

ಉತ್ತರಾಖಂಡ ರಾಜ್ಯದ ಚಿಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಸ್ಫೋಟದಿಂದ ಪ್ರವಾಹ ಉಂಟಾಗಿ ಎರಡು ಜಲವಿದ್ಯುತ್ ಸ್ಥಾವರಗಳು ಹಾಗೂ ಹಳ್ಳಿಗಳು ಹಾಳಾಗಿವೆ. ಹಿಮನದಿಗಳು ಮತ್ತು ಹಿಮನದಿ ಸರೋವರಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಅವು ಕೆಲವೊಮ್ಮೆ ಹೇಗೆ ಸ್ಫೋಟಗೊಳ್ಳುತ್ತವೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಚಮೋಲಿ: ಉತ್ತರಾಖಂಡ ರಾಜ್ಯದ ಚಿಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಸ್ಫೋಟದಿಂದ ಪ್ರವಾಹ ಉಂಟಾಗಿ ಸುಮಾರು 20ಕ್ಕು ಹೆಚ್ಚು ಜನ ಸಾವನ್ನಪ್ಪಿದ್ದಾರೆ, ಎರಡು ಜಲವಿದ್ಯುತ್ ಸ್ಥಾವರಗಳು ಹಾಗೂ ಹಳ್ಳಿಗಳು ಹಾಳಾಗಿವೆ. ಹಿಮನದಿಗಳು ಮತ್ತು ಹಿಮನದಿ ಸರೋವರಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಅವು ಕೆಲವೊಮ್ಮೆ ಹೇಗೆ ಸ್ಫೋಟಗೊಳ್ಳುತ್ತವೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಹಿಮನದಿ ಹಾಗೂ ಹಿಮನದಿ ಸರೋವರಗಳು ಹೇಗೆ ರೂಪುಗೊಳ್ಳುತ್ತವೆ?
ಆಸ್ಟ್ರೇಲಿಯಾ ಹೊರತುಪಡಿಸಿದಂತೆ ಎಲ್ಲಾ ಖಂಡಗಳಲ್ಲಿಯೂ ಹಿಮನದಿಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲವು ನೂರಾರು, ಸಾವಿರಾರು ವರ್ಷಗಳಿಂದ ಇವೆ. ಹಿಮಾಲಯದಲ್ಲಿ ಬಹಳಷ್ಟು ಹಿಮನದಿಗಳ ಇವೆ. ಹಿಮಾಲಯದ ಪಶ್ಚಿಮ ಭಾಗದಲ್ಲಿ ಭಾನುವಾರದ ದುರಂತ ಸಂಭವಿಸಿದೆ.
ಹಿಮನದಿಗಳು ಸಂಕುಚಿತ ಹಿಮದ ಪದರಗಳಿಂದ ಮಾಡಲಾಗಿದ್ದು ಅದು ಗುರುತ್ವ ಅಥವಾ ಮೃದುವಾದ ನೀರ್ಗಲ್ಲಿನ ಕಾರಣದಿಂದ ಚಲಿಸುತ್ತದೆ ಅಥವಾ ಹರಿಯುತ್ತದೆ. ಹಿಮನದಿ ವ್ಯಾಪ್ತಿ ಅದರ ಎತ್ತರದ ಮೂಲದಿಂದ ಅಂತ್ಯದವರೆಗೂ ನೂರಾರು ಕಿಲೋಮೀಟರ್ ವಿಸ್ತರಿಸಬಹುದು ಅಥವಾ ಹಿಮ ಸಂಗ್ರಹಣೆ ಅಥವಾ ಕರಗುವಿಕೆಯ ಆಧಾರದ ಮೇಲೆ ಮುನ್ನಡೆಯಬಹುದು ಅಥವಾ ಹಿಮ್ಮೆಟ್ಟಬಹುದು.
ನ್ಯಾಷನಲ್ ಸ್ನೋ ಮತ್ತು ಐಸ್ ಡಾಟಾ ಸೆಂಟರ್ ಪ್ರಕಾರ, ಹಿಮ, ಪರ್ವತ ಕಣಿವೆಗಳ ಕೆಳಗೆ ಹರಿಯಬಹುದು, ಬಯಲು ಪ್ರದೇಶಗಳಲ್ಲಿ ಅಥವಾ ಕೆಲವು ಸ್ಥಳಗಳಲ್ಲಿ ಸಮುದ್ರದ ಮೇಲೆ ಹರಡಬಹುದು. ಹಿಮನದಿಗಳು ಹಿಮ್ಮೆಟ್ಟಿದ ನಂತರ ರೂಪುಗೊಂಡ ಸರೋವರಗಳು ಹೆಚ್ಚಾಗಿ ಕೆಸರು ಮತ್ತು ಬಂಡೆಗಳ ರಚನೆಗಳಿಂದ ಬಂಧಿಸಲ್ಪಟ್ಟಿವೆ.
ಹೆಚ್ಚುವರಿ ನೀರು ಅಥವಾ ಒತ್ತಡ, ಅಥವಾ ರಚನಾತ್ಮಕ ದೌರ್ಬಲತೆಗಳು ನೈಸರ್ಗಿಕ ಮತ್ತು ಮಾನವ ನಿರ್ಮಿತ ಅಣೆಕಟ್ಟುಗಳು ಒಡೆಯಲು ಕಾರಣವಾಗಿ, ಹಿಮನದಿಯಿಂದ ಪೋಷಿಸಲ್ಪಟ್ಟ ನದಿಗಳು ಮತ್ತು ತೊರೆಗಳ ಕೆಳಗೆ ಪ್ರವಾಹದ ನೀರಿನ ರಾಶಿಯನ್ನು ಕಳುಹಿಸುತ್ತವೆ.
ಹಿಮನದಿ ಏಕೆ ಸ್ಫೋಟಗೊಳ್ಳುತ್ತದೆ?
ನಂದಾ ದೇವಿ ಹಿಮನದಿ ಭಾನುವಾರ ಸ್ಫೋಟಗೊಂಡು, ವಿದ್ಯುತ್ ಸ್ಥಾವರಗಳು ಹಾಗೂ ಹಳ್ಳಿಗಳಿಗೆ ಪ್ರವಾಹದ ನೀರನ್ನು ಹರಿಸಲು ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಭೂಕಂಪನ ಚಟುವಟಿಕೆಗಳು ಮತ್ತು ನೀರಿನ ಒತ್ತಡವೂ ಹಿಮ ಸ್ಫೋಟಕ್ಕೆ ಕಾರಣವಾಗಿರಬಹುದು. ಆದರೆ. ಹವಾಮಾನ ಬದಲಾವಣೆಯೂ ಇರಬಹುದು. ಕಡಿಮೆ ತಾಪಮಾನ ಕಡಿಮೆ ಹಿಮಪಾತದೊಂದಿಗೆ ಕರಗುವಿಕೆಯನ್ನು ವೇಗಗೊಳಿಸುತ್ತದೆ, ಇದರಿಂದಾಗಿ ನೀರು ಅಪಾಯಕಾರಿ ಮಟ್ಟಕ್ಕೆ ಏರುತ್ತದೆ.
ಪ್ರಪಂಚದಾದ್ಯಂತ ಇರುವ ಹೆಚ್ಚಿನ ಪರ್ವತ ಹಿಮನದಿಗಳು ಈ ಹಿಂದೆ ತುಂಬಾ ದೊಡ್ಡದಾಗಿದ್ದವು. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಗಣನೀಯವಾಗಿ ಕರಗುವ ಮೂಲಕ ಕುಗ್ಗುತ್ತಿರುವುದಾಗಿ ವುಡ್ಸ್ ಹೋಲ್ ಓಷಿಯೋಗ್ರಾಫಿಕ್ ಇನ್ಸ್ಟಿಟ್ಯೂಟ್ ಸಹಾಯಕ ವಿಜ್ಞಾನಿ ಸಾರಾ ದಾಸ್ ಹೇಳುತ್ತಾರೆ.
ಇಂತಹ ವಿಪತ್ತುಗಳು ಮುನ್ಸೂಚನೆ ನೀಡಬಹುದೇ?
ಪೆರು ಮತ್ತು ನೇಪಾಳದಲ್ಲಿ ಹಿಂದೆ ಮಾರಕ ಅಥವಾ ಹೆಚ್ಚು ವಿನಾಶಕಾರಿ ಹಿಮ ಪ್ರವಾಹ ಸಂಭವಿಸಿದೆ. ಆದರೆ ಹಿಮನದಿಗಳು ದೂರದ ಪ್ರದೇಶದಲ್ಲಿರುವುದರಿಂದ ಮತ್ತು ಮೇಲ್ವಿಚಾರಣೆ ಕೊರತೆಯಿಂದಾಗಿ ಅವುಗಳಿಂದ ಆಗಾಗ ಪ್ರವಾಹ ಸಂಭವಿಸುತ್ತದೆಯೇ? ಒಂದು ವೇಳೆ ಅದು ಹೆಚ್ಚಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಯಲು ಆಗುತ್ತಿಲ್ಲ ಎಂದು ದಾಸ್ ತಿಳಿಸಿದ್ದಾರೆ.
ಒಟ್ಟಾರೆ ತಾಪಮಾನ ಏರಿಕೆ, ಹಿಮನದಿ ಹಿಮ್ಮೆಟ್ಟುವಿಕೆ ಮತ್ತು ಮೂಲಸೌಕರ್ಯ ಯೋಜನೆಗಳ ಹೆಚ್ಚಳವನ್ನು ಗಮನಿಸಿದರೆ, ಈ ಘಟನೆಗಳು ಆಗಾಗ್ಗೆ ಸಂಭವಿಸುತ್ತವೆ ಮತ್ತು ಈ ಅಪಾಯಗಳನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಒಟ್ಟಾರೆ ಹೆಚ್ಚು ವಿನಾಶಕಾರಿಯಾಗುತ್ತವೆ ಎಂದು ದಾಸ್ ಎಚ್ಚರಿಕೆ ನೀಡಿದರು.
ಹಿಮಾಲಯದಾದ್ಯಂತ ಅನೇಕ ಹಿಮನದಿಗಳು ಮತ್ತು ಸರೋವರಗಳಿವೆ ಆದರೆ, ಅವುಗಳಲ್ಲಿ ಬಹುತೇಕ ಮೇಲ್ವಿಚಾರಣೆ ಮಾಡುತ್ತಿಲ್ಲ. ಈ ಅನೇಕ ಸರೋವರಗಳು ಕಡಿದಾದ ನದಿ ಕಣಿವೆಗಳ ಮೇಲ್ಭಾಗದಲ್ಲಿವೆ ಮತ್ತು ಅವುಗಳು ಒಡೆದಾಗ ತೀವ್ರ ಪ್ರವಾಹವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ. ಈ ಪ್ರವಾಹಗಳು ಜನವಸತಿ ಪ್ರದೇಶಗಳು ಮತ್ತು ಸೂಕ್ಷ್ಮ ಮೂಲಸೌಕರ್ಯಗಳನ್ನು ತಲುಪಿದಾಗ ಅವುಗಳು ದುರಂತಕ್ಕೊಳಗಾಗುತ್ತವೆ ಎಂದು ದಾಸ್ ಹೇಳಿದ್ದಾರೆ.
ಇಂಟರ್ ನ್ಯಾಷಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್ ಮೆಂಟ್ ಪ್ರಕಟಿಸಿದ 2010 ರ ಮಾಹಿತಿಯಂತೆ, ಹಿಂದೂಕುಶ್ ಹಿಮಾಲಯದಲ್ಲಿ ಹಿಮಸ್ಫೋಟದ ಬಗ್ಗೆ ನಿಗಾ ವಹಿಸಿ, ಹಿಮನದಿಯ ಅಸ್ಥಿರತೆ ಬಗ್ಗೆ ಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳಬಹುದು ಎಂದು ಹೇಳಲಾಗಿತ್ತು.
ಹಿಮ ಸ್ಫೋಟ ಸಂಭವಿಸಿರುವ ಸ್ಥಳದಲ್ಲಿ ಈ ಹಿಂದೆ ಭೂ ಕುಸಿತ ಹಾಗೂ ಪ್ರವಾಹ ಸಂಭವಿಸಿತ್ತು. ಈ ಪ್ರದೇಶದಲ್ಲಿ ಕಟ್ಟಡ ನಿರ್ಮಾಣದ ನಿರ್ಮಾಣದ ವಿರುದ್ಧ ಪರಿಸರವಾದಿಗಳು ಎಚ್ಚರಿಕೆ ನೀಡಿದ್ದಾರೆ. (kpc)
