old is gold- ತಮಸ್ಸು,ಅಗ್ನಿ ಶ್ರೀಧರ್-ಶಿವರಾಜ್ಕುಮಾರ್ ಶ್ರೇಯಸ್ಸು!

‘ತಮಸ್ಸು’ ಚಲನಚಿತ್ರವೆಂಬ ‘ದೃಶ್ಯ ಕಾವ್ಯ’..!

ಅಗ್ನಿ ಶ್ರೀಧರ್ ಅವರು ಕಥೆ, ಚಿತ್ರ ಕಥೆ ಬರೆದು ಚಲನಚಿತ್ರವನ್ನು ನಿರ್ದೇಶಿಸಿದ ‘ತಮಸ್ಸು’ ಚಿತ್ರದಲ್ಲಿ ಕಥೆಯಿದೆ. ಅಣ್ಣ ತಂಗಿಯ ಭಾವನಾತ್ಮಕ ಸಂಬಂಧಗಳಿವೆ . ಅನುರಾಗಕ್ಕೆ ಅನುವುವಿದೆ. ಮತ್ತೆ ಮತ್ತೇ ಕೇಳಬೇಕೆನ್ನುವ ಸುಂದರವಾದ ಹಾಡುಗಳಿವೆ. ಸಂಭಾಷಣೆ ಸೊಗಸಾಗಿದೆ. ಬಿಗಿಯಾದ ನಿರೂಪಣೆಯಿದೆ. ಆದರೆ ಕಥೆ ವೇಗವಾಗಿ ಸಾಗುವುದಿಲ್ಲವಾದರೂ ಕಥೆಗೇನೂ ತೊಂದರೆಯಿಲ್ಲ. ಈ ಚಿತ್ರವೇ ಹಾಗೇ ಸಾವಧಾನದ ವೇಗದಿಂದ ಸಾಗುವಂತಾ ಕಥೆಯದು. ಆದರೆ ಪಕ್ಕಾ ಮಾಮೂಲಿ ಸಿನೆಮಾ ನೋಡುವವರಿಗೆ ಕಾಮಿಡಿ ಬೇಕು. ಆ ಕಾಮಿಡಿಗೆ ಇಲ್ಲಿ ಜಾಗವಿಲ್ಲ. ನಿಸ್ಸಂಶಯವಾಗಿ ಇದೊಂದು ಅಪ್ಪಟ ವಿವಾದಾತೀತ ಕ್ಲಾಸ್ ಹಾಗೂ ಕಮರ್ಷಿಯಲ್ ಚಿತ್ರ. ಆದರೆ ಇದನ್ನು ಅರ್ಥ ಮಾಡಿಕೊಳ್ಳಬೇಕು ನಾವು. ಕ್ಲಾಸ್ ಚಿತ್ರಕ್ಕೆ ಇರಬೇಕಾದ ಎಲ್ಲ ಲಕ್ಷಣಗಳೂ ‘ತಮಸ್ಸು’ ಚಿತ್ರದಲ್ಲಿವೆ.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಾವೊಬ್ಬ ಮಹಾನ್ ಕಲಾವಿದ ಎಂಬುದನ್ನು ನಿರೂಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಸಿನೆಮಾವೇ ಅವರನ್ನು ಗಂಭೀರ ಪಾತ್ರಕ್ಕೆ ಸರಿದೂಗಿಸಿಕೊಂಡಿದ್ದಾರೆ. ಹಾಗಂತ ಶಿವರಾಜ್ ಕುಮಾರ್ ರ ಪಾತ್ರಕ್ಕೆ ಸರಿಹೊಂದುವಂತ ಸಹಜ ಅಭಿನಯ ಚಾತುರ್ಯವನ್ನು ಅಲ್ಲಗಳೆಯಲಾಗದು. ಅವರೊಬ್ಬ ಮಹಾನ್ ನಟನಷ್ಟೇ ಅಲ್ಲ ಮಹಾನ್ ಕಲಾವಿದ ಕೂಡ.ತಮಸ್ಸಿನಲ್ಲಿ ”ಭೀಕರ ಹಿಂಸೆಯ ದಾರಿಯಲ್ಲೂ ಅರಳುತ್ತವೆ ಪ್ರೀತಿಯ ಹೂಗಳು” ಎಂಬ ಚಿತ್ರದ ಕಾವ್ಯಾತ್ಮಕ ಆಶಯಕ್ಕೆ ಅಗ್ನಿ ಶ್ರೀಧರ್ ನಿರ್ದೇಶನ ನೀರೆರೆದಿದೆ.

ಚಿತ್ರದ ಮೊದಲರ್ಧ ಕೋಮುಗಲಭೆ ಮತ್ತು ಈ ಕೋಮುಗಲಭೆಗೆ ನಿಯಂತ್ರಿಸಲು ಬೇಕಾದ ಮಾನವತೆಯ ಕಾಳಜಿಗೆ ಮೀಸಲಾಗಿದ್ದರೆ. ದ್ವಿತೀಯಾರ್ಧ ಭಾವನಾತ್ಮಕ ಸಂಘರ್ಷಗಳ ತಾಕಲಾಟದಿಂದ ತುಂಬಿದೆ ಈ ಚಿತ್ರ.ಬೆಂಗಳೂರಿನಲ್ಲಿ ನಡೆಯುವ ಕೋಮು ಗಲಭೆ ಮೂಲಕ ಚಿತ್ರ ಆರಂಭವಾಗುತ್ತದೆ. ತ್ರಿಶೂಲ ಮತ್ತು ಖಡ್ಗಗಳಿಗೆ ಅಮಾಯಕ ಜನ ಬಲಿಯಾಗುತ್ತಾರೆ. ಒಂದು ಕಡೆ ಅಲ್ಲಾಹು ಅಕ್ಬರ್ ಮತ್ತೊಂದು ಕಡೆ ಜೈ ಶ್ರೀರಾಮ್ ಎಂಬ ನಿನಾದಗಳು. ಕೈಮಿರುತ್ತಿರುವ ಕಾನೂನು ಸುವ್ಯವಸ್ಥೆಗಳನ್ನು ನಿಯಂತ್ರಣಕ್ಕೆ ತರಲು ಪೊಲೀಸ್ ವ್ಯವಸ್ಥೆ ಚುರುಕಾಗುತ್ತದೆ. ಆ ನಿಯಂತ್ರಿಸುವ ಪಾತ್ರವನ್ನು ಶಿವರಾಜ್ ಕುಮಾರ್ ಸಹಜವಾಗಿ ಮತ್ತು ಗಂಭೀರವಾಗಿ ಮಾಡಿದ್ದಾರೆ.ದಕ್ಷ ಪೊಲೀಸ್ ಅಧಿಕಾರಿ ಶಂಕರ್ (ಶಿವರಾಜ್ ಕುಮಾರ್) ಕೋಮುಗಲಭೆಯನ್ನು ಮಟ್ಟ ಹಾಕಲು ತನ್ನ ತಂಡದೊಂದಿಗೆ ಹೊರಡುತ್ತಾನೆ. ಮಫ್ತಿಯಲ್ಲಿದ್ದ ಅವರು ದಾಳಿಕೋರರರ ಕೈಗೆ ಸಿಕ್ಕಿ ತಲೆಗೆ ಬಲವಾದ ಪೆಟ್ಟು ತಿನ್ನುತ್ತಾರೆ. ಅಲ್ಲೇ ಇದ್ದ ಮುಸ್ಲಿಂ ಮನೆಯೊಂದರಲ್ಲಿ ತಲೆ ಮರೆಸಿಕೊಳ್ಳುತ್ತಾರೆ.ಇಲ್ಲಿಂದ ಚಿತ್ರಕಥೆ ಹೊಸ ತಿರುವು ಪಡೆಯುತ್ತದೆ. ಆ ಮುಸ್ಲಿಂ ಮನೆಯಲ್ಲಿ ಶಿವಣ್ಣನಿಗೆ ಒಳ್ಳೆಯ ಆದರ ಆತಿಥ್ಯಗಳು ಲಭಿಸುತ್ತವೆ. ಭಯ್ಯಾ ಎಂದು ಕರೆಯುವ ಮುಸ್ಲಿಂ ಹುಡುಗಿಯಲ್ಲಿ ಶಂಕರ್ (ಶಿವಣ್ಣ) ತಂಗಿಯೊಬ್ಬಳನ್ನು ಹುಡುಕಿಕೊಳ್ಳುತ್ತಾನೆ. ಆಕೆಯ ಹೆಸರು ಅಮ್ರೀನ್ ಸಭಾ. ಮುಂಜಾನೆ ಮಂಜಿನಂತೆ ಆಕೆ ಶಿವಣ್ಣನನ್ನು ಆವರಿಸಿಕೊಳ್ಳುತ್ತಾಳೆ. ಹಾಗೆಯೇ ಆಕೆಯ ತಂದೆಯ ಕಣ್ಣಲ್ಲಿ ತನ್ನ ತಂದೆಯನ್ನು ಕಾಣುತ್ತಾನೆ.ಇಲ್ಲಿಂದ ಕಥೆ ಫ್ಲ್ಯಾಶ್ ಬ್ಯಾಕ್ ಗೆ ಹೊರಳುತ್ತದೆ. ತನ್ನ ಪ್ರೀತಿಯ ಮಡದಿ. ಮೊದಲ ಭೇಟಿ. ಅನುರಾಗ ಅರಳಿದ ಸಮಯ. ಚಿಗುರಿದ ಕನಸುಗಳಲ್ಲಿ ಶಿವಣ್ಣ ವಿಹರಿಸುತ್ತಾನೆ.

ಜೊತೆಗೆ ಅಮ್ರೀನ್ ಳೊಂದಿಗಿನ ಅಣ್ಣ ತಂಗಿಯ ಸೆಂಟಿಮೆಂಟೂ ಬಲವಾಗುತ್ತಾ ಹೋಗುತ್ತದೆ. ಶಿವಾಜಿ ನಗರ, ಟ್ಯಾನರಿ ರಸ್ತೆ ಮತ್ತು ಗೌರಿಪಾಳ್ಯಗಳಲ್ಲಿ ಜೈಶ್ರೀರಾಮ್, ಅಲ್ಲಾಹು ಅಕ್ಬರ್ ನಿನಾದಗಳು ಕಿವಿ ತೂತಾಗಿಸುತ್ತವೆ.ಅಮ್ರೀನ್ ಳ ಅಣ್ಣ ಇಮ್ರಾನ್ ನನ್ನು ಭಯೋತ್ಪಾಕ ಎಂದು ತಿಳಿದು ಶಂಕರ್ ಹಿಂದು ಮುಂದು ನೋಡದೇ ತಲೆಗೆ ಪಿಸ್ತೂಲ್ ಇಟ್ಟು ಉಡಾಯಿಸಿರುತ್ತಾನೆ. ಬಳಿಕ ಶಂಕರ್ ಗೆ ಗೊತ್ತಾಗುತ್ತದೆ ತಾನು ಸಾಯಿಸಿದ್ದು ಉಗ್ರನನ್ನಲ್ಲ ಒಬ್ಬ ಅಮಾಯಕನನ್ನು ಎಂಬ ಸತ್ಯ ಸಂಗತಿ. ಇದರಿಂದ ಪಶ್ಚಾತ್ತಾಪ ಪಡುತ್ತಾನೆ. ತನ್ನಲ್ಲೇ ನೋವು ಅನುಭವಿಸುತ್ತಾನೆ.ತಮ್ಮ ಅಣ್ಣನನ್ನು ಸಾಯಿಸಿದ್ದು ಶಂಕರ್ ಎಂಬುದು ಅಮ್ರೀನ್ ಹಾಗೂ ಆಕೆಯ ತಂದೆಗೆ ಗೊತ್ತಾಗುತ್ತದೆ. ತಂಗಿ ದೂರವಾಗುತ್ತಾಳೆ. ಆಕೆಯ ತಂದೆ ಕಣ್ಣಿನಲ್ಲಿ ಶಂಕರ್ ವಿಲನ್ ಆಗುತ್ತಾನೆ. ಕಡೆಗೆ ಇವರಿಬ್ಬರ ಪ್ರೀತಿ ಮಮಕಾರಗಳನ್ನು ಹೇಗೆ ಗಳಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಕೊನೆಯ ಘಟ್ಟದಲ್ಲಿ ಕಾಣಬಹುದು .

ಶಿವರಾಜ್ ಕುಮಾರ್ ಅವರ ಮಡದಿ ಪಾತ್ರದಲ್ಲಿ ಪದ್ಮಪ್ರಿಯಾ ಅಭಿನಯ ಗಮನ ಸೆಳೆಯುತ್ತದೆ. ಇಬ್ಬರ ನಡುವಿನ ಭಾವನಾತ್ಮಕ ಸಂಘರ್ಷಗಳು ರಾಜ್ ಕುಮಾರ್ ಹಾಗೂ ಲಕ್ಷ್ಮಿ ನಟನೆಯನ್ನು ನೆನಪಿಸುತ್ತದೆ. ಇಮ್ರಾನ್ ಆಗಿ ಯಶ್ ಮಿಂಚುತ್ತಾರೆ. ಉಳಿದಂತೆ ನಾಸಿರ್ ಅಭಿನಯವನ್ನು ಬೆಟ್ಟು ಮಾಡಿ ತೋರಿಸುವಂತಿಲ್ಲ. ಹರ್ಷಿಕಾ ಪೂಣಚ್ಚ ಹಾಗೂ ಶಿವಣ್ಣ ಜೋಡಿ ರಾಧಿಕಾ ಶಿವಣ್ಣನ ಅಣ್ಣ ತಂಗಿ ಸೆಂಟಿಮೆಂಟನ್ನೂ ಮೀರಿಸುವಂತಿದೆ.ಈ ಚಿತ್ರದ ನಿಜವಾದ ಜೀವಾಳ ಹಾಡುಗಳು. ಸಂಧೀಪ್ ಚೌಟ ಅವರ ಸಂಗೀತ ಮಾಧುರ್ಯದಿಂದ ಮನಸ್ಸು ಮಿಡಿಯುವಂತಿದೆ. ರಮ್ಯ ಶ್ರೀಧರ್ ಹಾಗೂ ಅಗ್ನಿ ಶ್ರೀಧರ್ ಅವರ ಸಾಹಿತ್ಯ ಅರ್ಥಪೂರ್ಣವಾಗಿದೆ. ಮಸ್ತಾನ್ ಬಾಯ್ ಪಾತ್ರದಲ್ಲಿ ಶರತ್ ಲೋಹಿತಾಶ್ವ ಪಾತ್ರ ಗಮನಾರ್ಹವಾಗಿದೆ. ಸುಂದರನಾಥ್ ಸುವರ್ಣ ಅವರ ಛಾಯಾಗ್ರಹಣ ಸುಂದರವಾಗಿದೆ.ಗಿರೀಶ್ ಮಟ್ಟಣ್ಣನವರ್, ಸತ್ಯ ಮುಂತಾದ ಪಾತ್ರಗಳು ಬಂದು ಹೋಗುತ್ತವಾದರೂ ನೆನಪಿನಲ್ಲಿ ಉಳಿಯುವುದಿಲ್ಲ.

ಕೋಮುವಾದ ಕುರಿತ ಚಿತ್ರಗಳು ಈಗಾಗಲೇ ಸಾಕಷ್ಟು ಬಂದು ಹೋಗಿವೆ. ಆದರೆ ತಮ್ಮದೇ ನಿರೂಪಣೆಯಿಂದ ಅಗ್ನಿ ಶ್ರೀಧರ್ ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ. ಕಥೆಯಲ್ಲಿ ವೇಗವಿಲ್ಲದೇ ಇರುವುದು ಮಾಸ್ ಪ್ರೇಕ್ಷಕರ ತಾಳ್ಮೆಗೆ ಸವಾಲೊಡ್ಡುತ್ತದೆ. ಹಾಗೆಯೇ ಕಥೆಗೆ ಒಂಚೂರು ಕತ್ತರಿ ಹಾಕಿ ಕಾಮಿಡಿಗೆ ಒತ್ತು ಕೊಡಬಹುದಿತ್ತಾದರೂ ಈ ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರು ಹಾಗೆ ಮಾಡಿಲ್ಲ. ಕಾರಣ ತಾವಾಂದುಕೊಂಡ ಚಿತ್ರಕ್ಕೆ ಹೀಗೆಯೇ ಇರಬೇಕು ಕಥೆಯೆಂಬುದು ಅವರ ಧೋರಣೆ.ಯಾವ ಸನ್ನಿವೇಶಗಳೂ ನಾಟಕೀಯವಾಗಿಲ್ಲ. ಉದಾಹರಣೆ ಬಾಂಬ್ ಸ್ಫೋಟದಲ್ಲಿ ಸತ್ತು ಬಿದ್ದಿದ್ದ ಚಿಕ್ಕ ಹುಡುಗಿಯೊಬ್ಬಳನ್ನು ನೋಡಿ ಶಂಕರ್ ಮನಕಲಕುತ್ತದೆ. ಆಕೆಯ ಮುಖದ ಮೇಲೆ ಕೈಯಿಟ್ಟಾಗ ಆಕೆ ಕಣ್ಣು ರೆಪ್ಪೆಗಳಲ್ಲಿ ಚಲನೆ ಉಂಟಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಪೊಲೀಸರು ಹಾಸ್ಯಾಸ್ಪದವಾಗಿ ಕಾಣುತ್ತಾರೆಂಬುದೂ ಸುಳ್ಳು. ಸದರಿ ಪಾತ್ರಗಳು ಚಿತ್ರಕ್ಕೆ ಬೇಕಾದ ಪಾತ್ರಗಳೇ. ಕಥೆ ಸುದೀರ್ಘವಾಗಿದೆ ಅನ್ನಿಸುತ್ತಾದಾದರೂ ಅದು ಅವಶ್ಯಕವಿರುವ ಕಥೆ. ಕಡೆಗೆ ಕಥೆ ಹೀಗೆಯೇ ಆಗುತ್ತದೆ ಎಂಬುದೂ ಎಲ್ಲಾ ಚಿತ್ರಗಳಂತೆ ಇಲ್ಲಿ ಪ್ರೇಕ್ಷಕನಿಗೆ ಗೊತ್ತ್ತೇ ಆಗುವುದಿಲ್ಲ. ಆದರೂ ಮತ್ತು ಆದಾಗ್ಯೂ ಅಗ್ನಿ ಶ್ರೀಧರ್ ಅವರ ನಿರ್ದೇಶನದಲ್ಲಿ ಇನ್ನೂ ಏನೋ ಇರಬೇಕಾಗಿತ್ತು ಎಂದು ಪ್ರೇಕ್ಷಕರು ಬಯಸುತ್ತಾರೆ. ಇಷ್ಟು ನನಗೆ ತಿಳಿದಂತೆ ಹೇಳಿ ವಿರಮಿಸುತ್ತೇನೆ.

-# ಕೆ.ಶಿವು.ಲಕ್ಕಣ್ಣವರ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *