

ಯಕ್ಷಗಾನ ಸೇರಿದಂತೆ ಮಲೆನಾಡಿನ ಜೀವವೈವಿಧ್ಯ, ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಸ್ಥಳಿಯರ ಮೇಲಿದೆ ಎಂದು ಹೇಳಿರುವ ಪತ್ರಕರ್ತ ಸಮಾಜಮುಖಿ ಕನ್ನೇಶ್ ಕೋಲಶಿರ್ಸಿ ನಮ್ಮ ಪರಿಸರ,ನಮ್ಮ ವೈಶಿಷ್ಟ್ಯಮಯ ಜೀವವೈವಿಧ್ಯ, ಕಲೆ-ಸಂಸ್ಕೃ ತಿಗಳ ರಕ್ಷಣೆಗೆ ಮುಂದಾಗಲು ಕರೆ ನೀಡಿದ್ದಾರೆ.
ಸಿದ್ಧಾಪುರ ಕಿಲಾರ ಗ್ರಾಮದ ಹಿತ್ತಲಗದ್ದೆ ಮಹಾಗಣಪತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮತ್ತು ರಾಜ್ಯ ಯಕ್ಷಗಾನ ಅಕಾಡೆಮಿ ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷಗಾನ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೊರ ಊರುಗಳನ್ನು ನೋಡಿದ ಮೇಲೆ ನಮಗೆ ನಮ್ಮ ನೆಲದ ಮಹತ್ವ ಅರಿವಾಗುತ್ತದೆ. ನಮ್ಮ ನೆಲ-ಜಲ, ಜನ-ಪರಿಸರದ ಮಹತ್ವ ನಮಗೆ ಅರಿವಾಗದಿದ್ದರೆ ನಮಗೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಜಿ.ಕೆ. ಭಟ್ ಕಶಿಗೆ ಮಾತನಾಡಿ ಕಲೆ-ಸಾಹಿತ್ಯ, ಭೌದ್ಧಿಕತೆಗಳಿಗೆ ಮಡಿವಂತಿಕೆ ಅಪಾಯಕಾರಿ, ಯಕ್ಷಗಾನದಂಥ ಜಾನಪದ ಕಲೆಗಳಿಗೆ ಮಡಿವಂತಿಕೆ ತಟ್ಟುವುದಿಲ್ಲ, ಜಂಗಮಸ್ವರೂಪಿಯಾದ ಯಕ್ಷಗಾನ ಜಾನಪದ ಹರಿಯುವ ನದಿಯಂತೆ ಹೊಸತು, ಪ್ರಾಚೀನತೆಗಳ ಸಂಗಮ ಎಂದರು.
ಈ ಕಾರ್ಯಕ್ರಮ ಉದ್ಘಾಟಿಸಿದ ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಯಕ್ಷಗಾನ ಅಕಾಡೆಮಿ ನಡೆಸುತ್ತಿರುವ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಸುರೇಶ್ಚಂದ್ರ ಹೆಗಡೆ ಮಾತನಾಡಿ ಮೊಬೈಲ್ ಲೋಕದ ಮಾಯೆಯಿಂದ ತಪ್ಪಿಸಿಕೊಳ್ಳಲು ಹೊಸ ಜನಾಂಗ
ಕಲೆ-ಸಾಂಸ್ಕೃ ತಿಕತೆಗಳ ಮೊರೆ ಹೋಗಬೇಕು ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಸಂಘಟಕ ವಾಸು ನಾಯ್ಕ ಜನರ ಸಹಕಾರದಿಂದ ಯಕ್ಷಗಾನ ಲೋಕದ ಉಳಿವು ಸಾಧ್ಯ ಎಂದರು. ಶ್ರೀಕಾಂತ್ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು. ಜೈಕುಮಾರ ನಾಯ್ಕ ನಿರೂಪಿಸಿದರು. ಸಭಾ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಸಾಧಕರನ್ನು ಗೌರವಿಸಿ, ಅಭಿನಂದಿಸಲಾಯಿತು. ನಂತರ ಯಕ್ಷಗಾನ ಪ್ರದರ್ಶನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
(related) ಯಕ್ಷಗಾನ ಶಾಸ್ತ್ರೀಯ ಕಲೆ ಎನ್ನುವ ಮಿಥ್ ಹರಡಲಾಗುತ್ತಿದೆ, ಆದರೆ ಯಕ್ಷಗಾನ ಶುದ್ಧ ಜಾನಪದ ಕಲೆ. ಯಕ್ಷಗಾನ ಜಾನಪದ ಕಲೆ ಎನ್ನುವ ವಾದಕ್ಕೆ ಹಲವು ಪುರಾವೆಗಳಿವೆ ಎಂದು ಹಿರಿಯ ಪತ್ರಕರ್ತ ಜಿ.ಕೆ. ಭಟ್ ಕಶಿಗೆ ಪ್ರತಿಪಾದಿಸಿದರು. ಅವರು ಕಿಲಾರದಲ್ಲಿ ನಡೆದ ಯಕ್ಷಗಾನ ಕಾರ್ಯಾಗಾರದ ಉದ್ಘಾಟನೆ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಗಾನ ಜಾನಪದ ಕಲೆ ಅನಕ್ಷರಸ್ಥರು,ಶಿಕ್ಷಿತರು ಅವರಿವರೆನ್ನುವ ಭೇದವಿಲ್ಲದೆ ಎಲ್ಲರೂ ಯಕ್ಷಗಾನವನ್ನು ಕಲಿಯುತ್ತಾರೆ. ಯಕ್ಷಗಾನ ಕಲಿತಷ್ಟು ಸುಲಭವಾಗಿ ಶಾಸ್ತ್ರೀಯ ಕಲೆಗಳನ್ನು ಕಲಿಯಲು ಸಾಧ್ಯವಿಲ್ಲ, ಹಳತರೊಂದಿಗೆ ಹೊಸತನವನ್ನು ಜೋಡಿಸಿಕೊಳ್ಳುವ ಜಂಗಮಸ್ವರೂಪಿ ಸ್ವಾಭಾವ, ಗುಣಲಕ್ಷಣಗಳೇ ಯಕ್ಷಗಾನ ಜಾನಪದ ಕಲೆ ಎನ್ನುವುದಕ್ಕೆ ಸಾಕ್ಷಿ ಎಂದರು.
ರಾಜ್ಯ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಹಿತ್ತಲಗದ್ದೆ ಶ್ರೀ ಮಹಾಗಣಪತಿ ಕೃಪಾಪೋಷಿತ ಯಕ್ಷಗಾನ
ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷಗಾನ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಯ.ಅ.ಸದಸ್ಯೆ ನಿರ್ಮಲಾ ಹೆಗಡೆ ಮಾತನಾಡಿ ಯಕ್ಷಗಾನ ವ್ಯಕ್ತಿ-ವ್ಯಕ್ತಿತ್ವಗಳನ್ನು ಬೆಳೆಸುತ್ತದೆ ಎಂದರು.
ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ಧೇಶಕ ಸುರೇಶ್ಚಂದ್ರ ಹೆಗಡೆ, ಪತ್ರಕರ್ತ ಸಮಾಜಮುಖಿ ಕನ್ನೆಶ್ ಕೋಲಶಿರ್ಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಮತ್ತು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿತ್ತಲಗದ್ದೆ ಮ.ಕೃ ಯ.ಮಂಡಳಿ ಮುಖ್ಯಸ್ಥ ವಾಸು ನಾಯ್ಕ ಪ್ರಾಸ್ಥಾವಿಕವಾಗಿ ಮಾತನಾಡಿದರು. ಶ್ರೀಕಾಂತ್ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು. ಜೈಕುಮಾರ ನಾಯ್ಕ ನಿರೂಪಿಸಿದರು.
ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾದ ಅಘನಾಶಿನಿ ಸಾಂಬಾರ ಬೆಳೆಗಳ ಉತ್ಪಾದಕರ ಕಂಪನಿ ಕಟ್ಟಡ ನಿರ್ಮಾಣಕ್ಕೆ ಹಿರಿಯರಾದ ಕಮಲಾಕರ ಹೆಗಡೆ ಉಯ್ಯಾಲೆಮನೆ, ರಾಮಚಂದ್ರ ಹೆಗಡೆ ಕುಂಬಾರಕುಳಿ ದಂಪತಿ ಹಾಗೂ ರಾಮಕೃಷ್ಣ ಹೆಗಡೆ ಮಲಕಾರ ದಂಪತಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಂಪನಿ ಅಧ್ಯಕ್ಷ ಎಸ್.ಆರ್.ಹೆಗಡೆ ಕುಂಬಾರಕುಳಿ ಕಂಪನಿಯಲ್ಲಿ ಒಂದು ಸಾವಿರ ರೈತರು ಶೇರುದಾರ ಸದಸ್ಯರಿದ್ದಾರೆ. ಪ್ರಸ್ತುತ ವಾರ್ಷಿಕ ವಹಿವಾಟು 40ಲಕ್ಷರೂಗಳಷ್ಟಿದ್ದು ಶೀಘ್ರದಲ್ಲಿ ಒಂದು ಕೋಟಿಗೇರಲಿದೆ. ಕಂಪನಿ 26ಗುಂಟೆ ಸ್ವಂತ ನಿವೇಶನ ಹೊಂದಿದೆ. ಕೇಂದ್ರದ ಕೃಷಿ ಉದ್ದಿಮೆ ಒಕ್ಕೂಟವು ತನ್ನ ಪಾಲಿನ ಶೇರು ಬಂಡವಾಳ 10ಲಕ್ಷ ರೂಗಳನ್ನು ಕಂಪನಿಯಲ್ಲಿ ಹೂಡಿಕೆ ಮಾಡಿದ್ದು ಶೀಘ್ರದಲ್ಲೆಯೇ ಎಲ್ಲ ಶೇರು ಸದಸ್ಯರಿಗೆ ರೂ ಒಂದು ಸಾವಿರ ಮೇಲ್ಪಟ್ಟ ಹೆಚ್ಚುವರಿ ಶೇರು ಪತ್ರ ವಿತರಿಸಲಾಗುವುದು.
ಕಂಪನಿಯ ನಿವೇಶನದಲ್ಲಿ 25ಲಕ್ಷ ರೂಗಳ ವೆಚ್ಚದಲ್ಲಿ ಗ್ರಾಮೀಣ ಮಾರುಕಟ್ಟೆ ಸಂಕೀರ್ಣ ಅನುಷ್ಠಾನಗೊಳ್ಳಲಿದ್ದು ಇದಕ್ಕೆ ತೋಟಗಾರಿಕಾ ಇಲಾಖೆ 10ಲಕ್ಷ ರೂ ಸಹಾಯಧನ ನೀಡಲಿದೆ. ಕೃಷಿಯಂತ್ರಗಳ ಸೇವಾ ಕೇಂದ್ರಕ್ಕಾಗಿ ಶೇ.80ರ ಸಹಾಯಧನದಲ್ಲಿ 10ಲಕ್ಷ ಅನುದಾನ ಕೃಷಿ ಇಲಾಖೆಯಿಂದ ಮಂಜೂರಾಗಿದೆ.ಮುಠ್ಠಳ್ಳಿ-ಊರತೋಟದಲ್ಲಿ ಕಂಪನಿಯ ಸಹಭಾಗಿತ್ವದಲ್ಲಿ ಎರೆಗೊಬ್ಬರ ಘಟಕ ಸ್ಥಾಪಿಸಲಾಗಿದೆ.
ಕಂಪನಿ ಸ್ವಂತ ಜಮೀನು ಹೊಂದಿರುವುದರಿಂದ ಕೇಂದ್ರದಿಂದ ಒಂದು ಜಿಲ್ಲೆ ಒಂದು ಉತ್ಪಾದನೆ ಯೋಜನೆಯಲ್ಲಿ ಸ್ಪೈಸ್ ಕ್ಲಸ್ಟರ್ ಸ್ಥಾಪಿಸಲು ಅಘನಾಶಿನಿ ಸಾಂಬಾರು ಮಂಡಳಿ ಆಯ್ಕೆ ಆಗಿದ್ದು ಸುಮಾರು 5 ಕೋಟಿರೂಗಳ ವೆಚ್ಚದಲ್ಲಿ ಕಾಳುಮೆಣಸು ಮತ್ತಿತರ ಸಾಂಬಾರ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಘಟಕ ಕಂಪನಿ ಆವಾರದಲ್ಲಿ ತಲೆ ಎತ್ತಲಿದೆ ಎಂದು ಹೇಳಿದರು.
ಕಂಪನಿ ನಿರ್ದೇಶಕರಾದ ದಿನೇಶ ಹೆಗಡೆ ಕರ್ಕಿಸವಲ್, ನಾಗಪತಿ ಹೆಗಡೆ ಹರ್ತೆಬೈಲ್, ಡಾ.ರವಿ.ಹೆಗಡೆ ಹೊಂಡಗಾಸಿಗೆ, ಉಮಾಕಾಂತ ಹೆಗಡೆ ಹೀನಗಾರ, ರಾಜು ನಾಯ್ಕ ಗವಿನಗುಡ್ಡ, ಲೋಕೇಶ ಹೆಗಡೆ ಒಡಗೇರೆ, ರವೀಂದ್ರ ಹೆಗಡೆ ಹಿರೇಕೈ, ಸಿ.ಎನ್.ಹೆಗಡೆ ಹೊನ್ನೆಹದ್ದ, ಸಿ.ಆರ್.ಹೆಗಡೆ ಮಲಕಾರ, ನಾಗರಾಜ ಹೆಗಡೆ, ಎಸ್.ಎನ್.ಹೆಗಡೆ, ವಿ.ಆರ್.ಹೆಗಡೆ ಹಾಗೂ ಸದಸ್ಯರು, ಕಂಪನಿ ಸಿಇಒ ದರ್ಶನ ಹೆಗಡೆ, ಸಹಾಯಕ ಪ್ರಮೋದ ಕೊಡಿಯಾ ಹೊನ್ನೆಹದ್ದ ಇತರರಿದ್ದರು.



