ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು., ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ರೈತ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಇದೇ ವೇಳ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿರುವ ಕಂದಾಯ ಸಚಿವ ಆರ್, ಅಶೋಕ್, ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ದವಾಗಿದೆ. ಎಂದಿದ್ದಾರೆ
ಬೆಂಗಳೂರು: ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು., ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ರೈತ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಇದೇ ವೇಳ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿರುವ ಕಂದಾಯ ಸಚಿವ ಆರ್, ಅಶೋಕ್, ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ದವಾಗಿದೆ ಎಂದು ಹೇಳಿದ್ದಾರೆ.
ಪ್ರ: ಭೂ ಸುಧಾರಣಾ ಕಾಯ್ದೆಯಲ್ಲಿ ಬದಲಾವಣೆಗಳನ್ನು ಮಾಡಲು ಸರ್ಕಾರ ಏಕೆ ನಿರ್ಧರಿಸಿದೆ?
-ಕೃಷಿ ಕ್ಷೇತ್ರ ಮತ್ತು ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗಾಗಿ ನಾವು ನಿರ್ಧರಿಸಿದ್ದೇವೆ, ಈ ಮೊದಲು ಕೃಷಿಕರಲ್ಲದವರು ಭೂಮಿ ಖರೀದಿಸಲು ನಿರ್ಬಂಧ ಹೇರಲಾಗಿತ್ತು, ಜನರನ್ನು ಕಿರುಕುಳ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಬಳಕೆ ಮಾಡುತ್ತಿದ್ದರು. ಕಳೆದ 45 ವರ್ಷಗಳಲ್ಲಿ ಈ ಸಂಬಂಧ ಹಲವು ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ.
ಪ್ರ: ಕೃಷಿ ಮತ್ತು ಉದ್ಯೋಗ ಸೃಷ್ಟಿ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಸೇರಿವೆ. ಉದ್ದೇಶಿತ ಬದಲಾವಣೆಗಳು ಹೇಗೆ ಸಹಾಯ ಮಾಡುತ್ತವೆ?
-ಒಮ್ಮೆ ಕಾಯ್ದೆಗೆ ಬದಲಾವಣೆ ತಂದರೆ ಕೃಷಿ ಸಂಸ್ಕರಣಾ ಕೈಗಾರಿಕೆಗಳು, ಗೋದಾಮುಗಳು,ಶೈಥ್ಯಾಗಾರಗಳು ಗ್ರಾಮೀಣ ಪ್ರದೇಶದಲ್ಲಿ ತೆರೆಯುತ್ತವೆ.ನಮಗೆ ಮಾವಿನ ಹಣ್ಣಿನ ಜ್ಯೂಸ್, ಟೊಮೆಟೊ ಸಂಸ್ಕರಣಾ ಘಟಕಗಳು, ಸಕ್ಕರೆ ಕಾರ್ಖಾನೆ ಮತ್ತು ತೆಂಗಿನಕಾಯಿ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗುವುದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಸಹಾಯವಾಗುತ್ತದೆ. ಹೀಗಾಗಿ ಸಾರಿಗೆ ವೆಚ್ಚದ ಪ್ರಮಾಣ ತಗ್ಗುತ್ತದೆ. ಇದರಿಂದ ರೈತರಿಗೆ ಹೊರೆ ಕಡಿಮೆಯಾಗಲಿದೆ, ಈ ಮಾದರಿಯನ್ನು ಹಲವು ದೇಶಗಳು ಅನುಸರಿಸುತ್ತಿವೆ ಇದರಿಂದ ಕೃಷಿ ತ್ಯಾಜ್ಯಗಳು ಕಡಿಮೆಯಾಗುತ್ತದೆ.
ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಕೃಷಿ ತ್ಯಾಜ್ಯ ಶೇ.3-4 ರಷ್ಟು ಇರುತ್ತದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಕೋಲ್ಡ್ ಸ್ಟೋರೇಜ್ , ಗೋದಾಮಗಳು ಇರದ ಕಾರಣ ಶೇ, 30 ರಷ್ಟು ಕೃಷಿ ತ್ಯಾಜ್ಯ ಬರುತ್ತದೆ, ಒಮ್ಮೆ ಇವೆಲ್ಲಾ ಸ್ಥಾಪನೆಯಾದರೆ ರೈತರಿಗೆ ಆದಾಯ ಕೂಡ ಹೆಚ್ಚಾಗಲಿದೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಳು ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಯಾಗಲಿವೆ. ಇನ್ನು ಕೃಷಿ ವಿವಿಗಳಿಂದ ಬರುವ ಪದವೀಧರರಿಗೆ ಇದರಿಂದ ಸಹಾಯವಾಗಲಿದೆ.
ಉದ್ದೇಶಿತ ಬದಲಾವಣೆಗಳನ್ನು ದುರುಪಯೋಗವಾಗದಂತೆ ಖಚಿತಪಡಿಸಿಕೊಳ್ಳಲು ಯಾವ ಕಾರ್ಯವಿಧಾನಗಳನ್ನು ಕೈಗೊಳ್ಳುವಿರಿ?
ಪ್ರತಿ ಕುಟುಂಬ 108 ಎಕರೆ ಮಾತ್ರ ಭೂಮಿ ಖರೀದಿಸಲು ಅವಕಾಶವಿರುತ್ತದೆ, ಹೀಗಾಗಿ ಕಾಯ್ದೆಯನ್ನು ಯಾರೂ ಕೂಡ ಯಾವುದೇ ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ.
ಪ್ರ: ವಿಧಾನಸಭೆಯಲ್ಲಿ ಅಂಗೀಕಾರಗೊಳ್ಳುವ ಬದಲು ಸರ್ಕಾರವು ಸುಗ್ರೀವಾಜ್ಞೆಯ ಮಾರ್ಗವನ್ನು ಏಕೆ ಆಲೋಚಿಸುತ್ತಿದೆ?
ಕೊರೋನಾ ಕಾರಣದಿಂದಾಗಿ ಸದ್ಯ ವಿಧಾನಸಭೆ ಅಧಿವೇಶನ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತರಲು ನಿರ್ಧರಿಸಿದ್ದೇವೆ. ಮತ್ತೆ ಅಧಿವೇಶನ ಆರಂಭವಾದಾಗ ಸದನದಲ್ಲೂ ಕೂಡ ಚರ್ಚೆ ನಡೆಸುತ್ತೇವೆ.
ಪ್ರ: ಕಾರ್ಪೊರೇಟ್‌ಗಳಿಗೆ ಸಹಾಯ ಮಾಡಲು ಸರ್ಕಾರವು ಈ ಕಾಯ್ದೆಗೆ ತಿದ್ದುಪಡಿ ತಂದಿದೆ ಮತ್ತು ವಿರೋಧ ಪಕ್ಷಗಳು ರಾಜ್ಯವ್ಯಾಪಿ ಆಂದೋಲನಕ್ಕೆ ಯೋಜಿಸುತ್ತಿವೆಯಲ್ಲಾ?
-ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಈ ಕಾಯ್ದೆ ಜಾರಿಗೆ ತಂದ ಕಾರಣದಿಂದಾಗಿ ವಿರೋಧ ಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತ ಪಡಿಸುತ್ತಿದೆ.ಸದ್ಯದ ಅವಶ್ಯಕತೆಗೆ ತಕ್ಕ ಹಾಗೆ ನಾವು ಬದಲಾವಣೆ ಮಾಡುತ್ತಿದ್ದೇವೆ, ಆ ಸಮಯದಲ್ಲಿ ಯಾವುದು ಅಪ್ರಸ್ತುತವಾಗಿತ್ತೋ ಅದು ಸದ್ಯ ಪ್ರಸ್ತುತವಾಗಿದೆ, ಜನರು ಕಿರುಕುಳಕ್ಕೊಳಗಾಗುವುದಕ್ಕೆ ನಾವು ಅಂತ್ಯ ಹಾಡಬೇಕಿದೆ,
ರಾಜಕೀಯ ಕಾರಣಕ್ಕಾಗಿ ವಿರೋಧ ಪಕ್ಷಗಳು ಇದನ್ನು ವಿರೋಧಿಸಿದರೇ ನಾವು ಏನು ಮಾಡಲಾಗುವುದಿಲ್ಲ, ಅವರಿಗೆ ಕಾಯ್ದೆಯ ಉದ್ದೇಶ ತಿಳಿಸಲು ಪ್ರಯತ್ನಿಸುತ್ತೇವೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ತಿದ್ದುಪಡಿ ಕಾಯ್ದೆ ರೈತರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದರಿಂದಾಗಿ ರೈತರು ಈಗ ತಾವೇ ನೇರವಾಗಿ ಎಪಿಎಂಸಿ ಮಾರುಕಟ್ಟೆ ಮತ್ತು ಹೊರೆ ಮಾರಬಹುದಾಗಿದೆ, ಇದರಿಂದ ಸ್ಪರ್ಧೆ ಏರ್ಪಟ್ಟು ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ, ರೈತರ ಮತ್ತು ಸಮಸ್ತ ರಾಜ್ಯದ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ.