ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಭೀತಿ ಹಿನ್ನೆಲೆಯಲ್ಲಿ ಬೀದಿ ಬದಿ ಫಾಸ್ಟ್ಫುಡ್ ಅಂಗಡಿ ಬಂದ್ ಹಾಗೂ ನಾಟಕ, ಸಿನೆಮಾ, ಸಾರ್ವಜನಿಕ ತಾತ್ಕಾಲಿಕ ಅಂಗಡಿಗಳನ್ನು ಮುಚ್ಚಲು ಆದೇಶಿಸಿರುವುದರಿಂದ ಸಿದ್ಧಾಪುರ ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಜಾತ್ರೆ,ಉತ್ಸವಗಳ ತಾತ್ಕಾಲಿಕ ಅಂಗಡಿಗಳನ್ನು ಮುಚ್ಚಲಾಗಿದೆ.
ಬೀದಿಬದಿ ಫಾಸ್ಟ್ಫುಡ್ ಅಂಗಡಿಗಳನ್ನೂ ಮುಚ್ಚುವ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಗರಗಳ ಪಾನಿಪುರಿ, ಕಬಾಬ್,ಚಿಕನ್,ಎಗ್, ವೆಜ್‌ರೈಸ್ ಅಂಗಡಿಗಳನ್ನು ಮುಚ್ಚಲಾಗಿದೆ.
ಇಂಥ ದಿನದ ವ್ಯಾಪಾರದಿಂದ ಬದುಕುತಿದ್ದ ಸಣ್ಣ ಅಂಗಡಿಗಳು, ತಳ್ಳುಗಾಡಿಗಳ ವ್ಯಾಪಾರ ಸೇರಿದಂತೆ ಶಾಶ್ವತ ಕಟ್ಟಡಗಳಲ್ಲಿಲ್ಲದ ಚಿಕ್ಕ ವ್ಯಾಪಾರಿಗಳ ವ್ಯವಹಾರ ನಿಂತಿದೆ. ಕರೋನಾ ವಿಸ್ತರಿಸದಂತೆ ತಡೆಯುವ ಕ್ರಮದ ಅಂಗವಾಗಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಈ ಆದೇಶದಿಂದಾಗಿ ಪ್ರವಾಸಿಗರು,ಹೊರಗಿನ ವ್ಯಕ್ತಿಗಳು ಬಂದು ಅಗ್ಗದ ವಸ್ತುಗಳನ್ನು ಖರೀದಿಸಿ ರೋಗ ಹರಡಲು ಸಹಕರಿಸುವ ಸಾಧ್ಯತೆಗಳನ್ನು ನಿಯಂತ್ರಿಸಲಾಗಿದೆ. ಕರೋನಾ ಹರಡದಂತೆ ಮುಂಜಾಗ್ರತೆ ವಹಿಸಿರುವ ಜಿಲ್ಲಾಡಳಿತದ ಕ್ರಮದಿಂದ ದಿನದ ಅನ್ನ ಕಂಡುಕೊಂಡಿದ್ದ ಬಡ ವ್ಯಾಪಾರಿಗಳಿಗೆ ತೊಂದರೆಯಾದರೆ ಇವುಗಳನ್ನು ಅವಲಂಬಿಸಿದ್ದ ಸ್ಥಳಿಯರಿಗೂ ತೊಂದರೆಯಾಗಿದೆ.
ಶಿರಸಿಯ ಸೂಕ್ತ ಕ್ರಮ- ಕರೋನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕೈಗೊಂಡ ಕಠಿಣ ಕ್ರಮದಿಂದಾಗಿ ಉತ್ತರಕನ್ನಡ ಜಿಲ್ಲೆ, ರಾಜ್ಯಾದ್ಯಂತ ಬಡವರಿಗೇ ತೊಂದರೆಯಾಗಿದೆ. ಈ ಸಮಸ್ಯೆಗೆ ಪರಿಹಾರ ನೀಡಿರುವ ಶಿರಸಿಯ ಮಾರಿಕಾಂಬಾ ದೇವಾಲಯ ಜಾತ್ರೆಯ ವ್ಯಾಪಾರಿಗಳಿಗೆ ತಮ್ಮ ಡಿಪಾಸಿಟ್ ನ ಕೆಲವುಭಾಗ ಮರಳಿಸಲು ನಿರ್ಧರಿಸಿದೆ. ಇದರ ಜೊತೆಗೆ ಈ ವ್ಯಾಪಾರಿಗಳು ಮತ್ತು ಬೀದಿಬದಿಯ ವ್ಯಾಪಾರಿಗಳಿಗಾಗಿ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿಯ ಊಟ ಪೂರೈಸಲು ನಿರ್ಧರಿಸಿದೆ.
ಯುಗಾದಿಯ ವರೆಗೆ ಬೀದಿ ವ್ಯಾಪಾರ ನಿರ್ಬಂಧವಿರುವುದರಿಂದ ಅಲ್ಲಿಯವರೆಗೆ ಮಾರಿಕಾಂಬಾ ದೇವಾಲಯದಿಂದ ದಾಸೋಹ ನಡೆಯಲಿದೆ. ಶಿರಸಿಗೆ ಬಂದಿದ್ದ ನಾಟಕ ಕಂಪನಿಗಳಿಗೆ ಆಹಾರ ಸಾಮಗ್ರಿ ಸಂಗ್ರಹ ಮತ್ತು ಪೊಲೀಸರಿಗೆ ಮುಖಗವಸು ನೀಡುವ ಮೂಲಕ ಶಿರಸಿ ಪತ್ರಕರ್ತರೂ ತಮ್ಮ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.
ಕೃಷಿ-ಖುಷಿ ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಕೃಷಿಯಲ್ಲಿ ಖುಷಿ ಕಾಣುತ್ತಿರುವ ಸಿದ್ಧಾಪುರದ ಯುವಕರು
ಕೃಷಿಯಲ್ಲಿ ಸಾಧನೆ ಮಾಡಬೇಕೆಂದು ಬಯಸುವ ವಿರಳ ಯುವಕರಲ್ಲಿ ತಾಲೂಕಿನ ಹೆಮಟೆಮನೆಯ ಎಚ್.ಎಲ್. ವೇಣು ಮತ್ತು ಬೇಡ್ಕಣಿಯ ಜಯಪ್ರಕಾಶ ನಾಯ್ಕ ಪ್ರಮುಖ ಯುವಕರಾಗಿದ್ದಾರೆ.
ವೇಣು ಬಿದ್ರಕಾನ ಹೆಮಟೆಮನೆಯ ಯುವಕ. ಜನಾನುರಾಗಿಯಾಗಿದ್ದ ಇವರ ತಂದೆ ಎಲ್.ಕೆ.ಹೆಗಡೆ ಅಕಾಲಿಕವಾಗಿ ಮರಣ ಹೊಂದಿದ ನಂತರ ಬಿ.ಕಾಂ. ಪದವಿ ನಂತರ ಕೃಷಿಯಲ್ಲಿ ತೊಡಗಿಕೊಂಡರು. ಆಧುನಿಕ ಕೃಷಿ, ಹೊಸಪ್ರಯೋಗ ಎನ್ನದೆ ತಮ್ಮ ತೋಟದಲ್ಲಿ ಹಿಂದಿನಿAದ ಇದ್ದ ಕಾಫಿ,ಅಡಿಕೆ, ಕಾಳು ಮೆಣಸು ಬೆಳೆಯುತ್ತಾ,ಪಶುಸಂಗೋಪನೆಯಲ್ಲಿಯೂ ತೊಡಗಿಕೊಂಡರು.
ಪದವಿನಂತರ ಮಹಾನಗರ ಸೇರದೆ ಕುಟುಂಬದ ಜವಾಬ್ಧಾರಿ ಹೊತ್ತ ವೇಣು ಸ್ಥಳಿಯ ಸೇವಾ ಸಹಕಾರಿ ಸಂಘದ ಯುವ ಸದಸ್ಯರಾಗಿ ಸಾಂಪ್ರದಾಯಿಕ ಕೃಷಿ ಮಾಡುತ್ತಾ ಕೃಷಿಯಲ್ಲೇ ಖುಷಿ ಕಂಡಿದ್ದಾರೆ.
ಇವರ ತಂದೆ ಹಿಂದೆ ಕೃಷಿಯೊಂದಿಗೆ ಸ್ಥಳಿಯ ಸಾಮಾಜಿಕ ಜವಾಬ್ಧಾರಿ ನಿರ್ವಹಿಸುತ್ತಲೇ ಧಾರವಾಡದ ಕೆ.ಎಂ.ಎಫ್. ನಿರ್ಧೇಶಕರಾಗಿದ್ದರು. ತಂದೆಯAತೆಯೇ ಮಗ ವೇಣು ಕೂಡಾ ಕೃಷಿ, ಕೌಟುಂಬಿಕ ಜವಾಬ್ಧಾರಿ, ಸೇವಾ ಸಹಕಾರಿ ಸಂಘ ದ ಮೂಲಕ ಯುವಕರು ಹಳ್ಳಿಯಲ್ಲಿದ್ದೂ ಪೇಟೆಯಲ್ಲಿರುವವರಂತೆಯೇ ಖುಷಿಯಾಗಿ ಸಂತೃಪ್ತ ಜೀವನ ಮಾಡಬಹುದೆನ್ನುವುದಕ್ಕೆ ದೃಷ್ಟಾಂತವಾಗಿದ್ದಾರೆ.