ ತಂತ್ರಜ್ಞಾನ ‘ಸುಡುಗಾಡು’ ಕಥೆಯಲ್ಲಿ ಓದುಗರ ಕರುಳ ಹಿಂಡುತ್ತವೆ. ಕಟ್ಟಕಡೆಯವರ ಕುರಿತು ಕಥೆಗಾರನಿಗಿರುವ ಕಾಳಜಿ ಕಂಡು ಪ್ರತಿ ಓದುಗನು ತೆಲೆಬಾಗಲೇಬೇಕು.
ಸ್ಥಿತಪ್ರಜ್ಞ, ಸಿದ್ಧಯ್ಯನ ಪವಾಡ ಮತ್ತು ಪ್ರೀತಿಗೆ ಸೋಲಿಲ್ಲ ಈ ಮೂರು ಕಥೆಗಳಲ್ಲಿ ಇಂದಿನ ಸ್ವಾಮಿಗಳ ಭಾವಶೂನ್ಯತೆ, ಅಸಹಿಷ್ಣುತೆ, ನಿಷ್ಕುರುಣೆ, ನಿರ್ಧಯತೆ ಎಲ್ಲವುಗಳ ಅನಾವರಣವಾಗಿದೆ.

ಮೌಢ್ಯ ಬಿತ್ತುವ, ವೈಚಾರಿಕ ವಿರೋಧಿ ಮಠಗಳಿಂದ ಜನ ಆದಷ್ಟು ಬೇಗ ವಿಮುಖರಾಗಬೇಕೆಂಬ ಸಂದೇಶವನ್ನು ತುಂಬಾ ಸ್ಪಷ್ಟವಾಗಿ ಸೂಚಿಸಿವೆ. ಹರಿಯುವ ಜೀವಪ್ರೀತಿಗೆ ಕಪಟ ಸ್ವಾಮೀಜಿಗಳು ಕಟ್ಟುವ ತಡೆಗಳನ್ನು, ಮಠಗಳ ಮುಖವಾಡಗಳನ್ನು ಕಥೆಗಾರರು ಕೆಡುವಿದ್ದಾರೆ.
ಇಂದಿನ ಕಾರ್ಪೋರೇಟ್ ಸಂಸ್ಕೃತಿಯಲ್ಲಿ ಸ್ವಾರ್ಥಕ್ಕಾಗಿ ಬದ್ಧತೆಯನ್ನೇ ಬದಿಗೊತ್ತಿ, ಮೇಲಾಧಿಕಾರಿಗಳೊಂದಿಗೆ ರಾಜಿಮಾಡಿಕೊಂಡು ಬದುಕುವ ಸೊಗಲಾಡಿ ವ್ಯಕ್ತಿಗಳ ಚಿತ್ರಣ ‘ಫಾರಿನ್ ಹೊಲಿಯಾ’ ಕಥೆಯಲ್ಲಿ ರೋಚಕವಾಗಿದೆ.
ಇಲ್ಲಿ ಮುಖ್ಯವಾಗಿ ಆಹಾರ ಪದ್ಧತಿಯ ಕುರಿತು ಸ್ವದೇಶಿ ಹಾಗೂ ವಿದೇಶಿ ವೈರುಧ್ಯಗಳ ಕುರಿತು ಆರೋಗ್ಯಕರ ಚರ್ಚೆ ಸಕಾಲಿಕವಾಗಿದೆ. ಮುಖ್ಯವಾಗಿ ದೇಶಭಕ್ತಿಯ ನಶೆಯಲ್ಲಿರುವ ಇಂದಿನ ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳು ಈ ಕಥೆಯನ್ನು ಓದಲೇಬೇಕು.
ಒಟ್ಟಾರೆ ‘ಏಪ್ರಿಲ್ ಫೂಲ್’ ಕಥಾ ಸಂಕಲನದಲ್ಲಿರುವ ಹದಿನಾರೂ ಕಥೆಗಳನ್ನು ಓದಿದ ಮೇಲೆ ಲೇಖಕರ ಸಮಾಜಮುಖಿ ಕಾಳಜಿ, ವರ್ತಮಾನಕ್ಕೆ ಮುಖಾಮುಖಿಯಾಗುವ ತೀವೃತೆ, ಸ್ವಾರ್ಥಿಗಳ ಕುರಿತು ಸಾತ್ವಿಕ ಸೈದ್ಧಾಂತಿಕ ಸಿಟ್ಟಿನೊಡನೆ, ಬಹುತ್ವದ ಕನಸು ಕಟ್ಟುವ ಕಥೆಗಾರನ ಒಳನೋಟ ಆಪ್ತವೆನ್ನಿಸಿತು.
ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಬರೆಯದ, ತುಂಬಾ ಸ್ಪಷ್ಟವಾಗಿ ಹಲವು ಪಾತ್ರಗಳ ಮೂಲಕ ಎಲ್ಲವನ್ನೂ ಹೇಳಿಸಿರುವ ನೇರಕ್ರಿಯೆ ಇಷ್ಟವಾಯ್ತು. ವಿಶೇಷವಾಗಿ ಉತ್ತರ ಕರ್ನಾಟಕದ ಜವಾರಿ ಭಾಷೆಯ ಶೈಲಿ ಭಾಳಾ ಅಂದ್ರ ಭಾಳಾ ಹಿಡಸ್ತು, -ಕೆ.ಬಿ.ವೀರಲಿಂಗನಗೌಡ್ರ. ಶಿರಸಿ.
ಕೃಷಿ-ಋಷಿ ತಿಮ್ಮಜ್ಜರ ಯಶಸ್ಸಿನಿಂದ ಪ್ರೇರಿತರಾಗಿ ತರಕಾರಿ ಬೆಳೆದು ಮಾರಿದವರೆಲ್ಲಾ ಯಶ ಕಂಡರು!
(ಬೇಸಾಯ,
ವ್ಯಾಪಾರದ ಕೃಷಿ-ಋಷಿ ತಿಮ್ಮಜ್ಜ)
ಸಿದ್ಧಾಪುರ ತಾಲೂಕಿನಲ್ಲಿ ಕೃಷಿಯಲ್ಲಿ ಖುಷಿಕಂಡ ಅಸಂಖ್ಯ ಕೃಷಿಕರಿದ್ದಾರೆ.ಅವರಲ್ಲಿ ಕೃಷಿಯೊಂದಿಗೆ ಸಂತೆಯ ವ್ಯಾಪಾರದ ಮೂಲಕ ಸಾಧಕ ಎನಿಸಿಕೊಂಡವರು ಗೋಳಗೋಡಿನ ತಿಮ್ಮಜ್ಜ.
ತಿಮ್ಮಪ್ಪ ನಾಯ್ಕ ಯುವಕರಾಗಿದ್ದಾಗ ಊರಿನಲ್ಲಿ ನೀರಿನ ವ್ಯವಸ್ಥೆಯೂ ಇರಲಿಲ್ಲ. ಕೃಷಿಯೆಂದರೆ ಭತ್ತ, ಅಡಿಕೆ, ಬಾಳೆ, ಏಲಕ್ಕಿ ಬಿಟ್ಟರೆ ಉಳಿದ ಬೆಳೆಗಳೇ ತಿಳಿದಿರಲಿಲ್ಲ. ಆದರೆ 80 ರ ದಶಕದಲ್ಲಿ ಹುಸೂರಿನ ಜಲಾಗಾರ ನಿರ್ಮಿಸಿ ಅಲ್ಲಿಂದ ಸಿದ್ದಾಪುರಕ್ಕೆ ಕುಡಿಯುವ ನೀರು ಪೂರೈಸತೊಡಗಿದರು ನೋಡಿ ತಿಮ್ಮಪ್ಪರಂಥ ಕೆಲವರು ಈ ನೀರು ಬಳಸಿ ತರಕಾರಿ ಬೆಳೆಯತೊಡಗಿದ್ದೇ ಪ್ರಾರಂಭ ನಂತರ ಸುತ್ತಮುತ್ತಲಿನ ಊರಿನ ನೂರಾರು ಜನರು
ತರಕಾರಿ ಬೆಳೆಯತೊಡಗಿದರು.
ತಿಮ್ಮಪ್ಪ ಸಹೋದರರನ್ನೂ ಬಳಸಿಕೊಂಡು ವ್ಯವಸಾಯ ಮಾಡುತ್ತಾ ಸುತ್ತಮುತ್ತಲಿನ ವಾರದ ಸಂತೆಗಳಲ್ಲಿ ತಾವು ಬೆಳೆದ ತರಕಾರಿ ವ್ಯಾಪಾರ ಮಾಡತೊಡಗಿದರು. ತರಕಾರಿ ತಿಮ್ಮಪ್ಪರಿಂದ ಬೆಳೆದಂತೆ ಅವರನ್ನೂ ಬೆಳೆಸತೊಡಗಿತು. ಇದರ ಅನುಕೂಲದಿಂದ ತಿಮ್ಮಪ್ಪ ತರಕಾರಿ ತಿಮ್ಮ ಎಂದೇ ಖ್ಯಾತರಾದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
