ಬಿಹಾರ, ವಿಕಾಸದ ಮಾತು-ವಿನಾಶದ ಹಾದಿ! -01 (-ದಿ.ಅ.)

1.ನನ್ನ ವೃತ್ತಿಜೀವನದ ಚುನಾವಣಾ ಸಮೀಕ್ಷೆಗಳಲ್ಲಿ ಸ್ಮರಣೀಯವಾದುದು ಬಿಹಾರ ಮತ್ತು ಉತ್ತರಪ್ರದೇಶದ ಚುನಾವಣೆಗಳು. 2004ರ ಲೋಕಸಭಾ ಚುನಾವಣೆ, 2005ರಲ್ಲಿಯೇ ನಡೆದ ಎರಡು ವಿಧಾನಸಭಾ ಚುನಾವಣೆಗಳ ವರದಿಗಾಗಿ ಆ ರಾಜ್ಯ ಸುತ್ತಾಡಿದ್ದೆ. ದಕ್ಷಿಣದವರಿಗೆ ಉತ್ತರಭಾರತದ ಪ್ರವಾಸವೆಂದರೆ ಉತ್ತರಪ್ರದೇಶದ ತಾಜ್ ಮಹಲ್, ಉತ್ತರಾಂಚಲದ ಕುಲು ಮತ್ತು ಮನಾಲಿ, ರಾಜಸ್ತಾನದ ಹವಾಮಹಲ್ ಕೊನೆಗೆ ದೆಹಲಿಯ ಕೆಂಪುಕೋಟೆ, ಕುತುಬ್ ಮಿನಾರ್, ಅಲ್ಲಿಗೆ ಮುಗಿಯಿತು. ಬೋದ ಗಯಾ, ವೈಶಾಲಿ, ನಳಂದಾಗಳಂತಹ ಬೌದ್ಧ-ಜೈನ ಪುಣ್ಯಕ್ಷೇತ್ರಗಳಿದ್ದರೂ ಬಿಹಾರದ ಕಡೆ ನಮ್ಮ ಪ್ರವಾಸಿಗರು ಕಣ್ಣುಹಾಯಿಸುವುದು ಕಡಿಮೆ. ಇದರಿಂದಾಗಿ ನಾವು ಬಿಹಾರವನ್ನು ತಿಳಿದುಕೊಂಡಿರುವುದು ವಲಸಿಗ ಬಿಹಾರಿಗಳ ಮೂಲಕ ಮಾತ್ರ.ಪಶ್ಚಿಮ ಬಂಗಾಳದವರನ್ನು ‘ಬಂಗಾಳಿಗಳು’ ಎಂದು, ಕೇರಳದವರನ್ನು ‘ಮಲೆಯಾಳಿಗಳು’ ಎಂದು ಕರೆದಾಗ ಆ ದನಿಯಲ್ಲಿ ಸ್ವಲ್ಪ ಮೆಚ್ಚುಗೆ, ಇನ್ನು ಸ್ವಲ್ಪ ಅಸೂಯೆ ಇರುತ್ತದೆ. ಅವರು ಹೊಂದಿರುವ ಶಿಕ್ಷಣ, ಉದ್ಯೋಗ, ಜೀವನಶೈಲಿ, ಸಾಂಸ್ಕೃತಿಕ ಅಭಿರುಚಿ ಮೊದಲಾದ ಹಿನ್ನೆಲೆ ಇದಕ್ಕೆ ಕಾರಣ. ಆದರೆ ‘ಬಿಹಾರಿಗಳು’ ಎನ್ನುವವರ ಕಣ್ಣಲ್ಲಿರುವುದು ತಿರಸ್ಕಾರಭರಿತ ತುಚ್ಛ ಭಾವನೆ.

ಇಂದು ಭಾರತದಲ್ಲಿ ಬಿಹಾರಿಗಳಿಲ್ಲದ ರಾಜ್ಯಗಳೇ ಇಲ್ಲ ಎನ್ನುವಷ್ಟು ಆ ರಾಜ್ಯದ ಜನ ಸರ್ವಾಂತರಯಾಮಿಗಳಾಗಿದ್ದಾರೆ. ಹದಿನೈದು ವರ್ಷಗಳ ಹಿಂದೆ ಬಿಹಾರದ ಬಗ್ಗೆ ಬರೆಯುವಾಗ ದೆಹಲಿಯ ಮಾನವ ಅಭಿವೃದ್ದಿ ಸಂಸ್ಥೆಯೊಂದು ನಡೆಸಿದ್ದ ಅಧ್ಯಯನವನ್ನು ಬಳಸಿಕೊಂಡಿದ್ದೆ. (ಇತ್ತೀಚಿನ ಅಧ್ಯಯನ ನನ್ನ ಬಳಿ ಇಲ್ಲ) ಅದರ ಪ್ರಕಾರ ಬಿಹಾರದಿಂದ ಆ ಕಾಲದಲ್ಲಿ ಬೇರೆ ರಾಜ್ಯಗಳಿಗೆ ವಲಸೆ ಹೋದವರ ಸಂಖ್ಯೆ ಸುಮಾರು 70-80 ಲಕ್ಷ. ದೆಹಲಿಯಲ್ಲಿ 25-26 ಲಕ್ಷ, ಪಂಜಾಬ್,ಹರ್ಯಾಣಗಳಲ್ಲಿ 25-35 ಲಕ್ಷ, ಕೊಲ್ಕತ್ತಾದಲ್ಲಿ 7 ಲಕ್ಷ, ಮುಂಬೈನಲ್ಲಿ ಐದು ಲಕ್ಷ, ಉತ್ತರ ಪ್ರದೇಶದಲ್ಲಿ ಆರು ಲಕ್ಷ, ಈಶಾನ್ಯ ರಾಜ್ಯಗಳಲ್ಲಿ ಆರು ಲಕ್ಷ ಬಿಹಾರಿಗಳಿದ್ದರು.ಬಿಹಾರದ ಒಟ್ಟು ಜನಸಂಖ್ಯೆಯ ಶೇಕಡಾ 13ರಿಂದ 15ರಷ್ಟು ಜನ ವಲಸೆಹೋಗಿದ್ದಾರೆ. ಆ ರಾಜ್ಯದ ಶೇಕಡಾ 48ರಷ್ಟು ಕುಟುಂಬಗಳ ಕನಿಷ್ಠ ಒಬ್ಬ ಸದಸ್ಯ ವಲಸೆ ಹೋಗಿದ್ದಾನೆ ಎಂದು ಹೇಳಿತ್ತು ಈ ಅಧ್ಯಯನ. ವಲಸೆ ಹೋದವರಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚು, ಕಳೆದೆರಡು ದಶಕಗಳ ಅವಧಿಯಲ್ಲಿ ವಲಸೆ ಹೋದವರಲ್ಲಿ ಮುಸ್ಲಿಮರ ಪ್ರಮಾಣ ಶೇಕಡಾ 50. ಉಳಿದಂತೆ ದಲಿತರು, ಹಿಂದುಳಿದ ಜಾತಿ ಜನ.ಈ ವಲಸೆಗೆ ಮೂರು ಮುಖ್ಯ ಕಾರಣಗಳನ್ನು ಅಧ್ಯಯನ ಕಾರರು ಗುರುತಿಸಿದ್ದರು.

ಅದು ಹಸಿವು,ಅವಮಾನ ಮತ್ತು ಉತ್ತಮ ಭವಿಷ್ಯದ ಆಕಾಂಕ್ಷೆ. (ಇದನ್ನು ಓದುವಾಗ ನನಗೆ ಮುಂಬೈಗೆ ಓಡಿಹೋಗಿದ್ದ ನನ್ನ ಅಯ್ಯನ (ಅಪ್ಪ) ಮತ್ತು ಅವರಂತಹ ದ.ಕ. ಹಿರಿಯರ ನೆನಪಾಗಿತ್ತು) ಬಿಹಾರಿಗಳು ಕಷ್ಟ ಜೀವಿಗಳು, ರಸ್ತೆ ನೀರು,ವಿದ್ಯುತ್ ಮೊದಲಾದ ಮೂಲಭೂತ ಸೌಕರ್ಯಗಳ ಕಡೆ ಕಣ್ಣುಮುಚ್ಚಿಕೊಂಡು ಅಡ್ಡಾಡಿದರೆ ಎದ್ದು ಕಾಣಿಸುವುದು ಅಲ್ಲಿನ ಜನರ ಶ್ರಮ ಜೀವನ. ಆದರೆ ಆ ಶ್ರಮಕ್ಕೆ ಪ್ರತಿಫಲ ಬಹಳ ಕಡಿಮೆ.ನಾನು ದೆಹಲಿಯಲ್ಲಿದ್ದಾಗ ಜಮುನಾ ಪಾರ್ (ಯಮುನಾ ನದಿಯಿಂದ ಆ ಕಡೆ) ಮಯೂರ್ ವಿಹಾರದಲ್ಲಿದ್ದೆ. ಇದು ದೆಹಲಿಯ ಪೂರ್ವಭಾಗ. ಈ ಪೂರ್ವಭಾಗವನ್ನು ಸ್ಥಳೀಯರು ‘ಮಿನಿ ಬಿಹಾರ’ ಎಂದು ಕರೆಯುತ್ತಾರೆ. ಈ ಭಾಗದಲ್ಲಿರುವ ಸೈಕಲ್ ರಿಕ್ಷಾ ತುಳಿಯವವರು, ದಾಬಾಗಳಲ್ಲಿ ತಟ್ಟೆ ತೊಳೆಯುವವರು, ಹಣ್ಣು ತರಕಾರಿ ಮಾರುವವರು, ಟ್ಯಾಕ್ಸಿ ಚಾಲಕರು, ಮನೆ ಕೆಲಸಮಾಡುವವರು ಹೀಗೆ ಯಾರನ್ನೇ ಕೇಳಿ ಅವರೆಲ್ಲ ಬಿಹಾರದ ಗೋಪಾಲಗಂಜ್, ಮಧುಬನಿ, ಪುರ್ನಿಯಾ,ಬೇಗುಸರಾಯ್,ಕಾಥಿಹಾರ್, ದರ್ಬಾಂಗ ಕಡೆಯಿಂದ ಬಂದವರೆಂದು ಹೇಳಿಕೊಳ್ಳುತ್ತಾರೆ. ಹೆಚ್ಚಿನವರು ಏಕಾಂಗಿಗಳು, ಕುಟುಂಬವನ್ನು ಊರಲ್ಲಿ ಬಿಟ್ಟು ಬಂದವರು.ವರ್ಷಕ್ಕೊಮ್ಮೆ ಊರಿಗೆ ಹೋಗುತ್ತಾರೆ-ತುಂಡು ನೆಲದ ಭಾಗ್ಯ ಪಡೆದವರು ಮಳೆಗಾಲದಲ್ಲಿ, ಉಳಿದವರು ಚಳಿಗಾಲದಲ್ಲಿ.ಇವರು ತುಳಿಯುವ ರಿಕ್ಷಾ ಸ್ವಂತದ್ದಲ್ಲ, ಬಾಡಿಗೆಗೆ ಪಡೆದದ್ದು. ಮಾಲೀಕರಲ್ಲಿ ಹೆಚ್ಚಿನವರು ಪೊಲೀಸರು, ಸರ್ಕಾರಿ ಅಧಿಕಾರಿಗಳು ಮತ್ತು ಲೇವಾದೇವಿಗಾರರು. ಸೈಕಲ್ ರಿಕ್ಷಾ ಇಲ್ಲದ ‘ನ್ಯೂಡೆಲ್ಲಿ’ ಪ್ರದೇಶ ಹೊರತುಪಡಿಸಿ ಬೇರೆಡೆ ಸೈಕಲ್ ರಿಕ್ಷಾ ಗಳಿಲ್ಲದ ದಿನವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ನಾನು ದೆಹಲಿಗೆ ಮೊದಲು ಹೋಗಿದ್ದಾಗ ಕನಿಷ್ಠ ಬಾಡಿಗೆ ಐದು ರೂಪಾಯಿ ಇತ್ತು, ಒಂಭತ್ತು ವರ್ಷಗಳ ನಂತರವೂ ಅಷ್ಟೇ ಇತ್ತು. ಬಾಡಿಗೆ ಹೆಚ್ಚಿಸಬೇಕೆಂದು ಇವರೆಂದೂ ಮುಷ್ಕರ ಮಾಡಿಲ್ಲ. ಈ ಐದು ರೂಪಾಯಿಗಾಗಿ ಎರಡು ಕಿ.ಮೀ. ಅಲ್ಲ ಸ್ವಲ್ಪ ದಬಾಯಿಸಿದರೆ ಮೂರು-ನಾಲ್ಕು ಕಿ.ಮೀ ವರೆಗೂ ತುಳಿಯುತ್ತಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಯಿತೆಂದು ಗೊಣಗುವುದಿಲ್ಲ, ಪ್ರಯಾಣಿಕರೊಡನೆ ಅಸಭ್ಯವಾಗಿ ಮಾತನಾಡುವುದಿಲ್ಲ.ಬಡತನ,ಹಿಂಸೆ, ಶೋಷಣೆ, ಅವಮಾನ, ದೂಷಣೆಗಳನ್ನು ಬದುಕಿನ ಭಾಗವಾಗಿಯೇ ಸ್ವೀಕರಿಸಿರುವ ಬಿಹಾರಿಗಳಿಗೆ ತಗ್ಗಿಬಗ್ಗಿ ನಡೆಯುವುದು ಸ್ವಭಾವದಲ್ಲಿಯೇ ಬಂದಿದೆ.

ತಲೆ ಎತ್ತಿ ನಡೆದರೆ ತಲೆ ಕುತ್ತಿಗೆ ಮೇಲೆ ಇಲ್ಲದಂತಹ ಕಾಲ ಅಲ್ಲಿತ್ತು. ಬಿಹಾರದಲ್ಲಿ ಜನ ಇದನ್ನು ನಿರ್ವಿಕಾರವಾಗಿ ‘ಚಾವು ಇಂಚ್ ಛೋಟಾ ಹೋಗಯಾ’ ಎನ್ನುತ್ತಾರೆ. “ತಲೆ ಎತ್ತಿ ನಡೆದಿದ್ದಕ್ಕೆ ತಲೆ ಹೋಯಿತು’ ಎಂದರ್ಥ.ಬಿಹಾರದಿಂದ ಮೊದಲ ವಲಸೆ ಪ್ರಾರಂಭವಾಗಿದ್ದು ಹಸಿರುಕ್ರಾಂತಿಯ ದಿನಗಳಲ್ಲಿ ಪಂಜಾಬ್ –ಹರ್ಯಾಣ ರಾಜ್ಯಗಳಿಗೆ. ಈಗಲೂ ಅಲ್ಲಿನ ಹೊಲಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಹೆಚ್ಚಿನವರು ಬಿಹಾರದವರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಪಂಜಾಬ್ ನ ಬಿಹಾರಿಗಳು ಸಂತುಷ್ಟರು. ಅಲ್ಲಿನ ಮಾಲೀಕ-ಕಾರ್ಮಿಕ ವರ್ಗಭೇದ ಕಡಿಮೆ. ಲಾರಿ ಮಾಲೀಕ ಕ್ಲೀನರ್ ಜೊತೆಯಲ್ಲಿ, ಹೊಲದ ಒಡೆಯ ಕೂಲಿಕಾರ್ಮಿಕನ ಜೊತೆಯಲ್ಲಿ ಕೂತು ಊಟ ಮಾಡುತ್ತಾರೆ.ಗಂಗಾ ನದಿಯ ಎರಡು ದಂಡೆಗಳಲ್ಲಿ ಹರಡಿರುವ ಬಿಹಾರದ ಮಣ್ಣು ಪಂಜಾಬ್-ಹರ್ಯಾಣ ರಾಜ್ಯಗಳಿಗಿಂ ಫಲವತ್ತಾದುದು. ಇಲ್ಲಿನ ಮಳೆಯ ಅವಧಿ ಎರಡು ಬೆಳೆಗಳಿಗೆ ನೈಸರ್ಗಿಕವಾಗಿ ನೀರುಣಿಸುತ್ತದೆ. ದೇಶದ ಕೃಷಿಯೋಗ್ಯ ಭೂಮಿ ಶೇಕಡಾ 47, ಆದರೆ ಬಿಹಾರದ ಪ್ರಮಾಣ ಶೇಕಡಾ 61. ಅತಿವೃಷ್ಟಿ,ಅನಾವೃಷ್ಟಿಯ ಹೊರತಾಗಿಯೂ ಬಿಹಾರದ ರೈತರಿಗೆ ಭೂಮಿ ಕೈಕೊಟ್ಟಿದ್ದು ಕಡಿಮೆ,ಆದರೆ ಭೂಮಿ ನೀಡುವ ಫಲವನ್ನು ಎಲ್ಲರೂ ಸಮನಾಗಿ ಹಂಚಿ ಉಣ್ಣುವ ಸ್ಥಿ ತಿ ಬಿಹಾರದಲ್ಲಿಲ್ಲ. ರಸ್ತೆ,ನೀರು,ವಿದ್ಯುತ್, ಶಾಲೆ,ಆಸ್ಪತ್ರೆ ಎಲ್ಲವೂ ಬಿಹಾರಿಗೆ ಬೇಕು, ಆದರೆ ಅಷ್ಟರಿಂದಲೇ ಬಿಹಾರದ ಬಡತನ,ಶೋಷಣೆ, ಹಿಂಸೆ, ವಲಸೆಪ್ರವೃತ್ತಿ ಬದಲಾಗದು. ಬಿಹಾರ ನಿಜಕ್ಕೂ ಬದಲಾಗಬೇಕಾದರೆ ಅಲ್ಲಿ ಭೂಮಿಯ ಸಮಾನ ಹಂಚಿಕೆಯಾಗಬೇಕು.ಆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಒಂದು ಹೆಕ್ಟೇರ್ ಭೂಮಿ ಇರುವವರ ಪ್ರಮಾಣ ಶೇಕಡಾ 77.1, ನಾಲ್ಕು ಹೆಕ್ಟೇರ್ ವರೆಗೆ ಭೂಮಿ ಉಳ್ಳವರ ಪ್ರಮಾನ ಶೇಕಡಾ 19. ಕೇವಲ ಶೇಕಡಾ ಒಂದರಷ್ಟು ಜನ ನಾಲ್ಕು ಹೆಕ್ಟೇರ್ ಗಳಿಂದ ಸಾವಿರಾರು ಹೆಕ್ಟೇರ್ ವರೆಗಿನ ಭೂಮಿಯನ್ನು ಸಂಬಂಧಿಗಳು, ಗೆಳೆಯರು ಮಾತ್ರವಲ್ಲ ಮನೆಯಲ್ಲಿರುವ ನಾಯಿ-ದನಗಳ ಹೆಸರಲ್ಲಿ ಕೈಯಲ್ಲಿಟ್ಟುಕೊಂಡಿದ್ದಾರೆ. ಬಿಹಾರಕ್ಕೆ ಪ್ರಕೃತಿ ಎಲ್ಲವನ್ನೂ ಕೊಟ್ಟಿದೆ. ಫಲವತ್ತಾದ ಭೂಮಿ. ಹಿಮಾಲಯದಲ್ಲಿ ಹುಟ್ಟುವ ಎಲ್ಲ ನದಿಗಳ ನೀರು, ಅಪಾರ ಖನಿಜ ಸಂಪತ್ತು, ಶ್ರಮಜೀವಿಗಳಾದ ಜನ…

ಇದರ ಜೊತೆ ಒಬ್ಬ ದೇವರಾಜ ಅರಸು ಅವರಂತಹ ನಾಯಕನನ್ನೂ ಕೊಟ್ಟಿದ್ದರೆ, ಬಿಹಾರ ಖಂಡಿತ ಈಗಿನಂತೆ ಇರುತ್ತಿರಲಿಲ್ಲವೇನೋ? ಅಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಾಜವಾದಿ ಕರ್ಪೂರಿ ಠಾಕೂರು ಅವರನ್ನು ಬಿಹಾರದ ದೇವರಾಜ ಅರಸು ಎನ್ನುತ್ತಾರೆ. ಕರ್ಪೂರಿ ಠಾಕೂರ್ ಎರಡನೇ ಅವಧಿಗೆ (1977- 1979) ಮುಖ್ಯಂತ್ರಿಯಾಗಿದ್ದಾಗ ಕರ್ನಾಟಕದ ಭೂ ಸುಧಾರಣಾ ಕಾಯ್ದೆ ಬಗ್ಗೆ ಆಸಕ್ತಿ ತೊರಿದ್ದರಂತೆ. ಆದರೆ ಅವರ ಮುಖ್ಯಮಂತ್ರಿ ಸ್ಥಾ ನ ಎರಡೇ ವರ್ಷಕ್ಕೆ ಕೊನೆಗೊಂಡಿತ್ತು. ಅದರ ನಂತರ ಬಂದ ಲಾಲು ಪ್ರಸಾದ್ ಅವರಾಗಲಿ, ಈಗಿನ ನಿತೀಶ್ ಕುಮಾರ್ ಅವರಾಗಲಿ ಭೂ ಸುಧಾರಣೆ, ಭೂಮಿ ಹಂಚಿಕೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕದ ಭೂಸುಧಾರಣೆ ಕಾಯ್ದೆಯನ್ನೇ ನಾಶ ಮಾಡಲು ಹೊರಟಿರುವಾಗ ಬಿಹಾರದಲ್ಲಿ ಭೂ ಸುಧಾರಣೆಯ ಕನಸು ಕಾಣುವುದೂ ಕೂಡಾ ಸಾಧ್ಯ ಇಲ್ಲ.‘ವಿಕಾಸ ಪುರುಷ’ನ ಅವತಾರದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಕುರ್ಚಿಯೇರಿದಾಗ ಬಿಹಾರದ ಜನರಲ್ಲಿ ಮಾತ್ರವಲ್ಲ, ಹೊರಗಿನವರಲ್ಲಿಯೂ ಒಂದಷ್ಟು ನಿರೀಕ್ಷೆಗಳು ಗರಿಕೆದರಿದ್ದವು. ಅವರು ಕೊನೆಗೆ ‘ವಿನಾಶ ಪುರುಷ’ನ ಜೊತೆ ಐಕ್ಯರಾಗಿ ಬಿಟ್ಟರು. ಈಗಿನ ವಿಧಾನಸಭಾ ಚುನಾವಣೆಯಲ್ಲಿ ಯಾರು ಸೋತರೂ,ಗೆದ್ದರೂ ಸಾಮಾನ್ಯ ಬಿಹಾರಿಗಳ ಬದುಕು ಬದಲಾಗದು.

-ದಿನೇಶ್ ಅಮ್ಮಿನಮಟ್ಟು

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *