ಜಾತ್ಯಾತೀತತೆಯ ಬಗ್ಗೆ ಬಲಪಂಥೀಯರ ಲಾಗಾಯ್ತಿನ ಲೇವಡಿ

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ
ಸಂವಿಧಾನ ಸಭೆಯಲ್ಲಿ ೧೯೪೯ರಲ್ಲಿ ಜಾತ್ಯತೀತತೆಯ ಕುರಿತು ಚರ್ಚೆ ನಡೆದಾಗಲೆಲ್ಲಾ ಅಂದಿನ ನಾಝಿ ಜರ್ಮನಿ ಮತ್ತು ಫ್ಯಾಸಿಸ್ಟ್ ಇಟಲಿಯ ತಾರತಮ್ಯ ಮತ್ತು ದಮನದ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಬಲಪಂಥೀಯರು ಲೇವಡಿ ಮಾಡುತ್ತಿದ್ದರು. ಇದೀಗ ಅವರ ವಾರಸುದಾರರು ಅಧಿಕಾರ ಹಿಡಿದಿದ್ದು, ಅದನ್ನೇ ಹೆಚ್ಚು ಆಕ್ರಮಣಕಾರಿಯಾಗಿ ಮುಂದುವರಿಸಿದ್ದಾರೆ. ಎನ್‌ಆರ್‌ಸಿ, ಸಿಎಎ ಹಿನ್ನೆಲೆಯಲ್ಲಿ ಜಾತ್ಯತೀತತೆ, ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಯ ಕೆಲ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಅಂದು ಜಾತ್ಯಾತೀತತೆಯ ಕುರಿತು ಬಲಪಂಥೀಯರ ನಿರಂತರ ಲೇವಡಿಯಿಂದ ಆತಂಕಿತರಾದವರಲ್ಲಿ ಜವಾಹರಲಾಲ್ ನೆಹರೂ ಅವರೂ ಒಬ್ಬರಾಗಿದ್ದರು. ಭಾರತದ ಎಲ್ಲಾ ಸಮಸ್ಯೆಗಳಿಗೆ ಜಾತ್ಯತೀತತೆಯೇ ಮೂಲ ಕಾರಣ ಎಂದು ಬಿಂಬಿಸಲಾಗುತ್ತಿದ್ದುದೇ ಇದಕ್ಕೆ ಕಾರಣ.
“ನಾವು ಒಂದು ಜಾತ್ಯತೀತ ರಾಷ್ಟ್ರ ಎಂದು ಹೇಳುವುದರಿಂದ ನಾವು ಅದ್ಭುತವಾದ ಔದಾರ್ಯಪೂರ್ಣವಾದುದನ್ನು ಮಾಡುತ್ತಿದ್ದೇವೆ ಎಂದಾಗಲೀ, ಜಗತ್ತಿಗೆ ನಮ್ಮ ಜೇಬಿನಿಂದ ಏನನ್ನಾದರೂ ಕೊಡುತ್ತಿದ್ದೇವೆ ಎಂದಾಗಲೀ, ನಾವು ಮಾಡಬಾರದನ್ನೇನ್ನಾದರೂ ಮಾಡುತ್ತಿದ್ದೇವೆ ಎಂದಾಗಲೀ ಅರ್ಥವಲ್ಲ.
ಜಗತ್ತಿನ ಕೆಲವು ದಾರಿತಪ್ಪಿದ ಮತ್ತು ಹಿಂದುಳಿದ ರಾಷ್ಟ್ರಗಳನ್ನು ಹೊರತುಪಡಿಸಿ ಪ್ರತಿಯೊಂದು ದೇಶವು ಮಾಡಿರುವುದನ್ನೇ ನಾವು ಮಾಡಿದ್ದೇವೆ” ಎಂದು ಅವರು ಸಂವಿಧಾನ ಸಭೆಯಲ್ಲಿ ಹೇಳಿದ್ದರು. ಆ ಮೂಲಕ ನಾಗರಿಕ ಜಗತ್ತಿನಲ್ಲಿ ಒಪ್ಪಿತವಾದ ಜಾತ್ಯತೀತ ತತ್ವಗಳನ್ನು ಸಮರ್ಥಿಸಿದ್ದರು.
ದೇಶ ವಿಭಜನೆಯ ಹಿಂಸಾಚಾರದ ಬಳಿಕವೂ ಜಾತ್ಯತೀತತೆಯ ಪರಿಕಲ್ಪನೆಯನ್ನು ಸಮರ್ಥಿಸಬಲ್ಲ ನೈತಿಕ ಸ್ಥೈರ್ಯವಿದ್ದ ಜನರು ಅಂದು ಇದ್ದರೆ, ಇಂದು ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳಲ್ಲಿಯೂ ಈ ನಂಬಿಕೆ ಸವಕಲಾಗುತ್ತಿದೆ. ವಿಭಜನಕಾರಿ ಚಿಂತನೆಗಳಿಗೆ ಹಿಂದುತ್ವ ಪಕ್ಷಗಳ ಬಹಿರಂಗ ನಿಷ್ಟೆಗೆ ಎದುರಾಗಿ, ಜಾತ್ಯತೀತತೆಯ ಪರ ಹಿಂಜರಿಕೆಯ, ಚೈತನ್ಯವಿಲ್ಲದ ಪ್ರತಿರೋಧವಷ್ಟೇ ವ್ಯಕ್ತವಾಗುತ್ತಿದೆ. ವಾಸ್ತವವಾಗಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟಿಸುತ್ತಿರುವವರು ಮಾತ್ರ ರಾಜಕೀಯ ರಂಗದಲ್ಲಿ ಜಾತ್ಯತೀತತೆಯನ್ನು ಪುನಶ್ಚೇತನಗೊಳಿಸುತ್ತಿದ್ದಾರೆ.

ಅಲ್ಪಸಂಖ್ಯಾತರ ಹಕ್ಕುಗಳು
ಗಾಂಧಿಯವರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿರಲಿಲ್ಲ. ಒಂದು ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆಯು, ಸಮಾಜವು ತನ್ನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಜೊತೆ ಆಳವಾಗಿ ತಳಕುಹಾಕಿಕೊಂಡಿದೆ ಎಂದವರು ನಂಬಿದ್ದರು. ಇಂದಿನಂತೆ ಅಂದೂ ಕೂಡಾ ತಾವು ಗಾಂಧಿಯವರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕಾಂಗ್ರೆಸಿಗರಿದ್ದರು. ಆದರೆ, ಅವರು ಗಾಂಧಿಯವರ ಮೇಲಿನ ವಿಚಾರಗಳನ್ನು ತಿರಸ್ಕರಿಸಿ, ಪೌರತ್ವ ಕುರಿತ ಹಿಂದೂತ್ವವಾದಿಗಳ ಸಂಕುಚಿತ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಸೀಮಿತಗೊಳಿಸುವ ಪರಿಕಲ್ಪನೆಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಿದ್ದರು. ಅಂತಹವರಲ್ಲಿ ಒಬ್ಬರು ಕಾಂಗ್ರೆಸಿಗ ಮಹಾವೀರ ತ್ಯಾಗಿ. ಅಲ್ಪಸಂಖ್ಯಾತರ ಹಕ್ಕುಗಳ ಕುರಿತ ಚರ್ಚೆಯನ್ನು ಮುಂದೂಡಿ, ನಂತರದಲ್ಲಿ ಈ ವಿಷಯದ ಕುರಿತು ನಿರ್ಧರಿಸಬೇಕು ಎಂದು ಅವರು ಸಂವಿಧಾನ ಸಭೆಗೆ ಸಲಹೆ ಮಾಡಿದ್ದರು.
ಅವರದ್ದೇ ನಿಲುವನ್ನೇ ಗೃಹಮಂತ್ರಿ ಅಮಿತ್ ಶಾ ಇತ್ತೀಚೆಗೆ ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯು ಪ್ರತಿಫಲಿಸುತ್ತದೆ. ತಮಗೆ ವಿಶೇಶ ಅವಕಾಶಗಳನ್ನು ಬೆಂಬಲಿಸುವುದಾದರೆ, ಅಲ್ಪಸಂಖ್ಯಾತರಿಗೆ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವ ನೈತಿಕ ಹಕ್ಕಿಲ್ಲ ಎಂದವರು ಹೇಳಿದ್ದರು.

ತ್ಯಾಗಿಯ ವಿಚಾರಗಳನ್ನು ಮತ್ತು ಶಾ ಪುನರುಚ್ಛಾರವನ್ನು ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ನಿರ್ಣಾಯಕವಾಗಿ ತಿರಸ್ಕರಿಸಿದ್ದರು.
“ಈ ಪ್ರಸ್ತಾಪವನ್ನು ಬೆಂಬಲಿಸಲು ಇರುವ ಏಕೈಕ ಕಾರಣವೆಂದರೆ- ಯಾರೂ ಇದನ್ನು ಊಹಿಸಬಹುದು- ಅಲ್ಪಸಂಖ್ಯಾತರ ಹಕ್ಕುಗಳು ಸಾಂಬಂಧಿಕವಾಗಿರಬೇಕು ಎಂಬುದು. ಅದರ (ತ್ಯಾಗಿ ವಾದದ) ಅರ್ಥವೆಂದರೆ ನಾವು ಹಿಂದೂಸ್ಥಾನ್ ಪ್ರದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಯಾವುದೇ ಹಕ್ಕುಗಳನ್ನು ನೀಡುವ ಮೊದಲು ಪಾಕಿಸ್ತಾನದ ಸಂವಿಧಾನ ಸಭೆಯು ಅಲ್ಪಸಂಖ್ಯಾತರಿಗೆ ಯಾವ ಹಕ್ಕುಗಳನ್ನು ನೀಡುತ್ತದೆ ಎಂದು ಕಾದುನೋಡಬೇಕು ಎಂಬುದು” ಎಂದು ಅಂಬೇಡ್ಕರ್ ಹೇಳಿದ್ದರು.

ಶಿರಸಿ ವಿಧಾನಸಭಾ ಕ್ಷೇತ್ರದ ಬಗುರ್‌ಹುಕುಂ ಸಕ್ರಮೀಕರಣ ಸಮಿತಿ ಸದಸ್ಯರಾಗಿ ಹೊನ್ನಪ್ಪವಡ್ಡರ್ ನೇಮಕ
ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮೀತಿಯ ಶಿರಸಿ ಕ್ಷೇತ್ರದ ಸದಸ್ಯರನ್ನು ಸರ್ಕಾರ ನೇಮಿಸಿದ್ದು ಸಿದ್ಧಾಪುರದ ಹೊನ್ನಪ್ಪ ವಡ್ಡರ್ ಈ ಸಮೀತಿಯ ಸದಸ್ಯ(ಪ.ಜಾ.)ರಾಗಿ ನೇಮಕವಾಗಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರದ ಸಮೀತಿಯ ಅಧ್ಯಕ್ಷರಾಗಿ ಸ್ಥಳಿಯ ಶಾಸಕರು ಕಾರ್ಯನಿರ್ವಹಿಸಬೇಕಿದ್ದು, ಆಯಾ ತಾಲೂಕಿನ ತಹಸಿಲ್ಧಾರರು ಕಾರ್ಯದರ್ಶಿಗಳಾಗಿರುತ್ತಾರೆ. ಇಂಥ ಸಮೀತಿಯ ಸದಸ್ಯರ ಸಂಖ್ಯೆ ೫ ಕ್ಕೆ ಸೀಮಿತವಾಗಿದ್ದು, ಶಾಸಕರು,ತಹಸಿಲ್ಧಾರರು ಖಾಯಂ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿಗಳಾಗಿರುತ್ತಾರೆ.
ಸಿದ್ದಾಪುರದಿಂದ ಪ.ಜಾ.ಪ್ರತಿನಿಧಿಯಾಗಿ ಹೊನ್ನಪ್ಪ ವಡ್ಡರ್ ನೇಮಕವಾಗಿದ್ದು, ಶಿರಸಿಯ ಜಯಶ್ರೀ ಪುರುಷೋತ್ತಮ ಮಡಿವಾಳ ಮಹಿಳಾ ಪ್ರತಿನಿಧಿಯಾಗಿ ನೇಮಕವಾಗಿದ್ದಾರೆ. ಶಿರಸಿಯ ಗಜಾನನ ಹೆಗಡೆ ಮಂಡಗಾರ ಇನ್ನೊಬ್ಬ ಸದಸ್ಯರಾಗಿದ್ದಾರೆ.

ಸಿದ್ದಾಪುರ :ಕೊರೊನಾಸೋಂಕಿನಬಗ್ಗೆಮಾಹಿತಿಕಾ ರ‍್ಯಕ್ರಮಪಟ್ಟಣದನ್ಯಾಯಾಲಯದಲ್ಲಿಬುಧವಾರನಡೆಯಿತು.
ಈ ಸಂರ್ಭದ ಲ್ಲಿ ಮಾತನಾಡಿದವೈದ್ಯಾಧಿಕಾರಿಡಾ.ಶ್ರೀಪ್ರಿಯಾ,‘ ಕೊರೊನಾವೈರಸ್ ಹೊಸದಲ್ಲ. ಕೆಲವರ್ಷ ಗಳಹಿಂದೆ ಈ ವೈರಸ್ಕಂಡುಬಂದಿತ್ತು. ಈಗಪುನಃಕಾಣಿಸಿಕೊಂಡಿದೆ.ಆದರೆವಿಶ್ವದಲ್ಲಿವೇಗವಾಗಿಹರಡುತ್ತಿರುವುದರಿಂದಭೀತಿಹುಟ್ಟಿಸಿದೆ.ಅತಿಯಾದಜ್ವರಮತ್ತುಉಸಿರಾಟದತೊಂದರೆ ಈ ರೋಗದಮುಖ್ಯಲಕ್ಷಣಎಂದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *