ಮೋದಿ ಭಾಷಣದಲ್ಲಿದ್ದ ಮೂರು ಮಹಾ ಸುಳ್ಳುಗಳು : ಶಿವಸುಂದರ್‌

ಮೋದಿಯವರು ಲಾಕ್‌ಡೌನ್‌ ವಿಸ್ತರಿಸುವ ಕುರಿತು ಮಾಡಿದ ಭಾಷಣದಲ್ಲಿನ ತಪ್ಪುಗಳನ್ನು ಶಿವಸುಂದರ್‌ರವರು ಗುರುತಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಸಮಾಜಮುಖಿ ಓದುಗರಿಗಾಗಿ ಇಲ್ಲಿ ಮತ್ತೆ ಪ್ರಕಟಿಸಲಾಗಿದೆ.By ಶಿವಸುಂದರ್‌ | Date -April 15, 2020

ನಿನ್ನೆ ಮೋದಿಯವರು ಮಾಡಿದ ಭಾಷಣದಲ್ಲಿ ಅನಿವಾರ್ಯವಾಗಿದ್ದ ಲಾಕ್‌ಡೌನ್‌ ವಿಸ್ತರಣೆಯನ್ನು ಮಾತ್ರ ಘೋಷಿಸಿದ್ದಲ್ಲದೆ ತಮ್ಮ ಸರ್ಕಾರಕ್ಕಿಂತ ಉತ್ತಮವಾಗಿ ಕೋವಿಡ್ ಬಿಕ್ಕಟ್ಟನ್ನು ನಿರ್ವಹಣೆ ಮಾಡಲು ಸಾಧ್ಯವೇ ಇರಲಿಲ್ಲವೆಂದು ಕೊಚ್ಚಿಕೊಳ್ಳಲು ಕೂಡ ಬಳಸಿಕೊಂಡರು.

ಅದನ್ನು ಸಾಬೀತುಮಾಡಲು ಎಂದಿನಂತೆ ಅರ್ಧ ಸುಳ್ಳೂ ಹಾಗು ಅರ್ಧ ಸತ್ಯಗಳಿರುವ ಕಾಕ್ಟೈಲ್ ಮಾಹಿತಿಯನ್ನು ನೀಡಿದರು. ಈ ಟಿಪ್ಪಣಿಯಲ್ಲಿ ಮೋದಿಯವರ ಭಾಷಣದಲ್ಲಿದ್ದ ಮೂರೂ ಮಹಾಸುಳ್ಳುಗಳ ಬಗ್ಗೆ ಮಾತ್ರ ನಿಮ್ಮ ಗಮನ ಸೆಳೆಯಲು ಇಚ್ಚಿಸುತ್ತೇನೆ.

ಮೋದಿಯವರ ಪ್ರಕಾರ ಮಾರ್ಚ್ 24ರಂದು ಭಾರತವು ಲಾಕ್‌ಡೌನ್‌ ಘೋಷಿಸಿದಾಗ ತಮ್ಮ ದೇಶದಷ್ಟೇ ಕೋವಿಡ್ ಬಾಧಿತರನ್ನು ಹೊಂದಿದ್ದ ದೇಶಗಳು ಇದೀಗ ಅಳತೆಮೀರಿದಷ್ಟು ಆಪತ್ತನ್ನು ಎದುರಿಸುತ್ತಿದ್ದಾರೆ. ಆದರೆ ಭಾರತವು ಮಾರ್ಚ್ 24ರಂದು ಕೈಗೊಂಡ ಲಾಕ್‌ಡೌನ್‌ ಕ್ರಮದಿಂದಾಗಿಯೇ ಸಂದರ್ಭದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಿದೆ.

ಇದು ಅರ್ಧ ಸತ್ಯ. ಅರ್ಧ ಸುಳ್ಳು.

ಮೊದಲು ಅರ್ಧ ಸತ್ಯದ ಭಾಗವನ್ನೇ ನೋಡೋಣ. ಮಾರ್ಚ್ 24ಕ್ಕೆ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 536.. ಆಗ ಅಮೇರಿಕಾದಲ್ಲಿ 55,222 ಸೋಂಕಿತರು ಪತ್ತೆಯಾಗಿದ್ದರೆ ಇವತ್ತು ಅಮೇರಿಕಾದಲ್ಲಿ ಕೋವಿಡ್ ಸೋಂಕಿತರಿಗೆ ಒಳಗಾದವರ ಸಂಖ್ಯೆ 7 ಲಕ್ಷವನ್ನು ದಾಟಿದೆ.

ಮಾರ್ಚ್ 24ಕ್ಕೆ ಬ್ರಿಟನಿನಲ್ಲಿ 8022 ಸೋಂಕಿತರು ಪತ್ತೆಯಾಗಿದ್ದರೆ ಇಂದು ಆ ಸಂಖ್ಯೆ 93,873ನ್ನು ಮುಟ್ಟಿದೆ. ಜರ್ಮನಿಯಲ್ಲಿ 30,000 ಇದ್ದದ್ದು ಇವತ್ತು1,30,000ವನ್ನು ಮುಟ್ಟಿದೆ.

ಇದು ಒಂದು ಬಗೆಯ ಸೆಲೆಕ್ಟಿವ್ ಸತ್ಯ.

ಏಕೆಂದರೆ ಭಾರತದ ಹಲವಾರು ನೆರೆಹೊರೆ ದೇಶಗಳು ಮಾರ್ಚ್ 24ರ ವೇಳೆಗೆ ನಮಗಿಂತ ಹೆಚ್ಚಿನ ಸೋಂಕಿತರನ್ನು ಹೊಂದಿದ್ದರು ಸಹ ಕೋವಿಡ್ ಸಾಂಕ್ರಾಮಿಕವನ್ನು ನಮಗಿಂತ ಪರಿಣಾಮಕಾರಿಯಾಗಿ ನಿಷೇಧಿಸಿದ್ದಾರೆ. ಉದಾಹರಣೆಗೆ:

ಮಾರ್ಚ್ 24ಕ್ಕೆ ಭಾರತವು ಲಾಕ್‌ಡೌನ್‌ ಮಾಡಿದಾಗ ಭಾರತದಲ್ಲಿ ಸೋಂಕಿತರ ಸಂಖ್ಯೆ 536. ಇಂದು (ಏಪ್ರಿಲ್ -15ಕ್ಕೆ )ಅದು 11,487ನ್ನು ಮುಟ್ಟಿದೆ.

ಮಲೇಷಿಯಾದಲ್ಲಿ ಮಾರ್ಚ್ 24ಕ್ಕೆ ಸೋಂಕಿತರ ಸಂಖ್ಯೆ ಭಾರತದ ಮೂರೂ ಪಟ್ಟು ಅಂದರೆ 1624ರಷ್ಟಿತ್ತು. ಆದರೆ ಇಂದು -ಏಪ್ರಿಲ್ 15ಕ್ಕೆ ಅದು ಕೇವಲ 4957ರಷ್ಟು ಮಾತ್ರ. ಅಂದರೆ ಭಾರತದ ಇಂದಿನ ಸಂಖ್ಯೆಯ ಅರ್ಧಕ್ಕಿಂತ ಕಡಿಮೆ..

ಇಂಡೋನೇಷಿಯಾದಲ್ಲಿ ಮಾರ್ಚ್ 24ಕ್ಕೆ ಸೋಂಕಿತರ ಸಂಖ್ಯೆ 686. ಭಾರತಕ್ಕಿಂತ ಜಾಸ್ತಿ.
ಆದರೆ ಇಂದು ಅಲ್ಲಿ ಸೋಂಕಿತರ ಸಂಖ್ಯೆ 4838ನ್ನು ದಾಟಿಲ್ಲ. ಅಂದರೆ ಭಾರತದ ಸೋಂಕಿತರ ಶೇ.40 ಭಾಗ ಮಾತ್ರ.

ಥೈಲೆಂಡಿನಲ್ಲಿ ಸೋಂಕಿತರ ಸಂಖ್ಯೆ ಮಾರ್ಚ್ 24ಕ್ಕೆ ಭಾರತಕ್ಕಿಂತ ಜಾಸ್ತಿ ಅಂದರೆ 837 ಇತ್ತು. ಇಂದು ಅಲ್ಲಿ ಸೋಂಕಿತರ ಸಂಖ್ಯೆ ಕೇವಲ 2643.. ಅಂದರೆ ಭಾರತದ ಕಾಲು ಭಾಗವು ಇಲ್ಲ.

