ಸ್ವಪಕ್ಷದವರೇ ನನ್ನ ವಿರುದ್ಧ ತಿರುಗಿಬಿದ್ದರು-ರಾಹುಲ್ & ಸಿದ್ಧಾಪುರ ಸಮಾಜಮಂದಿರ ಜಾಗೆ ಮೇಲೆ ಹೈಕೋರ್ಟ್ ತಡೆಯಾಜ್ಞೆ

: ಜಿ23 ಸಭೆ ಬಗ್ಗೆ ರಾಹುಲ್ ಅಸಮಾಧಾನ

ಯೂತ್ ಕಾಂಗ್ರೆಸ್ ಮತ್ತು ಎನ್ ಎಸ್ ಯು ಐ ಚುನಾವಣೆ ನಡೆಸಿದ್ದಕ್ಕೆ ಸ್ವಪಕ್ಷೀಯರೇ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಜಿ 23 ಕಾಂಗ್ರೆಸ್ ನಾಯಕರ ಸಭೆ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ಧಾಪುರ ತಾಲೂಕಿನ ಸಮಾಜಮಂದಿರ ಪ್ರದೇಶದ ಜಾಗದ ಮೇಲಿನ ಮಾಲಿಕತ್ವಕ್ಕೆ ಸಂಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಈ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ನಿಂದ ತಡೆಯಾಜ್ಞೆ ತರುವ ಮೂಲಕ ರಾಜ್ಯ ವಿಧಾನಸಭಾ ಅಧ್ಯಕ್ಷರ ತಂತ್ರಕ್ಕೆ ತಡೆಯಾಜ್ಞೆಯ ಪ್ರತಿತಂತ್ರ ಹೂಡುವಲ್ಲಿ ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಯಶಸ್ವಿಯಾಗಿದೆ.

ಸಿದ್ಧಾಪುರ ಸಮಾಜಮಂದಿರ ಜಾಗ ಬಾಲಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿದ್ದು ಈ ಪ್ರದೇಶವನ್ನು ಸರ್ಕಾರ ಮರಳಿ ಪಡೆದು ಅಲ್ಲಿ ಸ್ವಾತಂತ್ರ್ಯ ಸ್ಮಾರಕ ಭವನ ಮಾಡುವ ವಿಚಾರದಲ್ಲಿ ಸ್ಥಳಿಯ ಆಡಳಿತದಿಂದ ದಾಖಲೆಗಳ ಬದಲಾವಣೆ ಮಾಡಿಸಲಾಗಿತ್ತು. ಈ ವಿವಾದಿತ ಭೂಮಿಯವಿಚಾರ ಆರಂಭದಲ್ಲಿ ಸ್ಥಳಿಯ ಕಾಂಗ್ರೆಸ್ ಘಟಕ ಮತ್ತು ಸ್ಥಳಿಯ ಶಾಸಕರು, ನಂತರ ಪಟ್ಟಣ ಪಂಚಾಯತ್ ಮತ್ತು ಶಾಸಕರು ಹಾಗೂ ಜಿಲ್ಲಾಡಳಿತದ ನಡುವಿನ ವಿವಾದವಾಗಿತ್ತು. ಈಗ ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಮೂಲಕ ವಿಧಾನಸಭಾಅಧ್ಯಕ್ಷ,ಹಾಲಿ ಶಾಸಕ ಕಾಗೇರಿಯವರ ತಂತ್ರಕ್ಕೆ ಪ್ರತಿತಂತ್ರ ಹೂಡಿದೆ.

ಬ್ಲಾಕ್ ಕಾಂಗ್ರೆಸ್ ತಡೆಯಾಜ್ಞೆ ಪ್ರಕಾರ ಈ ಸಿ.ಆರ್. ಹಾಲ್ ಪ್ರದೇಶದ ಮಾಲಿಕತ್ವದ ವಿಚಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ಸಿಕ್ಕಿದೆ. ಇದು ಕಾಂಗ್ರೆಸ್ ಆಸ್ತಿ ಎಂದು ಪ್ರತಿಪಾದಿಸುತ್ತಿರುವ ಕಾಂಗ್ರೆಸ್ ಆಗಲಿ, ಜಿಲ್ಲಾಡಳಿತವಾಗಲಿ ಈ ಪ್ರದೇಶದಲ್ಲಿ ಯಾವುದೆ ಚಟುವಟಿಕೆ ಮಾಡುವಂತಿಲ್ಲ. ಕಾಂಗ್ರೆಸ್ ಪ್ರಕಾರ ಈ ತಡೆಯಾಜ್ಞೆ ತಮ್ಮ ಪರವಾಗಿದ್ದು ಇಲ್ಲಿ ಜಿಲ್ಲಾ ಆಡಳಿತ ಹಸ್ತಕ್ಷೇಪ ಮಾಡುವಂತಿಲ್ಲ. ಈ ಬಗ್ಗೆ ತಹಸಿಲ್ಧಾರರು,ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ ಎಂದಿದೆ. ಇದು ಮೇಲ್ನೋಟದ ವ್ಯಾಖ್ಯಾನವಾದರೆ ವಾಸ್ತವದಲ್ಲಿ ಕಾಂಗ್ರೆಸ್ ಹೆಸರಿನ ಈ ಭೂಮಿಯನ್ನು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರ್ಗಾಯಿಸಿಕೊಂಡವರು ಹಾಲಿ ಶಾಸಕರು. ಈ ಪ್ರದೇಶದಲ್ಲಿ ಸ್ವಾತಂತ್ರ್ಯ ಸ್ಮಾರಕ ಭವನ ನಿರ್ಮಾಣದ ಯೋಜನೆ ರೂಪಿಸಿದವರೂ ಶಾಸಕರೇ. ಆದರೆ ಈಗ ಕಾಂಗ್ರೆಸ್ ತಂದಿರುವ ಹೈಕೊರ್ಟ್ ತಡೆಯಾಜ್ಞೆ ಜಿಲ್ಲಾಡಳಿತದ ವಿರುದ್ಧವಾದರೂ ಈ ಬೆಳವಣಿಗೆಗೆ ಕಾರಣವಾದವರು ಸ್ಥಳಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಆಗಿರುವುದರಿಂದ ಈ ಹೊಸ ವಿದ್ಯಮಾನ ಕಾಂಗ್ರೆಸ್ ಪರವಾಗಿ ಮತ್ತು ಬಿ.ಜೆ.ಪಿ. ಹಾಗೂ ಶಾಸಕರ ಕಾರ್ಯಾಚರಣೆಯ ವಿರುದ್ಧ ಎನ್ನುವ ವಿಶ್ಲೇಶಣೆಗಳಿವೆ.

Rahul gandhi

ನವದೆಹಲಿ: ಯೂತ್ ಕಾಂಗ್ರೆಸ್ ಮತ್ತು ಎನ್ ಎಸ್ ಯು ಐ ಚುನಾವಣೆ ನಡೆಸಿದ್ದಕ್ಕೆ ಸ್ವಪಕ್ಷೀಯರೇ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಜಿ 23 ಕಾಂಗ್ರೆಸ್ ನಾಯಕರ ಸಭೆ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುಎಸ್ ಯೂನಿವರ್ಸಿಟಿ ಆಯೋಜಿಸಿದ್ದ ವೆಬಿನಾರ್ ನಲ್ಲಿ ಮಾತನಾಡಿದ ಅವರು, ಪಕ್ಷದೊಳಗಿನ ಪ್ರಜಾಪ್ರಭುತ್ವ ಚುನಾವಣೆ ಸಂಪೂರ್ಣವಾಗಿ ನಿರ್ಣಾಯಕ, ಆದರೆ ಈ ಸಂಬಂಧ ವಿರೋಧ ಎದುರಿಸಿದ ಮೊದಲ ನಾಯಕ ನಾನೇ ಆಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯುವ ಸಂಘಟನೆ ಮತ್ತು ವಿದ್ಯಾರ್ಥಿ ಸಂಘಟನೆಯಲ್ಲಿ ಚುನಾವಣೆಯನ್ನು ನಡೆಸಿದ ವ್ಯಕ್ತಿ ನಾನು, ಅದಕ್ಕಾಗಿ ನನ್ನ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದವು. ಚುನಾವಣೆಗಳನ್ನುನಡೆಸಿದ್ದಕ್ಕಾಗಿ ನಾನು ಅಕ್ಷರಶಃ ಶಿಲುಬೆಗೇರಿಸಲ್ಪಟ್ಟ ಪರಿಸ್ಥಿತಿಯಲ್ಲಿದ್ದೇನೆ, ನನ್ನ ಸ್ವಂತ ಪಕ್ಷದ ಜನರೇ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಪಕ್ಷದೊಳಗಿನ ಪ್ರಜಾಪ್ರಭುತ್ವ ಚುನಾವಣೆ ಸಂಪೂರ್ಣವಾಗಿ ವಿಮರ್ಶಾತ್ಮಕವಾಗಿದೆ, ಈ ಪ್ರಶ್ನೆಯನ್ನು ಬೇರೆ ಯಾವುದೇ ರಾಜಕೀಯ ಪಕ್ಷದ ಬಗ್ಗೆ ಕೇಳಲಾಗುವುದಿಲ್ಲ ಎಂಬುದು ನನಗೆ ಕುತೂಹಲ ಹುಟ್ಟಿಸಿದೆ ಎಂದು ರಾಹುಲ್ ಹೇಳಿದ್ದಾರೆ.

ನಮ್ಮ ಪಕ್ಷದ ಆಂತರಿಕ ಚುನಾವಣೆ ಬಗ್ಗೆ ಪ್ರಶ್ನಿಸುವವರು ಬೇರೆ ಪಕ್ಷಗಳನ್ನು ಏಕೆ ಪ್ರಶ್ನಿಸುವುದಿಲ್ಲ, ಬಿಜೆಪಿ, ಬಿಎಸ್ ಪಿ ಹಾಗೂ ಸಮಾಜವಾದಿ ಪಕ್ಷಗಳಲ್ಲಿಆಂತರಿಕ ಪ್ರಜಾಪ್ರಭುತ್ವ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ಸಿನ ಸಿದ್ಧಾಂತವು ಸಂವಿಧಾನದ ಸಿದ್ಧಾಂತವಾಗಿದೆ, ಆದ್ದರಿಂದ ಪಕ್ಷವು ಪ್ರಜಾಪ್ರಭುತ್ವವಾಗಿರುವುದು ಹೆಚ್ಚು ಮುಖ್ಯ ಎಂದು ರಾಹುಲ್ ತಿಳಿಸಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ನಾಯಕರು ಕಾಶ್ಮೀರದಲ್ಲಿ ನಡೆಸಿದ ಜಿ23 ಸಭೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಹಲವು ಕಾಂಗ್ರೆಸ್ ಹಿರಿಯ ಮುಖಂಡರು ರಾಪಕ್ಷದ ಕಾರ್ಯವೈಖರಿ ಪ್ರಶ್ನಿಸಿ, ಅದಕ್ಕೆ ಸುಧಾರಣೆ ತರುವಂತೆ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು.

ಕಪಿಲ್ ಸಿಬಲ್ ಮತ್ತು ಆನಂದ್ ಶರ್ಮಾ ಸೇರಿದಂತೆ ಭಿನ್ನಮತೀಯ ನಾಯಕರು ಕಾಂಗ್ರೆಸ್ ಪಕ್ಷವು “ದುರ್ಬಲಗೊಳ್ಳುತ್ತಿದ್ದು ಪಕ್ಷದ ಸುಧಾರಣೆಗಾಗಿ ಧ್ವನಿ ಎತ್ತಿದ್ದರು.

ಬಿಜೆಪಿಯ ದುರಹಂಕಾರದ ವಿರುದ್ಧ ಹೋರಾಡಲು ಪಕ್ಷ ಬದಲಾಗಬೇಕು ಮತ್ತು ವಿಧೇಯವಾಗಬೇಕು, 2014 ರ ನಂತರ ಪ್ರತಿಪಕ್ಷಗಳು ಭಾರತಕ್ಕಾಗಿ  ಹೋರಾಡುತ್ತಿವೆ ಹೊರತು ಅಧಿಕಾರ ಪಡೆಯಲು ಅಲ್ಲ ಎಂದು ಅವರು ಹೇಳಿದ್ದಾರೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *