local news-ಗೋಡೆಗೆ ಪ್ರಶಸ್ತಿ,ಯಕ್ಷಗಾನ,ಸಾಧಕರಿಗೆ ಸನ್ಮಾನ

ಸಿದ್ದಾಪುರ
ಯಕ್ಷಗಾನದ ಮೇರು ಕಲಾವಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಶ್ರೀಅನಂತ ಯಕ್ಷಕಲಾ ಪ್ರತಿಷ್ಠಾನ ನೀಡುವ ಪ್ರಸಕ್ತ ವರ್ಷದ ರಾಜ್ಯ ಮಟ್ಟದ ಅನಂತಶ್ರೀ ಪ್ರಶಸ್ತಿ ನೀಡಲಾಗುತ್ತದೆ.
ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ ಈ ಕುರಿತು ಪ್ರಕಟಣೆ ನೀಡಿದ್ದಾರೆ.ಮೇ ಮೂರನೇವಾರ ಶಿರಸಿಯಲ್ಲಿ ನಡೆಯಲಿರುವ ಸಂಸ್ಥೆಯ ದಶಮಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಮಾಡಲಾಗುತ್ತದೆ.ಪ್ರಶಸ್ತಿ, ನಗದು ಪುರಸ್ಕಾರ,ಫಲಕ,ಸ್ಮರಣಿಕೆ ಒಳಗೊಂಡಿರುತ್ತದೆ. ಯಕ್ಷಗಾನದ ಖ್ಯಾತ ಕಲಾವಿದರಾಗಿದ್ದ ಕೊಳಗಿ ಅನಂತ ಹೆಗಡೆ ಅವರ ಸಂಸ್ಮರಣೆಯಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಏಳು ದಶಕಗಳಿಂದ ಬಡಗು ತಿಟ್ಟು ಯಕ್ಷಗಾನದ ಮೇರು ಕಲಾವಿದರಾಗಿರುವ ಗೋಡೆ ನಾರಾಯಣ ಹೆಗಡೆ ಅವರು ಸಾವಿರಕ್ಕೂ ಹೆಚ್ಚು ಕೌರವನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.

ಬ್ರಹ್ಮ, ಲಕ್ಷ್ಮಣ,ಋತುಪರ್ಣ,ರಾವಣ,ಅರ್ಜುನ,ಕಂಸ, ಕೀಚಕ, ಮಾಗದ, ಭಸ್ಮಾಸುರ,
ಸಾಲ್ವ,ತ್ರಿಶಂಕು, ಅಕ್ರೂರ ಮತ್ತಿತರ ಪಾತ್ರಗಳಿಗೆ ತಮ್ಮದೇ ಶೈಲಿಯ ಮೂಲಕ ಹೆಸರು ಮಾಡಿದ್ದಾರೆ.
ಶುದ್ಧ ಚಾರಿತ್ರ್ಯದ 82 ವರ್ಷದ ಗೋಡೆ ನಾರಾಯಣ ಹೆಗಡೆ ಅವರು ಯಕ್ಷಲೋಕದಲ್ಲಿ ಒಂದು ಯುಗವನ್ನೇ ಸ್ಥಾಪಿಸಿದ್ದವರು.ಪಾತ್ರ ಪೋಷಣೆ,ಭಾವಾಭಿನಯ ಸಾಂಪ್ರದಾಯಿಕವಾಗಿರುವುದು ಅವರ ವಿಶೇಷವಾಗಿದೆ.
ಗೋಡೆ ನಾರಾಯಣ ಹೆಗಡೆ ಅವರ ಇದುವರೆಗಿನ ಕಲಾ ಸಾಧನೆಗೆ ಸಂದ ಪ್ರಶಸ್ತಿ, ಪುರಸ್ಕಾರಗಳು ಅಸಂಖ್ಯ. ಈ ಬಾರಿ ಅನಂತ ಹೆಗಡೆ ಅವರ ಆತ್ಮೀಯ ಒಡನಾಡಿ ಆಗಿರುವ ಹಿರಿಯ ಕಲಾವಿದರಾದ ಗೋಡೆ ನಾರಾಯಣ ಹೆಗಡೆ ಅವರಿಗೆ ಅನಂತ ಶ್ರೀಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಪ್ರತಿಷ್ಠಾನದ ಗೌರವವನ್ನು ಹೆಚ್ಚಿಸುವಂತಾಗಿದೆ ಎಂದು ಕೇಶವ ಹೆಗಡೆ ಕೊಳಗಿ ತಿಳಿಸಿದ್ದಾರೆ.

ಮಕ್ಕಳಯಕ್ಷಗಾನ ‘ಕಂಸ ದಿಗ್ವಿಜಯ ಮತ್ತು ವೀರ ವೃಷಸೇನ’

ನಿರ್ದೇಶನ: ಗಣೇಶ ಭಂಡಾರಿ, ಕೆರೆಕೋಣ. ‘ಚಿಂತನ ರಂಗ ಅಧ್ಯಯನ ಕೇಂದ್ರ, ‘ಸಹಯಾನ’ ದ #ವಿಶ್ವರಂಗಭೂಮಿದಿನಾಚರಣೆ ಯಲ್ಲಿ ಮಕ್ಕಳು ಯಕ್ಷಗಾನ ಪ್ರಸ್ತುತಪಡಿಸಿದರು. ಕಳೆದ ಕೆಲವು ವರ್ಷಗಳಿಂದ ಗಣೇಶ ಭಂಡಾರಿಯವರು ‘ಸಹಯಾನ’ ದ ಅಂಗಳದಲ್ಲಿ ಮಕ್ಕಳಿಗೆ ಯಕ್ಷಗಾನ ಕಲಿಸುತ್ತಿದ್ದಾರೆ.
ಕಂಸ ದಿಗ್ವಿಜಯ:
ನಾರದನಿಂದ ಪ್ರಚೋದಿಸಲ್ಪಟ್ಟ ಕಂಸ, ತಂದೆ ತಾಯಿಯರನ್ನು ಜೈಲಲ್ಲಿಟ್ಟು ಮಥುರೆಯ ರಾಜನಾಗಿ, ದಿಗ್ವಿಜಯ ಹೊರಡುತ್ತಾನೆ. ಯಾತ್ರೆಯ ಮಧ್ಯದಲ್ಲಿ ಎದುರಾಗುವ ಆಸ್ತಿ,ಪ್ರಾಸ್ತಿ ಯರಲ್ಲಿ ಅನುರಕ್ತನಾಗುತ್ತಾನೆ. ಆದರೆ ಆತನ ದಿಗ್ವಿಜಯ ದ ಸುದ್ದಿ ತಿಳಿದ ಅವರು ವಿರೋಧಿಸಿ ಯುದ್ಧ ಮಾಡುತ್ತಾರೆ. ಸೋಲುತ್ತಾರೆ. ಮುಂದೆ ಅವರ ತಂದೆ ಮಾಗಧನಿಗೂ ಇದೇ ಗತಿಯಾಗುತ್ತದೆ. ಮಕ್ಕಳಿಬ್ಬರೂ ಕಂಸನನ್ನ ಇಷ್ಟಪಟ್ಟಿರುವ ವಿಷಯ ತಿಳಿದ ಮಾಗಧ ಮಕ್ಕಳನ್ನ ಕಂಸನಿಗೆ ಧಾರೆಯೆರೆದುಕೊಡುತ್ತಾನೆ. ಇದು ಕಥೆ. ಈ ಕಥೆಯನ್ನ ತುಂಬ ಚೆನ್ನಾಗಿ ಮಕ್ಕಳು ಅಭಿನಯಿಸಿದರು. ಕಂಸನ ಪ್ರವೇಶದೊಂ ದಿಗೇ ಏಳುವ ಈ ಪ್ರಸಂಗ ಮಕ್ಕಳ ಗಟ್ಟಿ ಲಯ, ಸೂಕ್ಷ್ಮ ಆಂಗಿಕ ಅಭಿನಯದೊಂದಿಗೆ ಕಳೆಗಟ್ಟುತ್ತದೆ.ಬಕೆಲವು ಪದ್ಯಗಳಿಗಂತೂ ಮಕ್ಕಳು ಜೋರು ಚಪ್ಪಾಳೆ ಗಿಟ್ಟಿಸಿದರು
ವೀರ ವೃಷಸೇನ;
ಕರ್ಣನ ಮಗನೀತ. ಚಿಕ್ಕ ಪ್ರಾಯದಲ್ಲೇ ಕುರುಕ್ಷೇತ್ರ ಯುದ್ಧದ ನೆಲವನ್ನು ಹೊಕ್ಕುತ್ತಾನೆ. ಯುದ್ಧ ಭೂಮಿಗೆ ಬಂದು ತನ್ನ ಪರಾಕ್ರಮದ ಮೂಲಕ ಭೀಮನನ್ನು ಸೋಲಿಸುತ್ತಾನೆ. ಮುಂದೆ ಅರ್ಜುನೊಡನೆ ಯುದ್ಧಮಾಡಿ ಆತನಿಂದ ಶಹಭಾಸ್ ಗಿರಿ ಪಡೆಯುತ್ತಾನೆ. ಮತ್ತೆ ಕೃಷ್ಣನ ಕುಟಿಲೋಪಾಯಕ್ಕೆ ತುತ್ತಾಗಿ ಅರ್ಜುನನಿಂದ ಹತನಾಗುತ್ತಾನೆ.
ಯುದ್ಧದ ಛಾಯೆಯ ಆಟವಿದು. ಜೋರು ಗತಿಯ ಹಾಡುಗಳು, ಕುಣಿತ. ಮಕ್ಕಳು ಕುಣಿತದಲ್ಲಿ ಒಬ್ಬರನ್ನೊಬ್ಬರು ಮೀರಿಸಿದರು. ಚುರುಕುತನದ ನೃತ್ಯಗಳು, ಮಾತುಗಳ ಮೂಲಕ ಪ್ರಸಂಗವನ್ನು ಚೆಂದಗೊಳಿಸಿದರು.
ಎರಡೂ ಪ್ರಸಂಗದಲ್ಲಿ ಹೆಣ್ಣುಮಕ್ಕಳೇ ಮುಖ್ಯ ಪಾತ್ರ ವಹಿಸಿ ಗಮನ ಸೆಳೆದರು. ತಂಡದಲ್ಲೂ ಅವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಆಟದಲ್ಲಿ, ಕಂಸ (ಸಂಜನಾ) ನಾರದ(ರಕ್ಷಿತಾ) ಅಸ್ತಿ (ಸೀಮಾ) ಪ್ರಾಸ್ತಿ (ತನುಶ್ರೀ) ವನಪಾಲಕರು (ಚೈತ್ರ, ಸಿಂಚನ) ಮಾಗಧ(ಸಚಿನ್) ದೂತ (ಭುವನ್) ವ್ರಷಸೇನ (ಶ್ವೇತ) ಕೌರವ (ಇಂಚರ) ಭೀಮ (ಪವನ್) ಕೃಷ್ಣ (ಪ್ರಜ್ನಾ) ಅಜು೯ನ (ಅನನ್ಯ) ಪಾತ್ರವಹಿಸಿದ್ದರು.
ಮಕ್ಕಳ ತನು, ಮನವನರಿತು ತುಂಬ ಕಾಳಜಿಯಿಂದ ಆಟ ಆಡಿಸಿದ ಭಾಗವತರು ಧರ್ಮಶಾಲೆ ಗಜಾನನ ಭಾಗವತರು ಸ್ತುತ್ಯಾರ್ಹರು.
ಮಕ್ಕಳಿಗೆ ವರ್ಷಗಟ್ಟಲೆ ಪಾಠ ಹೇಳಿ, ಇಂಥ ಚಂದ ಆಟ ಆಡಿಸಿಕೊಟ್ಟ ನಿರ್ದೇಶಕ ಗಣೇಶ ಭಂಡಾರಿ, ಕೆರೆಕೋಣ ರಿಗೆ ಅಭಿನಂದನೆಗಳು.

  • ಕಿರಣ ಭಟ್, ಹೊನ್ನಾವರ.

ಬಾಳಗೋಡದಲ್ಲಿ ಮೂವರು ಸಾಧಕರಿಗೆ ಸಿದ್ಧಿಶ್ರಿ ಪ್ರಶಸ್ತಿ ಪ್ರದಾನ
ಸಿದ್ದಾಪುರ .
