ಬಲೀಂದ್ರ ಬಂದ

ಇನ್ನೇನು ನಮ್ಮ ಮನೆಗಳಲ್ಲಿ ಬಲಿ ರಾಜ ಬಂದು ಕೂರಲಿದ್ದಾ‌ನೆ. (ಮಣ್ಣಿನ ಮಡಕೆ, ಅದರ ಮೇಲೆ ಹಣತೆಯ ರೂಪದಲ್ಲಿ) ಅವನು ಬರುವಾಗ ರೈತಾಪಿಗಳ ಬೇಸಾಯದ ಪರಿಕರಗಳನ್ನೆಲ್ಲಾ ಜೋಡಿಸಿ ಇಡಲಾಗುತ್ತದೆ.
ವೈದಿಕರ ಪುರಾಣದಲ್ಲಿ ನಮ್ಮ ಬಲಿ ಚಕ್ರವರ್ತಿ ಒಬ್ಬ ದುರಹಂಕಾರಿಯಂತೆ. ವಾಮನ ಎಂಬ ಕುಬ್ಜ ವಂಚಕ ಬಂದು ಬಲಿರಾಜನ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡು ಬಲಿಚಕ್ರವರ್ತಿಯ ಸಾಮ್ರಾಜ್ಯವನ್ನು ಕಿತ್ತುಕೊಂಡು ಮೋಸದಿಂದ ಕೊಲೆಮಾಡುತ್ತಾನೆ.

ಇಂದು ಪುರಾಣದ ಐತಿಹ್ಯದ ಸ್ವರೂಪದಲ್ಲಿ ಚಾಲ್ತಿಯಲ್ಲಿರುವ ಬಲಿರಾಜನ ಕತೆ ನಮಗೆ ನಮ್ಮ ನೆಲದ, ನಮ್ಮ ಜನರ ಇತಿಹಾಸದಲ್ಲಿ ‌ನಡೆದಿರುವ ವಂಚನೆ, ಕುತಂತ್ರದ ಕತೆಯನ್ನು ಹೇಳುತ್ತದೆ. ದ್ರಾವಿಡ ನಾಡಿನ ಮೂಲನಿವಾಸಿಗಳು ತಮ್ಮ ನೆಲವನ್ನು ಕಳೆದುಕೊಂಡು, ಪರಕೀಯರ ದಾಳಿಗೆ ತುತ್ತಾದ ಕತೆಯನ್ನೂ ಇದು ಹೇಳುತ್ತದೆ‌‌

ಆದರೆ ಬಲೀಂದ್ರನನ್ನು ಪ್ರತಿವರ್ಷ ಕರೆತರುವ ನಮ್ಮ ರೈತಾಪಿ ಸಂಸ್ಕೃತಿಯಲ್ಲಿ ಬಲೀಂದ್ರ ಜೀವಂತವಾಗಿದ್ದಾನೆ. ಇದೇ ಸಂಸ್ಕೃತಿಯ ಭಾಗವಾಗಿ ನಮ್ಮ ಕಡೆಯ ಜಾನಪದ ಹಾಡುಗಳಲ್ಲಿ ಬಲೀಂದ್ರನನ್ನು ಜನಪದರು ನೆನೆಸಿಕೊಳ್ಳುವ ಪರಿಯ ನೋಡಿ.

ಬಲ್ಲೇಳ ಬಲೀಂದ್ರರಾಯ
ಬಂದಾನೋ ತನ ರಾಜ್ಯಕೆ
ಬಲೀಂದ್ರರಾಜ ಬಂದು
ಬಾಗಿಲಾಗೆ ಕುಂತಾರೆ
ಕಲ್ಲಂತ ಮಳೆಯೆ ಕರೆದಾವೆ
ಕಲ್ಲಂತ ಮಳೆಯೆ ಕರದಾವೆ ಈ ಊರ
ಜಡ್ಡು ಜಬುರೆಲ್ಲ ಚಿಗುರ‌್ಯಾವೆ
ಜಡ್ಡು ಜಬುರೆಲ್ಲ ಚಿಗುರ‌್ಯಾವೆ ಈ ಊರ
ಗೊಡ್ಡ ದನಗಳೆಲ್ಲ ಕರಹಾಕಿ
ಹಂಡೆ ಹಂಡೆ ನೂರು ಹಂಡೆಯ ಕರ ನೂರು
ಹಂಡೆವ್ವ ನಿನ್ನ ದಯ ನೂರು
ಹಂಡೆಯ ಹಾಲ ಕರೆದು ಪಾಸೆ ಮಾಡಿ
ಬಂದ ಬಲೀಂದ್ರಸ್ವಾಮಿಗೆ ಎಡೆ ಮಾಡಿ

(ದೀವರ ಹಾಡುಗಳು, ಸಂಗ್ರಹ: Jayaram Kh ಜಯರಾಮ ಕೆ.ಎಚ್.)

ನಮ್ಮ ಜನಮಾನಸದ ದೊರೆ ಬಲೀಂದ್ರ ರಾಜ ಜನರ‌ ನೆನಪುಗಳಲ್ಲಿ ಚಿರಾಯುವಾಗಲಿ.

  • ಹರ್ಷಕುಮಾರ್ ಕುಗ್ವೆ
  • https://www.youtube.com/watch?v=VIM4Lqp_4pY&t=36s

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *