

ಸಾಮಾನ್ಯವಾಗಿ ಪ್ರತಿಶತ ನೂರರಷ್ಟು ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು ಸಾಮಾನ್ಯವಾಗಿ ಎರಡು ಮೂರು ವರ್ಷಗಳು ಬೇಕಾಗುತ್ತದೆ.

ಕೋವಿಡ್ ಲಸಿಕೆ ಪಡೆದ ವೈದ್ಯನ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು!
ಕೋವಿಡ್ ಲಸಿಕೆ ಪಡೆದಿದ್ದ ವೈದ್ಯನೋರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡುತ್ತಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

ಮೆಕ್ಸಿಕೋ: ಕೋವಿಡ್ ಲಸಿಕೆ ಪಡೆದಿದ್ದ ವೈದ್ಯನೋರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡುತ್ತಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಜಗತ್ತಿನ ಕೋವಿಡ್ ಲಸಿಕೆಯ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫೈಜರ್ ಸಂಸ್ಥೆಯ ಲಸಿಕೆ ಪಡೆದ ಮೆಕ್ಸಿಕೊದ ವೈದ್ಯರ ಸ್ಥಿತಿ ಗಂಭೀರವಾಗಿದ್ದು. ಉಸಿರಾಟದ ತೊಂದರೆ ಮತ್ತು ಎನ್ಸೆಫಲೋಮೈಲಿಟಿಸ್ (ತೀವ್ರವಾದ ವೈರಸ್ ಸೋಂಕಿನಿಂದಾಗಿ ಮೆದುಳು ಮತ್ತು ಬೆನ್ನುಹುರಿಯ ಉರಿಯೂತ) ಬಳಲುತ್ತಿದ್ದ ಅವರನ್ನು ತೀವ್ರನಿಗಾಘಟಕದಲ್ಲಿರಿಸಿ ಚಿಕಿ್ಸೆ ನೀಡಲಾಗುತ್ತಿದೆ ಎಂದು ಮೆಕ್ಸಿಕೋ ಆರೋಗ್ಯ ಸಚಿವಾಲಯ ತಿಳಿಸಿದೆ.
ಫೈಜರ್ ಕೋವಿಡ್-19 ಲಸಿಕೆ ಪಡೆದ 32 ವರ್ಷದ ವೈದ್ಯರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಲಸಿಕೆ ಪಡೆದ ನಂತರ ಅರ್ಧಗಂಟೆಯೊಳಗೆ ವೈದ್ಯರಲ್ಲಿ ಚರ್ಮದ ದದ್ದುಗಳು, ಸ್ನಾಯು ಸೆಳೆತ, ಸ್ನಾಯು ದೌರ್ಬಲ್ಯ ಮತ್ತು ಉಸಿರಾಟದ ತೊಂದರೆಗಳು ಕಂಡುಬಂದಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಅವರನ್ನು ತೀವ್ರ ನಿಗಾಘಟಕಕ್ಕೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಲಸಿಕೆ ಪಡೆದ ವೈದ್ಯರಿಗೆ ಔಷಧಿಗಳ ಅಲರ್ಜಿ ಇದ್ದು, ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಔಷಧ ಅಲರ್ಜಿಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದರು ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.

ಲಿಸ್ಬನ್/ಪೋರ್ಟೊ/ಪೋರ್ಚುಗೀಸ್: ಸಾಮಾನ್ಯವಾಗಿ ಪ್ರತಿಶತ ನೂರರಷ್ಟು ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು ಸಾಮಾನ್ಯವಾಗಿ ಎರಡು ಮೂರು ವರ್ಷಗಳು ಬೇಕಾಗುತ್ತದೆ. ಆದರೆ, ಕೊರೊನಾ ವೈರಸ್ ಲಸಿಕೆ ವಿಷಯದಲ್ಲಿ, ಸರ್ಕಾರಗಳು ಕೆಲ ನಿಬಂಧನೆಗಳನ್ನು ಸಡಿಲಿಸಿ, ಸಮರೋಪಾದಿ ಲಸಿಕೆ ಬಳಸಲು ಅನುಮತಿಸುತ್ತಿವೆ. ಈವರೆಗೆ ಜಗತ್ತಿನಾದ್ಯಂತ ಮೂರು ಲಸಿಕೆಗಳನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ.
ಭಾರತದಲ್ಲಿ ಭಾರತ್ ಬಯೋಟೆಕ್ ಕೊರೋನಾ ಲಸಿಕೆ ತುರ್ತು ಬಳಕೆಗೆ ಡಿಜಿಸಿಐ ಅನುಮೋದನೆ ನೀಡಿದೆ. ಆದರೆ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಸಂದೇಹಗಳಿವೆ. ಈ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸುವಂತಹ ಘಟನೆ ಪೋರ್ಚುಗಲ್‌ನಲ್ಲಿ ನಡೆದಿದೆ.
ನರ್ಸ್ ವೊಬ್ಬರು ಫೈಝರ್ ಲಸಿಕೆ ತೆಗೆದುಕೊಂಡು ಎರಡು ದಿನಗಳ ನಂತರ ಮೃತಪಟ್ಟಿದ್ದಾರೆ. ಪ್ರಸ್ತುತ ಈ ಘಟನೆ ಜಗತ್ತಿನಾದ್ಯಂತ ತೀವ್ರ ಚರ್ಚೆಯಾಗುವ ಜೊತೆಗೆ, ಲಸಿಕೆಯ ಕಾರ್ಯಕ್ಷಮತೆ ಬಗ್ಗೆ ಮತ್ತಷ್ಟು ಅನುಮಾನ, ಆತಂಕಗಳನ್ನು ಹುಟ್ಟುಹಾಕಿದೆ.
ಸೋನಿಯಾ ಅಜೆವೆಡೊ(41) ಎಂಬ ಮಹಿಳೆ ಪೋರ್ಟೊದಲ್ಲಿರುವ ಪೋರ್ಚುಗೀಸ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯಲ್ಲಿ ಮಕ್ಕಳ ಸಹಾಯಕ ದಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಫೈಝರ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಯ ಭಾಗವಾಗಿ ಆಕೆ ಲಸಿಕೆಯನ್ನು ತೆಗೆದುಕೊಂಡಿದ್ದು, ಎರಡು ದಿನಗಳ ನಂತರ ಆಕೆ ತೀರಿಕೊಂಡಿದ್ದಾರೆ.
ಈ ಕುರಿತು ಸೋನಿಯಾ ತಂದೆ ಅಬಿಲಿಯೊ ಅಜೆವೆಡೊ, “ನನ್ನ ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಎರಡು ದಿನಗಳ ಹಿಂದೆ ಆಕೆ ಕೊರೋನಾ ವೈರಸ್ ಲಸಿಕೆ ತೆಗೆದುಕೊಂಡಿದ್ದಳು. ಆದರೆ ಆಕೆಗೆ ಕೊರೋನಾ ಸೋಂಕಿನ ಲಕ್ಷಣಗಳಿರಲಿಲ್ಲ. ಲಸಿಕೆ ತೆಗೆದುಕೊಂಡ ನಂತರ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿರಲಿಲ್ಲ, ಆದರೆ ಲಸಿಕೆ ಹಾಕಿಸಿಕೊಂಡ ಎರಡು ದಿನಗಳಲ್ಲಿ ಅನಿರೀಕ್ಷಿತವಾಗಿ ಮೃತಪಟ್ಟಿದ್ದಾಳೆ. ನನ್ನ ಮಗಳು ಏಕೆ ಮೃತಪಟ್ಟಳು ಎಂಬುದು ಗೊತ್ತಾಗಬೇಕಿದೆ. ಅಷ್ಟು ಮಾತ್ರವಲ್ಲದೆ, ‘ ಸೋನಿಯಾ ಮದ್ಯದ ಚಟಕ್ಕೆ ಒಳಗಾಗಲಿಲ್ಲ ಮತ್ತು ಯಾವುದೇ ಹೊಸ ಆಹಾರ ತೆಗೆದುಕೊಂಡಿರಲಿಲ್ಲ ಎಂದು ಆಕೆಯ ತಂದೆ ಹೇಳಿದ್ದಾರೆ.
ಸೋನಿಯಾ ಸಾವಿನ ಕಾರಣ ಪತ್ತೆ ಹಚ್ಚಲು ಪೋರ್ಚುಗೀಸ್ ಆರೋಗ್ಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಪೋರ್ಚುಗಲ್‌ನಲ್ಲಿ 538 ಆರೋಗ್ಯ ಕಾರ್ಯಕರ್ತರಿಗೆ ಫೈಝರ್ ಲಸಿಕೆ ನೀಡಲಾಗಿದೆ. ಹತ್ತು ದಶಲಕ್ಷ ಜನಸಂಖ್ಯೆ ಹೊಂದಿರುವ ಪೋರ್ಚುಗಲ್‌ನಲ್ಲಿ 4,27,000 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 7,118 ಮಂದಿ ಸಾವನ್ನಪ್ಪಿದ್ದಾರೆ. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
