for weekend reading-ಎಲ್ಲದರ ಹೊರತಾಗಿಯೂ ಜನರು, ಹೃದಯದಲ್ಲಿ ಒಳ್ಳೆಯವರು ಎಂದು ನಾನು ಇನ್ನೂ ನಂಬುತ್ತೇನೆ

ಆನ್‍ಫ್ರಾಂಕ್: ಜನಾಂಗದ್ವೇಷದಲ್ಲಿ ಕಮರಿದ ಚಿಗುರು!
-ಸಂಗ್ರಹ ಬರಹ: ಡಿ. ರಾಮಪ್ಪ ಸಿರಿವಂತೆ, ಅಂಕೋಲಾ

“ಎಲ್ಲದರ ಹೊರತಾಗಿಯೂ ಜನರು, ಹೃದಯದಲ್ಲಿ ಒಳ್ಳೆಯವರು ಎಂದು ನಾನು ಇನ್ನೂ ನಂಬುತ್ತೇನೆ.”

ಕನಸುಗಳು ಗರಿಗೆದರಿ ಉಕ್ಕುವ ಹುಮ್ಮನಸ್ಸಿನಿಂದ ಹರಯಕ್ಕೆ ಕಾಲಿಡುವ ಸಂದರ್ಭದಲ್ಲಿ – ಹಿಟ್ಲರ್‍ನ ನಾಜಿ ಅಟ್ಟಹಾಸಕ್ಕೆ ಸಿಕ್ಕು ಕಮರಿ ಹೋದ ಬಾಲೆ – ಆನ್ ಫ್ರಾಂಕ್, ಇಡೀ ಮನುಕುಲವನ್ನು ತಲ್ಲಣಗೊಳಿಸಿದ “ಚಿಕ್ಕ ಹುಡುಗಿಯ ದಿನಚರಿ”ಯಲ್ಲಿ ಬರೆದ ಮಾತಿದು!

1933ರಲ್ಲಿ ನಾಜೀ ಪಕ್ಷ ಜರ್ಮನಿಯ ಫೆಡರಲ್ ಚುನಾವಣೆಯನ್ನು ಗೆದ್ದು, ಅಡಾಲ್ಫ್ ಹಿಟ್ಲರ್ ಚಾನ್ಸೆಲರ್ ಆದ. ಅವನ ಕಾರಣದಿಂದ ನಡೆದ ಎರಡನೇ ಮಹಾಯುದ್ಧದಲ್ಲಿ ಸತ್ತವರ ಸಂಖ್ಯೆ ಕನಿಷ್ಟ ಐದರಿಂದ-ಎಂಟು ಕೋಟಿ ಎಂದು ಅಂದಾಜು. ಅದರಲ್ಲಿ, ಜನಾಂಗೀಯ ದ್ವೇಶದಿಂದ ಕಗ್ಗೊಲೆಗೊಳಗಾದವರು 60ಲಕ್ಷ ಯಹೂದಿಗಳು. ಇಂತಹ ಬರ್ಬರ ಹತ್ಯಾಕಾಂಡದಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡ ಯಹೂದಿ ದುರ್ದೈವಿಗಳಲ್ಲಿ ಒಬ್ಬ ಒಟ್ಟೊ ಫ್ರಾಂಕ್. ಅವನ ಮಗಳೇ ಆನ್ ಫ್ರಾಂಕ್!

ಜ್ಞಾನ ಮತ್ತು ತಿಳುವಳಿಕೆಯನ್ನು ಗೌರವಿಸುವ ಉದಾರವಾದಿ ಎಡಿತ್ ಮತ್ತು ಒಟ್ಟೊ ಹೆನ್ರಿಕ್ ಫ್ರಾಂಕ್ ದಂಪತಿಗಳಿಗೆ ಎರಡನೆಯ ಮಗಳಾಗಿ ಜರ್ಮನಿಯ ಫ್ರಾಂಕ್‍ಫರ್ಟ್‍ನಲ್ಲಿ ಆನ್ ಫ್ರಾಂಕ್ 12 ಜೂನ್ 1929 ರಂದು ಜನಿಸಿದಳು. 1933ರಲ್ಲಿ ಅಡಾಲ್ಫ್ ಹಿಟ್ಲರ್ ಜರ್ಮನಿಯ ಚಾನ್ಸೆಲರ್ ಆದ ಸಮಯದಲ್ಲಿ ಒಟ್ಟೊ ಫ್ರಾಂಕ್, ನಾಜಿ ಆಡಳಿತಕ್ಕೆ ಒಳಪಡದ ನೆದರ್ಲ್ಯಾಂಡ್ ರಾಜಧಾನಿ ಅಮ್ಸ್ಟರ್‍ಡ್ಯಾಂಗೆ ಕುಟುಂಬವನ್ನು ಸ್ಥಳಾಂತರಿಸಿ ಮಕ್ಕಳನ್ನು ಅತ್ಯುತ್ತಮ ಶಾಲೆಗಳಿಗೆÉ ಸೇರಿಸಿದರು. ಹಿಟ್ಲರ್ ಚಾನ್ಸಲರ್ ಆದ ನಂತರದ 1933-39ರ ಸಮಯದಲ್ಲಿ ಜರ್ಮನಿಯಿಂದ ಪಲಾಯನ ಮಾಡಿದ ಸುಮಾರು 3,00,000 ಯಹೂದಿಗಳಲ್ಲಿ ಫ್ರಾಂಕ್ ಕುಟುಂಬ ಕೂಡ ಒಂದಾಗಿತ್ತು. ಆದರೆ, 1940ರಲ್ಲಿ ಹಿಟ್ಲರ್, ನೆದರ್ಲ್ಯಾಂಡ್ ಅನ್ನೂ ಆಕ್ರಮಿಸಿ ಅಲ್ಲಿರುವ ಯಹೂದಿಗಳನ್ನು ಕಡ್ಡಾಯ ನೊಂದಣಿ, ಸಾಮಾಜಿಕ ನಿರ್ಬಂಧ, ತಾರತಮ್ಯದ ಕಾನೂನುಗಳ ಮುಖಾಂತರ ಹಿಂಸಿಸತೊಡಗಿದ. ಒಟ್ಟೊ ಫ್ರಾಂಕ್‍ರÀ ಮಕ್ಕಳು ಅನಿವಾರ್ಯವಾಗಿ ಯಹೂದಿ ಲಿಸಿಯಂ ಶಾಲೆಗೆ ಸೇರಬೇಕಾಯಿತು.
13ನೇ ವರ್ಷದ (1942) ಹುಟ್ಟುಹಬ್ಬದ ಸಂದರ್ಭದಲ್ಲಿ ಆನ್‍ಗೆ ಒಂದು ಚಂದದ ಆಟೊಗ್ರಾಫ್ ಪುಸ್ತಕ ಉಡುಗೊರೆಯಾಗಿ ಬಂತು. ಅಂದವಾಗಿದ್ದÀ ಅದನ್ನೇ ಡೈರಿ ಮಾಡಿಕೊಂದು ಮೊದಲಬಾರಿಗೆ ಆನ್, ದಿನಚರಿ ಬರೆಯತೊಡಗಿ ತನ್ನ ಒಳ-ಹೊರ ಪ್ರಪಂಚದ ಎಲ್ಲಾ ಆಗುಹೋಗುಗಳನ್ನೂ ಅದರಲ್ಲಿ ದಾಖಲಿಸತೊಡಗಿದಳು. ಈ ಡೈರಿಯಲ್ಲಿ ಆನ್ ಎಷ್ಟು ತಲ್ಲೀನಳಾದಳೆಂದರೆ – ಬರೆದುದನ್ನು ಪುಃನ ನೋಡುವುದು, ತಿದ್ದುವುದು, ತಪ್ಪೆನಿಸಿದರೆ ತನ್ನನ್ನೇ ಬೈದುಕೊಳ್ಳುವುದು – ಇಡೀ ದಿನ ಕಳೆದದ್ದು ಕೂಡ ಆಕೆಗೆ ತಿಳಿಯುತ್ತಿರಲಿಲ್ಲ. ನೆರೆಹೊರೆ ಮತ್ತು ಊರ ವಿಷಯವಲ್ಲದೆ, ತನ್ನ ಕುಟುಂಬ ಸದಸ್ಯರ ಪರಸ್ಪರ ಸಂಬಂಧಗಳನ್ನು, ಅವರ ವ್ಯಕ್ತಿತ್ವಗಳಲ್ಲಿದ್ದ ವಿಶಿಷ್ಟ ವ್ಯತ್ಯಾಸಗಳನ್ನು ಕೂಡ ಆಕೆ ದಾಖಲಿಸಿ ವಿವೇಚಿಸುತ್ತಿದ್ದಳು. ದೈನಂದಿನ ಸಂಗತಿಗಳ ವಿವರಣೆ ಕೊಡುವುದರೊಟ್ಟಿಗೆ, ತನ್ನ ಅನಿಸಿಕೆಗಳು, ನಂಬಿಕೆಗಳು, ಕನಸುಗಳು, ಆಕಾಂಕ್ಷೆಗಳು ಮತ್ತು ತಾನು ಇತರರೊಟ್ಟಿಗೆ ಚರ್ಚಿಸಲಾಗದ ವಿಷಯಗಳ ಬಗ್ಗೆಯೂ ಬರೆಯುತ್ತಿದ್ದಳು. ಆತ್ಮವಿಶ್ವಾಸ ಮತ್ತು ಪ್ರಬುದ್ಧತೆ ಬಂದಂತೆ, ಮಾನವ ಸ್ವಭಾವ, ದೇವರ ಮೇಲಿನ ನಂಬಿಕೆ ಮುಂತಾದ ಅಮೂರ್ತ ವಿಷಯಗಳನ್ನೂ ಚರ್ಚಿಸುತ್ತಿದ್ದಳು. ಪತ್ರಕರ್ತೆಯಾಗಿ, ಜನೋಪಕಾರಿಯಾಗಿ, ಎಲ್ಲರಿಗೂ ಸಂತೋಷ ಕೊಡುವವಳಾಗಿ ಮತ್ತೂ, ಸತ್ತ ನಂತರವೂ ನೆನಪಿರುವಂತೆ ಬದುಕಬೇಕು ಎಂದು ಆಶಿಸುತ್ತ ಬರೆಯುತ್ತಲೇ ಹೋದಳು. ತಾನೊಬ್ಬ ಬರಹಗಾರ್ತಿ ಅಥವಾ, ಪತ್ರಕರ್ತೆ ಆಗಬೇಕು ಎಂದು ದಿನಾಲೂ ಬರೆಯುತ್ತಲೇ ಹೋದಳು – 1944ರ ಆಗಸ್ಟ್ 1ರ ಕೊನೆಯವರೆಗೆ!
ಈ ಮಧ್ಯೆ, ಹಿಟ್ಲರನ ಕ್ರೌರ್ಯಕ್ಕೆ ಹೆದರಿ, ತಪ್ಪಿಸಿಕೊಳ್ಳುವ ಉದ್ದೇಶದಿಂದ ಫ್ರಾಂಕ್ ಕುಟುಂಬ 1942ರ ಜುಲೈ 6ರಂದು ಭೂಗತವಾಯ್ತು. ದುರದೃಷ್ಟದಿಂದ, 1944ರ ಆಗಸ್ಟ್ 4ರಂದು ಜರ್ಮನ್ ಸಮವಸ್ತ್ರಧಾರಿ ಪೊಲೀಸ್ ದಂಡು, ಅವರ ಮನೆಗೆ ನುಗ್ಗಿತು. ಎಲ್ಲರನ್ನೂ ಕೇಂದ್ರ ಭದ್ರತಾ ಕಛೇರಿಗೆ ಕೊಂಡೊಯ್ದು ರಾತ್ರಿಯಿಡಿ ಪ್ರಶ್ನಿಸಿ, ವೆಟರಿಂಗ್‍ಚಾನ್ಸ್‍ನ ಕಿಕ್ಕಿರಿದ ಜೈಲಿಗೆ ವರ್ಗಾಯಿಸಿ, ಎರಡು ದಿನಗಳ ನಂತರ, ವೆಸ್ಟರ್‍ಬೋರ್ಕ್ ಹಂಗಾಮಿ ಶಿಬಿರಕ್ಕೆ ರವಾನಿಸಿತು. ತಲೆಮರೆಸಿಕೊಂಡು ಸಿಕ್ಕಿಬಿದ್ದು ಕ್ರಿಮಿನಲ್‍ಗಳೆಂದು ಪರಿಗಣಿತರಾದ ಒಂದು ಲಕ್ಷಕ್ಕೂ ಮಿಕ್ಕಿದ ಡಚ್ ಮತ್ತು ಜರ್ಮನ್ ಮೂಲದ ಯಹೂದಿಗಳು, ಈ ಶಿಬಿರವನ್ನು ಇದಕ್ಕೆ ಮುಂಚೆಯೇ ಹಾದು, ಬೇರೆಬೇರೆ ಯಾತನಾಶಬಿರ ಸೇರಿ, ಕಮರಿಹೋಗಿದ್ದರು!
1944ರ ಸೆಪ್ಟೆಂಬರ್ 3ರಂದು ವೆಸ್ಟರ್‍ಬೋರ್ಕ್‍ನಿಂದ, ಜೀವನದ ಕೊನೆಯದೆನ್ನಬಹುದಾದ ಆಶ್ವಿಟ್ಜ್ ಯಾತನಾಶಿಬಿರಕ್ಕೆ, ಅವರನ್ನು ತರುತ್ತಾರೆ. ಅಲ್ಲಿ, ಗಂಡು, ಹೆಣ್ಣು ಮತ್ತು ಮಕ್ಕಳನ್ನು ಬೇರ್ಪಡಿಸಿ, ಒಟ್ಟೊ ಫ್ರಾಂಕ್‍ರನ್ನು ಕುಟುಂಬದಿಂದ ದೂರ ಮಾಡುತ್ತಾರೆ. ಸದೃಢರಾದ ಅಪರಾಧಿಗಳನ್ನು ಶಿಬಿರದಲ್ಲಿಟ್ಟು, ದುರ್ಬಲರನ್ನು ತಕ್ಷಣವೇ ಕೊಲ್ಲುತ್ತಾರೆ. ಇದನ್ನು ತಿಳಿದ ಆನ್, ಅಷ್ಟೇನೂ ಸದೃಢರಲ್ಲದ ಮತ್ತು 50 ವರ್ಷ ದಾಟಿದ ತನ್ನ ತಂದೆಯೂ ಬಲಿಯಾಗಿಹೋಗಿರಬಹುದು ಊಹಿಸುತ್ತಾಳೆ. ಹಾಗೆ ಬಂದ 1019 ಜನರಲ್ಲಿ, 15 ವರ್ಷದೊಳಗಿನ ಮಕ್ಕಳನ್ನೂ ಸೇರಿ 549 ಜನರು ಗ್ಯಾಸ್ ಛೇಂಬರ್ ಸೇರುತ್ತಾರೆ. ಅಂದಿಗೆ 15 ವರ್ಷ 3 ತಿಂಗಳು ವಯಸ್ಸಾಗಿದ್ದ ಆನ್ ಆಕಸ್ಮಿಕವಾಗಿ ಸಾವಿನ ದವಡೆಯಿಂದ ತಪ್ಪಿಸಿಕೊಳ್ಳುತ್ತಾಳೆ.
ಶಿಬಿರ ಸೇರಿದ ಮಕ್ಕಳು ಮತ್ತು ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡಿ, ಸೋಂಕು ನಿವಾರಣಾ ಔಷಧಿ ಸಿಂಪಡಿಸಿ, ತಲೆ ಬೋಳಿಸಿ, ಪ್ರತಿಯೊಬ್ಬರ ಕೈಮೇಲೆ ಒಂದೊಂದು ಗರುತು ನಂಬರಿನ ಹಚ್ಚೆ ಹಾಕುತ್ತಾರೆ. ಹಗಲು ಗುಲಾಮರಂತೆ ದುಡಿವ ಹೆಂಗಸರನ್ನು ರಾತ್ರಿ, ದೊಡ್ಡಿಯಂತಿರುವ ಬ್ಯಾರಕ್ಕುಗಳಲ್ಲಿ ತುಂಬುತ್ತಾರೆ. ಆನ್ ಬಂಡೆಗಳನ್ನು ಎತ್ತುವ ಮತ್ತು, ಉಳುಮೆಯ ರೋಲರ್ ಎಳೆಯುವ ಕೆಲಸ ಮಾಡುತ್ತಾಳೆ. ಹೀಗೆ ಕೆಲಸಮಾಡಿ ದುರ್ಬಲರಾಗುವ ಮತ್ತು ರೋಗಪೀಡಿತರಾಗುವ ಮಕ್ಕಳನ್ನು ಗ್ಯಾಸ್ ಛೇಂಬರ್‍ಗೆ ಕಳಿಸುವುದನ್ನು ಆನ್ ಆಗಾಗ ನೋಡುತ್ತಾ ದುಃಖದಿಂದ ಅಂತರ್ಮುಖಿ ಆಗತೊಡಗುತ್ತಾಳೆ.
ರೋಗಗಳು ಸರ್ವೆಸಾಮಾನ್ಯವಾಗಿದ್ದ ಅಲ್ಲಿ, ತುಸು ದಿನಗಳಲ್ಲೇ ಆನ್ ಸ್ಕ್ಯಾಬಿಸ್ ಚರ್ಮರೋಗದಿಂದ ನರಳತೊಡಗುತ್ತಾಳೆ. ಅದಕ್ಕಾಗಿ, ಫ್ರಾಂಕ್ ಸಹೋದರಿಯರನ್ನು ಒಂದು ಕತ್ತಲೆ ತುಂಬಿದ, ಇಲಿ-ಹೆಗ್ಗಣಗಳ ಗೂಡಾದ ಆಸ್ಪತ್ರೆಗೆ ಸೇರಿಸುತ್ತಾರೆ.

1944ರ ಅಕ್ಟೋ¨ರ್ 28ರಂದು, 8000ಕ್ಕೂ ಮಿಕ್ಕಿ ಹೆಂಗಸರನ್ನು – ಫ್ರಾಂಕ್ ಸಹೋದರಿಯರನ್ನೂ ಸೇರಿಸಿ – ಗುರುತಿಸಿ ಬರ್ಗೆನ್-ಬೆಲ್ಸೆನ್ ಶಿಬಿರಕ್ಕೆ ಸ್ಥಳಾಂತರಿಸುತ್ತಾರೆ; ಆದರೆ, ಅಲ್ಲೇ ಉಳಿಸಲಾದ ತಾಯಿ ಎಡಿತ್, ಸ್ವಲ್ಪ ದಿನಗಳಲ್ಲಿಯೇ ಹಸಿವಿನಿಂದ ಸಾಯುತ್ತಾರೆ. ಖೈದಿಗಳ ಸಂಖೈ ಜಾಸ್ತಿಯಾದಂತೆ, ಖಾಯಿಲೆಗಳು ಉಲ್ಬಣಿಸಿ ಸಾಯುವವರೂ ಹೆಚ್ಚಾಗುತ್ತಾರೆ. ಅದಾಗಲೇ ನಿತ್ರಾಣಳಾಗಿ ನಡುಗುತ್ತಿದ್ದ ಆನ್‍ಳ ತಲೆ ಬೋಳಾಗಿತ್ತು. 1945ರಲ್ಲಿ ಆಕೆಯನ್ನು ನೋಡಿದ ಜೇನಾ ಟರ್ಗೆಲ್ ಹೇಳುವಂತೆ, ‘ಆನ್ ಬೆಂಕಿಯಾಗಿದ್ದಳು, ಭಯಾನಕವಾಗಿದ್ದಳು ಮತ್ತು, ಬ್ರಮನಿರಸನಗೊಂಡಿದ್ದಳು!‘ ಅಕ್ಕ ಮಾರ್ಗಾಟ್ ಕೂಡ ರೋಗದಿಂದ ಪೂರ್ತಿಯಾಗಿ – ತನ್ನ ಬಂಕಿನಿಂದ ಹೊರಬರಲಾರದಷ್ಟು – ನಿತ್ರಾಣಳಾಗಿದ್ದಳು. ತನ್ನ ತಂದೆ-ತಾಯಿ ಆಗಲೇ ಸತ್ತಿರುವರೆಂದು ತಿಳಿದು ಆಕೆ ನಿರಾಶಳಾಗಿದ್ದಳೆಂದು ಆನ್ ಹೇಳುತ್ತಿದ್ದಳು. ಕಂಡವರು ಹೇಳುವಂತೆ, ನಿತ್ರಾಣಳಾಗಿದ್ದ ಮಾರ್ಗಾಟ್, ತನ್ನ ಬಂಕಿನಿಂದ ಇಳಿಯುವಾಗ ಬಿದ್ದು ಸತ್ತಳು. ಇದಾದ ಸ್ವಲ್ಪ ದಿನಗಳಲ್ಲೇ ಅಂದರೆ, 1945ರ ಪ್ರಾಯಶಃ ಫೆಬ್ರವರಿಯಲ್ಲಿ, ಟೈಫಾಯ್ಡ್, ಟೈಫಸ್ ಸಾಂಕ್ರಾಮಿಕ ಮತ್ತು ಇತರೆ ಖಾಯಿಲೆಗಳಿಂದÀ, ಕ್ಯಾಂಪಿನಲ್ಲಿದ್ದ 17000 ಜನ ಖೈದಿಗಳು ಸತ್ತರು.
ಅವರಲ್ಲಿ ಆನ್ ಕೂಡ ಒಬ್ಬಳಾಗಿದ್ದಳು!!!

ವಿಪರ್ಯಾಸವೆಂದರೆ, 1945ರ ಎಪ್ರಿಲ್ 15ರಂದು ಎಂದರೆ, ಆನ್ ಮತ್ತು ಮಾರ್ಗಾಟ್ ಸತ್ತ ಕೆಲವೇ ದಿನಗಳಲ್ಲಿ ಬ್ರಿಟಿಷ್ ಸೈನಿಕರು ಕ್ಯಾಂಪಿನಲ್ಲಿ ಬದುಕುಳಿದ ಎಲ್ಲರನ್ನೂ ಸ್ವತಂತ್ರಗೊಳಿಸುತ್ತಾರೆ!
ಆಶ್ವಿಟ್ಜ್‍ನಲ್ಲಿ ಬದುಕುಳಿದ ಒಟ್ಟೊ, ಯುದ್ಧಾನಂತರ 1945ರಲ್ಲಿ ಅಮ್ಸ್ಟರ್‍ಡ್ಯಾಂಗೆ ಬಂದು ಕುಟುಂಬವನ್ನು ಹುಡುಕತೊಡಗಿದರು. ತನ್ನ ಹೆಂಡತಿ ಸತ್ತಿದ್ದು ಅವರಿಗೆÉ ಅದಾಗಲೇ ಗೊತ್ತಾಗಿತ್ತು. ಕೆಲವು ವಾರಗಳ ನಂತರ, ತನ್ನ ಮಕ್ಕಳೂ ಬದುಕಿಲ್ಲವೆಂದು ಅವರಿಗೆ ಖಾತ್ರಿಯಯ್ತು. ತನ್ನ ಮಕ್ಕಳ ಸ್ನೇಹಿತರಲ್ಲಿ ಹೆಚ್ಚಿನವರು ಕೊಲೆಯಾಗಿ ಹೋಗಿದ್ದಾರೆಂದು ತಿಳಿಯಿತು. 1945ರಲ್ಲಿ ರೆಡ್ ಕ್ರಾಸ್ ಸಂಸ್ಥೆ ಫ್ರಾಂಕ್ ಸಹೋದರಿಯರ ಮರಣವನ್ನು ದೃಢೀಕರಿಸಿತು.

ಒಟ್ಟೊರ ಕಾರ್ಯದರ್ಶಿ ಮೈಪ್ ಗೀಸ್ ಆನ್‍ನ ಡೈರಿ ಮತ್ತು ಆಕೆಯ ಬರಹಗಳಿದ್ದ ಒಂದು ಬಂಡಲ್ ಒಟ್ಟೊಗೆ ಕೊಟ್ಟಳು. ತಮ್ಮ ಕುಟುಂಬ ಭೂಗತರಾದ ಸಮಯದ, ನಿಖರವಾಗಿ ಬರೆದ ದಾಖಲೆಯನ್ನು ಆನ್ ಇಟ್ಟಿರುವಳೆಂದು ಒಟ್ಟೊ, ಆವರೆಗೆ ತಿಳಿದಿರಲಿಲ್ಲ. ಡೈರಿಯಲ್ಲಿ ವಿವರಿಸಿದ ಘಟನೆಗಳನ್ನು ಗುರುತಿಸುತ್ತಾ, ಮಗಳು ಗಟ್ಟಿಯಾಗಿ ಓದಿದ ಕೆಲವು ಮನರಂಜನೆಯ ಪ್ರಸಂಗಗಳನ್ನು ನೆನಪು ಮಾಡಿಕೊಳ್ಳುತ್ತಾ, ಆಕೆಯ ದಿನಚರಿಯನ್ನು ಓದುವುದು ತೀವ್ರ ನೋವಿನ ಪ್ರಕ್ರಿಯೆಯಾಗಿತ್ತೆಂದು ತಮ್ಮ ಆತ್ಮಚರಿತ್ರೆಯಲ್ಲಿ ಒಟ್ಟೊ ಹೇಳುತ್ತಾರೆ. ಮೊದಲಬಾರಿಗೆ ಯಾರೊಂದಿಗೂ ಚರ್ಚಿಸದ ಮಗಳ ಜೀವನದ ಖಾಸಗಿ ವಿವರಗಳನ್ನು ಡೈರಿಯಲ್ಲಿ ಅವರು ನೋಡುತ್ತಾರೆ. ಅವಳು ತನ್ನೊಳಗೇ ಇಟ್ಟುಕೊಂಡ ಭಾವನೆಗಳ ಆಳವನ್ನು ತಿಳಿದಿರದ ಅವರಿಗೆÉ ಇದೊದು ಹೊಸ ಅರಿವು! ತಾನೊಬ್ಬ ಬರಹಗಾರ್ತಿಯಾಗಬೇಕೆಂಬ ಆಕೆಯ ಹಂಬಲವನ್ನು ಗೌರವಿಸಬೇಕೆಂದು ಯೋಚಿಸಿ, ಅವಳ ಡೈರಿಯನ್ನು ಪ್ರಕಟಿಸಲು ತೀರ್ಮಾನಿಸುತ್ತಾರೆ.

ಆನ್‍ಳ ಡೈರಿ, ಆಕೆಯ ಆಲೋಚನೆಗಳ ಖಾಸಗಿ ಅಭಿವ್ಯಕ್ತಿಯಾಗಿ ಪ್ರಾರಂಭವಾಯ್ತು. ಅದನ್ನು ಯಾರಿಗೂ ನೋಡಲು ಬಿಡುವುದಿಲ್ಲ ಎಂದು ಆಕೆಯೇ ಅನೇಕ ಬಾರಿ ಬರೆದಿದ್ದಾಳೆ. ಆನ್ ತನ್ನ ಬದುಕು, ಕುಟುಂಬ ಮತ್ತು, ತಮ್ಮ ಪರಿಸ್ಥಿತಿಯ ಬಗ್ಗೆ ಬಿಚ್ಚುಮನಸ್ಸಿನಿಂದ ಡೈರಿಯಲ್ಲಿ ಬರೆದಿದ್ದಳು. “ಯುದ್ಧ ಮುಗಿದ ಮೇಲೆ, ಲೇಖನಗಳು ಮತ್ತು ದಿನಚರಿಗಳನ್ನು ಬಳಸಿಕೊಂಡು, ಡಚ್ ಜನರ ಮೇಲೆ ಜರ್ಮನ್ನರು ನಡೆಸಿದ ದಬ್ಬಾಳಿಕೆಯನ್ನು ಸಾರ್ವಜ£ಕ ದಾಖಲೆಯಾಗಿ ಇಡುತ್ತೇನೆ,” ಎಂದು 1944ರಲ್ಲಿ ಲಂಡನ್‍ನಲ್ಲಿ ದೇಶಭ್ರಷ್ಟ ಡಚ್ ಸರ್ಕಾರದ ಪ್ರತಿನಿಧಿಯಾದ ಗೆರೆಟ್ ಬೊಲ್ಕೆಸ್ಟೈನ್ ಹೇಳಿದ್ದನ್ನು ಆನ್ ಕೇಳಿದ್ದಳು. ಆಂದಿನಿಂದ ತನ್ನ ದಿನಚರಿಯ ಬರವಣಿಗೆಯನ್ನು ಮತ್ತೆ ಪುನರಾವಲೋಕನ ಮಾಡತೊಡಗಿದಳು. ಅವಕಾಶ ಸಿಕ್ಕಾಗ ಅದನ್ನು ಅವರಿಗೆ ತಲುಪಿಸುವ ನಿರ್ಧಾರ ಮಾಡಿದ್ದಳು.

ತಾನು ಸ್ವಲ್ಪಮಟ್ಟಿಗೆ ತಿದ್ದಿದ ಮಗಳ ಡೈರಿಯನ್ನು ಒಟ್ಟೊ ಫ್ರಾಂಕ್, ಚರಿತ್ರಕಾರ್ತಿ ಅನ್ನಿ ರೋಮಿನ್ ವರ್ಸ್‍ಚೂರ್‍ಗೆ ಕೊಟ್ಟರು. ಪ್ರಯತ್ನಪಟ್ಟರೂ ಪ್ರಕಟಿಸಲಾಗದೆ, ಆಕೆ ತನ್ನ ಗಂಡ ಜಾನ್ ರೋಮಿನ್ ಅವರಿಗೆ ಕೊಟ್ಟರು. ಜಾನ್ ರೋಮಿನ್, 1946 ಎಪ್ರಿಲ್ 3ರ “ಹೆಟ್ ಪೆರೋಲ್” ಪತ್ರಿಕೆಯಲ್ಲಿ “ಮಗುವಿನ ಧ್ವನಿ” ಎಂಬ ಲೇಖನ ಪ್ರಕಟಿಸಿದರು. “ನಾಜೀ ಜರ್ಮನಿಯ ವಿಕಟ ಅಟ್ಟಹಾಸವನ್ನು ದಾಖಲೆ ಮಾಡಿದ್ದು ನ್ಯೂರೆಂಬರ್ಗ್ ವಿಚಾರಣೆ. ಅದರಲ್ಲಿ ಈವರೆಗೆ ಒಟ್ಟಾಗಿರುವ ಎಲ್ಲಾ ಪುರಾವೆಗಳನ್ನೂ ಮೀರಿ, ಫ್ಯಾಸಿಸಂನ ಭೀಕರತೆಯನ್ನು ಮಗುವಿನ ಈ ತೊದಲು ನುಡಿ ತೆರೆದಿಡುತ್ತದೆ,” ಎಂದು ಬರೆದರು. ಈ ಬರಹ ಪ್ರಕಾಶಕರ ಗಮನ ಸೆಳೆದು, ಆನ್ ಫ್ರಾಂಕ್ ಡೈರಿ 1947ರಲ್ಲಿ ನೆದರ್ಲ್ಯಾಂಡ್‍ನಲ್ಲಿ ಪ್ರಕಟವಾಯ್ತು. ಅದರ ಪ್ರಸಿದ್ಧಿ ಎಷ್ಟಿತ್ತೆಂದರೆ, 1950ರ ಒಳಗೆ ಮತೈದು ಮುದ್ರಣಗಳನ್ನು ಅದು ಕಂಡಿತು. ಜರ್ಮನಿ ಮತ್ತು ಫ್ರಾನ್ಸ್‍ನಲ್ಲಿ 1950 ರಲ್ಲಿ ಮತ್ತು, ಇಂಗ್ಲೆಂಡ್ ಹಾಗು ಅಮೇರಿಕೆಯಲ್ಲಿ 1952ರಲ್ಲಿ, “ಆನ್ ಫ್ರಾಂಕ್, ಚಿಕ್ಕ ಹುಡುಗಿಯ ದಿನಚರಿ” ಎಂದು ಪ್ರಕಟವಾಯ್ತು. ಫ್ರಾನ್ಸ್, ಜರ್ಮನಿ ಮತ್ತು ಅಮೇರಿಕೆಯಲ್ಲಿ ಯಶಸ್ವಿಯಾದ ಅದು, ಜಪಾನ್‍ನಲ್ಲಿ ಮನೆಮಾತಾಯ್ತ್ತು. ನ್ಯೂಯಾರ್ಕ್‍ನಲ್ಲಿ ಇದನ್ನು ಆಧರಿಸಿ, 1955ರಲ್ಲಿ ಪ್ರದರ್ಶನಗೊಂಡ ನಾಟಕ ಪುಲಿಟ್ಜರ್ ಪ್ರಶಸ್ತಿ ಪಡೆಯಿತು. 1959 ರಲ್ಲಿ ಇದು ಸಿನೆಮಾ ಆಗಿ ಬಂತು.
ಆನ್ ಫ್ರಾಂಕ್‍ನ ಡೈರಿ ಕುರಿತು ಪ್ರಪಂಚದಾದ್ಯಂತ ಪ್ರತಿಕ್ರಿಯೆಗಳು ಬರತೊಡಗಿದವು. ಅಮೇರಿಕಾದ ನಾಟಕಕಾರ ಮೆಯರ್ ಲೆವಿನ್, “ಕಾದಂಬರಿಯ ಉದ್ವೇಗವನ್ನು ಉಳಿಸಿಕೊಂಡ ಅತ್ಯುತ್ತಮ ನಿರ್ವಹಣೆಯ ಡೈರಿ” ಎಂದು ಶ್ಲಾಗಿಸಿದರು. ಅಮೇರಿಕಾ ಅದ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಮಡದಿ, ಎಲೀನರ್ ರೂಸ್ವೆಲ್ಟ್, “ಯುದ್ಧ ಮತ್ತು ಮಾನವನ ಮೇಲೆ ಅದರ ಪರಿಣಾಮ ಕುರಿತ ವಿವೇಕಯುತ ಹಾಗೂ ಸತ್ವಪೂರ್ಣ ವ್ಯಾಖ್ಯಾನ,” ಎಂದು ಬಣ್ಣಿಸಿದರು.
“ದೊಡ್ಡ ಸಂಕಟ ಮತ್ತು ನಷ್ಟದ ಸಮಯದಲ್ಲಿ ಮಾನವನ ಘನತೆಯ ಬಗ್ಗೆ ಇತಿಹಾಸದುದ್ದಕ್ಕೂ ಮಾತನಾಡಿದ ಯಾರ ಧ್ವನಿಯೂ ಆನ್ ಫ್ರಾಂಕ್‍ನ ಧ್ವನಿಯಷ್ಟು ಪ್ರಭಲವಾಗಿಲ್ಲ್ಲ,” ಎಂದು ಅಮೇರಕಾದ ಅಧ್ಯಕ್ಷ್ಷ, ಜಾನ್ ಎಫ್ ಕೆನಡಿ ನುಡಿದರು. ಸೋವಿಂiÀiತ್ ಬರಹಗಾರ ಇಲ್ಯಾ ಎಹ್ರೆನ್ಬರ್ಗ್, “ಋಷಿಮುನಿ ಅಥವಾ ಕವಿಯದಲ್ಲದ ಚಿಕ್ಕ ಸಾಮಾನ್ಯ ಹುಡುಗಿಯ ಒಂದು ಧ್ವನಿ, ಸಂಕಟ ಅನುಭವಿಸಿದ 60 ಲಕ್ಷ ಜನರ ಪರವಾಗಿ ಮಾತಾಡುತ್ತಿದೆ,” ಎಂದು ಉದ್ಗಾರ ತೆಗೆದರು.

ಅಮೇರಿಕೆಯ ಹಿಲರಿ ಕ್ಲಿಂಟನ್, ಕೆಡುಕಿನ ಬಗ್ಗೆ ಜನರಿಗಿರುವ “ಉದಾಸೀನತೆಯ ಮೂರ್ಖತನಕ್ಕೆ ಮತ್ತು ನಮ್ಮ ಎಳೆಯರು ತೆರಬೇಕಾದ ಬೆಲೆಯ ಬಗ್ಗೆ ಎಚ್ಚರಿಸುತ್ತದೆ,” ಎಂದು ಮಾರ್ಮಿಕವಾಗಿ ನುಡಿದರು.
ಆನ್ ಫ್ರಾಂಕ್‍ಳ ಸ್ನೇಹಿತೆ ಮೇಪ್ ಗೀಸ್ ಹೇಳಿದಂತೆ, “ಜರ್ಮನ್ ನರಮೇಧದ 60 ಲಕ್ಷ ಬಲಿಪಶುಗಳನ್ನು ಆನ್ ಸಂಕೇತಿಸುವುದಿಲ್ಲ ಬದಲಾಗಿ, ಅದು 60 ಲಕ್ಷ ಬಾರಿ ಬಂದ ಅವಳ ಬದುಕು-ಸಾವಿನ ವಿಧಿ.” ಟೈಮ್ ಮ್ಯಾಗಜಿನ್ ಜೂನ್ 1999ರಲ್ಲಿ ಪ್ರಕಟಿಸಿದ ಶತಮಾನದ ನೂರು ಪ್ರಮುಖ ವ್ಯಕ್ತಿಗಳಲ್ಲಿ, “ನರಮೇಧ, ಜುಡೈಯಿಸಂ, ಹುಡುಗಾಟಿಕೆ ಹಾಗೂ ಒಳ್ಳೆಯತನವನ್ನೂ ಮೀರಿದ ಆಧುನಿಕ ಪ್ರಪಂಚದ ಚೇತನ” ಎಂದು ಆನ್‍ಳನ್ನು ಕರೆಯಿತು.

ಕೊನೆಗೆ ತಂದೆ ಒಟ್ಟೊ ಫ್ರಾಂಕ್ ಉದ್ಗರಿಸಿದ ರೀತಿ ಇದು: “ಇದೊಂದು ವಿಚಿತ್ರ ಪಾತ್ರ; ಸಾಮಾನ್ಯವಾಗಿ ಗೌರವ ಮತ್ತು ಭಾರವನ್ನು ಹೊರಬೇಕಾದ್ದು ಹೆಸರು ಮತ್ತು ಪ್ರಸಿದ್ಧಿ ಪಡೆದ ಪೋಷಕರ ಮಗು; ಆದರೆ, ಇಲ್ಲಿ ಅದು ತದ್ವಿರುದ್ಧ!”
ಆನ್ ಫ್ರಾಂಕ್ ಒಬ್ಬ ಧೀರೆ. ಏಕೆಂದರೆ ಅಕೆ ತಾಳ್ಮೆ, ನಿಸ್ವಾರ್ಥ ವiತ್ತು ಪ್ರಭಲ ಆಶಾವಾದದ ಪ್ರತೀಕ! ಹಿಟ್ಲರ್‍ನ ಜನಾಂಗದ್ವೇಷದ ಹತ್ಯಾಕಾಂಡದಲ್ಲಿ ಕಗ್ಗೊಲೆಯಾದ 60 ಲಕ್ಷ ಯಹೂದಿಗಳಿಗೆ ಅವರದೇ ಆದ ಮುಖ, ಜೀವನ ಮತ್ತು ವ್ಯಕ್ತಿತ್ವಗಳಿವೆ ಎಂದು ಜಗತ್ತಿಗೆ ತೋರಿದವಳು ಅವಳು!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *