
ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಅನ್ನು ಉಳಿಸುವ ಸಲುವಾಗಿ ಓವರ್ ಹೆಡ್ ವಿದ್ಯುತ್ ಕೇಬಲ್ ಗಳನ್ನು ಭೂಗತವಾಗಿ ಬದಲಾಯಿಸುವಂತೆ ರಾಜಸ್ಥಾನ ಮತ್ತು ಗುಜರಾತ್ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಜೈಪುರ್: ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಅನ್ನು ಉಳಿಸುವ ಸಲುವಾಗಿ ಓವರ್ ಹೆಡ್ ವಿದ್ಯುತ್ ಕೇಬಲ್ ಗಳನ್ನು ಭೂಗತವಾಗಿ ಬದಲಾಯಿಸುವಂತೆ ರಾಜಸ್ಥಾನ ಮತ್ತು ಗುಜರಾತ್ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಹೈ-ವೋಲ್ಟೇಜ್ ವಿದ್ಯುತ್ ತಂತಿಗಳ ಕಾರಣದಿಂದ ಹೆಚ್ಚಿನ ಸಂಖ್ಯೆಯ ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗಳ ಸಾವಿನ ಕುರಿತು ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಪಕ್ಷಿಗಳು ವಿದ್ಯುದಾಘಾತದಿಂದ ಸಾವನ್ನಪ್ಪದಂತೆ ರಕ್ಷಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ. ಗುಜರಾತ್ ಮತ್ತು ರಾಜಸ್ಥಾನ ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗಳ ಸೂಕ್ಷ್ಮ ಆವಾಸಸ್ಥಾನಗಳು.
ಗ್ರೇಟ್ ಇಂಡಿಯನ್ ಬಸ್ಟರ್ಡ್ಒಂದು ಅಪರೂಪದ ಬೃಹತ್ ಪಕ್ಷಿ ಎಂದು ಅರ್ಜಿದಾರರು ಸಲ್ಲಿಸಿದ್ದ ಮನವಿಯೊಂದರ ಸುದೀರ್ಘ ಕಾನೂನು ಹೋರಾಟದ ನಂತರ ಈ ತೀರ್ಪು ಬಂದಿದ್ದು, ಸುಲಭವಾಗಿ ಹಾರಾಟ ನಡೆಸುವುದು ಈ ಹಕ್ಕಿಗಳಿಗೆ ಕಷ್ಟಕರಮತ್ತು ಓವರ್ ಹೆಡ್ ವಿದ್ಯುತ್ ಕೇಬಲ್ ಗೆ ಡಿಕ್ಕಿ ಹೊಡೆದ ನಂತರ ವಿದ್ಯುದಾಘಾತವಾಗಿ ಹಕ್ಕಿಗಳು ಸಾವನ್ನಪ್ಪುತ್ತಿದೆ.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್, ಭಾರತ ಸಂವಿಧಾನದ 48 ಎ ವಿಧಿ ಪರಿಸರವನ್ನು ರಕ್ಷಿಸಲು ಮತ್ತು ಸುಧಾರಿಸಲು ಮತ್ತು ಕಾಡುಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದಿದೆ. ವಿದ್ಯುತ್ ಮಾರ್ಗಗಳನ್ನು ಬದಲಿಸುವ ವೆಚ್ಚವನ್ನು ವಿದ್ಯುತ್ ಕಂಪನಿಗಳು ಭರಿಸಬಹುದು ಅಥವಾ ಈ ಕಾರ್ಯಕ್ಕೆ ಅಗತ್ಯವಾದ ಹಣವನ್ನು ಸಂಗ್ರಹಿಸಲು ಯಾಂತ್ರಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬಹುದು ಎಂದು ಅವರು ವಾದಿಸಿದರು.
ಭೂಮಿಯ ಅತಿ ಭಾರವಾದ ಹಕ್ಕಿಗಳಲ್ಲಿ ಒಂದಾದ ಗ್ರೇಟ್ ಇಂಡಿಯನ್ ಬಸ್ಟರ್ಡ್ ರಾಜಸ್ಥಾನದ ರಾಜ್ಯ ಪಕ್ಷಿ. ಕಳೆದ ಹಲವು ವರ್ಷಗಳಿಂದ ನಾಶವನ್ನು ತಡೆಯಲು ಹಲವಾರು ಸಂರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ ಆದರೆ ಪಕ್ಷಿಗಳ ಸಂಖ್ಯೆ ಕ್ರಮೇಣ ನಶಿಸುತ್ತಿದೆ. ಈ ಕುಸಿತಕ್ಕೆ ಒಂದು ಪ್ರಮುಖ ಕಾರಣವೆಂದರೆ ಗ್ರೇಟ್ ಇಂಡಿಯನ್ ಬಸ್ಟರ್ಡ್ಸ್ ಗುಜರಾತ್ ಮತ್ತು ರಾಜಸ್ಥಾನದಲ್ಲಿ ತಮ್ಮ ಕ್ಷೀಣಿಸುತ್ತಿರುವ ನೈಸರ್ಗಿಕ ಆವಾಸಸ್ಥಾನಗಳ ಮೂಲಕ ಸಾಗುವ ವಿದ್ಯುತ್ ತಂತಿಗಳಿಗೆ ಡಿಕ್ಕಿ ಹೊಡೆದ ನಂತರ ಸಾವನ್ನಪ್ಪುವುದಾಗಿದೆ.
ನಿರ್ಣಾಯಕ ತೀರ್ಪಿನ ನಂತರ, ಪಿಸಿಸಿಎಫ್ ಮತ್ತು ರಾಜಸ್ಥಾನದ ಮುಖ್ಯ ವನ್ಯಜೀವಿ ವಾರ್ಡನ್ ಮೋಹನ್ ಲಾಲ್ ಮೀನಾ, “ನಾವು ನ್ಯಾಯಾಲಯದ ತೀರ್ಪನ್ನು ವಿವರವಾಗಿ ಅಧ್ಯಯನ ಮಾಡುತ್ತೇವೆ ಮತ್ತು ನಂತರ ಮುಂದೇನು ಮಾಡಬಹುದೆಂದು ನಿರ್ಧರಿಸುತ್ತೇವೆ. ಕೇಬಲ್ ಬದಲಿಸುವಲ್ಲಿ ನಮಗೆ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ ಎಂದು ನಾನು ಭಾವಿಸುತ್ತೇನೆ.” ಎಂದರು.
ಗ್ರೇಟ್ ಇಂಡಿಯನ್ ಬಸ್ಟರ್ಡ್ ಅನ್ನು 2011 ರ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವ ಪಕ್ಷಿ ಎಂದು ಕರೆಯಲ್ಪಟ್ಟಿದೆ. ಇದನ್ನು ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಸಹ ಸೇರಿಸಲಾಗಿದೆ. (kpc)
