ಭಟ್ಕಳದಲ್ಲಿ ಕರೋನಾ ಗೆದ್ದ ಕತೆ ಗೊತ್ತಾ? no more lock down -dc harish kumar

ಭಟ್ಕಳವೆಂದರೆ…

ನಡುಗುವಂತಹ ಪ್ರಚಾರ ಪಡೆದಿದ್ದ ಭಟ್ಕಳಕ್ಕೆ ಮೊದಮೊದಲು ಕರೋನಾ ವಕ್ಕರಿಸಿದ್ದು ಕಾಕತಾಳೀಯ. ಆದರೆ ಅಲ್ಲಿಯ ಕರೋನಾ ಗೆದ್ದ ಕತೆಇದೆಯಲ್ಲ ಅದು ಜಿಲ್ಲಾಡಳಿತದ ಸಾಹಸವೇ ಸರಿ.
ಹೌದು, ಹೆಚ್ಚುಜನ ವಿದೇಶದಲ್ಲಿರುವ ಭಟ್ಕಳದಲ್ಲಿ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಕರೋನಾ ಸೋಂಕು ದೃಢಪಡುತಿದ್ದಂತೆ ಉತ್ತರಕನ್ನಡ ಜಿಲ್ಲೆಯೇನು, ರಾಜ್ಯಕ್ಕೆ ರಾಜ್ಯವೇ ದಂಗುಬಡಿದಿತ್ತು. ಹೀಗೆ ರಾಜ್ಯದ ಜನರನ್ನು ದಂಗುಬಡಿಸುವಂತೆ ಭಟ್ಕಳದಲ್ಲಿ ಕೋವಿಡ್ 19 ರುದ್ರನರ್ತನ ನಡೆದಿತ್ತು.

ಪ್ರಾರಂಭದಲ್ಲಿ ವಿದೇಶದಿಂದ ಬಂದವರು ಭಟ್ಕಳಕ್ಕೆ ಕರೋನಾ ಸೋಂಕು ತಂದರು.ನಂತರ ಮಂಗಳೂರಿನ ಆಸ್ಫತ್ರೆಗೆ ಹೋದವರು ಕರೋನಾ ಪೀಡಿತರಾದರು, ಉಳಿದಂತೆ ವಿದೇಶದಿಂದ ಬಂದ ಬಹುತೇಕರಲ್ಲಿ ಕರೋನಾ ದೃಢ ಪಟ್ಟಿದ್ದೇ, ಪಟ್ಟಿದ್ದು. ಮಕ್ಕಳು, ವೃದ್ಧರು ಅವರಿವರೆನ್ನದೆ ವಯಸ್ಸು, ಲಿಂಗಬೇಧ ವಿಲ್ಲದೆ ಭಟ್ಕಳದಲ್ಲಿ ಸೋಕುದೃಢ ಪಡತೊಡಗಿದಂತೆ ಉತ್ತರ ಕನ್ನಡಕ್ಕೆ ಕೆಟ್ಟ ಹೆಸರು,ಜಿಲ್ಲಾಡಳಿತಕ್ಕೆ ದೊಡ್ಡ ಜವಾಬ್ಧಾರಿ, ಸುತ್ತತೊಡಗಿತ್ತು.

ಜಿಲ್ಲಾಧಿಕಾರಿ ಹರೀಶ್ ಕುಮಾರ ಕೆ., ಜಿ.ಪಂ. ಮುಖ್ಯ ಕಾರ್ಯದರ್ಶಿ ಮಹಮದ್ ರೋಶನ್ ಭಟ್ಕಳದ ಕರೋನಾ ತೊಂದರೆಯನ್ನು ಸವಾಲಾಗಿ ತೆಗೆದುಕೊಂಡರು. ಬರೋಬ್ಬರಿ 70 ದಿವಸಗಳ ಕಾಲ ಭಟ್ಕಳದಲ್ಲಿ ಒಂದೆರಡು ಕಡೆ ಕಂಟೇನ್‍ಮೆಂಟ್ ಮಾಡಲಾಯಿತು. ಒಂದೊಂದೇ ಕೇಸು ಭಟ್ಕಳದಿಂದ ಕಾರವಾರಕ್ಕೆ ಚಿಕಿತ್ಸೆಗೆ ಸಾಗತೊಡಗಿದಂತೆ ಇವರೆಲ್ಲಾ ಮರಳಿ ಬರುತ್ತಾರೆಯೆ? ಎನ್ನುವ ಪ್ರಶ್ನೆ ಸ್ಥಳೀಯರಲ್ಲಿತ್ತು.

ಆದರೆ, ಭಟ್ಕಳದ ಮುಕ್ಕಾಲುಶತಕ ಕರೋನಾ ಪೀಡಿತರಲ್ಲಿ ಈಗ ಬಹುತೇಕ ಎಲ್ಲರೂ ಗುಣಮುಖರಾಗಿದ್ದಾರೆ. ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ ಕೆ. ಅವರ ಮಾತಿನಲ್ಲೇ ಕೇಳಬೇಕೆಂದರೆ….
ನಾವು ಭಟ್ಕಳದ ಕರೋನಾ ವಿಷಯವನ್ನು ಸವಾಲಾಗಿ ತೆಗೆದುಕೊಂಡೆವು. ರಾಜ್ಯದಲ್ಲಿ ಮೊಟ್ಟ ಮೊದಲು ಸಂಪೂರ್ಣ ಸಮೀಕ್ಷೆ ನಡೆಸಿದೆವು. ನಂತರ ಚಿಕಿತ್ಸೆ, ಕರೋನಾ ಸೋಂಕು ವಿಸ್ತರಿಸದಂತೆ ಮುಂಜಾಗ್ರತೆ ವಹಿಸಿದೆವು. ಈ ನಾಲ್ಕು ತಿಂಗಳುಗಳಲ್ಲಿ ಭಟ್ಕಳ ತನ್ನ ಪರಿಸ್ಥಿತಿಯನ್ನೇ ಬದಲಿಸುವ ಅಪಾಯವಿತ್ತು. ಆದರೆ ಎಲ್ಲವೂ ಸರಳವಾಗಿಯೇ ನಡೆಯಿತು. ನಾವು ಸ್ಥಳೀಯರು,ಕೋವಿಡ್ ಕಾರ್ಯಕರ್ತರ ನೆರವಿನಿಂದ ಅಪಾಯದಿಂದ ಪಾರಾದೆವು.
…..ಹೀಗೆ ಕರೋನಾ ಪೀಡಿತ ತಾಲೂಕು, ಕೇಂದ್ರವಾಗಬೇಕಿದ್ದ ಭಟ್ಕಳ ಈಗ ಕರೋನಾ ಗೆದ್ದ ತಾಲೂಕಾಗಿದೆ. ಇದೇ ರೀತಿ ಜಿಲ್ಲೆ, ರಾಜ್ಯ ದೇಶದಲ್ಲಿ ತಿಳುವಳಿಕೆ,ಮುಂಜಾಗ್ರತೆ, ಜವಾಬ್ಧಾರಿ, ಸಮೂದಾಯದ ಸಹಭಾಗಿತ್ವದಿಂದ ಕರೋನಾ ಗೆಲ್ಲಬಹುದು.

ಸಿದ್ಧಾಪುರದಂಥ ಮಲೆನಾಡಿನ ಸುಂದರ ಪರಿಸರದಲ್ಲಿ ಕರೋನಾ ವಿರುದ್ಧ ಜಯಿಸದಿದ್ದರೆ ಜಗತ್ತಿನಲ್ಲೇಲ್ಲೂ ಕೋವಿಡ್ ನಿಂದ ಬಚಾವಾಗುವುದು ಕಷ್ಟ.
ಹಾಗಾಗಿ ಸಾಮೂಹಿಕ, ಸಾಮೂದಾಯಿಕ ಜವಾಬ್ಧಾರಿಯಾಗಿ ನಾವೆಲ್ಲಾ ಮುತುವರ್ಜಿಯಿಂದ ಕೆಲಸ ಮಾಡಿದರೆ ಕರೋನಾ ಗೆಲ್ಲುವುದು ಕಷ್ಟವಲ್ಲ, ಎನ್ನುತ್ತಾ ಭಟ್ಕಳದೊಂದಿಗೆ, ಉತ್ತರ ಕನ್ನಡದ ಸ್ಥಿತಿಯನ್ನು ತುಲನಾತ್ಮಕವಾಗಿ ಸಿದ್ಧಾಪುರದ ಕಾರ್ಯಕ್ರಮದಲ್ಲಿ ತಿಳಿಸಿದ ಜಿಲ್ಲಾಧಿಕಾರಿಗಳು ಕೋವಿಡ್ ಕಾರ್ಯಕರ್ತರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು.


ಮುಂದೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ, ಕರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಮಾತ್ರವೇ ಪರಿಹಾರವೂ ಅಲ್ಲ, ಹಾಗಾಗಿ ಜೀವದಷ್ಟೆ, ಜೀವನ ಮುಖ್ಯ, ಬದುಕುಮಾಡಬೇಕಾದರೆ ಬದುಕಿರುವುದು ಮುಖ್ಯ. ಉತ್ತರ ಕನ್ನಡ ಜಿಲ್ಲಾ ಕೇಂದ್ರದಲ್ಲಿ 300 ಜನರಿಗೆ ಕರೋನಾ ಚಿಕಿತ್ಸೆಗೆ ವ್ಯವಸ್ಥಿತ ಸಂರಚನೆ ಇದೆ. ಆದರೆ ಅಲ್ಲಿ 30 ಜನ ಕೋವಿಡ್ ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತಿದ್ದಾರೆ. ಆದರೆ ಅನುಕೂಲವಿದ್ದವರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ. ಆರೋಗ್ಯದೊಂದಿಗೆ ಆರ್ಥಿಕತೆ ಒಟ್ಟಾಗಿ ಸಾಗಬೇಕು. ಆ ವಾತಾವರಣಕ್ಕೆ ಕಾಲವೂ ಪಕ್ವವಾಗಿದೆ, ಜನರೂ ಸಿದ್ಧರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಉಪನ್ಯಾಸದ ಮಾದರಿಯ ಒಂದು ತಾಸಿನ ತರಬೇತಿ, ತಿಳುವಳಿಕೆಯ ಬಾಷಣಕ್ಕೆ ಪೂರ್ಣ ವಿರಾಮ ಇಡುತ್ತಲೇ 200 ಕ್ಕೂ ಹೆಚ್ಚು ಜನರಿದ್ದ ಶಂಕರಮಠದ ಆವರಣದಲ್ಲಿ ಚಪ್ಪಾಳೆಗಳ ಸುರಿಮಳೆ. ಅಷ್ಟಕ್ಕೆ ಭಟ್ಕಳದೊಂದಿಗೆ ಉತ್ತರಕನ್ನಡವೂ ಕೋವಿಡ್ ಗೆದ್ದಂತೆ ಭಾಸವಾಗಿದ್ದು ಸುಳ್ಳಲ್ಲ.

(ನಿನ್ನೆ ಸುದ್ದಿ)
ರಾಜ್ಯಾದ್ಯಂತ ಮಾಸ್ಕ್ ದಿನ ಆಚರಣೆ, ಭೂಸುಧಾರಣೆ ಕಾಯಿದೆ ತಿದ್ದುಪಡಿಗೆ ವಿರೋಧ
ಇಂದು ರಾಜ್ಯದಾದ್ಯಂತ ಮಾಸ್ಕ್ ದಿನ ಆಚರಿಸಲಾಗಿದ್ದು ಮುಖಗವಸು ಕಟ್ಟಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಬಳಕೆಯ ಉಪಯೋಗಗಳನ್ನು ತಿಳಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯಲ್ಲೂ ಸ್ಥಳಿಯ ಆಡಳಿತಗಳು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಸಿದವು. ಸಿದ್ಧಾಪುರದಲ್ಲಿ ನಗರದಲ್ಲಿ ಮರವಣಿಗೆ ನಡೆಸಿದ ಕೋವಿಡ್ ಕಾರ್ಯಕರ್ತರು ಚಂದ್ರಗುತ್ತಿ ವೃತ್ತದಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ಮಾಸ್ಕ್ ಪ್ರಯೋಜನ ಮತ್ತು ಮಾಸ್ಕ್ ದಿನದ ಮಹತ್ವ ಸಾರಿದರು………..for more details visit-samajamukhi.net

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *