d.ramappa writes…..ಸ್ವಾತಂತ್ರ್ಯ ಉಳಿಸಿಕೊಳ್ಳಲು ಸಾಮಾನ್ಯನೊಬ್ಬನ ಎರಡು ಹೆಜ್ಜೆಗಳು

  • https://www.youtube.com/watch?v=6MbhKIgsalo

  • ಸ್ವಾತಂತ್ರ್ಯ ಮತ್ತು ನೈತಿಕತೆಯ ದೃಷ್ಠಿಯಂದ, ಭಾರತ ಒಂದು ಸಂಕಷ್ಟದ ಸ್ಥಿತಿಯಲ್ಲಿದೆ ಎಂಬುದನ್ನು ನಾಗರೀಕರಾದ ನಾವೆಲ್ಲರೂ ಅರಿತಿದ್ದೇವೆ. ಆದರೆ, ಈ ಬಿಕ್ಕಟ್ಟಿನಿಂದ ದೇಶವನ್ನು ಪಾರುಮಾಡಲು ಸಾಮಾನ್ಯರಾದ ನಾವು ಅಸಹಾಯಕರು ಎಂದೂ ಅಂದುಕೊಂಡಿದ್ದೇವೆ. ಏಕೆಂದರೆ, ಸರ್ಕಾರ ಎಂಬ ವ್ಯವಸ್ಥೆ, ವಿರೋಧವನ್ನು ಹೊಸಕಿಹಾಕಬಲ್ಲ ಮನಸ್ಥಿತಿಯ ಮತ್ತು
  • ಬಲಿಷ್ಠ, ಕಪಿಮುಷ್ಟಿಯ ಕೈಯಲ್ಲಿ ಇರುವಾಗ, ಹೀಗೆಂದುಕೊಳ್ಳುವುದು ಸಹಜ. ಅದರೊಟ್ಟಿಗೆ, ಅಧಿಕಾರದಲ್ಲಿರುವವರಿಗೆ ಸ್ವಾರ್ಥ ಮತ್ತು ಸ್ವಜನ ಪಕ್ಷಪಾತದ ರಾವು ಹಿಡಿದರೆ ನಮ್ಮ ಅಸಹಾಯಕತೆಯ ಅರ್ಥ ತಿಳಿಯುತ್ತದೆ. ಆದರೆ ಇದು ಸರಿಯೇ? ಈಗಿರುವ ವ್ಯವಸ್ಥೆಯಲ್ಲಿಯೇ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ನಾವು ಎಚ್ಚರವಹಿಸಿದರೆ, ನಮ್ಮ ಕೈಲಾದ ಏನಾದರೂ ಮಾಡಬಹುದೆ?

ಸರ್ಕಾರ ಮತ್ತು ನಾಗರೀಕರ ಮಧ್ಯೆಯ ಭಿನ್ನಾಭಿಪ್ರಾಯ ಎಲ್ಲಾ ಕಾಲಕ್ಕೂ ಇರುವಂತದೆ. ಆದರೆ, ಸಂಧಿಕಾಲದ ಈ ದಿನಗಳು ಆತಂಕದಿಂದ ಕೂಡಿವೆ. ಉದಾಹರಣೆಗೆ, ಸ್ವತಂತ್ರ ಸುದ್ದಿ ಮಾಧ್ಯಮಗಳನ್ನು ನಿರ್ವೀರ್ಯಗೊಳಿಸುವುದು ಮತ್ತು ಆ ಮೂಲಕ, ತಟಸ್ಥಗೊಳಿಸುವುದು ಹೇಗೆ ಎಂಬ ಬಗ್ಗೆ ಮಾರ್ಗಸೂಚಿಯನ್ನು ಕೇಂದ್ರ ಮಂತ್ರಿಗಳ ಗುಂಪೊಂದು 2020ರಲ್ಲಿ ರೂಪಿಸಿತು. ಇದಕ್ಕಾಗಿ 2020ರ ಜೂನ್-ಜುಲೈ ಮಧ್ಯೆ ಆರು ಬಾರಿ ಸಭೆ ಸೇರಿ ಚರ್ಚಿಸಿತು! ವಿಪರ್ಯಾಸ ಎಂದರೆ, ಕೋವಿಡ್ ಸಾಂಕ್ರಾಮಿಕ ಉತ್ತುಂಗದಲ್ಲಿದ್ದಾಗಲೇ ಇದೊಂದು ತೀರಾ ಮುಖ್ಯ ಮತ್ತು ತುರ್ತಿನ ಕೆಲಸವೆಂದು ಸರ್ಕಾರ ತಿಳಿದಿತ್ತು!

ಈ ಚರ್ಚೆಯ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು, 2020ರ ಡಿಸೆಂಬರ್ 3ರಂದು, ಒಂದು ಕ್ರಿಯಾಯೋಜನೆ ರೂಪಿಸಿ ಎಲ್ಲ ಮಂತ್ರಿಗಳಿಗೂ ಸರ್ಕಾರ ಹಂಚಿತು. ಇದರ ಪರಿಣಾಮವಾಗಿ, ಸುದ್ದಿ ಮಾಧ್ಯಮದ ಮಧ್ಯವರ್ತಿಗಳಿಗೆ ವ್ಯಾಪಕವಾದ ಹೊಸ ಮಾರ್ಗಸೂಚಿಗಳ ಅಧಿಸೂಚನೆಯನ್ನು ಹೊರಡಿಸಿತು. ‘ಸುದ್ದಿಗಳ ತಪ್ಪು ಬಳಕೆ ಮತ್ತು ದುರುಪಯೋಗಕ್ಕೆ,‘ ಸಾಮಾಜಿಕ ಮಾಧ್ಯಮಗಳನ್ನು ಮತ್ತು ಸುದ್ದಿ ಪ್ರಕಾಶಕರನ್ನು ಹೊಣೆಗಾರರನ್ನಾಗಿಸಲು ಇದು ಅವಶ್ಯ ಎಂದು ಹೇಳಿತು. ಇದನ್ನು, ‘ಸಾಫ್ಟ್ ಟಚ್ ಓವರ್ಸೈಟ್’ – ‘ಮೃದು ಸ್ಪರ್ಶ ಮೇಲ್ವಿಚಾರಣೆ’ – ಎನ್ನುತ್ತಾರೆ. ‘ಸುದ್ದಿಗಳ ತಪ್ಪು ಬಳಕೆ ಮತ್ತು ದುರುಪಯೋಗ’ ಎಂದರೆ ಏನು? ವಸ್ತುನಿಷ್ಟವಲ್ಲದ ಬಳಕೆ ಎಂದೆ ಅಥವಾ ಸರ್ಕಾರಕ್ಕೆ ಮುಜುಗುರ ತರುವಂತಹದ್ದು ಎಂದೆ?

ಸರ್ಕಾರ ಇರಲಿ, ಸಂಸ್ಥೆಗಳಿರಲಿ ಅಥವಾ ನಾಗರಿಕನಿರಲಿ – ಎಲ್ಲರೂ – ತಮ್ಮ ನ್ಯಾಯಯುತ ಮತ್ತು ನೈತಿಕವಾದ ಹಿತಾಸಕ್ತಿಗೆ ವಿರುದ್ಧವಾದ ಜನ/ಗುಂಪು/ಸಂಸ್ಥೆಗಳಿಂದ ತೊಂದರೆಯಾಗದಂತೆ ಕಾಪಾಡಿಕೊಳ್ಳಬೇಕು. ಇಂತಹ ಒಂದು ಮನೋಭೂಮಿಕೆಯನ್ನು ಚುನಾಯಿತ ಸರ್ಕಾರದಿಂದ ನಾಗರಿಕ ಸಮಾಜ ಆಶಿಸುತ್ತದೆ. ಸಮಾಜದ ಕಾನೂನುಬದ್ಧ ಹಕ್ಕಾದ, ಉತ್ತಮ ಆಡಳಿತ ಮತ್ತು, ಸಾಂವಿಧಾನಿಕ ಮೌಲ್ಯಗಳನ್ನು ನಾಶ ಮಾಡಲು ಪ್ರಯತ್ನಿಸುವ ಜನ ಮತ್ತು ಸಂಸ್ಥೆಗಳನ್ನು ಹಿಡಿತದಲ್ಲಿಡಲು ತುರ್ತು ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು.

ಆದರೆ ಇಲ್ಲಿ, ರಕ್ಷಣೆ ಮಾಡಬೇಕಾದ ಸರ್ಕಾರವೇ – ತನ್ನ ಸ್ಥಾನಮಾನಕ್ಕೆ ಎದುರಾದ ತೊಂದರೆ ಎಂದು – ಸಾರ್ವಜನಿಕ, ಚರ್ಚೆ-ವಿಮರ್ಶೆ, ಮತ್ತು ವಿರೋಧವನ್ನು ಹತ್ತಿಕ್ಕಲು ಅದನ್ನು ದುರುಪಯೋಗಪಡಿಸಿಕೊಂಡರೆ? ಇದರೊಟ್ಟಿಗೆ, ಬಡಜನರಾದ ನಾವೇನೂ ಮಾಡಲಾಗದು ಎಂಬ ಮನಸ್ಥಿತಿ ನಮ್ಮಲ್ಲಿದೆ. ಸ್ವಾತಂತ್ರ್ಯ ಕೈತಪ್ಪಿಹೋಗಬಹುದಾದ ಇಂತಹ ಗಂಭೀರ ಪರಿಸ್ಥತಿಯಲ್ಲಿ ನಾವಿದ್ದರೂ, ಈ ನೈತಿಕ ಅಧಃಪತನದಿಂದ ಹೊರಬರಲು ತಾವೇನು ಮಾಡಲಾಗದ ಅಸಹಾಯಕರು ಎಂದು ನಾವು ತಿಳಿದಿದ್ದೇವೆ. ನಮ್ಮ – ನಿಮ್ಮ ಮನಸ್ಥಿತಿಯ ಈ ಬಿಕ್ಕಟ್ಟಿಗೆ ಪರಿಹಾರ ಏನು?

ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬಹುದಾದ ಎರಡು ಸರಳ ಸೂತ್ರಗಳನ್ನು ಇಲ್ಲಿ ಕೊಡಲಾಗಿದೆ.

ಮೊದಲ ಸೂತ್ರ – ವಿಷಯ ವಿಸ್ತರಣೆ:
ಅಹಿಂಸಾತ್ಮಕ ಹೋರಾಟದಲ್ಲಿ ಭಾಗವಹಿಸುವ ಸಾರ್ವಜನಿಕರ ಸಂಖ್ಯೆಯಲ್ಲಿ ಸಾಮಥ್ರ್ಯವಿದೆ. ಅಹಿಂಸಾತ್ಮಕ ಪ್ರಚಾರಗಳು, ಹಿಂಸಾತ್ಮಕ ಅಭಿವ್ಯಕ್ತಿಗಳಿಗಿಂತ ಎರಡು ಪಟ್ಟು ಹೆಚ್ಚು ಫಲಪ್ರದವಾಗುವ ಸಾಧ್ಯತೆಗಳಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಸಂಘರ್ಷದಲ್ಲಿ, ಅಹಿಂಸಾತ್ಮಕ ವಿಧಾನದ ಬಳಕೆ ಕಾರ್ಯತಂತ್ರದ ದೃಷ್ಠಿಯಿಂದ ತರ್ಕಬದ್ಧವಾಗಿದೆ. ಒಟ್ಟು ಜನಸಂಖ್ಯೆಯ ಕನಿಷ್ಟ ಶೇಕಡ 3.5 ರಷ್ಟು ಜನ ಭಾಗವಹಿಸಿದ ಕಾರ್ಯಕ್ರಮಗಳು ಬದಲಾವಣೆಯನ್ನು ತಂದಿವೆ ಎಂದು ಮಾಹಿತಿ ತಿಳಿಸುತ್ತದೆ. ಇಂತಹ ಬದಲಾವಣೆಗೆ ಅವಶ್ಯವಾದ ರೂಪಕಗಳನ್ನು ತಯಾರು ಮಾಡುವ ವಸ್ತು-ವಿಷಯಗಳು, ಕಚ್ಚಾ ಸಾಮಗ್ರಿಯ ರೂಪದಲ್ಲಿ ಭಾರತೀಯ ಪತ್ರಿಕೋದ್ಯಮದ ಒಂದು ಚಿಕ್ಕ ವಿಭಾಗದಲ್ಲಿ ಇದೆ. ಆದರೆ ತಯಾರು ಮಾಡಿದ ರೂಪಕಗಳನ್ನು ಜನರಿಗೆ – ಬದಲಾವಣೆಗೆ ಅವಶ್ಯವಾದ ಶೇಕಡ 3.5 ಜನಸಂಖ್ಯೆಗೆ – ತಲುಪಿಸಲು, ಮಾಧ್ಯಮ ವೇದಿಕೆಗಳಿಗಷ್ಟೇ ಸಾಧ್ಯವಾಗದು. ಇಂತಹ ರೂಪಕಗಳಿಗೆ ಪ್ರಚಾರ ಕೊಡಲು, ಸಾಮಾನ್ಯ ನಾಗರಿಕರಾದ ನಾವುಗಳು ಸಹಾಯ ಮಾಡಬಹುದು.

ಕ್ರೈಸ್ತ ಮತಸ್ಥರು ಹೇಳುವ ಡೆವಿಡ್ ಮತ್ತು ಗೋಲಿಯಾತ್ ಕತೆ ಒಂದು ಸೂಕ್ಷ್ಮ ತಿಳಿಸುತ್ತದೆ. ಡೆವಿಡ್ ಒಬ್ಬನೇ, ಕ್ರೂರ ಮತ್ತು ಬಲಿಷ್ಠ ಗೋಲಿಯಾತ್‍ನನ್ನು ಸೋಲಿಸಲು ಅಸಾಧ್ಯ. ಅದಕ್ಕಾಗಿ ಒಬ್ಬ ಡೆವಿಡ್, ಅನೇಕ ಡೆವಿಡ್‍ರನ್ನು ಹುಟ್ಟುಹಾಕಬೇಕು. ಈ ಅನೇಕರೂ, ಮತ್ತಷ್ಟು ಡೆವಿಡ್‍ರನ್ನು ಹುಟ್ಟುಹಾಕಬೇಕು. ಇದೊಂದು ಸ್ವಯಂ-ಸಾಶ್ವತ ವ್ಯವಸ್ಥೆಯಾ ಗಿ ರೂಪುಗೊಳ್ಳಬೇಕು. ಪತ್ರಿಕೋದ್ಯಮದ ಒಂದು ಚಿಕ್ಕ ವಿಭಾಗ ತಯಾರು ಮಾಡಿದ ರೂಪಕಗಳ ಪ್ರಚಾರದಲ್ಲಿ ಈ ಸೂಕ್ಷ್ಮ ಸೂಚನೆ ಅಡಗಿದೆ ಅನ್ನಿಸುವುದಿಲ್ಲವೆ?

‘ಗುಣವiಟ್ಟದ ಕಾಳಜಿಯಿರುವ ಪತ್ರಿಕೋದ್ಯಮ ಒಪ್ಪಿಕೊಳ್ಳುವಂತಹ, ಉತ್ತಮ ರೂಪಕಗಳನ್ನು ತಯಾರು ಮಾಡುವ ತಾಕತ್ತು ನಮಗಿಲ್ಲ,‘ ಎಂದು ನಾವು ಅಂದುಕೊಂಡಿದ್ದೇವೆ. ನಮ್ಮಲ್ಲಿ ತುಂಬಾ ಜನರಿಗೆ ಅನೇಕ ಮುಖ್ಯ ವಿಷಯಗಳ ಬಗ್ಗೆ ಹೊಸ ಒಳನೋಟವಾಗಲೀ, ಸ್ಪಷ್ಟತೆಯಾಗಲೀ ಇಲ್ಲ ಎಂಬುದು ನಿಜ. ಆದ್ದರಿಂದ, ಒಳನೋಟ ಮತ್ತು ಸ್ಪಷ್ಟತೆ ಇರುವ ಜನರು ಕಳಿಸಿದ ವಿಷಯಗಳನ್ನು ಓದುವುದಕ್ಕಷ್ಟೇ ಸೀಮಿತಗೊಳಿಸಿ, ಅಸಹಾಯಕತೆ ಮತ್ತು ನಿಷ್ಕ್ರಿಯತೆ ತೋರುತ್ತೇವೆ. ಹೊಸ ವಸ್ತು-ವಿಷಯಗಳನ್ನು ನಾವೇ ತಯಾರು ಮಾಡಿ ಕಳಿಸಲು ಆಗದು ಎಂಬ ಮನಸ್ಥಿತಯೇ ಈ ನಿಷ್ಕ್ರೀ ಯತೆಗೆ ಕಾರಣ. ಆದರೆ ತಿಳಿದವರು ಕಳಿಸಿದ ಸಂಗತಿಗಳಿಗೂ, ತಿಳಿಯದ ನಾವೇ ತಯಾರು ಮಾಡಬೇಕಾದ ಸಶಕ್ತತೆಗೂ ಏನೂ ಸಂಬಂಧ ಇಲ್ಲ. ನಾವು ಮಾಡುವುದೇನಿದ್ದರೂ – ಸರಿ, ಪ್ರಸ್ತುತ ಮತ್ತು, ಅವಶ್ಯ ಎಂಬ – ವಿಷಯವನ್ನು ಜನರಿಗೆ ತಲುಪಿಸುವ ವರ್ಧಕಗಳಾಗುವ ಕ್ರೀಯೆಯಷ್ಟೆ.

ದೇಶ ಒಂದು ಜಟಿಲ ಪರಿಸ್ಥಿತಿಯಲ್ಲಿ ಸಾಗುತ್ತಿದೆ ಎಂಬುದನ್ನು ಅರಿಯಲು, ಕ್ಷಣಕ್ಷಣವೂ ಹೊಸ-ಹೊಸ ವಿಷಯಗಳು ಸಿಗುತ್ತಿವೆ. ತಜ್ಞರು ಸಾದರಪಡಸುವ ಸಂಪಾದಕೀಯಗಳು, ಸಂದರ್ಶನಗಳು, ಹಿನ್ನೆಲೆಯ ವಿವರಣೆಗಳು, ಅಭಿಪ್ರಾಯಗಳು ಇವೆಲ್ಲವೂ ನಮ್ಮೆದುರಿಗಿವೆ. ಗ್ರಹಿಸಲು ಶಕ್ತರಾದ ಓದುಗರಿಗೆ ಅವು ತಲುಪುತ್ತಿವೆ. ಆದರೆ, ಅತಿ ದೊಡ್ಡ ಸಮೂಹ ಇದನ್ನು ನೋಡುತ್ತಿಲ್ಲ, ಓದುತ್ತಿಲ್ಲ ಅಥವ, ಗ್ರಹಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾವುಗಳು, ನಮ್ಮ ಸಂಪರ್ಕದಲ್ಲಿರುವವರಿಗೆ ಮತ್ತು ನಮ್ಮನ್ನು ಅನುಸರಿಸುವವರಿಗೆ, ನಮ್ಮದೇ ಆದ ಅನುಭವದ ವ್ಯಾಖ್ಯೆಯೊಂದಿಗೆ ಇವುಗಳನ್ನು ತಲುಪಿಸಬಹುದು. ಉಳಿದವರು, ತಮ್ಮ ಪ್ರತಿಕ್ರಿಯೆ ನೀಡುವ ಮೂಲಕವೂ ಭಾಗವಹಿಸಬಹುದು. ಇಂತಹ ಕೆಲಸಗಳಿಗೆ ಲಿಂಕ್ಡ್‍ಇನ್, ಫೇಸ್‍ಬುಕ್, ಟ್ವಿಟರ್ ಮುಂತಾದುವು ಉತ್ತಮ ವೇದಿಕೆಗಳು. ಹೀಗೆ – ಹೊಸದೇನನ್ನೂ ತಯಾರು ಮಾಡದೆಯೂ – ನಾವು ಹೆಚ್ಚು ಜನರಿಗೆ ತಲುಪಿಸುವ ಕ್ರಿಯೆಯ ವರ್ಧಕರಾಗಬಹುದು. ಏರಿಳಿವ ಅಲೆಗಳನ್ನು ಬೀಸುವ ಗಾಳಿ ಘರ್ಜಿಸುವಂತೆÉ ಮಾಡುತ್ತದೆ. ಅಂತೆಯೇ, ಪ್ರತಿಯೊಬ್ಬನೂ ತನ್ನದೇ ಆದ ಪ್ರತಿಕ್ರಿಯೆ ಸೇರಿಸಿ, ವಿಷಯ ಹೆಚ್ಚು ಶಸಕ್ತವಾಗುವಂತೆ ಮಾಡಿ ಅದು ಹೆಚ್ಚ್ಹೆಚ್ಚು ಜನರನ್ನು ತಲುಪಿದಾಗ ಅಬ್ಬರದ ಅಲೆಯಂತೆ ಘರ್ಜಿಸತೊಡಗುತ್ತದೆ. ಒಬ್ಬ ಡೆವಿಡ್ ಮೊಟ್ಟೆಯಿಟ್ಟು ನೂರಾರು ಡೆವಿಡ್‍ರಾದಂತೆ, ವಿಷಯ ಹೆಚ್ಚು-ಹೆಚ್ಚು ಜನರನ್ನು ತಲುಪುತ್ತಾ, ಗಾಢವಾಗುತ್ತಾ, ಅವಶ್ಯವಾದ ತೀಕ್ಷ್ಣತೆಯನ್ನು ವiತ್ತು ನಿರಂತರತೆಯನ್ನು ಪಡೆದುಕೊಳ್ಳುತ್ತದೆ.

ಎರಡನೆ ಸೂತ್ರ – ಮಾಧ್ಯಮಗಳನ್ನು ಮೀರುವುದು:
ಪ್ರಜಾಪ್ರಭುತ್ವವೆಂದರೆ, ಆಡಳಿತಗಾರರು ನಮ್ಮ ಇಚ್ಚೆಯನ್ನು ಪ್ರತಿನಿಧಿಸುವುದಾಗಿದೆ. ನಾವು ಪ್ರಯತ್ನಿಸದೆ, ಪ್ರಜಾಪ್ರಭುತ್ವ ತನ್ನಷ್ಟಕ್ಕೇ ಉಳಿಯುವುದಿಲ್ಲ. ಮಾಧ್ಯಮದ ಚಟುವಟಿಕೆಗಳಿಗಷ್ಟೇ ಸೀಮಿತಗೊಳಿಸದೆ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಎಚ್ಚರ ಮತ್ತು ಕಾರ್ಯ ಒಂದು ಅಭ್ಯಾಸದಂತೆ, ದಿನಾಲು ಮತ್ತು ಎಲ್ಲಾ ಕಡೆ ನಡೆಯಬೇಕು. ಸರ್ಕಾರದ ಹೊಣೆಗಾರಿಕೆಯನ್ನು ನೆನಪಿಸಿ, ಅದರ ಮೇಲೆ ನಿಯಂತ್ರಣದ ಸನ್ನೆಯನ್ನು ಪ್ರತಿಬಾರಿಯೂ ಇಡಬೇಕು. ಇಲೆಕ್ಷನ್‍ಗೆ ಅಥವ ಐದು ವರ್ಷಗಳಿಗೊಮ್ಮೆ ಸೀಮಿತವಾಗದೆ ಪ್ರತಿದಿನವೂ ನಮ್ಮ ಎಚ್ಚರ ಕಾಯ್ದುಕೊಳ್ಳಬೇಕು. ಪ್ರಧಾನಿಯಿಂದ ಮಾತ್ರ ಹೊಣೆಗಾರಿಕೆಯನ್ನು ನಿರೀಕ್ಷಿಸುವುದಲ್ಲ; ಅಧಿಕಾರದಲ್ಲಿರುವ ಪ್ರತಿಯೊಬ್ಬರಿಂದಲೂ – ಕಾರ್ಪೊರೇಟರ್, ವಿಧಾನಸಭಾ/ಲೋಕಸಭಾ ಸದಸ್ಯ, ಜಿಲ್ಲಾಧಿಕಾರಿ, ತಹಸಿಲ್ದಾರ್, ಪಂಚಾಯತ್ ಸದಸ್ಯ, ಪೊಲೀಸ್ ಅಧಿಕಾರಿ, ಉಪಾಧ್ಯಾಯರು – ಹೊಣೆಗಾರಿಕೆಯನ್ನು ನಿರೀಕ್ಷಿಸಿ ಪಡೆಯಬೇಕು. ಇವುಗಳು, ನಾನೂ ಒಬ್ಬ ನಿಪುಣ ಕಾರ್ಯಕರ್ತ ಎಂಬ ಪ್ರಜ್ಞೆಯನ್ನು ಮೂಡಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಮ್ಮ ಕಳವಳಗಳನ್ನು ಸ್ಪಷ್ಟವಾಗಿ ಮತ್ತು ದೃಢವಾಗಿ ಹೇಳಿ ಪರಿಹಾರಗಳನ್ನು ಪಡೆಯಬೇಕು. ಅವಶ್ಯ ಅನ್ನಿಸಿದರೆ, ಬಳಕೆದಾರರ ಕೋರ್ಟಿನಲ್ಲಿ ಕಟ್ಲೆ ಹೂಡುವುದು, ಪಾಲಕರ ವೇದಿಕೆಗಳಲ್ಲಿ ಮತ್ತು ಸಂಘದ ಸಭೆಗಳಲ್ಲಿ ವಿಚಾರಿಸುವುದು, ಮಾಹಿತಿ ಹಕ್ಕಿನಡಿ ಆಡಳಿತ-ಸಂಬಂಧಿ ಮಾಹಿತಿ ಪಡೆಯುವುದು ಮತ್ತು ಅವುಗಳಿಂದ ಆಗಬಹುದಾದ ಕೆಡುಕುಗಳನ್ನು ಸರಿಪಡಿಸುವುದು. ಇದು ನಮ್ಮಲ್ಲಿರುವ ಉದಾಸೀನತೆ ಮತ್ತು ನಿರಾಸಕ್ತಿಯನ್ನು ಹೋಗಲಾಡಿಸುತ್ತದೆ. ಅಲ್ಲದೆ, ಇಡೀ ವ್ಯವಸ್ಥೆಯನ್ನು, ತ್ವರಿತವಾಗಿ ಕಾರ್ಯಕ್ಷಮತೆಯಿಂದ ಮತ್ತು ಜವಾಬ್ದಾರಿಯಿಂದ ಇರುವಂತೆ ಮಾಡುತ್ತದೆ. ದೂರದಲ್ಲಿರುವ ಪ್ರಧಾನಿಗಿಂತಲೂ ಹತ್ತಿರದಲ್ಲಿರುವ ಅಧಿಕಾರಿಯಿಂದ ಹೊಣೆಗಾರಿಕೆಯನ್ನು ಪಡೆಯುವುದು ಸುಲಭ. ಪ್ರಧಾನಿ ಮುಂತಾದ ಪ್ರಮುಖರಿಂದ ಮಾಹಿತಿ ಪಡೆಯುವುದಕ್ಕೆ ಕೆಲವೊಂದು ಅಡೆತಡೆಗಳಿವೆ. ಆದರೆ, ಅಧಿಕಾರಿಗಳಿಂದ ಮಾಹಿತಿ ಪಡೆಯುವುದು ನಾಗರಿಕ ಹಕ್ಕು-ಬಾಧ್ಯತೆಗಳಿಗೆ, ಮತ್ತಿತರ ಕಾನೂನುಗಳಿಗೆ ಒಳಪಟ್ಟಿದೆ.

ದೇಶದ ಸುಧಾರಣೆಯಲ್ಲಿ ನಾಗರಿಕನೊಬ್ಬನ ಕೊಡುಗೆಯನ್ನು ನಿಕೃಷ್ಟ ಎಂದು ತಿಳಿಯಲಾಗದು. ಇಂದಿನ ಭಾರತ ಪಡೆದದ್ದೆಲ್ಲವೂ ಭಾರತದ ಪ್ರಜ್ಞಾವಂತ ಮತ್ತು ಚೈತನ್ಯಶೀಲ ನಾಗರಿಕ ಪ್ರಯತ್ನಿಸಿ ಪಡೆದದ್ದೆ. ಉದಾಹರಣೆಗೆ: ಪ್ರತಿಯಬ್ಬ ವೈದ್ಯನಿಗೂ, ಜೀವವನ್ನು ಉಳಿಸಲು ತನ್ನ ಸೇವೆಯನ್ನು ಕೊಡಬೇಕಾದ ವೃತ್ತಿಪರ ಬಾಧ್ಯತೆ ಇದೆ ಎಂದು ಸುಪ್ರಿಮ್ ಕೋರ್ಟ್ ಹೇಳಲು ಕಾರಣ ಪರ್ಮಾನಂದ ಕಟಾರ ಎಂಬ ಒಬ್ಬ ಎಚ್ಚೆತ್ತ ನಾಗರಿಕ ಹಾಕಿದ ಕೇಸು. ಲೈಂಗಿಕ ಕಿರುಕುಳ ವ್ಯಕ್ತಿಯ ಮೂಲಭೂತ ಹಕ್ಕುಗಳ ಹರಣ ಎಂದು ಕಾನೂನು ಮಾರ್ಪಾಡು ಆಗಿರುವುದಕ್ಕೆ ಕಾರಣ, ಭನ್ವರಿ ದೇವಿ ಎಂಬ ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಹಾಕಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ. ವೆಬ್ಸೈಟ್‍ನಲ್ಲಿ ಆಕ್ರಮಣಕಾರಿ ಸಂದೇಶ ಎಂದು ಆರೋಪಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದು, ವ್ಯಕ್ತಿಯನ್ನು ಬಂಧಿಸುವ ಅಧಿಕಾರ ಕೊಡುವ ಕಾನೂನನ್ನು ಕೋರ್ಟ್ ಅಸಿಂಧುಗೊಳಿಸಿದ್ದು 24 ವರ್ಷ ವಯಸ್ಸಿನ ಶ್ರೇಯಾ ಸಿಂಘಾಲ್‍ರ ಏಕಾಂಗಿ ಹೋರಾಟ.

ಮೂಲಭೂತವಾಗಿ ಪ್ರಜಾಪ್ರಭುತ್ವ, ಜನರ ಕೈಯಲ್ಲಿ ಅಧಿಕಾರ ಇಡುತ್ತದೆ. ದೇಶದ 130 ಕೋಟಿ ಜನ ಆಡಳಿತ ಸಂಬಂಧಿ ವಿಷಯಗಳ ಕುರಿತು ಪದೇ ಪದೇ ಸಭೆ ಸೇರುವುದು ಪ್ರಾಯೋಗಿಕವಲ್ಲದ್ದು. ಅದಕ್ಕಾಗಿ ನಾವು ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸಿದ್ದೇವೆ. ಅವರುಗಳು ಸೇರಿ ತೆಗದುಕೊಂಡ ತೀರ್ಮಾನಗಳನ್ನು ಕಾರ್ಯರೂಪಕ್ಕೆ ಇಳಿಸಿ, ದೈನಂದಿನ ಕೆಲಸ ಕಾರ್ಯಗಳನ್ನು ನಡೆಸಲು ಅಧಿಕಾರಿಗಳನ್ನು ನೇಮಿಸಿಕೊಂಡಿದ್ದೇವೆ. ಹೀಗಿದ್ದಾಗ, ನಮ್ಮ ಪ್ರತಿನಿಧಿಗಳು ಮತ್ತು ಆಡಳಿತಗಾರರು ನಮ್ಮನ್ನು ಆಳುವವರು ಹೇಗಾಗುತ್ತಾರೆ?

ಇದನ್ನು ಇನ್ನೊಂದು ರೀತಿಯಲ್ಲಿ ಕೂಡ ನೋಡಬಹುದು: ಸರ್ಕಾರ ಎಂಬುದು ಸೇವೆಗಳನ್ನು ಪೂರೈಕೆ ಮಾಡುವ ಸಾಂಘಿಕ ವ್ಯವಸ್ಥೆ. ನಾವು ತೆರಿಗೆ ಕೊಡುತ್ತೇವೆ, ಸರ್ಕಾರ ಸೇವೆಗಳನ್ನು ಒದಗಿಸುತ್ತದೆ. ಸೇವೆಯ ಪೂರೈಕೆಯಲ್ಲಿ ವ್ಯತ್ಯಯವಾದರೆ ಅವರನ್ನು ಪ್ರಶ್ನಿಸುವುದು ಸಹಜ ಅಲ್ಲವೆ?

ದೈನಂದಿನ ಜೀವನದಲ್ಲಿ ಈ ಎರಡು ಸರಳ ನಿಯಮಗಳ ಪಾಲನೆಯಿಂದ ಭಾಗಶಃ ಮುಕ್ತ ಸ್ಥಿತಿಯಿಂದ ಪೂರ್ಣ ಮುಕ್ತತೆಯತ್ತ ಸಾಗಬಹುದು.
===========0==========ಡಿ. ರಾಮಪ್ಪ ಸಿರಿವಂತೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *