
ಪೋಸ್ಟ್ ಕಾರ್ಡ್ ಹರಡಿದ
ಮೂರು ಮಹಾಸುಳ್ಳುಗಳು
ಸುಳ್ಳು ೧ : ಕೊರೊನಾ ಹರಡದಂತೆ ತಡೆಯಲು ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗಳನ್ನು ಧರಿಸಬಾರದು.
ಹೀಗಂತ ಕನ್ನಡದ ಫೇಕ್‌ನ್ಯೂಸ್ ಹರಡುವ ಪೋಸ್ಟ್ ಕಾರ್ಡ್ ಕನ್ನಡ ವೆಬ್‌ಸೈಟ್ ತಿಳಿಸಿದೆ. ಕೇರಳದಲ್ಲಿ ಕೊರೊನಾ ಹರಡುತ್ತಿದ್ದಂತೆಯೇ ಮಾಸ್ಕ್ ಗಳ ಕೊರತೆಯುಂಟಾಯಿತು. ಮಾರ್ಚ್ ೧೪ರಂದು ಅಲ್ಲಿನ ಸಿಎಂ ಪಿಣರಾಯಿ ವಿಜಯನ್‌ರವರು ಹತ್ತಿ ಬಟ್ಟೆಯ ಮಾಸ್ಕ್ಗಳನ್ನು ಸಿದ್ಧಪಡಿಸುವಂತೆ ಆದೇಶಿಸಿದ್ದರು.
ಅಂದಿನಿಂದ ತಿರುವನಂತಪುರದ ಸೆಂಟ್ರಲ್ ಜೈಲಿನ ಕೈದಿಗಳು ದಿನವೊಂದಕ್ಕೆ ಎರಡು ಸಾವಿರ ಮಾಸ್ಕ್ಗಳನ್ನು ತಯಾರಿಸಿ ವಿತರಿಸುತ್ತಿದ್ದಾರೆ. ಇದನ್ನು ವಿರೋಧಿಸಿ ಪೋಸ್ಟ್ ಕಾರ್ಡ್ ಕನ್ನಡ ವೆಬ್‌ಸೈಟ್ ವಿಶ್ವ ಆರೋಗ್ಯ ಸಂಘಟನೆಯ ಸಲಹೆಯನ್ನು ತಿರಸ್ಕರಿಸಿ ಮಾಸ್ಕ್ ತಯಾರಿಸಿದ್ದಾರೆ ಎಂದು ದೂರಿದೆ.
ಸತ್ಯ: ಹತ್ತಿ ಬಟ್ಟೆಯ ಮಾಸ್ಕ್ಗಳು ಸುರಕ್ಷಿತವಾಗಿರುತ್ತವೆ ಮಾತ್ರವಲ್ಲ ಅದರಿಂದ ಯಾವುದೇ ತೊಂದರೆಯಿಲ್ಲ. ಅವುಗಳನ್ನು ಸುಲಭವಾಗಿ ಬಳಸಬಹುದು, ತೊಳೆದು ಮರುಬಳಕೆ ಸಹ ಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಬಳಸಬಾರದೆಂದು ಎಲ್ಲಿಯೂ ಹೇಳಿಲ್ಲ. ಈ ಕುರಿತು ಡಬ್ಲೂಎಚ್‌ಓ ವೆಬ್ ಸೈಟ್‌ನಲ್ಲಿ ತಿಳಿಸಿಲ್ಲ ಕೂಡ.
ಕೇರಳ ಸರ್ಕಾರವನ್ನು ಕಂಡರಾಗದ ಈ ವೆಬ್‌ಸೈಟ್ ಸುಳ್ಳುಗಳನ್ನು ಹರಡುತ್ತಿದೆ ಅಷ್ಟೇ.
ಸುಳ್ಳು ೨: ಗಲಭೆ ಮಾಡುವುದು ನಮ್ಮ ಸ್ವಭಾವವಲ್ಲ, ಗಲಭೆ ಮಾಡುವವರನ್ನು ಜೈಲಿಗೆ ಹಾಕುವುದು ನಮ್ಮ ಸ್ವಭಾವ ; ಅಮಿತ್ ಶಾ
ಆದರೆ ವಾಸ್ತವ ಏನೆಂದರೆ ೨೦೦೨ರ ಗುಜರಾತ್ ಗಲಭೆಯ ಸಮಯದಲ್ಲಿ ಇದೇ ಅಮಿತ್ ಶಾ ಗುಜರಾತಿನ ಗೃಹ ಮಂತ್ರಿಯಾಗಿದ್ದರು. ಗಲಭೆಗೆ ಕುಮ್ಮಕ್ಕು ಕೊಟ್ಟ ಕಾರಣದಿಂದಾಗಿ ಶಾ ಮೇಲೆ ಹಲವಾರು ಪ್ರಕರಣಗಳಿದ್ದು ನಾನಾವತಿ ಆಯೋಗ ಈ ಕುರಿತು ತನಿಖೆ ನಡೆಸಿದೆ. ಈ ಕುರಿತು ಖ್ಯಾತ ಪತ್ರಕರ್ತೆ ರಾಣಾ ಅಯ್ಯೂಬ್ ಹೇಳುವುದು ಹೀಗೆ…..
“೨೦೧೦ರಲ್ಲಿ ನಾನು ಈ ಕೊಲೆಗಳ ಬಗ್ಗೆ ವರದಿ ಮಾಡಿದ್ದೆ. ನಾನು ಶಾರ ದೂರವಾಣಿ ಕರೆಗಳ ದಾಖಲೆ ಮತ್ತು ಗುಜರಾತ್ ರಾಜ್ಯದ ಗುಪ್ತಚರ ಇಲಾಖೆಯ ಆಂತರಿಕ ದಾಖಲೆಯನ್ನೂ ಮುಂದಿಟ್ಟಿದ್ದೆ. ಕೊಲ್ಲಬೇಕಾದವರನ್ನು ಕೊಂಡೊಯ್ಯುತ್ತಿರುವಾಗಲೇ ಈತ ಅಧಿಕಾರಿಗಳ ಜೊತೆಯಲ್ಲಿ ಮಾತುಕತೆಯಲ್ಲಿ ತೊಡಗಿದ್ದುದನ್ನು ಈ ದಾಖಲೆಗಳು ಸಾಬೀತುಪಡಿಸುತ್ತಿದ್ದವು. ನನ್ನ ತನಿಖಾ ವರದಿ ಪ್ರಕಟವಾದ ಎರಡು ವಾರಗಳಲ್ಲಿ ಶಾ ಬಂಧನವಾಗಿತ್ತು. ಮೂರು ತಿಂಗಳು ಜೈಲಿನಲ್ಲಿದ್ದರು.
ಸಿಬಿಐ ಸೊಹ್ರಾಬುದ್ದೀನ್ ಮತ್ತು ಆತನ ಪತ್ನಿ ಕೌಸರ್ ಬೀ ಎಂಬ ಮುಸ್ಲಿಮರ ಕೊಲೆಯಲ್ಲಿನ ಪಾತ್ರದ ಬಗ್ಗೆ ಶಾ ವಿರುದ್ಧ ತನಿಖೆ ನಡೆಸುತ್ತಿತ್ತು. ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿ ಶಾರನ್ನು ಈ ಅಪರಾಧದ ಮುಖ್ಯ ಆರೋಪಿ ಮತ್ತು ಸಂಚುಕೋರ ಎಂದು ಹೆಸರಿಸಲಾಗಿತ್ತು. ಅದಲ್ಲದೇ ಆತನನ್ನು ಭೂಗತ ಗೂಂಡಾಗಳು ಮತ್ತು ರಾಜಕಾರಣಿಗಳನ್ನು ಒಳಗೊಂಡ ವಸೂಲಿ ದಂಧೆಯ ಮುಖ್ಯಸ್ಥ ಎಂದೂ ಹೆಸರಿಸಿತ್ತು. ಈ ಆರೋಪಗಳು ಎಷ್ಟು ಗಂಭೀರವಾಗಿದ್ದವು ಎಂದರೆ, ಆತ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಮತ್ತು ಬೆದರಿಸದಂತೆ ಸುಪ್ರೀಂಕೋರ್ಟ್ ಆತನನ್ನು ಎರಡು ವರ್ಷಗಳಿಂದ ತವರು ರಾಜ್ಯ ಪ್ರವೇಶಿಸದಂತೆ ಗಡಿಪಾರು ಮಾಡಿತ್ತು.
ಸುಳ್ಳು ೩ :
ಮಾಂಸ ತಿಂದರೆ ಕೊರೊನಾ ಬರುತ್ತದೆಯೇ?
ಕನ್ನಡದ ಫೇಕ್‌ನ್ಯೂಸ್ ಹರಡುವ ಪೋಸ್ಟ್ ಕಾರ್ಡ್ ಕನ್ನಡ ವೆಬ್‌ಸೈಟ್ ಕೊರೊನಾ ಬಂದುದರಿಂದ ಹ್ಯಾಂಡ್ಶೇಕ್ ಬದಲು ನಮಸ್ಕರಿಸುತ್ತಿದ್ದಾರೆ, ಸಸ್ಯಹಾರಿಗಳಾಗುತ್ತಿದ್ದಾರೆ ಮತ್ತು ಹೆಣವನ್ನು ಹೂಳುವ ಬದಲು ಸುಡುತ್ತಿದ್ದಾರೆ ಎಂದು ವರದಿ ಮಾಡಿದೆ. ಈ ಮೂಲಕ ಅದು ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಹೇರಲು ಪ್ರಯತ್ನಿಸುತ್ತಿದೆ ಅಷ್ಟೇ.
ಸತ್ಯ ಏನೆಂದರೆ….. ಮಾಂಸ ತಿನ್ನುವುದಕ್ಕೂ ಕೊರೊನಾಗೂ ಸಂಬಂಧವೇ ಇಲ್ಲ. ಮಾಂಸ ತಿನ್ನುವುದರಿಂದ ಕೊರೊನಾ ಬರುವುದಿಲ್ಲ.
ಇನ್ನು ಸತ್ತ ದೇಹವನ್ನು ಹೂಳುವುದರಿಂದ ಕೊರೊನಾ ಹರಡುವುದಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ. ಕೊರೊನಾ ಭಯವನ್ನು ತಮ್ಮ ಧಾರ್ಮಿಕ ಮೌಢ್ಯಗಳನ್ನು ಹರಡಲು ಬಳಸುತ್ತಿದ್ದಾರೆ ಅಷ್ಟೇ.
ಜಿಲ್ಲಾ ಅಪರಾಧನಿಗ್ರಹದಳದ ಸಾಧನೆ ೨.೫ ಕೋಟಿಮೌಲ್ಯದ ಬ್ರೌನ್‌ಶುಗರ್ ವಶ, ಅಂಕೋಲಾ & ಸಿದ್ದಾಪುರ ಮೂಲದ ತಲಾ ಇಬ್ಬರು ಅಂದರ್
ನಿಶ್ಚಿತ ಉದ್ಯೋಗವಿಲ್ಲದೆ ಕೋಟ್ಯಾಂತರ ದುಡಿಯವ ನಾಲ್ಕು ಜನ ಯುವಕರ ವ್ಯವಹಾರಗಳನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್‌ರಿಗೆ ನೀಡಿದ ಖಚಿತ ಮಾಹಿತಿ ಆಧರಿಸಿ ತನಿಖೆ ನಡೆಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಅಂತರ್ ರಾಜ್ಯ, ವಿದೇಶಗಳಿಗೆ ಮಾದಕ ಬ್ರೌನ್‌ಶುಗರ್ ಸಾಗಿಸುವ ತಂಡವೊಂದನ್ನು ಅಂಕೋಲಾದಲ್ಲಿ ಸೆರೆಹಿಡಿದು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
