
“ಅದೇಕೋ ಗೋಪಾಲ್ ನೆನಪಾದರು.
..ಎತ್ತರವಾದ ಗಂಭೀರ ನಿಲುವಿನ ಅವರು ನಕ್ಕರೆ ಮುಖ ವಿಚಿತ್ರವಾಗಿ, ಸುಂದರವಾಗಿ ಅರಳಿ ಕೆನ್ನೆಯ ಮೇಲೆ ಗುಳಿ ಬೀಳುತ್ತಿತ್ತು. ಸಾಹಿತ್ಯ ಅವರ ಮೆಚ್ಚಿನ ವಸ್ತು, ಮಲೆನಾಡು ಅವರ ಪ್ರೀತಿಯ ವಿಷಯ..
.ಗೋಪಾಲ್ ಮಹಾ ದುಗುಡದ, ಸಿಟ್ಟಿನ, ಪ್ರೀತಿಯ, ಪೂರ್ವಾಗ್ರಹಗಳ ಮನುಷ್ಯ. ಅವರ ವ್ಯಕ್ತಿತ್ವ ಅನೀರಿಕ್ಷಿತ ವಿಚಾರ, ಆಳವಾದ ಚಿಂತನೆಗೆ ಹೇಳಿ ಮಾಡಿಸಿದಂತಿತ್ತು. ಒಂದೇ ಕಡೆ ಕೂತು ನಿಧಾನಕ್ಕೆ ಮಾತಾಡುತ್ತಿದ್ದ ಗೋಪಾಲ್ ಆಳದಲ್ಲಿ ಮಹಾ ಚಡಪಡಿಕೆಯ, ವಿಚಿತ್ರ ಸಿಡಿಮದ್ದುಗಳ ವ್ಯಕ್ತಿ…ಗೋಪಾಲ್ ತಮ್ಮ ಸುತ್ತಮುತ್ತ ಕಂಡು ಬಂದ ಅನ್ಯಾಯದ ವಿರುದ್ಧ ಸ್ಫೋಟಿಸುತ್ತಿದ್ದರು.
ಅವರ ಪ್ರೀತಿಯೇ ಅವರನ್ನು ಸಮಾಜವಾದಿಯನ್ನಾಗಿಸಿತ್ತು. ಹಾಗೆಯೇ ಬಡತನ, ಅನ್ಯಾಯಕ್ಕೆ ಪರಿಹಾರವೇ ಕಾಣಿಸುತ್ತಿಲ್ಲವಲ್ಲ ಎಂದು ಅವರು ಹತಾಶರಾಗಿದ್ದರು.
ಇದನ್ನು ಬರೆಯುವಾಗ ಈ ಗೋಪಾಲ್ ಎಷ್ಟು ಸುಂದರ ವ್ಯಕ್ತಿ ಎನಿಸುತ್ತದೆ. ಸೌಂದರ್ಯ ವ್ಯಕ್ತಿತ್ವದಲ್ಲಿರುತ್ತದೆ; ಚರ್ಮದಲ್ಲಲ್ಲ; ಗೋಪಾಲ್ ಈ ರೀತಿಯಲ್ಲಿ ಸುಂದರ.”
-ಪಿ.ಲಂಕೇಶ್ (ಗೋಪಾಲಗೌಡರು ತೀರಿಕೊಂಡ ಇಪ್ಪತ್ತೈದು ವರ್ಳಗಳ ನಂತರ ಬರೆದ ಟಿಪ್ಪಣಿಯಿಂದ)
ಜಾತ್ಯಾತೀತತೆಯ ಬಗ್ಗೆ ಬಲಪಂಥೀಯರ ಲಾಗಾಯ್ತಿನ ಲೇವಡಿ
ಸಂಗ್ರಹಾನುವಾದ: ನಿಖಿಲ್ ಕೋಲ್ಪೆ
ಸಂವಿಧಾನ ಸಭೆಯಲ್ಲಿ ೧೯೪೯ರಲ್ಲಿ ಜಾತ್ಯತೀತತೆಯ ಕುರಿತು ಚರ್ಚೆ ನಡೆದಾಗಲೆಲ್ಲಾ ಅಂದಿನ ನಾಝಿ ಜರ್ಮನಿ ಮತ್ತು ಫ್ಯಾಸಿಸ್ಟ್ ಇಟಲಿಯ ತಾರತಮ್ಯ ಮತ್ತು ದಮನದ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಬಲಪಂಥೀಯರು ಲೇವಡಿ ಮಾಡುತ್ತಿದ್ದರು. ಇದೀಗ ಅವರ ವಾರಸುದಾರರು ಅಧಿಕಾರ ಹಿಡಿದಿದ್ದು, ಅದನ್ನೇ ಹೆಚ್ಚು ಆಕ್ರಮಣಕಾರಿಯಾಗಿ ಮುಂದುವರಿಸಿದ್ದಾರೆ. ಎನ್‌ಆರ್‌ಸಿ, ಸಿಎಎ ಹಿನ್ನೆಲೆಯಲ್ಲಿ ಜಾತ್ಯತೀತತೆ, ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಯ ಕೆಲ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಅಂದು ಜಾತ್ಯಾತೀತತೆಯ ಕುರಿತು ಬಲಪಂಥೀಯರ ನಿರಂತರ ಲೇವಡಿಯಿಂದ ಆತಂಕಿತರಾದವರಲ್ಲಿ ಜವಾಹರಲಾಲ್ ನೆಹರೂ ಅವರೂ ಒಬ್ಬರಾಗಿದ್ದರು. ಭಾರತದ ಎಲ್ಲಾ ಸಮಸ್ಯೆಗಳಿಗೆ ಜಾತ್ಯತೀತತೆಯೇ ಮೂಲ ಕಾರಣ ಎಂದು ಬಿಂಬಿಸಲಾಗುತ್ತಿದ್ದುದೇ ಇದಕ್ಕೆ ಕಾರಣ.
