ಮಹಾತ್ಮ ಗಾಂಧೀಜಿ ಮತ್ತು ಕಾರ್ಮಿಕ ದಿನ

ಇಂದು ಕಾರ್ಮಿಕರ ದಿನ*ಭಾರತದಲ್ಲಿ ಕಾರ್ಮಿಕರಿಗೆ ಅಹಿಂಸಾ ಸತ್ಯಾಗ್ರಹದ ಮೂಲಕ ಮೊದಲ ಬಾರಿಗೆ ನ್ಯಾಯ ದೊರಕಿಸಿ ಕೊಟ್ಟವರು ಮಹಾತ್ಮ ಗಾಂಧೀಜಿ. ೧೯೧೮ರಲ್ಲಿ ನಡೆದ ಅಹ್ಮದಾಬಾದ್ ಗಿರಣಿ‌ ಕಾರ್ಮಿಕರ ಸತ್ಯಾಗ್ರಹ ಒಂದು ಜ್ವಲಂತ ಉದಾಹರಣೆ.ಗಾಂಧೀಜಿಯವರ ಮೊದಲ ಸತ್ಯಾಗ್ರಹಗಳಲ್ಲಿ ಅಹಮದಾಬಾದ್ ಗಿರಣಿ ಕಾರ್ಮಿಕರ ಸತ್ಯಾಗ್ರಹ ಪ್ರಮುಖವಾದದ್ದು. ಕಾರ್ಮಿಕರ ಬಗ್ಗೆ ಅವರಿಗಿದ್ದ ಅಪಾರ ಕಾಳಜಿ ಈ ಸತ್ಯಾಗ್ರಹವನ್ನು ಗಮನಿಸಿದಾಗ ತಿಳಿದು ಬರುತ್ತದೆ.

“ಶತ ಶತಮಾನಗಳಿಂದಲೂ ದುಡಿಮೆಗಾರರನ್ನು ಕೀಳುದರ್ಜೆಯವರನ್ನಾಗಿ ಕಾಣಲಾಗುತ್ತಿದೆ. ನೇಕಾರರ ಮಗ, ರೈತ ಮತ್ತು ಶಾಲಾ ಮಾಸ್ತರರ ಮಗ ಮೂವರಲ್ಲೂ ಯಾವ ಭೇದವನ್ನು ನಾನು ಒಪ್ಪುವುದಿಲ್ಲ – ಯಾವ ಕಾರ್ಮಿಕರನ್ನೂ ಅತೀ ಕೀಳು ಎಂದಾಗಲಿ, ಅತೀ ಮೇಲು ಎಂದಾಗಲಿ ಪರಿಗಣಿಸುವುದಿಲ್ಲ. ಎಷ್ಟೋ ವರ್ಷಗಳಿಂದ ಹೇಳುತ್ತಿದ್ದೇನೆ, ಕಾರ್ಮಿಕ ಬಂಡವಾಳಗಾರಿಗಿಂತ ಮಿಗಿಲು ಎಂದು. ಶ್ರಮವಿಲ್ಲದೇ, ಚಿನ್ನ, ಬೆಳ್ಳಿ, ತಾಮ್ರ ಎಲ್ಲವೂ ವ್ಯರ್ಥ ಭಾರವೆ. ಭೂ ಗರ್ಭದಿಂದ ಅಮೂಲ್ಯ ಖನಿಜಗಳನ್ನು ಹೊರತೆಗೆಯುವುದು ದೇಹ ಶ್ರಮವೆ, ಶ್ರಮಕ್ಕೆ ಬೆಲೆ ಚಿನ್ನವಲ್ಲ. ಬಂಡವಾಳ ಪರಿಶ್ರಮಗಳ ನಡುವೆ ಮದುವೆಯಾಗಬೇಕು ಎನ್ನುತ್ತೇನೆ. ಅವುಗಳ ನಡುವೆ ಸಹಕಾರವಿದ್ದರೆ ವಿಸ್ಮಯಗಳನ್ನೇ ಉಂಟುಮಾಡಬಹುದು.

ಆದರೆ ಅದು ಸಾಧ್ಯವಾಗುವುದು, ಕಾರ್ಮಿಕ ಬುದ್ಧಿವಂತನಾಗಿ ತನ್ನಲ್ಲೇ ಸಹಕಾರ ಬೆಳೆಸಿಕೊಂಡು ಅನಂತರ ಗೌರವಪೂರ್ಣ ಸರಿಸಮಾನತ್ವದಲ್ಲಿ ಬಂಡವಾಳಕ್ಕೆ ಸಹಕಾರ ನೀಡಿದಾಗ ಮಾತ್ರ.” ಬಂಡವಾಳ ಕಾರ್ಮಿಕ ಸಂಬಂಧಗಳ ಬಗ್ಗೆ ಗಾಂಧೀಯವರಿಗೆ ಏನು ವಿಚಾರವಿತ್ತು. ಅದರ ವ್ಯವಹಾರಿಕ ಹಾಗೂ ಯಶಸ್ವಿ ನಿದರ್ಶನಗಳನ್ನು ೧೯೧೮ರ ಅಹಮದಾಬಾದ್ ಗಿರಣಿ ಕಾರ್ಮಿಕರ ಮುಷ್ಕರದಲ್ಲಿ ನಾವು ಕಾಣಬಹುದು. ಜೀವನವೆಚ್ಚ ಏರಿದ ಸಲುವಾಗಿ, ನಮ್ಮ ವೇತನಗಳಲ್ಲಿ ಶೇ.೫೦ ವೇತನ ಹೆಚ್ಚಳ ಬೇಕು ಎಂದು‌ ಕಾರ್ಮಿಕರು ಸಂಪು ಹೂಡಿದ್ದರು. ಮಾಲೀಕರು ಶೇ.೨೦ ಕ್ಕಿಂತ ಹೆಚ್ಚು ನೀಡಲು ಒಪ್ಪುತ್ತಿರ ಲಿಲ್ಲ. ಅದು ಗಾಂಧೀಯವರ ಪಾಲಿಗೆ ತುಂಬಾ ಸೂಕ್ಷ್ಮ ವಿಚಾರ. ಏಕೆಂದರೆ, ಮಾಲೀಕ ಅಂಬಾಲಾಲ್ ಸಾರಾಭಾಯ್ ಗಾಂಧಿಯವರ ಪ್ರಮುಖ ಬೆಂಬಲಿಗರಾಗಿದ್ದರು. ಆದರೆ ಆತನ ಸಹೋದರಿ ಅನಸುಯಾ ಕಾರ್ಮಿಕರ ಮುಖ್ಯ ಬೆಂಬಲಿಗರಾಗಿದ್ದರು. ಶೇ.೩೫ ವೇತನ ಹೆಚ್ಚಳ ಕೇಳಿ ಗಾಂಧೀಜಿ ಸತ್ಯಾಗ್ರಹ ಆರಂಭಿಸಿದರು. ಅದು ಮಂಜೂರಾಗುವವರೆಗೂ ಉಪವಾಸ ಕುಳಿತರು. ಆ ಮುಷ್ಕರದಿಂದ ಹುಟ್ಟಿದ್ದು ಗಿರಣಿ ಕಾರ್ಮಿಕ ಸಂಘ. ಅದು ಅಹಮದಾಬಾದಿನ ಹತ್ತಿ ಗಿರಣಿಗಳಲ್ಲಿ ಏಳು ಸಂಘಗಳ ಒಕ್ಕೂಟ. ೧೯೩೯ರ ವೇಳೆಗೆ ೬೦ ಗಿರಣಿಗಳಿಗೆ ಸೇರಿದ ೨೫೦೦೦ ಕಾರ್ಮಿಕರು ಸಂಘದ ಸದಸ್ಯರಾಗಿದ್ದರು. ಅದೊಂದು ಬಂಡವಾಳ ಕಾರ್ಮಿಕರ ಸಂಘಟನೆ. ಕಾಪ್ಲೆಯವರು ಬರೆಯುವಂತೆ,” ವರ್ಗ ಸೌಹಾರ್ದ ಮತ್ತು ಮಧ್ಯಸ್ಥಿಕೆ ವಿಚಾರಗಳ ಬಗ್ಗೆ ಗಾಂಧೀಜಿಗೆ ಇದ್ದ ಪ್ರಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುವಂತದ್ದಾಗಿತ್ತು.”ಮುಷ್ಕರ ಕಟ್ಟಕಡೆಯ ಅಸ್ತ್ರವಾಗಬೇಕು ಮತ್ತು ಅದು ಗಾಂಧೀಜಿಯ ಅಹಿಂಸಾ ಆದರ್ಶಕ್ಕೆ ಬದ್ಧವಾಗಿರಬೇಕು. ಶ್ರಮಿಕ ರೈತರ ಪಕ್ಷದ ಪ್ರೇರಣೆ, ಉದ್ದೇಶಗಳು ತದ್ವಿತರುದ್ಧವಾಗಿದ್ದವು.”ಅಹಮದಾಬಾದಿನ ಗಿರಣಿ ಕಾರ್ಮಿಕರ ಮುಷ್ಕರ (ಎ.ಟಿ.ಡಬ್ಲ್ಯು) ಗಾಂಧೀಜಿಯವರ ಜೀವನದಲ್ಲಿ ಕೇಂದ್ರಸ್ಥಾನ ಪಡೆದಿದೆ, ಭಾರತದ ಕಾರ್ಮಿಕ ಇತಿಹಾಸದಲ್ಲಿ ಹಾಗೂ ಉಗ್ರ ಅಹಿಂಸೆಯ ಇತಿಹಾಸದಲ್ಲಿ ಕೇಂದ್ರಸ್ಥಾನ ಪಡೆದಿದೆ” ಎಂದು ವಾದಿಸುತ್ತಾರೆ ಎರಿಕ್ ಎರಿಕ್‌ಸನ್.

ಬಂದ ಲಾಭವನ್ನು ಒಂದು ಮಧ್ಯಸ್ಥಿಕೆದಾರರ ಮಂಡಳಿಯಲ್ಲಿಟ್ಟು ಸಾಂಘಿಕ ಸ್ವರೂಪ ಕೊಡಲಾಯಿತು. ಆ ಮಧ್ಯಸ್ಥಿಕೆದಾರರಲ್ಲಿ ಗಾಂಧೀಜಿ ಮತ್ತು ಮಂಗಲದಾಸ್ ಗಿರಿಧರದಾಸ್ ಇದ್ದರು. “ಭಾರತದಲ್ಲಿ ಕಾರ್ಮಿಕ ಚಳುವಳಿಗೆ ಸಂಬಂಧಿಸಿದ ಬಹುಮಟ್ಟಿನ ರಾಜಕಿಯೇತರ ವ್ಯವಹಾರಗಳಲ್ಲಿ, ಆಗ ಸ್ಥಾಪಿತವಾದ ಅಹಮದಾಬಾದ್ ಗಿರಣಿ ಸಂಘಕ್ಕೆ ಪ್ರಥಮ ಸ್ಥಾನವನ್ನು ಕೊಡಲಾಗಿದೆ.” ಅವರು ಗುರುತು ಮಾಡಿ ಹೇಳುತ್ತಾರೆ. ಅದರ ಸದಸ್ಯ ಸಂಖ್ಯೆ ೧೯೨೫ ರಲ್ಲಿ ೧೪೦೦೦ ಇತ್ತು. ೧೯೮೯ ರಲ್ಲಿ ಆ ಸಂಖ್ಯೆ ೧೦೦೦೦೦ ಆಗಿತ್ತು. ೧೯೬೭ ಸ್ಟೇಟ್ಸ್‌ಮನ್ ವಾರ್ತಾ ವರದಿ ಪ್ರಕಾರ “ಇಂದು ದೇಶದ ಎಲ್ಲೆಡೆಯಲ್ಲಿ, ಅಹಮದಾಬಾದ್ ಹತ್ತಿ ಗಿರಣಿ ಕಾರ್ಮಿಕನೇ ತನ್ನ ಓರಗೆಯವರಲ್ಲಿ ಅತಿ ಹೆಚ್ಚು ಸಂಬಳ ಪಡೆಯುವವ. ಮುಂಬೈನಲ್ಲಿ ೧೯೨೦ ರಲ್ಲಿ ಗಿರಣಿ ಕಾರ್ಮಿಕ ಸಂಘ ಆರಂಭಗೊಂಡಾಗ ಕಾರ್ಮಿಕನಿಗೆ ಅಲ್ಲಿ ಏನು ಸಂಬಳ ಬರುತ್ತಿತ್ತೋ ಅದಕ್ಕಿಂತ ೨೦% ರಷ್ಟು ಕಡಿಮೆ ಬರುತ್ತಿತ್ತು. ಅಹಮದಾಬಾದ್ ಗಿರಣಿ ನೇಕಾರರಿಗೆ, ಆದರೆ ಇಂದು ಆತನಿಗೆ ೧೦% ಜಾಸ್ತಿ ಬರುತ್ತಿದೆ. ಇದಕ್ಕೆ ಕಾರಣ, ಅಹಮದಾಬಾದಿನಲ್ಲಿ ನೆಲೆಸಿದ್ದ ದೀರ್ಘಕಾಲಿಕ ಕಾರ್ಮಿಕ ಶಾಂತಿ ಎನ್ನುತ್ತಾರೆ ಕಾರ್ಮಿಕ ಸಂಘದ ನಾಯಕರು. ಆ ಶಾಂತಿಗೆ ಕಾರಣ ವಿವಾದಗಳಲ್ಲಿ ಮಧ್ಯಸ್ಥಿಕೆಯ ತತ್ವವನ್ನು ಸಾಮಾನ್ಯವಾಗಿ ಪಾಲಿಸಿದ್ದು. ಈ ವಿಚಾರದಲ್ಲಿ, ಗಿರಣಿ ಕಾರ್ಮಿಕ ಸಂಘ ದಾರಿ ಹಾಕಿ ಕೊಟ್ಟರು ಎಂದು ಖಂಡಿತವಾಗಿಯೂ ಹೇಳಬಹುದು.”(ಹಜರತ್ ಅಲೆನ್ ಫಾಸ್ಕಲ್ ಅವರ ಅಮೋಘನಾಯಕ‌ ಗಾಂಧಿ ಪುಸ್ತಕದಿಂದ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *