ನಾಗೇಶ್ ಹೆಗಡೆ & ಶಿವು ಲಕ್ಕಣ್ಣನವರ್ ಬರೆದ ಕೋವಿಡ್ ಕಾಲದ ಮಹತ್ವದ ಅಭಿಪ್ರಾಯಗಳು

ಜರಗನಹಳ್ಳಿ ಶಿವಶಂಕರ್ ಹಿಂದೆಯೇ ಹೊರಟು ಹೋದ ಫಿ.ಲಂಕೇಶ್ ರ ಶಿಷ್ಯರಲ್ಲಿ ಒಬ್ಭರಾದ ಎಸ್‌.ಎಫ್‌. ಯೋಗಪ್ಪನವರ್ ‘ಅವರ ಮಾತು ಮೀರಿದ ಮಿಂಚು’..!ಕಥೆಗಾರ ಹಾಗೂ ಅಂಕಣಕಾರ, ನಿವೃತ್ತ ಅಧಿಕಾರಿ ಸಣ್ಣಪ್ಪ ಫಕೀರಪ್ಪ ಯೋಗಪ್ಪನವರ ತಮ್ಮ 73 ನೇ ವಯಸ್ಸಿನಲ್ಲಿ ಮೃತ ಪಟ್ಟಿದಾರೆ.ಇಲ್ಲಿನ ಗಂಗಾನಗರದಲ್ಲಿ ವಾಸವಾಗಿದ್ದ ಅವರಿಗೆ 10 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರ ಪತ್ನಿ ಕೂಡ ಕೋವಿಡ್‌ ಪೀಡಿತರಾಗಿ, ಆಸ್ಪತ್ರೆ ಸೇರಿದ್ದರು. ನಾಲ್ಕು ದಿನಗಳ ಹಿಂದೆಯೇ ಅವರು ಗುಣಮುಖರಾಗಿದ್ದರು. ಆದರೆ, ಯೋಗಪ್ಪನವರ್‌ ಅವರು ಚಿಕಿತ್ಸೆಗೆ ಸ್ಪಂದಿಸದೆಯೇ ಸಾವಿಗೀಡಾಗಿದ್ದಾರೆ.

ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬೇಲೂರು ಗ್ರಾಮಕ್ಕೆ ಕೊಂಡೊಯ್ದು, ಮಂಗಳವಾರ ರಾತ್ರಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ.1949 ರಲ್ಲಿ ಜನಿಸಿದ ಎಸ್.ಎಫ್.ಯೋಗಪ್ಪನವರ್ ಅವರು ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದವರು. ಬಳಿಕ ಬಾದಾಮಿಯ ವೀರಪುಲಿಕೇಶಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. 1974 ರಲ್ಲಿ ಅವರು ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾದವರು. ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅವರು, ದಕ್ಷ ಅಧಿಕಾರಿಯಾಗಿಯೂ ಜನರ ಪ್ರಶಂಸೆಗೆ ಪಾತ್ರರಾಗಿದ್ದವರು. ಸರ್ಕಾರಿ ವೃತ್ತಿಯ ಜೊತೆಗೆ ಸಾಹಿತ್ಯದಲ್ಲಿ ಒಲವು ಹೊಂದಿದ್ದ ಅವರು, ಸೃಜನಶೀಲ ಬರವಣಿಗೆಯ ಮೂಲಕ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದವರು.‘ಲಂಕೇಶ್ ಪತ್ರಿಕೆ’ಯಲ್ಲಿ ಅಂಕಣಕಾರರಾಗಿ ಪ್ರಸಿದ್ಧರಾಗಿದ್ದರಾದರು.

ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ’, ‘ಪ್ರಿತಿಯೆಂಬುದು ಚಂದ್ರನ ದಯೆ’, ‘ಶೋಧ’ ಸೇರಿದಂತೆ ವಿವಿಧ ಕಾದಂಬರಿಗಳನ್ನು ಬರೆದಿದ್ದವರು. ‘ಆರಾಮ ಕುರ್ಚಿ ಇತರ ಕಥೆಗಳು’, ‘ಒಂದು ಶಹರದ ಸುತ್ತ’, ‘ಮಾಯಾ ಕನ್ನಡಿ–ಚಾರ್ಲ್ಸ್ ಬೋದಿಲೇರ್‌ನ ಐವತ್ತು ಗದ್ಯ ಕವಿತೆಗಳು’, ‘ಹದಿಹರೆಯದ ಒಬ್ಬಂಟಿ ಪಯಣ’, ‘ಮ್ಯೂಟೇಶನ್’, ‘ನೀಲು’, ‌‘ಮಾತು ಮೀರಿದ ಮಿಂಚು’ ಸೇರಿದಂತೆ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ ಎಸ್.ಎಫ್.ಯೋಗಪ್ಪನವರು..!#

ಅಲ್ಲದೇ ಎಸ್.ಎಫ್.ಯೋಗಪ್ಪನವರ್ ಅವರ ‘ನೀಲು: ಮಾತು ಮೀರಿದ ಮಿಂಚು’ ಎಂಬ ಕೃತಿಯು ಪಿ. ಲಂಕೇಶ್ ಅವರ ಕಾವ್ಯದ ಹೊಸ ಬಗೆಯ ರೂಹುಗಳನ್ನು ಹೊತ್ತು ತಂದಿದೆ. ಯೋಗಪ್ಪನವರ್ ಕನ್ನಡದ ವಿಶಿಷ್ಟ ಬಗೆಯ ರೂಪಕದ ಗದ್ಯಕಾರರಾದರೂ ಓದಿನ ರಾಜಕಾರಣದಿಂದ ಬಹುಬಗೆಯ ಚರ್ಚೆಯ ಆಚೆಯೇ ನಿಂತವರು. ಇವರ ‘ಬೋದಿಲೇರ್‌ನ ಐವತ್ತು ಗದ್ಯಕವಿತೆಗಳು’, ‘ರೂಪಕದ ಲೇಖಕರು’, ಸ್ಯಾಲೆಂಜರ್‌ನ ‘ಹದಿಹರೆಯದ ಒಬ್ಬಂಟಿಪಯಣ’ ಮುಂತಾದ ಕೃತಿಗಳ ಪಾಶ್ಚಾತ್ಯ ಒಳನೋಟಗಳು ಮತ್ತು ಅವರು ನೀಡುವ ಬದುಕಿನ ಅಗ್ನಿಕುಂಡದಂತಹ ಸತ್ಯಗಳನ್ನು ಮರು ಓದಿಗೆ ಒಳಪಡಿಸುವ ಅಗತ್ಯವಿದೆ.

ಎಂಬತ್ತರ ದಶಕದ ಸೃಜನಶೀಲ ಲೇಖಕರ ಪಟ್ಟಿಗೆ ಸೇರುವ ಯೋಗಪ್ಪನವರ್ ಜನಪದಲೋಕವನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟ ‘ಪ್ರೀತಿ ಎಂಬುದು ಚಂದ್ರನ ದಯೆ’ ಕಾದಂಬರಿ ಇನ್ನೂ ಮಾಸಿಲ್ಲ. ಲಂಕೇಶರ ಒಡನಾಡಿಗಳೂ ಅವರಿಗೆ ಪ್ರೀತಿಪಾತ್ರರೂ ಆದ ಈ ಲೇಖಕರು ನೀಲು ಕಾವ್ಯವನ್ನು ನಿಕಟವಾಗಿ ಓದಿ ಅಧ್ಯಯನ ಮಾಡಿದ ಫಲವೇ ಈ ಕೃತಿ. ವಾಸ್ತವವಾಗಿ ಈ ಕೃತಿಯನ್ನು ನಾವು ಶುದ್ಧ ಸಾಹಿತ್ಯ ವಿಮರ್ಶೆಯ ಮಾನದಂಡಗಳಿಂದ, ವಿಧಾನಗಳಿಂದ ಕಾಣಬಾರದು. ಒಬ್ಬ ಸೃಜನಶೀಲ ಲೇಖಕ ನೀಲು ಕಾವ್ಯವನ್ನು ದರ್ಶಿಸಿದ ಬಗೆ, ಕಾಣುವ ಕಾಣ್ಕೆ ಯಾವ ರೀತಿಯಲ್ಲಿ ಇರಬಲ್ಲವು ಎಂಬುದಕ್ಕೆ ಇದು ನಿದರ್ಶನ. ಯೋಗಪ್ಪನವರ್‌ ಕೃತಿಯ ಉದ್ದಕ್ಕೂ ಬಳಸುವ ಭಾಷೆ ರೂಪಕ ಜಗತ್ತಿನದು.ಲಂಕೇಶರು ಬರೆದ ನೀಲು ಕಾವ್ಯ ಕನ್ನಡದ ಸಾಹಿತ್ಯ ಜಗತ್ತಿನಲ್ಲಿ ತನ್ನದೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಲವರಿಗೆ ಹಲವು ರೀತಿಯ ಅರ್ಥಗಳನ್ನು ನೀಡಿದೆ. ಬಹುಜನರು ನೀಲು ಕಾವ್ಯವನ್ನು ಲೈಂಗಿಕತೆಯ ಅರ್ಥಛಾಯೆಯಲ್ಲಿ ಕಂಡಿದ್ದುಂಟು. ಆದರೆ, ಈ ಬರಹ ಆ ಬಗೆಯ ಕ್ಷಣಿಕತೆಯ ತೀರ್ಮಾನಗಳಿಗೆ ತಲುಪುವುದಿಲ್ಲ. ಬದಲಿಗೆ ನೀಲು ಕಂಡ ಲೋಕದರ್ಶನ ಮನುಷ್ಯನ ಒಟ್ಟು ಜೀವಿತಕ್ರಮಗಳಿಗೆ ಎಡತಾಕುವ ವಿಶಾಲ ನೆಲೆಗಳನ್ನು ಚರ್ಚೆ ಮಾಡುತ್ತದೆ. ನೀಲು ಅಭಿವ್ಯಕ್ತಿಸುವ ಜಗತ್ತಿನಲ್ಲಿ ಜನಪದರಿದ್ದಾರೆ, ಪ್ರೇಮಿಗಳು, ದಾರ್ಶನಿಕರು, ರಾಜಕಾರಣಿಗಳು, ಪ್ರಕೃತಿ, ಮನುಷ್ಯನ ನೀಚತನಗಳು, ಅವನ ಅಸಂಗತತನಗಳು, ಹೆಣ್ಣಿನ ಎದೆಬಡಿತಗಳು ಅಲಜಡಿಗಳು ಎಲ್ಲವೂ ಇಲ್ಲಿ ಮುಖಾಮುಖಿಯಾಗುತ್ತವೆ. ಇಲ್ಲಿ ಒಂದು ಮರದಲ್ಲಿ ನೂರು ಸ್ವರಗಳಿವೆ. ಇವುಗಳನ್ನು ಸಾವಧಾನದಿಂದ ಆಲಿಸುವ ಕೆಲಸವನ್ನು ಯೋಗಪ್ಪನವರ್ ಮಾಡಿದ್ದಾರೆ.

ನೀಲು ಕಾವ್ಯವನ್ನು ಹದಿನೇಳು ಚಿಕ್ಕ ಅಧ್ಯಾಯಗಳು ಅನ್ನುವುದಕ್ಕಿಂತ ತಾತ್ವಿಕ ಆಯಾಮಗಳ ಬೆನ್ನಲ್ಲಿ ಚರ್ಚೆಮಾಡುತ್ತಾರೆ. ಹೀಗೆ ಮಾಡುವಾಗ ಯೋಗಪ್ಪನವರ್‌ ನೀಲುವಿನ ಲೋಕದ ಜತೆಗೆ ಜಗತ್ತಿನ ಅನೇಕ ದಾರ್ಶನಿಕರನ್ನು ಜತೆಗೂಡಿಸುತ್ತಾರೆ. ಇದೇ ಈ ಕೃತಿಯ ವೈಶಿಷ್ಟ್ಯ ಎನ್ನಬಹುದು. ಯೋಗಪ್ಪನವರ್‌ ಅವರಿಗೆ ಇರುವ ಭಾರತ ಮತ್ತು ಪಾಶ್ಚಾತ್ಯ ತತ್ವಶಾಸ್ತ್ರದ ತಿಳಿವಳಿಕೆ ಇದರಲ್ಲಿ ಎದ್ದುಕಾಣುತ್ತದೆ.ಲೌಕಿಕ- ಅಲೌಕಿಕ ಸುಳಿದಾಟಗಳ ಕುರಿತು ಹಾಗೂ ಇವುಗಳ ನಡುವಿನ ಬದುಕನ್ನು ಅರ್ಥೈಸಿಕೊಳ್ಳುವ ಕ್ರಮಗಳ ಕುರಿತು ಗಂಭೀರ ತೌಲನಿಕ ವಿಶ್ಲೇಷಣೆಯಿದೆ. ಸದ್ಯಕ್ಕೆ ಇವೆರಡರ ನಡುವೆ ಬದುಕು ನಡೆಸುವ ಜಂಜಾಟಗಳನ್ನು ಮತ್ತು ಎದುರೀಜು ನಡೆಸುವ ಒಳಚಿಂತನೆಗಳನ್ನು ನೀಲು ನಡೆಸುತ್ತಾಳೆ. ಈ ಪ್ರಕ್ರಿಯೆಯಲ್ಲಿ ಲಂಕೇಶರಿಗಿದ್ದ ಆಳದ ಗುಬುಲುತನಗಳು ನೀಲು ಕಾವ್ಯದಲ್ಲೂ ಗೋಚರಿಸುತ್ತವೆ. ಗುಬುಲುತನಗಳೇ ಅನೇಕ ಬಾರಿ ಮನುಷ್ಯನ ಒಳತೋಟಿಗಳನ್ನು ಪ್ರಾಮಾಣಿಕವಾಗಿ ನಿರ್ಧರಿಸುತ್ತವೆ.ಇದಕ್ಕೆ ಅನೇಕ ನಿದರ್ಶನಗಳನ್ನು ನೀಲುಕಾವ್ಯದಲ್ಲಿ ಕಾಣಬಹುದು.

ಲಂಕೇಶರ ‘ಜೊತೆಗಾರ’ ಕತೆಯಲ್ಲಿ ‘ಮನುಷ್ಯ ಒಬ್ಬಂಟಿಯಾಗಿದ್ದಾಗ ಬದುಕಿನ ಬಗ್ಗೆ ಎಚ್ಚರದಿಂದ ಇರುತ್ತಾನೆ’ ಎಂದು ನಿರೂಪಕ ಹೇಳುವ ಮಾತುಗಳು ನೀಲುವಿನಲ್ಲೂ ಕಾಣಿಸುತ್ತವೆ. ಈ ಮಾರ್ಗವನ್ನು ವಿವರಿಸುವ ಕ್ರಮ ಅದಕ್ಕೆ ಅಗತ್ಯವಾಗುವ ಕವಿತೆಯ ಸಾಲುಗಳನ್ನು ಯೋಗಪ್ಪನವರ್‌ ಯೋಗ್ಯ ರೀತಿಯಲ್ಲಿ ಬಳಸುತ್ತಾರೆ. ನೀಲು ಕಾವ್ಯದಲ್ಲಿ ಏಕಕಾಲದಲ್ಲಿ ಸಾಹಿತ್ಯ ಮತ್ತು ತಾತ್ವಿಕ (ತತ್ವಶಾಸ್ತ್ರ) ಸೆಳಕುಗಳು ಎದುರು ಬದುರುಗೊಂಡಿವೆ.ಯಾವುದೇ ಕಾವ್ಯ ತತ್ವಜ್ಞಾನಿಯ ಜಿಜ್ಞಾಸೆಯನ್ನು, ಮನಸ್ಸನ್ನು ತಾಕದೇ ಹೋದರೆ ಖಂಡಿತ ಅದು ಮಾತಿನಲ್ಲೇ ಸೊರಗುತ್ತದೆ. ಬೇಂದ್ರೆ ಕಾವ್ಯ ಇಂದು ಮುಂದೆಯೂ ನೆಲಕಚ್ಚಿ ನಿಲ್ಲುವುದೇ ಈ ಕಾರಣದಿಂದ. ನೀಲುವಿನಲ್ಲಿ ಅಂತಹ ಸೆಳಕುಗಳು ದೊಡ್ಡಪ್ರಮಾಣದಲ್ಲಿ ಇಲ್ಲದಿದ್ದರೂ ಮಿಂಚಿನಂತೆ ಕಾಣಿಸುತ್ತವೆ. ಆ ಬಗೆಯ ಮಿಂಚುಗಳನ್ನು ಯೋಗಪ್ಪನವರ್ ಸರಿಯಾದ ದಾರಿಯಲ್ಲಿ ವಿವರಿಸಿದ್ದಾರೆ. ನಿಸರ್ಗ, ಸೃಷ್ಟಿ, ಮನುಷ್ಯನ ಒಳ ಬಾಳಾಟಗಳನ್ನು ಅವರು ವೇದ, ಜೆನ್ ಪರಂಪರೆ, ಸೂಫಿಕವಿ ಶೇಕ್ ಸಾದಿ, ರೂಮಿ, ಅಮೆರಿಕನ್ ಆದಿವಾಸಿಗಳ ನಂಬಿಕೆಗಳು, ಕನ್ನಡದ ಜನಪದ ಪರಂಪರೆ, ಬೌದ್ಧಗುರು ನಾಗಾರ್ಜುನ ಮುಂತಾದವರ ಬೆನ್ನಲ್ಲಿ ಚರ್ಚೆಮಾಡುತ್ತಾರೆ.ಭಾಷೆಯು ಅಂತಿಮವಾಗಿ ಸೌಂದರ್ಯಾನುಭವವನ್ನು ಮಾತ್ರ ನೀಡುತ್ತದೆ ಎಂಬ ಮಾಮೂಲಿ ಮಾತುಗಳು ಇಲ್ಲಿ ತಲೆಕೆಳಗಾಗಿವೆ. ಇಲ್ಲಿನ ಭಾಷೆ ಮನುಷ್ಯನ ಎಲ್ಲ ಗುಣ-ಅವಗುಣಗಳನ್ನು ಸಾಧ್ಯವಿದ್ದಷ್ಟೂ ಅನಾವರಣ ಮಾಡಿದೆ. ನುಡಿಯಲ್ಲಿನ ಲೋಕದರ್ಶನ, ಜೀವನ ದೃಷ್ಟಿಕೋನಕ್ಕೂ ಕಾರಣಗಳನ್ನು ಒದಗಿಸುತ್ತದೆ. ಈ ಕಾರಣದಿಂದಲೇ ನೀಲು ಕವಿತೆಗಳು ಇಂದಿಗೂ ತಾಜಾ ಆಗುತ್ತವೆ. ಮುಕ್ತಛಂದಸ್ಸುವಿನ ಮಾರ್ಗವನ್ನು ಹಿಡಿದ ಇಲ್ಲಿನ ಕವಿತೆ ತನ್ನ ಮೀಮಾಂಸೆಯನ್ನು ಹಿಗ್ಗಿಸಿಕೊಂಡಿದೆ. ಯೋಗಪ್ಪನವರ್‌ ಬಹುತೇಕ ನೀಲು ಕಾವ್ಯದ ಎಲ್ಲ ಆಯಾಮಗಳನ್ನು ಹಿಡಿದಿದ್ದಾರೆ. ನಿಸರ್ಗದ ವಿಚಾರಗಳು ಕೆಲವೊಮ್ಮೆ ಪುನರಾವರ್ತನೆಯಾದಂತೆ ಕಾಣುತ್ತವೆ ಎನ್ನವುದು ಬಿಟ್ಟರೆ, ತಮಗೆ ಕಂಡಂತೆ ನೀಲು ಜಗತ್ತನ್ನು ಪ್ರಾಮಾಣಿಕವಾಗಿ ಕಂಡರಿಸಿದ್ದಾರೆ.

-# ಕೆ.ಶಿವು.ಲಕ್ಕಣ್ಣವರ

ಜರಗನಹಳ್ಳಿ ಎಂಬ ಬೆರಗು..

ಮಿತ್ರ ಜರಗನಹಳ್ಳಿ ಶಿವಶಂಕರ್‌ ತೀರಿಕೊಂಡರು. ಅವರು ಶ್ರೇಷ್ಠಮಟ್ಟದ ಚುಟುಕು ಕವಿಯಾಗಿದ್ದರು, ಉತ್ತಮ ಸಂಘಟಕರಾಗಿದ್ದರು, ಸಮುದಾಯದ ಸಂಕಟಗಳಿಗೆ ಮಿಡಿಯುವ ಸಹೃದಯಿಯಾಗಿದ್ದರು. ಎಲ್ಲವೂ ನಿಜ. ಅವೆಲ್ಲಕ್ಕಿಂತ ಮುಖ್ಯ ಎಂದರೆ, ಈ ಮಾನವ ಕೇಂದ್ರಿತ ಆದ್ಯತೆಗಳಾಚೆಗೂ ಅವರ ಚಟುವಟಿಕೆ ವಿಸ್ತರಿಸಿತ್ತು. ನಾನು ʼಸುಧಾʼದಲ್ಲಿದ್ದಾಗ ಫೋನ್‌ ಮಾಡಿ ಅವರಿಂದ ಹನಿಗವನಗಳನ್ನು ಬರೆಸುತ್ತಿದ್ದೆ. ಅವರೂ ಆಗೊಮ್ಮೆ ಈಗೊಮ್ಮೆ ಫೋನ್‌ ಮಾಡಿ ನನ್ನ ಪರಿಸರ ಲೇಖನಗಳ ಬಗ್ಗೆ ಭಾವುಕರಾಗಿ ಮಾತಾಡುತ್ತಿದ್ದರು. ಆದರೆ ನಾನು ಆಗೆಲ್ಲ ಅವರಿಗೆ ಒಂದು ಕಂಡಿಶನ್‌ ಹಾಕಿರುತ್ತಿದ್ದೆ. ನನಗೆ ಫೋನ್‌ ಮಾಡಿದಾಗಲೆಲ್ಲ ತಮ್ಮ ಒಂದಾದರೂ ಹನಿಗವನವನ್ನು ಓದಿ ಹೇಳಬೇಕು ಎಂದು. ಅವರು ಓದುತ್ತಿರಲಿಲ್ಲ. ಓದದೇ ಹೇಳುತ್ತಿದ್ದರು. ಕೆಲವೊಮ್ಮೆ “ಮೊನ್ನೆ ಒಂದು ವಿಶೇಷ ಐಡಿಯಾ ಹೊಳೆದಿತ್ತು. ನಿಮಗೆ ಕಳಿಸಲೆಂದೇ ನೆನಪಲ್ಲಿ ಇಟ್ಟುಕೊಂಡಿದ್ದೆ ನೋಡಿ” ಎಂದು ಹೇಳುತ್ತಿದ್ದರು. ಅವರು ಮಾತಾಡುತ್ತಿದ್ದಂತೆಯೇ ನಾನು ಬರೆದುಕೊಂಡು ಅಚ್ಚಿಗೆ ಕಳಿಸುತ್ತಿದ್ದೆ. ಉದಾ:”ಹತ್ತಿಯ ಹೊಲ ಕಾಯುವ ಬೆರ್ಚಪ್ಪನಿಗೆ ಹರಕು ಬಟ್ಟೆ”ಅವರ ಕೆಲವು ಸಾರ್ವಕಾಲಿಕ ಶ್ರೇಷ್ಠ ಎನಿಸಿದ ಹನಿಗವನಗಳು ನನ್ನ ಪೆನ್‌/ ಪೆನ್ಸಿಲ್‌ ಮೂಲಕವೇ ಮೂಡಿ ಅಚ್ಚಿಗೆ ಹೋದುವೆಂದು ನಾನು ಕಾಲರ್‌ ಎತ್ತಿ ಹೇಳಬಹುದು.

ಉದಾ:ಕುಂಬಾರರು ಮಾಡಿದ ಹಣತೆಗೆಗಾಣಿಗರ ಎಣ್ಣೆಯ ತುಂಬಿಒಕ್ಕಲಿಗರು ಬೆಳೆದ ಹತ್ತಿಯ ಹೊಸೆದುಬತ್ತಿಯ ಮಾಡಿ ದೀಪವ ಹಚ್ಚಿದರೆಹಲವು ಜಾತಿಗಳ ಕೂಡಿಕುಲಗೆಟ್ಟ ಬೆಳಕು ನೋಡಾ! (ಸುಧಾ ೫/೩/೯೫)ತಮಾಷೆ ಎಂದರೆ ನಾನು ಸುಧಾದಿಂದ ನಿವೃತ್ತಿಯಾದ (೨೦೦೬) ನಂತರವೂ ಅವರು ತಮ್ಮ ಹೊಸ ಹನಿಗವನವನ್ನು ನನಗೆ ಮೊದಲು ಹೇಳಿ, ಆಮೇಲೆ ಸುಧಾಕ್ಕೆ ಕಳಿಸುತ್ತಿದ್ದರು.ಕವಿ ಎಂದ ಮೇಲೆ ಸಹಜವಾಗಿ ಅವರಿಗೆ ಹಸಿರು, ನೀರು, ಜೀವಲೋಕದ ಕಲರವಗಳ ಬಗ್ಗೆ ಅಪಾರ ಪ್ರೀತಿಯಿತ್ತು. ಇತರರಿಗಿಂತ ಜಾಸ್ತಿಯೇ ಇದ್ದಂತಿತ್ತು. ನನ್ನ ಲೇಖನಗಳನ್ನು ತನ್ಮಯತೆಯಿಂದ ಓದುತ್ತಿದ್ದರು. ಗೆಳೆಯರಿಂದ ಓದಿಸುತ್ತಿದ್ದರು.ಬೆಂಗಳೂರಿನ ಜೆ.ಪಿ. ನಗರದ ಅಂಚಿನಲ್ಲಿರುವ ಜರಗನಹಳ್ಳಿ ಎಂಬ ತಮ್ಮ ಪೂರ್ವಜರಿದ್ದ ಮನೆಯನ್ನೇ ವಿಸ್ತರಿಸಿ ಅಲ್ಲೊಂದು “ಅನುಭವ ಮಂಟಪ” ವನ್ನು ಕಟ್ಟಿಕೊಂಡಿದ್ದರು. ಅಲ್ಲಿ ಆಗಾಗ ವಿವಿಧ ವಿಷಯಗಳ ತಜ್ಞರನ್ನು ಕರೆಸಿ ಚಿಂತನಗೋಷ್ಠಿಯನ್ನು ಏರ್ಪಡಿಸುತ್ತಿದ್ದರು. ಅರಣ್ಯತಜ್ಞ ಯೆಲ್ಲಪ್ಪ ರೆಡ್ಡಿ, ಸಿನೆಮಾ ಖ್ಯಾತಿಯ ನಾಗತಿಹಳ್ಳಿ ಮತ್ತು ನಾನು ಆಗಾಗ ಹೋಗಿ ಅಲ್ಲಿ ಉಪನ್ಯಾಸ ಕೊಡಬೇಕಿತ್ತು. ನಂತರ ಅವರ ಮನೆಯವರು ಪ್ರೀತಿಯಿಂದ ಉಣಿಸುತ್ತಿದ್ದ ರಾಗಿಮುದ್ದೆಯ ಭೂರಿಭೋಜನವನ್ನು ಸವಿಯಲೇಬೇಕಿತ್ತುನಾವು ತಿಪ್ಪಗೊಂಡನಹಳ್ಳಿ ಜಲಾಶಯದ ಸುತ್ತ ʼಸ್ಫೂರ್ತಿವನʼವನ್ನು ಸೃಷ್ಟಿಸುತ್ತಿರುವುದನ್ನು ಕೇಳಿ, ಅದರ ಬಗ್ಗೆ ಅವರ ಮಂಟಪದಲ್ಲಿ ನಾನೊಂದು ಉಪನ್ಯಾಸ ಕೊಡಬೇಕೆಂದು ಒತ್ತಾಯಿಸಿದರು. ಅವರ ಮಗಳು ಶುಭದಾಳ ಕ್ಲಾಸ್‌ಮೇಟ್ಸ್‌ಗಳನ್ನೆಲ್ಲ ಕರೆಸಿ ಕೂರಿಸಿದ್ದೂ ಅಲ್ಲದೆ, ಅವರಿಂದ ಚಂದಾ ಸಂಗ್ರಹಿಸಿ ಸ್ಫೂರ್ತಿವನದ ಸಂಘಟಕರಿಗೆ ಕೊಡಿಸಿದರು.ಒಮ್ಮೆ ಅವರು ಮುಂಬೈಗೆ ಹೋಗಿದ್ದಾಗ ಅಲ್ಲಿನ ತಾಜ್‌ ಹೊಟೆಲ್‌ ಮುಂದೆ ವಿಹಾರಕ್ಕೆ ಹೋಗಿದ್ದರಂತೆ. ಅಲ್ಲಿಂದ ಬಂದಮೇಲೆ ನನಗೆ ಫೋನ್‌ ಮಾಡಿ ಅದೂ ಇದೂ ಮಾತಾಡುತ್ತ, ಶರತ್ತಿನಂತೆ ಒಂದು ಹನಿಗವನ್ನು ಹೇಳಿದರು. ನಾನೂ ಶರತ್ತಿನಂತೆ ಅವರ ಫೋನ್‌ ಬರುತ್ತಲೇ ಕೈಗೆ ಸಿಕ್ಕ ಪೆನ್ನು ಹಾಳೆ ಎತ್ತಿಕೊಳ್ಳುತ್ತೇನೆ. ಅವರು ಹೇಳಿದರು: “ಗುಣ” -ಇದು ಶೀರ್ಷಿಕೆ ಬರ್ಕೊಳ್ಳಿ” ಅಂತ. ಎಲ್ಲ ಸಾಗರಗಳ ಉಪ್ಪಿಗೆ ಒಂದೇ ರುಚಿ, ಒಂದೇ ಗುಣಸಾಗರದ ಪ್ರತಿಯೊಂದು ತೀರದಲ್ಲೂ ಒಂದೊಂದು ದೇಶ, ತೀರದ ದ್ವೇಷ.ತುಂಬ ಚೆನ್ನಾಗಿದೆ “ಕಳಿಸ್ರೀ ಸುಧಾಕ್ಕೆ” ಎಂದೆ. ಅದು ಪ್ರಕಟವಾಗಿ (೯ ಅಕ್ಟೊಬರ್‌ ೨೦೦೮) ಒಂದೂವರೆ ತಿಂಗಳಲ್ಲಿ ತಾಜ್‌ ಹೊಟೆಲ್‌ ಮೇಲೆ ಭಯೋತ್ಪಾದಕರ ಅತ್ಯಂತ ಭೀಕರ ದಾಳಿ ನಡೆಯಿತು. ಅಜ್ಮಲ್‌ ಕಸಬ್‌ ಸೆರೆ ಸಿಕ್ಕ ಮೇಲೆ ಕವಿವರ್ಯರಿಗೆ ಫೋನ್ ಮಾಡುವ ಸರದಿ ನನ್ನದಾಯಿತು.ಮತ್ತೊಮ್ಮೆ ಅವರ ಅನುಭವ ಮಂಟಪಕ್ಕೆ -ನನ್ನನ್ನು ಕರೆದಿದ್ದರೊ ಅಥವಾ ನಾನೇ ಹೋಗಿದ್ದೆನೊ ನೆನಪಿಲ್ಲ. ಅವರು ಈ ಬಾರಿ ನನ್ನನ್ನು ಸಮೀಪದ ಪಾರ್ಕ್‌ ಒಂದಕ್ಕೆ ಕರೆದೊಯ್ದರು.”ಇದೇ ನೆಲದಲ್ಲಿ, ಹೆಗಡೆಯವರೆ, ಇದು ಭತ್ತದ ಗದ್ದೆಯಾಗಿತ್ತು… ನಾನು ಚಿಕ್ಕವನಿದ್ದಾಗಿ ಇಲ್ಲಿ ನಾಟಿ ಮಾಡಿದ್ದು ನೆನಪಿದೆ” ಎಂದು ಹೇಳುತ್ತ ಆ ದಟ್ಟ ಕಾಂಕ್ರೀಟ್‌ ಕಟ್ಟಡಗಳ ಸಂದುಗೊಂದುಗಳ ಮೂಲಕ ನನ್ನನ್ನು ಕರೆದೊಯ್ದರು. ಅವರು ಅದೇನೋ ವರ್ಷಗಟ್ಟಲೆ ಮಹಾನಗರ ಪಾಲಿಕೆಯ ಜೊತೆ ಗುದ್ದಾಡಿ ಅಲ್ಲೊಂದು ಉದ್ಯಾನವನವನ್ನು ಸೃಷ್ಟಿಸಿದ್ದರು. ನನ್ನನ್ನು ಅದರ ತುಂಬ ಸುತ್ತಾಡಿಸಿ, ತಾವು ಅದೇತಾನೆ ನೆಡಿಸಿದ ಗಿಡಗಳನ್ನು ತೋರಿಸಿ ಒಂದೊಂದರ ವಿಶೇಷವನ್ನು ಬಣ್ಣಿಸಿದ್ದರು.ಈಗ ಸುಮಾರು ಒಂದೂವರೆ ತಿಂಗಳ ಹಿಂದೆ ಕರೆ ಮಾಡಿ, “ನನ್ನ ಅಳಿಯ (ಶುಭದಾಳ ಗಂಡ) ಮತ್ತು ಅವರ ಫ್ರೆಂಡ್ಸ್‌ ಎಲ್ಲ ಒಂದು ಉಗ್ರ ಚಳವಳಿ ಮಾಡಲು ಹೊರಟಿದ್ದಾರೆ. ನಿಮ್ಮ ಸಲಹೆ ಬೇಕಂತೆ, ಫೋನ್‌ ಮಾಡ್ತಾರೆ ನೋಡಿ” ಎಂದರು. ಅದು, ಅಲ್ಲೇ ಸಮೀಪದ ತುರಹಳ್ಳಿ ಫಾರೆಸ್ಟ್‌ ಮಧ್ಯೆ ಅರಣ್ಯ ಇಲಾಖೆಯವರು “ಟ್ರೀ ಪಾರ್ಕ್‌” ಮಾಡುವುದರ ವಿರುದ್ಧ ಈ ಯುವಕರು ಕೈಗೆತ್ತಿಕೊಂಡ ಚಳವಳಿ. ಅಲ್ಲಿ ಸಹಜವಾಗಿ ಬೆಳೆದಿದ್ದ ಗಿಡಮರಗಳನ್ನು ಕಡಿದು ಹಾಕಿ, ಹೊಸದಾಗಿ ಶಿಸ್ತಾಗಿ ಮರಗಳನ್ನು ಬೆಳೆಸುವ ಯೋಜನೆಯನ್ನು ಇಲಾಖೆಯವರು ಕೈಗೆತ್ತಿಕೊಂಡಿದ್ದರು. ಕೆಲವು ಮರಗಳನ್ನು ಆಗಲೇ ಬೀಳಿಸಿದ್ದರು. ನಾನು ವಯಸ್ಸಾದ ಅನುಭವಿಯ ಥರಾ ಅವರಿಗೆ ಉಪದೇಶ ಮಾಡಿದೆ. “ಹುಷಾರಾಗಿ ಹೋರಾಟಕ್ಕೆ ಧುಮುಕಿ: ಅರಣ್ಯ ಇಲಾಖೆಯ ದೃಷ್ಟಿಕೋನ ಏನಿದೆ ಎಂಬುದನ್ನು ಕೂಲಂಕಷ ಅರ್ಥ ಮಾಡಿಕೊಂಡು ಆಮೇಲೆ ಪ್ರತಿಭಟನೆಗೆ ಇಳಿಯಿರಿ. ಅವರ ಸ್ಟ್ರೆಂಗ್ತ್‌ ನಮಗೆ ಗೊತ್ತಿರಬೇಕು” ಎಂದೇನೊ ಹೇಳಿದೆ. ಆದರೆ ಅವರೆಲ್ಲ ಬಿಸಿರಕ್ತದ ಯುವಕರು. ಸೋಷಿಯಲ್‌ ಮೀಡಿಯಾದಲ್ಲಿ ಡೋಲು ತಮಟೆ ಬಾರಿಸಿ, ಮಾಧ್ಯಮದವರನ್ನು ಕರೆಸಿ, ಅರಣ್ಯದ ಧ್ವಂಸದೃಶ್ಯಗಳನ್ನು ರೆಕಾರ್ಡ್‌ ಮಾಡಿಸಿ, ಗದ್ದಲ ಎಬ್ಬಿಸಿ, ನಾಲ್ಕೇ ದಿನಗಳ ಉಗ್ರ ಹೋರಾಟದಲ್ಲಿ ಆ “ಟ್ರೀ ಪಾರ್ಕ್‌” ಯೋಜನೆಯನ್ನು ನಿಲ್ಲಿಸಿಯೇ ಬಿಟ್ಟರು. ನಾನು ಶಿವಶಂಕರ್‌ ಅವರಿಗೆ ಫೋನ್‌ ಮಾಡಿ, ಅವರ ಯುವಪಡೆಗೆ ಅಭಿನಂದನೆ ಹೇಳಿದೆ. ಅವರದೇ ಒಂದು ಹಳೆಯ ಹನಿಗವನವನ್ನು (ಜಪಾನೀ ಹೈಕೊಂದರ ಕನ್ನಡ ರೂಪ) ಅವರಿಗೆ ನೆನಪಿಸಿದೆ:ಹತ್ತಾರು ವರ್ಷ ಆಳಿದ ಅರಸಹೆಣವಾಗಿ ಉಳಿಯಲಿಲ್ಲ ಮೂರು ದಿವಸನೂರಾರು ವರ್ಷ ಬೆಳೆದು ಮೆರೆದ ಮರತೊಲೆಯಾಗಿ ಉಳಿಯಿತು ನೂರು ವರುಷ.* ನಾನಿರುವವರೆಗೂ ಜರಗನಹಳ್ಳಿಯ ಈ ವೃಕ್ಷ ನನ್ನೊಂದಿಗೆ ಇರುತ್ತದೆ, ಗಟ್ಟಿಮುಟ್ಟಾಗಿ.*(ಚಿತ್ರಕೃಪೆ: ವಿಜಯ ಕರ್ನಾಟಕ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *