

ಒಂದೇ ಉಸುರಿಗೆ ಎಲ್ಲ ಕವನಗಳನ್ನು ಓದಿ ಮುಗಿಸಿ, ಒಂದಿಷ್ಟು ಕಾಲ ಮೌನವಾಗಿ ಕುಳಿತೆ. ಒಂದು ಓದು ಓದುಗನನ್ನು ಮೌನವಾಗಿಸಿದರೆ ಅದು ಅವನನ್ನು ತಟ್ಟಿದೆ ಎಂದು ಅರ್ಥ. ಅಂತಹ ಕವಿತೆಗಳು ಈ ಸಂಕಲನದಲ್ಲಿ ಇವೆ. ಅಭಿನಂದನೆಗಳು.

ಕೆ.ಬಿ.ವೀರಲಿಂಗನಗೌಡ್ರ ತನ್ನ ಅನುಭವದ ಅಭಿವ್ಯಕ್ತಿಗೆ ಕಾವ್ಯವನ್ನು ಒಂದು ಮಾಧ್ಯಮವಾಗಿಸಿಕೊಂಡು ಅವುಗಳನ್ನು ಹೊಸ ಆಕೃತಿಯಲ್ಲಿ ಓದುಗರಿಗೆ ನೀಡಿರುವದು ವಿಶೇಷವಾಗಿದೆ. ಅನುಭಾವ ಕವಿಗಳು ಸಹಜ ಮಾತುಗಳಲ್ಲಿ ತಮ್ಮ ಪ್ರೀತಿಯ ದೈವದ ಜೊತೆ ಲೋಕಾನುಭವಗಳನ್ನು ಹಂಚಿಕೊಳ್ಳುವ ರೀತಿ ಈ ಸಂಕಲನದ ಕವಿ ತನ್ನೊಳಗಿನ ನೋವು, ನಲಿವು, ವಿಸ್ಮಯ, ವಿಷಾದಗಳನ್ನು ‘ಸಾಕಿ’ಯ ಜೊತೆ ಸಂಭಾಷಿಸುತ್ತ ಸಮಾಜಕ್ಕೆ ನಿವೇದಿಸುವ ಪರಿ ಓದುಗನನ್ನು ಬೆರಗುಗೊಳಿಸುತ್ತವೆ.
ಇಲ್ಲಿ ‘ಸಾಕಿ’ ಕವಿಯ ಸಖಿಯೂ ಹೌದು ಆತ್ಮ ಸಾಕ್ಷಿಯೂ ಹೌದು. ಸಾಕಿ ಇಲ್ಲದ ‘ಶುಗರಲೆಸ್’ ಕವಿತೆ ಸಂಕಲನದೊಳಗೆ ಸೇರಿಕೊಂಡಿರುವದು ಓದಿನ ಲಯಕ್ಕೆ ಚಿಕ್ಕ ಗಾಯದಂತೆ ಕಾಣಿಸುತ್ತದೆ. ಸಾಕಿಮಧುಶಾಲೆಕಣ್ಣಲ್ಲಿ ಕಣ್ಣಿಟ್ಟು ಸ್ನೇಹದಸೇತುವೆ ಕಟ್ಟುವುದ ಕಲಿಸಿದೆ *ಸಾಕಿಅವಳೆಂದರೆ………………ಸಮತೆಯೆಂದವನಿಗೆತಕ್ಕಡಿ ಹಿಡಿದು ನಿಂತವಳು ಎದೆಯದನಿಗೆಸ್ವಾತಿ ಹನಿಯಾದವಳು * ಸಾಕಿಕವಿತೆಯೆಂದರೆಬರೆಯುವುದಲ್ಲಪ್ರೀತಿಯಲ್ಲಿ ಬೇಯುವುದು……………………..ಬೆಳೆಯುವುದಲ್ಲಬೇರಾಗಿ ಕೆಳಗಿಳಿಯುವುದು……………………..ಹೊಸೆಯುವುದಲ್ಲಒಲವ ಬೆಸೆಯುವುದು.
* ಸಾಕಿಲೋಕದ ಲಯ ತಪ್ಪುತ್ತಿದೆನಾ ಕುರುಡನಾಗುವೆ ನೀ ಕಿವುಡಿಯಾಗುಕೂಡಿಯೇ ನಡೆಯೋಣ ಸಂಗಮದತ್ತ *ಸಾಕಿಮನೆಯಂಗಳದಲ್ಲಿರಂಗೋಲಿ ಎಂದ್ಹೇಳಿಲಕ್ಮಣರೇಖೆ ಬರಯುತ್ತಿದ್ದಾರೆ *ಸಾಕಿಭಾವ ಬಳ್ಳಿಗೆ ಬೆಂಕಿ ಹಚ್ಚಿಸ್ವರ್ಗದ ಭ್ರಮೆಯಲ್ಲಿವೆ ವಿಷಜಂತುಗಳು *ಹೀಗೆ ಇಲ್ಲಿಯ ಕವಿತೆಗಳು ದಟ್ಟವಾದ ಕಾಡಿನ ಗಾಢ ಮೌನದಲ್ಲಿ “ಜುಳು, ಜುಳು” ಎನ್ನುತ್ತ ನಿಧಾನವಾಗಿ ಹರಿವ ನೀರಿನ ಝರಿಯಂತೆ ಹಿತವಾದ, ಮಿತವಾದ ಆನಂದವನ್ನು ನೀಡುತ್ತ ಚಿಂತನೆಗೂ ಅಣಿಗೊಳಿಸುತ್ತವೆ. ಇದು ನಿಮ್ಮ ಒಳ್ಳೆಯ ಪ್ರಯತ್ನದ ಫಲ. ಇನ್ನೂ ಹೊಸ ಹೊಸ ಪ್ರಯೋಗಶೀಲತೆಯ ಕವಿತೆಗಳು ನಿಮ್ಮಿಂದ ರಚನೆಯಾಲಿ ಎಂಬ ಹಾರೈಕೆಯೊಂದಿಗೆ.
— ಕೃಷ್ಣ ನಾಯಕ ಹಿಚ್ಕಡ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
