a relevent issue of lr ammendment – ಗಾಢ ಅನುಮಾನಕ್ಕೆ ಕಾರಣವಾದ ಭೂಸುಧಾರಣೆ ಸುಗ್ರಿವಾಜ್ಞೆ


(ಡಿ. ರಾಮಪ್ಪ ಸಿರಿವಂತೆ, ಅಂಕೋಲಾ)
1961ರ ಭೂಸುಧಾರಣೆ ಕಾನೂನನ್ನು, ಕ್ರಾಂತಿಕಾರಿ ಅಡಿಪಾಯದೊಂದಿಗೆ ಸಮಗ್ರ ಬದಲಾವಣೆಗೊಳಪಡಿಸಿ 1974ರಲ್ಲಿ ದಿವಂಗತ ದೇವರಾಜ ಅರಸ್ ತಂದ ಕರ್ನಾಟಕ ಭೂಸುಧಾರಣೆ ಕಾನೂನಿಗೆ, ಕರ್ನಾಟಕದ ಬಿಜೆಪಿ ಸರ್ಕಾರ ಇತ್ತಿಚೆಗೆ ತಿದ್ದುಪಡಿ ತಂದಿದೆ. ದಿನಾಂಕ 2020 ಜುಲೈ 13ರ ನಂ.13/2020 ಸುಗ್ರಿವಾಜ್ಞೆ ಮೂಲಕ ಬಂದ ಕಾನೂನಿನ ಸಾಧಕ-ಬಾಧಕಗಳೇನು? ಮೂಲ ಕಾನೂನಿನಲ್ಲಿ ಕೃಷಿ ಜಮೀನು ಕೊಳ್ಳಲು ಇದ್ದ ಪ್ರತಿಬಂಧ ಮತ್ತು ಆದಾಯ ಮಿತಿ ರದ್ದುಮಾಡಿದ ಸುಗ್ರಿವಾಜ್ಞೆ ರೈತ ಮತ್ತು ರೈತೇತರ ಸಮೂಹದ ಮೇಲೆ ಮಾಡುವ ಪರಿಣಾಮಗಳೇನು?

ಜಮೀನ್ದಾರಿ ಪದ್ದತಿ ರದ್ದಾಗಿ, ಉಳುವವನೆ ಹೊಲದೊಡೆಯ’ಎಂಬ ಕ್ರಾಂತಿಕಾರಿ ಕಾನೂನು ಬರಲು, ನಮ್ಮ ಕಾಗೊಡು ರೈತ ಹೋರಾಟದಂತಹ ಅನೇಕ ಚಳುವಳಿಗಳು ಕಾರಣವಾದುವು. ಶ್ರೀ ಗಣಪತಿಯಪ್ಪ, ಶಾಂತವೇರಿ ಗೋಪಾಲಗೌಡ ಮುಂತಾದವರ ಮುಂದಾಳತ್ವದಲ್ಲಿ ನಡೆದ ಕಾಗೋಡು ಚಳುವಳಿಯಲ್ಲಿ, ಡಾ. ರಾಮಮನೋಹರ್ ಲೋಹಿಯಾರಂತಹ ಸಮಾಜವಾದಿ ಧೀಮಂತರು ಪಾಲ್ಗೊಂಡರು. ಇದೇ ಮುಂದೆ, ಕರ್ನಾಟಕದಲ್ಲಿ ಸಮಾಜವಾಧಿ ಸಂಘಟನೆಯ ಬಲವಾದ ಬೆಳವಣಿಗೆಗೆ ಪ್ರೇರಕ ಶಕ್ತಿಯಾಯ್ತು. ಅಲ್ಲದೆ, ಕೋಣಂದೂರು ಲಿಂಗಪ್ಪ, ಎಸ್. ಬಂಗಾರಪ್ಪ, ಕಾಗೋಡು ತಿಮ್ಮಪ್ಪರಂತ ಸಮಾಜವಾಧಿ ನಾಯಕರನ್ನು ಬೆಳೆಸಿತು. ಅದರ ನಂತರದ ಅನೇಕ ರೈತ ಹೊರಾಟಗಳು ರೈತ ಸಮೂಹದ ಅನೇಕ ಅನಾನುಕೂಲಗಳನ್ನು ಅಳಿಸಿ ಹೊಸ ಮನ್ವಂತರಗಳಿಗೆ ಕಾರಣವಾದುವು.

1961ರ ಭೂಸುಧಾರಣೆ ಕಾನೂನಿನಲ್ಲಿ ಇದ್ದ ಮುಖ್ಯ ಸಂಗತಿಗಳಲ್ಲಿ ತಿದ್ದುಪಡಿ ಮಾಡಲಾದ ವಿಷಯಗಳು ಇವು:

  1. ಭೂಸುಧಾರಣೆ ಕಾನೂನಿನ ಸೆಕ್ಷನ್ 63(2)ರ ಪ್ರಕಾರ, ಒಬ್ಬ ವ್ಯಕ್ತಿಯ/ಕುಟುಂಬದ ಹಿಡುವಳಿಯನ್ನು 10 ಯುನಿಟ್ ಜಮೀನಿಗೆ ಮಿತಿಗೊಳಿಸಲಾಗಿತ್ತು. ಈಗಿನ ತಿದ್ದುಪಡಿ ಈ ಹಿಡುವಳಿಯ ಮಿತಿಯನ್ನು ದ್ವಿಗುಣಗೊಳಿಸಿ, 20 ಯುನಿಟ್ ಜಮೀನಿಗೆ ಏರಿಸಿದೆ.
  2. ಮೂಲ ಭೂಸುಧಾರಣೆ ಕಾನೂನಿನ ಪ್ರಕಾರ, 5 ಜನರಿಗಿಂತ ಹೆಚ್ಚಿರುವ ದೊಡ್ಡ ಕುಟುಂಬದಲ್ಲಿ 10 ಜನರಿಗೆ ಮೇಲ್ಪಟ್ಟ ಪ್ರತಿಯೊಬ್ಬರೂ 2 ಯುನಿಟ್ ಹೆಚ್ಚುವರಿ ಜಮೀನು ಹೊಂದಬಹುದು. ಮತ್ತು, ಹೀಗೆ ಪಡೆದ ಜಮೀನು ಸೇರಿ ಕುಟುಂಬದ ಜಮೀನು 20 ಯುನಿಟ್ ಜಮೀನಿಗಿಂತ ಹೆಚ್ಚಿರಬಾರದು ಎಂದಿತ್ತು. ಅದನ್ನು ತಿದ್ದುಪಡಿ ಮಾಡಿ, ಈ ಎರಡೂ ಮಿತಿಗಳನ್ನು ಈಗ ದ್ವಿಗುಣಗೊಳಿಸಲಾಗಿದೆ.
  3. 1962ರ ಕಾನೂನಿನ ಸೆಕ್ಷನ್É 79ಎ, 79ಬಿ ಮತ್ತು 79ಸಿ ಪ್ರಕಾರ, ರೈತರಲ್ಲದವರು ಕೃಷಿ ಜಮೀನು ಹೊಂದುವುದನ್ನು ನಿಷೇಧಿಸಲಾಗತ್ತು. ಈಗಿನ ತಿದ್ದುಪಡಿ ಈ ನಿಷೇಧವನ್ನು ತೆಗೆದುಹಾಕಿದೆ. ಅದಲ್ಲದೆ, ಕೃಷಿಯೇತರ ಆದಾಯ 2 ಲಕ್ಷ ರೂಪಾಯಿ ಮೀರಿ ಇರುವವರು ಕೃಷಿ ಜಮೀನು ಕೊಳ್ಳುವುದನ್ನು ನಿಷೇಧಿಸಲಾಗಿತ್ತು. ಈ ಮಿತಿಯನ್ನು ಹಿಂದಿನ ಸರ್ಕಾರ 25 ಲಕ್ಷ ರೂಪಾಯಿಗೆ ಏರಿಸಿತ್ತು. ಈಗಿನ ಆದೇಶದ ಪ್ರಕಾರ, ಈ ಮಿತಿಗಳು ರದ್ದಾಗಿವೆ.
  4. 1962ರ ಕಾನೂನಿನ ಸೆಕ್ಷನ್ 80ರ ಪ್ರಕಾರ ಕೃಷಿಕರಲ್ಲದವರಿಗೆ ಕೃಷಿ ಜಮೀನು ಮಾರಾಟ ನಿಷೇಧಿಸಲಾಗಿತ್ತು. ಈಗ ಈ ನಿಷೇಧವನ್ನು ತೆಗೆದುಹಾಕಲಾಗಿದೆ.
  5. 1962ರ ಕಾನೂನಿನ ¸ಕ್ಷನ್ 81ರ ಪ್ರಕಾರ, ಕೃಷಿ ಜಮೀನು ಪರಬಾರೆಯನ್ನು ಕೆಲವು ನಿಗದಿತ ಸಂಸ್ಥೆಗಳಿಗೆ ಮಾತ್ರ ಮಾಡಬಹುದಿತ್ತು. ಅದನ್ನೂ ಈಗ ತೆಗೆದುಹಾಕಲಾಗಿದೆ.
  6. 1962ರ ಸೆಕ್ಷನ್ 5, ಸಬ್ ಸೆಕ್ಷನ್ 2 (ಬಿ) ಪ್ರಕಾರ, ಸೈನಿಕರ ಕೃಷಿ ಭೂಮಿ ಮತ್ತು ಮೀನು ಸಾಕಣೆಗೆ ಉಪಯೋಸುವ ಭೂಮಿ ವಿಷಯದಲ್ಲಿ, ಗೇಣಿದಾರಿಕೆಯನ್ನು 40 ಯುನಿಟ್‍ವರೆಗೆ ಮಾಡಬಹುದಿತ್ತು. ಆದರೆ ಅದನ್ನು ಈಗ 80 ಯುನಿಟ್‍ಗಳಿಗೆ ಏರಿಸಲಾಗಿದೆ.

ಜಮೀನಿನ ಶ್ರೇಣೀಕರಣ ಹಾಗೂ, ಮಣ್ಣಿನ ಮೌಲ್ಯ ವರ್ಗೀಕರಣ ಆಧಾರದಲ್ಲಿ ಹಿಡುವಳಿಯನ್ನು ಯುನಿಟ್ ಲೆಕ್ಕದಲ್ಲಿ ಹೇಳಿರುವುದು ಸ್ವಲ್ಪ ಗೊಂದಲ ಸೃಷ್ಟಿಸಿದೆ. ನಮ್ಮಲ್ಲಿ ವಿವಿಧ ಫಲವತ್ತತೆಯ ಜಮೀನುಗಳು ಇವೆ. ಅಲ್ಲದೆ, ವಿವಿಧ ನೀರಾವರಿ ಮೂಲಗಳಿರುವ ಅಥವಾ ನೀರಿನ ವ್ಯವಸ್ಥೆಯೇ ಇಲ್ಲದ ಒಣ/ಬೆದ್ದಲು (ಡ್ರೈ ಲ್ಯಾಂಡ್) ಜಮೀನುಗಳು ಇವೆ. ಜಮೀನಿಗೆ ಸಿಗುವ ನೀರಿನ ಮೂಲ ಆಧರಿಸಿ ವಿವಿಧ ಜಮೀನುಗಳನ್ನು 4 ಶ್ರೇಣಿಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಶ್ರೇಣಿಯ ಮಣ್ಣಿನ ಮೌಲ್ಯವನ್ನು ಆಧರಿಸಿ ಒಂದು ಯುನಿಟ್‍ನ ಎಕರೆವಾರು ಅನುಪಾತ ನಿಗಧಿಮಾಡಲಾಗಿದೆ. ಇದರ ವಿವರ ಕೆಳಗಿನಂತಿದೆ:

  1. ‘ಎ’ ಶ್ರೇಣಿ ಜಮೀನು:
    ಎರಡು ಅಲ್ಪಾವಧಿ ಬೆಳೆ ಬೆಳೆಯಲು ಅಥವ, ಒಂದು ದೀರ್ಘಾವಧಿ ಬೆಳೆ ಬೆಳೆಯಲು ಸಾಕಾಗುವಷ್ಟು ನೀರು ಕೊಡಬಲ್ಲ ಸರ್ಕಾರಿ ಕಾಲುವೆ, ಕೆರೆಗಳಿಂದ ನೀರಾವರಿ ಸೌಲಭ್ಯ ಇರುವ ಜಮೀನು. ಇದರಲ್ಲಿ ಎರಡು ವಿಧ:
    ಅ. ಮಣ್ಣು ವರ್ಗೀಕರಣ ಮೌಲ್ಯ 8 ಆಣೆಗಿಂತ ಹೆಚ್ಚಿರುವ ಜಮೀನಿನ 1 ಯುನಿಟ್ ಎಂದರೆ 1 ಎಕರೆಗೆ ಸಮನಾಗಿದೆ.
    ಆ. ಮಣ್ಣು ವರ್ಗೀಕರಣ ಮೌಲ್ಯ 8 ಆಣೆಗಿಂತ ಕಡಿಮೆ ಇರುವ ಜಮೀನಿನ 1 ಯುನಿಟ್ ಎಂದರೆ 1.3 ಎಕರೆಗೆ ಸಮನಾಗಿದೆ.
  2. ‘ಬಿ’ ಶ್ರೇಣಿ ಜಮೀನು:
    ಅ. ಒಂದು ಅಲ್ಪಾವಧಿ ಬೆಳೆ ಬೆಳೆಯಲು ಸಾಕಾಗುವಷ್ಟು ನೀರು ಕೊಡಬಲ್ಲ ಸರ್ಕಾರಿ ಕಾಲುವೆ, ಕೆರೆಗಳಿಂದ ನೀರಾವರಿ ಸೌಲಭ್ಯ ಇರುವ ಜಮೀನು.
    ಆ. ಎರಡು ಅಲ್ಪಾವಧಿ ಬೆಳೆ ಬೆಳೆಯಲು ಸಾಕಾಗುವಷ್ಟು ಅಥವ, ಒಂದು ದೀರ್ಘಾವಧಿ ಬೆಳೆ ಬೆಳೆಯಲು ಸಾಕಾಗುವಷ್ಟು ಏತ ನೀರಾವರಿ ಸೌಲಭ್ಯ ಇರುವ ಜಮೀನು.

ಇದರಲ್ಲಿ ಎರಡು ವಿಧ:
ಅ. ಮಣ್ಣು ವರ್ಗೀಕರಣ ಮೌಲ್ಯ 8 ಆಣೆಗಿಂತ ಹೆಚ್ಚಿರುವ ಜಮೀನಿನ 1 ಯುನಿಟ್ ಎಂದರೆ 1.5 ಎಕರೆಗೆ ಸಮನಾಗಿದೆ.
ಆ. ಮಣ್ಣು ವರ್ಗೀಕರಣ ಮೌಲ್ಯ 8 ಆಣೆಗಿಂತ ಕಡಿಮೆ ಇರುವ ಜಮೀನಿನ 1 ಯುನಿಟ್ ಎಂದರೆ 2.0 ಎಕರೆಗೆ ಸಮನಾಗಿದೆ.

  1. ‘ಸಿ’ ಶ್ರೇಣಿ ಜಮೀನು:
    ಅ. ಸರ್ಕಾರಿ ಕಾಲುವೆ, ಕೆರೆ ಅಥವಾ ಏತ ನಿರಾವರಿ ಸೌಲಭ್ಯ ಇರುವ ಆದರೆ, ‘ಎ’ ಅಥವ ‘ಬಿ’ ವರ್ಗಕ್ಕೆ ಸೇರದ ಜಮೀನು.
    ಆ. ಮಳೆಯ ಸಹಾಯದಿಂದ ಬತ್ತ ಅಥವಾ ಅಡಿಕೆ ಬೆಳೆಯಬಲ್ಲ ಜಮೀನು.
    ಇ. ನದಿ, ಕಾಲುವೆ ಅಥವ, ಕೆರೆಗಳಿಂದ ರೈತರೆ ಸ್ವಂತ ಖರ್ಚಿನಲ್ಲಿ ಪಂಪ್ ಮೂಲಕ ನೀರಾವರಿ ವ್ಯವಸ್ಥೆ ಮಾಡಿರುವ ಜಮೀನು.
    ಇದರಲ್ಲಿ ಎರಡು ವಿಧ:
    ಅ. ಮಣ್ಣು ವರ್ಗೀಕರಣ ಮೌಲ್ಯ 8 ಆಣೆಗಿಂತ ಹೆಚ್ಚಿರುವ ಜಮೀನಿನ 1 ಯುನಿಟ್ ಎಂದರೆ 2.5 ಎಕರೆಗೆ ಸಮನಾಗಿದೆ.
    ಆ. ಮಣ್ಣು ವರ್ಗೀಕರಣ ಮೌಲ್ಯ 8 ಆಣೆಗಿಂತ ಕಡಿಮೆ ಇರುವ ಜಮೀನಿನ 1 ಯುನಿಟ್ ಎಂದರೆ 3.0 ಎಕರೆಗೆ ಸಮನಾಗಿದೆ.
  2. ‘ಡಿ’ ಶ್ರೇಣಿ ಜಮೀನು: ನೀರಾವರಿಯಲ್ಲದ ಒಣ/ಬೆದ್ದಲು ಭೂಮಿ.

ಇದರಲ್ಲಿ ಒಂದೇ ವಿಧ: ಈ ಜಮೀನಿನ 1 ಯುನಿಟ್ ಎಂದರೆ 5.4 ಎಕರೆಗೆ ಸಮನಾಗಿದೆ.

(ಉದಾಹರಣೆಗೆ, ನಮ್ಮಲ್ಲಿ ಎ(ಅ) ಶ್ರೇಣಿಯ 18 ಎಕರೆ ಜಮೀನು ಮತ್ತು ಡಿ ಶ್ರೇಣಿಯ 5.4 ಎಕರೆ ಜಮೀನು ಇದ್ದರೆ – ಒಟ್ಟು ಹಿಡುವಳಿ 23.4 ಎಕರೆ ಆದರೂ – ಯುನಿಟ್ ಲೆಕ್ಕದಲ್ಲಿ ಅದು ಒಟ್ಟು 19 ಯುನಿಟ್ ಹಿಡುವಳಿ ಮಾತ್ರ ಆಗುತ್ತದೆ.)

ಪಕ್ಕದ ಮಹಾರಾಷ್ಟ್ರ, ಆಂದ್ರ ಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳು ಈಗಾಗಲೇ ಇಂತಹ ತಿದ್ದುಪಡಿಗಳನ್ನು ತಂದಿವೆ. ನಮ್ಮ ರಾಜ್ಯದಲ್ಲೂ ಈ ತಿದ್ದುಪಡಿಯಿಂದ ಹೊಸ ಬಂಡುವಾಳ ಹೂಡಿಕೆಯನ್ನು ಆಕರ್ಷಿಸಬಹುದು. ಮತ್ತು, ಜಮೀನು ಖರೀದಿ-ವಿಲೇವಾರಿಯಲ್ಲಿ ಇರುವ ಲಂಚದ ವ್ಯವಹಾರ ಪೂರ್ತಿಯಾಗಿ ನಿಲ್ಲುತ್ತದೆ. ಇದು ರೈತರ ಸಂಕಷ್ಟಗಳನ್ನು ದೂರ ಮಾಡುತ್ತದೆ ಎಂಬುದು ಸರ್ಕಾರ ಕೊಡುವ ಕಾರಣ. ಬಂಡವಾಳ ಹೂಡಿಕೆಯ ಆಕರ್ಷಣೆ ವಿಷಯಕ್ಕೆ ಮತ್ತೆ ಬರೋಣ. ಇನ್ನು ಲಂಚದ ವಿಚಾರ. ಆಡಳಿತದಲ್ಲಿ ಲಂಚವನ್ನು ತಡೆಯಲು ಸಾಧ್ಯವಾಗದೆ ಸರ್ಕಾರ ಈ ತಿದ್ದುಪಡಿ ಮಸೂದೆ ತಂದಿದೆ ಅನ್ನುವುದೇ ನಗೆಪಾಡಲಿನ ವಿಷಯ. ಎತ್ತಿಗೆ ಜ್ವರ ಬಂದರೆ, ಕೋಣಕ್ಕೆ ಬರೆ ಹಾಕಿದಂತೆ! ಆದ್ದರಿಂದ ಇದೊಂದು ಅತೀ ಕೆಟ್ಟ ಸಬೂಬು.

ಈ ತಿದ್ದುಪಡಿ ಬರುವ ಸ್ವಲ್ಪ ಮೊದಲು ಕರ್ನಾಟಕದಲ್ಲಿ, ಒಂದು ಕುಟುಂಬದ – ಅವರು ರೈತರಾಗಿರಲಿ ಅಥವಾ ಆಗಿರದೇ ಇರಲಿ – ಕೃಷಿಯೇತರ ವಾರ್ಷಿಕ ಆದಾಯ 25 ಲಕ್ಷ ರೂಪಾಯಿ ಮೀರಿದರೆ, ಅಂತಹವರು ಕೃಷಿ ಜಮೀನು ಕೊಳ್ಳುವಂತಿರಲಿಲ್ಲ. ಮತ್ತೂ, ಪಿತ್ರಾರ್ಜಿತ ಕೃಷಿಕರಲ್ಲದವರು ಆಶೆಪಟ್ಟರೂ ಕೃಷಿಕರಾಗಲು ಆದಾಯದ ಮಿತಿ ಅಡ್ಡ ಬರುತ್ತಿತ್ತು. ಈಗ ಈ ಮಿತಿಯನ್ನು ಕೈಬಿಡಲಾಗಿದೆ. ಇದರರ್ಥ ಇಂದು ಆದಾಯದ ಮಿತಿಯಿಲ್ಲದೆ ಕೃಷಿಯಲ್ಲಿ ಆಸಕ್ತಿಯಿರುವ ಯಾರೂ ಕೃಷಿ ಜಮೀನು ಕೊಳ್ಳಬಹುದು ಎಂಬುದು ಒಳ್ಳೆಯ ಬೆಳವಣಿಗೆ. ಅದಲ್ಲದೆ ಈ ಮೊದಲು ಕೃಷಿಕರಲ್ಲದವರು ಕೃಷಿಯೇತರ ಉದ್ದೇಶಗಳಿಗಾಗಿ ಕೃಷಿ ಜಮೀನನ್ನು ಕೊಳ್ಳುವಂತಿರಲಿಲ್ಲ. ಇಂದು ಅಂತಹವರು ಕೂಡ ಕೃಷಿ ಜಮೀನು ಖರೀದಿಸಿದ ನಂತರ ಬಿನ್ಶೇತ್ಕಿ ಮಾಡಿಸಿ ತಮ್ಮ ಯೊಜನೆಗಳಿಗೆ ಉಪಯೋಗಿಸಬಹುದು ಎಂಬುದೂ ಒಂದು ಒಳ್ಳೆಯ ಬೆಳವಣಿಗೆ. ಈ ತಿದ್ದುಪಡಿಯಲ್ಲಿ ರೈತರ ಬಗೆಗಿನ ಕಾಳಜಿಗಿಂತ ರೈತೇತರರು ಜಮೀನು ಕೊಳ್ಳಲು ಇದ್ದ ಕಾನೂನಿನ ತೊಡಕನ್ನು ನಿವಾರಿಸುವುದು ಸರ್ಕಾರದ ಉದ್ದೇಶ ಎಂಬುದು ಎದ್ದು ಕಾಣುವ ಸಂಗತಿ.

ಅದು ತಪ್ಪೆಂದೇನು ಅಲ್ಲ. ಆದರೆ ಈ ಸೌಲಭ್ಯವನ್ನು ಹಣವಿರುವವರು ಮತ್ತು ವ್ಯಾಪಾರಸ್ಥರು ಅನಗತ್ಯ ಜಮೀನು ಶೇಕರಣೆಯಲ್ಲಿ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು. ಇದಕ್ಕಾಗಿ ಸರ್ಕಾರದ ಯಾವುದೇ ನಿಬಂಧನೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಹಿಂದಿನ ಕಾನೂನಿನ ಪ್ರಕಾರ, ಚಿಕ್ಕ ಕುಟುಂಬದ ಕೃಷಿ ಹಿಡುವಳಿ ಎ ಶ್ರೇಣಿಯ 20 ಎಕರೆಗೆ ಮೀರಿರಬಾರದು ಮತ್ತು ಇದು ದೊಡ್ಡ ಕುಟುಂಬದ್ದಾದರೆ 40 ಎಕರೆಗೆ ಮೀರಿರಬಾರದು ಎಂದಿತ್ತು. ಆದರೆ ಇದನ್ನು ಇಂದು ದ್ವಿಗುಣಗೊಳಿಸಲಾಗಿದೆ. ಒಂದು ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಇಂದು 75 ಲಕ್ಷ ರೈತ ಹಿಡುವಳಿಗಳಿದ್ದು ಅದರಲ್ಲಿ 55 ಲಕ್ಷ ಚಿಕ್ಕ ಮತ್ತು ಅತಿಚಿಕ್ಕ ಹಿಡುವಳಿಗಳಿವೆ. ಇದಲ್ಲದೆ, ದೊಡ್ಡ ಕುಟುಂಬಗಳು ಒಡೆದು ನ್ಯೂಕ್ಲಿಯರ್ ಕುಟುಂಬಗಳಾಗಿವೆ. ಹೀಗಾಗಿ, ಒಟ್ಟು ಕುಟುಂಬದ ಜಮೀನುಗಳು ಖಾತೆಯಲ್ಲಿ ಒಡೆಯದಿದ್ದರೂ, ವಾಸ್ತವ ವಾಹಿವಾಟಿನಲ್ಲಿ ಒಡೆದುಹೋಗಿ ಚಿಕ್ಕ-ಅತಿಚಿಕ್ಕ ಹಿಡುವಳಿಗಳಾಗಿವೆ. ಹೀಗಿರುವಾಗ ಹಿಡುವಳಿಯ ಮಿತಿಯನ್ನು ದ್ವಿಗುಣಗೊಳಿಸಿದ್ದೂ ರೈತಪರ ಎನ್ನಿಸುವುದಿಲ್ಲ. ಏಕೆಂದರೆ, 55 ಲಕ್ಷ ಹಿಡುವಳಿದಾರರ ಕೈಯಲ್ಲಿ 5 ಎಕರೆಗಿಂತ ಹೆಚ್ಚು ನೀರಾವರಿ ಜಮೀನು ಇಲ್ಲ. ಅಂದರೆ, 5 ಯುನಿಟ್ ಎ ಶ್ರೇಣಿ ಜಮೀನು ಅಥವ, ಅದಕ್ಕಿಂತ ಕಡಿಮೆ ಹಿಡುವಳಿ ಇರುವವರು 55 ಲಕ್ಷ! ಹಿಡುವಳಿಯ ಮಿತಿಯನ್ನು 10 ರಿಂದÀ 20 ಯುನಿಟ್ ಗೆ ದ್ವಿಗುಣಗೊಳಿಸಿದರೆ ಬಹುಸಂಖ್ಯಾತ ರೈತರಿಗೆ ಏನು ಉಪಯೋಗ?
ಮುಖ್ಯವಾಗಿ, ಚಿಕ್ಕ-ಅತಿಚಿಕ್ಕ ಹಿಡುವಳಿಗಳಲ್ಲಿ, ವ್ಯವಹಾರಿಕವಾಗಿ ಲಾಭದಾಯಕವಲ್ಲದ ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ಬೆಳೆಯಬಹುದು. ಹೊಸ ಹೂಡಿಕೆಯಿಂದ, ನೀರಾವರಿ ಮಾಡುವ, ಜಮೀನು ಅಭಿವೃದ್ಧಿಪಡಿಸುವ, ಯಾಂತ್ರೀಕರಣ ಮಾಡುವ, ಹೊಸ ತಂತ್ರಜ್ಞಾನ ಬಳಸುವ ಮತ್ತು ಆ ಮೂಲಕ, ವಾಣಿಜ್ಯ ಬೆಳೆಗಳನ್ನು ಬೆಳೆಯುವ ಬಗ್ಗೆ ಚಿಕ್ಕ-ಅತಿಚಿಕ್ಕ ರೈತ ಯೋಚಿಸಬಹುದು. ಆದರೆ ಇದು, ಆರ್ಥಿಕವಾಗಿ ಕಾರ್ಯಸಾಧ್ಯವೇ? ಮಳೆಯನ್ನು ಆಶ್ರಯಿಸಿದ ಚಿಕ್ಕ ಹಿಡುವಳಿಗಳಲ್ಲಿ ಇದು ಅಸಾಧ್ಯ. ಇಂತಹ ಕಡೆ, ಸರ್ಕಾರ ಕಮ್ಯುನಿಟಿ ಸ್ಥರದಲ್ಲಿ ಜಮೀನು ಅಭಿವೃದ್ಧಿಗೆ ಯೋಜನೆ ರೂಪಿಸಿ ಸಣ್ಣಹಿಡುವಳಿಗಳೂ ಲಾಭದಾಯಕ ಆಗುವಂತೆ ಮಾಡಬೇಕು. ಇದು ನಾಡಿನ 55 ಲಕ್ಷ ಚಿಕ್ಕ ಹಿಡುವಳಿ ಇರುವ ಕುಟುಂಬಗಳ ಜೀವನವನ್ನು ಸಹ್ಯವಾಗಿಸುವ ಕ್ರಾಂತಿಕಾರಿ ಯೋಜನೆಯಾಗುತ್ತಿತ್ತು.

ಇದಾಗದೆ, ನಮ್ಮ ಚಿಕ್ಕ ಹಿಡುವಳಿ ರೈತರು ತಮ್ಮ ಹೆಚ್ಚಿನ ಜಮೀನನ್ನು ಬಂಜರು ಬಿಟ್ಟುಬಿಟಿದ್ದಾರೆ. ಇಂತಹವರು ಇಂದು ಬೇರೆ ಕಡೆ ಕೂಲಿಗೆ ಹೋಗುವುದು, ಗುಳೆ ಹೋಗುವುದು ಸಾಮಾನ್ಯವಾಗಿದೆ. ಹಣ ಇರುವವರು, ವಿಶೇಷವಾಗಿ ಬಂಡುವಾಳ ಇರುವ ಕೃಷಿಕೇತರರು ಸದ್ಯದ ತಿದ್ದುಪಡಿಯ ಉಪಯೋಗ ಪಡೆದುಬಿಡುತ್ತಾರೆ. ಇದು ಕೆಲವೇ ಜನರ ಕೈಯಲ್ಲಿ ಜಮೀನು ಕೇಂದ್ರೀಕರಣವಾಗಲು ಕಾರಣವಾಗುತ್ತದೆ. ಒಂದು ರೀತಿಯಲ್ಲಿ ಜಮೀನ್ದಾರಿಕೆ ಮತ್ತೆ ಬರಲು ಇದು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದರ ಅರ್ಥ ಭೂಸುಧಾರಣೆಯ ಮೂಲ ಉದ್ದೇಶವೇ ನಿರರ್ಥಕವಾದಂತಲ್ಲವೇ? ಇವರು ಜಮೀನು ಮಾರಿ ಕೂಲಿ ಮಾಡಿ ಜೀವಿಸುವುದನ್ನು ತಪ್ಪಿಸಲು ಸರ್ಕಾರ ಹೊಸ ಕ್ರಾಂತಿಕಾರಿ ಯೋಜನೆ ರೂಪಿಸಬೇಕೆ ಅಥವಾ ಅವರೆಲ್ಲಾ ಜಮೀನು ಮಾರಿ ಗುಳೆ ಹೋಗಬೇಕೆ?
ಇಂತಹ ಒಂದು ದೂರಗಾಮಿ ಪರಿಣಾಮ ಬೀರುವ ಕಾನೂನು ತಿದ್ದುಪಡಿಯನ್ನು ಸಾರ್ವಜನಿಕ ಚರ್ಚೆಗೆ ಮೊದಲೇ ಸರ್ಕಾರ ಬಿಡಲಿಲ್ಲ. ಮತ್ತು ಇದನ್ನು ಸಾರ್ವಜನಿಕ ಪ್ರತಿಭಟನೆ ಸಾಧ್ಯವಾಗದ ಕೋವಿಡ್ ಸಂದರ್ಭದಲ್ಲಿ, ಸರ್ಕಾರ ಸುಗ್ರಿವಾಜ್ಞೆ ಮುಖಾಂತರ ತರಾತುರಿಯಲ್ಲಿ ತಂದ ರೀತಿ! ಇದು ಯಾರನ್ನೂ ವಿಚಲಿತರನ್ನಾಗಿಸುತ್ತದೆ ಮತ್ತು ಸರ್ಕಾರದ ನಡೆಯ ಬಗ್ಗೆ ಗಾಢ ಅನುಮಾನಕ್ಕೆ ಕಾರಣವಾಗುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *