ಗಿರಿಧರ್ ಭಟ್ ಅನುಭವದಲ್ಲಿ ನ್ಯೂಯಾರ್ಕ್

ಮೊದಲಿಗೆ ನ್ಯೂಯಾರ್ಕ್ ಎಂಬ ಹೆಸರಿನ ರಾಜ್ಯವೂ ಇದೆ ನಗರವೂ ಇದೆ ಎಂದಾಗ ಏನೋ ಒಂಥರಾ ಕಿರಿಕಿರಿಯಾಗಿತ್ತು. ಅದು ಹೇಗೆ ಆಥರ ಹೆಸರಿಡ್ತಾರೆ ಅವರು ಅಂತ ಅನ್ನಿಸಿತ್ತು. ಅದರ ರಾಜಧಾನಿ ಹೆಸರು ದೊಡ್ಡನಗರವಾದ ನ್ಯೂಯಾರ್ಕ್ ಅಲ್ಲದೇ ಅಲ್ಬೆನಿ ಅನ್ನೋ ಬಹಳ ಚಿಕ್ಕ ನಗರ ಗೊತ್ತಾದಾಗ ಮಾತ್ರ ಇವರು ಹುಚ್ಚರೇ ಇರಬೇಕು, ಅಷ್ಟು ದೊಡ್ಡ ನಗರವಿರಬೇಕಾದರೆ ಆ ಚಿಕ್ಕ ಊರನ್ನ ರಾಜಧಾನಿಯನ್ನಾಗಿಟ್ಟುಕೊಂಡ ಇವರಂತಹ ಮೂರ್ಖರು ಇರಲಿಕ್ಕಿಲ್ಲ ಅನ್ನೋ ತೀರ್ಮಾನಕ್ಕೆ ಬಂದಿದ್ದೆ. ನಿಜ ಹೇಳಬೇಕೆಂದರೆ, ನ್ಯೂಯಾರ್ಕ್ ರಾಜ್ಯದ ಬಗ್ಗೆ ಮೊದಲು ಹೇಳಬೇಕಾಗಿತ್ತು‌. ಆದರೆ ನ್ಯೂಯಾರ್ಕ್ ನಗರದ ಬಗ್ಗೆಯೇ ಮೊದಲು ಹೇಳೋಣ ಅನ್ನಿಸ್ತಾ ಇದೆ.

ನಾನು ಮೊದಲ ಬಾರಿಗೆ ಮುಂಬೈಗೆ ಹೋದಾಗ ನಗರವನ್ನು ಪ್ರವೇಶಿಸುತ್ತಿರಬೇಕಾದರೆ ಒಂಥರಾ ವಿಚಿತ್ರ ಅನುಭವವಾಗಿತ್ತು. ಯಾವುದೋ ಒಂದು ವಿಚಿತ್ರ ಪ್ರದೇಶಕ್ಕೆ ಪ್ರವೇಶಿಸ್ತಾ ಇರೋಹಾಗೆ, ಸಿಕ್ಕು ಸಿಕ್ಕಾದ ಸ್ಪಾಗೆಟ್ಟಿಯ ತಟ್ಟೆಯೊಳಗೆ ಸೂಕ್ಷ್ಮರೂಪಿಯಾಗಿ ಸಿಲುಕಿಕೊಂಡರೆ ಹೇಗಾಗುವುದೋ ಅದೇ ಅನುಭವ. ಡಿಟ್ಟೋ ಅದೇ ಅನುಭವ ಮೊದಲಬಾರಿಗೆ ನ್ಯೂಯಾರ್ಕನ್ನು ಪ್ರವೇಶಿಸಬೇಕಾದರೆ ಆಗಿತ್ತು. ಮೊದಲ ಎರಡು ಗಂಟೆಗಳಂತೂ ನಾನು ಮುಂಬೈಯಲ್ಲೇ ಇದೀನಿ ಅಂದುಕೊಂಡಿದ್ದೆ. ದಾರಿ ದಾರಿಯಲ್ಲೂ ಕಾಯ್ಕಿಣಿಯವರ, ಚಿತ್ತಾಲರ ಪಾತ್ರಗಳೇ ಕಾಣ್ತಾ ಇದ್ದವು.

ನ್ಯೂಯಾರ್ಕಿನ ನೆಲದಡಿ ಸಾಗುವ ಹಳಿಬಂಡಿಯಲ್ಲಿ ಕೂತರೂ ಮುಂಬೈ ಲೋಕಲ್ ರೈಲುಗಳಲ್ಲಿ ಹೋಗ್ತಾ ಇದೀನಿ ಅನ್ನಿಸ್ತಾ ಇತ್ತು. ಹಾಗಂತ ನಾನು ಮುಂಬೈಗೆ ಬಹಳ ಬಾರಿ ಭೇಟಿಕೊಟ್ಟವನಲ್ಲ. ಹೆಚ್ಚೆಂದರೆ ೩-೪ ಸಾರಿ ಹೋಗಿರಬಹುದು, ಮತ್ತೆ ಎರಡು ದಿನಕ್ಕಿಂತ ಜಾಸ್ತಿ ಉಳಿದಿಲ್ಲ. ಆದರೂ ಅಷ್ಟು ಗಾಢವಾಗಿ ಮುಂಬೈ ನಗರದ ಅನುಭವವಾಯಿತು. ನಾನು ನೋಡಿದ ನಗರಗಳಲ್ಲಿ ನಿಜವಾಗಿಯೂ ಕಾಸ್ಮೋ ಪಾಲಿಟನ್ ಅನಿಸಿದ್ದು ಕೇವಲ ಎರಡು ನಗರಗಳು. ಒಂದು ಮುಂಬೈ ಇನ್ನೊಂದು ನ್ಯೂಯಾರ್ಕ್. ನಾನು ಭೇಟಿಕೊಟ್ಟ ಬೆಂಗಳೂರು, ಚೆನ್ನೈ, ಲಾಸ್ ಎಂಜಿಲಿಸ್ ಇತ್ಯಾದಿ ಕಡೆಗಳಲ್ಲೆಲ್ಲೂ ನನಗೆ ಆ ಅನುಭವವಾಗಿಲ್ಲ.

ಜಗತ್ತಿ‌ನ ಶಕ್ತಿಕೇಂದ್ರಗಳಲ್ಲೊಂದಾದ ಈ ನಗರ ವಾಶಿಂಗ್‌ಟನ್ನಿಗೂ ಮುಂಚೆ ಅಮೆರಿಕಾದ ರಾಜಧಾನಿಯಾಗಿತ್ತು ಅಂತ ಗೊತ್ತಾಗಿದ್ದು ಮಾತ್ರ ವಿಚಿತ್ರ ಸನ್ನಿವೇಶದಲ್ಲಿ. ಬ್ರಹ್ಮಾವರ ಹತ್ತಿರದ ಕ್ರಾಸ್‌ಲ್ಯಾಂಡ್ ಕಾಲೇಜಿಗೆ ರಸಪ್ರಶ್ನೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ‘ವಾಶಿಂಗ್‌ಟನ್ನಿಗೂ ಮುಂಚೆ ಅಮೆರಿಕಾದ ರಾಜಧಾನಿ ಯಾವುದು?’ ಅನ್ನೋ ಪ್ರಶ್ನೆ ಬಂತು. ಯಾವುದೋ ಗುಂಗಿನಲ್ಲಿ ಬಝರ್ ಒತ್ತಿದ್ದೆ. ನಾನು ಮಾಡಿದ ಎಡಬಟ್ಟು ಕೆಲಸ ಆಮೇಲೆ ಅರ್ಥವಾಯಿತು. ಇರುವ ೫ ಸೆಕೆಂಡಿನಲ್ಲಿ ಬಾಯಿಗೆ ಬಂದ ನ್ಯೂಯಾರ್ಕ್ ಉತ್ತರ ಕೊಟ್ಟಿದ್ದೆ. ಆದರೆ ಇದರಿಂದ ಚೇತರಿಸಿಕೊಳ್ಳದೇ ಮುಂದಿನ ಪ್ರಶ್ನೆಗೆ ಉತ್ತರ ಗೊತ್ತಿದ್ದೂ ಕೊಡಲಿಲ್ಲ.

ನ್ಯೂಯಾರ್ಕ್ ರಾಜ್ಯದ ೬೦ ಪ್ರತಿಶತಕ್ಕೂ ಹೆಚ್ಚು ಜನ ಈ ನಗರದ ಸುತ್ತಮುತ್ತಲೇ ವಾಸಿಸುತ್ತಾರೆ. ನಾನು ಈ ನಗರದಲ್ಲಿ ಕಳೆದಿದ್ದು ಕೇವಲ ಹದಿನೈದು ಗಂಟೆಗಳು, ನೋಡುವುದಕ್ಕೆ ಏನೇನೂ ಸಾಲದು, ಇನ್ನೊಂದು ಬಾರಿ ಹೋಗಬೇಕೆಂದುಕೊಂಡರೂ ಆಗಲಿಲ್ಲ. ವಾಸವಾಗಿ ಅಲ್ಲಿನ ಜೀವನಶೈಲಿ ಅನುಭವಿಸುವುದು ನನಗೆ ಒಗ್ಗುವಂತಹದಲ್ಲ.

ನನಗೆ ಅತ್ಯಂತ ಗಮನಸೆಳೆದ ಸಂಗತಿಯೇನೆಂದರೆ ನಗರ ಕೇಂದ್ರಭಾಗದ ಮ್ಯಾನ್‌ಹಟನ್‌ ಅಲ್ಲಿರುವ ಸೆಂಟ್ರಲ್ ಪಾರ್ಕ್. ಸುಮಾರು ೮೪೦ ಎಕ್ರೆಯಷ್ಟು ದೊಡ್ಡದಾದ ಉದ್ಯಾನ. ಇಂತಹ ಮಹಾನಗರದಲ್ಲಿ ಇಷ್ಟು ದೊಡ್ಡ ಉದ್ಯಾನ ನಗರದ ಶ್ವಾಸಕೋಶದಂತೆ ಕಾರ್ಯನಿರ್ವಹಿಸುತ್ತದೆ. ಈ ವಿಷಯದಲ್ಲಿ ಭಾರತದ ನಗರಗಳೇನೂ ಕಮ್ಮಿಯಿಲ್ಲ. ನಮ್ಮಲ್ಲೂ ಲಾಲ್ಬಾಗ್, ಚೆನ್ನೈನ ಗಿಂಡಿ ರಾಷ್ಟ್ರೀಯ ಉದ್ಯಾನದಂತಹವು ನಗರದ ಕೇಂದ್ರ ಭಾಗದಲ್ಲೇ ಇವೆ.

ನ್ಯೂಯಾರ್ಕ್ ಮತ್ತು ಪಕ್ಕದ ನ್ಯೂಜೆರ್ಸಿ ರಾಜ್ಯಗಳಲ್ಲಿ ನಾವು ತೃಪ್ತಿ ಪಡಬಹುದಾದ ಒಂದು ಸಂಗತಿಯಿದೆ. ಅತಿಯಾದ ಜನಸಾಂದ್ರತೆಯಿರುವುದರಿಂದ ಜನರಿಗೆ ರಸ್ತೆಯಲ್ಲಿ ತಾಳ್ಮೆ ಕಮ್ಮಿ, ಉಳಿದೆಡೆ ಹಾರನ್ ಮಾಡುವುದು ಬಹಳ ಅಪರೂಪವಾದರೆ ಇಲ್ಲಿ ಇದು ಬಹಳ ಸಹಜ. ನಮ್ಮಂತೆ ಯದ್ವಾ ತದ್ವಾ ಹಾರನ್ ಮಾಡುತ್ತಾರೆ. ಒಟ್ರಾಸಿ ವಾಹನ ಚಲಾಯಿಸುವುದೂ ಸರ್ವೇ ಸಾಮಾನ್ಯ.

ಹಾಂ , ನಾನು ನೋಡಿದ ಜಾಗಗಳ ಬಗ್ಗೆ ಹೇಳಬೇಕು ಅಂದರೆ. ನಾವು ಭೇಟಿಕೊಟ್ಟಿದ್ದು ಕೇವಲ ಮೂರು ಜಾಗಗಳಿಗೆ.‌

೧. ಲಿಬರ್ಟಿ ದ್ವೀಪ – ಅತ್ಯಂತ ಪ್ರತಿಷ್ಟಿತ ಪ್ರತಿಮೆಯಾದ ಅಮೆರಿಕಾದ ಹೆಮ್ಮೆಯ ಸಂಕೇತವಾದ ಸ್ವಾತಂತ್ರ್ಯದೇವಿಯ ಪ್ರತಿಮೆ‌ ಈ ೧೪-೧೫ ಎಕರೆಯ ಈ ಪುಟ್ಟ ದ್ವೀಪದಲ್ಲಿದೆ. ಇದು ಅಮೆರಿಕಾ ಕೇಂದ್ರಸರಕಾರದ ಒಡೆತನದಲ್ಲಿದೆ. ಚಿಕ್ಕದಾದ ಮತ್ತು ಚೊಕ್ಕದಾದ ಈ ದ್ವೀಪಕ್ಕೆ ಪ್ರಯಾಣಿಸುವುದು, ಈ ದ್ವೀಪದಲ್ಲಿ ಓಡಾಡುವುದು ಮತ್ತು ಭವ್ಯವಾದ ಪ್ರತಿಮೆಯನ್ನ ನೋಡುವುದೇ ಒಂದು ಅಹ್ಲಾದಕರ ಅನುಭವ. ಆದರೆ ಅದಕ್ಕಿಂತ ಚೆನ್ನಾಗಿರುವುದು ಮುಖ್ಯ ಭೂಭಾಗದಿಂದ ದ್ವೀಪಕ್ಕೆ ಬರುವಲ್ಲಿನ ಪ್ರಯಾಣ ಬಹಳ ಖುಷಿ ಕೊಡುತ್ತದೆ. ನ್ಯೂಯಾರ್ಕ್ ನಗರದ ಅದ್ಭುತ ದೃಷ್ಯಗಳು ಕಾಣುತ್ತವೆ.

೨. ಬ್ರೂಕ್ಲಿನ್ ಸೇತುವೆ
ಮ್ಯಾನ್ಹಟನ್ ಮತ್ತು ಬ್ರೂಕ್ಲಿನ್ ಸಂಪರ್ಕಿಸುವ ಈ ಸೇತುವೆ ಬಹಳ ಅದ್ಭುತವಾಗಿದೆ. ಅತ್ಯಂತ ಸುಂದರ ಪ್ರದೇಶದಲ್ಲಿರೋ ಎರಡಂತಸ್ತಿನ ಈ ಸೇತುವೆಯ ನೋಡಲು ನಿತ್ಯ ಸಾವಿರಾರು ಜನ ಬರುತ್ತಾರೆ.

೩. ವಿಶ್ವ ವಾಣಿಜ್ಯ ಕೇಂದ್ರ
ಅವಳಿ ಕಟ್ಟಡಗಳ ತಾಲಿಬಾನಿನವರು ಹೊಡೆದುರುಳಿಸಿದ್ದು ನಿಮಗೆಲ್ಲಾ ಗೊತ್ತಿದೆ. ಅಲ್ಲೀಗ ದೊಡ್ಡದಾದ ಒಂದೇ ಕಟ್ಟಡ ಕಟ್ಟಿಸಿದ್ದಾರೆ. ಪ್ರವೇಶ ಶುಲ್ಕ ಸ್ವಲ್ಪ ಜಾಸ್ತಿ ಅನ್ನಿಸಿದರೂ ಆ ಕಟ್ಟಡದ‌ ನೂರನೆ ಮಹಡಿಯಲ್ಲಿ ನಿಂತು ಇಡೀ ನ್ಯೂಯಾರ್ಕ ನಗರ ನೋಡುವುದು ಅತ್ಯಂತ ರೋಮಾಂಚಮಕಾರೀ‌ ಅನುಭವ. ಒಂದು ಮಹಾನಗರದ ಅಂತಹ ಒಂದು ದೃಷ್ಯವನ್ನ ಮುಂಚೆ ಎಲ್ಲೂ ನೋಡಿರಲಿಲ್ಲ. ವೀಕ್ಷಣೆಗೆ ಮುಸ್ಸಂಜೆ ಅತ್ಯಂತ ಪ್ರಶಸ್ತವಾದ ಸಮಯ. ಹಾಗೇ ಪಕ್ಕದಲ್ಲೆ ಗ್ರೌಂಡ್ ಝೀರೋ, ಮೆಟ್ರೋ ನಿಲ್ದಾಣ ಮುಂತಾದ ಪ್ರೇಕ್ಷಣೀಯ ಜಾಗಗಳಿವೆ

ಮುಂದಿನ ಭಾಗದಲ್ಲಿ ನ್ಯೂಯಾರ್ಕ್ ರಾಜ್ಯದ ಬಗ್ಗೆ ಮತ್ತು ಚಾಂಪ್ಲೈನ್ ಸರೋವರದ ಬಗ್ಗೆ ಹೇಳ್ತೀನಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *