

ತಾಲೂಕಿನ ಬೆಳ್ಳುಮನೆಯ ಬೆನಕ ಬಿಳಗಿ ಜೇನುಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ತಾತ್ಕಾಲಿಕ ಉದ್ಯೋಗಿ.
ಈ ಡಿ. ದರ್ಜೆಯ ಅನುಗಾರ
ಅಲ್ಲಿ ಕೆಲಸ ಮಾಡಿಕೊಂಡು ಇಲಾಖೆಯ ಜವಾಬ್ಧಾರಿ ನಿರ್ವಹಿಸುತ್ತಾ ಕಾಲ ಕಳೆದಿದ್ದರೆ ಬೆನಕ ನಿವೃತ್ತಿಯ ನಂತರವೂ ಸುದ್ದಿಯಾಗದೆ ಕಳೆದು ಹೋಗುತಿದ್ದ ಯಾಕೆಂದರೆ….. ಈತ ಅಲ್ಲಿಯ ಹಂಗಾಮಿ ನೌಕರ.
ಆದರೆ ಇದರಾಚೆ ತನ್ನ ಆಸಕ್ತಿ,ಸಾಧನೆಯಿಂದ
ಈತ ಅನುಗಾರ ಬೆನಕ ಸವಿಜೇನಿನ ಜನಕ ಎನ್ನುವ ಶೀರ್ಷಿಕೆಗೆ ಮಹತ್ವ ತಂದಿದ್ದಾನೆ.
ಸಿದ್ಧಾಪುರ ಕ್ಯಾದಗಿ ಗ್ರಾಮ ಪಂಚಾಯತಿಯ ಕುಗ್ರಾಮ ಬೆಳ್ಳುಮನೆಯ ಕೃಷಿಕ ದಂಪತಿಗಳ ಪುತ್ರ ಬೆನಕ ಎಲ್ಲರಂತೆ ಶಾಲಾ ಕಾಲೇಜು ಕಲಿತ, ಯಾಕೆಂದರೆ, ಈ ಗ್ರಾಮದ ಇವರ ಸರೀಕರೇ ದೂರದ ನಗರ, ಶಾಲಾ, ಕಾಲೇಜುಗಳ ಪರಿಶ್ರಮದ ಕಲಿಕೆಯಿಂದಲೇ ವೈದ್ಯರು, ಉಪನ್ಯಾಸಕರು ಆಗಿದ್ದಾರೆ. ಆದರೆ ಇವರ ಮಾರ್ಗ ಬೇರೆಯಾಗಿತು.್ತ
ವಿದ್ಯಾರ್ಥಿ ದೆಸೆಯಿಂದಲೇ ಜೇನುಕೃಷಿ ಬಗ್ಗೆ ಆಸಕ್ತಿ ತಳೆದಿದ್ದ ಇವರ ಆಸಕ್ತಿ, ಅಭಿರುಚಿಗೆ ತಕ್ಕಂತೆ ಜೇನು ಸಾಕಾಣಿಕೆ ಮತ್ತು ತರಬೇತಿ ಕೇಂದ್ರ ಬಿಳಗಿಯಲ್ಲಿ ತಾತ್ಕಾಲಿಕ ಕೆಲಸ ಸಿಕ್ಕಿತ್ತು!
ಈ ಡಿ. ದರ್ಜೆಯ ಕೆಲಸದೊಂದಿಗೆ ಕುಟುಂಬದ ಸಹಕಾರದಿಂದ ಮನೆಯಲ್ಲಿ ಜೇನು ಪೆಟ್ಟಿಗೆ ಇಡತೊಡಗಿದ್ದಾಗ ಊರಿಗೊಂದಾದರೆಪೋರಗೊಂದು ಎಂದು ಜನ ಮೂಗು ಮುರಿದಿರಬಹುದು ಆದರೆ ಆಸಕ್ತಿ, ಛಲ, ಹಠವಿತ್ತಲ್ಲ ಅದು ಅವರನ್ನು ನೂರಾಐವತ್ತರಷ್ಟು ಜೇನು ಪೆಟ್ಟಿಗೆ ಇಡುವಂತೆ ಮಾಡಿತು.
ಅವುಗಳಿಂದ 5-6 ಕ್ವಿಂಟಾಲ್ ಜೇನು ಉತ್ಫಾದಿಸುವಂತೆ ಉತ್ತೇಜಿಸಿತು. ಈಗ ಈ ಯುವಕ ತಾಲೂಕಿನ ದೊಡ್ಡ ಜೇನು ಉತ್ಫಾದಕ. ನಸರಿ, ತುಡವೆಜೇನು ಸಾಕುವ ಬೆನಕ ಈಗ ಜೇನಿನ ಪಂಡಿತನಾಗಿ ಬೆಳೆದಿದ್ದಾನೆ.
ಜೇನಿನಿಂದ ಕನಿಷ್ಟ 25-50% ಬೆಳೆ ವೃದ್ಧಿ, ಅದರ ಪರಾಗ, ಪುಷ್ಫರಸಕ್ಕಿರುವ ಮಹತ್ವ, ಜೇನು ತಿಂದರೆ ಅವುಗಳಿಂದ ನಿಯಮಿತವಾಗಿ ಕಡಿಸಿಕೊಂಡರೆ ಏನೇನೆಲ್ಲಾ ಅನುಕೂಲ ಎಂಬುದನ್ನು ಅನುಭವಗಳ ದೃಷ್ಟಾಂತಗಳ ಆಧಾರದಿಂದ ವಿವರಿಸುತ್ತಾನೆ.
ಜೇನಿಗೆ ಸರ್ಕಾರ, ಸಾರ್ವಜನಿಕರ ಸಹಕಾರ ಮುಖ್ಯ ಎನ್ನುವ ಇವರು ಬೆಳೆಯುವ ಜೇನಿಗೆ ಮನೆ ಬಾಗಿಲಲ್ಲೇ ಮಾರುಕಟ್ಟೆ. ವಾರ್ಷಿಕ 5-6 ಕ್ವಿಂಟಾಲ್ ಜೇನನ್ನು ಮನೆಬಾಗಿಲಿಗೆ ಬಂದು ಖುಷಿಯಿಂದ ಹಣಕೊಟ್ಟು ಖರೀದಿಸುತ್ತಾರೆ ಎನ್ನುವ ಬೆನಕ ಈ ಕ್ಷೇತ್ರದಲ್ಲಿ ಬೆಳೆಯಲು ಇಷ್ಟುಸಾಕು ಎನ್ನುವ ಸಾರ್ವಜನಿಕರ ಬೆಂಬಲಕ್ಕೂ ಕೃತಜ್ಞತೆ ಹೇಳುತ್ತಾರೆ.
ಸಾಧನೆಗೆ ಮಹಾನಗರ, ಸಕಲ ಸೌಕರ್ಯಗಳೇ ಬೇಕು ಎನ್ನುವ ಯುವ ಜನರ ನಡುವೆ ಕಾಡಂಚಿನ ಕುಗ್ರಾಮದಲ್ಲಿ ಪರಿಸರಕ್ಕೆ ಪೂರಕವಾಗಿ ಸರಳವಾಗಿ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಬೆನಕ ಮಾದರಿಯ ಉದಾಹರಣೆಯಾಗಿದ್ದಾರೆ.
ಒಂದು ದಶಕಕ್ಕಿಂತ ಹೆಚ್ಚಿನ ಇವರ ಈ ಆಸಕ್ತಿ,ಶ್ರಮ, ಪರಿಸರರಕ್ಷಣೆಯ ಕೆಲಸಕ್ಕೆ ಈವರೆಗೂ ಅಭಿನಂದನೆ ದೊರೆಯದಿರುವುದೇ ಆಶ್ಚರ್ಯ. ಸರ್ಕಾರ, ಸಾರ್ವಜನಿಕ ಸಂಘ, ಸಂಸ್ಥೆಗಳು ಇಂಥ ಎಲೆಮರೆಯ ಸಾಧಕರನ್ನು ಗುರುತಿಸುವಂತಾಗಲಿ ಎನ್ನುವುದಷ್ಟೇ ಸಮಾಜಮುಖಿ ಹಕ್ಕೊತ್ತಾಯ.





_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
