ನ್ಯಾಯವ್ಯವಸ್ಥೆಯಲ್ಲಿ ನಟನೆಯ ಬೆಲೆ

ಮನದ ಮಾತು
ನ್ಯಾಯವ್ಯವಸ್ಥೆಯಲ್ಲಿ ನಟನೆಯ ಬೆಲೆ

  • ಪಾಟ್ನಾ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಶ್ರೀಮತಿ ಅಂಜನಾ ಪ್ರಕಾಶ್ ಅವರ ಬರಹ (ಸಂಗ್ರಹಾನುವಾದ ­_ ಡಿ. ರಾಮಪ್ಪ ಸಿರಿವಂತೆ, ಅಂಕೋಲಾ)
    -೦-
    “ನ್ಯಾಯಾಧೀಶರು ತಮ್ಮ ತೀರ್ಪನ್ನು ಪರಿಗಣಿಸಲಿ,”
  • ಆ ದಿನ, ಪ್ರಾಯಶಃ ಇಪ್ಪತ್ತನೇ ಬಾರಿ ರಾಜ ಹೇಳಿದ.
    “ಇಲ್ಲ, ಸಾಧ್ಯವಿಲ್ಲ, ಮೊದಲು ಶಿಕ್ಷೆ, ನಂತರ ತೀರ್ಪು,” ರಾಣಿಯೆಂದಳು.
    “ತೀರ್ಪಿಗೆ ಮೊದಲು ಶಿಕ್ಷೆ ಎಂಬ ಕಲ್ಪನೆಯೇ ಅಸಂಬದ್ಧ!” ಆಲಿಸ್ ಮಧ್ಯೆ ಗೊಣಗಿದಳು.
    “ಬಾಯ್ಮುಚ್ಚು, “ ರಾಣಿ ಅಬ್ಬರಿಸಿದಳು.
    ಆಕೆಯ ಮುಖ ಕಪ್ಪಿಟ್ಟಿತು.
    “ಇಲ್ಲಾ,” ಆಲಿಸ್ ಹಟದಿಂದ ಜೋರಾದಳು.
    “ಅವಳ ತಲೆ ತೆಗೆಯಿರಿ,” ರಾಣಿ ಕೂಗಿದಳು.
    ಯಾರೂ ಕದಲಲಿಲ್ಲ! “ನಿನಗ್ಯಾರು ಹೆದರುತ್ತಾರೆ, ನೀನೊಂದು ಇಸ್ಪಿಟ್ ಎಲೆಗಳ ಪ್ಯಾಕ್ ಅಷ್ಟೇ,” ಆಲಿಸ್ ಚೀರಿದಳು.
    -೦-
    ಮೇಲಿನ ಮಾತುಗಳೆಲ್ಲಾ, ಲೆವಿಸ್ ಕ್ಯಾರೊಲ್ ರವರ ‘ಆಲಿಸ್ ಇನ್ ವಂಡರ್ ಲ್ಯಾಂಡ್‘ ಕತೆಯಲ್ಲಿ, ಪಿಂಗಾಣಿ ಸಾಮಾನು ಕದ್ದ ಕಳ್ಳನನ್ನು ವಿಚಾರಿಸುವ ವೇಳೆ, ರಾಜನ ಆಸ್ಥಾನದಲ್ಲಿ ನಡೆದ ಸಂಭಾಷಣೆ. ಇದು,
  • ನ್ಯಾಯಾಂಗನಿಂದನೆ ಎಂದು ತೀರ್ಮಾನಿಸಿ ಸರ್ವಶಕ್ತ, ಅತ್ಯುತ್ಸಾಹದ ರಾಜ್ಯ ಸರ್ಕಾರ ನನ್ನನ್ನು ಕೋರ್ಟಿಗೆ ಎಳೆಯುವ ಮೊದಲೇ ಮತ್ತು, ನನ್ನನ್ನು ಹೇಗೆ ಶಿಕ್ಷಿಸಬೇಕು ಎಂದು ಕೋರ್ಟ್ ಯೋಚಿಸುವ ಮೊದಲೇ ಈ ವಿವರಣೆ ಕೊಡುತ್ತೇನೆ. ಈ ಲೇಖನ, ಇಂದಿನ ಸಂದರ್ಭಕ್ಕೆ ಹೋಲಿಕೆಯಾದರೆ, ಅದು ಪ್ರಾಸಂಗಿಕವೆ ವಿನಹ ನಾನು ಸೃಷ್ಟಿಸಿದ್ದಲ್ಲ ಮತ್ತು ನನ್ನ ಉದ್ದೇಶ ಕೂಡ ಅಲ್ಲ.
  • ಏನೇ ಇರಲಿ, ಖೈದಿ ವಿಚಾರಣೆಯ ಈ ಕತೆಯಲ್ಲಿನ ಪಾತ್ರಗಳ ವರ್ತನೆಯಲ್ಲಿ ಆಲಿಸ್, ವಿವೇಕ ಮತ್ತು ಅರ್ಥ ಹುಡುಕಲು ಪ್ರಯತ್ನಿಸುತ್ತಾಳೆ. ಅರ್ಥವಿಲ್ಲದ ಜಗತ್ತಿನಲ್ಲಿ, ನ್ಯಾಯಾಲಯವನ್ನೂ ಒಳಗೊಂಡಂತೆ ಎಲ್ಲವೂ ಮೋಸ ಎಂದು ಆಲಿಸ್‌ಗೆ ಅರಿವಾಗುತ್ತದೆ. ಅತ್ಯುತ್ತಮ ಸಾಹಿತ್ಯದಂತೆ, ಇದೊಂದು ಸಾರ್ವತ್ರಿಕ ಮತ್ತು ನಿರಂತರ ಸತ್ಯವೇ ಎಂಬುದು ಒಂದು ಆಸಕ್ತಿದಾಯಕ ಚರ್ಚೆಯ ವಿಷಯವಾಗಬುಹುದು. ಆದರೆ ಇದರಲ್ಲಿ ನನ್ನ ಅಭಿಪ್ರಾಯವೇನೂ ಇಲ್ಲ.

ಬದುಕಿನ ಅರ್ಥ ಹುಡುಕುವ ಸಂದರ್ಭದಲ್ಲಿ ನಾನು ಆಕಸ್ಮಿಕವಾಗಿ ಡೆವಿಡ್ ಮೆಕ್ರಾನೆ ಎಂಬ ಮನಶಾಸ್ತ್ರ ಜ್ಞರನ್ನು ಎಡತಾಕಿದೆ.

‘ದ್ವೇಷಿಸುವವರನ್ನು ನಿಬಾಯಿಸುವುದು ಹೇಗೆಂಬ ಆಶ್ಚರ್ಯಕರ ಮನಶಾಸ್ತ್ರ ಬರೆದವರಾತ. ಅವರ, ‘ಸ್ವಯಂ ಗ್ರಹಿಕೆ‘ ಸಿದ್ಧಾಂತದ ಪ್ರಕಾರ, ‘ನಾವೆಲ್ಲ ನಮ್ಮ ಅನುಭವಗಳ ವೀಕ್ಷಕರು ಮತ್ತು ನಿರೂಪಕರು. ನಾವು ಏನೆಲ್ಲಾ ಮಾಡುತ್ತೇವೋ ಅವುಗಳ ಮೂಲ ಉದ್ದೇಶವನ್ನು ಅರಿಯಲು ಅಸಮರ್ಥರಾಗಿರುತ್ತೇವೆ. ತೋರಿಕೆಯ ಕತೆಯೊಂದನ್ನು ನಿರ್ಮಿಸಿ, ಅದರಲ್ಲಿ ಅರ್ಥ ಕಾಣಲು ಪ್ರಯತ್ನಿಸುತ್ತೇವೆ. ಆ ಕತೆಯ ಹಿನ್ನೆಲೆಯಲ್ಲಿ ನಮ್ಮ ವರ್ತನೆಯನ್ನು ಗಮನಿಸಿ, ನಮ್ಮ ಬಗ್ಗೆ ನಂಬಿಕೆಗಳನ್ನು ರೂಪಿಸಿಕೊಳ್ಳುತ್ತೇವೆ. ವಾಸ್ತವದಲ್ಲಿ ಅದೂ ಕೂಡ ನಮ್ಮಲ್ಲಿ ಮೊದಲಿದ್ದ ನಂಬಿಕೆಗಳನ್ನೇ ಆಧರಿಸಿರುತ್ತದೆ. ನಾವು ಇಷ್ಟಪಡುವವರಿಗೆ ಒಳ್ಳೆಯದನ್ನೂ, ಇಷ್ಟಪಡದವರಿಗೆ ಕೆಟ್ಟದ್ದನ್ನೂ ಮಾಡುತ್ತೇವೆ ಎಂಬುದು ನಮ್ಮ ಭ್ರಮೆ,‘ ಎಂದು ಅವರು ಹೇಳುತ್ತಾರೆ.

‘ತದ್ವಿರುದ್ಧವಾಗಿ, ನಾವು ಯಾರಿಗೆ ಒಳ್ಳೆಯದನ್ನು ಮಾಡುತ್ತೇವೋ ಅವರನ್ನು ಇಷ್ಟಪಡುತ್ತೇವೆ. ಮತ್ತು, ಯಾರ ಬಗ್ಗೆ ನಾವುನಿರ್ಧಯರಾಗಿರುತ್ತೇವೋ ಅವರನ್ನು ಇಷ್ಟಪಡುವುದಿಲ್ಲ. ಇದನ್ನು ಬೆಂಜಮಿನ್ ಫ್ರಾಂಕ್ಲಿನ್ ಪರಿಣಾಮ ಎನ್ನುತ್ತಾರೆ. ನಿಮ್ಮ ಬಗ್ಗೆ, ನೀವು ಇಷ್ಟಪಡುವ ಹಣೆಪಟ್ಟಿ(ಲೇಬಲ್)ಗೆ ತಕ್ಕಂತೆ ವರ್ತಿಸುವ ಪ್ರವೃತ್ತಿಯನ್ನು ಹೊಂದಿರುವುದರಿಂದ ನಿಮ್ಮ ಪಾತ್ರ ಮತ್ತು ವರ್ತನೆಯ ವಿಷಯದಲ್ಲಿ ಎಚ್ಚರದಿಂದಿರಬೇಕು,‘ ಎನ್ನುತ್ತಾರೆ.

‘ನಮ್ಮ ಆಲೋಚನೆಗಳು ಮಾತಾಗುತ್ತವೆ, ಮಾತುಗಳು ಕ್ರಿಯೆಗಳಾಗುತ್ತವೆ, ಕ್ರಿಯೆಗಳು ನಡತೆಯಾಗುತ್ತದೆ ಮತ್ತು ಈ ನಡತೆಯೇ ನಮ್ಮ ಹಣೆಬರಹವಾಗುತ್ತದೆ,‘ ಎಂದು ಗಾಂಧೀಜೀ ಹೇಳಿದ್ದರು.
ನಾನು ಸಾಮಾನ್ಯಳು ಮತ್ತು, ರಾಜ್ಯಾಡಳಿತದಲ್ಲಿ ನಾನು ಲೆಕ್ಕಕ್ಕಿಲ್ಲ ಎಂದು ತಿಳಿದೂ, ನನ್ನ ಹತಾಶೆಯನ್ನು ವ್ಯಕ್ತಪಡಿಸುತ್ತೇನೆ. ಆದರೆ, ಮಾರಿಯಾ ಪೊಪೊವಾ ಹೇಳಿದಂತೆ, ‘ಜನರು ನಿಮ್ಮ ಬಗ್ಗೆ ಹೇಳುವುದನ್ನು ನಂಬಬೇಡಿ; ನಿಮ್ಮ ಸಮಗ್ರತೆಯ ವಾರಸುದಾರರು ನೀವು; ನಿಮ್ಮ ಬಗ್ಗೆ ತಪ್ಪಾಗಿ ಅರ್ಥೈಸಿ ನೀವು ಏನನ್ನು ಪ್ರತಿನಿಧಿಸುತ್ತೀರಿ ಎಂದು ಹೇಳುವವರ ಊಹೆ ಬೆತ್ತಲೆಗೊಳಿಸುವುದು ಅವರನ್ನೇ ವಿನಃ ನಿಮ್ಮ ಬಗ್ಗೆ ಏನೂ ಹೇಳುವುದಿಲ್ಲ.‘
‘ನಮ್ಮ ನಟನೆಯ ಭಾಗವೇ ನಾವಾಗಿರುವುದರಿಂದ, ನಟಿಸುವಾಗ ನಾವು ಜಾಗರೂಕರಾಗಿರಬೇಕು,‘ ಎಂದು ಅಮೇರಿಕಾದ ಬರಹಗಾರ, ಕರ್ಟ್ ವೊನ್ನೆಗಟ್ ಹೇಳುತ್ತಾರೆ. ಈ ಅರ್ಥಗರ್ಭಿತ ವಾಕ್ಯದಲ್ಲಿ ಎಲ್ಲರಿಗೂ ಒಂದು ಪಾಠವಿದೆ. ತಪ್ಪು ಆಯ್ಕೆಗಳು ನ್ಯಾಯಾಧೀಶರಂತೆ ನಟಿಸಿದರೆ, ಹಾಗೆ ನಟಿಸುವಲ್ಲಿ ಅವರ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಅವರನ್ನು ರಾಜ್ಯದ ಚುನಾಯಿತ ಪ್ರತಿನಿಧಿಗಳೆಂದು ತಪ್ಪಾಗಿ ಗ್ರಹಿಸಬಹುದು!
-೦-
(ಮಾಜಿ ನ್ಯಾಯಮೂರ್ತಿ ಶ್ರೀಮತಿ ಅಂಜನಾ ಪ್ರಕಾಶ್ ಅವರ ಬಗ್ಗೆ ಒಂದಿಷ್ಟು:
ಪಾಟ್ನಾ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ಇತ್ತೀಚೆಗೆ ನಿವೃತ್ತರಾದ ಶ್ರೀಮತಿ ಅಂಜನಾ ಪ್ರಕಾಶ್, ಜಾರ್ಖಂಡದ ರೋಹಿಣಿಯವರು. ಮಹಾರಾಷ್ಟçದ ನಾಸಿಕ್, ಜಾರ್ಖಂಡದ ಜೆಮ್ಶೆಡ್ಪುರ, ಉತ್ತರಪ್ರದೇಶದ ಕಾನ್ಪುರ, ಬರೇಲಿ ಮತ್ತು ಅಲಹಾಬಾದಿನಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದ ಅವರು ಬಿಹಾರದ ಪಾಟ್ನಾದಲ್ಲಿ ಪದವಿ ಪೂರೈಸಿದರು. ೧೯೮೨ರಿಂದ ಸುಮಾರು ಹತ್ತು ವರ್ಷಗಳ ಕಾಲ ತಮ್ಮ ಮಾವ ಬ್ರಿಜ್ ಕಿಶೋರ ಪ್ರಸಾದ್ ಅವರೊಟ್ಟಿಗೆ ಸಹಾಯಕಿಯಾಗಿ ವಕೀಲಿ ವೃತ್ತಿ ನಿರ್ವಹಿಸಿದರು. ನಂತರ ಅವರು, ವಿ. ಆರ್. ಮನೋಹರ್, ರಾಜೇಂದ್ರ ಸಿಂಗ್, ರಾಮ್ ಜೇಟ್ ಮಲಾನಿ ಮತ್ತು ಶಾಂತಿ ಭೂಷಣರಂತಹ ಖ್ಯಾತ ನ್ಯಾಯವಾದಿಗಳೊಟ್ಟಿಗೆ ಕೆಲಸ ಮಾಡಿದರು. ವಿವಿಧ ಎನ್‌ಜಿಒಗಳ ಮುಖಾಂತರ, ಉಚಿತ ಕಾನೂನು ನೆರವು, ಬಾಲಾಪರಾಧಿಗಳಿಗೆ ನ್ಯಾಯ, ಕುಟುಂಬ ನ್ಯಾಯಾಲಯ, ಲೋಕ ಅದಾಲತ್, ಮಹಿಳೆಯರ ವಿರುದ್ಧ ಅಪರಾಧ, ಜೈಲು ಆಡಳಿತ ಸುಧಾರಣೆ ಮುಂತಾದ ಕಾರ್ಯಕ್ರಮ ಮತ್ತು ಚಳುವಳಿಗಳಲ್ಲಿ ಸಕ್ರೀಯವಾಗಿ ಬಾಗವಹಿಸುತ್ತಿದ್ದಾರೆ. ನಿರ್ಭಯಾ ಕೊಲೆ ಪ್ರಕರಣದ ಒಬ್ಬ ಆರೋಪಿಯ ಪರ, ಅಮಿಕಸ್ ಕ್ಯೂರಿ ಆಗಿ ಅವರನ್ನು ಸುಪ್ರಿಮ್ ಕೋರ್ಟ್ ನೇಮಕ ಮಾಡಿತ್ತು.)

ಕರೋನಾ:
ಪರಿಣಾಮ,
ಪರಿಹಾರ
ಕರೋನಾದಿಂದ ಪಾರಾಗಲು ವೈಜ್ಷಾನಿಕ, ವೈಧ್ಯಕೀಯ ಕ್ರಮಗಳತ್ತ ಗಮನಹರಿಸುತ್ತಿರುವಾಗಲೇ ಕೆಲವು ಕಡೆ ಕರೋನಾ ಬರದಂತೆ ಮುಂಜಾಗೃತೆ ವಹಿಸುವ, ಕರೋನಾ ಪರಿಣಾಮದಿಂದ ತೊಂದರೆಗೊಳಗಾಗಿರುವ ಜನರಿಗೆ ಸಹಕರಿಸುವ ಪ್ರಯತ್ನಗಳು ನಡೆಯುತ್ತಿವೆ.
ಇದೇ ವಾರ ಕರೋನಾ ಪರಿಣಾಮದಿಂದ ಹಾನಿಗೊಳಗಾದ ನಾಟಕ ಕಲಾವಿದರಿಗೆ ಆಹಾರ ಸಾಮಗ್ರಿ ವಿತರಿಸುವ ಮೂಲಕ ಶಿರಸಿಯಲ್ಲಿ ಉದ್ಯಮಿ ಭೀಮಣ್ಣ ನಾಯ್ಕ ಮಾನವೀಯತೆ ಮೆರೆದಿದ್ದರು.
ಶಿರಸಿ ಪತ್ರಕರ್ತರು ರಂಗಕಲಾವಿದರಿಗೆ ಆಹಾರ ಸಾಮಗ್ರಿ ನೀಡಿ, ಸಾರ್ವಜನಿಕ ಸೇವೆಯಲ್ಲಿರುವ ಪೊಲೀಸರಿಗೆ ಮುಖಗವಸು ನೀಡಿ ಸಹಕರಿಸಿದ್ದರು.
ಶುಕ್ರವಾರ ಸಿದ್ಧಾಪುರದ ಆಟೋ ಚಾಲಕರಿಗೆ ಮುಖವಗಸು ವಿತರಿಸುವ ಮೂಲಕ ಶಿರಸಿ ಉದ್ಯಮಿ ಉಪೇಂದ್ರ ಪೈ ಕರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿ ಮಾಡಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *