ಪ್ರೊ.ಕಾಳೇಗೌಡ ನಾಗವಾರರ ‘ಮಂಗಳಕರ ಚಿಂತನೆ’ ಪುಸ್ತಕವೊಂದು ನನಗೆ ಅವರ ಸಾಹಿತ್ಯದ ಎಲ್ಲ ಮಗ್ಗಲುಗಳ ಚಿಂತನೆ, ಅವರ ಸಮಕಾಲೀನ ಬದುಕಿನ ಸಂವಾದದ ಸಾಹಿತ್ಯಕ ಚಿಂತನೆ, ಬಂಡಾಯ, ಪ್ರಗತಿಪರತೆಯ ಹೋರಾಟದ ಸಾಹಿತ್ಯದ ಒಟ್ಟು ಚಿಂತನೆ, ಹೀಗೆಯೇ ಸಾಹಿತ್ಯದ ಮತ್ತು ಹೋರಾಟಾದ ಎಲ್ಲ ಮಗ್ಗಲುಗಳ ಒಟ್ಟು ಸಾರದಂತೆ ಭಾಷವಾಯಿತು ನನಗೆ.
ಈ ‘ಮಂಗಳಕರ ಚಿಂತನೆ’ಯಲ್ಲಿ ಅನೇಕ ವಿಭಾಗಗಳಿವೆ. ಅವರ ವೈಚಾರಿಕ ಲೇಖನಗಳು, ಅವರ ಸಾಹಿತ್ಯ ವಿಮರ್ಶೆ, ಅವರೊಂದಿಗೆ ಕೆವರು ನಡೆಸಿದ ಸಂದರ್ಶನಗಳು, ಅವರು ಬರೆದ ಮುನ್ನುಡಿಗಳು, ವಿಚಾರವಾದ ಮತ್ತು ನಾನಾ ಬಗೆಯ ಹೋರಾಟಗಾರರ ವ್ಯಕ್ತಿಗತ ಲೇಖನಗಳು, ಜಾನಪದ ಪರಂಪರೆಯ ವೈಚಾರಿಕ ಲೇಖನಗಳು, ಅಲ್ಲದೇ ವ್ಯಕ್ತಿತ್ವ ಕುರಿತ ಲೇಖನಗಳು, ಅವರ ಸಂದರ್ಶನಗಳು, ಅವರ ಬರಹದ ಬಗೆಗಿನ ಲೇಖನಗಳು ಮತ್ತು ಪ್ರೊ.ಕಾಳೇಗೌಡ ನಾಗವಾರರು ಹಲವಾರು ಹೋರಾಟಗಾರರ, ಸಾಹಿತಿಗಳೊಂದಿಗೆ ನಡೆಸಿದ ಪತ್ರ ವ್ಯವಹಾರ ಮತ್ತು ಅವರ ಬದುಕಿನ ಹೆಜ್ಜೆಗಳು ಹೀಗೆಯೇ ಹಲವು ಹತ್ತು ಬಗೆಯ ಲೇಖನಗಳುಗಳಿವೆ.
ಈ ಬಿಡಿ ಲೇಖನ ಮಾಲಿಕೆಯ ಸಂಗ್ರಹದಲ್ಲಿ ಆಯಾ ಕಾಲಘಟ್ಟದ ಲೇಖನಗಳಾಗಿವೆ. ಅಲ್ಲದೇ ಇಲ್ಲಿ ವಿವಿಧ ಸ್ಥರದ ಆಯಾಮಗಳನ್ನು ಕಾಣಬಹುದಾಗಿದೆ. ಅದ್ದರಿಂದ ‘ಮಂಗಳಕರ ಚಿಂತನೆ’ ಲೇಖನ ಮಾಲೆಯ ಪ್ರತಿಯೊಂದು ಲೇಖನವನ್ನೂ ಬಿಡಿಯಾಗಿಯೇ ಪರಿಚಯಾತ್ಮಕ ಲೇಖನ ಬರೆಯಬೇಕಾದ್ದರಿಂದ ಒಟ್ಟು ಕೃತಿಯ ಬಿಡಿಬಿಡಿಯಾದ ಪರಾಮರ್ಶೆ ಮಾಡಿದ್ದೇನೆ.
‘ಮಂಗಳಕರ ಚಿಂತನೆ’ಯಲ್ಲಿಯ ಲೇಖನ ಮಾಲಿಕೆಯಲ್ಲಿ ‘ಶ್ರಮಜೀವಿಗಳ ಋಣದ ಮಕ್ಕಳು’ ಎನ್ನುವ ಲೇಖನಕದಲ್ಲಿ ನಮ್ಮೀಭರತ ಖಂಡಕ್ಕೆ ಸ್ವಾತಂತ್ರ್ಯ ಬಂದು ಹತ್ತಿರ ಹತ್ತಿರ ಅರವತ್ತು ವರ್ಷಗಳು ತುಂಬುತ್ತವೆ. ಈ ಅವಧಿಯಲ್ಲಿ ನಾವು ಒಂದಿಷ್ಟು ಗುಣಾತ್ಮಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ.ಅಕ್ಷರ ಜ್ಞಾನವು ವಿವಿಧಹಿನ್ನಗಳಿಂದ ಬಂದ ಅವಕಾಶಹೀನ ಜನಗಳ ತಲುಪಲು ಸಾಧ್ಯವಾಗುತ್ತದೆ. ಇದರ ಪರಿಣಾಮವಾಗಿ ಸಾಂಪ್ರದಾಯಿಕ ನಂಬಿಕೆ, ಆಚರಣೆಗಳು ಮತ್ತು ಮಾಮೂಲಿಯಾದ ಜಡತ್ವವೇ ಮಡುಗಟ್ಟಿದ ರೀತಿಯ ಈ ಸಮಾಜದಲ್ಲಿನ ಪುರೋಹಿತಶಾಹಿ ಮತ್ತು ಸರ್ವಾಧಿಕಾರಿ ಧೋರಣೆಗಳು ಕಿಂಚಿತ್ತಾದರೂ ಅಲುಗಾಡಲು ಆರಂಭಿಸಿವೆ. ಈ ಅಲುಗಾಟವು ಇನ್ನಷ್ಟು ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿಯೂ ಆದ ಬಗೆಬಗೆಯ ರೀತಿಗಳಲ್ಲಿ ಸಾರ್ವಜನಿಕ ಬದುಕಿನಲ್ಲಿ ನಿರಂತರವಾಗಿ ಆಗುತ್ತಿರಲಿ ಹಾಗೂ ಆ ಮೂಲಕ ನಿರಾಳವಾಗಿ ಉಸಿರಾಡುವ, ಚಲಿಸುವ, ಎದೆಯಾಳದ ಆಶೆಯಗಳಿಗೆ ನಿಜಜೀವನದಲ್ಲಿ ರೂಪು ಕೊಡುವ ಚಟುವಟಿಕೆಗಳು ಎಲ್ಲೆಲ್ಲೂ ತುಂಬಿತುಳುಕುವಂತೆ ಆಗುತ್ತಿರಲೆಂಬುದೇ ನಾಡಿನ ಸಂವೇದನಾಶೀಲರೆಲ್ಲರ ತೀವ್ರತರವಾದ ಹಂಬಲವಾಗಿರುವುದನ್ನು ಪ್ರೊ.ಕಾಳೇಗೌಡ ನಾಗವಾರರ ಕನವರಿಕೆಯಾಗಿದೆ.
ಹೀಗೆಯೇ ಶ್ರಮಜೀವಿಗಳ ಋಣದ ಮಕ್ಕಳ ಲೋಕದಲ್ಲಿ ಪೂರ್ತಿಯಾಗಿ ಕನವರಿಸಿದ್ದಾರೆ ಪೊ.ಕಾಳೇಗೌಡ ನಾಗವಾರರು. ಈ ವಿಚಾರ ಲೇಖನ ದಿನಾಂಕ ೧೦-೦೯-೨೦೦೯ರಲ್ಲಿ ಬರೆದ ಲೇಖನವಾಗಿದೆ.’ಬುದ್ದ ದೇವನ ವಿಶ್ವಜ್ಞಾನ’ದಲ್ಲಿ ಭಾರತೀಯ ಪರಂಪರೆಯಲ್ಲಿ ಕಂಡುಬರುವ ಅತ್ಯಂತ ಹೆಚ್ಚಿನ ಜೀವಪರ ಕಾಳಜಿಗಳ ಸಾಕ್ಷಾತ್ ಪ್ರತೀಕವಾಗಿ ಕಂಗೊಳಿಸುವ ಪುರಾಣಲೋಕದ ಶಿವ ಮತ್ತು ಭಾರತೀಯ ಇತಿಹಾಸದ ತುಂಬು ಮಹತ್ವಪೂರ್ಣ ಭಾಗವಾಗಿರುವ ಬುದ್ಧದೇವನ ಕಾರುಣ್ಯಮಯ ಬದುಕಿನ ಸಾಧನೆಗಳಿಗೆ ಸಾಟಿಯಾದ್ದು ಬೇರೆ ಯಾವುದೂ ಇಲ್ಲವೆಂದೇ ಸಾಹಿತ್ಯದ ವಿದ್ಯಾರ್ಥಿಯಾಗಿರುವ ನನ್ನ ನಂಬಿಕೆ ಹಾಗೂ ಭಾವನೆ ಎನ್ನುವ ಪ್ರೊ. ಕಾಳೆಗೌಡ ನಾಗವಾರರು ಈ ಲೇಖನವಿಡೀ ಬುದ್ದನ ಬಗೆಗೆ ಕನವರಿಸಿದ್ದಾರೆ. ಈ ಲೇಖನವು ೨೦೦೬ರಲಿ ಬರೆದ ಲೇಖನವಾಗಿದೆ.ಹಾಗೆಯೇ ಮುಂಬೈ ಮಹಾನಗರದಲ್ಲಿ ದಿನಾಂಕ ೧೩-೨-೨೦೦೦ದಲ್ಲಿ ಗೋರೆಗಾಂವ್ ಕರ್ನಾಟಕ ಸಂಘವು ಏಪರ್ಪಸಿದ್ದ ವಿಚಾರ ಭಾರತಿ ಸಮ್ಮೇಳನದ ಅಧ್ಯಕ್ಷತೆಯ ಭಾಷಣದ ಕುರಿತು ಬರೆದ ಲೇಖನದಲ್ಲಿ ಸೃಜನಶೀಲ ವೈಚಾರಿಕತೆ ಕುರಿತು ಪ್ರೊ. ಕಾಳೇಗೌಡ ನಾಗವಾರರು ಆಡಿದ ಮಾತಿನ ಸಂಗ್ರಹಸಾರವಾಗಿದೆ ಈ ‘ಸೃಜನಶೀಲ ವೈಚಾರಿಕತೆ’ಯ ಲೇಖನ.ಭಾರತ ಸ್ವಾತಂತ್ರ್ಯವದ ಆಚೀಚೆ ಹುಟ್ಟಿದ ಪ್ರೊ. ಕಾಳೇಗೌಡ ನಾಗವಾರರು ತಾವು ಹಳ್ಳಿಯ ಹುಡುಗನಾಗಿ ಕಾಳೇಗೌಡ ನಾಗವಾರರು ಹದಿಹರೆಯದಲ್ಲೇ ದಿನಗಳಲ್ಲಿಯೇ ಕತೆ, ಕವನ, ಲೇಖನಗಳ ಬರವಣಿಗೆ ಮತ್ತು ಪ್ರವಾಸವನ್ನೂ ಒಳಗೊಂಡಂತೆ ವಿವಿಧ ಚಟುವಟಿಕೆಗಳಿಗೆ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ಗೀಳು ಹೆಚ್ಚಿಸಿಕೊಂಡವರು. ಜೊತೆಗೆ ಶಾಲಾದಿನಗಳಲ್ಲಿ ಹೆಚ್ಚಿನ ಅಕ್ಕರೆಯಿಂದ ತಾವು ಓದಿದ್ದ ಬುದ್ಧ, ಬಸವ, ಅಕ್ಕ, ಗಾಂಧಿ, ಪಂಪ, ಕುಮಾರವ್ಯಾಸ, ಹರಿಹರ, ಕುವೆಂಪುಗಳನ್ನೊಳಗೊಂಡು ವಿವಿಧ ವೈಚಾರಿಕ ಪ್ರಜ್ಞೆಯ ವಿಚಾರಶೀಲರ ಕುರಿತಾಗಿ ತಮ್ಮೊಳಗೆ ಬಿತ್ತಿ-ಬೆಳೆದ ವೈಚಾರಿಕತೆಯನ್ನು ಕನವರಿಸಿದ್ದಾರೆ ಪೊ. ಕಾಳೇಗೌಡ ನಾಗವಾರರು. ಅಲ್ಲದೇ ಈ ನಿಟ್ಟಿನಲ್ಲಿ ತಾವು ಸಾಗಿದ ಪಯಣ ಕುರಿತೂ ಹೇಳಿದ್ದಾರೆ ಅವರು.
ಹೀಗೆ ಹೇಳುತ್ತಲೇ ಈ ಕಾಲಗಟ್ಟದ ದೈವ-ಧರ್ಮದ ಹೆಸರಿನಲ್ಲಿ ಮುಗ್ಧಜನರ ಮೇಲೆ ಸಾಗುವ ಮೌಢ್ಯದ ವಿಕಾರಗಳನ್ನು ಪ್ರತಿಭಟಿಸುತ್ತ ತಾವು ಬೆಳೆದುಬಂದ ಪರಿಯನ್ನು ವಿವರಿಸಿದ್ದಾರೆ ಅವರು.೦೨-೧೨-೨೦೦೨ ರಲ್ಲಿ ಬರೆದ ಅಂಬೇಡ್ಕರ್, ಲೋಹಿಯಾ, ಪೆರಿಯರ್ ಕುರಿತ ಲೇಖನದಲ್ಲಿ ಆಧುನಿಕ ಭಾರತ ಕಂಡ ಅಸಧಾರಣ ಹೋರಾಟಗಾರರ ಕುರಿತು ಲೇಖನ ಬರೆಯಲಾಗಿದೆ. ಆರೋಗ್ಯಕರವಾದ ಸಮಾಜವನ್ನು ಕಟ್ಟಲು ನಿರಂತರವಾಗಿ ಹಂಬಲಿಸಿ, ಆ ದಿಕ್ಕಿನಲ್ಲಿ ಇನ್ನಿಲ್ಲದಂತೆ ದುಡಿದ ಮಹನೀಯರನ್ನು ನೆನಪಿಸಿಕೊಂಡು ಸ್ಮರಿಸಿಕೊಳ್ಳಲಾಗಿದೆ. ಮಾನವ ಕುಲದ ಸ್ವಾತಂತ್ರ್ಯ, ಸಮಾನತೆ ಮತ್ತು ಸ್ವಾಭಿಮಾನದ ರಕ್ಷಣೆಗಾಗಿ ತಮ್ಮನ್ನು ತಾವು ಅಕ್ಷರಶಃ ತೆತ್ತುಕೊಂಡ, ಮೌಢ್ಯವಿರೋಧಿಗಳ ನಿಲುವುಗಳ ಈ ಧೀಮಂತ ನೇತಾರರನ್ನು ಸ್ಮರಿಸಿಕೊಳ್ಳುತ್ತಾರೆ ಅಲ್ಲದೇ ಸ್ಮರಣೆಯ ಹುಮ್ಮಸ್ಸಿನಿಂದ ತಮ್ಮ ಜೀವಿತದ ಅವಧಿಯಲ್ಲಿ ಸುತ್ತಲಿನ ಅನ್ಯಾಯ, ಅಸಮಾನತೆಗಳ ವಿರುದ್ಧ ಸೆಣೆಸುವ ದೃಢಮನಸ್ಸಿನ ತಾರುಣ್ಯವನ್ನು ಹೊಂದಿರುತ್ತಾರೆಂಬ ಪ್ರಬಲವಾದ ನಂಬಿಕೆ ಪ್ರೊ. ಕಾಳೇಗೌಡ ನಾಗವಾರರದು.
ಹೀಗೆಯೇ ಅಂಬೇಡ್ಕರ್, ಲೋಹಿಯಾ ಮತ್ತು ಪೆರಿಯರ್ ಗಳನ್ನು ಮತ್ತವರ ಚಿಂತನೆಯನ್ನು ಸ್ಮರಿಸಿಕೊಳ್ಳುವ ಲೇಖನವಿದು.ಅಲ್ಲದೇ ದಿನಾಂಕ ೧೦-೧೦-೨೦೦೨ರಲ್ಲಿ ಬರೆದ ಲೇಖನವಾದ ಹೆಣ್ಣು- ‘ಸ್ತ್ರೀಚೈತನ್ಯ’ದಲ್ಲಿ ‘ಗಂಧವತಿಪೃಥ್ವಿ’ ಎಂದು ಕರೆಯಲ್ಪಟ್ಟ ಭೂಮಿಯ ಹಾಗೆ-ನಿರಂತರವಾಗಿ ಅರಳುವ, ವಿವಿಧ ಋತುಮಾನಗಳಲ್ಲಿ ಗಮಗಸುವ ಹೊಸತನ್ನು ಕಟ್ಟುವ, ಆರೋಗ್ಯಕರವಾದುದ್ದರ ಕಡೆಗೆ ತುಡಿಯುವ ಅಗಾಧ ಚೈತನ್ಯದ ಪ್ರತಿರೂಪವಾಗಿದ್ದಾಳೆ. ಹೀಗೆಂದು ಸ್ತ್ರೀ ಚೈತನ್ಯದ ಅಗಾಧವಾದ ಶಕ್ತಿ ಮತ್ತು ಈ ಸೃಷ್ಟಿಯ ಬಗೆಗೆ ಗಹನವಾದ ವಿವರಣೆಯೇ ಈ ‘ಸ್ತ್ರೀಚೈತನ್ಯ’ ಲೇಖನವಾಗಿದೆ.’ಪ್ರಜಾಪ್ರಭುತ್ವದ ಒಡಲ ತಾಯ್ತನ’ ಲೇಖನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ನಡೆಸುತ್ತಿರುವ ದಲಿತ ಸಾಹಿತ್ಯದ ಮೊದಲ ತಲೆಮಾರಿನ ಲೇಖಕರ ಕುರಿತ ಮಹತ್ವ ಪೂರ್ಣವಾದುದು ಮತ್ತು ಅದೆಷ್ಟೋ ಮಾಹಿತಿಗಳಿಲ್ಲಿ ಹೊಸತಾಗಿ ದೊರೆತ ಬಗೆ ಮತ್ತು ಇಲ್ಲಿ ಚರ್ಚಿಸಲ್ಪಟ್ಟ ಹಳೆಯ ತಲೆಮಾರಿನ ದಲಿತ ಲೇಖಕರು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿ ಬೆಳೆದವರು. ಹೀಗೆಂದು ಗುಣಗಾನಿಸುತ್ತಲೇ ಭಾರತದ ಬೇರೆ ಬೇರೆ ಭಾಗಗಳಲ್ಲಿ ಸ್ವಾತಂತ್ರ್ಯ ಪೂರ್ವದ ಚಿಂತಾಜನಕ ಸ್ಥಿತಿಯ ಗಹನವಾದ ವಿಚಾರಪೂರ್ಣ ಮಾಹಿತಿಯನ್ನು ಕಟ್ಟಿಕೊಡುತ್ತಾರೆ ಲೇಖಕರು. ಸ್ವಾತಂತ್ರ್ಯ ಪೂರ್ವದ ಸ್ಥಿತಿಯು ತುಂಬಾ ಬೀಕರವಾದ ಪರಿಯನ್ನು ವರ್ಣಿಸುತ್ತಲೇ ಇಲ್ಲಿದ್ದ ಜಾತಿಪದ್ದತಿ ಮತ್ತು ಅಸ್ಪೃಶ್ಯತೆಯ ಸಂಬಂಧದ ಅಮಾನುಷ ನಡುವಳಿಕೆಗಳು ಉಗ್ರ ರೂಪದಲ್ಲಿದ್ದ ಬಗೆಯನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ ಲೇಖಕರು. ಅಸ್ಪೃಶ್ಯತೆಯೂ ಸೇರಿದಂತೆ ಇಂತಹ ಸಾಂಪ್ರದಾಯಿಕವಾಗಿದ್ದ ಅನೇಕ ಕ್ರೂರ ಆಚರಣೆಗಳನ್ನು ಕೇರಳ ಕೆಲವು ಭಾಗಗಳಲ್ಲಿ ಕಂಡು ಸಿಟ್ಟಿಗೆದ್ದ ವಿವೇಕಾನಂದರು ಇದು ‘ಮಾನಸಿಕ ರೋಗಿಗಳ ಆಸ್ಪತ್ರೆ’ ಎಂದು ಕರೆದಿದ್ದ ಬಗೆ ಹಾಗೂ ಕನವರಿಸಿ ‘ಸಮಸಮಾಜ’ ಕನಸ್ಸನ್ನು ಕಾಣುತ್ತಲೇ ಈ ಅಧ್ಯಯಪೂರ್ಣ ಪ್ರಜಾಪ್ರಭುತ್ವದ ಒಡಲ ತಾಯ್ತನ ಬಗೆಯನ್ನು ವೈಚಾರಿಕವಾಗಿ ಕನವರಿಸಿದ್ದಾರೆ ಲೇಖಕರು.
ಈ ಲೇಖನ ೨೦೦೭ರಲ್ಲಿ ಬರೆದದ್ದಾಗಿದೆ.’ಕೊಡಗಿನ ಘನತೆಗೆ ತಕ್ಕುದಲ್ಲದ ನಡತೆ’ ಲೇಖನದಲ್ಲಿ ಅನೇಕ ಕಾರಣಗಳಿಗಾಗಿ ನಮ್ಮ ನಾಡಿನ, ರಾಷ್ಟ್ರೀಯ ಸುಂದರ ಭೂಪ್ರದೇಶಗಳಲ್ಲಿ ಒಂದಾದ ಕೊಡಗು ಪ್ರಮುಖವಾದುದು. ಕಳೆದ ನಾಲ್ಕು ದಶಕಗಳಿಗೂ ಹೆಚ್ಚಿನ ಅವಧಿಯಲೂ ಇದನ್ನು ತೀರಾ ಹತ್ತಿರದಿಂದ ಗಮನಿಸಿದ ಲೇಖಕರು ತಮ್ಮ ವೃತ್ತಿ ಜೀವನವನ್ನು ಅಲ್ಲಿಂದಲೇ ಆರಂಬಭಿಸಿದವರು. ಸೇನೆಯಲ್ಲಿ, ಕ್ರೀಡೆಯಲ್ಲಿ ಮತ್ತು ಉಲ್ಲಾಸದಲ್ಲಿ ಈ ಕೊಡಗು ಯಾವಾಗಲೂ ಮುಂದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯ ಪ್ರಭಾವಕ್ಕೆ ಒಳಗಾಗಿದ್ದ ಇಲ್ಲಿನ ಮಹಿಳೆಯರೂ ಸೇರಿದಂತೆ ತಮ್ಮ ಪ್ರೀತಿಯ ಹಬ್ಬಹರಿದಿನ, ಅನ್ನಪಾನಗಳನ್ನು ಕಡೆಗಣಿಸಿ, ಕೇರಳದ ಸೆರೆಮನೆಗಳ ಚಿತ್ರಹಿಂಸೆಗೆ ಒಳಗಾದವರು. ಅಲ್ಲದೇ ಪರಂಪರೆಯ ಸದ್ಗುಣಗಳನ್ನು ಮತ್ತು ಆಧುನಿಕತೆಯು ನೀಡಿದ ಹೊಸ ಸೌಭಾಗ್ಯಗಳ ಆಕರ್ಷಣೆಯನ್ನು ಸಮನಾಗಿ ಸ್ವೀಕರಿಸಿ, ಕೀಳರಮೆಯ ಹಂಗಿಲ್ಲದೇ ಬಹುಕಾಲ ಸೌಹಾರ್ದಯುತವಾಗಿ ಎಲ್ಲೊಡಗೂಡಿ ವಿಶಿಷ್ಠವಾದ ತಾಣವಿದಾಗಿದೆ. ಇಂತಹ ಹೆಮ್ಮೆಯ ಬದುಕಿನ ಕೊಡಗಿನ ಘನತೆಗೆ ಕಿಂಚಿತ್ತೂ ತಕ್ಕುದಲ್ಲದ ಸಣ್ಣ ನಡತೆಯೊಂದು ಅಲ್ಲಿನ ಜನರ ನೆಮ್ಮದಿ ಕೆಡುಸುವ ದಾರಿಯಲ್ಲಿರುವುದು ನೋವಿನ ಸಂಗತಿಯಾಗಿದೆ ಎಂದು ಸೂಚ್ಯವಾಗಿ ಹೇಳುವ ಲೇಖಕ ದಕ್ಷಿಣ ಕೊಡಗಿನ ವಿರಾಜಪೇಟೆ, ನಾಗರಹೊಳೆ ಅಭಯಾ ರಣ್ಯದ ಅಂಚಿನ ಕಾಲೇಜಿನ ಕನ್ನಡ ಉಪನ್ಯಾಸಕ ಮತ್ತು ಲೇಖಕ ಡಾ.ಜೆ.ಸೋಮಣ್ಣ ಸಿದ್ಧಪಡಿಸಿರುವ ‘ದಲಿತಲೋಕದ ನೋವು-ನಲಿವು’ ಗ್ರಂಥವು ತಪ್ಪು ತಿಳುವಳಿಕೆ ಹಿನ್ನೆಲೆಯಲ್ಲಿ ಮುಗ್ಧರ ಕಂಗೆಣ್ಣಿಗೆ ಗುರಿಯಾದ ಬಗೆಯನ್ನು ವಿವರಿಸುತ್ತ ಈ ಪುಟ್ಟ ಲೇಖನದ ಹೂರಣವನ್ನು ತೆರೆದಿಡುತ್ತಾರೆ. ಹೀಗೆಯೇ ಸಾಗುವ ಲೇಖನದುದ್ದಕ್ಕೂ ಇಲ್ಲಿನ ಆಶ್ಚರ್ಯಕರ ಸಂಗತಿಗಳನ್ನೂ ತೆರೆದಿಡುತ್ತಾರೆ. ಈ ಲೇಖನ ದಿನಾಂಕ ೧೦-೦೨-೨೦೧೦ರಲ್ಲಿ ಬರೆದುದಾಗಿದೆ.’ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಲೇಖನದಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಮೊದಲ ಬಂಡಾಯ ಸಾಹಿತ್ಯ ಸಮ್ಮೇಳನವು ದಿನಾಂಕ ೧೧-೩-೧೯೭೩ರಂದು ಆರಂಭವಾಯಿತು. ಸ್ವಾತಂತ್ರ್ಯೋತ್ತರ ವರ್ಷಗಳಲ್ಲಿ ಹುಟ್ಟಿ ಬೆಳೆದು, ನಮ್ಮ ಸಾಂಪ್ರದಾಯಿಕ ಪರಿಸರದಲ್ಲಿನ ಕೌರ್ಯ, ಅಸಮಾನತೆ, ಅಪಮಾನಗಳ ನಡುವೆ ಉದ್ದಕ್ಕೂ ನರಳುತ್ತಿರುವವರ ಸ್ಥಿತಿಗತಿಗಳಿಗೆ ನೇರವಾಗಿ ಸ್ಪಂದಿಸುವ ಗುಣದ ಲೇಖಕರುಗಳ ಅರ್ಥಪೂರ್ಣ ಸಂಘಟನೆ ಇದಾದುರ ಅಂದರೆ ಬಂಡಾಯ ಸಾಹಿತ್ಯ ಸಂಘಟನೆಯು ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರವಾದುದರ ಬಗೆಗೆ ವಿವರಿಸುವ ಈ ಲೇಖನ ಮಾಲೆ ತುಂಬಾ ಕೊಂಡಾಡಿದ ಲೇಖನವಿದು. ಈ ಕುರಿತು ೧೯೮೦ರ ಲೇಖನವಿದು.ಇಲ್ಲಿ ಪ್ರೊ. ಕಾಳೇಗೌಡ ನಾಗವಾರ, ನಾಗರಾಜ, ಸಿದ್ದಲಿಂಗಯ್ಯ, ದೇವನೂರು ಮಹಾದೇವ ಮುಂತಾದವರು ಬಂದು ಹೋಗುತ್ತಾರೆ.
ಹೀಗೆಯೇ ‘ವೈಚಾರಿಕ ಲೇಖನಗಳು’ ವಿಭಾಗದಲ್ಲಿ ಇಂತಹ ಲೇಖನಗಳಿವೆ.ಇನ್ನು ‘ಸಾಹಿತ್ಯ ವಿಮರ್ಶೆ’ ವಿಭಾಗದಲ್ಲಿ ೯ ಅಧ್ಯಾಯಗಳಿವೆ. ಅವುಗಳಲ್ಲಿ ಹರಿಹರ, ಸರ್ವಜ್ಞ, ಆತ್ಮಗೌರವದ ಪ್ರತೀಕಗಳು, ಬೆಚ್ಚನೆಯ ಸಂವೇದನೆ, ಜೀವನ ಪ್ರೀತಿ, ಸಾಹಿತ್ಯದ ಜವಾಬ್ದಾರಿ, ಸಾಹಿತ್ಯದಿಂದ ಏನು ಪ್ರಯೋಜನ, ೧೦೭೪ರ ಕನ್ನಡ ಕಾವ್ಯ, Bandaya Sahitya ಹೀಗೆ ಕೆಲವೊಂದಿಷ್ಟು ಲೇಖನಗಳು ಬರುತ್ತವೆ.ಇನ್ನೂ ಸಂದರ್ಶನಗಳು ವಿಭಾಗದಲ್ಲಿ ೨೦೦೧ರಲ್ಲಿ ಪೀರ್ ಬಾಷಾ- ಕಾಳೇಗೌಡ ನಾಗವಾರರನ್ನು ‘ಬಿನ್ನಮತ ಸೊಗಸು’ ಎಂಬ ಅಧ್ಯಾಯದಲ್ಲಿದೆ. ಹೀಗೆಯೇ ‘ಲಂಕೇಶ್ ಪತ್ರಿಕೆ’ಗೆ ಬಿ.ಚಂದ್ರೆಗೌಡರು ೨೩-೪-೧೯೯೫ರಲ್ಲಿ ಮಾಡಿದ ಸಂದರ್ಶನದಲ್ಲಿ ‘ಸ್ನೇಹ ಮತ್ತು ಪ್ರೀತಿಯ ಪ್ರತಿಪಾದಕ’ ಎಂಬ ಅಧ್ಯಾಯವಿದೆ, ಮಾರ್ಚ್ ೨೦೦೬ರಲ್ಲಿ ಆರ್.ಸುನಂದಮ್ಮ ಮಾಡಿದ ‘ಜೀವನ ಸಂಗಾತಿ ಸಂದರ್ಶನ’ ಎಂಬ ಸಂದರ್ಶನವಿದೆ, ಬರಗೂರು ರಾಮಚಂದ್ರಪ್ಪನವರು ‘ಸಮುದಾಯ ವಾರ್ತಾಪತ್ರ’ ಪತ್ರಿಕೆಗೆ ‘ತಾರುಣ್ಯದ ಸಹಜ ಲಕ್ಷಣಗಳು’ ಎಂಬ ಸಂದರ್ಶನವಿದೆ, ಹಾಗೆಯೇ ‘ಸುಧಾ ವಾರಪತ್ರಿಕೆ’ಯ ‘ಪ್ರಗತಿಪರ ಚಿಂತಕರು’ ಸಂದರ್ಶನವಿದೆ, ‘ಲಂಕೇಶ್ ಪತ್ರಿಕೆ’ಯ ೧೯೯೮ರ ‘ತಲ್ಲಣ ಮತ್ತು ಆತಂಕಗಳು’ ಸಂದರ್ಶನವಿದೆ, ಬಿ.ಎಸ್. ವಧುಮತಿ ಮತ್ತು ಜಿ.ವಿ.ಆನಂದರ್ಮೂರ್ತಿಯವರು ೧೯೬೨ರಲ್ಲಿ ಮಾಡಿದ ಸಂದರ್ಶನದಲ್ಲಿ ‘ಹೊಸಗಾಳಿ ಮತ್ತು ಬೆಳಕಿನೆಡೆಗೆ’ ಸಂದರ್ಶನ, ‘ಜಾಗತೀಕರಣದಿಂದ ದೇಶಿಯತೆಗೆ ಕುತ್ತು’ ಎಂಬ ಸಂದರ್ಶನವನ್ನು ೧೮-೦೩-೨೦೦೯ರಂದು ಸುದೇಶ ದೊಡ್ಡಪಾಳ್ಯರು ಮಾಡಿದ ಸಂದರ್ಶನವಿದೆ.ಅಂತಯೇ ಪ್ರೊ. ಕಾಳೇಗೌಡ ನಾಗವಾರರು ಕೆಲವು ಪುಸ್ತಕಗಳಿಗೆ ಬರೆದ ಮುನ್ನುಡಿಗಳಿವೆ. ‘ಸಮಾಜದ ಆರೋಗ್ಯ’ ಎಂಬ ಮುನ್ನುಡಿಯನ್ನು ೨೦೧೧ರ ನವೆಂಬರ್ ನಲ್ಲಿ ಬರೆದಿದ್ದಾರೆ. ಹಾಗೆಯೇ ಮುಕ್ತ ಚಿಂತನೆ ಮತ್ತು ಭಿನ್ನಮತದ ಸೊಗಸು, ಹೃದಯ ಶ್ರೀಮಂತಿಕೆಯ ದ್ಯೋತಕ, ಒಲವು ನಮ್ಮ ಬದುಕು ಎಂಬ ಮುನ್ನುಡಿಯನ್ನು ೨೦-೧೦-೨೦೧೦ರಲ್ಲಿ, ಸ್ವಾತಂತ್ರ್ಯ ಮತ್ತು ಸಮಾನತೆಯ ದಿಕ್ಕಿನಲ್ಲಿ, ಈ ಪರಿಯ ಪುಸ್ತಕ ಪ್ರೇಮ, ೦೯-೦೨-೨೦೦೩ರಲ್ಲಿ ಬರೆದ ಮನಸಂಪನ್ನತೆ, ೦೮-೦೬-೨೦೦೫ರಲ್ಲಿ ಬರೆದ ಅರವಿನ ಎಲ್ಲೆಗಳ ವಿಸ್ತರಣೆ, ೦೧-೧೧-೧೯೯೯ರಲ್ಲಿ ಅಭದ್ರತೆಯ ನಡುವಣ ಸೃಜನಶೀಲತೆ, ೦೯-೦೪-೨೦೦೬ರಲ್ಲಿ ಹೊಸ ಬಗೆಯ ಸೊಬಗು, ೧೧-೦೩-೧೯೯೦ರಲ್ಲಿ ಬರೆದ ಮಲೆನಾಡಿನ ಅನುಭವ, ೧೦-೧೦-೨೦೦೩ರಲ್ಲಿ ಬೌದ್ಧ ಧರ್ಮದ ಅಗ್ಗಳಿಕೆ ಹೀಗೆ ಹತ್ತು ಹಲವು ಪುಸ್ತಕಗಳಿಗೆ ಮುನ್ನುಡಿ ಬರೆದಿದ್ದಾರೆ ಪ್ರೊ. ಕಳೇಗೌಡ ನಾಗವಾರರು.
‘ಪಯಣದ ಹಾದಿಯಲ್ಲಿ’ ಅಧ್ಯಾಯದಲ್ಲಿ ಕೆಲ ವ್ಯಕ್ತಿ ಚಿತ್ರಣ ಬರೆದಿದ್ದಾರೆ. ಅವುಗಳೆಂದರೆ ೨೦೦೩ರಲ್ಲಿ ವೈ.ಕೆ.ರಾಮಯ್ಯ, ೦೮-೦೯-೨೦೦೭ರಲ್ಲಿ ಎಂ.ಪಿ.ಪ್ರಕಾಶ, ೨೦೦೭ರಲ್ಲಿ ಬೆಸಗರಹಳ್ಳಿ ರಾಮಣ್ಣ, ೨೦೦೫ರಲ್ಲಿ ವಿಜಯಾ ದಬ್ಬೆ, ೨೬-೦೮-೧೯೮೪ರಲ್ಲಿ ವೈಕಂ.ಮಹಮದ್ ಬಷೀರ್, ೦೧-೦೨-೧೯೮೧ರಲ್ಲಿ ಗೊರೂರು, ೨೦-೦೫-೨೦೦೬ರಲ್ಲಿ ಎಸ್. ಕೆ.ಕರೀಂಖಾನ್, ಕೆ.ಎಚ್.ರಂಗನಾಥ್, ಎಚ್.ಎಲ್.ನಾಗೇಗೌಡ, ೨೧-೧೨-೧೯೮೦ರಲ್ಲಿ ಕೆಂಗಲ್ ಹನುಮಂತಯ್ಯ, ೨೦೦೦ರಲ್ಲಿ ಕುವೆಂಪು, ೨೦೦೭ರಲ್ಲಿ ಕಿ.ರಂ.ನಾಗರಾಜ, ೨೦೦೦ರಲ್ಲಿ ಪಿ.ಲಂಕೇಶ್, ೨೦೦೭ರಲ್ಲಿ ಎಸ್. ಬಂಗಾರಪ್ಪ, ೧೧-೦೪-೨೦೦೯ರಲ್ಲಿ ಲೋಹಿಯಾ, ೨೦೦೬ರಲ್ಲಿ ಗವಿಸಿದ್ದ ಬಳ್ಳಾರಿ, ೧೦-೦೪-೨೦೦೭ರಲ್ಲಿ ಪೂರ್ಣಚಂದ್ರ ತೇಜಸ್ವಿ, ೨೦೦೫ರಲ್ಲಿ ಚಂಪಾ, ಎ.ಕೆ.ಸುಬ್ಬಯ್ಯ, ಹೀಗೆ ಹಲವಾರರ ವ್ಯಕ್ತಿತ್ವ ಚಿತ್ರಣವನ್ನು ಬರೆದಿದ್ದಾರೆ ಪ್ರೊ. ಕಾಳೇಗೌಡ ನಾಗವಾರರು.’ಜಾನಪದ’ ವಿಭಾಗದಲ್ಲಿ ‘ನಡುನೀರ ತಂಪು’ ಲೇಖನವು ಜಗತ್ತಿನಾದ್ಯಂತ ಜನಪದ ಗೀತೆಗಳು- ಮಾನವ ಚೇತನಗಳ ನಡುವಣ ಪರಸ್ಪರ ಪ್ರೇಮಕ್ಕೆ, ಸ್ನೇಹಕ್ಕೆ ಜೀವನಪೂರ್ತಿ ಹಂಬಲಿಸಿ ಹಣ್ಣಾಗುತ್ತಾ ನಡೆದ ತುಂಬು ಮನಸ್ಸುಗಳ ಸೃಷ್ಟಿಯಾಗಿವೆ. ವಾಸ್ತವವಾಗಿ ಜನಸಮುದಾಯದ ಒಟ್ಟು ಬದುಕನ್ನು ಒಳಗೊಂಡಂತೆ ತೀವ್ರ ಆಶಾವಾದದ; ಅಲ್ಲಿನ ಸೋಲುಗಳನ್ನೇ ಮೆಟ್ಟಿಲಾಗಿಸಿಕೊಂಡ ಕನಸುಗಳ; ಹಲವು ಹತ್ತು ದುರಂತಗಳ ನಡುವೆಯೂ ಬೇಕುಗಳ ಪಟ್ಟಿಯ ಕೊನೆಗಾಣದ ಬಯಕೆಗಳನ್ನು ಜಗತ್ತಿನಾದ್ಯಂತ ಈ ಗೀತೆಗಳಲ್ಲಿ ಎಡಬಿಡದೆ ಕಾಣುತ್ತೇವೆ. ಹೀಗೆಯೇ ಸಾಗುತ್ತದೆ ಪೂರ್ಣ ಪಾಠ.’ಬೇಕಾದ ಸಂಗಾತಿ’ಯಲ್ಲಿ ಮಾನವ ಚೇತನಗಳ ನಡುವಣ ಪರಸ್ಪರ ಪ್ರೇಮಕ್ಕೆ, ಸ್ನೇಹಕ್ಕೆ ಜೀವನಪೂರ್ತಿ ಹಂಬಲಿಸಿ ಹಣ್ಣಾಗುತ್ತಾ ನಡೆದ ತುಂಬು ಮನಸ್ಸುಗಳ ಸೃಷ್ಟಿಯಾದ “ಬೇಕಾದ ಸಂಗಾತಿ” ಎಂಬ ಈ ಕೃತಿಯು ವಾಸ್ತವವಾಗಿ ಜನಸಮುದಾಯದ ಒಟ್ಟು ಬದುಕನ್ನು ಒಳಗೊಂಡಂತೆ ತೀವ್ರ ಆಶಾವಾದದ; ಅಲ್ಲಿನ ಸೋಲುಗಳನ್ಮೇ ಮೆಟ್ಟಲಾಗಿಸಿಕೊಂಡ ಕನಸುಗಳ; ಹಲವು ಹತ್ತು ದುರಂತಗಳ ನಡುವೆಯೂ ಬೇಕುಗಳ ಪಟ್ಟಿಯ ಕೊನೆಗಾಣದ ಬಯಕೆಗಳನ್ನು ಸಂಕೇತಿಸುವ ವೈಶಿಷ್ಟಪೂರ್ಣ ಜನಪದ ಕಾವ್ಯದ ಹೊತ್ತಗೆಯಾಗಿದೆ ಎಂಬ ಬೇಕಾದ ಸಂಗಾತಿ ಸಾಗುತ್ತದೆ.
‘ಜನಪದ ಕಾವ್ಯ’ದಲ್ಲಿ ಪ್ರತಿ ಯೊಂದು ನಾಡಿನ ಜನತೆಯೂ ನೆನಪು, ಮಾತುಕತೆ ಮತ್ತು ನಡುಳಿಕೆಗಳಲ್ಲಿ ಪರಂಪರೆಯಿಂದ ಅನೇಕ ಸಂಗತಿಗಳನ್ನು ಹೊತ್ತು ತರುತ್ತಿರುತ್ತದೆ. ಆಚಾರ ವಿಚಾರ, ಪದ್ಧತಿ, ಸಾಹಿತ್ಯದ ಬಗೆಗಳು, ಧಾರ್ಮಿಕ ಕ್ರಿಯೆಗಳು, ಜೀವನ ವಿಧಾನ-ಮುಂತಾದವುಗಳು ಅಲ್ಲಿ ಸೇರಿರುತ್ತವೆ. ಇವುಗಳನ್ನು ಪೂರ್ಣವಾಗಿ ಒಳಗೊಳ್ಳುವ ಚೌಕಟ್ಟನ್ನು ಜಾನಪದ ಎನ್ನುವ ವಿಶಾಲವಾದ ಅರ್ಥದಲ್ಲಿ ಕರೆಯುತ್ತೇವೆ. ಜನಪದ ಸಾಹಿತ್ಯವು ಗೀತೆ, ಲಾವಣಿ, ಕಾವ್ಯ, ಕಥೆ, ಗಾದೆ, ಒಗಟು-ಇತ್ಯಾದಿಯನ್ನು ಒಳಗೊಂಡ ಜಾನಪದದ ಒಂದು ಸಣ್ಣ ಅಂಗ ಮಾತ್ರ ಎಂದು ‘ಜಾನಪದ ಕಾವ್ಯ’ ಸಾಗುತ್ತದೆ.ಹೀಗೆಯೇ ಕಾಳೇಗೌಡ ನಾಗವಾರರು ತಮ್ಮ ಜಾನಪದ ಕ್ಷೇತ್ರದ ಅನುಭವವನ್ನು ‘ಕ್ಷೇತ್ರಕಾರ್ಯದ ಅನುಭವ’ ಅಧ್ಯಾಯದಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ‘ಲಕ್ಕಮ್ಮಜಿಯೊಡನೆ ಸಂದರ್ಶನ’ ವೂ ಇದೆ.
ಪ್ರೊ.ಕಾಳೇಗೌಡ ನಾಗವಾರರನ್ನು ಅವರ ಕೆಲ ಬರಹಗಳ ಕುರಿತು ಕೆಲವರು ಮಾಡಿದ ಸಂದರ್ಶನಗಳು ಅನುಬಂಧ ೧ರಲ್ಲಿ ಇವೆ. ಆ ಕೆಲವರು ಸಂದರ್ಶಕರೆಂದರೆ ಬಿ.ಆರ್.ಜಯರಾಮರಾಜೇ ಅರಸ್, ಬಾಚಹಳ್ಳಿ ಕೃಷ್ಣ, ಹನುಮಣ್ಣ ನಾಯಕ ದೊರೆ, ತುಂಬಾಡಿ ರಾಮಯ್ಯ, ತಂಬಡ ವಿಜಯ್ ಪೂಣಚ್ಚ, ವೀಚಿ, ಜಿ.ಸೋಮಣ್ಣ, ಸಿದ್ದಲಿಂಗಯ್ಯ, ಕೋಡು ಭೋಜಶೆಟ್ಟಿ, ಅಂಬಳಿಕೆ ಹರಿಯಣ್ಣ, ಉಳ್ಳಿಯಡ ಪೂವಯ್ಯ, ವಿಶ್ವನಾಥ ಕಾರ್ನಾಡ, ಮೀರಾಸಾಬಿಹಳ್ಳಿ ಶಿವಣ್ಣ, ಜನಾರ್ದನ ಎರ್ಪಕಟ್ಟೆ, ಶಿವರಾಮೇಗೌಡ ನಾಗವಾರ, ಕೆ.ಪಿ.ಮೃತುಂಜಯ, ಪಿ.ಆರ್.ವೀರಭದ್ರನಾಯಕ, ಕೆ.ರೋಹಿತ್, ಶ್ರೀಪಾದಶೆಟ್ಟಿ, ಮುನಿರತ್ನಮ್ಮ, ಇನ್ನೂ ಕೆಲವರು ಪ್ರೊ.ಕಾಳೇಗೌಡ ನಾಗವಾರರನ್ನು ಸಂದರ್ಶಿಸಿಸಿದ್ದಾರೆ.ಹೀಗೆಯೇ ಅನುಬಂಧ ೨ರಲ್ಲಿ ಪ್ರೊ.ಕಾಳೇಗೌಡ ನಾಗವಾರರನ್ನು ಕುರಿತು ಕೆಲವರು ಬರೆದ ಲೇಖನಗಳಿವೆ. ಅದರಲ್ಲಿ ಪ್ರಮುಖವಾದವುಗಳೆಂರೆ- ಜಿ.ವಿ.ಆನಂದಮೂರ್ತಿಯವರ ಲೇಖನ, ಹಾಗೇ ಎಚ್. ಎಸ್. ರಾಘವೇಂದ್ರರಾವ್, ಪ್ರೀತಿ ಶ್ರೀಮಂಧರ್ ಕುಮಾರ್, ಕೆ.ಪಿ.ನಟರಾಜ, ಇವು ಪ್ರಮುಖ ಲೇಖನಗಳು.ಪತ್ರ ವ್ಯವಹಾರಗಳೆಂದರೆ ಕಾಳೇಗೌಡ ನಾಗವಾರ, ಕೋಡು ಭೋಜಶೆಟ್ಟಿ, ಬಿ.ಬಸವಲಿಂಗಪ್ಪ, ಪಿ.ಲಂಕೇಶ್, ಬೆಸಗರಹಳ್ಳಿ ರಾಮಣ್ಣ, ಪೂರ್ಣಚಂದ್ರ ತೇಜಸ್ವಿ. ಕೆ.ಪಿ. ಖಾದ್ರಿ ಶಾಮಣ್ಣ, ನಟರಾಜ್ ಹುಳಿಯಾರ್ ಎಚ್. ಎಲ್., ಸಿದ್ದಲಿಂಗಯ್ಯ, ಬಾ.ಹ.ರಮಾಕುಮಾರಿ, ಎಸ್. ಜಯಪದ್ಮ, ಮುನಿರತ್ನಮ್ಮ ಹನುಮಣ್ಣ ನಾಯಕ ದೊರೆ, ಶಿವರಾಮೇಗೌಡ ನಾಗವಾರ, ಕೆ.ಎಚ್. ರಂಗನಾಥ್, ಕಲ್ಲೆ ಶಿವೋತ್ತಮರಾವ್, ಹಿರಿಯಡ್ಕ, ಗೋಪಾಲರಾವ್, ಅಂಬಾರಕೊಡ್ಲ ಮಂಗೇಶಗೌಡ, ಬಿ.ಶೀನಪ್ಪ, ಭಂಡಾರಿ, ಡಾ.ಸರಜೂ ಕಾಟ್ಕರ್, ಮುದೇನೂರ ಸಂಗಣ್ಣ, ಕಡಿದಾಳ ಶಾಮಣ್ಣ, ಎಂ.ಪಿ.ಪ್ರಕಾಶ ಪ್ರಮುಖರ ಪತ್ರಗಳಿವೆ.ಅಂತೆಯೇ ನಾಡಿನ ಹಿರಿಯ ಸಾಹಿತಿ, ಪ್ರಮುಖರು ಪ್ರೊ.ಕಾಳೇಗೌಡ ನಾಗವಾರರ ಸಾಹಿತ್ಯ ಕುರಿತು ಪ್ರತಿಕ್ರಿಯೆಸಿದ್ದೂ ಇದೆ.ಹೀಗೆಯೇ ಪ್ರೊ.ಕಾಳೇಗೌಡ ನಾಗವಾರರ ‘ಮಂಗಳಕರ ಚಿಂತನೆ’ ಸಾಗುತ್ತದೆ.
-# ಕೆ.ಶಿವು.ಲಕ್ಕಣ್ಣವರ