ಶ್ರೀ ಗಣಪತಿ ದೇವ ಟ್ರಸ್ಟ್(ರಿ) ಬಾಳಗೋಡ ಆಶ್ರಯದಲ್ಲಿ ಮೂವರು ಸಾಧಕರಿಗೆ ಶ್ರೀಗಣಪತಿ ದೇವರ ಹೆಸರಿನಲ್ಲಿ ಸ್ಥಾಪಿಸಿದ “ಸಿದ್ಧಿಶ್ರಿ ಪ್ರಶಸ್ತಿ”ಯನ್ನು ವೇ. ಮೂ. ಶಂಕರ ಭಟ್ಟ ಕಟ್ಟೆ ಹಾಗೂ ನಾಟ್ಯಚಾರ್ಯ ಶಂಕರ ವಿ. ಭಟ್ಟ ಹಾಗೂ ಖ್ಯಾತ ಮಕ್ಕಳ ಸಾಹಿತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃ ತ, ನಿವೃತ್ತ ಮುಖ್ಯ ಶಿಕ್ಷಕ ತಮ್ಮಣ್ಣ ಬೀಗಾರ ಅವರಿಗೆ ನೀಡಿ ಗೌರವಿಸಲಾಯಿತು.
ಶ್ರೀ ಗಣಪತಿ ದೇವರ ದೇವಾಲಯದಲ್ಲಿ ಎರಡು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಅವುಗಳ ಮುಕ್ತಾಯ ಸಂದರ್ಭದಲ್ಲಿ ಧರ್ಮಸಭೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದೇವಾಲಯದ ಆವರಣದಲ್ಲಿ ನಡೆಯಿತು.
ರಾಷ್ಟ್ರಪ್ರಶಸ್ತಿ ಪುರಸ್ಕೃ ತ ನಿವೃತ್ತ ಮುಖ್ಯ ಶಿಕ್ಷಕ ಜಿ.ಜಿ. ಹೆಗಡೆ ಬಾಳಗೋಡರವರು ಪ್ರಶಸ್ತಿಯ ಪ್ರಾಯೋಜಕರಾಗಿದ್ದರು. 2021ರ ಪ್ರಶಸ್ತಿಯನ್ನು ಸ್ವೀಕರಿಸಿದ ಶ್ರೇಷ್ಠ ವಿದ್ವಾಂಸ ವೇ. ಮೂ. ಶಂಕರ ಪರಮೇಶ್ವರ ಭಟ್ಟ ಕಟ್ಟೆ ಮಾತನಾಡಿ ಪ್ರಶಸ್ತಿಗಳು ಮತ್ತಷ್ಟು ಸಾಧನೆಗೆ ಪ್ರೇರಕವಾಗುತ್ತದೆ. ಸಾಧನೆಯಿಂದ ಬಂದ ಪ್ರಶಸ್ತಿಯ ಮೌಲ್ಯವನ್ನು ದತ್ತನಿಧಿಯಾಗಿ ತೊಡಗಿಸಿ ಅದರ ಮೂಲಕ ಮತ್ತಷ್ಟು ಸಾಧಕರನ್ನು ಗೌರವಿಸುವ ಕೆಲಸದಿಂದ ಇನ್ನಷ್ಟು ಸಾಧಕರನ್ನು ಸೃಷ್ಟಿಸಿ ಗುರುತಿಸಲು ಸಾಧ್ಯ. ಅಲ್ಲದೇ ಧರ್ಮವನ್ನು ಉಳಿಸುವ, ಜಾಗೃತಿಗೊಳಿಸುವ ಕೆಲಸ ನಡೆಯುತ್ತಿರಬೇಕು. ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ನೈತಿಕ ಪ್ರಜ್ಞೆಯನ್ನು ಬಲಗೊಳಿಸಲು ನೆರವಾಗುತ್ತದೆ ಎಂದು ನುಡಿದರು.


2020ರ ಪ್ರಶಸ್ತಿಯನ್ನು ಮಕ್ಕಳ ಖ್ಯಾತ ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃ ತ ನಿವೃತ್ತ ಮುಖ್ಯ ಶಿಕ್ಷಕ ತಮ್ಮಣ್ಣ ಬೀಗಾರ ಅವರು ಸ್ವೀಕರಿಸಿ ಮಾತನಾಡಿ- ಶಾಲೆಗಳು ಆಧುನಿಕ ದೇವಾಲಯವಿದ್ದಂತೆ. ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಬಲಗೊಳಿಸಿ ಅದರಲ್ಲಿ ಚಾರಿತ್ರ್ಯವನ್ನು ರೂಪಿಸುವ ಕೆಲಸ ಅಗತ್ಯವಾಗಿ ಆಗಬೇ ಕು. ಶಿಕ್ಷಣ ಕಲೆ ಸಾಹಿತ್ಯ ವ್ಯಕ್ತಿಯ ಹಾಗೂ ಸಾಮಾಜಿಕ ಸ್ತರವನ್ನು ಎತ್ತರಿಸುವ ಮಾಧ್ಯಮವಾಗಿದ್ದು ನಾವು ಹೆಚ್ಚು ಗಮನ ಹರಿಸಬೇಕೆಂದು ಹೇಳಿ ತಮಗಿತ್ತ ಪ್ರಶಸ್ತಿ ಬಗ್ಗೆ ಕೃತಜ್ಞತೆ ಹೇಳಿದರು.
2019ರ ಪ್ರಶಸ್ತಿಯನ್ನು ನಾಟ್ಯಾಚಾರ್ಯ ಶಂಕರ ವಿ. ಭಟ್ಟ ಅವರಿಗೆ ನೀಡಿದ್ದು ಅದನ್ನು ಸ್ವೀಕರಿಸಿದ ಬಳಿಕ ಮಾತನಾಡಿ- ಬದುಕಿಗೆ ಕಲೆಬೇಕು. ಕಲೆಯು ಉಳಿಯಬೇಕು ಕಲೆಯ ಅಂತಿಮಗುರಿ ಆನಂದ ನೀಡುತ್ತಿರಬೇ ಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿ.ಎ. ಉತ್ತೀರ್ಣಗೊಳಿಸಿದ ಬಾಳಗೋಡದ ಯುವಕ ಗುರುಮೂರ್ತಿ ಸುಬ್ರಾಯ ಭಟ್ಟ ಅವರನ್ನು ಶ್ರೀ ಸಿದ್ಧಿವಿನಾಯಕ ಮಿತ್ರಮಂಡಳಿ ಬಾಳಗೋಡ ಪರವಾಗಿ ಸತ್ಕರಿಸಲಾಯಿತು.
ಅಧ್ಯಕ್ಷತೆಯನ್ನು ಶ್ರೀ ಗಣಪತಿ ದೇವ ಟ್ರಸ್ಟ್ (ರಿ) ಬಾಳಗೋಡ ಅಧ್ಯಕ್ಷತೆ, ರಾಜೇಂದ್ರ ರಾಮನಾಥ ಹೆಗಡೆ ಬಾಳಗೋಡ ವಹಿಸಿದ್ದರು. ವೇದಿಕೆಯಲ್ಲಿ ಲಂಬೋದರ ಹೆಗಡೆ ಬಾಳಗೋಡ, ತಿಮ್ಮಣ್ಣ ಹೆಗಡೆ ಲಕ್ಕಬ್ಬೆ ಉಪಸ್ಥಿತರಿದ್ದರು.
ಶ್ವೇತಾ ಶ್ರೀಧರ ಭಟ್ಟ ಜಗಳೇಮನೆ ಪ್ರಾರ್ಥನಾ ಗೀತೆ ಹಾಡಿದರು. ಲಕ್ಷ್ಮೀನಾರಾಯಣ ಗ. ಹೆಗಡೆ ಬಾಳಗೋಡ ಸ್ವಾಗತಿಸಿದರು. ಜಿ. ಜಿ. ಹೆಗಡೆ ಬಾಳಗೋಡ ಅಭಿನಂದನಪರ ಮಾತುಗಳನ್ನಾಡಿ ನಿರೂಪಿಸಿದರು. ಸ್ವರ್ಣಲತಾ ಶಾನಭಾಗ ಹಾಗೂ ಸುಬ್ರಹ್ಮಣ್ಯ ಶಾಂತಾರಾಮ ಭಟ್ಟ ಬಾಳಗೋಡ ಸನ್ಮಾನ ಪತ್ರ ವಾಚಿಸಿದರು. ಸುಭಾಶ್ಚಂದ್ರ ರಾಮ ನಾಯ್ಕ ಬಾಳಗೋಡ ವಂದಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *