

ಇಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಮಳೆಯ ಪ್ರವಾಹ ಸಂಕಟದ ಸಂದರ್ಭ ಮತ್ತು ಮಳೆಯ ನಂತರ ಜಲಾಶಯಗಳಿಂದಾಗುವ ಕೃತಕ ನೆರೆ ಮತ್ತು ಅದರಿಂದಾಗುವ ಅಪಾಯ, ತೊಂದರೆಗಳಿಗೆ ಸಂಬಂಧಿಸಿದವರೇ ಹೊಣೆ ಎಂದಿದ್ದಾರೆ.
ಕರಾವಳಿ, ಮಲೆನಾಡಿನಲ್ಲಿ ಈ ವಾರ ಮಳೆಯಿಂದಾಗಿ ಪ್ರವಾಹ, ಪುನರ್ವಸತಿ, ರಸ್ತೆ, ವಿದ್ಯುತ್ ತೊಂದರೆಗಳಾಗಿವೆ. ಕಳೆದ ವರ್ಷ,ಇ ದೇ ಮಳೆಯಲ್ಲಿ ಇದೇ ವಾರ ಪ್ರವಾಹವಾಗಿ ಈ ಭಾಗದ ಬದುಕು,ಜನಜೀವನ ಕೊಚ್ಚಿಹೋಗಿತ್ತು. ಕಳೆದ ವರ್ಷ ಈ ಶತಮಾನದ ಮಳೆ ಹೊಸ ಜನಾಂಗಕ್ಕೆ ಮಳೆ,ಪ್ರವಾಹದ ತೊಂದರೆ, ಭೀತಿಯನ್ನು ಪರಿಚಯಿಸಿತ್ತು.

ಈ ವರ್ಷ ಈ ಪ್ರಮಾಣದ ತೊಂದರೆಗಳಾಗಿಲ್ಲವಾದರೂ ಈ ವಾರದ ಮಳೆ ಹಿಂದಿನ ವರ್ಷದ ಈ ಮಳೆ, ಈ ವಾರದ ಸಂಕಟವನ್ನು ನೆನಪಿಸಿದೆ. ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳನ್ನು ಸೇರಿ ನೆರೆ ಜಿಲ್ಲೆಗಳ ಸುಮಾರು ಮತ್ತೊಂದು ಡಜನ್ ತಾಲೂಕುಗಳಲ್ಲಿ ಈ ಮಳೆ, ನೆರೆಯ ತೊಂದರೆ ಬಹುತೇಕ ಮಳೆಗಾಲಗಳ ದುಸ್ವಪ್ನವಾಗಿದೆ.
ಮಳೆಯಿಂದ ನೆರೆ ಬರುವುದು, ಪ್ರವಾಹವಾಗುವುದು ಒಂದು ಸಮಸ್ಯೆಯಾದರೆ ಈ ಮಲೆನಾಡು,ಕರಾವಳಿ ಭಾಗದಲ್ಲಿ ಜಲಾಶಯ, ಜಲಾಗಾರಗಳ ಒಳಹರಿವು ಹೆಚ್ಚಾಗಿ ಕೃತಕ ನೆರೆ ಕೂಡಾ ಸಂಭವಿಸುತ್ತದೆ. ಕಡಿಮೆ ಮಳೆಯಾದರೆ ಜಲಾಶಯಗಳು ಭರ್ತಿಯಾಗುವುದಿಲ್ಲ ಆದರೆ ವಿಪರೀತ ಮಳೆಯಲ್ಲಿ ಜಲಾಶಯ, ಜಲಾಗಾರಗಳು ಯಾವಾಗ ತುಂಬುತ್ತವೆ ಎಂದು ನಿರ್ಧರಿಸುವುದು ಕಷ್ಟ. ಹಾಗಾಗಿ ಕೆ.ಪಿ.ಸಿ. ಮತ್ತು ಇತರ ಸಣ್ಣ, ಬೃಹತ್ ನೀರಾವರಿ ಇಲಾಖೆಗಳ ಜವಾಬ್ಧಾರಿಯ ಜಲಾಶಯಗಳು,ಜಲಾಗಾರಗಳು ತುಂಬಿ ಕೃತಕ ನೆರೆ ಸೃಷ್ಟಿಸುತ್ತವೆ. ಇದರಿಂದ ಕರಾವಳಿ ಭಾಗದ ಜನಜೀವನ ಮೂರಾಬಟ್ಟೆಯಾಗುತ್ತದೆ.
ಇಂಥ ಕೃತಕ ಪ್ರವಾಹದ ಬಗ್ಗೆ ಇಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಮಳೆಯ ಪ್ರವಾಹ ಸಂಕಟದ ಸಂದರ್ಭ ಮತ್ತು ಮಳೆಯ ನಂತರ ಜಲಾಶಯಗಳಿಂದಾಗುವ ಕೃತಕ ನೆರೆ ಮತ್ತು ಅದರಿಂದಾಗುವ ಅಪಾಯ, ತೊಂದರೆಗಳಿಗೆ ಸಂಬಂಧಿಸಿದವರೇ ಹೊಣೆ ಎಂದಿದ್ದಾರೆ. ಈ ವಾರದ ಪ್ರವಾಹ ಮತ್ತು ಈ ತಿಂಗಳಲ್ಲಿ ಯಾವ ಗಳಿಗೆಯಲ್ಲೂ ಬರಬಹುದಾದ ಕೃತಕ ಪ್ರವಾಹದ ಬಗ್ಗೆ ಸ್ಥಳಿಯರೂ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆಯನ್ನು ಈ ವಿದ್ಯಮಾನ ಎತ್ತಿಹೇಳಿದೆ. ಅಂದಹಾಗೆ ಜಿಲ್ಲೆಯ ಜಲಾಶಯಗಳ ನಿರ್ವಹಣೆಯ ಜವಾಬ್ಧಾರಿಯ ಇಂಜಿನಿಯರ್ಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಈ ಸಕಾಲಿಕ ಎಚ್ಚರಿಕೆ ನೀಡಿದ್ದು.