ಹೇಗೆ? ಏಕೆ?

ಅದೇ ರೀತಿ ಸಿಂಗಾಪುರದಲ್ಲಿ ಮಾರ್ಚ್ 24ರಂದು ಕೋವಿಡ್ ಸೋಂಕಿತರ ಸಂಖ್ಯೆ 558. ಆದರೆ ಇಂದು ಕೇವಲ 3252…

ಈ ಸತ್ಯಗಳನ್ನೇಕೆ ಮೋದಿಯವರು ಹೇಳಲಿಲ್ಲ. ಹೇಳುವುದಿಲ್ಲ?

ವಿಯೆತ್ನಾಮ್- ಮಾರ್ಚ್ 24ಕ್ಕೆ 134. ಆದರೆ ಈಗ ಕೇವಲ 267… ಭಾರತಡ ಕೇವಲ ಶೇ. 1 ಭಾಗ ಮಾತ್ರ…

ಇನ್ನು ದಕ್ಷಿಣ ಕೊರಿಯಾದ ಕಥೆಯಂತೂ ರೋಚಕ.

ಮಾರ್ಚ 24 ಅಲ್ಲಿ ಸೋಂಕಿತರ ಸಂಖ್ಯೆ ಭಾರತಕ್ಕಿಂತ 20 ಪಟ್ಟು ಜಾಸ್ತಿ ಇತ್ತು. ಅಂದರೆ 9,037.. ಅದು ಒಂದು ಹಂತದಲ್ಲಿ 11,000 ವನ್ನು ದಾಟಿತ್ತು. ಆದರೆ ಇವತ್ತು ಅಲ್ಲಿ ಸೋಂಕಿತರ ಸಂಖ್ಯೆ ಭಾರತಕ್ಕಿಂತ ಕಡಿಮೆ … 10,591 ಮತ್ತು ಅಲಿ ಹೊಸ ರೋಗಿಗಳ ಹಾಗು ಸಾವಿನ ಪ್ರಮಾಣ ಭಾರತಕ್ಕಿಂತ ಬಹುಪಾಲು ಕಡಿಮೆಯಾಗಿಬಿಟ್ಟಿದೆ..

ಹಾಗೆ ನೋಡಿದರೆ ಕೊರಿಯಾದಲ್ಲಿ ಲಾಕ್‌ಡೌನ್‌ ಕೂಡ ಮಾಡಿಲ್ಲ. ಬದಲಿಗೆ ಅವರು ಚುನಾವಣೆಗೆ ತಯಾರಾಗುತ್ತಿದ್ದಾರೆ.

ನಮಗಿಂತ ಬಡವಾಗಿರುವ ಈ ಪೂರ್ವದ ದೇಶಗಳು ಅದರಲ್ಲೂ ವಿಶೇಷವಾಗಿ ಕೊರಿಯಾ ಮಾಡಿದ್ದೇನು ಮತ್ತು ನಾವು ಮಾಡದೆ ಇರುವುದೇನು?

ಈ ಪ್ರಶ್ನೆಯನ್ನು ಹಾಕಿಕೊಂಡರೆ ಇಂದು ನಮ್ಮ ದೇಶಕ್ಕೆ ಬೇಕಿರುವ ಉತ್ತರವೂ ಸಿಗುತ್ತದೆ. ಅದರ ಬದಲಾಗಿ ನಮ್ಮ ಸುಳ್ಳುಗಳಿಗೆ ನಾವೇ ಬಲಿಯಾಗುತ್ತಾ ಹೋದರೆ ಯಾರು ನಮ್ಮನ್ನು ಕಾಪಾಡಲಾರರು.

ಮೊದಲಿಗೆ ಈಗಾಗಲೇ ಸಾಬೀತಾಗಿರುವಂತೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಈಗಿರುವುದಕ್ಕಿಂತ ಎಷ್ಟೋ ಪಾಲು ಹೆಚ್ಚಿರುವ ಸಾಧ್ಯತೆ ಜಾಸ್ತಿ. ಏಕೆಂದರೆ ಪರೀಕ್ಷೆಗಳು ಹೆಚ್ಚಾಗಿ ನಡೆದರೆ ಸೋಂಕಿತರ ಸಂಖ್ಯೆಯು ಹೆಚ್ಚಗುತ್ತದೆ. ಇಡೀ ಜಗತ್ತಿನಲ್ಲೇ ಭಾರತದಲ್ಲಿ ಅತ್ಯಂತ ಕಡಿಮೆ ಪರೀಕ್ಷೆಗಳು ನಡೆಯುತ್ತವೆ.

ಉದಾಹರಣೆಗೆ ಅಮೇರಿಕಾದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 8000 ಜನರಿಗೆ, ಇಟಲಿಯಲ್ಲಿ 17000 ಜನರಿಗೆ, ದ . ಕೊರಿಯಾದಲ್ಲಿ 6000 ಜನರಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದೆ ಪ್ರಮಾಣವು ಯೂರೋಪಿನ ಇತರ ದೇಶಗಳಲ್ಲೂ ನಡೆಯುತ್ತದೆ. ಆ ದೇಶಗಳಲ್ಲಿ ಸೋಂಕು ಪತ್ತೆ ಹೆಚ್ಚಗಿರುವುದಕ್ಕೂ ಇದೆ ಕಾರಣ .

ಆದರೆ ನಮ್ಮ ದೇಶದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ ಕೇವಲ 160 ಪರೀಕ್ಷೆಗಳುನಡೆಯುತ್ತವೆ. (ಅದು ಕೂಡ ವಿಶೇಷವಾಗಿ ತಬ್ಲಿಘಿ ಕೇಂದ್ರಿತ ಪ್ರದೇಶಗಳಲ್ಲಿ ಪರೀಕ್ಷೆ ನಡೆಸಲು ಇರುವ ಉತ್ಸಾಹ ಇತರೆಡೆ ನಡೆಸಲು ಇರುವುದಿಲ್ಲ). ಆದ್ದರಿಂದ ಭಾರತದಲ್ಲಿ ಸೋಂಕಿತರ ಸಂಖ್ಯೆ ಎಷ್ಟೋ ಪಾಲು ಹೆಚ್ಚಿರುವ ಸಾಧ್ಯತೆ ಇದೆ.

– ಎರಡನೆಯದಾಗಿ ಸಕಲ ಸಮಸ್ಯೆಗಳಿಗೂ ಲಾಕ್‌ಡೌನ್‌ ಉತ್ತರವಾಗಲಾರದು. ಲಾಕ್‌ಡೌನ್‌ ಸಂದರ್ಭವನ್ನು ಬಳಸಿಕೊಂಡು ಅತಿ ಹೆಚ್ಚು ಟೆಸ್ಟ್‌ಗಳನ್ನು ನಡೆಸಿ, ಸೋಂಕಿತರನ್ನ ಬೇರ್ಪಡಿಸಿ ಕ್ವಾರಂಟೈನ್ ಮಾಡಿ ಆರೈಕೆ ಮಾಡುವ ಸಿದ್ದತೆಯನ್ನು ಮಾಡಿಕೊಳ್ಳಬೇಕು. ಅದಕ್ಕೆ ಮುಂಚೆ ಸೋಂಕಿನ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ವೈದ್ಯಕೀಯ ಸಿದ್ಧತೆಗಳನ್ನು ಅಂದರೆ ಪರೀಕ್ಷಾ ಕಿಟ್, ಆಸ್ಪತ್ರೆ, ಪಿಪಿಇ ಗಳನ್ನು ಒಟ್ಟು ಮಾಡಿಕೊಳ್ಳಬೇಕು.

ಆದರೆ ಮೋದಿ ಸರ್ಕಾರ ಮಾಡಿದ್ದೆ ಬೇರೆ!

ವಿಶ್ವ ಆರೋಗ್ಯ ಸಂಸ್ಥೆ ಜನವರಿ 30ಕ್ಕೆ ಅಂದರೆ ಭಾರತದಲ್ಲಿ ಮೊದಲ ಪ್ರಕರಣ ಪತ್ತೆಯಾದಾಗಲೇ ಕೋವಿಡ್ ಅನ್ನು “ಜಾಗತಿಕ ಆರೋಗ್ಯ ತುರ್ತು ಸ್ಥಿತಿ”ಯೆಂದು ಘೋಷಿಸಿತ್ತು. ಹಾಗು ಮಾರ್ಚ್ 13ಕ್ಕೆ “ಜಾಗತಿಕ ಸಾಂಕ್ರಾಮಿಕ” ಎಂದು ಅದನ್ನು ಅಪಡೇಟ್ ಮಾಡಿತು.

ಆದರೆ ಭಾರತವು ಮಾರ್ಚ್ 13ರ ವೇಳೆಗೂ, ಆ ವೇಳೆಗಾಗಲೇ 83 ಸೋಂಕಿತರು ಪತ್ತೆಯಾಗಿದ್ದರು ಆರೋಗ್ಯ ತುರ್ತಿಸ್ಥಿತಿಯಲ್ಲವೆಂದೇ ಪರಿಗಣಿಸಿತ್ತು. ಹೀಗಾಗಿ ತನಗೆ ಬೇಕಾಗುವ ವೈದ್ಯಕೀಯ ಅಗತ್ಯಗಳನ್ನು ಸಂಗ್ರಹಿಸಿಕೊಳ್ಳುವುದರಲ್ಲಿ ಅತ್ಯಂತ ಬೇಜವಾಬ್ದಾರಿ ಮಾಡಿತು.

ತನಗೆ ಬೇಕಿರುವ ಕಿಟ್ ಹಾಗು ಪಿಪಿಇ ಗಳಿಗಾಗಿ ಅದು ಮೊದಲ ಆರ್ಡರ್ ಮುಂದಿಟ್ಟಿದ್ದೆ ಮಾರ್ಚ್ 7ಕ್ಕೆ. ಮಾರ್ಚ್ 30ಕ್ಕೆ ಚೀನಾ ನಮಗೆ ಕೊಡುಗೆಯಾಗಿ ಕೊಟ್ಟ ಕಿಟ್, ಮಾಸ್ಕ್ ಮತ್ತು ಪಿಪಿಐಗಳನ್ನು ದೇಶಾದ್ಯಂತ ಹಂಚಬೇಕಾಯಿತು. ಮಾರ್ಚ್ 31ರಷ್ಟು ತಡವಾಗಿ ಅಗತ್ಯವಿರುವಷ್ಟು ಪಿಪಿಇ ಮತ್ತು ಕಿಟ್ ಗಳನ್ನು ಸರಬರಾಜು ಮಾಡಲು ಚೀನಾಗೆ ಕೇಳಿದ್ದೇವೆ. ಅದು ಭಾರತವನ್ನು ತಲುಪಲು ಇನ್ನು ಹತ್ತು ಹನ್ನೆರಡು ದಿನಗಳಾದರೂ ಬೇಕು.. ಒಮ್ಮೆ ಕಿಟ್‌ಗಳು ದೊರೆತು ಪರೀಕ್ಷೆಗಳು ಹೆಚ್ಚುತ್ತಿದ್ದಂತೆ ಸೋಂಕಿತರ ಸಂಖ್ಯೆಯೂ ತೀವ್ರವಾಗಿ ಹೆಚ್ಚುತ್ತದೆ.

ಇದು ಸರ್ಕಾರದ ಬೇಜವಾಬ್ದಾರಿತನವಲ್ಲದೆ ಬೇರೇನೂ ಅಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ದ . ಕೊರಿಯಾ ತಮ್ಮ ದೇಶದಲ್ಲಿ ಫೆಬ್ರವರಿಯ ಮೊದಲ ಭಾಗದಲ್ಲಿ 31ನೇ ಪ್ರಕರಣ ಪತ್ತೆಯಾದೊಡನೆಯೇ ವಿಶೇಷವಾದ ಪರೀಕ್ಷೆಗಳನ್ನೂ ನಡೆಸಿ, ತೀವ್ರವಾದ ಪರೀಕ್ಷೆ, ಪತ್ತೆ, ಬೇರ್ಪಡಿಕೆ, ಆರೈಕೆಗಳೆಂಬ ಕ್ರಮಗಳನ್ನು ಕೈಗೊಂಡಿತು. ಈವರೆಗೆ ಆ ದೇಶದಲ್ಲಿ ನಮ್ಮ ದೇಶದಲ್ಲಿ ನಡೆಯುತ್ತಿರುವ ಲಾಕ್‌ಡೌನ್‌ ಆಗಿಲ್ಲ.

– ಇವೆಲ್ಲಕ್ಕಿಂತ ಹೆಚ್ಚಾಗಿ ಮೋದಿ ಸರ್ಕಾರ ಮಾಡಿದ ಮತ್ತೊಂದು ದೊಡ್ಡ ಬೇಜವಾಬ್ದಾರಿ ಒಂದಿದೆ.

ಭಾರತದಲ್ಲಿ ಮೊದಲ ಪ್ರಕರಣ ಪತ್ತೆಯಾದದ್ದು ಜನವರಿ 30ರಂದು. ಫೆಬ್ರವರಿ 14ರಂದು ಭಾರತವು ಚೀನಾ, ಥೈಲೆಂಡ್, ಹಾಂಕಾಂಗ್, ವಿಯೆತ್ನಾಮ್ , ನೇಪಾಳ ಮತ್ತು ಸಿಂಗಪುರ ದೇಶಗಳಿಂದ ಬಂದ ಪ್ರಯಾಣಿಕರನ್ನು ಮಾತ್ರ ಸ್ಕ್ರೀನಿಂಗ್ ಮಾಡಲು ಪ್ರಾರಂಭಿಸಿತು. ಆದರೆ ಆ ದೇಶಗಳಲ್ಲಿ ಆಗ ಸೋಂಕಿತರ ಸಂಖ್ಯೆ 50 ನ್ನು ದಾಟಿರಲಿಲ್ಲ.ನೇಪಾಳದಲ್ಲಂತೂ ಕೇವಲ ಒಬ್ಬರು ಪತ್ತೆಯಾಗಿದ್ದರು. ಈಗಲೂ ಅಲ್ಲಿ ಸೋಂಕಿತರ ಸಂಖ್ಯೆ 16ದಾಟಿಲ್ಲ. ಆದರೂ ಅಲ್ಲಿಂದ ಬರುವವರನ್ನು ಸ್ಕ್ರೀನಿಂಗ್ ಮಾಡಲಾಯಿತು. ಒಳ್ಳೆಯದೇ.

ಮಾರ್ಚ್ 7 ರಿಂದ ಈ ದೇಶಗಳ ಮತ್ತು ಇನ್ನು ಕೆಲವು ದೇಶಗಳಿಂದ ಬರುವ ಪ್ರಯಾಣಿಕರನ್ನು ಟೆಸ್ಟಿಂಗ್ ಮತ್ತು ಕ್ವಾರಂಟೈನ್‌ಗೆ ಗುರಿಪಡಿಸಿತು. ಅದರಲ್ಲೂ ತಪ್ಪಿಲ್ಲ. ಆದರೆ ಆ ಸಮಯದಲ್ಲೂ ಈ ವರ್ಗದ ದೇಶಗಳಲ್ಲಿ ಸೋಂಕಿತರ ಪ್ರಮಾಣ 500 ದಾಟಿರಲಿಲ್ಲ.

ಆದರೆ ಫೆ. 24ರಂದು ಅಮೇರಿಕದ ಟ್ರಾಂಪ್ ಭಾರತಕ್ಕೆ ಬಂದಾಗ ಅಲ್ಲಿ ಆ ವೇಳೆಗಾಗಲೇ 53 ಸೋಂಕಿತರು ಪತ್ತೆಯಾಗಿದ್ದರು. ಮಾರ್ಚ್ 7ರ ವೇಳೆಗೆ ಅಮೇರಿಕಾದಲ್ಲಿ ಸೋಂಕಿತರ ಸಂಖ್ಯೆ 500 ದಾಟಿತ್ತು. ಹಾಗು ಅಂತಿಮವಾಗಿ ಮಾರ್ಚ್ 19 ರಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ಭಾರತವು ಸಂಪೂರ್ಣ ಬಂದ್ ಮಾಡುವ ವೇಳೆಗೆ ಅಮೇರಿಕಾದಲ್ಲಿ ಸೋಂಕಿತರ ಸಂಖ್ಯೆ 55,000 ದಾಟಿಬಿಟ್ಟಿತ್ತು.

ಆದರೂ ಭಾರತವು ಇತರ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಅಮೆರಿಕಕ್ಕಿಂತ ಕಡಿಮೆ ಇದ್ದರು ಅಲ್ಲಿಂದ ಬಂದ ಪ್ರಯಾಣಿಕರನ್ನು ಟೆಸ್ಟಿಗೆ ಗುರಿ ಮಾಡಿದ ರೀತಿಯಲ್ಲಿ ಅಮೇರಿಕಾದ ಅಥವಾ ಯೂರೋಪಿನ ಇತರ ದೇಶಗಳ ಪ್ರಯಾಣಿಕರನ್ನು ಪ್ರಾರಂಭದಲ್ಲಿ ಟೆಸ್ಟಿಂಗ್‌ ಇರಲಿ, ಸ್ಕ್ರೀನಿಂಗಿಗೂ ಒಳಪಡಿಸಲಿಲ್ಲ.

ಇಂದು ಭಾರತ ಸರ್ಕಾರದ ಅಂಕಿಅಂಶದ ಪ್ರಕಾರ ಜನವರಿ ಮಧ್ಯದಿಂದ ಮಾರ್ಚ್ 24ರ ತನಕ ಭಾರತಕ್ಕೆ ವಿದೇಶದಿಂದ 15 ಲಕ್ಷ ಜನ ಪ್ರಯಾಣ ಮಾಡಿದ್ದಾರೆ. ಅಂತರರಾಷ್ಟ್ರೀಯ ವೈಮಾನಿಕ ಟ್ರಾಫಿಕ್ ಅಂಕಿಅಂಶಗಳ ಪ್ರಕಾರ ಅದರಲ್ಲಿ ಶೇ. 20ರಷ್ಟು ಜನ ಅಮೆರಿಕದಿಂದ ಭಾರತಕ್ಕೆ ಬಂದವರೆ ಆಗಿರುತ್ತಾರೆ..

ಅಂದರೆ ಕೊರೋನಾ ಅವಧಿಯಲ್ಲಿ ಅಮೆರಿಕದಿಂದ ಭಾರತಕ್ಕೆ ಬಂದ ಅಂದಾಜು 3 ಲಕ್ಷ ಜನರಿಗೆ ಭಾರತವು ಟೆಸ್ಟ್ ಮಾಡುವುದಿರಲಿ ಸ್ಕ್ರೀನಿಂಗ್ ಕೂಡ ಮಾಡದೆ ಒಳಬಿಟ್ಟುಕೊಂಡಿದೆ. ಅವರು ತಮ್ಮ ಇಚ್ಛಾನುಸಾರವಾಗಿ ನಗರ, ಪಟ್ಟಣಗಳಲ್ಲಿ ತಿರುಗಾಡಿಕೊಂಡಿದ್ದಾರೆ. ಇವರು ಹೆಚ್ಚಿಸಿರಬಹುದಾದ ಸೋಂಕು ತಬ್ಲಿಘಿನವರು ಹಚ್ಚಿಸಿರಬಹುದಾದ ಸೋಂಕಿಗಿಂತ ಎಷ್ಟೋ ಪಟ್ಟು ಹೆಚ್ಚಿರಲಿಕ್ಕೂ ಸಾಕು..

ಅದನ್ನು ಮುಚ್ಚಿ ಹಾಕಲೆಂದೇ ತಬ್ಲಿಘಿ ಬೇಜವಾಬ್ದಾರಿಯನ್ನು ಭೂತ ಮಾಡಿ ತೋರಿಸಲಾಗುತ್ತಿದೆ. ಮೋದಿಯವರ ಭಾಷಣದಲ್ಲೂ ಅದರ ಬಗ್ಗೆ ಒಂದು ಮಾತಿನ ಕ್ಷಮೆಯೂ ಇರುವುದಿಲ್ಲ.

ಮೋದಿ ಸರ್ಕಾರ ಮಾಡಿರುವ ಈ ಮೂರನೇ ಬೇಜವಾಬ್ದಾರಿ ಅತಿ ದೊಡ್ಡ ದೇಶದ್ರೋಹವು ಹೌದು.. ಅಲ್ಲವೇ?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *