Old is gold – ನಾಗರಹಾವು

ಸುರೇಶ್ ಕಂಜರ್ಪಣೆಯವರು ಬರೆಯುತ್ತಾರೆ….

ಕನ್ನಡಿಯಲ್ಲಿ ಕಾಣುವ ಸಂಗಾತಿ ಓದುಗನಿಗೆ

ನಾಗರ ಹಾವು ಸಿನೆಮಾದ ಕೊನೆಯ ದೃಶ್ಯದಲ್ಲಿ ಅಶಾಂತ ರಾಮಾಚಾರಿಯನ್ನು ಬೆನ್ನು ಹತ್ತಿ ಅವನನ್ನು ಅತೀವ ಪ್ರೀತಿಸುವ ವೃದ್ಧ ಚಾಮಯ್ಯ ಮೇಷ್ಟ್ರು ಬರುತ್ತಾರೆ. ವಾಗ್ವಾದದ ಬಳಿಕ ಅಚಾನಕವಾಗಿ ರಾಮಾಚಾರಿ ಚಾಮಯ್ಯ ಮೇಷ್ಟ್ರನ್ನ ತಳ್ಳುತ್ತಾನೆ. ಮೇಷ್ಟ್ರು ಉರುಳಿ ಸಾಯುತ್ತಾರೆ. ದಿಗ್ಭ್ರಮೆಗೊಂಡ ರಾಮಾಚಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ತನ್ನ ಪ್ರಿಯತಮೆ ಜೊತೆಗೆ.
ಸಿನೆಮಾದಲ್ಲಿ ಕಾಣುವ ದುರಂತ ಎಲ್ಲರಲ್ಲೂ ಮೆಚ್ಚುಗೆ ಮೂಡಿಸಿದೆ ; ಇಂದಿಗೂ ಆ ಸಿನೆಮಾ ಕಾಡುತ್ತಲೇ ಇದೆ. ಅದನ್ನು ಕೊಂಚ ಪಕ್ಕಕ್ಕಿಟ್ಟು ,
ನನ್ನನ್ನು ಕಾಡಿದ್ದು ಈ ರೂಪಕ. ಯೌವ್ವನದ ಎಲ್ಲಾ ಭರವಸೆ, ಶಕ್ತಿ, ಚೈತನ್ಯಗಳೊಂದಿಗೆ ತೀವ್ರ ಗೊಂದಲ, ಹತಾಶೆ, ತನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಸಿಟ್ಟಿನ ರಾಮಾಚಾರಿಗೆ ಎದುರಾಗಿ ಅವನ ಮೇಲೆ ಭರವಸೆ ಇಟ್ಟ, ಆದರೆ ವಿವೇಕವಿದ್ದೂ ಹಾದಿ ತೋರಲಾಗದ ಪಾಪಪ್ರಜ್ಞೆಯ ಚಾಮಯ್ಯ ಮೇಷ್ಟ್ರು.
ಇವೆರಡೂ ನಮ್ಮ ಕಾಲದ ರೂಪಕವಾಗಿ ನನನ್ನನ್ನು ಕಾಡುತ್ತಿದೆ. ಈ ರೂಪಕವನ್ನು ಬೀಸು ಗೆರೆಯ ಸ್ಕೆಚ್ ತರಹ ನೋಡಬೇಕೆಂದು ಬಿನ್ನಹ.
ನಮ್ಮ ಕಾಲದ ಯುವ ಶಕ್ತಿಗೆ ದೊಡ್ಡದೇನೂ ಕಾಣಿಸುತ್ತಿಲ್ಲ, ತನ್ನಷ್ಟಕ್ಕೇ ತಾನು ತನ್ನ ಕೈಯಳತೆಗೆ ದಕ್ಕಬಹುದಾದ ಆಸೆಗಳನ್ನು ಪಡೆಯಲು ಗಾಳಿ ಗುದ್ದಾಟ ಮಾಡುತ್ತಾ ಕೂತಿದೆ. ಬರಿಗೈಯಲ್ಲಿ ಚಿಟ್ಟೆ ಹಿಡಿವ ಪರದಾಟ ಇದು.
ಒಂದು ಉದ್ಯೋಗ- ಅದೂ ಗ್ರಾಮಗಳ ಉಸಿರುಗಟ್ಟಿಸುವ ಬಡತನ, ಕೀಳರಿಮೆಯಿಂದ ತಪ್ಪಿಸಿಕೊಳ್ಳುವ ಹುಲ್ಲುಕಡ್ಡಿ. ಇಂಥಾದ್ದೇ ಎಂಬ ಸ್ಪಷ್ಠತೆಯೂ ಇಲ್ಲ; ಅದರಲ್ಲೇನಾದರೂ ದೊಡ್ಡ ಸಾಧನೆ ಮಾಡಬೇಕೆಂಬ ಇರಾದೆಯೂ ಇಲ್ಲ. ಇಂಥಾ ಒಂದು ಇಚ್ಛೆ ಹುಟ್ಟಲೂ ಒಂದು ವಾತಾವರಣ ಬೇಕು.
ಇದು ಹುಡುಗರ ಪಾಡಾಯಿತು.
ಹುಡುಗಿಯರಿಗೋ ಹಳ್ಳಿಯ ಉಸಿರುಗಟ್ಟಿಸುವ ಸಾಮಾಜಿಕ ಕಟ್ಟುಪಾಡುಗಳ ಸಿಸಿಕ್ಯಾಮರಾಗಳಿಂದ ಪಾರಾಗುವ ದೊಡ್ಡ ಬಿಡುಗಡೆಯ ದಾರಿ. ತಾಲೂಕು ಮಟ್ಟದ ಪುಟ್ಟ ಅಂಗಡಿಯಲ್ಲಾದರೂ ಒಂದು ಜಾಬ್. ಸಂಜೆ ವೇಳೆಗೆ ಪಾನಿಪುರಿಯೋ, ಐಸ್ ಕ್ರೀಮೋ ತಿಂದು ತನ್ನನ್ನು ಮೆಚ್ಚುವ ಹುಡುಗ ಸಿಕ್ಕಿದರೆ ಅವನೊಂದಿಗೆ ಹರೆಯದ ವೃಥಾ ಮಾತಿನ ಕಾಲಕ್ಷೇಪ ಮಾಡಿ ಊರಿನ ಬಸ್ ಹತ್ತುವ ಬಗೆ ಅದು.


“ಯಾಕೆ ಹೊಸ ತಲೆಮಾರಿನ ದಿಕ್ಕೆಟ್ಟ ಯುವಕರು ಚಳವಳಿಗಳಿಗೆ ಬರುತ್ತಿಲ್ಲ?” ಎಂದು ಯಾರೋ ಕೇಳಿದ್ದರು. ಚಳವಳಿ? ಮೂಲತಃ ಉಪ್ಪಿನ ಗೊಂಬೆ ಸಮುದ್ರಕ್ಕೆ ಹೋದಂತೆ ಅವರಿಗೆ ನಗರಗಳ ಅನಾಮಿಕತೆಯಲ್ಲಿ ಕಳೆದು ಹೊಗಬೇಕಿದೆ. ಸ್ಮಾರ್ಟ್ ಫೋನಿನಂಥಾ ಆಟಿಕೆಗಳು ಸಿಕ್ಕಿದ ಮೇಲೆ ಅದೇ ಒಂದು ಮಿಥ್ಯಾ ಜಗತ್ತನ್ನು ಸೃಷ್ಟಿಸಿದೆ. ಅದರೊಳಗೇ ಸುಖಿಸುತ್ತಾ , ದುಃಖಿಸುತ್ತಾ ನಾಳೆಗಳ ಬಗ್ಗೆ ಸತತ ಆತಂಕ ಮತ್ತು ಆಸೆಗಳ ಜಂಟಿ ಹೆಣಿಗೆಯಲ್ಲಿ ದಿನ ದೂಡುವುದಷ್ಟೇ.
ಸರಕಾರದ ಆರೋಗ್ಯ ಮಿಷನ್, ಜೀವನೋಪಾಯ ಮಿಶನ್ನಿನಂಥಾದ್ದರಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುವವರನ್ನುನೊಡಬೇಕು. ಖಾಯಂ ಆಗುವ ಭರವಸೆ ಇಲ್ಲ, ಬಿಡುವ ಧೈರ್ಯವೂ ಇಲ್ಲ. ಇದು ಉದ್ಯೋಗದ ದಾರುಣ ಸ್ಥಿತಿ.
ಇನ್ನೊಂದೆಡೆ ಕೊಂಚ ತುರುಸಿನ ಹುಡುಗರು ತಮ್ಮ ಐಡೆಂಟಿಟಿಯ ಭಾಗವಾಗಿ ಹಿಂದುತ್ವದ ಭಜರಂಗಿ ಕಾಲಾಳುಗಳಾಗಿದ್ದಾರೆ. ಉಳಿದ ಪಕ್ಷ ಸಂಘಟನೆಗಳಲ್ಲೂ ಇದ್ದಾರೆ. ಆದರೆ ಅವರ ಸಂಖ್ಯೆ ಕಡಿಮೆ. ಮೆಲ್ಲಗೆ ತಲೆ ಸವರಿ ಮಾತಾಡಿಸಿದರೆ ಮೊದಲು ನಮಗೇ ಕಿರುಚಿ ಭಾಷಣ ಮಾಡುವ ಈ ಹುಡುಗರು ನಿಧಾನಕ್ಕೆ ಅಭದ್ರತೆಯ ಹತಾಶೆಯಲ್ಲಿ ಮಾತಾಡುತ್ತಾರೆ.


“ ಯಾರೂ ಏನೂ ಮಾಡಲ್ಲ ಸಾರ್..!” ಅಂತ ಶತ್ರುವನ್ನು ಗುರುತಿಸಲಾಗದ ವ್ಯಗ್ರತೆಯಲ್ಲಿ ಗುರುಗಾಡುತ್ತಾರೆ.
ಇವರಿಗೆ ಅರಿವು, ಮಾರ್ಗದರ್ಶನ, ವಿವೇಕದ ಮಾತು ಯಾರು ಹೇಳಬೇಕು?
ರಾಮಾಚಾರಿಯ ವ್ಯಗ್ರ ಸಿಟ್ಟಿಗೆ ಕಾರಣವಾದ ವ್ಯವಸ್ಥೆಯನ್ನು ಪ್ರಶ್ನಿಸಲು ಅವನಿಗೂ ಗೊತ್ತಾಗಲಿಲ್ಲ. ತನ್ನ ಬದುಕಿನ ಆಸೆ ನೆರವೇರಲು ಬಿಟ್ಟಿಲ್ಲ ಎಂಬ ಕಣ್ಣೆದುರಿನ ವಿವರ ಇಟ್ಟುಕೊಂಡ ವ್ಯರ್ಥ ಬಂಡಾಯ ಅದು. ಇತ್ತ ಚಾಮಯ್ಯ ಮೇಷ್ಟ್ರಿಗೆ ಅವನ ಬಗ್ಗೆ ಅಪಾರ ಪ್ರೀತಿ, ಆದರೆ ಅವರೂ ಅವನ ಜೊತೆ ಕೈಜೋಡಿಸುವುದಿಲ್ಲ. ಸಾಂಪ್ರದಾಯಿಕ ಶಕ್ತಿಗಳ ವೈವಿಧ್ಯಮಯ ಬ್ಲಾಕ್ ಮೈಲಿಗೆ ಅವರೂ ಶರಣಾಗುತ್ತಾರೆ. ರಾಮಾಚಾರಿಯ ಮೇಲೆ ಈ ಶಕ್ತಿಗಳು ನೇರ ಎಗರಿ ಬೀಳುವುದಿಲ್ಲ. ಅವನನ್ನು ಪ್ರೀತಿಯಲ್ಲಿ ಬಗ್ಗಿಸುವ ಚಾಮಯ್ಯ ಮೇಷ್ಟ್ರನ್ನು ಬಳಸುತ್ತದೆ.
ಎಂಥಾ ಸ್ಥಿತಿ ಇದು. ಒಂದು ತಲೆಮಾರಿಗೆ ಮೇಷ್ಟ್ರು ಹೊಸ ಅರಿವು ಬಂಡಾಯದ ಹಾದಿ ತೋರಿಸುವ ತೋರುಬೆರಳಾದ ರೂಪಕಗಳಿವೆ. ಆದರೆ ಈ ಮೇಷ್ಟ್ರು ಅದೂ ಅಲ್ಲ.
ನಮ್ಮ ಕಾಲದ ರೂಪಕ ಇದು. ಕುಮಾರವ್ಯಾಸ ಹೇಳುವ “ಯಥಾರ್ಥ ಭಾಷಣ ಭೀತ ಚೇತನ”ರಾಗಿ ನಮ್ಮ ಹಿರಿಯರು ಕೂತಿದ್ದಾರೆ. ಆಳುªವವರ ಮೀಸೆ, ಏರುವ ಹುಬ್ಬು ಅವರನ್ನು ಭೀತರನ್ನಾಗಿಸಿದೆ. ಮಾತೆಂಬುದು ಈ ಆಳುವವನ ಅಭೀಪ್ಸೆಗೆ ತಕ್ಕಂಥಾ ರೂಪ ಪಡೆಯುತ್ತದೆ. ಪಳಗಿಸಿ ಒಪ್ಪಿಸುವುದಷ್ಟೇ ಅವರ ಪಾತ್ರ.
ಆದರೆ ಇಂಥಾ ಭೀತ ಚೇತನರೊಳಗೊಂದು ವಿವೇಕವೂ ಇದೆ. ಅದಕ್ಕೆ ಕಾಲಗತಿಯ ಭೀಭತ್ಸಕಾರಿ ಚೇಷ್ಟೆಗಳನ್ನು ಪಿಸುಮಾತಿನಲ್ಲಾದರೂ ವಿವರಿಸುವ ಆಸೆ ಕಮರಿದಂತಿದೆ. ಅತ್ತ ದಿಕ್ಕೆಟ್ಟ ಅರಾಜಕ ಮನಃ ಸ್ಥಿತಿಯ ಯುವ ಶಕ್ತಿಗೂ ಈ ವಿವೇಕದ ಮಾತನ್ನು ಆಲಿಸಬೇಕೆಂಬ ಇರಾದೆಯೂ ಇಲ್ಲ. ಹೀಗೆ ಗುಪ್ತವಾಗಿ ಸಂವಾದಿಸುವುದೂ ಒಂದು ರಾಜಕೀಯ ತಂತ್ರ. ಭಾಷಣವಲ್ಲ; ಪಿಸು ಮಾತಿನ ವರಸೆ.
ಆಳುವ ದುಷ್ಟರಿಗೆ ಇದಕ್ಕಿಂತ ಸೌಭಾಗ್ಯದ ಕಾಲ ಬೇರೆ ಇಲ್ಲ. ಬೋನಿಗೆ ಬಿದ್ದ ಹುಲಿಗೂ ಬೋನು ಹೇಗೆ ಇಟ್ಟರು ಎಂಬ ಕಲ್ಪನೆಯೂ ಇರುವುದಿಲ್ಲ. ಅಸಹಾಯಕ ರೋಷ ಮಾತ್ರಾ. ಉದ್ಯೋಗದ ಭರವಸೆ ಇಲ್ಲ. ರಮ್ಯ ಕನಸಿನ ಪುಟ್ಟ ಖಾಸಗಿ ಬದುಕಿನ ಭರವಸೆಯೂ ಇಲ್ಲ. ಹೊರ ದಾರಿ ತೋರಿ ನಿಜ ಶತ್ರುವನ್ನು ಅನಾವರಣಗೊಳಿಸಿ ತೋರಬಲ್ಲ ಶಕ್ತಿ ಇರುವ ಹಿರಿಯರಿಗೆ ಧೈರ್ಯವೇ ಇಲ್ಲ.


ಎ.ಕೆ.ಆರ್. ಹೇಳಿದ “ಮಾತೇ ಜ್ಯೊತಿರ್ಲಿಂಗ ಬೃಹನ್ನಳೆಗೆ..” ಮತ್ತೆ ಮತ್ತೆ ಕಾಡುತ್ತದೆ. ಕುಮಾರ ವ್ಯಾಸ ಹೇಳದೇ ಬಿಟ್ಟ ಮಾತು ಅದು.
ನಮ್ಮ ಕಾಲದ ಈ ಡಬಲ್ ಕ್ರೈಸಿಸ್ ಇದು. ಯೇಟ್ಸ್ ಇದನ್ನು ದಾರುಣ ವಿಷಾದದಲ್ಲಿ ಹೇಳುತ್ತಾನೆ.
The best lack all conviction, while the worst
Are full of passionate intensity.

ಈ ಮಾತೆಲ್ಲಾ ಯಾರಿಗೆ ಹೇಳುತ್ತಿರುವುದು. ಕರ್ತವ್ಯ ಲೋಪದ ಹೊಣೆಗಾರರು ಯಾರು? ಕನ್ನಡಿ ಎದುರಿನ ಮಾತುಗಳಿವು.
ಬೋದಿಲೇರ್ ಹೇಳಿದ- “ನಿನಗೆ ಗೊತ್ತು ಓದುಗ, ಈ ರಾಕ್ಷಸ ಯಾರು ಅಂತ. ನೀನೇ, ಆಷಾಡಭೂತಿ ಓದುಗ, ನನ್ನ ಸಂಗಾತಿ, ನನ್ನ ಸಹೋದರ”
You know him, Reader, that refined monster,
You! Hypocrite reader — my fellow, — my brother!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *