

ಹಿರಿಯ ಲೇಖಕ, ಚಿಂತಕ ರಾಮಚಂದ್ರ ಗುಹಾ ಅವರ ಟ್ವೀಟ್:
ಈಗಾಗಲೇ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯೊಂದು ಅಸ್ತಿತ್ವದಲ್ಲಿರುವಾಗ ಹೊಸ ನಿಧಿಯನ್ನು ಸ್ಥಾಪಿಸುವ ಅಗತ್ಯವಾದರೂ ಏನಿದೆ?
ಅದೂ ಅಲ್ಲದೆ PM-CARES ಎನ್ನುತ್ತ ತನ್ನನ್ನು ತಾನೇ ಉಬ್ಬಿಸಿಕೊಳ್ಳುವಂತೆ ಹೆಸಿರಿಟ್ಟುಕೊಳ್ಳುವುದೇಕೆ? ಒಂದು ಅತಿಕೆಟ್ಟ ರಾಷ್ಟ್ರೀಯ ದುರಂತವನ್ನೂ ವ್ಯಕ್ತಿ ಆರಾಧನೆಗಾಗಿ (ದುರ್ಬಳಕೆ) ಬಳಕೆ ಮಾಡಿಕೊಳ್ಳಬೇಕೇ?
PM-CARES ಒಂದು ಸಾರ್ವಜನಿಕ ದತ್ತಿ ಸಂಸ್ಥೆಯಾಗಿದೆ. ಪ್ರಧಾನ ಮಂತ್ರಿಯು ಅದರ ಅಧ್ಯಕ್ಷರಾಗಿದ್ದು, ದೇಶದ ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಮಂತ್ರಿ ಈ ಸಂಸ್ಥೆಯ ಇತರ ಸದಸ್ಯರಾಗಿರುತ್ತಾರೆ.
ಸಂಸ್ಥೆಯ ಘೋಷಿತ ಧ್ಯೇಯೋದ್ದೇಶ: ಯಾವುದೇ ವಿಧವಾದ ತುರ್ತು ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವುದು ಮತ್ತು ಅದರಿಂದ ಬಾಧಿತರಾದವರಿಗೆ ಪರಿಹಾರ ಒದಗಿಸುವುದು.
ಉದಾಹರಣೆಗೆ ಕೋವಿಡ್-19 ಸಾಂಕ್ರಾಮಿಕ ಸೋಂಕಿನಿಂದ ಉಂಟಾಗಿರುವ ತುರ್ತು ಪರಿಸ್ಥಿತಿ.
ಇದರ ಕುರಿತು ಕೆಲವು ಪ್ರಶ್ನೆಗಳು:
1. ಸಾರ್ವಜನಿಕ ದತ್ತಿ ಸಂಸ್ಥೆಯನ್ನು ರಚಿಸಲು ತೀರ್ಮಾನಿಸಿದ್ದು ಯಾವಾಗ?
2. ಹಾಗೆ ಮಾಡಲೇಬೇಕೆಂಬ ಬಲವಾದ ಕಾರಣಗಳೇನು?
3. ಈಗಾಗಲೇ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಅಸ್ತಿತ್ವದಲ್ಲಿದ್ದರೂ ಹೊಸದಾಗಿ ಸಾರ್ವಜನಿಕ ದತ್ತಿ ಸಂಸ್ಥೆಯೊಂದನ್ನು ಸ್ಥಾಪಿಸುವುದರಿಂದ ಉಂಟಾಗುವ ಪ್ರಯೋಜನಗಳೇನು?
4. ಅದರ ನಿಯಮಾವಳಿಗಳನ್ನು (ಬೈ ಲಾ) ನೋಡಲು/ ಓದಲು ನಮಗೆ ಅವು ಎಲ್ಲಿ ಲಭ್ಯವಾಗುತ್ತವೆ?
5. ಯಾವ ಕಾಯಿದೆಯ ಅಡಿಯಲ್ಲಿ ಈ ಸಂಸ್ಥೆಯನ್ನು ನೋಂದಣಿ ಮಾಡಲಾಗಿದೆ?
6. ಎಲ್ಲಿ ಮತ್ತು ಯಾವಾಗ ಈ ನೋಂದಣಿ ಮಾಡಲಾಯಿತು?
7. ಉಪ-ನೋಂದಣಾಧಿಕಾರಿಯವರು ಪ್ರಧಾನ ಮಂತ್ರಿಯವರ ಮನೆಗೆ ಭೇಟಿ ನೀಡಿದರೇ ಅಥವಾ ಪ್ರಧಾನಿಯವರೇ ಉಪ-ನೋಂದಣಾಧಿಕಾರಿಯವರ ಕಛೇರಿಗೆ ಹೋಗಿ ಬಂದರೇ?
8. ಈ ದತ್ತಿ ಸಂಸ್ಥೆಯ ಸೆಟ್ಲರ್ (ಸಂಸ್ಥೆಯನ್ನು ಪ್ರಾರಂಭಿಸುವವ) / ಅಧ್ಯಕ್ಷ ಯಾರು? – ಭಾರತದ ಪ್ರಧಾನ ಮಂತ್ರಿಯವರೇ ಅಥವಾ ನರೇಂದ್ರ ಮೋದಿಯವರೇ?
9. ಇತರ ಸದಸ್ಯರನ್ನು ಅವರವರ ವ್ಯಕ್ತಿಗತ ಹೆಸರುಗಳಿಂದ ನಾಮಕರಣ ಮಾಡಲಾಗಿದೆಯೋ ಅಥವಾ ಅವರ ಅಧಿಕೃತ ಹುದ್ದೆಗಳ ಮೂಲಕವೋ?
10. PM-CARES ಟ್ರಸ್ಟ್ ಕಛೇರಿ ನೋಂದಣಿಯಾಗಿರುವ ಅಧಿಕೃತ ವಿಳಾಸವೇನು?
11. ಹಾಗಾದರೆ ದೀರ್ಘಕಾಲದಿಂದ ಸಾಂಸ್ಥೀಕರಣಗೊಂಡಿರುವ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡುವ ಬದಲಿಗೆ, ಹೊಸದಾಗಿ ಉದ್ಭವವಾಗಿರುವ ಈ ಸಾರ್ವಜನಿಕ ದತ್ತಿ ನಿಧಿಗೆ ದಾನ ಮಾಡಲು ಅಕ್ಷಯ್ ‘ಕೆನಡಾ’ ಕುಮಾರ್ (ಹಿಂದಿ ಸಿನಿಮಾ ನಟ), ವಿಜಯ್ ‘ಪೇ ಟಿಎಂ’ (ಉದ್ಯಮಿ – Paytm ಕಂಪನಿಯ ಸಂಸ್ಥಾಪಕ), ಜೇ ‘ಬಿಸಿಸಿಐ’ ಶಾ (ಅಮಿತ್ ಶಾ ಪುತ್ರ), ಮುಂತಾದವರು ಒಬ್ಬರ ಮೇಲೊಬ್ಬರು ಬೀಳುತ್ತಿರುವುದಕ್ಕೆ ಕಾರಣವೇನು?
#DeMo (ಡೀಮಾನೆಟೈಸೇಶನ್ – ನೋಟ್ ಅಮಾನ್ಯೀಕರಣ) ದ ಮರುದಿನವೇ Paytm ಜಾಹೀರಾತುಗಳಲ್ಲಿ ಮೋದಿ ಕಾಣಿಸಿಕೊಂಡಿದ್ದನ್ನು ಮರೆತಿದ್ದೀರೇನು?
– Translated by Com. Jyothi. A

